Kannada Serials: ಜೊತೆ ಜೊತೆಯಲಿ ಅನಿರುದ್ಧ್ ಒಂದೇ ಅಲ್ಲ, ಸೀರಿಯಲ್‌ಗಳಲ್ಲಿ ನಟರ ಕಿರಿಕ್ ಹೊಸದಲ್ಲ!

ಇದೀಗ ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ಧ ಅವರನ್ನು ಈ ಧಾರಾವಾಹಿಯಿಂದ ಹೊರ ಹಾಕಲಾಗಿದೆ. ಅದಕ್ಕೆ ಕಾರಣ ಅವರ ಕಿರಿಕ್ ಎನ್ನಲಾಗಿದೆ. ಹಾಗಾದ್ರೆ ಸೀರಿಯಲ್ಗಳಲ್ಲಿ ನಟ-ನಟಿಯರ ಕಿರಿಕ್, ವಿವಾದಗಳು ಇದೇ ಮೊದಲೇನಲ್ಲ, ಬಹುಶಃ ಕೊನೆಯೂ ಅಲ್ಲ. ಈ ಹಿಂದೆಯೂ ಈ ರೀತಿಯ ವಿವಾದ, ಗಲಾಟೆಗಳು ಆಗಿದ್ದವು. ಈ ಬಗ್ಗೆ ಮಾಹಿತಿ ಇಲ್ಲಿದೆ…

ಜೊತೆ ಜೊತೆಯಲಿ ಧಾರಾವಾಹಿ

ಜೊತೆ ಜೊತೆಯಲಿ ಧಾರಾವಾಹಿ

  • Share this:
ಕನ್ನಡ ಕಿರುತೆರೆಯನ್ನು (Kannada TV) ಆಳುತ್ತಿರುವುದು ಧಾರಾವಾಹಿಗಳೇ (Serials). ಮಧ್ಯಾಹ್ನದಿಂದ (Afternoon) ಶುರುವಾದ ಧಾರಾವಾಹಿಗಳ ದರ್ಬಾರ್ ರಾತ್ರಿವರೆಗೂ (Night) ಮುಂದುವರೆಯುತ್ತದೆ. ಬೆಳಗ್ಗೆ ಮತ್ತದೇ ರಿಪೀಟ್ ಟೆಲಿಕಾಸ್ಟ್ (Repeat Telecast). ಮನೆಯಲ್ಲಿರುವ ವೀಕ್ಷಕರಂತೂ, ಅದರಲ್ಲೂ ಮಹಿಳಾ ಪ್ರೇಕ್ಷಕರು ಕುತೂಹಲದಿಂದ ಎಲ್ಲಾ ಧಾರಾವಾಹಿಗಳನ್ನು ನೋಡುತ್ತಾರೆ. ಈ ಪೈಕಿ ನಂಬರ್ ಒನ್ (Number One) ಸ್ಥಾನದಲ್ಲೇ ಬಹುಕಾಲ ಇದ್ದಿದ್ದು ಜೊತೆ ಜೊತೆಯಲಿ (Jote Joteyali) ಧಾರಾವಾಹಿ. ಆರ್ಯವರ್ಧನ್ (Aryavardhan) ಹಾಗೂ ಅನು ಸಿರಿಮನೆ (Anu Sirimane) ಎಂಬ ಪಾತ್ರಗಳ ಸುತ್ತ ಇಡೀ ಧಾರಾವಾಹಿ ನಿಂತಿತ್ತು. ಇಲ್ಲಿ ಮೇಘಾ ಶೆಟ್ಟಿ (Megha Shetty) ಎಂಬ ಹೊಸ ಪ್ರತಿಭೆ ಅನು ಸಿರಿಮನೆ ಪಾತ್ರದಲ್ಲಿದ್ದರೆ, ಆರ್ಯವರ್ಧನ್ ಪಾತ್ರಕ್ಕೆ ಜೀವ ತುಂಬಿದವರು ಖ್ಯಾತ ನಟ ವಿಷ್ಣುವರ್ಧನ್ (Vishnuvardhan) ಅಳಿಯ ಅನಿರುದ್ಧ್ ಜತ್ಕರ್ (Aniruddh Jatkar). ಇದೀಗ ಅನಿರುದ್ಧ ಅವರನ್ನು ಈ ಧಾರಾವಾಹಿಯಿಂದ ಹೊರ ಹಾಕಲಾಗಿದೆ. ಅದಕ್ಕೆ ಕಾರಣ ಅವರ ಕಿರಿಕ್ ಎನ್ನಲಾಗಿದೆ. ಹಾಗಾದ್ರೆ ಸೀರಿಯಲ್‌ಗಳಲ್ಲಿ ನಟ-ನಟಿಯರ ಕಿರಿಕ್, ವಿವಾದಗಳು ಇದೇ ಮೊದಲೇನಲ್ಲ, ಬಹುಶಃ ಕೊನೆಯೂ ಅಲ್ಲ. ಈ ಹಿಂದೆಯೂ ಈ ರೀತಿಯ ವಿವಾದ, ಗಲಾಟೆಗಳು ಆಗಿದ್ದವು. ಈ ಬಗ್ಗೆ ಮಾಹಿತಿ ಇಲ್ಲಿದೆ…

ಕಿರಿಕ್ ಮಾಡಿ ಧಾರಾವಾಹಿಯಿಂದ ಹೊರಬಿದ್ದ ಅನಿರುದ್ಧ್

ಜೀ ಕನ್ನಡದಲ್ಲಿ ಯಶಸ್ವಿಯಾಗಿ ಪ್ರಸಾರವಾಗ್ತಾ ಇರೋ ಜೊತೆ ಜೊತೆಯಲಿ ಧಾರಾವಾಹಿಯಿಂದ ನಾಯಕ ನಟ ಅನಿರುದ್ದ್ ರನ್ನ ಮನಗೆ ಕಳಿಸಲಾಗಿದೆ. ಸ್ಕ್ರಿಪ್ಟ್ ಸರಿಯಿಲ್ಲ, ಈ ಡೈಲಾಗ್ ಹೇಳೋದಿಲ್ಲ, ಈ ಕಾಸ್ಟ್ಯೂಮ್ ಹಾಕೋದಿಲ್ಲ ಅಂತ ಕಿರಿಕ್ ಮಾಡಿ ಮನೆಗೆ ಹೊರಟ ಅನಿರುದ್ದ್ ರನ್ನ ಇನ್ಮೇಲೆ ಮನೆಯಲ್ಲೇ ಇರು ವಾಪಾಸು ಬರಬೇಡ ಎಂದು ನಿರ್ಮಾಪಕ ಅರೂರು ಜಗದೀಶ್ ಮತ್ತು ವಾಹಿನಿ ಮುಖ್ಯಸ್ಥರು ಹೇಳಿದ್ದಾರೆ ಎನ್ನಲಾಗಿದೆ.

ಧಾರಾವಾಹಿ ಯಶಸ್ಸಿನ ನಂತರ ಬದಲಾದ ಅನಿರುದ್ಧ್

ಯಾವಾಗ ಜೊತೆ ಜೊತೆಯಲಿ ಧಾರಾವಾಹಿ ನಿರೀಕ್ಷೆಗೂ ಮೀರಿದ ಗೆಲುವು ಪಡೆಯಿತೋ ಅನಿರುದ್ದ್ ಕಾಲು ಸೆಟ್ ನಲ್ಲಿ ನಿಲ್ಲುತ್ತಿರಲಿಲ್ಲ. ನಿರ್ಮಾಪಕ ಆರೂರು ಜಗದೀಶ್ ತುಂಬ ತಾಳ್ಮೆಯಿಂದ ಅನಿರುದ್ದ್ ರನ್ನ ಕೆಲ ದಿನಗಳ ಕಾಲ ಬುದ್ಧಿ ಹೇಳಿದ್ದಾರೆ. ಕೊನೆ ಕೊನೆಗೆ ಅನಿರುದ್ದ್ ಶೂಟಿಂಗ್ ಸೆಟ್ ಲ್ಲಿ ಕುಳಿತು  ಡೈಲಾಗ್ ಗಳನ್ನು - ಹೀಗೆ ಬದಲಾಯಿಸಿ ಹಾಗೇ ಬದಲಾಯಿಸಿ. ಇದು ಸರಿಯಿಲ್ಲ ಅದು ಸರಿಯಿಲ್ಲ... ಎಂಬಷ್ಟರ ಮಟ್ಟಿಗೆ ಮುಂದುವರೆದಿದ್ದರು.

ಇದನ್ನೂ ಓದಿ: Actor Aniruddh: ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್‌ಗೆ ಗೇಟ್‌ ಪಾಸ್! ಇವ್ರ ಕಿರಿಕ್‌ನಿಂದ ಸುಸ್ತಾಗಿತ್ತಂತೆ ಸೀರಿಯಲ್ ಟೀಂ!

ಶೂಟಿಂಗ್ ಸೆಟ್‌ನಲ್ಲೂ ಕಿರಿಕಿರಿ

ಲೇಟಾಗಿ ಸೆಟ್ ಗೆ ಬರೋದು,ಬೇಗ ಮನೆಗೆ ಹೋಗಬೇಕು ಎಂದು ಒತ್ತಡ ಹಾಕೋದು. ಊಟಕ್ಕೆ ಅಂತ ಎರಡು ಗಂಟೆ ತೆಗೆದುಕೊಳ್ಳೊದು..ಇದ್ದಕಿದ್ದ ಹಾಗೇ ಹಣ ಜಾಸ್ತಿ ಕೊಡಿ ಎಂದು ಡಿಮಾಂಡ್ ಮಾಡೋದು,ಸಹ ಕಲಾವಿದರಿಗೇ  ಇಲ್ಲ ಸಲ್ಲದ ಮಾತು ಹೇಳಿ ವಾತಾವರಣ ಹದಗೆಡಿಸುವುದು. ಅನಿರುದ್ದ್ ರ ಪ್ರತಿ ದಿನದ  ವರ್ತನೆಯಾಗಿತ್ತು. ಇದೆಲ್ಲದರಿಂದ  ಹಣಕಾಸಿನ ತೊಂದರೆಗೆ ಒಳಗಾಗಿದ್ದರು ನಿರ್ಮಾಪಕ ಆರೂರು ಜಗದೀಶ್. ಒಂದು ಹಂತದಲ್ಲಿ ಒತ್ತಡಕ್ಕೆ ಒಳಗಾದ  ನಿರ್ಮಾಪಕ ಅರೂರು ಜಗದೀಶ್ ಧಾರಾವಾಹಿಯನ್ನು ಯಾರಿಗಾದ್ರೂ ಕೊಡಿ ನಂಗೆ ಆಗಲ್ಲ ಎಂದು ಚಾನಲ್ ನವರ ಬಳಿ ವಿನಂತಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಅವರ ಆರೋಗ್ಯ ಹದಗೆಟ್ಟು ಅವರು ಆಸ್ಪತ್ರೆ ಸೇರಿ, ಆರು ತಿಂಗಳು ಮನೆಯಲ್ಲೇ ಉಳಿದು ಇನ್ಮೇನು ಎಲ್ಲಾ ಮುಗಿಯಿತು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನುವ ಮಾತು ಕೇಳಿ ಬಂದಿದೆ.

ಕಿರುತೆರೆಯಿಂದಲೇ ಅನಿರುದ್ಧ್ ಬ್ಯಾನ್

ಜೊತೆ ಜೊತೆಯಲ್ಲಿ ಸೆಟ್​ನಲ್ಲಿ ಅನಿರುದ್ಧ್​ ಮಾಡ್ತಿದ್ದ ಕಿರಿಕಿರಿಯಿಂದ ಇಡೀ ತಂಡವೇ ಬೇಸತ್ತು ಹೋಗಿತ್ತು. ಹೀಗಾಗಿ ಅನಿರುದ್ಧ್​ ವಿರುದ್ಧ ದೂರಿನ ಮಳೆಯಾಗಿದೆ. ಈ ಕುರಿತು ಸಭೆ ಕೂಡ ನಡೆದಿದ್ದು, ಸಭೆಯ ನಿರ್ಧಾರದಂತೆ ಅನಿರುದ್ಧ್​​ರನ್ನು ಸೀರಿಯಲ್​ನಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆಯಂತೆ. ಆದ್ರೆ ಈ ಕುರಿತು ಯಾವುದೇ  ಅಧಿಕೃತ ಮಾಹಿತಿ ಹೊರಬಂದಿಲ್ಲ.

ನಟ-ನಟಿಯರ ಕಿರಿಕ್ ಇದೇ ಮೊದಲೇನಲ್ಲ

ಅಂದಹಾಗೆ ಕನ್ನಡ ಕಿರುತೆರೆಯ ನಟ, ನಟಿಯರು ಕಿರಿಕ್ ಮಾಡುವುದು ಇದೇ ಮೊದಲೇನಲ್ಲ. ಅದರಲ್ಲೂ ಹಿರಿ ತೆರೆಯಿಂದ ಕಿರುತೆರೆಗೆ ಬಂದವರು, ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದವರನ್ನು ಹಿಡಿಯುವುದೇ ದೊಡ್ಡ ಸಾಹಸ ಎನ್ನುವ ಮಾತು ಕಿರುತೆರೆಯ ಗಲ್ಲಿಯಲ್ಲಿ ಕೇಳಿ ಬರುತ್ತಿದೆ.

ಕಾವ್ಯಾಂಜಲಿ ಧಾರಾವಾಹಿಯಲ್ಲೂ ವಿವಾದ

90ರ ದಶಕದಲ್ಲಿ ಆಗಷ್ಟೇ ಮೆಗಾ ಧಾರಾವಾಹಿಗಳು ಪ್ರಾರಂಭವಾಗುತ್ತಿರುವ ಕಾಲ. ಆಗ ಉದಯ ಟಿವಿಯಲ್ಲಿ ಕಾವ್ಯಾಂಜಲಿ ಎಂಬ ಧಾರಾವಾಹಿ ಬಹಳ ಜನಪ್ರಿಯವಾಗಿತ್ತು. ಅದರಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದವರು ಖ್ಯಾತೆ ಕಲಾವಿದೆ ಸುಚಿತ್ರಾ. ಅದರ ಡೈರೆಕ್ಟರ್ ರವಿ ಗರಣಿ ಜೊತೆ ಕಿರಿಕ್ ಆಯ್ತೋ, ಬೇರೆ ಕಾರಣವೋ ಗೊತ್ತಿಲ್ಲ. ಆದರೆ ಏಕಾಏಕಿ ಅವರನ್ನು ಧಾರಾವಾಹಿಯಿಂದ ಕಳಿಸಲಾಗಿತ್ತು. ಆದ ಕಾವ್ಯಾಂಜಲಿ ಧಾರಾವಾಹಿ ವೀಕ್ಷಕರು ಸಿಡಿದೆದ್ದಿದ್ದರು.

ಪಾಪಾ ಪಾಂಡು ಧಾರಾವಾಹಿಯಿಂದ ಔಟ್ ಆಗಿದ್ದ ಚಿದಾನಂದ

ಹಿಂದಿನ ಈ ಟಿವಿ ಕನ್ನಡದಲ್ಲಿ ಜನಪ್ರಿಯವಾಗಿದ್ದ ಧಾರಾವಾಹಿ ಪಾಪಾ ಪಾಂಡು. ಚಿದಾನಂದ್ ಹಾಗೂ ಶಾಲಿನಿ ಮುಖ್ಯ ಪಾತ್ರದಲ್ಲಿದ್ದ ಈ ಧಾರಾವಾಹಿ ಕೂಡ ಆ ಕಾಲದ ಹಿಟ್ ಧಾರಾವಾಹಿ. ಅದರಲ್ಲಿ ಚಿದಾನಂದ್ ಅವರನ್ನು ತೆಗೆದು, ಅವರ ಪಾತ್ರಕ್ಕೆ ಜಹಾಂಗೀರ್ ಎಂಬ ಮತ್ತೋರ್ವ ಹೊಸ ನಟನನ್ನು ಕರೆತರಲಾಗಿತ್ತು. ಧಾರಾವಾಹಿ ನಿರ್ದೇಶಕರು ಹಾಗೂ ನಿರ್ಮಾಪಕರ ಜೊತೆ ಚಿದಾನಂದ್ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆಗಲೂ ಅದಕ್ಕೆ ವೀಕ್ಷಕರು ವಿರೋಧ ವ್ಯಕ್ತಪಡಿಸಿದ್ದರು.

ನಟ ಚಂದನ್ ಕಿರಿಕ್

ಬಿಗ್ ಬಾಸ್ ರನ್ನಪ್‌ ಅಪ್‌ ಆಗಿದ್ದ ಚಂದನ್ ಕಿರುತೆರೆಯಲ್ಲಿ ಮೊದಲೇ ಹೆಸರು ಮಾಡಿದ್ದರು. ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ ಧಾರಾವಾಹಿಗಳಿಂದ ಹೆಸರು ಗಳಿಸಿದ್ದರು. ವಿಪರ್ಯಾಸ ಅಂದ್ರೆ ಅವೆರಡು ಧಾರಾವಾಹಿಗಳಿಂದ ಚಂದನ್ ಕಿರಿಕ್ ಮಾಡಿಕೊಂಡೇ ಹೊರಬಂದಿದ್ದರು ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ತೆಲುಗಿನಲ್ಲೂ ಕಿರಿಕ್ ಮಾಡಿಕೊಂಡ ಚಂದನ್

ಇತ್ತೀಚಿಗಷ್ಟೇ ಚಂದನ್ ತೆಲುಗಿನಲ್ಲೂ ಕಿರಿಕ್ ಮಾಡಿಕೊಂಡಿದ್ದರು. ತೆಲುಗಿನ ಜನಪ್ರಿಯ ಧಾರಾವಾಹಿಯೊಂದರ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಚಂದನ್, ಸೆಟ್‌ನಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಕೊನೆಗೆ ಅವರ ಮೇಲೆ ಹಲ್ಲೆ ನಡೆದಿದ್ದಲ್ಲದೇ, ತೆಲುಗು ಕಿರುತೆರೆಯಿಂದಲೂ ಅವರನ್ನು ಬ್ಯಾನ್ ಮಾಡುವ ಹಂತ ತಲುಪಿತ್ತು.

ಇದನ್ನೂ ಓದಿ: Aniruddha: ಜೊತೆ ಜೊತೆಯಲಿ ಸೀರಿಯಲ್​ನಿಂದ ಮಾತ್ರವಲ್ಲ, ಕಿರುತೆರೆಯಿಂದಲೇ ಅನಿರುದ್ಧ್​ಗೆ ಗೇಟ್ ಪಾಸ್

ಕಿರಿಕ್ ಇದೇ ಮೊದಲಲ್ಲ, ಇದೇ ಕೊನೆಯೂ ಆಗೋದಿಲ್ಲ

ಕಿರುತೆರೆಯಲ್ಲಿ ನಟ, ನಟಿಯರು, ಪೋಷಕ ಕಲಾವಿದರ ಕಿರಿಕ್ ಇದೇ ಮೊದಲೇನಲ್ಲ. ತಾವು ಮಾಡುತ್ತಿರುವ ಪಾತ್ರಗಳು ಜನಪ್ರಿಯವಾದಾಗ, ಆ ಪಾತ್ರಕ್ಕೆ ತಾವೇ ಅನಿವಾರ್ಯ ಅಂತ ಗೊತ್ತಾದಾಗ ನಟ, ನಟಿಯರು ಕಿರಿಕ್ ಮಾಡುತ್ತಾರೆ. ಕೆಲವೊಮ್ಮೆ ಧಾರಾವಾಹಿಗೆ ಹೊಡೆತ ಬಿದ್ದರೆ, ಇನ್ನು ಕೆಲವೊಮ್ಮೆ ಅವರಿಗೇ ಮುಳುವಾಗುತ್ತದೆ. ಇದು ಹಿಂದಿನಿಂದಲೂ ನಡೆದು ಬಂದ, ಮುಂದೆಯೂ ನಡೆಯಬಹುದಾದ ವಿದ್ಯಮಾನವಷ್ಟೇ…
Published by:Annappa Achari
First published: