• Home
  • »
  • News
  • »
  • explained
  • »
  • Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ

Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ

ಭಾರತದ ಧ್ವಜ

ಭಾರತದ ಧ್ವಜ

ರಾಷ್ಟ್ರೀಯ ಗೌರವವಾಗಿರುವ ಧ್ವಜವನ್ನು ಎಲ್ಲೆಂದರೆಲ್ಲಿ, ಯಾವಾಗ ಬೇಕೆಂದಾಗ ಹಾರಿಸುವುದು ಯೋಗ್ಯವಲ್ಲ. ಹಾಗಾಗಿ ಇದರ ಬಳಕೆಗೆ ಸಂಬಂಧಿಸಿದಂತೆ ಕೆಲವು ರೀತಿ-ನಿಯಮಗಳನ್ನು ರೂಪಿಸಲಾಗಿದ್ದು ಇದನ್ನೆ ರಾಷ್ಟ್ರೀಯ ಧ್ವಜ ಸಂಹಿತೆ ಎಂದು ಕರೆಯಲಾಗುತ್ತದೆ. ಆದರೆ, ನಿಮಗೆ ಗೊತ್ತೆ, ಭಾರತದ ಧ್ವಜಕ್ಕೂ ಸಂಬಂಧಿಸಿದಂತೆ ತಿದ್ದುಪಡಿಗಳಿವೆ ಎಂಬುದರ ಬಗ್ಗೆ. ಹಾಗಾದರೆ ಆ ಬಗ್ಗೆ ತಿಳಿಯಿರಿ.

ಮುಂದೆ ಓದಿ ...
  • Share this:

ಯಾವುದೇ ಒಂದು ದೇಶಕ್ಕೆ (Country)  ಅದರದ್ದೆ ಆದ ಕೆಲವು ಗೌರವ ಸೂಚಕಗಳಿರುತ್ತವೆ. ಲಾಂಛನಗಳು (Emblem), ಚಿಹ್ನೆಗಳು ಒಂದೆಡೆಯಾದರೆ ಧ್ವಜ (Flag) ಎಂಬುದು ರಾಷ್ಟ್ರದ ಗೌರವ ಹಾಗೂ ಗುರುತಾಗಿ ಹೆಚ್ಚು ಗುರುತಿಸಲ್ಪಡುತ್ತದೆ. ಆಯಾ ದೇಶಗಳ ಪ್ರತಿ ನಾಗರಿಕರಿಗೂ ತಮ್ಮ ದೇಶದ ಧ್ವಜದ ಬಗ್ಗೆ ನಿಷ್ಠೆ (Loyalty), ಗೌರವ (Respect) ಹಾಗೂ ಶ್ರದ್ಧೆ ಇದ್ದೇ ಇರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಂತೆ ಭಾರತವೂ (India) ಸಹ ತನ್ನದೆ ಆದ ಘನತೆವೆತ್ತ ತ್ರಿವರ್ಣ ಧ್ವಜವನ್ನು ಹೊಂದಿದೆ. ಈ ಧ್ವಜವನ್ನು ನಾವೆಲ್ಲ ಭಾರತೀಯರು ಅಪಾರವಾಗಿ ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ.


ರಾಷ್ಟ್ರೀಯ ಗೌರವವಾಗಿರುವ ಧ್ವಜವನ್ನು ಎಲ್ಲೆಂದರೆಲ್ಲಿ, ಯಾವಾಗ ಬೇಕೆಂದಾಗ ಹಾರಿಸುವುದು ಯೋಗ್ಯವಲ್ಲ. ಹಾಗಾಗಿ ಇದರ ಬಳಕೆಗೆ ಸಂಬಂಧಿಸಿದಂತೆ ಕೆಲವು ರೀತಿ-ನಿಯಮಗಳನ್ನು ರೂಪಿಸಲಾಗಿದ್ದು ಇದನ್ನೆ ರಾಷ್ಟ್ರೀಯ ಧ್ವಜ ಸಂಹಿತೆ ಎಂದು ಕರೆಯಲಾಗುತ್ತದೆ. ಆದರೆ, ನಿಮಗೆ ಗೊತ್ತೆ, ಭಾರತದ ಧ್ವಜಕ್ಕೂ ಸಂಬಂಧಿಸಿದಂತೆ ತಿದ್ದುಪಡಿಗಳಿವೆ ಎಂಬುದರ ಬಗ್ಗೆ. ಹಾಗಾದರೆ ಆ ಬಗ್ಗೆ ತಿಳಿಯಿರಿ.


ಭಾರತದ ಧ್ವಜ ಸಂಹಿತೆ ತಿದ್ದುಪಡಿಗಳು 2022
ಭಾರತವು ಸದ್ಯ ಬರುತ್ತಿರುವ ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಿದ್ಧವಾಗುತ್ತಿರುವ ಹೊತ್ತಿನಲ್ಲೇ ಈಗ 2002 ರಲ್ಲಿ ಭಾರತದ ಧ್ವಜ ಸಂಹಿತೆಗೆ ಕೇಂದ್ರವು ತಂದ ತಿದ್ದುಪಡಿಗಳ ಬಗ್ಗೆ ವಿವಾದವೊಂದು ಹುಟ್ಟಿಕೊಂಡಿದೆ. ಜನವರಿ 26, 2002 ರಂದು ಜಾರಿಗೆ ತರಲಾಗಿದೆ ಎನ್ನಲಾದ ಭಾರತದ ಧ್ವಜ ಸಂಹಿತೆಯು ಭಾರತದ ರಾಷ್ಟ್ರೀಯ ಧ್ವಜದ ಬಳಕೆ, ಪ್ರದರ್ಶನ ಮತ್ತು ಆರೋಹಣಕ್ಕಾಗಿ ಎಲ್ಲಾ ಕಾನೂನುಗಳು, ಸಂಪ್ರದಾಯಗಳು, ಅಭ್ಯಾಸಗಳು ಮತ್ತು ಸೂಚನೆಗಳನ್ನು ಒಟ್ಟುಗೂಡಿಸುವ ಒಂದು ವ್ಯಾಪಕವಾದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ:  Independence Day 2022: ಹೇಗಿತ್ತು 1947ರಲ್ಲಿ ಮೊದಲ ಸ್ವಾತಂತ್ರ್ಯ ಹಬ್ಬ? ಫೋಟೋಗಳಲ್ಲಿ ನೋಡಿ ಅಂದಿನ ಸಂಭ್ರಮ!


ಮೂರು ಭಾಗಗಳಾಗಿ ವಿಂಗಡಿಸಲಾಗಿರುವ ಭಾರತದ ಧ್ವಜ ಸಂಹಿತೆ 2002 ಎಂಬುದು ರಾಷ್ಟ್ರೀಯ ಧ್ವಜದ ಸಾಮಾನ್ಯ ವಿವರಣೆ ಹಾಗೂ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸೇರಿದಂತೆ, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳ ಸದಸ್ಯರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಅವರ ಏಜೆನ್ಸಿಗಳು ಯಾವ ರೀತಿ ನಡೆದುಕೊಳ್ಳಬೇಕೆಂದು ತಿಳಿಸುತ್ತದೆ.


ಇತರೆ ಸಂದರ್ಭಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಲು ಅನುಮತಿ
ತ್ರಿವರ್ಣ ಧ್ವಜದ ಘನತೆ ಮತ್ತು ಗೌರವಕ್ಕೆ ಅನುಗುಣವಾಗಿ ಎಲ್ಲಾ ದಿನಗಳು ಮತ್ತು ಸಂದರ್ಭಗಳಲ್ಲಿ, ವಿಧ್ಯುಕ್ತ ಅಥವಾ ಇತರೆ ಸಂದರ್ಭಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಲು ಸಾರ್ವಜನಿಕ, ಖಾಸಗಿ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಯ ಸದಸ್ಯರಿಗೆ ಅನುಮತಿ ಇದೆ ಎಂದು ಭಾರತದ ಧ್ವಜ ಸಂಹಿತೆ ಹೇಳುತ್ತದೆ.


ಲಾಂಛನಗಳು ಮತ್ತು ಹೆಸರುಗಳು (ಅಸಮರ್ಪಕ ಬಳಕೆ ತಡೆಗಟ್ಟುವಿಕೆ) ಕಾಯಿದೆ 1950 ಮತ್ತು ತಡೆಗಟ್ಟುವಿಕೆಯಲ್ಲಿ ಒದಗಿಸಲಾದ ಮಟ್ಟಿಗೆ ಹೊರತುಪಡಿಸಿದರೆ ಸಾರ್ವಜನಿಕರು, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳ ಸದಸ್ಯರು ರಾಷ್ಟ್ರಧ್ವಜದ ಪ್ರದರ್ಶನ ಮಾಡಬಯಸ್ಸಿದ್ದಲ್ಲಿ ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ರಾಷ್ಟ್ರೀಯ ಧ್ವಜದ ಬಳಕೆ, ಪ್ರದರ್ಶನ ಮತ್ತು ಹಾರಾಟಕ್ಕಾಗಿ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯ ಬಗ್ಗೆ ಭಾರತದ ಧ್ವಜ ಸಂಹಿತೆ 2002 ಹಲವು ಅಂಶಗಳನ್ನು ಹೇಳುತ್ತದೆ.


ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ?
ಯಂತ್ರ-ನಿರ್ಮಿತ ಮತ್ತು ಪಾಲಿಸ್ಟರ್ ರಾಷ್ಟ್ರೀಯ ಧ್ವಜಗಳ ತಯಾರಿಕೆ ಮತ್ತು ಬಳಕೆಗೆ ಅನುಕೂಲವಾಗುವಂತೆ ಡಿಸೆಂಬರ್ 30 ರಂದು, ಕೇಂದ್ರವು ಭಾರತದ ಧ್ವಜ ಸಂಹಿತೆ, 2002 ಕ್ಕೆ ತಿದ್ದುಪಡಿ ಮಾಡಿತು. ಸಂಹಿತೆಯ ಅಡಿಯಲ್ಲಿ ಇವುಗಳಿಗೆ ಈ ಹಿಂದೆ ಅವಕಾಶವಿರಲಿಲ್ಲ. ತಿದ್ದುಪಡಿ ಮಾಡಲಾದ ಧ್ವಜ ಸಂಹಿತೆಯ ಪ್ರಕಾರ, ಕೈಯಿಂದ ನೂಲುವ, ಕೈಯಿಂದ ನೇಯ್ದ ಅಥವಾ ಯಂತ್ರದಿಂದ ಮಾಡಿದ ಹತ್ತಿ, ಪಾಲಿಯಿಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಂಟಿಂಗ್‌ನಿಂದ ಮಾಡಿದ ರಾಷ್ಟ್ರಧ್ವಜಗಳನ್ನು ಸಹ ಬಳಸಲು ಅವಕಾಶ ನೀಡಲಾಗಿದೆ.


ಇದನ್ನೂ ಓದಿ:  Viral Video: ರಾಮಾಯಣ, ಮಹಾಭಾರತದ ಯಾವುದೇ ಪ್ರಶ್ನೆಗೂ ಈ ಪುಟ್ಟ ಮಕ್ಕಳಲ್ಲಿ ಉತ್ತರವಿದೆ!


ಜುಲೈ 20, 2022 ರಂದು ತಂದ ಮತ್ತೊಂದು ತಿದ್ದುಪಡಿಯಲ್ಲಿ, ರಾಷ್ಟ್ರೀಯ ಧ್ವಜವನ್ನು ತೆರೆದ ಅಥವಾ ಸಾರ್ವಜನಿಕರು ಮನೆಯಲ್ಲಿ ಪ್ರದರ್ಶಿಸ ಬಯಸಿದರೆ ಅದನ್ನು ಹಗಲು ಮತ್ತು ರಾತ್ರಿಯಲ್ಲಿ ಹಾರಿಸಲು ಕೇಂದ್ರವು ಅನುಮತಿಸಿದೆ. ಹಿಂದಿನ ನಿಯಮಗಳ ಪ್ರಕಾರ, ತ್ರಿವರ್ಣ ಧ್ವಜವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರ ಹಾರಿಸಬಹುದಾಗಿತ್ತು.


ಕೇಂದ್ರವು ಭಾರತದ ಧ್ವಜ ಸಂಹಿತೆಯನ್ನು ಏಕೆ ತಿದ್ದುಪಡಿ ಮಾಡಿದೆ?
ಈಗಾಗಲೇ ಕೇಂದ್ರವು ಈ ಧ್ವಜ ಸಂಹಿತೆಗೆ ಏಕೆ ತಿದ್ದುಪಡಿ ಮಾಡಿತು ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಮೂಲತಃ ಧ್ವಜ ಸಂಹಿತೆಗೆ ತಿದ್ದುಪಡಿಗಳು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಉತ್ತೇಜಿಸುವ ನಿಟ್ಟಿನಲ್ಲಿ ಬಂದಿವೆ ಎನ್ನಬಹುದಾಗಿದೆ, ಏಕೆಂದರೆ ಈ ಅಭಿಯಾನದ ಅಡಿಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲು ಜನರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಸರ್ಕಾರವು ಪ್ರೋತ್ಸಾಹಿಸುತ್ತಿದೆ. ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಈ ಅಭಿಯಾನದ ಮೂಲಕ ಆಗಸ್ಟ್ 15 ರೊಳಗೆ ಭಾರತದಾದ್ಯಂತ 20 ಕೋಟಿಗೂ ಹೆಚ್ಚು ಮನೆಗಳನ್ನು ತಲುಪಲು ಯೋಜಿಸಲಾಗಿದೆ ಎಂದು ಸರ್ಕಾರ ಹೇಳಿದೆ.


ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡುವುದರಿಂದ ರಾಷ್ಟ್ರೀಯ ಧ್ವಜವು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತದೆ ಮತ್ತು ಕೈಗೆಟುಕುವಂತೆ ಮಾಡುತ್ತದೆ ಎಂದು ಸರ್ಕಾರ ಇಲ್ಲಿ ವಿಶ್ವಾಸ ಹೊಂದಿದೆ.


ಭಾರತದ ಧ್ವಜ ಸಂಹಿತೆಯ ತಿದ್ದುಪಡಿಗಳ ಬಗ್ಗೆ ವಿವಾದ ಏಕೆ?
ಯಂತ್ರ-ನಿರ್ಮಿತ ಮತ್ತು ಪಾಲಿಸ್ಟರ್ ಧ್ವಜಗಳ ಬಳಕೆಯನ್ನು ಅನುಮತಿಸಲು ಡಿಸೆಂಬರ್ 2021 ರಲ್ಲಿ ಮಾಡಿದ ತಿದ್ದುಪಡಿಯು ಕಾಂಗ್ರೆಸ್‌ನಿಂದ ಸಾಕಷ್ಟು ಟೀಕೆಗೆ ಒಳಗಾಯಿತು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು, ಪಾಲಿಸ್ಟರ್ ಧ್ವಜಗಳ ಆಮದನ್ನು ಅನುಮತಿಸುವ ಮೂಲಕ ಕೇಂದ್ರವು ಚೀನಾ ನಿರ್ಮಿತ ಭಾರತೀಯ ಧ್ವಜಗಳ ಒಳಹರಿವನ್ನು ಅನುಮತಿಸಿದೆ ಎಂದು ಆರೋಪಿಸಿತ್ತು.


ಈಗ ಪ್ರತಿಪಕ್ಷಗಳಲ್ಲದೆ, ಕೆಲವು ಖಾದಿ ನೇಕಾರರು ಮತ್ತು ಕಾರ್ಯಕರ್ತರು ಸಹ ಕೇಂದ್ರ ತಂದಿರುವ ಈ ತಿದ್ದುಪಡಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಉದಾಹರಣೆಗೆ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಕೆಕೆಜಿಎಸ್ಎಸ್), ತಿದ್ದುಪಡಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಮತ್ತು ಅದರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.


ಇದನ್ನೂ ಓದಿ:  Mann Ki Baat: ಮೋದಿ ಮನ್​ ಕೀ ಬಾತ್ ಕೇಳಿ ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದ ಶಿಕ್ಷಕರು!


ರಾಷ್ಟ್ರಧ್ವಜವನ್ನು ತಯಾರಿಸಲು ಬಟ್ಟೆಯನ್ನು ತಯಾರಿಸುವ ಘಟಕವಾದ ಕೆಕೆಜಿಎಸ್ಎಸ್, ಈ ತಿದ್ದುಪಡಿಯ ನಂತರ ತಾನು ಈ ಹಿಂದೆ ಪಡೆಯುತ್ತಿದ್ದ ಆರ್ಡರ್ ಗಳ ಸಂಖ್ಯೆಗೆ ಹೋಲಿಸಿದರೆ ಈಗ ಸಾಕಷ್ಟು ದೊಡ್ಡ ಕುಸಿತವನ್ನು ದಾಖಲಿಸಿದೆ ಎಂದು ಹೇಳಿದೆ. ತ್ರಿವರ್ಣ ಧ್ವಜವನ್ನು ತಯಾರಿಸಲು ಬಳಸುವ ವಸ್ತುಗಳಿಗೆ ಬಿಐಎಸ್ ಅನುಮೋದಿತ ಖಾದಿ ಘಟಕ ಎಂದು ಹೇಳಿಕೊಳ್ಳುವ ಸೌಲಭ್ಯವು ಕೇಂದ್ರವು ತಂದಿರುವ ತಿದ್ದುಪಡಿಯಿಂದಾಗಿ ತಮ್ಮ ಸಂಕಷ್ಟದ ಬಗ್ಗೆ ಕೇಂದ್ರದ ಗಮನ ಸೆಳೆಯಲು ಪ್ರಧಾನಿಗೆ ಪತ್ರ ಬರೆದಿದೆ.

Published by:Ashwini Prabhu
First published: