Explainer: ಭಾರತದ ಮೊದಲ ಮಕ್ಕಳ ಲಸಿಕೆ ಜೈಕೋವ್-ಡಿ ಎಷ್ಟು ಪರಿಣಾಮಕಾರಿ..?

ಜೈಕೋವ್-ಡಿ 3 ಡೋಸ್‌ಗಳಲ್ಲಿ ನೀಡಲಾಗುವುದು, 28 ದಿನಗಳ ಮಧ್ಯಂತರದಲ್ಲಿ ಮೊದಲ, ಎರಡನೇ ಹಾಗೂ ಮೂರನೇ ಡೋಸ್‌ಗಳನ್ನು ನೀಡಲಾಗುತ್ತದೆ. ಲಸಿಕೆಯ ಇನ್ನೊಂದು ವಿಶಿಷ್ಟವಾದ ವಿಷಯವೆಂದರೆ ಅದನ್ನು ನೀಡುವ ವಿಧಾನ. ಯಾವುದೇ ಸೂಜಿಯನ್ನು ಬಳಸದೆ, ಬದಲಾಗಿ ಒಂದು ಸ್ಪ್ರಿಂಗ್ ಚಾಲಿತ ಸಾಧನವು ಚರ್ಮದಲ್ಲಿ ಚಿಕ್ಕದಾಗಿ ತೂರಿಸಿ ಈ ಲಸಿಕೆಯ ದ್ರವ ನೀಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಕೋವಿಡ್-19 ವೈರಸ್ ಹಾವಳಿ ನಿಯಂತ್ರಿಸಲು ಈಗಾಗಲೇ ಅನೇಕ ಲಸಿಕೆಗಳು ಬಂದಿದ್ದು, ಹಲವು ವಯಸ್ಕರು ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿದ್ದಾರೆ. ಕೋವಿಡ್ ಮೂರನೆಯ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಅನೇಕ ವರದಿಗಳು ಬಂದಿದ್ದವು. ಮಕ್ಕಳಿಗೂ ಲಸಿಕೆ ನೀಡಲು ಶುರುಮಾಡಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿಗೆ ಲಸಿಕೆ ನೀಡಬೇಕೆಂದು ಅನೇಕ ಔಷಧಿ ತಯಾರಕ ಕಂಪೆನಿಗಳು ಈಗಾಗಲೇ ತಾವು ತಯಾರಿಸಿದ ಲಸಿಕೆಯನ್ನು ಕ್ಲಿನಿಕಲ್ ಪ್ರಾಯೋಗಿಕ ಹಂತದಲ್ಲಿದ್ದರೆ, ಇನ್ನೂ ಕೆಲವು ಲಸಿಕೆಗಳು ಅನುಮೋದನೆಗೆ ಅರ್ಜಿ ಸಲ್ಲಿಸಿವೆ. ಅಹ್ಮದಾಬಾದ್ ಮೂಲದ ಜೈಡಸ್ ಕ್ಯಾಡಿಲಾ ಕೋವಿಡ್-19 ವಿರುದ್ಧ ಹೋರಾಡುವಂತಹ ಲಸಿಕೆಯಾದ ಜೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿದ್ದು, ಈ ಮೂಲಕ ಜೈಕೋವ್-ಡಿ ಲಸಿಕೆ SARS-CoV-2 ಸೋಂಕಿನ ವಿರುದ್ಧ ಹೋರಾಡುವ ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಿದೆ.


  ಜೈಕೋವ್-ಡಿ ಲಸಿಕೆಯು ಒಂದು "ಪ್ಲಾಸ್ಮಿಡ್ ಡಿಎನ್ಎ" ಲಸಿಕೆಯಾಗಿದ್ದು, 'ಪ್ಲಾಸ್ಮಿಡ್' ಎಂದು ಕರೆಯಲ್ಪಡುವ ಒಂದು ರೀತಿಯ ಡಿಎನ್ಎ ಅಣುವಿನ ತಳಿಯಿಂದ ವಿನ್ಯಾಸಗೊಳಿಸಲಾಗಿದೆ. ಈ ಲಸಿಕೆ ಸ್ವೀಕರಿಸುವವರ ದೇಹದಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


  ಹೆಚ್ಚಿನ ಕೋವಿಡ್ -19 ಲಸಿಕೆಗಳನ್ನು ಪ್ರಸ್ತುತ ಎರಡು ಡೋಸ್‌ಗಳಲ್ಲಿ ನೀಡಲಾಗಿದ್ದು, ಒಂದೆರಡು ಲಸಿಕೆಗಳು ಕೇವಲ ಒಂದು ಡೋಸ್‌ನಲ್ಲಿ ಲಭ್ಯವಿದೆ. ಇದಕ್ಕೆ ವಿರುದ್ಧವಾಗಿ ಜೈಕೋವ್-ಡಿ 3 ಡೋಸ್‌ಗಳಲ್ಲಿ ನೀಡಲಾಗುವುದು, 28 ದಿನಗಳ ಮಧ್ಯಂತರದಲ್ಲಿ ಮೊದಲ ಮತ್ತು ಎರಡನೇ ಹಾಗೂ ಮೂರನೇ ಡೋಸ್‌ಗಳನ್ನು ನೀಡಲಾಗುತ್ತದೆ.


  ಲಸಿಕೆಯ ಇನ್ನೊಂದು ವಿಶಿಷ್ಟವಾದ ವಿಷಯವೆಂದರೆ ಅದನ್ನು ನೀಡುವ ವಿಧಾನ. ಯಾವುದೇ ಸೂಜಿಯನ್ನು ಬಳಸದೆ, ಬದಲಾಗಿ ಒಂದು ಸ್ಪ್ರಿಂಗ್ ಚಾಲಿತ ಸಾಧನವು ಚರ್ಮದಲ್ಲಿ ಚಿಕ್ಕದಾಗಿ ತೂರಿಸಿ ಈ ಲಸಿಕೆಯ ದ್ರವ ನೀಡಲಾಗುತ್ತದೆ. ಜೈಕೋವ್-ಡಿ ಲಸಿಕೆಯನ್ನು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.


  ಈ ಲಸಿಕೆ ಎಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ?


  ಜೈಕೊವ್-ಡಿ ಲಸಿಕೆಯನ್ನು 1, 2 ಮತ್ತು 3 ಹಂತಗಳಲ್ಲಿ ಕ್ಲಿನಿಕಲ್ ಪ್ರಯೋಗಗಳಲ್ಲಿ 28,000ಕ್ಕೂ ಹೆಚ್ಚು ಜನರ ಮೇಲೆ ಪರೀಕ್ಷಿಸಿದ್ದು, ಇದರಲ್ಲಿ ಸುಮಾರು ಒಂದು ಸಾವಿರ ಜನರು 12ರಿಂದ 18 ವರ್ಷ ವಯಸ್ಸಿನವರಾಗಿದ್ದರು. ಡಿಸೆಂಬರ್ 2020ರಲ್ಲಿ, ಜೈಡಸ್ ಗ್ರೂಪ್ ಅಧ್ಯಕ್ಷ ಪಂಕಜ್ ಆರ್ ಪಟೇಲ್ ಪ್ರಯೋಗದ ಮೊದಲ ಎರಡು ಹಂತಗಳಲ್ಲಿ ಲಸಿಕೆ "ಸುರಕ್ಷಿತ ಮತ್ತು ಇಮ್ಯುನೊಜೆನಿಕ್" ಎಂದು ತೋರಿಸಿದೆ ಎಂದು ಹೇಳಿದ್ದರು.


  ಇದುವರೆಗಿನ ಪ್ರಯೋಗದ ಮಾಹಿತಿಯ ಪ್ರಕಾರ, ಲಸಿಕೆ ಪಡೆಯದವರಿಗೆ ಹೋಲಿಸಿದರೆ ಡೋಸ್ ಪಡೆದವರಲ್ಲಿ ಕೋವಿಡ್-19 ರೋಗಲಕ್ಷಣದ ಪ್ರಕರಣಗಳನ್ನು ಸುಮಾರು 67 ಪ್ರತಿಶತದಷ್ಟು ಕಡಿಮೆ ಮಾಡಲು ಲಸಿಕೆಯಿಂದ ಸಾಧ್ಯವಾಗಿದೆ. ಈ ಸಂಖ್ಯೆಯು 3ನೇ ಹಂತದ ಪ್ರಯೋಗದಲ್ಲಿ ಲಸಿಕೆ ಹಾಕಿಸಿಕೊಂಡ 79ರಿಂದ 90 ಜನರ RTPCR ವರದಿ ಆಧರಿಸಿ ಹೇಳಲಾಗಿದೆ ಎಂದು ಜೈಡಸ್ ಕ್ಯಾಡಿಲಾ ವ್ಯವಸ್ಥಾಪಕ ನಿರ್ದೇಶಕ ಡಾ. ಶರ್ವಿಲ್ ಪಟೇಲ್ ಹೇಳಿದ್ದಾರೆ.


  ಇದನ್ನೂ ಓದಿ: Zydus Cadila: ಭಾರತದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯ; ಝೈಡಸ್ ಕ್ಯಾಡಿಲಾ ವ್ಯಾಕ್ಸಿನ್​ಗೆ ಅನುಮತಿ

  ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ಜನರು ಕೋವಿಡ್ -19 ರೋಗಲಕ್ಷಣಗಳನ್ನು ತಡೆಯಲು ಮತ್ತು ಸಾವನ್ನು ತಡೆಯಲು ಸೂಕ್ತ ಎಂದು ತೋರುತ್ತದೆ, ಆದರೆ ಮೂರು ಡೋಸ್‌ಗಳು ಸಾಧಾರಣ ರೋಗಲಕ್ಷಣಗಳಿಂದಲೂ ದೂರವಿರಿಸುತ್ತವೆ ಎಂದು ಟ್ರಯಲ್ ಡೇಟಾ ಹೇಳುತ್ತದೆ.


  ಈ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಹೇಗೆ ಕಾರ್ಯ ನಿರ್ವಹಿಸುತ್ತದೆ?


  ಜೈಕೋವ್-ಡಿ ಲಸಿಕೆಯ ಮೂರನೆಯ ಹಂತದ ಪ್ರಯೋಗವನ್ನು ದೇಶಾದ್ಯಂತ 50 ಕ್ಲಿನಿಕಲ್ ಟ್ರಯಲ್ ಸೈಟ್‌ಗಳಲ್ಲಿ ನಡೆಸಲಾಯಿತು ಮತ್ತು ಡೆಲ್ಟಾ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವವನ್ನು ಧೃಢಿಪಡಿಸುತ್ತದೆ ಎಂದು ಕಂಪನಿ ಹೇಳುತ್ತದೆ.


  "ಸೆರೋ ಪರೀಕ್ಷೆಗಳಲ್ಲಿ ಕಂಡು ಬಂದಿರುವ ಎಲ್ಲಾ ಶೇಕಡಾ 99ರಷ್ಟು ವೈರಸ್ ಡೆಲ್ಟಾ ರೂಪಾಂತರವಾಗಿದೆ ಎಂದು ನಮಗೆ ತಿಳಿದಿದೆ. ಕಂಪೆನಿಯು ಅಗತ್ಯವಿದ್ದಲ್ಲಿಈ ಲಸಿಕೆಯನ್ನು ಮತ್ತೆ ನವೀಕರಿಸಬಹುದಾಗಿದೆ ಎಂದು ಹೇಳಿದರು. ಈ ರೂಪಾಂತರಗಳನ್ನು ತಟಸ್ಥಗೊಳಿಸುವಲ್ಲಿ ಲಸಿಕೆಯ ಪ್ರಸ್ತುತ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡಲು ಕಂಪೆನಿಯು ಸಿದ್ದವಾಗುತ್ತಿದೆ ಎಂದೂ ಡಾ. ಪಟೇಲ್ ತಿಳಿಸಿದರು.


  ಈ ಲಸಿಕೆ ಯಾವಾಗ ಲಭ್ಯವಿರುತ್ತದೆ ಮತ್ತು ಬೆಲೆ ಏನು?


  ಜೈಡಸ್ ಕ್ಯಾಡಿಲಾ ಒಂದು ವರ್ಷಕ್ಕೆ 120 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಹೊಸ ಸೌಲಭ್ಯವನ್ನು ಸ್ಥಾಪಿಸುತ್ತಿದೆ. ಇದರರ್ಥ ಒಂದು ವರ್ಷದಲ್ಲಿ 40 ಮಿಲಿಯನ್ ಜನರಿಗೆ ಜೈಕೋವ್-ಡಿಯ ಮೂರು ಡೋಸ್ ಲಸಿಕೆ ಹಾಕಬಹುದು. ಕಂಪೆನಿಯು ಪ್ರತಿ ತಿಂಗಳು 10 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸಲಿದ್ದು, ಡಿಸೆಂಬರ್ ವೇಳೆಗೆ ದೇಶಕ್ಕೆ 50 ಮಿಲಿಯನ್ ಡೋಸ್‌ಗಳನ್ನು ಪೂರೈಸುವ ಭರವಸೆ ಹೊಂದಿದೆ ಎಂದು ಡಾ. ಪಟೇಲ್ ಹೇಳುತ್ತಾರೆ. ಲಸಿಕೆಯ ಬೆಲೆಯನ್ನು ಕಂಪೆನಿ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದುಬಂದಿದೆ.

  First published: