Explained: ವಾಲಿದ ನೇಪಾಳ-ಚೀನಾ ವ್ಯಾಪಾರ ಸಮತೋಲನ! ಏನಿದು ರುದ್ರಾಕ್ಷ ಬ್ಯುಸಿನೆಸ್?

ರುದ್ರಾಕ್ಷಗಳು ನೇಪಾಳ ರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತವೆ ಹಾಗೂ ಮೊದಲಿನಿಂದಲೂ ನೇಪಾಳಿ ವ್ಯಾಪಾರಸ್ಥರಿಗೆ ರುದ್ರಾಕ್ಷಗಳನ್ನು ಭಾರತೀಯ ಹಿಂದೂ ಧರ್ಮಿಯರಿಗೆ ಮಾರುವುದು ದೊಡ್ಡ ವ್ಯಾಪಾರವಾಗಿ ನಡೆದುಕೊಂಡು ಬಂದಿದೆ. ಆದರೆ, ಇತ್ತೀಚಿನ ಕೆಲ ಸಮಯದಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆ ಕಂಡುಬರುತ್ತಿದೆ.

 ರುದ್ರಾಕ್ಷ

ರುದ್ರಾಕ್ಷ

  • Share this:
ಎಲಿಯೋಕಾರ್ಪಸ್ ಗ್ಯಾನಿಟ್ರಸ್ (Eleocarpus genitures) ಗಿಡದ ಬೀಜಗಳು (Seeds) ಎಂದರೆ ಬಹುತೇಕರಿಗೆ ತಿಳಿಯಲಿಕ್ಕಿಲ್ಲ. ಆದರೆ, ಅದನ್ನೇ ರುದ್ರಾಕ್ಷ (Rudraksha) ಗಿಡದ ಬೀಜಗಳು ಅರ್ಥಾತ್ ರುದ್ರಾಕ್ಷಗಳು ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಎಂದು ಕೇಳಬಹುದಷ್ಟೆ. ಹೌದು, ಈ ರುದ್ರಾಕ್ಷಗಳು ಹಿಂದುಗಳ ಪಾಲಿಗೆ ಅನಾದಿ ಕಾಲದಿಂದಲೂ ಶಿವನ (Shiva) ಪ್ರತೀಕವಾಗಿ ಪೂಜಿಸಲ್ಪಡುವ ದ್ರವ್ಯವಾಗಿದೆ. ಹಿಮಾಲಯದ (Himalaya) ತಪ್ಪಲಿನಲ್ಲಿ ಬೆಳೆಯುವ ಈ ರುದ್ರಾಕ್ಷಗಳನ್ನು ಶಿವನ ಕಣ್ಣೀರು (Tears) ಎಂದು ನಂಬಲಾಗಿದ್ದು ಸಾಕಷ್ಟು ಪಾವಿತ್ರ್ಯತೆಯ ಸ್ಥಾನವನ್ನು ಸನಾತನ ಧರ್ಮದಲ್ಲಿ ನೀಡಲಾಗಿದೆ. ಇನ್ನೂ ಬೌದ್ಧ ಧರ್ಮವನ್ನು ನೋಡಿದರೆ ರುದ್ರಾಕ್ಷಗಳ ಬಗ್ಗೆ ಯಾವ ಉಲ್ಲೇಖ ಕಂಡುಬರುವುದಿಲ್ಲವಾದರೂ ಬುದ್ಧನು ಆ ರುದ್ರಾಕ್ಷಗಳ ಮಾಲೆಯನ್ನು ಧರಿಸಿರುವುದನ್ನು ಬಹುತೇಕ ಚಿತ್ರಗಳಲ್ಲಿ ಕಾಣಬಹುದಾಗಿದ್ದರಿಂದ ಬೌದ್ಧ ಧ್ರಮದವರಿಗೂ ರುದ್ರಾಕ್ಷಗಳು ಅಚ್ಚುಮೆಚ್ಚು.

ನೇಪಾಳಿಗರಿಗೆ ರುದ್ರಾಕ್ಷಗಳು ಎಂದರೆ ಚೀನಿಯರ ಜೊತೆ ವ್ಯಾಪಾರ
ಹಾಗೆ ನೋಡಿದರೆ ಈ ರುದ್ರಾಕ್ಷಗಳು ನೇಪಾಳ ರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತವೆ ಹಾಗೂ ಮೊದಲಿನಿಂದಲೂ ನೇಪಾಳಿ ವ್ಯಾಪಾರಸ್ಥರಿಗೆ ರುದ್ರಾಕ್ಷಗಳನ್ನು ಭಾರತೀಯ ಹಿಂದು ಧರ್ಮಿಯರಿಗೆ ಮಾರುವುದು ದೊಡ್ಡ ವ್ಯಾಪಾರವಾಗಿ ನಡೆದುಕೊಂಡು ಬಂದಿದೆ. ಆದರೆ, ಇತ್ತೀಚಿನ ಕೆಲ ಸಮಯದಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆ ಕಂಡುಬರುತ್ತಿದೆ.

ಈಗ ನೇಪಾಳಿ ವ್ಯಾಪಾರಿಗಳಿಗೆ ಈ ರುದ್ರಾಕ್ಷಗಳು ಎಂದರೆ ಚೀನಿಯರ ಜೊತೆ ವ್ಯಾಪಾರ ಎಂಬಂತಾಗಿದೆ. 27ರ ಪ್ರಾಯದ ನಿಮಾ ತಮಂಗ್ ಎಂಬ ವ್ಯಾಪಾರಿ ಹೇಳುವಂತೆ ಇಲ್ಲಿಯವರೆಗೂ ಆತ ಚೀನಿಯರಿಗೆ 10,000 ಕೆಜಿಗಳಷ್ಟು ರುದ್ರಾಕ್ಷಗಳನ್ನು ಮಾರಾಟ ಮಾಡಿದ್ದು ಏನಿಲ್ಲವೆಂದರೂ 3.5 ಮಿಲಿಯನ್ ನೇಪಾಳಿ ರೂಪಾಯಿ ಅಂದರೆ 21.71 ಲಕ್ಷ ಭಾರತೀಯ ರೂಪಾಯಿ ಸಂಪಾದಿಸಿದ್ದಾನಂತೆ.

ಬೋಧಿಸತ್ವ ಗಿಡದ ಬೀಜಗಳ ವ್ಯಾಪಾರ
2014 ರ ನಂತರದಿಂದ ಬಹುತೇಕ ನೇಪಾಳಿ ರೈತರು ಹಾಗೂ ವ್ಯಾಪಾರಿಗಳು ಚೀನಿಯರೊಡನೆ ಈ ರುದ್ರಾಕ್ಷಗಳು ಮತ್ತು ಬೋಧಿಸತ್ವ ಗಿಡದ ಬೀಜಗಳ ವ್ಯಾಪಾರ ಮಾಡುತ್ತಿದ್ದಾರೆ. ಬೋಧಿಸತ್ವದ ಬೀಜಗಳನ್ನು ಬೌದ್ಧ ಸನ್ಯಾಸಿಗಳು ತಮ್ಮ ಪ್ರಾರ್ಥನಾ ಮಣಿಯಾಗಿ ಉಪಯೋಗಿಸುತ್ತಾರೆ. ಒಟ್ಟಿನಲ್ಲಿ ಈ ಎರಡೂ ಉತ್ಪನ್ನಗಳ ಮಾರುಕಟ್ಟೆಯು ಎರಡು ದೇಶಗಳ ನಡುವಿನ ಒಟ್ಟಾರೆ ವ್ಯಾಪಾರ ಡೈನಾಮಿಕ್ಸ್‌ನ ಸೂಕ್ಷ್ಮರೂಪವಾಗಿದೆ, ಇದರಲ್ಲಿ ನೇಪಾಳವು ಕಚ್ಚಾ ವಸ್ತುಗಳನ್ನು ರಫ್ತು ಮಾಡುತ್ತದೆ ಹಾಗೂ ವ್ಯಾಪಾರ ಕಾರ್ಯವಿಧಾನಗಳ ಮೇಲೆ ಕಡಿಮೆ ಹತೋಟಿ ಅಥವಾ ನಿಯಂತ್ರಣ ಹೊಂದಿದೆ.

ಕಳೆದ ದಶಕದಲ್ಲಿ ದ್ವಿಪಕ್ಷೀಯ ಸಂಬಂಧಗಳು ಗಟ್ಟಿಯಾಗಿರುವುದರಿಂದ ಚೀನಾದ ಖರೀದಿದಾರರು ಈಗ ನೇರವಾಗಿ ರೈತರು ಮತ್ತು ತಮಾಂಗ್‌ನಂತಹ ಮಧ್ಯವರ್ತಿಗಳಿಂದ ಈ ಬೀಜಗಳನ್ನು ಖರೀದಿಸಬಹುದಾಗಿದೆ. ಆದರೆ 2020 ರಲ್ಲಿ ತಮಾಂಗ್‌ನಂತಹ ವ್ಯಾಪಾರಿಗಳಿಗೆ ಆರ್ಥಿಕ ಯಶಸ್ಸು ಸಿಗಲಿಲ್ಲ ಕಾರಣ ಕೋವಿಡ್ -19. ಈ ಸಾಂಕ್ರಾಮಿಕ ರೋಗ ತಡೆಯಲು ಚೀನಾ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ರುದ್ರಾಕ್ಷಗಳ ಬೇಡಿಕೆ ಮತ್ತು ಬೆಲೆಗಳಲ್ಲಿ ತೀವ್ರ ಕುಸಿತವಾಯಿತು, ಇದು ನೇಪಾಳಿ ರೈತರು ಮತ್ತು ವ್ಯಾಪಾರಿಗಳು ಭಾರಿ ನಷ್ಟವನ್ನು ಅನುಭವಿಸಲು ಕಾರಣವಾಯಿತು. ಇಂತಹ ವ್ಯಾಪಾರದ ಮೇಲೆ ಕೇಂದ್ರೀಕರಿಸಬಹುದಾದ ನೀತಿಯ ಕೊರತೆಯಿಂದಾಗಿ ನೇಪಾಳದ ಮಾರಾಟಗಾರರಿಗೆ ಚೀನಿಯರು ಮತ್ತೆ ಹಿಂತಿರುಗಿ ಬಂದು ಖರೀದಿ ಪ್ರಾರಂಭಿಸುವ ಮಾರ್ಗವೊಂದನ್ನು ಬಿಟ್ಟರೆ ಅವರ ಬಳಿ ಯಾವುದೇ ಅನ್ಯ ಮಾರ್ಗವಿಲ್ಲ.

ವಾಲಿದ ನೇಪಾಳ-ಚೀನಾ ವ್ಯಾಪಾರ ಸಮತೋಲನ
ಉಭಯ ದೇಶಗಳ ನಡುವಿನ ಒಟ್ಟಾರೆ ವ್ಯಾಪಾರ ಸಮತೋಲನವು ಚೀನಾದ ಪರವಾಗಿ ಹೆಚ್ಚು ವಾಲಿದೆ. ನೇಪಾಳದ ಕಸ್ಟಮ್ಸ್ ಇಲಾಖೆಯ ಪ್ರಕಾರ, ನೇಪಾಳವು ಜುಲೈ 2021 ರ ಮಧ್ಯ ಮತ್ತು ಏಪ್ರಿಲ್ 2022 ರ ನಡುವೆ ಚೀನಾದಿಂದ 211 ಶತಕೋಟಿ ನೇಪಾಳಿ ರೂಪಾಯಿಯಷ್ಟು ಸರಕನ್ನು ಆಮದು ಮಾಡಿಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಈ ಅವಧಿಯಲ್ಲಿ ನೇಪಾಳದ ರಫ್ತುಗಳು ಚೀನಾಕ್ಕೆ ಕೇವಲ 622 ಮಿಲಿಯನ್ ನೇಪಾಳಿ ರೂಪಾಯಿಗಳಷ್ಟಿತ್ತು.

ಚೀನಾಗೆ ನೇಪಾಳದ ಪ್ರಮುಖ ರಫ್ತುಗಳು
ಚೀನಾಗೆ ನೇಪಾಳದ ಪ್ರಮುಖ ರಫ್ತುಗಳೆಂದರೆ ಕಾರ್ಪೆಟ್‌ಗಳು, ಔಷಧೀಯ ಸಸ್ಯಗಳು, ಕೈಯಿಂದ ಚಿತ್ರಿಸಲಾದ ಚಿತ್ರಕಲೆಗಳು ಮತ್ತು ಶಿಲ್ಪಗಳು. ರುದ್ರಾಕ್ಷಿ ಬೀಜಗಳು 2020-21 ರ ಆರ್ಥಿಕ ವರ್ಷದಲ್ಲಿ 10 ನೇ ಅತ್ಯಮೂಲ್ಯ ರಫ್ತು ವರ್ಗವಾಗಿದ್ದು, ದೇಶವು 280,874 ಕೆಜಿ ರಫ್ತು ಮಾಡುತ್ತಿದೆ.

ಚೀನಾದೊಂದಿಗೆ ನೇಪಾಳದ ವ್ಯಾಪಾರ ಸಂಬಂಧ
ಚೀನಾದೊಂದಿಗಿನ ನೇಪಾಳದ ವ್ಯಾಪಾರ ಸಂಬಂಧದ ಕುರಿತು ಹೇಳಬೇಕೆಂದರೆ ಅದು ಪ್ರಮುಖವಾಗಿ ಚೀನಾದ ರಫ್ತು ಮತ್ತು ಆ ದೇಶದಲ್ಲಿ ಚೀನಾದ ಹೂಡಿಕೆಗಳ ಮೇಲೆಯೇ ಕೇಂದ್ರೀಕರಿಸುತ್ತದೆ. ಮೌಲ್ಯವರ್ಧನೆಯ ಮೂಲಕ ಅಥವಾ ನೀತಿ ಸುಧಾರಣೆಗಳ ಮೂಲಕ ನೇಪಾಳದ ರಫ್ತುಗಳನ್ನು ವಿಸ್ತರಿಸುವ ಸಾಧ್ಯತೆಯ ಬಗ್ಗೆ ಕಡಿಮೆ ಗಮನವನ್ನು ನೀಡಲಾಗಿದೆ.

ಇದನ್ನೂ ಓದಿ:  Explained: ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳ ಬಗ್ಗೆ ಇಲ್ಲಿದೆ ಮಾಹಿತಿ

ಇದರ ಪರಿಣಾಮವಾಗಿ ನೇಪಾಳವು ರುದ್ರಾಕ್ಷ ಬೀಜಗಳು ಮತ್ತು ಯರ್ಸಗುಂಬಾ (ಔಷಧೀಯ ಗುಣಗಳನ್ನು ಹೊಂದಿರುವ ಕ್ಯಾಟರ್ಪಿಲ್ಲರ್-ಶಿಲೀಂಧ್ರ ಸಮ್ಮಿಳಿತ ರೂಪ) ನಂತಹ ವಸ್ತುಗಳನ್ನು ಅವುಗಳ ಕಚ್ಚಾ ರೂಪದಲ್ಲಿ ರಫ್ತು ಮಾಡುತ್ತದೆ. ಏಪ್ರಿಲ್ 2021 ರ ವರದಿಯಲ್ಲಿ, ನೇಪಾಳದ "ಅನ್ವಯಿಸದ ರಫ್ತು ಸಾಮರ್ಥ್ಯ" ಅದರ ಪ್ರಸ್ತುತ ಮೌಲ್ಯದ 12 ಪಟ್ಟು ಹೆಚ್ಚು ಎಂದು ವಿಶ್ವ ಬ್ಯಾಂಕ್ ಹೇಳಿದೆ ಮತ್ತು 2010 ಮತ್ತು 2017 ರ ನಡುವೆ ನೇಪಾಳವು ಚೀನಾಗೆ 17,058 ಕೋಟಿ ಮೌಲ್ಯದ ರಫ್ತುಗಳನ್ನು ಮಾಡುವುದನ್ನು ತಪ್ಪಿಸಿಕೊಂಡಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಚೀನಿ ಖರೀದಿದಾರರ ಪ್ರಾಬಲ್ಯ
"ನೇಪಾಳಿ ರೈತರು 2013-2014 ರ ಸಮಯದಿಂದ ಚೀನಿಯರಿಗೆ ರುದ್ರಾಕ್ಷ ಬೀಜಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು" ಎಂದು ನೇಪಾಳಿನ ವರ್ತಕ ತಮಾಂಗ್ ಹೇಳುತ್ತಾರೆ. ಚೀನಾದಿಂದ ಬೇಡಿಕೆ ಹೇಗಿತ್ತೆಂದರೆ ಅದರಿಂದಾಗಿ ಪೂರ್ವ ನೇಪಾಳದ ಸಂಖುವಸಭಾ ಮತ್ತು ಭೋಜ್‌ಪುರ ಜಿಲ್ಲೆಗಳಲ್ಲಿರುವ ರುದ್ರಾಕ್ಷ ಕೃಷಿಕರ ಭವಿಷ್ಯವೇ ಬದಲಾಯಿತು. ಚೀನಿಯರಿಗೆ ರುದ್ರಾಕ್ಷ ಬೀಜಗಳನ್ನು ಮಾರಾಟ ಮಾಡಲು ಮ್ಯಾಂಡರಿನ್ ಭಾಷೆಯನ್ನೂ ಸಹ ಕಲಿತ ತಮಾಂಗ್‌ನಂತಹ ಮಧ್ಯವರ್ತಿಗಳ ಭವಿಷ್ಯವೂ ಬೆಳಗಿತು. ಈ ಸಂದರ್ಭದಲ್ಲಿ

ತಮಾಂಗ್ ಹೀಗೆ ಹೇಳುತ್ತಾರೆ, “ಚೀನೀಯರು ರುದ್ರಾಕ್ಷಿ ಬೀಜಗಳಿಗೆ ಹೆಚ್ಚಿನ ಬೆಲೆಗಳನ್ನು ನೀಡುತ್ತಾರೆ - ಕೆಲವೊಮ್ಮೆ ಪ್ರತಿ ಕಿಲೋಗ್ರಾಂಗೆ 1-1.5 ಮಿಲಿಯನ್ ನೇಪಾಳಿ ರೂಪಾಯಿವರೆಗೆ (ರೂ. 6.2-9.3 ಲಕ್ಷ) ಹಣ ಪಾವತಿಸುತ್ತಾರೆ. ಈ ರೀತಿಯ ಲಾಭವನ್ನು ನೋಡಿದಾಗ, ಮಾರ್ಗದರ್ಶಿಯಾಗಿದ್ದ ನನಗೆ ಈಗಾಗಲೇ ಚೈನೀಸ್ ಭಾಷೆಯೂ ಬರುತ್ತಿದ್ದರಿಂದ ನಾನು ಸುಮಾರು ಮೂರು ವರ್ಷಗಳ ಹಿಂದೆ ಈ ವ್ಯವಹಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಭಾರತವು ರುದ್ರಾಕ್ಷಗಳಿಗೆ ಪ್ರಮುಖ ಮಾರುಕಟ್ಟೆಯಾಗಿದ್ದರೂ, ಚೀನಾದ ಖರೀದಿದಾರರು ಪ್ರಾಬಲ್ಯ ಹೊಂದಿದ್ದಾರೆ ಮತ್ತು ಬೆಲೆಗಳನ್ನು ನಿಗದಿಪಡಿಸುತ್ತಾರೆ ಏಕೆಂದರೆ ಅವರು ಹೆಚ್ಚು ಸಾಮಾನ್ಯ ಪ್ರಭೇದಗಳಿಗೆ ಹೆಚ್ಚಿನ ದರಗಳನ್ನು ನೀಡುತ್ತಾರೆ".

ಈ ಮಧ್ಯೆ ಕೋವಿಡ್ ಸ್ಥಿತಿ ಉಲ್ಬಣಗೊಂಡಿದ್ದಾಗ ಚೈನಾ ತನ್ನೆಲ್ಲ ಪ್ರಯಾಣ ನಿಷೇಧಗಳನ್ನು ಹಾಕಿತ್ತು ಹಾಗೂ ಚೀನಾದಿಂದ ಬಹಳಷ್ಟು ಖರೀದಿದಾರರು ಬರಲು ಸಾಧ್ಯವಾಗಲಿಲ್ಲ. ಅಂತಹ ಸಂದರ್ಭದಲ್ಲಿ ನೇಪಾಳದಲ್ಲಿನ ರುದ್ರಾಕ್ಷ ವ್ಯಾಪಾರಿಗಳು ಹಾಗೂ ಕೃಷಿಕರು ಸಾಕಷ್ಟು ನಷ್ಟ ಅನುಭವಿಸುವಂತಾಯಿತು. ಅಲ್ಲದೆ, ಇದ್ದುದರಲ್ಲೇ ಕೆಲವೇ ಕೆಲವು ಚೀನಿ ಖರೀದಿದಾರರು ದುಬೈ, ದೋಹಾ ಮೂಲಕ ನೇಪಾಳಕ್ಕೆ ಬರಲು ಯಶಸ್ವಿಯಾದಾಗ ಅವರು ಕೋಟ್ ಮಾಡಿದ ಹಣಕ್ಕೆ ರುದ್ರಾಕ್ಷಗಳನ್ನು ಮಾರದೆ ಬೇರೆ ಮಾರ್ಗ ನೇಪಾಳಿ ವರ್ತಕರಿಗೆ ಇರಲಿಲ್ಲ.

ಚೈನಾದ ಕಠಿಣ ವ್ಯಾಪಾರ ನಿಯಮಾವಳಿಗಳು
ನೇಪಾಳಕ್ಕೆ ಹಾಗೆ ನೋಡಿದರೆ ಚೈನಾ ಒಂದು ದೊಡ್ಡ ಮಾರುಕಟ್ಟೆಯಾಗಿರುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಚೈನಾ ನೇಪಾಳದ 8000ಕ್ಕೂ ಅಧಿಕ ಉತ್ಪನ್ನಗಳನ್ನು ಡ್ಯೂಟಿ ಫ್ರೀಗೊಳಿಸಿದೆ. ಆದರೆ, ನೇಪಾಳದ ಮಾಜಿ ವಾಣಿಜ್ಯ ಕಾರ್ಯದರ್ಶಿ ಓಝಾ ಅವರು ಹೇಳುವಂತೆ ಚೈನಾ ರೂಪಿಸಿರುವ ಅತಿ ಕಠಿಣ ನಿಯಮಗಳು ಹಾಗೂ ಗುಣಾತ್ಮಕತೆಗೆ ಸಂಬಂಧಿಸಿದಂತೆ ಹಾಕಿರುವ ಶರತ್ತುಗಳ ಆಧಾರದ ಮೇಲೆ ಬಹಳ ಕಡಿಮೆ ಸಂಖ್ಯೆ ಉತ್ಪನ್ನಗಳು ಮಾತ್ರವೇ ಅವರ ಡ್ಯೂಟಿ ಫ್ರೀ ಯೋಜನೆಗೊಳಪಡುತ್ತವೆ ಎನ್ನುತ್ತಾರೆ.

ನೇಪಾಳಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಭಾರತದ ಏಕಸ್ವಾಮ್ಯವನ್ನು ಮುರಿಯುವಂತಹ 2016 ರ ಒಪ್ಪಂದ ಸೇರಿದಂತೆ ವ್ಯಾಪಾರ ಒಪ್ಪಂದಗಳನ್ನು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸದ ಕಾರಣ ಚೀನಾದೊಂದಿಗೂ ಸಹ ನೇಪಾಳದ ವ್ಯಾಪಾರ ಹಿಂದುಳಿದ ಸ್ಥಿತಿಯಲ್ಲಿದೆ.

ಚೈನಾ-ನೇಪಾಳ ವ್ಯಾಪಾರ ಭವಿಷ್ಯ
ಸದ್ಯ ಚೀನಾ ತನ್ನ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ ಯೋಜನೆಯ ಮೇಲೆ ಹೆಚ್ಚಿನ ಗಮನಹರಿಸಿದ್ದರೂ ಅದರ ವಿಸ್ತರಿಸಿಕೊಳ್ಳುವ ಮಹತ್ವಾಕಾಂಕ್ಷೆಯು ಸ್ವಾಭಾವಿಕವಾಗಿ ನೆರೆಹೊರೆಯವರೊಂದಿಗೆ ಉತ್ತಮ ಸಂಪರ್ಕ ಹೊಂದಲು ಕಾರಣವಾಗಿದೆ. ಮೈಕೆಲ್ ಯಾಹುದಾ ಮತ್ತು ಇತರ ವಿದ್ವಾಂಸರು ಗಮನಿಸಿದಂತೆ, ಚೀನೀ ವಿದೇಶಿ ಸಂಬಂಧಗಳು ವ್ಯಾಪಾರದಿಂದ ನಡೆಸಲ್ಪಡುತ್ತವೆ.

ನೇಪಾಳದಂತಹ ದೇಶಗಳು ಚೀನಾದೊಂದಿಗೆ ಹೊಂದಿರುವ ವ್ಯಾಪಾರ ಸಂಬಂಧಗಳು ಪ್ರಮುಖವಾಗಿ ವ್ಯಾಪಾರದ ನಿರ್ವಹಣೆ ಅಥವಾ ದುರುಪಯೋಗದಂತಹ ಅಂಶಗಳ ಮೇಲೆ ಆಧಾರಿತವಾಗಿವೆ. ಅಲ್ಲದೆ ನೇಪಾಳದಲ್ಲಿ ನಿಯಂತ್ರಕ ಕಾರ್ಯವಿಧಾನಗಳಿಗಿರುವ ಮಿತಿಗಳಿಂದಾಗಿ, ರುದ್ರಾಕ್ಷಿ ಬೀಜಗಳ ನಿಯಂತ್ರಣ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಮತ್ತು ಚೀನಾದ ಬೇಡಿಕೆಯಿಂದಾಗಿ ಬೆಲೆಗಳಲ್ಲಿ ವೈಪರಿತ್ಯವಿದೆ.

ಇದನ್ನೂ ಓದಿ: Explained: 1,741 ಕೋಟಿ ಕುಬೇರ ಕೆಜಿಎಫ್‌ ಬಾಬು ಯಾರು? ಸ್ಕ್ರ್ಯಾಪ್‌ ಬ್ಯುಸಿನೆಸ್‌ನಿಂದ ರಿಯಲ್‌ ಎಸ್ಟೇಟ್‌ವರೆಗೆ ಬೆಳೆದು ನಿಂತಿದ್ದೇಗೆ?

ಅರಣ್ಯ ಉತ್ಪನ್ನಗಳ ಮೌಲ್ಯ ವಿಶ್ಲೇಷಣೆಗೆ ಸಂಬಂಧಿಸಿದಂತೆ 2016 ರ ಅಧ್ಯಯನವು ರುದ್ರಾಕ್ಷಿ ಬೀಜ ಮಾರುಕಟ್ಟೆಯಲ್ಲಿ ರಾಯಲ್ಟಿ ಸಂಗ್ರಹದಾಚೆ "ಸರ್ಕಾರದ ಒಳಗೊಳ್ಳುವಿಕೆಯ ಕೊರತೆ" ಯನ್ನೂ ಸಹ ಹೊಂದಿದೆ. ವ್ಯಾಪಾರಕ್ಕಾಗಿ "ಪ್ರಾಯೋಗಿಕ ನೀತಿಯನ್ನು ಅಭಿವೃದ್ಧಿಪಡಿಸಲು" ರೈತರು ಮತ್ತು ವ್ಯಾಪಾರಿಗಳೊಂದಿಗೆ ಸಂವಹನ ನಡೆಸುವಾಗ ಬೀಜಗಳ ಗುಣಮಟ್ಟವನ್ನು ಪ್ರಮಾಣೀಕರಿಸಲು ಸರ್ಕಾರವು ಕಾನೂನುಗಳನ್ನು ತರಬೇಕೆಂದು ಅಧ್ಯಯನದಲ್ಲಿ ಶಿಫಾರಸು ಮಾಡಲಾಗಿದೆಯಾದರೂ ಆರು ವರ್ಷಗಳ ನಂತರವೂ ಈ ವಿಷಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Published by:Ashwini Prabhu
First published: