Explained: ಪಂಜಾಬ್ ಚನ್ನಿ ಸಂಪುಟಕ್ಕೆ 6 ಹೊಸಬರು ಸೇರಿ 15 ಸದಸ್ಯರ ಪ್ರಮಾಣವಚನ; ಯಾರಿಗೆಲ್ಲ, ಏಕೆ ಸಚಿವ ಸ್ಥಾನ ಸಿಕ್ಕಿದೆ?

ಸಂಪುಟ ವಿಸ್ತರಣೆಗೆ ಕೆಲವು ಗಂಟೆಗಳ ಮೊದಲು, ಪಂಜಾಬ್‌ನ ಕಾಂಗ್ರೆಸ್ ನಾಯಕರ ಒಂದು ತಂಡವು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧುಗೆ ಪತ್ರ ಬರೆದಿದ್ದು, ಗುರ್ಜಿತ್ ಸಿಂಗ್ ಅವರನ್ನು ಕೈಬಿಡಬೇಕೆಂದು ಒತ್ತಾಯಿಸಿತ್ತು. ಬದಲಾಗಿ "ಸ್ವಚ್ಛ ದಲಿತ ನಾಯಕನಿಗೆ ಪ್ರಾತಿನಿಧ್ಯ ನೀಡುವ ಮೂಲಕ" ಕ್ಯಾಬಿನೆಟ್ ಸ್ಥಾನವನ್ನು ಭರ್ತಿ ಮಾಡಬೇಕು ಎಂದು ನಾಯಕರು ಒತ್ತಾಯಿಸಿದ್ದರು.

ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ.

ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ.

 • Share this:
  ಚಂಡೀಗಢ: ಪಂಜಾಬ್​ ವಿಧಾನಸಭಾ ಚುನಾವಣೆಗೆ (Punjab Assembly Election) ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ನಡುವೆ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh)  ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ(Charanjit Singh Channi) ಅವರನ್ನು ಕೂರಿಸಲಾಗಿದೆ. ಇದೀಗ ಹೊಸ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಾಗಿದ್ದು, ಇಂದು ಹೊಸದಾಗಿ ಸಚಿವರಾದವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಆರು ಮಂದಿ ಹೊಸಬರಿಗೆ ಮಂತ್ರಿಯಾಗುವ ಅವಕಾಶ ಒದಗಿಬಂದಿದೆ. ಹೊಸ ಸರ್ಕಾರದ ಸಚಿವ ಸಂಪುಟದಲ್ಲಿ 15 ಜನ ಮಂತ್ರಿಗಳಿದ್ದಾರೆ. ಬ್ರಹ್ಮ ಮೊಹಿಂದ್ರಾ, ಮನ್ ಪ್ರೀತ್ ಸಿಂಗ್ ಬಾದಲ್, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಸುಖಬಿಂದರ್ ಸಿಂಗ್ ಸರ್ಕಾರಿಯಾ, ರಾಣಾ ಗುರ್ಜೀತ್ ಸಿಂಗ್, ಅರುಣ ಚೌದರಿ, ರಜಿಯಾ ಸುಲ್ತಾನ, ಭರತ್ ಭೂಷಣ್ ಅಶು, ವಿಜಯ್ ಇಂದರ್ ಸಿಂಗ್ಲಾ, ರಣದೀಪ್ ಸಿಂಗ್ ನಭಾ, ರಾಜ್ ಕುಮಾರ್ ವರ್ಕಾ, ಸಂಗತ್ ಸಿಂಗ್ ಗಿಲ್ಜಿಯಾನ್, ಪರ್ಗತ್ ಸಿಂಗ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಗುಕ್ರೀರತ್ ಸಿಂಗ್ ಕೊಟ್ಲಿ. ಇವರುಗಳಲ್ಲಿ, ನಭಾ, ವರ್ಕಾ, ಗಿಲ್ಜಿಯಾನ್, ಪರ್ಗತ್ ಸಿಂಗ್, ವಾರಿಂಗ್ ಮತ್ತು ಕೊಟ್ಲಿ ಸಂಪುಟಕ್ಕೆ ಹೊಸ ಸೇರ್ಪಡೆಗಳಾಗಿದ್ದಾರೆ.

  ಶಾಸಕರಿಗೆ ಚಂಡಿಗಢದ ರಾಜಭವನದಲ್ಲಿ ಇಂದು ಸಂಜೆ 4.30 ರ ಸುಮಾರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ಸೇರಿದಂತೆ ಒಟ್ಟು 18 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು. ಕಾಂಗ್ರೆಸ್ ಅನುಭವಿ ಅಮರೀಂದರ್ ಸಿಂಗ್ ಅನಿರೀಕ್ಷಿತವಾಗಿ ನಿರ್ಗಮಿಸಿದ ನಂತರ ಚನ್ನಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಚನ್ನಿಯ ಇಬ್ಬರು ಉಪಮುಖ್ಯಮಂತ್ರಿಗಳಾಗಿ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಒಪಿ ಸೋನಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

  ಅಮ್ಲೊಹ್ ಕ್ಷೇತ್ರದ ಶಾಸಕ ರಣದೀಪ್ ಸಿಂಗ್ ನಭಾ ಅವರು ಹೊಸ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ತಮ್ಮನ್ನು ಕಡೆಗಣಿಸಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ. ಇವರ ಬದಲಿಗೆ ಕುಲಜಿತ್ ನಗ್ರಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹಾಗೆಯೇ ಬ್ರಹ್ಮ ಮೊಹಿಂದ್ರಾ ಅವರು ರಾಜ್ಯ ಕಾಂಗ್ರೆಸ್ ಘಟಕದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗಿಂತ ಮುಂಚೆಯೇ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು.

  ಈ ವಿಸ್ತರಣೆಯಲ್ಲಿ ಮರಳು ಗಣಿಗಾರಿಕೆ ಮಾಫಿಯಾ ಆರೋಪ ಎದುರಿಸುತ್ತಿರುವ ವಿವಾದಿತ ಮಾಜಿ ಸಚಿವ ರಾಣಾ ಗುರ್ಜಿತ್ ಸಿಂಗ್ ಅವರು ಸೇರ್ಪಡೆಯಾಗಿದ್ದಾರೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದ ಗುರ್ಜಿತ್ ಸಿಂಗ್ 2017 ರಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ನೀರಾವರಿ ಮತ್ತು ವಿದ್ಯುತ್ ಸಚಿವರಾಗಿ ನೇಮಕಗೊಂಡರು. ಕೇವಲ ಒಂಬತ್ತು ತಿಂಗಳಲ್ಲಿ, ನವಾನ್ ಶಹರ್ ನಲ್ಲಿ ರೂ 26.51 ಕೋಟಿ ಮೌಲ್ಯದ ಮರಳು ಗಣಿಗಾರಿಕೆ ಒಪ್ಪಂದದ ಕಿಕ್​ ಬ್ಯಾಕ್ ಆರೋಪದ ನಂತರ ಅವರು ರಾಜೀನಾಮೆ ನೀಡಬೇಕಾಯಿತು.

  ಇದನ್ನು ಓದಿ: Sandalwood: ಒಂದೇ ದಿನ ಸಲಗ, ಕೋಟಿಗೊಬ್ಬ 3 ಬಿಡುಗಡೆ; ಸ್ಟಾರ್ ವಾರ್ ಆತಂಕ, ಈ ಬಗ್ಗೆ ಕಿಚ್ಚ ಸುದೀಪ್, ದುನಿಯಾ ವಿಜಯ್ ಹೇಳಿದ್ದೇನು?

  ಸಂಪುಟ ವಿಸ್ತರಣೆಗೆ ಕೆಲವು ಗಂಟೆಗಳ ಮೊದಲು, ಪಂಜಾಬ್‌ನ ಕಾಂಗ್ರೆಸ್ ನಾಯಕರ ಒಂದು ತಂಡವು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧುಗೆ ಪತ್ರ ಬರೆದಿದ್ದು, ಗುರ್ಜಿತ್ ಸಿಂಗ್ ಅವರನ್ನು ಕೈಬಿಡಬೇಕೆಂದು ಒತ್ತಾಯಿಸಿತ್ತು. ಬದಲಾಗಿ "ಸ್ವಚ್ಛ ದಲಿತ ನಾಯಕನಿಗೆ ಪ್ರಾತಿನಿಧ್ಯ ನೀಡುವ ಮೂಲಕ" ಕ್ಯಾಬಿನೆಟ್ ಸ್ಥಾನವನ್ನು ಭರ್ತಿ ಮಾಡಬೇಕು ಎಂದು ನಾಯಕರು ಒತ್ತಾಯಿಸಿದ್ದರು. ಪತ್ರದ ಪ್ರತಿಯನ್ನು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಗೆ ಕಳುಹಿಸಲಾಗಿದೆ. ಸಿದ್ದುಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ನಾಯಕರು ಉದ್ದೇಶಿತ ಕ್ಯಾಬಿನೆಟ್ ಸ್ಥಾನದಿಂದ ರಾಣಾ ಗುರ್ಜಿತ್ ಸಿಂಗ್ ಅವರನ್ನು ಕೈಬಿಡಿ, "ಅವರು ದೋಬಾದ ಭ್ರಷ್ಟ ಮತ್ತು ಕಳಂಕಿತ ರಾಜಕಾರಣಿ" ಎಂದು ಆರೋಪಿಸಿದ್ದರು.
  Published by:HR Ramesh
  First published: