Explained: ಓಣಂ ಹಬ್ಬದ ಆಚರಣೆ ಹಿಂದಿನ ಮಹತ್ವ ಮತ್ತು ವಿಶೇಷತೆ ಏನು ಗೊತ್ತಾ?

Onam Festival: ಕೇರಳಿಗರು ವಿಶೇಷವಾಗಿ ಆಚರಿಸುವ ಹೂವುಗಳ ಹಬ್ಬ ಈ ಓಣಂ, ಈ ಆಚರಣೆಯ ಹಿಂದೆ ಪುರಾಣ ಇತಿಹಾಸದ ಹಿನ್ನೆಲೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಓಣಂ ಹಬ್ಬ ಕೇರಳದ ಜನರ ಪ್ರೀತಿಯ ಹಬ್ಬ. ಇದನ್ನು ಆಗಸ್ಟ್​ ಮತ್ತು ಸೆಪ್ಟೆಂಬರ್​ನಲ್ಲಿ ಆಚರಿಸಲಾಗುತ್ತದೆ. ಓಣಂ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ, ಇದನ್ನು ಸುಗ್ಗಿಯ ಹಬ್ಬ ಎಂದು ಕರೆಯಲಾಗುತ್ತದೆ. ಇದನ್ನು ತಿರು-ಓಣಂ ಅಥವಾ ತಿರುವೊಣಂ ಎಂದೂ ಕರೆಯುತ್ತಾರೆ. ಆಚರಣೆಗಳು ಅಥಂ ದಿನದಂದು ಆರಂಭವಾಗಿ ಹತ್ತು ದಿನಗಳ ಕಾಲ ತಿರುವೋಣಂ ದಿನದವರೆಗೆ ನಡೆಯುತ್ತದೆ, ಇದನ್ನು ಹಬ್ಬದ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ಹಬ್ಬದ ಬಗ್ಗೆ ಇನ್ನೂ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿದೆ.  ಹಬ್ಬದ ಇತಿಹಾಸ ಪುರಾಣಗಳ ಪ್ರಕಾರ, ಓಣಂ ಅನ್ನು ರಾಜ ಮಹಾಬಲಿಯ ಮರಳಿ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ. ಆತನನ್ನ ಬ್ರಾಹ್ಮಣ ಋಷಿ ಮತ್ತು ಪ್ರಹ್ಲಾದನ ಮೊಮ್ಮಗನಾಗಿದ್ದ ಕಶ್ಯಪನ ವಂಶಸ್ಥನೆಂದು ಹೇಳಲಾಗುತ್ತದೆ.  ಇನ್ನು ಈ ಹಬ್ಬದ ಹತ್ತು ದಿನಗಳನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ.

ಈ ಹತ್ತು ದಿನಗಳಲ್ಲಿ ಹೇಗೆ ಆಚರಣೆ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಅಥಂ: ಇದು ಓಣಂ ನ ಮೊದಲನೇ ದಿನ. ಅಥಂನ ದಿನ ಜನರು ತಮ್ಮ ಮನೆಯನ್ನು ಹಳದಿ ಹೂವುಗಳಿಂದ ಅಲಂಕಾರ ಮಾಡುತ್ತಾರೆ.  ಈ ಹೂವುಗಳನ್ನು ಪೂಕಾಲಂ ಎಂದು ಕರೆಯಲಾಗುತ್ತದೆ.

ಚಿತಿರಾ:  ಇದು ಹಬ್ಬದ ಎರಡನೇ ದಿನ. ಈ ದಿನದಂದು ಇಡೀ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಲಾಗುತ್ತದೆ.  ಈ ದಿನ ಹಳದಿ ಹೂವಿನ ಜೊತೆ ಇನ್ನೊಂದು ಹೂವನ್ನು ಸೇರಿಸಿ ರಂಗೋಲಿ ಹಾಕಲಾಗುತ್ತದೆ.

ಚೋಡಿ:  ಹಬ್ಬದ ಮೂರನೇ ದಿನವನ್ನು ಚೋಡಿ ಎಂದು ಕರೆಯುತ್ತಾರೆ. ಈ ದಿನದಂದು ಕುಟುಂಬ ಸದಸ್ಯರು ತಮ್ಮ ಹತ್ತಿರದವರನ್ನು ಮತ್ತು ಆತ್ಮೀಯರನ್ನು ಭೇಟಿ ಮಾಡಿ ಉಡುಗೊರೆಗಳನ್ನು ಮತ್ತು ಆಭರಣಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಾಚರಣೆ ಮಾಡುತ್ತಾರೆ.

ವಿಷಾಖಂ: ಈ ದಿನ ಹಬ್ಬದ ಪ್ರಮುಖ ದಿನಗಳಲ್ಲಿ ಒಂದು. ವಿಷಾಖಂ ದಿನದಂದು ಜನರು ಓಣಂ ಸಧ್ಯಕ್ಕೆ ತಯಾರಿ ನಡೆಸುತ್ತಾರೆ. ಅನಿಝಮ್: ಈ ದಿನದಂದು, ಹಾವು ದೋಣಿ ಓಟದ ಸ್ಪರ್ಧೆಯಾದ ವಲ್ಲಂ ಕಾಳಿ ಆರಂಭವಾಗುತ್ತದೆ ಮತ್ತು ಜನರು ಕೇರಳದ ಅತ್ಯಂತ ಹಳೆಯ ನದಿ ದೋಣಿ ಉತ್ಸವವಾದ ಆರನ್ಮುಲಾ ಉತ್ರತ್ತತಿ ವಲ್ಲಂಕಾಳಿಯಲ್ಲಿ ಓಟಕ್ಕೆ ತಯಾರಿ ಸಹ  ನಡೆಸುತ್ತಾರೆ.

ಇದನ್ನೂ ಓದಿ: ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ನಿಮಗೆಷ್ಟು ಗೊತ್ತು?

ತ್ರಿಕೆಟ್ಟ: ಕೇರಳದಲ್ಲಿ, ಈ ದಿನ ಶಾಲೆಗಳು ಮುಚ್ಚಲಾಗುತ್ತದೆ ಮತ್ತು ಮಕ್ಕಳು  ಹಬ್ಬದ ಪ್ರಾರ್ಥನೆಗಳನ್ನು ಸಿದ್ಧ ಮಾಡಿಕೊಳ್ಳುತ್ತಾರೆ.

ಮೂಲಂ: ಓಣಂ ಸಧ್ಯ ಈ ದಿನ ಆರಂಭವಾಗುತ್ತದೆ. ಹಬ್ಬದ ಉತ್ಸಾಹವನ್ನು ಹೆಚ್ಚಿಸಲು ಜನರು ನೃತ್ಯ ಪ್ರದರ್ಶನಗಳನ್ನು  ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.

ಪೂರದಂ: ಈ ದಿನ ರಾಜ ಮಹಾಬಲಿ ಮತ್ತು ವಾಮನ ಮೂರ್ತಿಗಳನ್ನು ಭಕ್ತರು ಸ್ವಚ್ಛಗೊಳಿಸಿ ಹಬ್ಬದ ಆಚರಣೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಉತ್ತರಾಡಂ: ಇದು ಹಬ್ಬದ ಕೊನೆಯ ದಿನದ ಹಿಂದಿನ ದಿನ. ಈ ದಿನ ತರಕಾರಿ ಮತ್ತು ಹಣ್ಣುಗಳಿಂದ ಆಹಾರ ಪದಾರ್ಥವನ್ನು ಸಿದ್ಧ ಮಾಡಿ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.

ತಿರುವೋಣಂ: ಇದು ಹಬ್ಬದ ಪ್ರಮುಖ ದಿನ ಮತ್ತು ಬಹಳ ಪವಿತ್ರವಾದ ದಿನ ಕೂಡ ಹೌದು, ಅಲ್ಲದೇ ಇದು ಹಬ್ಬದ ಕೊನೆಯ ದಿನ ಕೂಡ. ಈ ದಿನ ಜನರು ಹೆಚ್ಚು ವಿಶೇಷತೆಯಿಂದ ಹಬ್ಬವನ್ನು ಆಚರಿಸುತ್ತಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: