• Home
  • »
  • News
  • »
  • explained
  • »
  • APJ Abdul Kalam: ಯುವಕರಿಗೆ ಸ್ಫೂರ್ತಿ ತುಂಬುತ್ತೆ ಕಲಾಂರ ಸಾಧನೆ! ಭಾರತದ ಕ್ಷಿಪಣಿ ಮನುಷ್ಯನ ಹೆಜ್ಜೆ ಗುರುತು ಇಲ್ಲಿದೆ

APJ Abdul Kalam: ಯುವಕರಿಗೆ ಸ್ಫೂರ್ತಿ ತುಂಬುತ್ತೆ ಕಲಾಂರ ಸಾಧನೆ! ಭಾರತದ ಕ್ಷಿಪಣಿ ಮನುಷ್ಯನ ಹೆಜ್ಜೆ ಗುರುತು ಇಲ್ಲಿದೆ

ಡಾ. ಎಪಿಜೆ ಅಬ್ದುಲ್

ಡಾ. ಎಪಿಜೆ ಅಬ್ದುಲ್

ಅಬ್ದುಲ್ ಕಲಾಂ ಅವರ ವಿಜ್ಞಾನ ಹಾಗೂ ರಾಜಕೀಯದಲ್ಲಿನ ಕೈಂಕರ್ಯಗಳನ್ನು ಗೌರವಿಸಿ 1997ರಲ್ಲಿ ಭಾರತ ರತ್ನ ಬಿರುದನ್ನು ನೀಡಲಾಯಿತು. ಒಬ್ಬ ವಿಜ್ಞಾನಿಯಾಗಿ ಹಾಗೂ ರಾಷ್ಟ್ರಪತಿಯಾಗಿ ದೇಶದ ಅಭಿವೃದ್ಧಿಗೆ ಅಪಾರವಾಗಿ ಕೊಡುಗೆ ಸಲ್ಲಿಸಿದ್ದಾರೆ. ಕಲಾಂ ಅವರ ಸಾಧನೆಗಳ ಕಿರು ಪರಿಚಯ ಇಲ್ಲಿದೆ...

ಮುಂದೆ ಓದಿ ...
  • Share this:

ಭಾರತದ ಮಿಸೈಲ್ ಮ್ಯಾನ್ (India's Missile Man) ಎಂದೇ ಕರೆಯಿಸಿಕೊಳ್ಳುವ ಡಾ ಎಪಿಜೆ ಅಬ್ದುಲ್ ಕಲಾಂ ಅವರನ್ನು ಇಂದಿಗೂ ಲಕ್ಷಾಂತರ ಭಾರತೀಯರು ಸ್ಫೂರ್ತಿಯ ಸೆಲೆಯಾಗಿ ಕಂಡಿದ್ದಾರೆ. ಏರೋಸ್ಪೇಸ್ ವಿಜ್ಞಾನಿಯಾಗಿದ್ದ ಕಲಾಂ 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಒಬ್ಬ ಅದ್ಭುತ ಶಿಕ್ಷಕರಾಗಿದ್ದರು. ಪ್ರಜೆಗಳ ರಾಷ್ಟ್ರಪತಿ ಎಂದೇ ಕರೆಯಿಸಿಕೊಂಡ ಧೀಮಂತ ವ್ಯಕ್ತಿತ್ವ ಅಬ್ದುಲ್ ಕಲಾಂ ಅವರದಾಗಿತ್ತು. ಅಬ್ದುಲ್ ಕಲಾಂ (Abdul Kalam) ಅಕ್ಟೋಬರ್ 15, 1931 ರಲ್ಲಿ ತಮಿಳು ನಾಡಿನ ರಾಮೇಶ್ವರದಲ್ಲಿ ಹುಟ್ಟಿ ಬೆಳೆದರು. ಮದ್ರಾಸ್‌ನ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಕಲಾಂ ಏರೋಸ್ಪೇಸ್ ಇಂಜಿನಿಯರಿಂಗ್ (Aerospace Engineering) ಪದವಿಯನ್ನು ಪಡೆದರು.


1981 ರಲ್ಲಿ ಕಲಾಂ ಅವರಿಗೆ ಗೌರವ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು ಹಾಗೂ 1990 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಕಲಾಂ ಭಾಜನರಾದರು. ಅವರ ವಿಜ್ಞಾನ ಹಾಗೂ ರಾಜಕೀಯದಲ್ಲಿನ ಕೈಂಕರ್ಯಗಳನ್ನು ಗೌರವಿಸಿ 1997 ರಲ್ಲಿ ಭಾರತ ರತ್ನ ಬಿರುದನ್ನು ನೀಡಲಾಯಿತು. ಒಬ್ಬ ವಿಜ್ಞಾನಿಯಾಗಿ ಹಾಗೂ ರಾಷ್ಟ್ರಪತಿಯಾಗಿ ದೇಶದ ಅಭಿವೃದ್ಧಿಗೆ ಅಪಾರವಾಗಿ ಕೊಡುಗೆ ಸಲ್ಲಿಸಿದ್ದಾರೆ. ಕಲಾಂ ಅವರ ಸಾಧನೆಗಳತ್ತ ನೋಟ ಹಾಯಿಸೋಣ


ಭಾರತದ ಮೊದಲ ಸ್ವದೇಶಿ ಹೋವರ್‌ಕ್ರಾಫ್ಟ್
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದಲ್ಲಿನ ಯುವ ವಿಜ್ಞಾನಿಯಾಗಿದ್ದ ಕಲಾಂ ಅವರಿಗೆ, ದೇಶದ ರಕ್ಷಣೆಗಾಗಿ ಹೋವರ್‌ಕ್ರಾಫ್ಟ್ ಅನ್ನು ನಿರ್ಮಿಸುವ ಹಾಗೂ ಅಭಿವೃದ್ಧಿಪಡಿಸುವ ಮೊದಲ ಪ್ರಾಜೆಕ್ಟ್ ಅನ್ನು ನಿಯೋಜಿಸಲಾಯಿತು. ಕಲಾಂ ಹಾಗೂ ಅವರ ತಂಡ ಅವಿರತವಾಗಿ ಪರಿಶ್ರಮಿಸಿ ಭಾರತದ ಮೊದಲ ಸ್ವದೇಶಿ ಹೋವರ್‌ಕ್ರಾಫ್ಟ್ ನಂದಿಯನ್ನು ನಿರ್ಮಿಸಿದರು. ಶಿವನ ವಾಹನ ನಂದಿ ಎಂಬ ಹಿನ್ನಲೆಯಲ್ಲಿ ಹೋವರ್‌ಕ್ರಾಫ್ಟ್‌ಗೆ ನಂದಿ ಹೆಸರನ್ನು ಇರಿಸಲಾಯಿತು.


ಭಾರತದ ಪ್ರಥಮ ಸ್ಯಾಟಲೈಟ್ ಲಾಂಚ್ ವೆಹಿಕಲ್(SLV)
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಲ್ಲಿ ಸ್ಥಳೀಯ SLV ಯ ಅಭಿವೃದ್ಧಿಗಾಗಿ ಪ್ರಾಜೆಕ್ಟ್ ನಿರ್ದೇಶಕರಾಗಿ ಕಲಾಂ ಅವರು 10 ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1969 ರಲ್ಲಿ ಪ್ರಥಮ ಸ್ಯಾಟಲೈಟ್ ಲಾಂಚ್ ವೆಹಿಕಲ್ ಯೋಜನೆಯ ನಿರ್ದೇಶಕರಾಗಿ ಇಸ್ರೋಗೆ ವರ್ಗಾವಣೆಗೊಂಡರು. ಈ ಸ್ಯಾಟಲೈಟ್ ರೋಹಿಣಿ ಉಪಗ್ರಹವನ್ನು ಜುಲೈ 1980 ರಲ್ಲಿ ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸಿತು ಹಾಗೂ ಭಾರತವನ್ನು ವಿಶೇಷ ಬಾಹ್ಯಾಕಾಶ ಕ್ಲಬ್‌ನ ಸದಸ್ಯನನ್ನಾಗಿಸಿತು.


INCOSPAR ಸಮಿತಿ
ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುವ, ಬಾಹ್ಯಾಕಾಶಕ್ಕಾಗಿ ಕಾರ್ಯನಿರ್ವಹಿಸುವ ಭಾರತೀಯ ರಾಷ್ಟ್ರೀಯ ಸಮಿತಿಯ INCOSPAR ಭಾಗವಾಗಿದ್ದರು ಕಲಾಂ. ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಪರಮಾಣು ಶಕ್ತಿ ವಿಭಾಗದ ಜವಬ್ದಾರಿಗಳನ್ನು ಸಮಿತಿ ವಹಿಸಿತ್ತು.


ಇದನ್ನೂ ಓದಿ: Real Hero: ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಕಾಲರ್‌ಶಿಪ್ ಮಾಸ್ಟರ್! ನಿವೃತ್ತ ಶಿಕ್ಷಕರ ಸಾಧನೆ ಕಥೆ ಇಲ್ಲಿದೆ ಓದಿ


ಮಿಸೈಲ್ ಮ್ಯಾನ್
1982 ರಲ್ಲಿ ಅಬ್ದುಲ್ ಕಲಾಂ ಅವರು DRDO ಅನ್ನು ಪುನಃ ಸೇರಿಕೊಂಡರು. ಸಂಯೋಜಿತ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದರು. ಈ ಮಿಸೈಲ್ ಯೋಜನೆಯಿಂದಾಗಿ ಅವರನ್ನು 'ಮಿಸೈಲ್ ಮ್ಯಾನ್' ಎಂದೇ ಕರೆಯಲಾಯಿತು.


ಬ್ಯಾಲಿಸ್ಟಿಕ್ ಮಿಸೈಲ್ಸ್ ಪ್ರಾಜೆಕ್ಟ್
ಡಾ.ಕಲಾಂ ನೇತೃತ್ವದಲ್ಲಿ 1983 ರ ನಂತರ DRDO ಹಲವಾರು ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿತು. ಯಶಸ್ವಿ SLV ಕಾರ್ಯಕ್ರಮದ ಹಿಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವುದು ಕಲಾಂ ಅವರ ಉದ್ದೇಶವಾಗಿತ್ತು. ಈ ಹಿನ್ನಲೆಯಲ್ಲಿ ಅವರು ಡೆವಿಲ್ ಹಾಗೂ ವಾಲಿಯಂಟ್ ಪ್ರಾಜೆಕ್ಟ್‌ನ ನೇತೃತ್ವ ವಹಿಸಿದ್ದರು.


ಕಲಾಂ ಮಾರ್ಗದರ್ಶನದಲ್ಲಿ, ಅಗ್ನಿ ಹಾಗೂ ಪೃಥ್ವಿ ಹೆಸರಿನ ಎರಡು ಸ್ಥಳೀಯ ಮಾರ್ಗದರ್ಶಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಮುನ್ನಡೆಸಲಾಯಿತು.


ಮುಖ್ಯ ವೈಜ್ಞಾನಿಕ ಸಲಹೆಗಾರ
1992 ರಲ್ಲಿ, ಕಲಾಂ ಅವರನ್ನು ವೈಜ್ಞಾನಿಕ ಸಲಹೆಗಾರರಾಗಿ ನೇಮಿಸಲಾಯಿತು. ಕ್ಯಾಬಿನೆಟ್ ಮಂತ್ರಿಯ ದರ್ಜೆಯೊಂದಿಗೆ 1999 ರಲ್ಲಿ ಅವರನ್ನು ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಲಾಯಿತು. ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಕಲಾಂ ಕಾರ್ಯನಿರ್ವಹಿಸಿದ್ದಾರೆ ಹಾಗೂ ಪೋಖ್ರನ್ – II ನ್ಯೂಕ್ಲಿಯರ್ ಟೆಸ್ಟ್‌ಗಳ ಪ್ರಧಾನ ಪ್ರಾಜೆಕ್ಟ್ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.


ಪೋಖ್ರನ್‌ನಲ್ಲಿ ನ್ಯೂಕ್ಲಿಯರ್ ಪರೀಕ್ಷೆಗಳು
ಜುಲೈ 1992 ರಿಂದ ಡಿಸೆಂಬರ್ 1999 ರವರೆಗೆ DRDO ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕಲಾಂ ಪೋಖ್ರನ್ – II ನ್ಯೂಕ್ಲಿಯರ್ ಟೆಸ್ಟ್‌ಗಳ ಯೋಜನೆಯಲ್ಲಿ ಪ್ರಮುಖ ರುವಾರಿಯಾಗಿದ್ದರು. ಅಂತೆಯೇ ಅವರನ್ನು ದೇಶದ ಅತ್ಯುತ್ತಮ ಪರಮಾಣು ವಿಜ್ಞಾನಿ ಎಂದು ಉಲ್ಲೇಖಿಸಲಾಯಿತು. ಅವರ ಮೇಲ್ವಿಚಾರಣೆಯಲ್ಲಿ ನಡೆಸಿದ ಪರಮಾಣು ಪರೀಕ್ಷೆಯಿಂದ ಭಾರತವು ಪರಮಾಣ - ಶಸ್ತ್ರಸಜ್ಜಿತ ದೇಶ ಎಂದು ಕರೆಯಿಸಿಕೊಂಡಿತು.


ಯುನಿವರ್ಸಲ್ ಹೆಲ್ತ್ ಕೇರ್ ಪ್ಲಾನ್
ಆರೋಗ್ಯ ವಿಭಾಗಕ್ಕೆ ಅಬ್ದುಲ್ ಕಲಾಂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಹೃದ್ರೋಗ ತಜ್ಞ ಸೋಮರಾಜು ಅವರ ಜತೆಗೂಡಿ ಕಡಿಮೆ ವೆಚ್ಚದ ಪರಿಧಮನಿಯ ಸ್ಟೆಂಟ್ (ರಕ್ತನಾಳ, ಕಾಲುವೆ ಅಥವಾ ನಾಳದೊಳಗೆ ತಾತ್ಕಾಲಿಕವಾಗಿ ಇರಿಸಲಾಗುವ ಕೊಳವೆಯಾಕಾರದ ಬೆಂಬಲ ಉಪಕರಣ) ಅನ್ನು ಅಭಿವೃದ್ಧಿಪಡಿಸಿದರು ಇದರಿಂದ ಪ್ರತಿಯೊಬ್ಬರೂ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಯಿತು.


ಕಲಾಂ-ರಾಜು ಟ್ಯಾಬ್ಲೆಟ್
ಗ್ರಾಮೀಣ ಹಾಗೂ ಸೌಲಭ್ಯ ಕೊರತೆ ಇರುವ ಪ್ರದೇಶಗಳಲ್ಲಿ ಆರೋಗ್ಯ ಕಾಳಜಿ ನಿರ್ವಹಣೆಯನ್ನು ಮಾಡುವುದಕ್ಕಾಗಿ ಕಲಾಂ ಹಾಗೂ ಸೋಮರಾಜು 2012 ರಲ್ಲಿ ಟ್ಯಾಬ್ಲೆಟ್ ಕಂಪ್ಯೂಟರ್ ಅನ್ನು ವಿನ್ಯಾಸಗೊಳಿಸಿದರು. ಇದಕ್ಕೆ ಕಲಾಂ-ರಾಜು ಟ್ಯಾಬ್ಲೆಟ್ ಎಂಬ ಹೆಸರನ್ನಿಡಲಾಯಿತು.


ಇದನ್ನೂ ಓದಿ: Education: ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ! ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಉದ್ಯಮಿಯ ಉದ್ದೇಶ


ಕಲಾಂ ಅವರಿಗೆ ದೊರೆತಿದ್ದ ಪುರಸ್ಕಾರಗಳು
2007 ರಲ್ಲಿ, ಅವರನ್ನು ಇಂಗ್ಲೆಂಡ್‌ನ ರಾಯಲ್ ಸೊಸೈಟಿ ಕಿಂಗ್ ಚಾರ್ಲ್ಸ್ II ಪದಕದಿಂದ ಗೌರವಿಸಿದರು. 2008 ರಲ್ಲಿ ಇಂಗ್ಲೆಂಡ್‌ನ ವಾಲ್ವರ್ಹ್ಯಾಂಪ್ಟನ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಆಫ್ ಸೈನ್ಸ್ ಪದವಿಯನ್ನು ನೀಡಿತು. ಯುಎಸ್‌ಎ ಯ ASME ಸಂಸ್ಥೆಯ ಹೂವರ್ ಮೆಡಲ್ ಅನ್ನು ಪಡೆದುಕೊಂಡರು ಹಾಗೂ ಸಿಂಗಾಪುರ್‌ನ ನನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡರು.

Published by:Ashwini Prabhu
First published: