• ಹೋಂ
  • »
  • ನ್ಯೂಸ್
  • »
  • Explained
  • »
  • Explained: ತಾಮ್ರದ ಬಿಕ್ಕಟ್ಟಿಗೆ ಪರಿಹಾರ ಹುಡುಕಿದ ಗಣಿಗಾರಿಕೆ ಸಂಸ್ಥೆಗಳು, ಇಲ್ಲಿದೆ ನೋಡಿ ಸಂಪೂರ್ಣ ವಿವರ

Explained: ತಾಮ್ರದ ಬಿಕ್ಕಟ್ಟಿಗೆ ಪರಿಹಾರ ಹುಡುಕಿದ ಗಣಿಗಾರಿಕೆ ಸಂಸ್ಥೆಗಳು, ಇಲ್ಲಿದೆ ನೋಡಿ ಸಂಪೂರ್ಣ ವಿವರ

ತಾಮ್ರ (ಸಾಂದರ್ಭಿಕ ಚಿತ್ರ)

ತಾಮ್ರ (ಸಾಂದರ್ಭಿಕ ಚಿತ್ರ)

ತಾಮ್ರವು ಅತ್ಯಗತ್ಯ ಸಂಪನ್ಮೂಲ ಎಂದೆನಿಸಿದೆ. ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಿಂದ ಹಿಡಿದು ನೀರಿನ ಪೈಪ್‌ಗಳು ಮತ್ತು ಕೇಬಲ್‌ಗಳವರೆಗೆ ಎಲ್ಲದರಲ್ಲೂ ಬಳಸಲಾಗುತ್ತದೆ. 

  • Share this:

ಜಗತ್ತು ತಾಮ್ರದ ಅಭಾವದಿಂದ ಬಳಲುತ್ತಿದ್ದು ಈ ಹಿಂದೆ ಸುಲಭವಾಗಿ ದೊರೆಯುತ್ತಿದ್ದ ಈ ಸಂಪನ್ಮೂಲದ ಮೇಲೆ ಮಾನವರ (Human) ಹೆಚ್ಚಿನ ಅವಲಂಬನೆ ಸೃಷ್ಟಿಯಾಗಿದೆ. ಗಣಿಗಾರಿಕೆ ಸಂಸ್ಥೆಗಳು ತಾಮ್ರದ ಗಣಿಗಾರಿಕೆಯಲ್ಲಿ ಸಾಕಷ್ಟು ಸವಾಲುಗಳನ್ನು(Copper Crisis) ಎದುರಿಸುತ್ತಿದ್ದು ಆ ಸವಾಲುಗಳೇನು ಹಾಗೂ ಸಂಸ್ಥೆಗಳು ಅಳವಡಿಸಿಕೊಂಡಿರುವ ತಂತ್ರಜ್ಞಾನಗಳೇನು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.


ತಾಮ್ರದ ಶೋಧದಲ್ಲಿರುವ ಅನೇಕ ಗಣಿಗಾರಿಕೆ ಕಂಪನಿಗಳು ಇದೀಗ ವಿಶ್ವ ಎದುರಿಸುತ್ತಿರುವ ಅಭಾವವನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿವೆ. ತಾಮ್ರಕ್ಕೆ ಬೇಡಿಕೆ ಹೆಚ್ಚಾದಂತೆ ಶುಷ್ಕ ಹುಲ್ಲುಗಾವಲುಗಳಲ್ಲಿರುವ ಗಣಿಗಳಿಂದ ಪೂರೈಕೆ ಹೆಚ್ಚಾಗಿರುತ್ತದೆ. ಇದೀಗ ರಿಯೊ ಟಿಂಟೋ ಗ್ರೂಪ್ ಹಾಗೂ ಮಂಗೋಲಿಯನ್ ಅಧಿಕಾರಿಗಳು ಈ ವರ್ಷದ ಆರಂಭದಲ್ಲಿ ವಿಶ್ವದ ಶ್ರೀಮಂತ ಭೂಗತ ತಾಮ್ರದ ಗಣಿಗಳಲ್ಲೊಂದರ ಅನ್ವೇಷಣೆಯಲ್ಲಿ ಸಫಲರಾಗಿದ್ದಾರೆ.


ಈ ಅನ್ವೇಷಣೆಯೇ ಉತ್ತರ!
ಚೀನೀ ಗಡಿಯ ಉತ್ತರಕ್ಕೆ ದಕ್ಷಿಣದ ಮಂಗೋಲಿಯಾದಲ್ಲಿರುವ ಓಯು ಟೋಲ್ಗೋಯ್ ಎಂಬ ಗಣಿಯು ಶುದ್ಧ ಶಕ್ತಿಯ ಪರಿವರ್ತನೆಗೆ ಆಧಾರವಾಗಿರುವ ಲೋಹವಾದ ತಾಮ್ರದ ವಿಫುಲ ಸಂಗ್ರಹವನ್ನು ಹೊಂದಿದೆ. ನಾಲ್ಕು ದಶಕಗಳ ಕಾಲ ಸಂಸ್ಥೆ ಪಟ್ಟಿದ್ದ ಪರಿಶ್ರಮಕ್ಕೆ ಈ ಅನ್ವೇಷಣೆ ಸೂಕ್ತ ಉತ್ತರವಾಗಿದೆ.


ಇನ್ನಷ್ಟು ನಿಕ್ಷೇಪಗಳ ಅನ್ವೇಷಣೆ ನಡೆಯಬೇಕಿದೆ
ಇಂತಹ ಗಣಿ ಪ್ರದೇಶಗಳ ಅನ್ವೇಷಣೆಯಿಂದ ತಾಮ್ರದ ಅಭಾವದ ಬಿಕ್ಕಟ್ಟನ್ನು ಪರಿಹರಿಸಲಾಗುವುದಿಲ್ಲ ಎಂಬುದು ಭೂವಿಜ್ಞಾನಿಯಾಗಿರುವ ಡೌಗ್ ಕಿರ್ವಿನ್ ಅವರ ಹೇಳಿಕೆಯಾಗಿದೆ. ಈ ನಿಕ್ಷೇಪಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಡೌಗ್ ಭವಿಷ್ಯದ ಕರಾಳತೆಯನ್ನು ಬಹಿರಂಗಗೊಳಿಸಿದ್ದಾರೆ. ಸಾಕಷ್ಟು ತಾಮ್ರದ ನಿಕ್ಷೇಪಗಳು ಕಂಡುಬರದೇ ಇರುವುದು ಹಾಗೂ ಅದನ್ನು ಅಭಿವೃದ್ಧಿಪಡಿಸಲಾಗದೇ ಇರುವುದು ಇಲ್ಲಿರುವ ಸಮಸ್ಯೆಯಾಗಿದೆ ಎಂದು ಡೌಗ್ ತಿಳಿಸುತ್ತಾರೆ.


ಪ್ರಸ್ತುತ ಅಭಾವವನ್ನು ಸರಿದೂಗಿಸಲು ಇರುವ ಪರಿಹಾರವೇನು?
ವುಡ್ ಮೆಕೆಂಜಿಯ ವಿಶ್ಲೇಷಕರು ಮುಂದಿನ ದಶಕದಲ್ಲಿ ಸುಮಾರು ಆರು ಮಿಲಿಯನ್ ಟನ್ ತಾಮ್ರವನ್ನು ಕಡಿಮೆ ಮಾಡುವುದೇ ಪ್ರಸ್ತುತ ಅಭಾವವನ್ನು ನಿಯಂತ್ರಿಸುವ ಪರಿಹಾರವಾಗಿದೆ ಎಂದು ತಿಳಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಸಂಸ್ಕರಿಸಿದ ತಾಮ್ರ 2040 ರ ವೇಳೆಗೆ 53% ರಷ್ಟು ಅಭಿವೃದ್ಧಿಯನ್ನು ಕಂಡರೂ ಗಣಿ ಪೂರೈಕೆಯು ಕೇವಲ 16% ದಷ್ಟು ಮಾತ್ರ ಬೆಳವಣಿಗೆಯಾಗುತ್ತದೆ.


ವಿಶ್ವದ ಬೃಹತ್ ಗಣಿಗಾರರು ಕೂಡ ತಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದು ಗ್ರೀನ್ ಮೆಟಲ್ಸ್ (ಅಲ್ಯುಮಿನಿಯಮ್, ಕೊಬಾಲ್ಟ್, ತಾಮ್ರ, ಲಿಥಿಯಂ, ನಿಕಲ್, ಬೆಳ್ಳಿ ಮತ್ತು ಝಿನ್) ಬೇಡಿಕೆಗಳು ಪುನಶ್ಚೇತನ ಕಂಡಿದ್ದು ಒಪ್ಪಂದಗಳು ನಡೆಯುತ್ತಿವೆ. ಹಸಿರು ಲೋಹದ ಕೊರತೆಯು ಗ್ಲೆನ್‌ಕೋರ್ ಪಿಎಲ್‌ಸಿಯ ಟೆಕ್ ರಿಸೋರ್ಸಸ್ ಲಿಮಿಟೆಡ್‌ ತಾಮ್ರದ ಪೂರೈಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. BHP ಗ್ರೂಪ್ ಲಿಮಿಟೆಡ್ ತಾಮ್ರದ ಉತ್ಪಾದಕ ಓಜ್ ಮಿನರಲ್ಸ್‌ನ ಸ್ವಾಧೀನವನ್ನು ಪೂರ್ಣಗೊಳಿಸಿದ್ದು ದಶಕದಲ್ಲೇ ಅತ್ಯಂತ ದೊಡ್ಡ ವ್ಯವಹಾರ ಎಂದೆನಿಸಿದೆ.


ಗಣಿ ನಿರ್ಮಾಣಗಳಲ್ಲಿನ ಸಮಸ್ಯೆಗಳು
ಗಣಿಗಳನ್ನು ಖರೀದಿಸುವುದಕ್ಕಿಂತಲೂ ಹೆಚ್ಚು ತಲೆನೋವಿನ ಸಮಸ್ಯೆ ಎಂದರೆ ಅದರ ನಿರ್ಮಾಣವಾಗಿದೆ. ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ಬೆಲೆಗಳು ಸಮಾನವಾಗಿಲ್ಲ. ಅಂತೆಯೇ ಆರ್ಥಿಕ ಅಪಾಯಗಳು ಸಾಕಷ್ಟಿವೆ. ಇದೀಗ ಓಯು ಟೋಲ್ಗೋಯ್ ಅನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲಿ ನಿರ್ಮಾಣವು ತೆರೆದ ಹಳ್ಳಕ್ಕೆ 200 ಕಿಮೀ ಕಾಂಕ್ರೀಟ್ ಸುರಂಗಗಳನ್ನು ಒಳಗೊಂಡಿದೆ.


ಇದನ್ನೂ ಓದಿ: Karnataka Electionನಲ್ಲಿ ಬಿಜೆಪಿ ಸೋಲಿಗೆ ಈ ಎರಡು ಅಂಶಗಳೇ ಕಾರಣನಾ? ಸಿ ಟಿ ರವಿ ಸೋತಿದ್ದೇಗೆ?


ಇದರೊಂದಿಗೆ ಅದು ರಸ್ತೆಗಳು, ವಿಮಾನ ನಿಲ್ದಾಣ, ವಿದ್ಯುತ್ ಪ್ರಸರಣ ಮತ್ತು ನೀರಿನ ಮೂಲಸೌಕರ್ಯವನ್ನು ಸಹ ಒಳಗೊಂಡಿದೆ. 20,000 ಕ್ಕಿಂತ ಹೆಚ್ಚಿನ ಕೆಲಸಗಾರರಿಗೆ ಕ್ಯಾಂಟೀನ್ ಸೌಕರ್ಯವನ್ನು ಒದಗಿಸುತ್ತದೆ. ಹೀಗೆ ಗಣಿ ಸ್ಥಾವರಗಳಲ್ಲಿನ ಸೌಕರ್ಯ ನಿರ್ಮಾಣದ ವೆಚ್ಚ ಕೂಡ ವಿಪರೀತವಾಗಿ ಬೆಳೆಯುತ್ತಿದೆ.


ಖರ್ಚು ಹೆಚ್ಚು ಫಲಿತಾಂಶ ಮಾತ್ರ ಕಡಿಮೆ
ಪರಿಶೋಧನೆಯು ತಡವಾಗಿ ಹೆಚ್ಚಿನ ಮಟ್ಟದಲ್ಲಿದೆಯಾದರೂ, ಖರ್ಚು ಅಗತ್ಯಕ್ಕಿಂತ ಕಡಿಮೆಯಿರುತ್ತದೆ ಅಂತೆಯೇ ಫಲಿತಾಂಶ ಕಡಿಮೆ ಪ್ರಮಾಣದ್ದಾಗಿದೆ. ಅಂದರೆ ಅದಿರಿನಲ್ಲಿರುವ ಲೋಹದ ಶೇಕಡಾವಾರು ಕಡಿಮೆಯಾಗಿದೆ ಹಾಗಾಗಿ ಅದೇ ಉತ್ಪಾದನಾ ಮಟ್ಟವನ್ನು ಸಾಧಿಸಲು ಹೆಚ್ಚಿನ ಪ್ರಯತ್ನ ನಡೆಸುವ ಅಗತ್ಯವಿದೆ.
ಗಣಿಗಳು ಹಳೆಯದಾಗುತ್ತಿವೆ. ಗಣಿಗಳು ಆಳವಾಗುತ್ತಿವೆ. ಗಣಿಗಳು ಕಡಿಮೆ ದರ್ಜೆಯನ್ನು ಪಡೆಯುತ್ತಿವೆ ಎಂದು ಗ್ಲೋಬಲ್ ಮೈನಿಂಗ್ ರಿಸರ್ಚ್‌ನ ವ್ಯವಸ್ಥಾಪಕ ನಿರ್ದೇಶಕ ಡೇವಿಡ್ ರಾಡ್‌ಕ್ಲಿಫ್ ತಿಳಿಸುತ್ತಾರೆ.


ತಾಮ್ರದ ಗಣಿಗಾರಿಕೆಗೆ ಮುಂದಾಗಿರುವ ಸಂಸ್ಥೆಗಳುBHP ಗ್ರೂಪ್, ಅತಿದೊಡ್ಡ ಗಣಿಗಾರಿಕೆ ಕಂಪನಿ, ಈಗಾಗಲೇ ಹೂಡಿಕೆದಾರರಾಗಿದ್ದು, ಇದೀಗ ಚಿಲಿಯ ಕ್ರೌನ್ ಜ್ಯುವೆಲ್ ತಾಮ್ರದ ಗಣಿ ಎಸ್ಕಾಂಡಿಡಾದಲ್ಲಿ ಪ್ರಾಯೋಗಿಕ ಸ್ಥಾವರಕ್ಕಾಗಿ ಮಾತುಕತೆ ನಡೆಸುತ್ತಿದೆ. ಯುಎಸ್ ಮೈನರ್ ಫ್ರೀಪೋರ್ಟ್-ಮ್ಯಾಕ್‌ಮೊರಾನ್ ಇಂಕ್ ಈ ವರ್ಷ ಅರಿಝೋನಾ ಗಣಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿತು ಅಂತೆಯೇ ಪ್ರತಿಸ್ಪರ್ಧಿ ರಿಯೊ ಟಿಂಟೊ ಗ್ರೂಪ್ ಇದೇ ಪ್ರಕ್ರಿಯೆಯನ್ನು ಹೊರತರಲು ಯೋಜಿಸುತ್ತಿದೆ.


ತಾಮ್ರಕ್ಕಿರುವ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ
ಗಣಿಗಾರರು ಹೆಚ್ಚುತ್ತಿರುವ ತುರ್ತು ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ತಾಮ್ರವು ಅತ್ಯಗತ್ಯ ಸಂಪನ್ಮೂಲ ಎಂದೆನಿಸಿದೆ. ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಿಂದ ಹಿಡಿದು ನೀರಿನ ಪೈಪ್‌ಗಳು ಮತ್ತು ಕೇಬಲ್‌ಗಳವರೆಗೆ ಎಲ್ಲದರಲ್ಲೂ ಬಳಸಲಾಗುತ್ತದೆ. ಮತ್ತು ಡಿಕಾರ್ಬೊನೈಸ್ ಮಾಡುವ ಜಾಗತಿಕ ಚಾಲನೆಯು ತೈಲ ಮತ್ತು ಕಲ್ಲಿದ್ದಲಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಹಂತಹಂತವಾಗಿ ಹೊರಹಾಕುವುದನ್ನು ಆಧರಿಸಿದೆ. ವಿದ್ಯುತ್ ಕ್ಷೇತ್ರಕ್ಕೆ ಹಿಂದೆಂದಿಗಿಂತಲೂ ಹೆಚ್ಚು ತಾಮ್ರದ ಅಗತ್ಯವಿರುತ್ತದೆ.


ಪ್ರಸ್ತುತ ಗಣಿಗಳು ಎದುರಿಸುತ್ತಿರುವ ಸಮಸ್ಯೆಗಳು
ಅತ್ಯುತ್ತಮ ಗಣಿಗಳು ಹಳೆಯದಾಗುತ್ತಿವೆ ಮತ್ತು ಕೆಲವು ಹೊಸ ಆವಿಷ್ಕಾರಗಳು ಕಾರ್ಯನಿರ್ವಹಿಸಲು ಕಷ್ಟಕರವಾದ ಸ್ಥಳಗಳಲ್ಲಿವೆ. ಅಥವಾ ಅಭಿವೃದ್ಧಿಗೆ ವರ್ಷಗಳ ವಿರೋಧವನ್ನು ಎದುರಿಸುತ್ತವೆ. ಸರಕು ಮಾರುಕಟ್ಟೆಗಳ ಇತಿಹಾಸವು ಮಗ್ಗುತ್ತಿರುವ ಕೊರತೆಗಳು, ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಉತ್ತೇಜಿಸುತ್ತದೆ ಎಂಬುದನ್ನು ತೋರಿಸಿದೆ. ಅಂದಾಜು 43 ಮಿಲಿಯನ್ ಟನ್ ತಾಮ್ರವನ್ನು ಗಣಿಗಾರಿಕೆ ಮಾಡಲಾಗಿದ್ದರೂ ಸಂಸ್ಕರಣೆಯ ಪ್ರಕ್ರಿಯೆಯನ್ನು ನಡೆಸಲಾಗಿಲ್ಲ ಎಂಬುದು ವರದಿಯಾಗಿದೆ.


ತಾಮ್ರದ ತ್ಯಾಜ್ಯ ಸಂಸ್ಕರಣೆ ಸರಿಯಾಗಿ ನಡೆಯುತ್ತಿಲ್ಲ
ಪ್ರಸ್ತುತ ಬೆಲೆಯಲ್ಲಿ $2 ಟ್ರಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ್ದಾಗಿರುವ ಸಂಸ್ಕರಣೆಯು ಆ ಸಂಪತ್ತನ್ನು ಯಶಸ್ವಿಯಾಗಿ ಮರುಪಡೆಯುವ ಯಾರಿಗಾದರೂ ದೊಡ್ಡ ಅವಕಾಶಗಳನ್ನು ಸೃಷ್ಟಿಸುತ್ತದೆ. ತಂತ್ರಜ್ಞಾನ ಸುಧಾರಣೆಯನ್ನು ಕಂಡುಕೊಂಡಂತೆ ತಾಮ್ರದ ಸಂಸ್ಕರಣೆಯಲ್ಲಿ ಕೂಡ ಅಭಿವೃದ್ಧಿ ನಡೆಯಬೇಕಿತ್ತು, ಕೆಲವು ವಿಧದ ಅದಿರಿಗೆ ಇದು ಕಾರ್ಯಸಾಧ್ಯವಾಗಿಲ್ಲ. ಗಣಿಗಾರಿಕೆಗೆ ಕಾರ್ಯಸಾಧ್ಯವಾಗದ ಇನ್ನೂ ಲಕ್ಷಾಂತರ ಟನ್‌ಗಳು ಭೂಗತವಾಗಿವೆ.


ತಂತ್ರಜ್ಞಾನದ ಅಳವಡಿಕೆಯಿಂದ ಸಫಲತೆ ಸಾಧ್ಯ
ತಂತ್ರಜ್ಞಾನವನ್ನು ಉದ್ಯಮವು ಸಂಪೂರ್ಣವಾಗಿ ಅಳವಡಿಸಿಕೊಂಡರೆ, ಕಂಪನಿಯು 2040 ರ ವೇಳೆಗೆ ಪ್ರತಿ ವರ್ಷ 8 ಮಿಲಿಯನ್ ಟನ್​ಗಳಷ್ಟು ಹೆಚ್ಚುವರಿ ತಾಮ್ರವನ್ನು ಉತ್ಪಾದಿಸಬಹುದು ಎಂದು ಅಂದಾಜಿಸಿದೆ. ಕಳೆದ ವರ್ಷದ ಒಟ್ಟು ಜಾಗತಿಕ ಗಣಿ ಉತ್ಪಾದನೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಎಂಬುದು ಸಂಸ್ಥೆಗಳ ಅಭಿಪ್ರಾಯವಾಗಿದೆ.


ಮಂಗೋಲಿಯನ್ ಸರ್ಕಾರವು ಚೀನಾದಲ್ಲಿ ಉತ್ಪಾದಿಸುವ ಗಡಿಯಿಂದ ವಿದ್ಯುತ್ ಅನ್ನು ಬಳಸುವುದಕ್ಕಿಂತ ರಿಯೊ ಗಣಿಗಾಗಿ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಬಯಸುತ್ತದೆ. ಟ್ರಕ್‌ಗಳಲ್ಲಿ ಕಳುಹಿಸುವ ಬದಲು ತಾಮ್ರವನ್ನು ತನ್ನಲ್ಲಿಯೇ ಕರಗಿಸುವ ಕ್ರಮಕ್ಕೆಉತ್ಸುಕವಾಗಿದೆ.


ಗಣಿಗಾರಿಕೆಯಲ್ಲಿ ಹೊಸ ಆಶಾಕಿರಣ ಜೆಟ್ಟಿ ತಂತ್ರಜ್ಞಾನ
ಓಯು ಟೋಲ್ಗೊಯ್, ಇದು ಸಂಪೂರ್ಣ ಉತ್ಪಾದನೆಯಲ್ಲಿದ್ದಾಗ ವಿಶ್ವದ ನಾಲ್ಕನೇ-ಅತಿದೊಡ್ಡ ತಾಮ್ರದ ಗಣಿ ಎಂಬ ಮನ್ನಣೆಗೆ ಪಾತ್ರವಾಗಿತ್ತು. ಇದೀಗ ಯುಎಸ್ ಸ್ಟಾರ್ಟ್ಅಪ್ ದಶಕಗಳಿಂದ ಗಣಿಗಾರಿಕೆ ಜಗತ್ತನ್ನು ನಿರಾಶೆಗೊಳಿಸಿರುವ ಸಮಸ್ಯೆಯನ್ನು ಪರಿಹರಿಸಿದೆ ಎಂಬ ಸುದ್ದಿಯನ್ನು ಹೊರಹಾಕಿದೆ.


ಇದನ್ನೂ ಓದಿ: Pushpak Viman: ಇಂದಿನ ಫ್ಲೈಟ್​ಗಿಂತ ಅಂದಿನ ಪುಷ್ಪಕ ವಿಮಾನವೇ ಬೆಸ್ಟ್​ ಅಂತೆ! ಕಾರಣ ನೋಡಿ ನೀವೂ ಹೌದು ಅಂತೀರಾ!


ಜೆಟ್ಟಿ ತಂತ್ರಜ್ಞಾನ ಎಂಬ ಹೆಸರಿನ ತಂತ್ರಜ್ಞಾನ ಇದಾಗಿದ್ದು,ಇದು ಯಶಸ್ವಿಯಾದರೆ ವಿದ್ಯುತ್ ಗ್ರಿಡ್‌ಗಳು, ಕಟ್ಟಡ ಸೈಟ್‌ಗಳು ಮತ್ತು ಕಾರ್ ಫ್ಲೀಟ್‌ಗಳಿಗೆ ತಾಮ್ರವನ್ನೊದಗಿಸಲು ಲಕ್ಷಾಂತರ ಟನ್‌ಗಳಷ್ಟು ಹೊಸ ತಾಮ್ರದ ಅನ್ವೇಷಣೆಗೆ ಪೂರಕವಾಗಲಿದೆ. ಜೆಟ್ಟಿ ತಂತ್ರಜ್ಞಾನ ಸಾಮಾನ್ಯ ವಿಧದ ಅದಿರಿನ ಮೂಲಕ ತಾಮ್ರವನ್ನು ಹೊರತೆಗೆಯುವ ವಿಧಾನಕ್ಕೆ ಸಹಕಾರಿಯಾಗಲಿದೆ. ತಾಮ್ರಕ್ಕೆ ಅಡ್ಡಲಾಗಿರುವ ಬಂಡೆಯನ್ನು ಸೂಕ್ಷ್ಮಜೀವಿಗಳು ಸೇವಿಸುವ ಮೂಲಕ ಇದರೊಳಗೆ ಸಿಲುಕಿರುವ ತಾಮ್ರವು ಹೊರಬರಲು ಅನುಕೂಲಕಾರಿಯಾಗಿರುತ್ತದೆ. ಜೆಟ್ಟಿ ಈ ರೀತಿಯ ವಿಶೇಷ ವೇಗವರ್ಧಕವನ್ನು ಪರಿಚಯಿಸಿದೆ.


ಹೊಸ ಯೋಜನೆಗಳ ಗುರಿ
ಜೆಟ್ಟಿಯು ಸಾಮಾನ್ಯ ರೀತಿಯ ಸಲ್ಫೈಡ್ ಅದಿರಿನಿಂದ ತಾಮ್ರವನ್ನು ಮರುಪಡೆಯಲು ತನ್ನ ತಂತ್ರಜ್ಞಾನವನ್ನು ಅನ್ವಯಿಸುವ ಗುರಿಯನ್ನು ಹೊಂದಿದೆ. ಜೆಟ್ಟಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದೊಂದಿಗೆ ರಾಸಾಯನಿಕ ವೇಗವರ್ಧಕವನ್ನು ಅಭಿವೃದ್ಧಿಪಡಿಸಲು ಕಾರ್ಯನಿರ್ವಹಿಸಿದೆ. ಇದರಿಂದಾಗಿ ತಾಮ್ರವನ್ನು ಹೆಚ್ಚಿನ ತಾಪಮಾನದ ಅಗತ್ಯವಿಲ್ಲದೆಯೇ ಲೀಚಿಂಗ್ ಬಳಸಿ ಬಿಡುಗಡೆ ಮಾಡಬಹುದು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

First published: