Explained: ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದ್ಯಾ ತೈವಾನ್‌ ಮೇಲಿನ ಚೀನಾದ ಆಕ್ರಮಣ

ಸ್ವಯಂ ಆಡಳಿತವನ್ನು ನಡೆಸುತ್ತಿರುವ ತೈವಾನ್ ಅನ್ನು ಚೀನಾ ಬೇರ್ಪಟ್ಟ ಪ್ರಾಂತ್ಯವೆಂದು ಪರಿಗಣಿಸಿದ್ದು, ತನ್ನ ನಿಯಂತ್ರಣದಲ್ಲಿ ತೈವಾನ್ ಬರಬೇಕೆಂಬುದು ಚೀನಾದ ಆಶಯವಾಗಿದೆ. ತನ್ನದೇ ಆದ ಸ್ವಂತ ಸಂವಿಧಾನ ಹಾಗೂ ಪ್ರಜಾಸತ್ತಾತ್ಮಕ ಚುನಾಯಿತ ನಾಯಕರನ್ನು ಹೊಂದಿರುವ ತೈವಾನ್ ತನ್ನನ್ನು ತಾನು ಚೀನಾದಿಂದ ಭಿನ್ನವೆಂದು ನೋಡುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬ್ಯಾಲಿಸ್ಟಿಕ್ ಕ್ಷಿಪಣಿಗಳ ಉಡಾವಣೆ ಸೇರಿದಂತೆ ತೈವಾನ್ (Taiwan) ಸುತ್ತಮುತ್ತಲಿನ ವಾಯು ಮತ್ತು ಕಡಲು ಪ್ರದೇಶಗಳಲ್ಲಿ ಚೀನಾ (China) ತನ್ನ ಅತಿದೊಡ್ಡ ಮಿಲಿಟರಿ ಪ್ರದರ್ಶನವನ್ನು ನಡೆಸಿದೆ. ಸ್ವಯಂ ಆಡಳಿತವನ್ನು ನಡೆಸುತ್ತಿರುವ ತೈವಾನ್ ಅನ್ನು ಚೀನಾ ಬೇರ್ಪಟ್ಟ ಪ್ರಾಂತ್ಯವೆಂದು ಪರಿಗಣಿಸಿದ್ದು, ತನ್ನ ನಿಯಂತ್ರಣದಲ್ಲಿ ತೈವಾನ್ ಬರಬೇಕೆಂಬುದು ಚೀನಾದ ಆಶಯವಾಗಿದೆ. ತನ್ನದೇ ಆದ ಸ್ವಂತ ಸಂವಿಧಾನ ಹಾಗೂ ಪ್ರಜಾಸತ್ತಾತ್ಮಕ ಚುನಾಯಿತ ನಾಯಕರನ್ನು ಹೊಂದಿರುವ ತೈವಾನ್ ತನ್ನನ್ನು ತಾನು ಚೀನಾದಿಂದ ಭಿನ್ನವೆಂದು ನೋಡುತ್ತಿದೆ. ಚೀನಾ ತೈವಾನ್‌ನೊಂದಿಗೆ ಪುನರ್ ಏಕೀಕರಣವನ್ನು (Reintegration) ಸ್ಥಾಪಿಸುವ ಪ್ರಯತ್ನದಲ್ಲಿದೆ. ತೈವಾನ್ ಮೇಲೆ ಚೀನಾ ನಡೆಸುವ ಮಿಲಿಟರಿ ದಾಳಿಯು ಉಕ್ರೇನ್ ಯುದ್ಧಕ್ಕಿಂತ (Ukraine War) ಹೆಚ್ಚಾಗಿ ಜಾಗತಿಕ ವ್ಯಾಪಾರದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವ್ಯಾಪಾರ ಸಮಾಲೋಚಕರ ಅಭಿಪ್ರಾಯವಾಗಿದೆ.

ತೈವಾನ್‌ನಲ್ಲಿ ಚೀನಾದ ಆಕ್ರಮಣವು ಜಾಗತಿಕ ಆರ್ಥಿಕತೆಗೆ ಹೇಗೆ ಅಪಾಯಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ರಷ್ಯಾ ಉಕ್ರೇನ್ ಯುದ್ಧ ಬಡದೇಶಗಳ ಮೇಲೆ ಬೀರಿದ ಪರಿಣಾಮ
ಫೆಬ್ರವರಿಯಲ್ಲಿ ರಷ್ಯಾದ ಉಕ್ರೇನ್ ಆಕ್ರಮಣವು ಸರಕುಗಳ ಬೆಲೆ ಏರಿಕೆ ಮತ್ತು ಆಹಾರ ರಫ್ತು ನಿಷೇಧಗಳನ್ನು ಪ್ರಚೋದಿಸಿತು, ಬಡ ದೇಶಗಳಲ್ಲಿ ಕ್ಷಾಮದ ಭಯಕ್ಕೆ ಕಾರಣವಾಯಿತು.

ಎಲೆಕ್ಟ್ರಿಕ್ ವಾಹನಗಳು ಮತ್ತು ಮೊಬೈಲ್ ಫೋನ್‌ಗಳಲ್ಲಿ ಬಳಸುವ ಚಿಪ್‌ಗಳಿಗಾಗಿ ವಿಶ್ವವು ತೈವಾನ್‌ನ ಮೇಲೆ ಅವಲಂಬಿತವಾಗಿರುವುದರಿಂದ ಚೀನಾ ತೈವಾನ್‌ನ ಮೇಲೆ ದಾಳಿ ಮಾಡಿದರೆ, ಸಂಭಾವ್ಯ ಅಡೆತಡೆಗಳು ಕೆಟ್ಟದಾಗಿರಬಹುದು ಎಂದು ಊಹಿಸಲಾಗಿದೆ.

ತೈವಾನ್‌ನ ಆರ್ಥಿಕ ವ್ಯವಸ್ಥೆ ಏಕೆ ಮುಖ್ಯವಾಗಿದೆ?
ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯು ತೈವಾನ್‌ನ ವ್ಯಾಪಾರವನ್ನು ಕೆಲವೇ ಪ್ರಮುಖ ಸರಕುಗಳಿಗಾಗಿ ಅವಲಂಬಿಸಿದೆ. ಮುಖ್ಯವಾಗಿ ಸೆಮಿಕಂಡಕ್ಟರ್‌ಗಳು. ಇವುಗಳು ವಿದ್ಯುತ್ ವಾಹಕತೆಯನ್ನು ಹೊಂದಿರುವ ಘನ ವಸ್ತುಗಳಾಗಿವೆ. TSMC ನಂತಹ ತೈವಾನಿನ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಕಾರ್ಪೊರೇಶನ್‌ಗಳು ಜಗತ್ತಿನ ಮಾರುಕಟ್ಟೆಯ 63% ಪಾಲು ಹೊಂದಿರುವ ಅರೆವಾಹಕಗಳನ್ನು ತಯಾರಿಸುವ $85 ಶತಕೋಟಿ ಮಾರುಕಟ್ಟೆ ಮೌಲ್ಯದ ಪ್ರಾಬಲ್ಯವನ್ನು ಹೊಂದಿವೆ.

ಇದನ್ನೂ ಓದಿ:  Anti Conversion Bill: ಹೇಗಿರಲಿದೆ ಮತಾಂತರ ನಿಷೇಧ ಕಾಯ್ದೆ? ಮತಾಂತರಿಗಳಿಗೆ ಏನು ಶಿಕ್ಷೆ ಗೊತ್ತಾ?

ಅತ್ಯಾಧುನಿಕ ವೈಜ್ಞಾನಿಕ ಪ್ರಾಬಲ್ಯ ಹೊಂದಿರುವ ಯಾವುದೇ ರಾಷ್ಟ್ರವೂ ತೈವಾನ್‌ನ ಮಾರುಕಟ್ಟೆಯನ್ನು ಬಯಸುತ್ತದೆ. TSMC ಅತ್ಯಂತ ಉನ್ನತವಾದ 5 ನ್ಯಾನೊ-ಮೀಟರ್ ಚಿಪ್‌ಗಳನ್ನು ತಯಾರಿಸುವ ಮತ್ತು ಈ ಉನ್ನತ ಚಿಪ್‌ಗಳಿಗಾಗಿ ಅಗಾಧವಾದ 90% ಮಾರುಕಟ್ಟೆ ಪಾಲನ್ನು ಹೊಂದಿರುವ ಎರಡು ನಿಗಮಗಳಲ್ಲಿ ಒಂದಾಗಿದೆ. ಇನ್ನು ಚೀನಾ 6% ದಷ್ಟು ಮಾತ್ರವೇ ಚಿಪ್‌ಗಳನ್ನು ಉತ್ಪಾದಿಸುತ್ತದೆ.

ಯುದ್ಧಕ್ಕೆ ತನ್ನಷ್ಟಕ್ಕೆ ತಾನೇ ತಯಾರಾಗುತ್ತಿರುವ ತೈವಾನ್
ತೈಪೆ ಸರ್ಕಾರವು ಚೀನಾದಿಂದ ಸನ್ನಿಹಿತ ದಾಳಿಯ ಯಾವುದೇ ಲಕ್ಷಣಗಳನ್ನು ವರದಿ ಮಾಡಿಲ್ಲ, ಆದರೆ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ತೈವಾನ್ ತನ್ನ ಎಚ್ಚರಿಕೆಯ ಮಟ್ಟವನ್ನು ಬೀಜಿಂಗ್‌ನ ಉದ್ದೇಶಗಳ ಬಗ್ಗೆ ಜಾಗರೂಕತೆಯಿಂದ ಹೆಚ್ಚಿಸಿದೆ.

ಚೀನೀ ಸರಕಾರವು ಶಾಂತಿಯುತ ಪುನರ್‌ಏಕೀಕರಣವನ್ನು ಬಯಸುತ್ತದೆ ಎಂದು ಹೇಳಿದರೂ ತೈವಾನ್‌ಗೆ ಯುದ್ಧದಂತಹ ಇತರ ಆಯ್ಕೆಗಳನ್ನು ಪ್ರಸ್ತಾವಿಸಿದೆ.

ತೈವಾನ್ ಮೇಲೆ ಚೀನಾ ಯಾವ ರೂಪದಲ್ಲಿ ದಾಳಿ ನಡೆಸಬಹುದು?
ಬೀಜಿಂಗ್ ಬೇರೆ ಬೇರೆ ರೀತಿಯಲ್ಲಿ ತೈವಾನ್ ಮೇಲೆ ಆಕ್ರಮಣವನ್ನು ನಡೆಸಬಹುದು. ಮೊದಲನೆಯದು ದ್ವೀಪವನ್ನು ಪೂರ್ಣವಾಗಿ ಆಕ್ರಮಿಸಿಕೊಳ್ಳುವಂತಹದ್ದು. ಅಗಾಧವಾಗಿ ಬೆಲೆಬಾಳುವ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಸೇವೆಗಳ ಮೂಲಕ TSMC ಯಂತಹ ಸಂಸ್ಥೆಗಳ ಒಡೆತನ ಹೊಂದಿರುವ ತೈವಾನ್‌ನ ಮೂಲ ಸೌಕರ್ಯಕ್ಕೆ ಚೀನಾ ಪೆಟ್ಟು ನೀಡಬಹುದು.

ಎರಡನೆಯದು ತೈವಾನ್‌ನ ದಿಗ್ಬಂಧನ. ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿ (PLAN) ದ್ವೀಪದ ಹೊರಾಂಗಣ ವಾಣಿಜ್ಯ ನೆಲೆಗಟ್ಟಿನಿಂದ ಆವರಿಸುವ ಪ್ರಯತ್ನದಲ್ಲಿದೆ.

ಚೀನಾದ ಆಕ್ರಮಣಗಳ ಪರಿಣಾಮಗಳೇನು?
ಒಂದೇ ಅರ್ಥದಲ್ಲಿ ಹೇಳಬೇಕೆಂದರೆ ಇದೊಂದು ದುರಂತವಾಗಿ ಮಾರ್ಪಡಬಹುದು ಎಂದಾಗಿದೆ. ಉಕ್ರೇನ್‌ನ ಯುದ್ಧವು ಊಟ ವಸತಿಗೆ ಪರದಾಡುವಂತೆ ಮಾಡಿತು ಹಾಗೂ ಜಾಗತಿಕವಾಗಿ ಗಂಭೀರ ಹಣದುಬ್ಬರ ಪರಿಸ್ಥಿತಿಯನ್ನುಂಟು ಮಾಡಿತು. ಆರ್ಥಿಕ ಪ್ರಗತಿಗೆ ಯುದ್ಧವು ಹೆಚ್ಚಿನ ಹೊಡೆತವನ್ನು ನೀಡಿದೆ.

ಚೀನಾ ಹಾಗೂ ತೈವಾನ್‌ ದೇಶಗಳು ವಿಶ್ವದ ಆರ್ಥಿಕ ವ್ಯವಸ್ಥಗೆ ಮಹತ್ತರ ಕೊಡುಗೆ ನೀಡಿವೆ. ಉಕ್ರೇನ್ ಹಾಗೂ ರಷ್ಯಾದ ಒಟ್ಟು ಜಿಡಿಪಿ $2 ಟ್ರಿಲಿಯನ್ ಆಗಿದ್ದರೆ ಚೈನಾ ಹಾಗೂ ತೈವಾನ್‌ನ ಒಟ್ಟು ಜಿಡಿಪಿ $18.5 ಟ್ರಿಲಿಯನ್ ಆಗಿದೆ.

ಆಟೋಮೋಟಿವ್‌ ಕೈಗಾರಿಕೆಗಳಿಗೆ ತೀವ್ರ ಪೆಟ್ಟು
ಕೋವಿಡ್-19 ಸಾಂಕ್ರಾಮಿಕದಿಂದ ಸೂಕ್ತವಾದ ಸೆಮಿಕಂಡಕ್ಟರ್‌ಗಳ ಕೊರತೆಯು ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೋಟಿವ್‌ಗಳಂತಹ ಕೈಗಾರಿಕೆಗಳ ಕ್ಷೀಣತೆಗೆ ಕಾರಣವಾಯಿತು. ಈ ಕೊರತೆಗೆ ದುಬಾರಿ ದಂಡ ತೆತ್ತಿದ್ದು ಆ್ಯಪಲ್‌ನಂತಹ ಸಂಸ್ಥೆಯಾಗಿದ್ದು $ 6 ಬಿಲಿಯನ್ ನಷ್ಟವನ್ನು ಅನುಭವಿಸಿದೆ.

ಚೀನಾದ ಆಕ್ರಮಣದಲ್ಲಿ ತೈವಾನ್‌ನ ಸೆಮಿಕಂಡೆಕ್ಟರ್ ವ್ಯಾಪಾರ ನಷ್ಟವಾದರೆ ಇವುಗಳು ಶೀಘ್ರವಾಗಿ ಸುಧಾರಣೆ ಕಾಣುವುದಿಲ್ಲ ಹಾಗೂ ಇದರಿಂದ ಅಂತರಾಷ್ಟ್ರೀಯ ಅಭಿವೃದ್ಧಿಗೆ ಮತ್ತೊಂದು ಹಾನಿ ಸಂಭವಿಸುತ್ತದೆ.

ಕೆಟ್ಟ ಪರಿಸ್ಥಿತಿ ಏನು?
ವಿಶ್ವದ ಪ್ರಬಲ ದೇಶಗಳು ಪರಸ್ಪರ ಹೊಡೆದಾಡಿಕೊಂಡರೆ ಉಂಟಾಗುವ ನಷ್ಟಗಳೇನು ಎಂಬುದಕ್ಕಿಂತಲೂ ಇಲ್ಲಿ ಹೆಚ್ಚು ಮುಖ್ಯವಾಗುವುದು ಯುದ್ಧದ ಹೆಚ್ಚಿನ ಅನಿಯಂತ್ರತೆಯಿಂದ ಪ್ರಪಂಚದಾದ್ಯಂತವಿರುವ ಆರ್ಥಿಕ ವ್ಯವಸ್ಥೆಗೆ ಹಾನಿಯನ್ನುಂಟು ಮಾಡಬಹುದು ಎಂಬುದಾಗಿದೆ.

ಇದನ್ನೂ ಓದಿ:  Chile: ಹೊಸ ಪ್ರಗತಿಪರ ಸಂವಿಧಾನವನ್ನೇ ಘಂಟಾಘೋಷವಾಗಿ ತಿರಸ್ಕರಿಸಿದ ಚಿಲಿಯ ಜನತೆ! ಕಾರಣ?

ಅಮೆರಿಕಾ ಹಾಗೂ ಚೀನಾ ನಡುವಿನ ನೇರ ಸೇನಾ ಯುದ್ಧವು ಅಮೆರಿಕಾದ 5% ಜಿಡಿಪಿಯ ಮೇಲೆ ಪರಿಣಾಮ ಬೀರುತ್ತದೆ ಎಂದಾಗಿದೆ. ಇದು ಬರಿಯ ಒಂದು ಊಹೆ ಮಾತ್ರವಾಗಿದ್ದು ಇದೇ ರೀತಿ ತೈವಾನ್ ಕೂಡ ಆಕ್ರಮಣದಿಂದ ಚೆನ್ನಾಗಿಯೇ ಹೊಡೆತ ತಿನ್ನುತ್ತದೆ ಎಂದಾಗಿದೆ.

ತೈವಾನ್ ಮೇಲೆ ಚೀನಾ ಬಲವಂತವಾಗಿ ಪ್ರಾಬಲ್ಯ ಸಾಧಿಸಬಹುದೇ?
ಚೀನಾ ನಾಯಕ ಕ್ಸಿ ಜಿನ್‌ಪಿಂಗ್ ಹೇಳುವಂತೆ ಪೀಪಲ್ಸ್ ಲಿಬರೇಶನ್ ಆರ್ಮಿಯು ತೈವಾನ್ ಅನ್ನು ವಶಪಡಿಸಿಕೊಳ್ಳುವ ಹಂತಕ್ಕೆ ನವೀಕರಿಸಿಕೊಂಡಿದೆ ಎಂದಾಗಿದೆ. ಚೀನಾದ ಮಿಲಿಟರಿ ಪಡೆಗಳು ತೈವಾನ್ ಮೇಲೆ ಆಕ್ರಮಣ ನಡೆಸಲು ಎಷ್ಟು ಸಿದ್ಧವಾಗಿವೆ ಎಂಬುದನ್ನು ವಿಶ್ಲೇಷಿಸಿವೆ. ಉಕ್ರೇನ್ ಹಾಗೂ ರಷ್ಯಾದ ಯುದ್ಧದ ಪರಿಣಾಮವನ್ನು ತೈವಾನ್ ಯುದ್ಧಕ್ಕೆ ಬಳಸಿಕೊಳ್ಳುವ ನಿರ್ಧಾರವನ್ನು ಚೀನಾ ನಾಯಕ ಹೊಂದಿದ್ದಾರೆ.

ಚೀನಾ ತೈವಾನ್ ಮೇಲೆ ಬಲವಂತವಾಗಿ ಪ್ರಾಬಲ್ಯ ಸಾಧಿಸಬಹುದೇ ಎಂಬುದನ್ನು ವಿಶ್ಲೇಷಿಸಿದಾಗ, ಚೀನಾ ಸೇನೆಯು ಭಿನ್ನವಾಗಿ ಯೋಚಿಸುತ್ತದೆ ಮತ್ತು ಮಾಡುತ್ತದೆ. ಹಡಗುಗಳು, ಕಾರ್ಯಚರಣೆಯ ವೆಚ್ಚ, ಯುದ್ಧದಲ್ಲಿ ಉಂಟಾಗುವ ಸಾವು ನೋವುಗಳು ಹೀಗೆ ಪ್ರತಿಯೊಂದಕ್ಕೂ ಚೀನಾ ಭರ್ಜರಿಯಾಗಿಯೇ ಪಾವತಿಸಬೇಕಾಗುತ್ತದೆ ಎಂಬುದು ಪರಿಣಿತರ ವಾದವಾಗಿದೆ. ಪ್ರಾಬಲ್ಯ ಸ್ಥಾಪಿಸಲು ಚೀನಾ ಏನು ಬೇಕಾದರೂ ಮಾಡಬಹುದು. ಒಟ್ಟಾರೆ ಇದು ನೆತ್ತರು ಹರಿಸುವ ಯುದ್ಧವಾಗಲಿದೆ.

ಯುದ್ಧ ಉಪಕರಣಗಳಿಂದ ಬಳಲುತ್ತಿರುವ ಚೀನಾ
ಚೀನೀ ಪಡೆಗಳು ತೈವಾನ್‌ನ ತೀರಕ್ಕೆ ಬಂದರೂ, ಯುದ್ಧದ ತೊಂದರೆಗಳಿಂದಾಗಿ ತೈವಾನ್‌ನ ಉಭಯಚರ ಆಕ್ರಮಣವು ಕ್ಸಿ ಜಿನ್‌ಪಿಂಗ್ ಮತ್ತು ಚೀನೀ ಕಮ್ಯುನಿಸ್ಟ್ ಪಕ್ಷಕ್ಕೆ ಗಮನಾರ್ಹ ರಾಜಕೀಯ ಮತ್ತು ಮಿಲಿಟರಿ ಅಪಾಯವನ್ನುಂಟುಮಾಡುತ್ತದೆ ಎಂದು ಪೆಂಟಗನ್ ವರದಿ ಮಾಡಿದೆ.

ಯುಎಸ್ ನೇವಲ್ ವಾರ್ ಕಾಲೇಜ್ ತಿಳಿಸಿರುವಂತೆ ಚೀನಾ ಇನ್ನೂ ಕೆಲವೊಂದು ಉಪಕರಣಗಳ ಕೊರತೆಯನ್ನು ಎದುರಿಸುತ್ತಿದ್ದು ತೈವಾನ್ ಆಕ್ರಮಣವನ್ನು ತಡೆಯಲು ಬೇಕಾದ ಕೌಶಲ್ಯದ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದೆ. ಚೀನಾದ ಉಭಯಚರ ಪಡೆಗೆ ತೈವಾನ್‌ನ ಮೇಲೆ ದೊಡ್ಡ ಪ್ರಮಾಣದ ಆಕ್ರಮಣವನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವಿಲ್ಲ ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಡೆನ್ನಿಸ್ ಜೆ. ಬ್ಲಾಸ್ಕೊ ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ.

ಒಂದೆಡೆಯಲ್ಲಿ ಚೀನಾ ಯುದ್ಧ ಕೌಶಲ್ಯವನ್ನು ಸುಧಾರಿಸಿಕೊಳ್ಳುತ್ತಿದೆ ಎಂಬುದು ವರದಿಯಾಗಿದ್ದು ತೈವಾನ್ ಕೂಡ ರಕ್ಷಣಾ ಕೋಟೆಯನ್ನು ಬಲವಾಗಿ ನಿರ್ಮಿಸಿಕೊಳ್ಳುತ್ತಿದೆ.

ತೈವಾನ್‌ನತ್ತ ದೃಷ್ಟಿ ನೆಟ್ಟಿರುವ ಚೀನಾ
ಪೀಪಲ್ಸ್ ಲಿಬರೇಶನ್ ಆರ್ಮಿಯ 95 ನೇ ವಾರ್ಷಿಕೋತ್ಸವದ ಸಮಯದಲ್ಲಿ ಮಿಲಿಟರಿ ಆಧುನೀಕರಣದ ಪ್ರಮುಖ ಭಾಗಗಳನ್ನು ಸಾಧಿಸುವ ಕ್ಸಿಯವರ ಗುರಿಯನ್ನು ಉಲ್ಲೇಖಿಸಿದೆ. ತೈವಾನ್ ವಶಪಡಿಸಿಕೊಳ್ಳಲು ಚೀನಾ ಮುಂದಾಗಬಹುದು ಎಂದು ಸೆನೆಟ್ ಸಮಿತಿಗೆ ದೊರೆತಿರುವ ಮಾಹಿತಿಯು ಯುದ್ಧದ ಚರ್ಚೆಯನ್ನು ಹುಟ್ಟುಹಾಕಿತು.

ಯುದ್ಧವು ಭಾರತದ ಮೇಲೆ ಪ್ರಭಾವ ಬೀರಲಿದೆಯೇ?
ಸೆಮಿಕಂಡಕ್ಟರ್‌ಗಳ ನಷ್ಟವು ಯುದ್ಧದಿಂದ ಸಂಭವಿಸಿದಲ್ಲಿ ಭಾರತ ಕೂಡ ಹಾನಿಗೆ ಒಳಗಾಗುತ್ತದೆ. ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಹಾನಿಯನ್ನುಂಟು ಮಾಡುತ್ತದೆ. ವರ್ಷಗಳಿಂದ, ಭಾರತವು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ತೈವಾನ್‌ನೊಂದಿಗೆ ತನ್ನದೇ ಆದ ಸಂಬಂಧವನ್ನು ಹೆಚ್ಚಿಸುತ್ತಿದೆ.

ಕಳೆದ ವರ್ಷ, ಭಾರತ ಮತ್ತು ತೈವಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರವು $ 7 ಶತಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ತೈವಾನ್‌ನ ಸಂಸ್ಥೆಗಳು ಭಾರತದಲ್ಲಿ $2.3 ಶತಕೋಟಿಗೂ ಹೆಚ್ಚು ಹೂಡಿಕೆ ಮಾಡಿವೆ. ಉಭಯ ದೇಶಗಳು ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡುತ್ತಿವೆ ಮತ್ತು ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಕೇಂದ್ರವನ್ನು ರಚಿಸಲು ಮಾರ್ಗಗಳನ್ನು ರೂಪಿಸುತ್ತಿವೆ ಎಂಬುದು ವರದಿಯಾಗಿದೆ.

ಇದನ್ನೂ ಓದಿ: Explained: ಚೀನಾದ ಆರ್ಥಿಕ ಬಿಕ್ಕಟ್ಟು ವಿಶ್ವದಾದ್ಯಂತ ಹೇಗೆ ಪರಿಣಾಮ ಬೀರಲಿದೆ? ಇದ್ರಿಂದ ಭಾರತಕ್ಕೆ ಆತಂಕವೋ, ಅನುಕೂಲವೋ?

ಭಾರತದ ಎಚ್ಚರಿಕೆಯ ಮತ್ತು ಬದ್ಧವಲ್ಲದ ರಾಜತಾಂತ್ರಿಕತೆಯ ಹೊರತಾಗಿಯೂ ತೈವಾನ್ ತೂಗುಗತ್ತಿಯಲ್ಲಿರುವುದರಿಂದ ಈ ಆರ್ಥಿಕ ಸಹಕಾರದ ಹೆಚ್ಚಿನ ಭಾಗವು ಈಗ ಅಪಾಯದಲ್ಲಿದೆ. ಬೀಜಿಂಗ್ ತೈವಾನ್‌ನ ಪ್ರದೇಶಗಳನ್ನು ಸುತ್ತುವರಿಯಲು ಪ್ರಯತ್ನಿಸುತ್ತಿರುವುದು ಇದು ಮೊದಲೇನಲ್ಲ. ಬೀಜಿಂಗ್ ಯುದ್ಧವಿಮಾನಗಳು ಮತ್ತು ಹಡಗುಗಳನ್ನು ರವಾನಿಸಿದ್ದು ದ್ವೀಪವನ್ನು ಸುತ್ತವರಿಯುವ ಸನ್ನಾಹದಲ್ಲಿದೆ ಎಂದು ಈ ಹಿಂದೆ ಚೀನಾದ ಸರ್ಕಾರಿ ಗ್ಲೋಬಲ್ ಟೈಮ್ಸ್ ಬೀಜಿಂಗ್ ವರದಿ ಮಾಡಿತ್ತು.
Published by:Ashwini Prabhu
First published: