ಭಾರತದ ಸಂವಹನ ಉಪಗ್ರಹವಾದ ಜಿಸ್ಯಾಟ್-24 (GSAT-24) ಅನ್ನು ಗುರುವಾರದಂದು ಯಶಸ್ವಿಯಾಗಿ ನಭದೊಳಗೆ ಚಿಮ್ಮಿಸಲಾಗಿದೆ. ಫ್ರಾನ್ಸ್ ಮೂಲದ ಏರಿಯನೆಸ್ಪೇಸ್ (Arianespace) ಎಂಬ ಸಂಸ್ಥೆಯು ಈ ಉಪಗ್ರಹ ಉಡಾವಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು ಹಾಗೂ ಅದರಂತೆ ಅದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ ಕೌರೌ ಎಂಬಲ್ಲಿಂದ ಈ ಭಾರತೀಯ ಉಪಗ್ರಹವನ್ನು (Indian satellite) ಯಶಸ್ವಿಯಾಗಿ ಉಡಾವಣೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಸಂಸ್ಥೆಯು ತನ್ನ ಟ್ವಿಟರ್ ಖಾತೆಯ ಮೂಲಕವು ಉಪಗ್ರಹದ ಸ್ಥಿತಿಗತಿಗಳ ಕುರಿತು ಮಾಹಿತಿ ಹಂಚಿಕೊಂಡಿದೆ. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಗೆಂದು ಈ ಉಪಗ್ರಹವನ್ನು ಇಸ್ರೊ ತಯಾರಿಸಿದ್ದು ಪ್ರಸ್ತುತ ಅದನ್ನು Ariane-5 ಸ್ಪೇಸ್ ಕ್ರಾಫ್ಟ್ ನಲ್ಲಿ ಅಳವಡಿಸಿ ಉಡಾಯಿಸಲಾಗಿದೆ.
NSIL ನಿಂದ ಉಡಾಯಿಸಲಾದ ಪ್ರಥಮ ಸಂವಹನ ಉಪಗ್ರಹ
ಬಾಹ್ಯಾಕಾಶ ಕ್ಷೇತ್ರದಲ್ಲಾದ ಸುಧಾರಣೆಗಳ ನಂತರ "ಬೇಡಿಕೆಯ ಆಧಾರದಲ್ಲಿ" NSIL ನಿಂದ ಉಡಾಯಿಸಲಾದ ಪ್ರಥಮ ಸಂವಹನ ಉಪಗ್ರಹ ಇದಾಗಿದೆ ಎಂದು ತಿಳಿದುಬಂದಿದೆ. ಭಾರತೀಯ ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಬರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಸದ್ಯ ಉಡಾವಣೆಗೊಂಡಿರುವ ಈ ಜಿಸ್ಯಾಟ್ ಉಪಗ್ರಹದ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಟಾಟಾ ಪ್ಲೇ ಅವರಿಗೆ ಲೀಸ್ ನೀಡಿರುವುದಾಗಿ ತಿಳಿದುಬಂದಿದೆ.
ನಾವು, ನೀವೆಲ್ಲರೂ ಈ ಹಿಂದೆಯು ಅನೇಕ ಬಾರಿ ಈ ಜಿಸ್ಯಾಟ್-24 ಎಂಬ ನಾಮವನ್ನು ಕೇಳಿದ್ದೇವೆ. ಆದಾಗ್ಯೂ ನಮ್ಮಲ್ಲಿ ಬಹುತೇಕರಿಗೆ ಈ ಬಗ್ಗೆ ಅಷ್ಟೊಂದು ತಿಳಿದಿಲ್ಲ. ಹಾಗಾಗಿ ಜಿಸ್ಯಾಟ್ ಎಂದರೇನು ಹಾಗೂ ಸಂವಹನ ಸೇವೆಗಳ ಮೇಲೆ ಇದರ ಪರಿಣಾಮಗಳೇನು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.
ಜಿಸ್ಯಾಟ್ ಎಂದರೇನು?
ಜಿಸ್ಯಾಟ್(GSAT), ಜಿಯೋಸಿಂಕ್ರನಸ್ ಸ್ಯಾಟಲೈಟ್ ಎಂದು ಕರೆಯಲ್ಪಡುವ ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಭಾರತದ ಸಂವಹನಕ್ಕೆ ಸಂಬಂಧಿಸಿದ ಉಪಗ್ರಹವಾಗಿದೆ. ಡಿಜಿಟಲ್ ಆಡಿಯೋ, ಡೇಟಾ, ವಿಡಿಯೋ ಪ್ರಸರಣಗಳು, ನಾಗರಿಕ ಹಾಗೂ ಮಿಲಿಟರಿ ಈ ಎರಡೂ ವಲಯಗಳಲ್ಲಿ ಉಪಯೋಗಿಸಲು ಅನು ಮಾಡಿಕೊಡಲು ಈ ಉಪಗ್ರಹವನ್ನು ಬಳಸಲಾಗುತ್ತದೆ.
We just received confirmation that the second passenger, GSAT-24 successfully separated! Thanks @NSIL_India for their trust!
We now are waiting for the signal acquisition of both satellites!#VA257@isro @ArianeGroup @Ariane5 @esa @CNES @EuropeSpacePort @BxMetro
— Arianespace (@Arianespace) June 22, 2022
ಜಿಸ್ಯಾಟ್ ಗಳನ್ನು ಸಾಮಾನ್ಯವಾಗಿ ಭೂಮಿಯ ಮೇಲಿನ ಸ್ತರದ ಕಕ್ಷೆಯಲ್ಲಿ ಸುತ್ತುವಂತೆ ವಿನ್ಯಾಸಗೊಳಿಸಿ, ಪ್ರೊಗ್ರ್ಯಾಮ್ ಮಾಡಿ ಬಿಡಲಾಗುತ್ತದೆ ಹಾಗೂ ಈ ಉಪಗ್ರಹವು ಭೂಮಿಯ ಸುತ್ತುವಿಕೆಗೆ ಸಮಾನಾಂತರದಲ್ಲಿ ಸುತ್ತುತ್ತಿರುವತ್ತವೆ ಎಂದು ಸ್ಪೇಸ್.ಕಾಮ್ ವಿವರಿಸುತ್ತದೆ.
ಇನ್ಸಾಟ್ ಎಂದರೇನು
ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೊ ಪ್ರಕಾರ, ದೇಶೀಯ ವಲಯದ ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ (ಇನ್ಸಾಟ್) ಎಂಬುದು ದಕ್ಷಿಣ ಏಷಿಯಾ-ಪೆಸಿಫಿಕ್ ಪ್ರದೇಶದಲ್ಲಿ ಲಭ್ಯವಿರುವ ಅತಿ ದೊಡ್ಡ ಸಂವಹನ ಉಪಗ್ರಹ ವ್ಯವಸ್ಥೆಗಳ ಪೈಕಿ ಒಂದಾಗಿದ್ದು ಜಿಯೋ-ಸ್ಟೆಷನರಿ ಆರ್ಬಿಟ್ ನಲ್ಲಿ ಈಗಲೂ ಕಾರ್ಯಾಚರಣೆ ನಡೆಯುತ್ತಿರುವ ಒಂಭತ್ತು ಉಪಗ್ರಹಗಳನ್ನು ಹೊಂದಿದೆ. ಭಾರತವು ಮೊದಲ ಬಾರಿಗೆ ಇನ್ಸಾಟ್-1B ಯನ್ನು 1983 ರಲ್ಲಿ ಉಡಾಯಿಸಿತ್ತು. ತದನಂತರದಿಂದ ಭಾರತವು ಗಗನ ಕ್ಷೇತ್ರದಲ್ಲಿ ಸುಸ್ಥಿರವಾಗಿ ಪ್ರಗತಿ ಕಾಣುತ್ತ ಬಂದಿದೆ.
ಇದನ್ನೂ ಓದಿ: Amit Shah: ಮೋದಿ ಆ ಒಂದು ಆರೋಪವನ್ನು 19 ವರ್ಷ ಮೌನವಾಗಿ ಸಹಿಸಿಕೊಂಡಿದ್ದರು! ಗುಜರಾತ್ ಗಲಭೆ ಬಗ್ಗೆ ಅಮಿತ್ ಶಾ ಮಾತು
ಇನ್ಸಾಟ್ ವ್ಯವಸ್ಥೆಯು 200 ಕ್ಕೂ ಹೆಚ್ಚು ಟ್ರಾನ್ಸ್ಪಾಂಡರ್ ಗಳನ್ನುC ನಲ್ಲಿ ಹೊಂದಿದೆ. ಈ C ಹಾಗೂ Ku ಬ್ಯಾಂಡುಗಳು ಸಾಮಾನ್ಯವಾಗಿ ದೂರಸಂವಹನಕ್ಕೆ ಸಂಬಂಧಿಸಿದಂತೆ ಸೇವೆಗಳನ್ನು ಒದಗಿಸುತ್ತವೆ. ಉದಾಹರಣೆಗೆ, ಟಿವಿ ಪ್ರಸರಣ, ಉಪಗ್ರಹ ಆಧಾರಿತ ಸುದ್ದಿ ಕಲೆ ಹಾಕುವುದು, ಸಾಮಾಜಿಕ ಉಪಯೋಗಾಂಶಗಳು, ಹವಾಮಾನ ಮುನ್ಸೂಚನೆ, ವಿಕೋಪಗಳ ಬಗ್ಗೆ ಎಚ್ಚರಿಕೆ, ಮತ್ತು ರಕ್ಷಣಾ ಕಾರ್ಯಾಚರಣೆಗಳು.
ಸಂವಹನ ಸೇವೆಗಳ ಮೇಲೆ ಜಿಸ್ಯಾಟ್-24 ಹೇಗೆ ಪರಿಣಾಮ ಬೀರಲಿದೆ?
ಜಿಸ್ಯಾಟ್-24 ಎಂಬುದು ಡಿಟಿಹೆಚ್ ಅಪ್ಲಿಕೇಶನ್ ಅಗತ್ಯಗಳನ್ನು ಪೂರೈಸಲು ಪ್ಯಾನ್-ಇಂಡಿಯಾ ವ್ಯಾಪ್ತಿಯೊಂದಿಗೆ 4180 ಕೆಜಿ ತೂಕದ 24-Ku ಬ್ಯಾಂಡ್ ಹೊಂದಿರುವ ಸಂವಹನ ಉಪಗ್ರಹವಾಗಿದೆ.
ಹೈ ಡೆಫಿನಿಷನ್ ಚಾನಲ್‌ಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ
ಇಂಡಿಯಾ ಟುಡೇ ಪ್ರಕಾರ, ಜಿಸ್ಯಾಟ್-24, ಒಮ್ಮೆ ಕಾರ್ಯನಿರ್ವಹಿಸಿದರೆ, ಅದೇ ಸ್ಪೆಕ್ಟ್ರಮ್‌ನಲ್ಲಿ ಹೆಚ್ಚಿನ ಡಿಟಿಹೆಚ್ ಚಾನಲ್‌ಗಳನ್ನು ಒದಗಿಸುವ ಮೂಲಕ ದೂರದರ್ಶನ ವೀಕ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಹೈ ಡೆಫಿನಿಷನ್ ಚಾನಲ್‌ಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿರುತ್ತದೆ.
ಉಪಗ್ರಹ ಆಧಾರಿತ ಸಂವಾದಾತ್ಮಕ ಶಿಕ್ಷಣ ಸೇವೆಗಳನ್ನು ಸುಧಾರಿಸಬಹುದು
ಈ ಉಪಗ್ರಹ ಒದಗಿಸುವ ಸೇವೆಗಳಡಿಯಲ್ಲಿ ತರಗತಿಗಳ ಸಂಪರ್ಕಕ್ಕಾಗಿ ಉಪಗ್ರಹ ಆಧಾರಿತ ಸಂವಾದಾತ್ಮಕ ಶಿಕ್ಷಣ ಸೇವೆಗಳನ್ನು ಸುಧಾರಿಸಬಹುದು ಮತ್ತು ಉಪಗ್ರಹವು ದೂರಸಂಪರ್ಕ ಮತ್ತು ಡಿಜಿಟಲ್ ಸಿನಿಮಾ, ಹೈ-ಸ್ಪೀಡ್ ಬ್ಯಾಕ್‌ಹಾಲ್ ಲಿಂಕ್‌ಗಳು ಮತ್ತು ಬೃಹತ್ ಡೇಟಾ ವರ್ಗಾವಣೆಯಂತಹ ಉದಯೋನ್ಮುಖ ವಲಯಗಳಲ್ಲಿ ಹೆಚ್ಚಿನ ನೆರವು ನೀಡಲು ಸಮರ್ಥವಾಗಿರುತ್ತದೆ.
ಫ್ರೀ ಪ್ರೆಸ್ ಜರ್ನಲ್ ಪ್ರಕಾರ, ಜಿಸ್ಯಾಟ್-24 BSS Ku-ಬ್ಯಾಂಡ್‌ನಲ್ಲಿ ಉಪಗ್ರಹ ಆಧಾರಿತ ಡಿಟಿಹೆಚ್ ಮತ್ತು ವಿಸ್ಯಾಟ್ ಸೇವೆಗಳನ್ನು ಹೆಚ್ಚಿಸುವ ಪ್ರಾಥಮಿಕ ಉದ್ದೇಶವನ್ನು ಹೊಂದಿದೆ.
ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪಗಳ ವ್ಯಾಪ್ತಿಯವರೆಗೂ ಸೇವೆ
ಇದರ 24 Ku-ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು 53.5 dBW ನ ವರ್ಧಿತ ಪರಿಣಾಮಕಾರಿ ಐಸೊಟ್ರೊಪಿಕ್ ರೇಡಿಯೇಟೆಡ್ ಪವರ್ (EIRP) ಅನ್ನು ಹೊಂದಿದ್ದು, ಭಾರತದ ಮುಖ್ಯ ಭೂಭಾಗ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪಗಳ ವ್ಯಾಪ್ತಿಯವರೆಗೂ ಸೇವೆ ನೀಡಲಿದೆ. ಜಿಸ್ಯಾಟ್-24 ಅನ್ನು 15 ವರ್ಷಗಳ ಕಾಲ ಕಾರ್ಯಾಚರಣೆ ನಡೆಸುವಂತೆ ವಿನ್ಯಾಸಗೊಳಿಸಿ ಇಸ್ರೊ ಕಾನ್ಫಿಗರ್ ಮಾಡಿದೆ.
ಇದನ್ನೂ ಓದಿ: Mobile Number: ಯುವತಿಯ ಮೊಬೈಲ್ ನಂಬರ್ ಕೇಳಿದ ಇಬ್ಬರಿಗೆ ಜೈಲು ಶಿಕ್ಷೆ
"ಬೇಡಿಕೆ-ಚಾಲಿತ" ಮೋಡ್ ಎಂದರೆ ಉಪಗ್ರಹವನ್ನು ಉಡಾವಣೆ ಮಾಡಿದಾಗ, ಅಂತಿಮ ಗ್ರಾಹಕರು ಯಾರಾಗಲಿದ್ದಾರೆ ಮತ್ತು ಯಾವ ರೀತಿಯ ಬಳಕೆ ಮತ್ತು ಬದ್ಧತೆ ಏನೆಂದು ತಿಳಿಯುತ್ತದೆ, ಇದರಿಂದ ನೀವು ಕಕ್ಷೆಗೆ ಹೋದ ನಂತರ ಈ ಉಪಗ್ರಹ ಸಾಮರ್ಥ್ಯದ ಅತ್ಯಂತ ಪರಿಣಾಮಕಾರಿ ಬಳಕೆಯನ್ನು ಹೊಂದಿರುತ್ತೀರಿ.", ಎಂದು ಎನ್ಎಸ್ಐಎಲ್ ಅಧಿಕಾರಿಯೊಬ್ಬರು ವಿವರಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ