• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಕಣಿವೆ ನಾಡಿನಲ್ಲಿ 'ಖಜಾನೆ'! ಬದಲಾಗುತ್ತಾ ಭಾರತದ ಅದೃಷ್ಟ? ಏನಿದು ಲಿಥಿಯಂ?

Explained: ಕಣಿವೆ ನಾಡಿನಲ್ಲಿ 'ಖಜಾನೆ'! ಬದಲಾಗುತ್ತಾ ಭಾರತದ ಅದೃಷ್ಟ? ಏನಿದು ಲಿಥಿಯಂ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಿಥಿಯಂ ಭಾರತವನ್ನು ಅತ್ಯಂತ ಶ್ರೀಮಂತ ಮತ್ತು ಶಕ್ತಿಯುತ ದೇಶವನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಈ ಲಿಥಿಯಂ ಅದೆಷ್ಟು ಪ್ರಾಮುಖ್ಯತೆ ವಹಿಸಿದೆ, ಇದು ಭಾರತದ ಅದೃಷ್ಟ ಹೇಗೆ ಬದಲಾಯಿಸಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಸದ್ಯ ವಿಶ್ವಾದ್ಯಂತ ಲಿಥಿಯಂಗಾಗಿ  (Lithium) ಹುಡುಕಾಟ ನಡೆಯುತ್ತಿದೆ. ಇದು ಅದ್ಯಾವ ಮಟ್ಟಿಗೆ ಮಹತ್ವ ಪಡೆದಿದೆ ಎಂದರೆ, ಇದನ್ನು 21 ನೇ ಶತಮಾನದ ಪೆಟ್ರೋಲ್ (Petrol) ಎಂದೂ ಬಣ್ಣಿಸಲಾಗುತ್ತಿದೆ. ಸದ್ಯ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) 59 ಲಕ್ಷ ಟನ್ ಲಿಥಿಯಂ ಇರುವುದು ಪತ್ತೆಯಾಗಿದೆ. ಇಂತಹ ಬೃಹತ್ ಸಂಪತ್ತಿನಿಂದ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಲಿಥಿಯಂ ಉತ್ಪಾದನೆಯ ದೇಶವಾಗಲಿದೆ. ಎಲೆಕ್ಟ್ರಿಕ್ ವಾಹನಗಳಿಗೆ (Electric Vehicles) ಬ್ಯಾಟರಿಗಳನ್ನು ತಯಾರಿಸಲು ಲಿಥಿಯಂನ ಬಳಕೆ ಪ್ರಮುಖವಾಗಿದೆ.


ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ, ಉತ್ಪಾದನೆ ಮತ್ತು ಮಾರಾಟ ಹೆಚ್ಚುತ್ತಿದೆ. ಈ ಬೇಡಿಕೆಯ ವೇಗಕ್ಕೆ ಅನುಗುಣವಾಗಿ, ಈ ಲಿಥಿಯಂ ಭಾರತವನ್ನು ಅತ್ಯಂತ ಶ್ರೀಮಂತ ಮತ್ತು ಶಕ್ತಿಯುತ ದೇಶವನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಈ ಲಿಥಿಯಂ ಅದೆಷ್ಟು ಪ್ರಾಮುಖ್ಯತೆ ವಹಿಸಿದೆ, ಇದು ಭಾರತದ ಅದೃಷ್ಟ ಹೇಗೆ ಬದಲಾಯಿಸಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: Indian Economy: ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದ್ಯಾ?


ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 59 ಲಕ್ಷ ಟನ್ ಲಿಥಿಯಂ


ದೇಶದಲ್ಲಿ ಮೊದಲ ಬಾರಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 59 ಲಕ್ಷ ಟನ್ ಲಿಥಿಯಂ ಇದೆ ಎಂದು ಅಂದಾಜಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಸಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ಲಿಥಿಯಂ ಅನ್ನು ಪತ್ತೆ ಮಾಡಿದೆ ಎಂದು ಗಣಿ ಸಚಿವಾಲಯ ತಿಳಿಸಿದೆ. ಅಂತಹ ಬೃಹತ್ ಲಿಥಿಯಂ ನಿಕ್ಷೇಪವು ಭಾರತದ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬ ಚರ್ಚೆ ಸದ್ಯ ನಡೆಯುತ್ತಿದೆ.


ಲಿಥಿಯಂ ಎಂದರೇನು?


ಲಿಥಿಯಂ ನಾನ್ ಫೆರಸ್ ಅದಿರು. ಇದು ಬೆಳ್ಳಿಯಂತೆ ಕಾಣುವ ಕಲ್ಲಾಗಿದ್ದು, ತುಂಬಾ ಮೃದುವಾಗಿರುತ್ತದೆ. ಇದರ ಸಾಂದ್ರತೆ ತುಂಬಾ ಕಡಿಮೆ. ಆದಾಗ್ಯೂ, ಇದು ಬಹಳ ಪ್ರತಿಕ್ರಿಯಾತ್ಮಕವಾಗಿದೆ, ಅಂದರೆ, ಉಳಿದ ರಾಸಾಯನಿಕ ಅಂಶಗಳೊಂದಿಗೆ ಬೆರೆಸಿದ ನಂತರ, ಅದರ ಕ್ರಿಯೆಯು ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ಇದನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿ ಇಡಲಾಗಿದೆ. ಅದನ್ನು ಸುರಕ್ಷಿತವಾಗಿರಿಸಲು, ಸೀಮೆ ಎಣ್ಣೆ ಅಥವಾ ಖನಿಜಯುಕ್ತ ನೀರನ್ನು ಸಹ ಬಳಸಲಾಗುತ್ತದೆ.


ಲಿಥಿಯಂ ಬಳಕೆ ಎಲ್ಲಿ ಸೂಕ್ತ? ಉಪಯೋಗಗಳೇನು?


ಬ್ಯಾಟರಿಗಳ ತಯಾರಿಕೆಯಲ್ಲಿ ಲಿಥಿಯಂ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗಿದೆ. ಲಿಥಿಯಂನಿಂದಾಗಿ, ಅನೇಕ ದೇಶಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಆದಾಗ್ಯೂ, ಬ್ಯಾಟರಿಗಳ ಹೆಚ್ಚಿನ ಬೆಲೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಭಾರತವು ಲಿಥಿಯಂ ಅನ್ನು ಸ್ವತಃ ಉತ್ಪಾದಿಸಲು ಸಾಧ್ಯವಾದರೆ, ವಾಹನಗಳ ಬೆಲೆ ಅಗ್ಗವಾಗುತ್ತವೆ.
ಪ್ರಸ್ತುತ ಭಾರತಕ್ಕೆ ಅಗತ್ಯವಿರುವ ಶೇ.96 ರಷ್ಟು ಲಿಥಿಯಂ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಭಾರತದ ವಿದೇಶಿ ವಿನಿಮಯವನ್ನು ಸಾಕಷ್ಟು ಖರ್ಚು ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಭಾರತ ಲಿಥಿಯಂ ಬ್ಯಾಟರಿಗಳಿಗಾಗಿ 8,984 ಕೋಟಿ ರೂ. 2021-11ರಲ್ಲಿ 13,838 ಕೋಟಿ ಮೌಲ್ಯದ ಬ್ಯಾಟರಿಗಳನ್ನು ಆರ್ಡರ್ ಮಾಡಲಾಗಿದೆ. ಭಾರತವು ತನ್ನ ಲಿಥಿಯಂನ 80 ಪ್ರತಿಶತವನ್ನು ಖರೀದಿಸುವ ಚೀನಾ ಈಗ ತನ್ನ ಬಳಿ 4 ಪಟ್ಟು ಹೆಚ್ಚು ಮೀಸಲು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Indian Economy: ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದ್ಯಾ?


ಕಷ್ಟ ಎಲ್ಲಿ ಎದುರಾಗಬಹುದು? ಹಾದಿ ಸುಲಭವಿಲ್ಲ


ಆದರೆ, ಇದರಲ್ಲೂ ಸಮಸ್ಯೆ ಇದೆ. ವಾಸ್ತವವಾಗಿ, ಲಿಥಿಯಂ ನೆಲದಡಿಯಲ್ಲಿ ಕಂಡುಬರುತ್ತದೆ. ಅದನ್ನು ನೆಲದಿಂದ ಹೊರತೆಗೆಯುವುದು ಮತ್ತು ಸಂಸ್ಕರಿಸುವುದು ತುಂಬಾ ಕಷ್ಟಕರವಾದ ಕೆಲಸ. ಭಾರತದಲ್ಲಿ ಇದರ ತಂತ್ರಜ್ಞಾನ ಇನ್ನೂ ಅಭಿವೃದ್ಧಿಯಾಗಿಲ್ಲ. ಉದಾಹರಣೆಗೆಮ ಆಸ್ಟ್ರೇಲಿಯಾ 63 ಲಕ್ಷ ಟನ್ ಲಿಥಿಯಂ ಮೀಸಲು ಹೊಂದಿದ್ದರೂ ಕೇವಲ 6 ಲಕ್ಷ ಟನ್ ಮಾತ್ರ ಉತ್ಪಾದಿಸಲು ಶಕ್ತವಾಗಿದೆ.
ಪ್ರಸ್ತುತ, ಚೀನಾ ವಿದ್ಯುತ್ ವಾಹನಗಳ ಬ್ಯಾಟರಿಗಳು ಮತ್ತು ಲಿಥಿಯಂ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಭಾರತವು ಈ ಮೀಸಲು ಗಣಿಗಾರಿಕೆ ಮತ್ತು ಉತ್ಪಾದನೆಯನ್ನು ಮಾಡಲು ಸಾಧ್ಯವಾದರೆ, ಅದು ಈ ಕ್ಷೇತ್ರದಲ್ಲಿ ಬಹಳ ದೂರ ಕೊಂಡೊಯ್ಯಬಹುದು. ಈ ಕ್ರಮವು ಭಾರತದಲ್ಲಿ ಎಲೆಕ್ಟ್ರಾನಿಕ್ ಕಾರುಗಳು ಮತ್ತು ಬ್ಯಾಟರಿಗಳ ಮಾರುಕಟ್ಟೆಗೆ ದೊಡ್ಡ ಉತ್ತೇಜನವನ್ನು ನೀಡುವುದಲ್ಲದೆ, ಭಾರತವು ದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಪಾತ್ರ ವಹಿಸಲಿದೆ.

Published by:Precilla Olivia Dias
First published: