Explained: ಬೀಸುವ ದೊಣ್ಣೆಯಿಂದ ಪಾರಾದ್ರೆ ​Imran Khanಗೆ ಸಾವಿರ ವರ್ಷ ಆಯಸ್ಸು! ಪಾಕಿಸ್ತಾನದಲ್ಲಿ ಆಗ್ತಿರೋದೇನು?

ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಅಂತ ಹೇಳ್ತಾರಲ್ಲ....ಅದನ್ನೇ ಸದ್ಯ ಈಗ ಇಮ್ರಾನ್ ಖಾನ್ ಅನುಸರಿಸುತ್ತಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಇಮ್ರಾನ್ ಖಾನ್

ಇಮ್ರಾನ್ ಖಾನ್

  • Share this:
ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ಪಾಕಿಸ್ತಾನದಲ್ಲಿ (Pakistan) ಕಳೆದ ಕೆಲ ಸಮಯದಿಂದ ರಾಜಕೀಯ ಅಸ್ಥಿರತೆ ಕಾಣುತ್ತಿದೆ. ಒಂದೆಡೆ ಸಾಲದ ಶೂಲ ಇನ್ನೊಂದೆಡೆ ನಿಯಂತ್ರಣಕ್ಕೆ ಬಾರದ ಹಣದುಬ್ಬರ ಎಲ್ಲವೂ ಪಾಕಿಸ್ತಾನದ ಜನರ ಮೇಲೆ ಎಲ್ಲಿಲ್ಲದ ಪ್ರಭಾವ ಬೀರಿದ್ದು ಜನರು (People) ಎರಡು ಹೊತ್ತಿನ ಊಟಕ್ಕೂ ಸಹ ಸಾಕಷ್ಟು ಪರದಾಡುವಂತಾಗಿದೆ. ಪಾಕಿಸ್ತಾನದ ಪ್ರಧಾನಿಯಾಗಿ (Pak PM) ಅಧಿಕಾರಕ್ಕೆ ಬಂದಾಗಿನಿಂದ ಇಂದಿನವರೆಗೆ ಇಮ್ರಾನ್ ಖಾನ್ (Imran Khan) ಇಲ್ಲಿಯವರೆಗೂ ತಾವು ಅಧಿಕಾರಕ್ಕೂ ಮುಂಚೆ ತೋರಿಸಿದ ಆಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ ಎಂಬ ತೀವ್ರವಾದ ದುಃಖ ಜನರಲ್ಲಿ ಇತ್ತೀಚಿನ ಕೆಲ ದಿನಗಳಿಂದ ಕಂಡುಬರುತ್ತಿದೆ.

ಇದೇ ಪರಿಸ್ಥಿತಿಯ ಲಾಭ ಪಡೆದು ಪಾಕಿಸ್ತಾನದ ವಿಪಕ್ಷಗಳು ಇಮ್ರಾನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಪ್ರಧಾನಿ ಹುದ್ದೆಯಿಂದ ರಾಜಿನಾಮೆ ಕೊಡಬೇಕೆಂದು ಪಟ್ಟು ಬಿದ್ದಿದ್ದವು.

ಅವಿಶ್ವಾಸ ನಿಲುವಳಿ
ಈ ಸಂದರ್ಭದಲ್ಲಿ ಒಬ್ಬ ಪ್ರಧಾನಿಯಾಗಿ ಜವಾಬ್ದಾರಿಯುತ ಹುದ್ದೆಯಲಿರುವ ಇಮ್ರಾನ್ ವಿರೋಧ ಪಕ್ಷಗಳನ್ನು ಹತ್ತಿಕ್ಕಲು ತಮ್ಮದೆ ನ್ಯಾಯ ಸಮ್ಮತವಲ್ಲದ ಕ್ರಮಗಳನ್ನು ತೆಗೆದುಕೊಂಡಿದ್ದರು. ಕೊನೆಗೆ ಪಾಕಿಸ್ತಾನದ ಸಂವಿಧಾನದಂತೆ ಅವರ ವಿರುದ್ಧ ಅವಿಶ್ವಾಸ ನಿಲುವಳಿಯನ್ನು ತರಲಾಗಿದ್ದು ಅದರಲ್ಲಿ ಇಮ್ರಾನ್ ಖಾನ್ ತಮಗೆ ಇಂದಿಗೂ ಬಹುಮತವಿದೆ ಎಂಬುದನ್ನು ಸಾಬೀತುಪಡಿಸಬೇಕಾಗಿದೆ.

ಅವಿಶ್ವಾಸ ನಿಲುವಳಿಗೆ ಮತ ಹಾಕಲು ಸಾಧ್ಯವೇ?
ಈ ಮುಂಚೆಯೆ ಈ ಅವಿಶ್ವಾಸ ಮತ ನಡೆಸುವಂತೆ ವಿಪಕ್ಷಗಳು ಭಾರಿ ಒತ್ತಡ ಹಾಕುತ್ತಿದ್ದವು ಹಾಗೂ ಅದಕ್ಕೆ ಸಂಬಂಧಿಸಿದಂತೆ ಸಭಾಪತಿಗಳು ಮಾರ್ಚ್ 28ಕ್ಕೆ ಆ ದಿನವನ್ನು ನಿರ್ಣಯಿಸಿದ್ದರು. ಆದಾಗ್ಯೂ ಅಂದು ಅವಿಶ್ವಾಸಕ್ಕೆ ಮತ ಹಾಕಲು ಅನುಮತಿಸುವರೋ ಇಲ್ಲವೋ ಎಂಬುದರ ಬಗ್ಗೆ ಇಲ್ಲಿಯವರೆಗೂ ಸ್ಪಷ್ಟವಾಗಿ ಏನೂ ತಿಳಿದುಬಂದಿಲ್ಲ. ಏಕೆಂದರೆ ಶುಕ್ರವಾರದಂದು ಅಲ್ಲಿನ ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾವನೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.

ಆಗ ಅಲ್ಲಿನ ಆಡಳಿತ ಪಕ್ಷದ ಮಂತ್ರಿಯಾದ ಶೇಕ್ ರಷೀದ್ ಅವರು ಚಾಲ್ತಿಯಲ್ಲಿರುವ ನಿಯಮದಡಿ ಪ್ರಸ್ತಾವನೆ ತಂದ ಮೂರು ದಿನಗಳ ಒಳಗೆ ಹಾಗೂ ಏಳು ನಂತರ ಮತದಾನ ಮಾಡುವ ಹಾಗಿಲ್ಲ. ಹಾಗಾಗಿ ಸೋಮವಾರದಂದು ಅವಿಶ್ವಾಸ ನಿಲುವಳಿಗೆ ಮತ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಇಮ್ರಾನ್ ಖಾನ್ ಮಾಡುತ್ತಿರುವುದಾದರೂ ಏನು?
ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಅಂತ ಹೇಳ್ತಾರಲ್ಲ....ಅದನ್ನೇ ಸದ್ಯ ಈಗ ಇಮ್ರಾನ್ ಖಾನ್ ಅನುಸರಿಸುತ್ತಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಪ್ರಮುಖವಾಗಿ ಇಮ್ರಾನ್ ಖಾನ್ ಇನ್ನಷ್ಟು ಸಮಯಾವಕಾಶವನ್ನು ಹೇಗಾದರೂ ಮಾಡಿ ಪಡೆಯುವಲ್ಲಿ ನಿರತರಾಗಿದ್ದಾರೆ.

ಸೇನೆ ಮತ್ತು ಐಎಸ್ಐ ಬೆಂಬಲ ಬೇಕೇ ಬೇಕು?
ಸದ್ಯಕ್ಕೆ ಇಮ್ರಾನ್ ಖಾನ್ ತನ್ನ ಮುಖ ಉಳಿಸಿಕೊಳ್ಳಬೇಕಿದ್ದರೆ ಪಾಕಿಸ್ತಾನ ಸೇನೆ ಮತ್ತು ISIಗಳ ಕೃಪಾ ಕಟಾಕ್ಷ ದೊರೆಯುವಂತೆ ಮಾಡಿಕೊಳ್ಳಬೇಕು. ಹಾಗಾಗಿ, ಕೊನೆಯ ಕ್ಷಣದಲ್ಲಿ ಅವುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಭರವಸೆಯಿಂದ ಸಮಯವನ್ನು ಖರೀದಿಸುವುದು ಇಮ್ರಾನ್ ಖಾನ್ ಅವರ ತಂತ್ರವಾಗಿದೆ.

ಒಂದು ವರ್ಷ ಮೊದಲೇ ನಡೆಯಲಿದೆಯೇ ಚುನಾವಣೆ?
ಕಳೆದ ಕೆಲವು ವಾರಗಳಲ್ಲಿ ಅವರನ್ನು ತೊರೆದಿರುವ ಬೆಂಬಲಿಗರನ್ನು ಅವರು ಮಾತ್ರ ಮರಳಿ ತರಬಹುದು.  ಅಥವಾ ಈ ಸಂದರ್ಭವನ್ನು ಮುಂದೂಡಬಹುದು. ಇಮ್ರಾನ್ ಅವರ ಸರ್ಕಾರದಲ್ಲಿರುವ ಕೆಲವರು 2023 ರಲ್ಲಿ ನಡೆಯಬೇಕಾಗಿರುವ ಚುನಾವಣೆಯನ್ನು ಒಂದು ವರ್ಷ ಮುಂಚಿತವಾಗಿ ಕರೆಯುವಂತೆ ಒತ್ತಾಯಿಸುತ್ತಿದ್ದಾರೆ.

ದಕ್ಷಿಣ ಪಂಜಾಬ್ ಪ್ರಾಂತ್ಯ ರಚನೆಗೆ ಆಗ್ರಹ
ಅನೇಕ ಪಿಟಿಐ ಭಿನ್ನಮತೀಯರು ದಕ್ಷಿಣ ಪಂಜಾಬ್‌ನಿಂದ ಬಂದವರು ಮತ್ತು ಅದೇ ಪ್ರದೇಶದ ಪ್ರಮುಖರಾದ ಪ್ರಸ್ತುತ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ದಕ್ಷಿಣ ಪಂಜಾಬ್‌ನ ಪ್ರತ್ಯೇಕ ಪ್ರಾಂತ್ಯದ ರಚನೆಗೆ ಮಸೂದೆಯನ್ನು ಸಲ್ಲಿಸಿದ್ದಾರೆ, ಇದರಿಂದಾಗಿ ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದೆಂಬ ಭರವಸೆ ಅವರದು.

ಆದರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವನ್ನು ವಿಭಜಿಸಿ ಮತ್ತೊಂದು ದಕ್ಷಿಣ ಪಂಜಾಬ್ ಪ್ರಾಂತ್ಯ ಮಾಡಬೇಕೆಂಬುದು ದೀರ್ಘಕಾಲದ ಪ್ರಾದೇಶಿಕ ಬೇಡಿಕೆಯಾಗಿದೆ, ಆದರೆ ಪಂಜಾಬಿ ಪ್ರಾಬಲ್ಯ ಹೊಂದಿರುವ ರಾಜಕೀಯ ಮತ್ತು ಭದ್ರತಾ ಗಣ್ಯರು ಅದನ್ನು ಎಂದಿಗೂ ಗಂಭೀರವಾಗಿ ಚರ್ಚಿಸಲಿಲ್ಲ, ಏಕೆಂದರೆ ಅದು ತಮ್ಮ ಪ್ರಾಬಲ್ಯ ಮತ್ತು ಪ್ರಖ್ಯಾತಿಯನ್ನು ದುರ್ಬಲಗೊಳಿಸುತ್ತದೆ ಎಂಬ ನಂಬಿಕೆ ಅವರದ್ದಾಗಿತ್ತು.

ಮೈತ್ರಿಕೂಟದ ದುರ್ಬಲವಾಗುತ್ತಿದೆಯೇ?
ಪಿಟಿಐ ಸಮ್ಮಿಶ್ರ ಸರ್ಕಾರಕ್ಕೆ ಪ್ರತಿನಿತ್ಯ ಆಘಾತವಾಗುತ್ತಿದೆ. ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯು 342 ಸದಸ್ಯರನ್ನು ಹೊಂದಿದೆ ಮತ್ತು ಇಮ್ರಾನ್ ಅವರ ಆಡಳಿತ ಒಕ್ಕೂಟವು 179 ಅನ್ನು ಹೊಂದಿತ್ತು. ಆದರೆ, ಭಾನುವಾರ, ಜಮ್ಹೂರಿ ವತನ್ ಪಕ್ಷವು ಮೈತ್ರಿಯಿಂದ ಹಿಂದೆ ಸರಿದ ನಂತರ ಅದು 178 ಕ್ಕೆ ಇಳಿದಿದೆ.

ಇಮ್ರಾನ್ ಮತ್ತು ಪಿಟಿಐ ವ್ಯವಸ್ಥಾಪಕರು ಇತರ ಮೂರು ಮಿತ್ರಪಕ್ಷಗಳಾದ ಪಿಎಂಎಲ್-ಕ್ಯೂ, ಬಲೂಚಿಸ್ತಾನ್ ಅವಾಮಿ ಪಾರ್ಟಿ (ಬಿಎಪಿ), ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ ನಡುವೆ ಇರುವ ಒಟ್ಟು 17 ಎಂಎನ್‌ಎಗಳು ಅವಿಶ್ವಾಸ ಮತಕ್ಕೆ ತಮ್ಮ ವಿರೋಧ ವ್ಯಕ್ತಪಡಿಸುವಂತೆ ಪ್ರಯತ್ನಿಸುತ್ತಿದ್ದಾರೆ.

ಸೇನಾ ಸೃಷ್ಟಿ
ಈ ಪಕ್ಷಗಳಲ್ಲಿ ಕನಿಷ್ಠ ಎರಡು ವರ್ಷಗಳು ಪಾಕಿಸ್ತಾನ ಸೇನೆಯಿಂದಾಗಿರುವ ಸೃಷ್ಟಿಗಳಾಗಿವೆ - BAP 2018 ರ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಅಸ್ತಿತ್ವಕ್ಕೆ ಬಂದಿತು ಹಾಗೂ PML(Q) ಅನ್ನು PML(N) ನಿಂದ ಅಂದಿನ ಪರ್ವೇಜ್ ಮುಷರಫ್ ಅವರು ವಿಭಜಿಸಿ ಸೃಷ್ಟಿಸಿದ್ದರು. MQM ಪಕ್ಷವು ಹೆಚ್ಚು ಬಾರಿ ಸೇನೆಯ ಪರವಾಗಿಯೇ ನಿಂತಿದೆ.

ಇಮ್ರಾನ್ ಖಾನ್ ವಿರುದ್ಧ ಮತ?
ಈ ಪಕ್ಷಗಳು ಇನ್ನೂ ತಮ್ಮ ನಿರ್ಧಾರವನ್ನು ಇಮ್ರಾನ್ ಖಾನ್ ಅವರಿಗೆ ತಿಳಿಸಬೇಕಿದೆ. ಆದರೆ ಮೂವರೂ ಅವರೊಂದಿಗಿದ್ದರೂ ಸಹ, ಅವರ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಪಿಟಿಐನೊಳಗಿನ ಒಂದು ಡಜನ್‌ನಿಂದ ಎರಡು ಡಜನ್ ಸದಸ್ಯರನ್ನು ಅವರು ಮರಳಿ ಕರೆತರಬೇಕಾಗುತ್ತದೆ. ಅವರ ವಿರುದ್ಧ ಮತ ಚಲಾಯಿಸುವ ಸಾಧ್ಯತೆಯಿದೆ.

ಭಾನುವಾರ, ಪಾಕಿಸ್ತಾನದ ಪ್ರಧಾನಿ ಇಸ್ಲಾಮಾಬಾದ್‌ನಲ್ಲಿ ರಾಷ್ಟ್ರೀಯ ಅಸೆಂಬ್ಲಿಯ ಸಮೀಪದಲ್ಲಿ ಪ್ರತಿಪಕ್ಷಗಳ ವಿರುದ್ಧ ಶಕ್ತಿ ಪ್ರದರ್ಶನವಾಗಿ ಬೃಹತ್ ರ್‍ಯಾಲಿಯನ್ನು ನಡೆಸಿದರು. ಕುರಾನ್‌ನ ಉಪದೇಶದಿಂದ ಎರವಲು ಪಡೆದು, ಅವರು ಈ ರ್‍ಯಾಲಿಯನ್ನು ಅಮ್ರ್ ಬಿಲ್ ಮರ್ಯೂಫ್ (ಒಳ್ಳೆಯದನ್ನು ಪ್ರೋತ್ಸಾಹಿಸಿ) ಎಂದು ಕರೆದರು. ಪಾಕಿಸ್ತಾನ ಸುದ್ದಿ ಪತ್ರಿಕೆ ಡಾನ್ ಪ್ರಕಾರ, ಹೆಚ್ಚಿನ ಸಂಖ್ಯೆಯ ಜನರು, ಇಮ್ರಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಬೆಂಬಲಿಗರು ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Explained: ಮನುಷ್ಯ ಬಳಸದ ಸಸ್ಯಗಳೇ ನಾಶವಾಗುತ್ತೆ! ಏನಿದು ಹೊಸ ಸಂಶೋಧನೆ?

ಈ ರ್‍ಯಾಲಿಯಲ್ಲಿ ಇಮ್ರಾನ್ ಜನರನ್ನು ಉದ್ದೇಶಿಸಿ ಭರ್ಜರಿ ಮಾತನಾಡುತ್ತ ಅನೇಕರ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಸಾಮಾನ್ಯವಾಗಿ ಎಲ್ಲ ರಾಜಕೀಯ ನೇತಾರರು ಹೇಳುವಂತೆ ತಮ್ಮ ಸರ್ಕಾರ ಕೆಡವಲು "ವಿದೇಶಿ ಕೈ" ಮತ್ತು ವಿರೋಧ ಪಕ್ಷದ ಪಿಎಂಎಲ್ (ಎನ್) ನಾಯಕ ನವಾಜ್ ಷರೀಫ್ ವಿರುದ್ಧ ಅರಚುತ್ತ "ಲಂಡನ್‌ನಲ್ಲಿ ಕುಳಿತಿರುವ ವ್ಯಕ್ತಿ" ತಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಪಾಕಿಸ್ತಾನದ ವಿದೇಶಾಂಗ ನೀತಿಯು ಕೆಲಸ ಮಾಡುವಂತೆ ಅದರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.

ಸರ್ಕಾರ ಬದಲಿಸಲು ವಿದೇಶಿ ಹಣ ಬಳಕೆ?
“ಪಾಕಿಸ್ತಾನದಲ್ಲಿ ಸರ್ಕಾರವನ್ನು ಬದಲಾಯಿಸಲು ವಿದೇಶಿ ಹಣದ ಮೂಲಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಹೆಚ್ಚಾಗಿ ಅಜಾಗರೂಕತೆಯಿಂದ, ಆದರೆ ಕೆಲವರು ನಮ್ಮ ವಿರುದ್ಧ ಹಣವನ್ನು ಬಳಸುತ್ತಿದ್ದಾರೆ. ಯಾವ ಸ್ಥಳಗಳಿಂದ ನಮ್ಮ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ನಮಗೆ ತಿಳಿದಿದೆ. ನಮಗೆ ಲಿಖಿತವಾಗಿ ಬೆದರಿಕೆ ಹಾಕಲಾಗಿದೆ ಆದರೆ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ಅವರು ಹೇಳಿದರು.

ಇಮ್ರಾನ್ ಅವರು "ಪಾಕಿಸ್ತಾನದ ಸ್ವಾತಂತ್ರ್ಯಕ್ಕಾಗಿ ಒಂದು ಪ್ರಕರಣವನ್ನು" ಪ್ರಸ್ತುತಪಡಿಸುತ್ತಿದ್ದಾರೆ. ವಿದೇಶಿ ಪಿತೂರಿಯ ವಿವರಗಳನ್ನು ಶೀಘ್ರದಲ್ಲೇ ಜನರೊಂದಿಗೆ ಹಂಚಿಕೊಳ್ಳುವುದಾಗಿಯೂ ಹೇಳಿದರು. ಪತ್ರದ ರೂಪದಲ್ಲಿ ಈ ಆಪಾದಿತ ಪಿತೂರಿಯ ನಿರ್ವಿವಾದದ ಪುರಾವೆಯನ್ನು ಅವರು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Explained: ಭಾರತದಲ್ಲಿ ಅಲ್ಪಸಂಖ್ಯಾತರು ಯಾರು? ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬಹುದೇ?

"ಲಂಡನ್‌ನಲ್ಲಿ ಕುಳಿತಿರುವ ವ್ಯಕ್ತಿ ಯಾರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಪಾಕಿಸ್ತಾನ ಮೂಲದ ಪಾತ್ರಗಳು ಯಾರ ನಿರ್ದೇಶನಗಳನ್ನು ಅನುಸರಿಸುತ್ತಿದ್ದಾರೆಂದು ರಾಷ್ಟ್ರವು ತಿಳಿಯಲು ಬಯಸುತ್ತದೆ? ನಮ್ಮ ಬಳಿ ಇರುವ ಪುರಾವೆಯನ್ನು ಬಹಿರಂಗಪಡಿಸುತ್ತಿದ್ದೇನೆ. ನಾನು ಹೆಚ್ಚು ವಿವರವಾಗಿ ಮಾತನಾಡಲಾರೆ ಏಕೆಂದರೆ ನನ್ನ ದೇಶದ ಹಿತಾಸಕ್ತಿಯನ್ನು ನಾನು ರಕ್ಷಿಸಬೇಕಾಗಿದೆ. ನನ್ನ ದೇಶಕ್ಕೆ ಹಾನಿಯಾಗುವ ಯಾವುದರ ಬಗ್ಗೆಯೂ ನಾನು ಮಾತನಾಡಲಾರೆ. ನಾನು ಅದರ ಬಗ್ಗೆ ಹೇಳಬಹುದಿತ್ತು. ನಾನು ಯಾರಿಗೂ ಹೆದರುವುದಿಲ್ಲ ಆದರೆ ಪಾಕಿಸ್ತಾನದ ಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
Published by:guruganesh bhat
First published: