HOME » NEWS » Explained » IF YOU ARE 45 PLUS AGED PERSON KNOW YOU QUALIFY TO GET VACCINE SNVS

ಯಾರಿಗೆ ಕೋವಿಡ್ ಲಸಿಕೆ ಸಿಗುತ್ತೆ? ಉಸಿರಾಟ ತೊಂದರೆ, ಹೆಚ್ಐವಿ, ಕ್ಯಾನ್ಸರ್ ಸೇರಿ 20 ಕಾಯಿಲೆಗಳ ಪಟ್ಟಿ

45ರಿಂದ 59 ವರ್ಷ ವಯಸ್ಸಿನವರಿಗೂ ಈಗ ಲಸಿಕೆ ಪಡೆಯಲು ಅವಕಾಶ ಹೊಂದಿದ್ದಾರೆ. ಆದರೆ, ಅವರಲ್ಲಿ ಪೂರ್ವಬಾವಿ ಕಾಯಿಲೆಗಳು ಇದ್ದಿರುವಂಥವರಿಗೆ ಮಾತ್ರ ಲಸಿಕೆ ಸಿಗುತ್ತದೆ. ಹೆಚ್ಐವಿ, ಏಡ್ಸ್, ದೈಹಿಕ ವೈಕಲ್ಯತೆ ಇತ್ಯಾದಿ ಸೇರಿದಂತೆ 20 ಅನಾರೋಗ್ಯ ಸ್ಥಿತಿಗಳ ಪಟ್ಟಿ ಮಾಡಲಾಗಿದೆ.

news18
Updated:March 1, 2021, 1:14 PM IST
ಯಾರಿಗೆ ಕೋವಿಡ್ ಲಸಿಕೆ ಸಿಗುತ್ತೆ? ಉಸಿರಾಟ ತೊಂದರೆ, ಹೆಚ್ಐವಿ, ಕ್ಯಾನ್ಸರ್ ಸೇರಿ 20 ಕಾಯಿಲೆಗಳ ಪಟ್ಟಿ
ಸಾಂದರ್ಭಿಕ ಚಿತ್ರ
  • News18
  • Last Updated: March 1, 2021, 1:14 PM IST
  • Share this:
ಇವತ್ತಿನಿಂದ ದೇಶಾದ್ಯಂತ ಮೂರನೇ ಹಂತದ ಲಸಿಕಾ ಅಭಿಯಾನ ನಡೆಯುತ್ತಿದೆ. ಮೊದಲೆರಡು ಅಭಿಯಾನದಲ್ಲಿ ಲಸಿಕೆ ಪಡೆಯಲು ಅವಕಾಶ ಹೊಂದಿದ್ದ 3 ಕೋಟಿ ಮಂದಿ ಆರೋಗ್ಯ ಕಾರ್ಯಕರ್ತರು, ಫ್ರಂಟ್​ಲೈನ್ ವರ್ಕರ್ಸ್ ಪೈಕಿ ಅರ್ಧದಷ್ಟು ಮಂದಿ ಲಸಿಕೆ ಪಡೆದಿದ್ದರು. ಈ ಮೂರನೇ ಹಂತದಲ್ಲಿ 27 ಕೋಟಿ ಮಂದಿ ಫಲಾನುಭವಿಗಳನ್ನ ಟಾರ್ಗೆಟ್ ಮಾಡಲಾಗಿದೆ. 60 ಹಾಗೂ ಮೇಲ್ಪಟ್ಟ ವಯಸ್ಸಿನವರೆಲ್ಲರೂ ನಿಶ್ಚಿಂತೆಯಿಂದ ಲಸಿಕೆ ಪಡೆಯಬಹುದಾಗಿದೆ.

45 ವರ್ಷ ಮೇಲ್ಪಟ್ಟ ಹಾಗೂ 60ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ನಿರ್ದಿಷ್ಟ ಕಾಯಿಲೆ ಹೊಂದಿರುವವರು ಲಸಿಕೆ ಪಡೆಯುವ ಅವಕಾಶ ಹೊಂದಿದ್ದಾರೆ. ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಹೆಚ್ಚು ಅಪಾಯಕ್ಕೆ ಸಿಲುಕಬಹುದಾದ ಗಂಭೀರ ಸ್ವರೂಪದ ಕಾಯಿಲೆಗಳನ್ನ ತಜ್ಞ ವೈದ್ಯರು ಗುರುತಿಸಿದ್ಧಾರೆ. ಹೆಚ್​ಐವಿ, ಏಡ್ಸ್, ದೈಹಿಕ ವೈಕಲ್ಯತೆ ಇತ್ಯಾದಿ ಸೇರಿದಂತೆ 20 ಅನಾರೋಗ್ಯ ಸ್ಥಿತಿಗಳ ಪಟ್ಟಿ ಮಾಡಲಾಗಿದೆ. ಈ ಕಾಯಿಲೆಗಳಿರುವ ಬಗ್ಗೆ ವೈದ್ಯರಿಂದ ಪ್ರಮಾಣ ಪತ್ರ ಪಡೆದು ಈ ವರ್ಗದ ಜನರು ಲಸಿಕೆ ಪಡೆಯಬಹುದು.

ಇದನ್ನೂ ಓದಿ: Vaccine Confusion - ಲಸಿಕೆ ನೊಂದಣಿಗೆ ಆ್ಯಪ್ ಇಲ್ಲ; ವೆಬ್ ತಾಣ ಬಳಸಿ - ಇಲ್ಲಿದೆ ರಿಜಿಸ್ಟ್ರೇಷನ್ ಮಾಹಿತಿ

45ರಿಂದ 59 ವರ್ಷ ವಯಸ್ಸಿನವರು ಕೊರೋನಾ ಲಸಿಕೆ ಪಡೆಯಲು ಪಟ್ಟಿ ಮಾಡಿರುವ ಕಾಯಿಲೆಗಳು:

1) ಕಳೆದ ಒಂದು ವರ್ಷದಲ್ಲಿ ಹೃದಯ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದವರು.

2) ಹೃದಯ ಕಸಿ ಅಥವಾ LVAD (Left Ventricular Assist Device) ಮಾಡಿಸಿಕೊಂಡಿರುವವರು

3) Left Ventricular Systolic ತೊಂದರೆ (LVEF) ಇರುವವರು.4) Valvular ಹೃದಯ ಕಾಯಿಲೆಯಿಂದ ಬಾಧಿತರಾದವರು

5) ಜನ್ಮಜಾತವಾಗಿ ಹೃದಯ ಕಾಯಿಲೆ ಹೊಂದಿದ್ದು ಪಿಎಎಚ್​ನಿಂದ ಬಳಲುತ್ತಿರುವವರು.

6) CABG/PTCA/MI ಮತ್ತು ಬಿಪಿ/ಶುಗರ್ ಬಾಧಿತರಾಗಿ ಕೊರೋನರಿ ಆರ್ಟರಿ ಕಾಯಿಲೆ ಹೊಂದಿರುವವರು

7) ಬಿಪಿ/ಡಯಾಬಿಟಿಸ್​ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, Angina ಎದೆನೋವಿನಿಂದ ಬಳಲುತ್ತಿರುವವರು.

8) ಸ್ಟ್ರೋಕ್ ಹೊಂದಿರುವವರು

9) Pulmonary Artery Hypertension

10) ಹತ್ತಕ್ಕೂ ಹೆಚ್ಚು ವರ್ಷದಿಂದ ಡಯಾಬಿಟಿಸ್ ಮತ್ತು ಹೈಪರ್ ಟೆನ್ಷನ್​ನಿಂದ ಬಳಲುತ್ತಿರುವವರು

11) ಕಿಡ್ನಿ/ಲಿವರ್/Hematopoietic ಸ್ಟೆಮ್ ಸೆಲ್ ಟ್ರಾನ್ಸ್​ಪ್ಲಾಂಟ್ ಮಾಡಿಸಿಕೊಂಡಿರುವವರು

12) ಡಯಾಲಿಸಿಸ್​ನಲ್ಲಿರುವ ಕಿಡ್ನಿ ಕಾಯಿಲೆಪೀಡಿತರು.

13) Corticosteroids/Immunosuppresant ಮಾತ್ರೆಗಳನ್ನ ದೀರ್ಘಕಾಲ ತೆಗೆದುಕೊಂಡಿರುವವರು.

14) Decompensated Cirrhosis ಎಂಬ ಲಿವರ್ ತೊಂದರೆಯ ಹಂತದಲ್ಲಿರುವವರು.

15) ಕಳೆದ ಎರಡು ವರ್ಷದಲ್ಲಿ ಗಂಭೀರವಾಗಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರು.

16) Lymphoma/Leukaemia/Myeloma

17) 2020, ಜುಲೈ 1ರೊಳಗೆ ಯಾವುದಾದರೂ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವವರು ಅಥವಾ ಕ್ಯಾನ್ಸರ್ ಥೆರಪಿ ಪಡೆಯುತ್ತಿರುವವರು

18) Sickle Cell Disease/Bone marrow failure/Aplastic Anemia/Thalassemia Major

19) ಎಚ್​ಐವಿ ಏಡ್ಸ್ ಸೋಂಕಿತರು

20) ಬೌದ್ಧಿಕ ವೈಕಲ್ಯತೆ/Muscular dystrophy/ಆ್ಯಸಿಡ್ ದಾಳಿಯಿಂದ ಉಸಿರಾಟದ ತೊಂದರೆ ಇರುವವರು/ತೀವ್ರ ನಿಗಾದ ಅಗತ್ಯ ಇರುವ ವೈಕಲ್ಯತೆ ಹೊಂದಿರುವವರು/ಕಿವುಡು ಕುರುಡ ಇತ್ಯಾದಿ ಬಹು ವೈಕಲ್ಯತೆಗಳನ್ನ ಹೊಂದಿರುವವರು
Published by: Vijayasarthy SN
First published: March 1, 2021, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories