• Home
 • »
 • News
 • »
 • explained
 • »
 • Explained: ಭಾರತಕ್ಕೆ ಬರಲಿವೆ ಟಿಲ್ಟಿಂಗ್ ಟ್ರೈನ್​ಗಳು! ತಿರುವಿನಲ್ಲಿ ಈ ರೈಲಿನ ಪ್ರಯಾಣ ಭಾರೀ ಗಮ್ಮತ್

Explained: ಭಾರತಕ್ಕೆ ಬರಲಿವೆ ಟಿಲ್ಟಿಂಗ್ ಟ್ರೈನ್​ಗಳು! ತಿರುವಿನಲ್ಲಿ ಈ ರೈಲಿನ ಪ್ರಯಾಣ ಭಾರೀ ಗಮ್ಮತ್

ಟಿಲ್ಟಿಂಗ್ ರೈಲು

ಟಿಲ್ಟಿಂಗ್ ರೈಲು

ಇಂತಹ ರೈಲುಗಳು ಇಟಲಿ, ಪೋರ್ಚುಗಲ್, ಸ್ಲೊವೇನಿಯಾ, ಫಿನ್ಲ್ಯಾಂಡ್, ರಷ್ಯಾ, ಜೆಕ್ ರಿಪಬ್ಲಿಕ್, ಯುಕೆ, ಸ್ವಿಟ್ಜರ್ಲೆಂಡ್, ಚೀನಾ, ಜರ್ಮನಿ ಮತ್ತು ರೊಮೇನಿಯಾದಂತಹ 11 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

ಭಾರತದ ರೈಲ್ವೇ ವಲಯ ವೇಗವಾಗಿ ಬೆಳೆಯುತ್ತಿದೆ. ವಂದೇ ಭಾರತ್ ರೈಲುಗಳ ಪರಿಚಯದೊಂದಿಗೆ 2025 ರ ವೇಳೆಗೆ ದೇಶವು ತನ್ನ ಮೊದಲ ಟಿಲ್ಟಿಂಗ್ ರೈಲುಗಳನ್ನು ಸ್ವೀಕರಿಸಲಿದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಭಾರತದಲ್ಲಿ ಕೂಡ ಟಿಲ್ಟಿಂಗ್ ರೈಲುಗಳು (Tilting Trains In India)ಓಡಾಡಲಿವೆ ಎಂದು ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂಕುಡೊಂಕಾದ ರಸ್ತೆಗಳಲ್ಲಿ ಹೇಗೆ ಮೋಟಾರ್‌ಸೈಕಲ್‌ಗಳು ಚಲಿಸುತ್ತವೆಯೋ ಅದೇ ರೀತಿ ವಕ್ರರೇಖೆಯ ರೈಲ್ವೇ ಹಳಿಗಳ ಮೇಲೂ ವೇಗವಾಗಿ ಚಲಿಸಲು ರೈಲುಗಳನ್ನು ತಂತ್ರಜ್ಞಾನವು (Technology) ಅನುವು ಮಾಡಿಕೊಡುತ್ತದೆ. ಭಾರತದಲ್ಲಿ ತಯಾರಾದ ವಂದೇ ಭಾರತ್ ರೈಲುಗಳು (Vande Bharat Express Trains) 2025 ರ ವೇಳೆಗೆ ಅವುಗಳ ವೇಗವನ್ನು ಸುಧಾರಿಸುವ ತಂತ್ರಜ್ಞಾನದೊಂದಿಗೆ ಟಿಲ್ಟಿಂಗ್ ಟ್ರೈನ್‌ಗಳು (Tilting Trains) ಸಜ್ಜುಗೊಳ್ಳಲಿವೆ.


ಇಂತಹ ರೈಲುಗಳು ಇಟಲಿ, ಪೋರ್ಚುಗಲ್, ಸ್ಲೊವೇನಿಯಾ, ಫಿನ್ಲ್ಯಾಂಡ್, ರಷ್ಯಾ, ಜೆಕ್ ರಿಪಬ್ಲಿಕ್, ಯುಕೆ, ಸ್ವಿಟ್ಜರ್ಲೆಂಡ್, ಚೀನಾ, ಜರ್ಮನಿ ಮತ್ತು ರೊಮೇನಿಯಾದಂತಹ 11 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 100 ವಂದೇ ಭಾರತ್ ರೈಲುಗಳು ಈ ತಂತ್ರಜ್ಞಾನದೊಂದಿಗೆ ಸಜ್ಜುಗೊಳ್ಳಲಿದ್ದು ವೇಗವನ್ನು ಸುಧಾರಿಸುವ ಆಶಯದೊಂದಿಗೆ ಕಾರ್ಯಾರಂಭಗೊಳ್ಳಲಿದೆ ಎಂದು ಭಾವಿಸಲಾಗಿದೆ.


ಟಿಲ್ಟಿಂಗ್ ಟ್ರೈನುಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
ಸಾಮಾನ್ಯವಾಗಿ ತಿರುವಿರುವ ರೈಲ್ವೇ ಹಳಿಗಳ ಮೂಲಕ ರೈಲು ಸಂಚರಿಸಿದಾಗ ರೈಲಿನ ಒಳಗಿರುವ ಪ್ರಯಾಣಿಕರು ಹಾಗೂ ಲಗೇಜುಗಳು ತಮ್ಮ ಸ್ಥಾನಗಳನ್ನು ಬದಲಿಸುತ್ತಾರೆ. ಪಕ್ಕಕ್ಕೆ ವಾಲಿಕೊಳ್ಳುತ್ತಾರೆ. ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರು ರೈಲಿನ ಒಂದು ಬದಿಗೆ ನೂಕಿದ ಅನುಭವಕ್ಕೆ ಒಳಗಾದರೆ ನಿಂತಿರುವ ಪ್ರಯಾಣಿಕರು ತಮ್ಮ ಸಮತೋಲವನ್ನು ಕಳೆದುಕೊಳ್ಳುತ್ತಾರೆ.


ಆದರೆ ಟಿಲ್ಟಿಂಗ್ ಟ್ರೈನ್‌ಗಳಲ್ಲಿ ಒಮ್ಮೊಮ್ಮೆ ಅಹಿತಕರ ಎಂದೆನಿಸುವ ಈ ಸನ್ನಿವೇಶಕ್ಕೆ ಸೂಕ್ತ ಪರಿಹಾರ ದೊರೆಯುತ್ತದೆ. ಟಿಲ್ಟಿಂಗ್ ರೈಲು ಚಲನೆ ನಿಯಂತ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ರೈಲಿನೊಳಗೆ ಪ್ರಯಾಣಿಕರ ಚಲನೆಯನ್ನು ನಿರ್ವಹಿಸಲು ಅವರ ಭಂಗಿಯನ್ನು ಶಕ್ತಗೊಳಿಸುತ್ತದೆ. ಈ ರೈಲುಗಳ ವಿನ್ಯಾಸವು ಟ್ರ್ಯಾಕ್‌ನ ವಕ್ರರೇಖೆಯ ಕಡೆಗೆ ವಾಲುವಂತೆ ಮಾಡುತ್ತದೆ. ವಿಶೇಷವಾಗಿ ಹೆಚ್ಚಿನ ವೇಗದಲ್ಲಿ ರೈಲು ವಕ್ರಾಕೃತಿಯ ಹಳಿಗಳನ್ನು ಸಮೀಪಿಸಿದಾಗ ರೈಲಿನೊಳಗಿನ ಬಲವನ್ನು ಸರಿದೂಗಿಸುತ್ತದೆ.


ಟಿಲ್ಟಿಂಗ್ ಟ್ರೈನ್‌ಗಳಿಂದ ದೊರೆಯುವ ಇತರ ಪ್ರಯೋಜನಗಳೇನು?
ಸ್ವೀಡನ್ ಮೂಲದ ಕೆಟಿಎಚ್ ಇಂಜಿನಿಯರಿಂಗ್ ಸೈನ್ಸಸ್ ಪ್ರಕಾರ, ಪ್ರಯಾಣಿಕರು ಅನುಭವಿಸುವ ಪಾರ್ಶ್ವ ವೇಗವರ್ಧನೆಯನ್ನು ಕಡಿಮೆ ಮಾಡಲು ಬಾಗಿದ ಸಮಯದಲ್ಲಿ ವಾಹನದ ಭಾಗವನ್ನು ತಿರುಗಿಸಲು ರೈಲುಗಳನ್ನು ಓರೆಯಾಗಿಸುವುದು (ಟಿಲ್ಟ್ ಮಾಡುವುದು) ಮೂಲ ತತ್ವವಾಗಿದೆ ಎಂದು ತಿಳಿಸಿದ್ದಾರೆ.


ಸಾಮಾನ್ಯ ಬ್ರಾಡ್-ಗೇಜ್ ಟ್ರ್ಯಾಕ್‌ಗಳಲ್ಲಿ ಹೆಚ್ಚು ವೇಗ
ರೈಲಿನೊಳಗೆ ವಸ್ತುಗಳು ಮತ್ತು ಪ್ರಯಾಣಿಕರನ್ನು ಸ್ಥಿರವಾಗಿಡುವುದು ಮತ್ತು ರೈಲ್ವೇ ವ್ಯವಸ್ಥೆಗಳ ವೇಗವನ್ನು ಹೆಚ್ಚಿಸುವುದರ ಜೊತೆಗೆ, ಹೆಚ್ಚಿನ ನಿಖರವಾದ ಟಿಲ್ಟಿಂಗ್ ವ್ಯವಸ್ಥೆಗಳು ನಿರ್ವಾಹಕರು ವಿಭಿನ್ನ ವೇಗವರ್ಧಕ ಆಯ್ಕೆಗಳನ್ನು ನಡೆಸಲು, ನಿರ್ವಹಣಾ ವೆಚ್ಚಗಳನ್ನು ಅತ್ಯುತ್ತಮವಾಗಿಸಲು ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಅನುಮತಿಸುತ್ತದೆ. ನಮ್ಮ ದೇಶದಲ್ಲಿ ಟಿಲ್ಟಿಂಗ್ ಟ್ರೈನುಗಳು ಸಾಮಾನ್ಯ ಬ್ರಾಡ್-ಗೇಜ್ ಟ್ರ್ಯಾಕ್‌ಗಳಲ್ಲಿ ಕೂಡ ಹೆಚ್ಚು ವೇಗದಲ್ಲಿ ಚಲಿಸಲು ಅನುವು ಮಾಡಿಕೊಡುವ ಕಾರ್ಯವಿಧಾನವನ್ನು ಹೊಂದಿರುತ್ತವೆ.


ರೈಲು ವಕ್ರರೇಖೆಯಲ್ಲಿ ವೇಗವಾಗಿ ಚಲಿಸಿದಂತೆ ಇದು ವಸ್ತುಗಳನ್ನು ಜಾರುವಂತೆ ಮಾಡುತ್ತದೆ. ಈ ಸಮಯದಲ್ಲಿ ರೈಲಿನಲ್ಲಿ ಆಸೀನರಾಗಿರುವ ಪ್ರಯಾಣಿಕರಿಗೆ ಕೈಯ ಹಿಡಿಯು ಹಿಸುಕಿದ ಭಾವನೆಯನ್ನುಂಟು ಮಾಡುತ್ತದೆ, ಇದೇ ಸಮಯದಲ್ಲಿ ನಿಂತಿರುವ ಪ್ರಯಾಣಿಕರು ಸಮತೋಲವನ್ನು ಕಳೆದುಕೊಳ್ಳುತ್ತಾರೆ. ಟಿಲ್ಟಿಂಗ್ ವಿನ್ಯಾಸದಲ್ಲಿ ಈ ರೀತಿ ಸಂಭವಿಸುವುದಿಲ್ಲ ಎಂದು ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.


ರೈಲುಗಳು ಓರೆಯಾಗುವುದರಿಂದ ಏನು ಬದಲಾವಣೆ ಆಗಲಿದೆ?
ಈಗಾಗಲೇ ಇಂತಹ ರೈಲುಗಳನ್ನು ನಿರ್ವಹಿಸುವ ದೇಶಗಳಲ್ಲಿನ ಅನೇಕ ಪ್ರಯಾಣಿಕರು ಚಲನೆಯ ಅನಾರೋಗ್ಯದ (ಮೋಶನ್ ಸಿಕ್‌ನೆಸ್) ಬಗ್ಗೆ ದೂರು ನೀಡಿದ್ದಾರೆ.


ಹೆಚ್ಚು ಸಂಖ್ಯೆಯ ತಿರುವುಗಳನ್ನು ಹೊಂದಿರುವ ಟ್ರ್ಯಾಕ್‌ನಲ್ಲಿ ಟಿಲ್ಟಿಂಗ್ ರೈಲುಗಳಲ್ಲಿ ಪ್ರಯಾಣಿಸುವ ಎಂಟು ಆರೋಗ್ಯವಂತ ಪ್ರಯಾಣಿಕರ ಮೇಲೆ ಪರೀಕ್ಷೆಗಳನ್ನು ನಡೆಸಲಾಯಿತು. ಅಧ್ಯಯನದ ಉದ್ದೇಶಕ್ಕಾಗಿ ಮೂರು ಗಂಟೆಗಳ ಪ್ರತಿ ಸವಾರಿಗೆ ಮೂರು ದಿನಗಳ ಅವಧಿಯಲ್ಲಿ ವಿಭಿನ್ನ ವಾಹನಗಳನ್ನು ಮೌಲ್ಯಮಾಪನ ನಡೆಸಲಾಯಿತು.


ಕೆಲವರಿಗೆ ಇದು ಬೆಸ್ಟ್, ಕೆಲವರಿಗೆ ಸಮಸ್ಯೆ
ಹೆಚ್ಚಿನ ಪ್ರಯಾಣಿಕರು ಆರಾಮದಾಯಕ ಪ್ರಯಾಣವನನ್ನು ಅನುಭವಿಸಿದರು ಎಂದು ತಿಳಿಸಿದರೆ, 10% ದಷ್ಟು ಪ್ರಯಾಣಿಕರು ಮೋಶನ್ ಸಿಕ್‌ನೆಸ್ (ಚಲನೆಯ ಅನಾರೋಗ್ಯ) ಲಕ್ಷಣಗಳನ್ನು ವರದಿ ಮಾಡಿದ್ದಾರೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ತಿಳಿಸಿದೆ. ಸಾಮಾನ್ಯ 70% ವಕ್ರತೆಯ ಬದಲಿಗೆ 55% ದಷ್ಟು ವಕ್ರತೆಯು ಇಂತಹ ಅನಾರೋಗ್ಯ ಲಕ್ಷಣಗಳನ್ನು 25% ದಿಂದ 40% ದಷ್ಟು ಕಡಿಮೆ ಮಾಡುತ್ತದೆ ಎಂಬುದಾಗಿ ಅಧ್ಯಯನದಿಂದ ತಿಳಿದು ಬಂದಿದೆ.


ವಕ್ರರೇಖೆಗಳನ್ನು ವಾಹನಗಳು (ರೈಲುಗಳು) ಪ್ರವೇಶಿಸಿದಾಗ ಮತ್ತು ಅಲ್ಲಿಂದ ನಿರ್ಗಮಿಸುವಾಗ ರೈಲುಗಳ ಓರೆಯಾಗುವ ಸಮಯವನ್ನು ಸರಿಹೊಂದಿಸುವ ಮೂಲಕ ಈ ಅನಾರೋಗ್ಯವನ್ನು ಮೂಲಭೂತವಾಗಿ ನಿವಾರಿಸಬಹುದು ಎಂದು ವರದಿಯು ಉಲ್ಲೇಖಿಸಿದೆ. ತಿರುಗುವ ಬದಲಿಗೆ ರೈಲುಗಳು ವಕ್ರರೇಖೆಯ ಆರಂಭದಲ್ಲಿ ಮಾತ್ರ ವಾಲಿದಾಗ ಯಾವುದೇ ಪ್ರಯಾಣಿಕರು ಮೋಶನ್ ಸಿಕ್‌ನೆಸ್‌ಗೆ ಒಳಗಾಗಿಲ್ಲ ಎಂದು ವರದಿ ತಿಳಿಸಿದೆ.


ರೈಲುಗಳನ್ನು ಓರೆಯಾಗಿಸುವ ಪ್ರಯತ್ನ ನಡೆದಿತ್ತು!
ರೈಲುಗಳನ್ನು ಟಿಲ್ಟ್ ಮಾಡುವ (ಓರೆಯಾಗಿಸುವ) ಆಯ್ಕೆಯನ್ನು ಭಾರತ ಅನ್ವೇಷಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ.


ಈ ಮುನ್ನವೇ ನಡೆದಿತ್ತು ಒಪ್ಪಂದ
2017 ರಲ್ಲಿ, ರೈಲ್ವೇ ಸಚಿವಾಲಯವು ದೇಶಕ್ಕಾಗಿ ಟಿಲ್ಟಿಂಗ್ ರೈಲುಗಳನ್ನು ಅಭಿವೃದ್ಧಿಪಡಿಸಲು ಸ್ವಿಟ್ಜರ್ಲೆಂಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತು. ಈ ನಿಟ್ಟಿನಲ್ಲಿ ಉಭಯ ದೇಶಗಳು ತಿಳುವಳಿಕೆ ಪತ್ರಕ್ಕೆ (ಎಂಒಯು) ಮೆಮೊರಾಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್‌ಗೆ ಸಹಿ ಹಾಕಿದ್ದವು.


ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರೈಲು ವಲಯದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಸ್ವಿಸ್ ಒಕ್ಕೂಟದ ಪರಿಸರ, ಸಾರಿಗೆ ಮತ್ತು ಸಂವಹನಗಳ ಫೆಡರಲ್ ಇಲಾಖೆಯೊಂದಿಗೆ ಎರಡು ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪಿಟಿಐ ವರದಿಯ ಪ್ರಕಾರ ಮೊದಲ ಒಪ್ಪಂದವು 2016 ರಲ್ಲಿ ಆಗಿನ ರೈಲ್ವೆ ಸಚಿವ ಸುರೇಶ್ ಪ್ರಭು ಮತ್ತು ಸ್ವಿಸ್ ರಾಯಭಾರಿ ನಡುವೆ ಚರ್ಚಿಸಲಾದ ಮತ್ತೊಂದು ದ್ವಿಪಕ್ಷೀಯ ಸಹಕಾರದ ಅನುಸರಣೆಯಾಗಿದೆ.


ಟ್ರಾಕ್ಷನ್ ರೋಲಿಂಗ್ ಸ್ಟಾಕ್, ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ಮತ್ತು ಟ್ರೈನ್ ಸೆಟ್‌ಗಳು, ಟ್ರಾಕ್ಷನ್ ಪ್ರೊಪಲ್ಷನ್ ಉಪಕರಣಗಳ ಸರಕು ಸಾಗಣೆ ಮತ್ತು ಟಿಲ್ಟಿಂಗ್ ಟ್ರೈನ್‌ಗಳು ಒಳಗೊಂಡಂತೆ ಕೆಲವೊಂದು ಉದ್ದೇಶವನ್ನು ಈ ತಿಳುವಳಿಕೆ ಪತ್ರವು ಹೊಂದಿತ್ತು.


ಟಿಲ್ಟಿಂಗ್ ಟ್ರೈನ್‌ಗಳನ್ನು ಹೊಂದಿರುವ ದೇಶಗಳು
ಇಟಲಿ, ಪೋರ್ಚುಗಲ್, ಸ್ಲೊವೇನಿಯಾ, ಫಿನ್‌ಲ್ಯಾಂಡ್, ರಷ್ಯಾ, ಜೆಕ್ ರಿಪಬ್ಲಿಕ್, ಯುಕೆ, ಸ್ವಿಟ್ಜರ್ಲೆಂಡ್, ಚೀನಾ, ಜರ್ಮನಿ ಮತ್ತು ರೊಮೇನಿಯಾದಂತಹ ದೇಶಗಳು ಈಗಾಗಲೇ ಚಾಲನೆಯಲ್ಲಿರುವ ಟಿಲ್ಟಿಂಗ್ ರೈಲುಗಳನ್ನು ಹೊಂದಿವೆ.


ಇಟಲಿಯಲ್ಲಿ ಟಿಲ್ಟಿಂಗ್ ರೈಲುಗಳನ್ನು ಪೆಂಡೋಲಿನೊ ಎಂದು ಕರೆಯಲಾಗುತ್ತದೆ. ಇಟಾಲಿಯನ್ ಭಾಷೆಯಲ್ಲಿ ಲೋಲಕ ಎಂದರ್ಥ. ಇದನ್ನು ಅಲ್‌ಸ್ಟೋಮ್ ಫೆರೋವಿಯಾರಿಯಾದಿಂದ ತಯಾರಿಸಲಾಗಿದೆ. ಇಲ್ಲಿ ಟಿಲ್ಟಿಂಗ್ ಟ್ರೈನ್‌ಗಳು ಗಂಟೆಗೆ 250 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ರೈಲ್ವೇ ತಂತ್ರಜ್ಞಾನದ ಪ್ರಕಾರ, ರೈಲುಗಳು 'ಟಿಲ್ಟ್ರೋನಿಕ್ಸ್' ತಂತ್ರಜ್ಞಾನವನ್ನು ಬಳಸುತ್ತವೆ ಮತ್ತು ಹೈಡ್ರಾಲಿಕ್ ಟಿಲ್ಟಿಂಗ್ ಬೋಗಿಗಳನ್ನು ಒಳಗೊಂಡಿವೆ.


ಇದನ್ನೂ ಓದಿ: Putin Health: ಪುಟಿನ್ ಕೈಗಳು ನೇರಳೆ ಬಣ್ಣಕ್ಕೆ ತಿರುಗಿವೆಯಂತೆ: ನಿಗೂಢ ಕಾಯಿಲೆ ಗುಮಾನಿ ನಿಜವೇ?


ಯುಕೆಯಲ್ಲಿರುವ ಟಿಲ್ಟಿಂಗ್ ಟ್ರೈನ್‌ಗಳನ್ನು ವರ್ಜಿನ್ ರೈಲ್ ಗ್ರೂಪ್ ಒಡೆತನದ ಸಂಸ್ಥೆ ವರ್ಜಿನ್ ಟ್ರೈನ್ಸ್ ನಿರ್ವಹಿಸುತ್ತಿದೆ. 2002 ರಿಂದ ಆರಂಭಗೊಂಡ ಟಿಲ್ಟಿಂಗ್ ರೈಲುಗಳ ಸೇವೆಯಲ್ಲಿ ನಿರ್ವಾಹಕರು ಆರಂಭದಲ್ಲಿ ಎರಡು ರೈಲುಗಳಾದ ಬೊಂಬಾರ್ಡಿಯರ್ ಕ್ಲಾಸ್ 221 ಸೂಪರ್ ವಾಯೇಜರ್ ಡೀಸೆಲ್ ರೈಲುಗಳು ಮತ್ತು ಕ್ಲಾಸ್ 390 ಪೆಂಡೋಲಿನೋ ಇಎಂಯುಗಳನ್ನು ಪರಿಚಯಿಸಿದರು. ಎರಡನೆಯದು ಗರಿಷ್ಠ 225 ಕಿಮೀ/ಗಂಟೆ ವೇಗವನ್ನು ಹೊಂದಿದೆ ಮತ್ತು ಲಂಡನ್ ಮತ್ತು ಸ್ಕಾಟ್ಲೆಂಡ್ ನಡುವೆ ಚಲಿಸುತ್ತದೆ.


ವಂದೇ ಭಾರತ್ ರೈಲುಗಳ ಪ್ರಮುಖ ರಫ್ತುದಾರನಾಗಿ ಭಾರತ
ಭಾರತದ ರೈಲ್ವೇಯು 2026 ರ ವೇಳೆಗೆ ಪ್ರಾಥಮಿಕವಾಗಿ ಯುರೋಪ್, ದಕ್ಷಿಣ ಅಮೇರಿಕಾ ಮತ್ತು ಪೂರ್ವ ಏಷ್ಯಾದ ದೇಶಗಳ ಮಾರುಕಟ್ಟೆಗಳಿಗೆ ವಂದೇ ಭಾರತ್ ರೈಲುಗಳ ಪ್ರಮುಖ ರಫ್ತುದಾರನಾಗಲು ತಯಾರಿ ನಡೆಸುತ್ತಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.


ಇದನ್ನೂ ಓದಿ: FIFA World Cup-2022: ಫುಟ್ಬಾಲ್‌ ಸ್ಟಾರ್ಸ್ ಬಗ್ಗೆ ಅಭಿಮಾನ ಬೇಡ! ಅದು ಇಸ್ಲಾಂಗೆ ವಿರುದ್ಧ ಎಂದ ಮುಸ್ಲಿಂ ಸಂಘಟನೆ!


ಮುಂದಿನ ವರ್ಷಗಳಲ್ಲಿ 75 ವಂದೇ ಭಾರತ್ ರೈಲುಗಳು (ಮುಂದಿನ ವರ್ಷದ ಆಗಸ್ಟ್‌ ವೇಳೆಗೆ ಕಾರ್ಯಾಚರಣೆಗೊಳ್ಳುವ ನಿರೀಕ್ಷೆಯಿದೆ. ಕನಿಷ್ಠ 10 ಲಕ್ಷ ಕಿಮೀ ಗುರಿಯನ್ನು ಸಾಧಿಸುವ ಇರಾದೆಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.


ರೈಲುಗಳ ಟ್ರಯಲ್ ಚಲನೆ
ರೈಲ್ವೆಯು ಜೋಧ್‌ಪುರ ವಿಭಾಗದಲ್ಲಿ ಜೈಪುರದ ಬಳಿ 220 ಕಿಲೋಮೀಟರ್‌ಗಳ ಗರಿಷ್ಠ ವೇಗದಲ್ಲಿ ಪರೀಕ್ಷಾ ಓಟಗಳನ್ನು ನಡೆಸಲು 59-ಕಿಮೀ ಪರೀಕ್ಷಾ ಮಾರ್ಗವನ್ನು ಗುಧಾ-ಥಾನಾ ಮಿತ್ರಿ ನಡುವೆ ನಿರ್ಮಿಸುತ್ತಿದೆ. ಈ ಟ್ರ್ಯಾಕ್ ಜನವರಿ 2024 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಫ್ತು ಮಾಡಲಾಗುವ ರೈಲುಗಳ ಟ್ರಯಲ್‌ಗಳನ್ನು ನಡೆಸಲು ಬಳಸಲಾಗುತ್ತದೆ ಎಂದು ವರದಿಯಾಗಿದೆ.

Published by:ಗುರುಗಣೇಶ ಡಬ್ಗುಳಿ
First published: