• Home
  • »
  • News
  • »
  • explained
  • »
  • Caste Reservation: ಚುನಾವಣೆ ಹೊಸ್ತಿಲಲ್ಲಿ ಜಾತಿ ಓಲೈಕೆ ರಾಜಕಾರಣ! 'ಮೀಸಲಾತಿ' ಅಸ್ತ್ರ ಬಳಕೆಗೆ ಸಮುದಾಯಗಳ ತಯಾರಿ

Caste Reservation: ಚುನಾವಣೆ ಹೊಸ್ತಿಲಲ್ಲಿ ಜಾತಿ ಓಲೈಕೆ ರಾಜಕಾರಣ! 'ಮೀಸಲಾತಿ' ಅಸ್ತ್ರ ಬಳಕೆಗೆ ಸಮುದಾಯಗಳ ತಯಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸಮಾವೇಶ, ರ್ಯಾಲಿ ಮಾಡುತ್ತಾ, ಮುಂಬರುವ ಚುನಾವಣಾ ಮಹಾಯುದ್ಧಕ್ಕೆ ರಣಕಹಳೆ ಊದುತ್ತಿದೆ. ಈ ನಡುವೆ ಜಾತಿ ಮೀಸಲಾತಿ ಅಸ್ತ್ರಗಳ ಬಳಕೆಗೆ ಬಿಜೆಪಿ ಸಜ್ಜಾಗಿದೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಚುನಾವಣೆ ಬಂದಾಗ ಮೀಸಲಾತಿ ಅಸ್ತ್ರ ಬಳಸಲ್ಪಡುತ್ತಿದೆ. ಹಾಗಾದರೆ ಜಾತಿ ಮೀಸಲಾತಿ ಅಸ್ತ್ರ ಚುನಾವಣೆ ಗೆಲುವಿಗೆ ಸಹಾಯ ಮಾಡುತ್ತದೆಯೇ? ಜಾತಿ ಮೀಸಲಾತಿ ಎನ್ನುವುದು ವೋಟ್ ತಂದುಕೊಡುತ್ತದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಮುಂದೆ ಓದಿ ...
  • Share this:

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka state assembly elections) ಇನ್ನೇನು ಕೆಲವೇ ದಿನಗಳಲ್ಲಿ ಮುಹೂರ್ತ ಫಿಕ್ಸ್ ಆಗಲಿದೆ. 2023ರ ಏಪ್ರಿಲ್‌ನಲ್ಲಿ ಚುನಾವಣೆ (Election) ಘೋಷಣೆಯಾಗುವ ಸಾಧ್ಯತೆ ಇದೆ. 224 ವಿದಾನಸಭಾ ಕ್ಷೇತ್ರಗಳಲ್ಲಿ (Vidanasabha constituencies) ಚುನಾವಣೆ ನಡೆಯಲಿದ್ದು, 2 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಚುನಾವಣೆ ಜ್ವರ ಏರುತ್ತಿದೆ. ಈಗಾಗಲೇ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (JDS Candidates list) ರಿಲೀಸ್ ಮಾಡಿದೆ. ಮತ್ತೊಂದೆಡೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಸಮಾವೇಶ, ರ್ಯಾಲಿ ಮಾಡುತ್ತಾ, ಮುಂಬರುವ ಚುನಾವಣಾ ಮಹಾಯುದ್ಧಕ್ಕೆ ರಣಕಹಳೆ ಊದುತ್ತಿದೆ. ಈ ನಡುವೆ ಜಾತಿ ಮೀಸಲಾತಿ ಅಸ್ತ್ರಗಳ (caste reservation) ಬಳಕೆಗೆ ಬಿಜೆಪಿ ಸಜ್ಜಾಗಿದೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಚುನಾವಣೆ ಬಂದಾಗ ಮೀಸಲಾತಿ ಅಸ್ತ್ರ ಬಳಸಲ್ಪಡುತ್ತಿದೆ. ಹಾಗಾದರೆ ಜಾತಿ ಮೀಸಲಾತಿ ಅಸ್ತ್ರ ಚುನಾವಣೆ ಗೆಲುವಿಗೆ ಸಹಾಯ ಮಾಡುತ್ತದೆಯೇ? ಜಾತಿ ಮೀಸಲಾತಿ ಎನ್ನುವುದು ವೋಟ್ ತಂದುಕೊಡುತ್ತದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…


ರಾಜಕೀಯದಲ್ಲಿ ಮೀಸಲಾತಿ ಅಸ್ತ್ರ


2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ, ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಮೀಸಲಾತಿ ಅಸ್ತ್ರ ಬಳಸಲು ಸಜ್ಜಾಗಿದೆ. ಒಕ್ಕಲಿಗರು ಮತ್ತು ಲಿಂಗಾಯತರು - ಎರಡು ಮೇಲ್ಜಾತಿ, ಪ್ರಭಾವಿ ಸಮುದಾಯಗಳು - ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ದೊಡ್ಡ ಹೋರಾಟಕ್ಕೆ ಸಜ್ಜಾಗಿದೆ.


ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಿಸಿದ್ದ ಸರ್ಕಾರ


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಅಕ್ಟೋಬರ್‌ನಲ್ಲಿ ಎಸ್‌ಸಿ ಮೀಸಲಾತಿ ಕೋಟಾವನ್ನು ಶೇಕಡಾ 15 ರಿಂದ 17 ಕ್ಕೆ ಮತ್ತು ಎಸ್‌ಟಿಗಳಿಗೆ ಶೇಕಡಾ 3 ರಿಂದ 7 ಕ್ಕೆ ಹೆಚ್ಚಿಸಿದೆ. ಇದು ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದ ಒಟ್ಟಾರೆ ಶೇಕಡಾ 50ರ ಮೀಸಲಾತಿ ಮಿತಿಯನ್ನು ದಾಟಿದೆ.


ಇದನ್ನೂ ಓದಿ: Karnataka Major Incidents: ಹಿಜಾಬ್ ವಿವಾದದ ಬಲೆ, ಹರ್ಷ-ಪ್ರವೀಣ್ ಕೊಲೆ! 2022ರಲ್ಲಿ ಕರ್ನಾಟಕದ ಪ್ರಮುಖ ಘಟನೆ, ವಿವಾದಗಳು


ರಾಜ್ಯ ರಾಜಕೀಯದಲ್ಲಿ ಒಕ್ಕಲಿಗರು, ಲಿಂಗಾಯತರ ಹಿಡಿತ


ಲಿಂಗಾಯತರು ಕರ್ನಾಟಕದ ಜನರಲ್ಲಿ ಸರಿಸುಮಾರು 17 ಪ್ರತಿಶತದಷ್ಟಿದ್ದರೆ, ಒಕ್ಕಲಿಗರು ಸುಮಾರು ಶೇಕಡಾ 14ರಷ್ಟಿದ್ದಾರೆ. ಎರಡೂ ಸಮುದಾಯಗಳು ರಾಜ್ಯದ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಯಶಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಸಿಎಂ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ (ಬಿಜೆಪಿ), ಎಸ್‌ಆರ್ ಬೊಮ್ಮಾಯಿ (ಕಾಂಗ್ರೆಸ್) ಮತ್ತು ಜೆಎಚ್ ಪಟೇಲ್ (ಜೆಡಿಎಸ್) ಎಲ್ಲರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ಬಿಜೆಪಿಯ ಬೆಂಬಲದ ನೆಲೆಯಾಗಿ ನೋಡಲಾಗುತ್ತದೆ ಆದರೆ ಹಳೆಯ ಮೈಸೂರು ಪ್ರದೇಶವನ್ನು ನಿಯಂತ್ರಿಸಲು ಪಕ್ಷಕ್ಕೆ ಒಕ್ಕಲಿಗರ ಬೆಂಬಲವೂ ಬೇಕಿರುವುದರಿಂದ ಅದು ಅಷ್ಟು ಸುಲಭವಲ್ಲ.


 ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಆಗ್ರಹ


ಒಕ್ಕಲಿಗ ಸಮುದಾಯಕ್ಕೆ 3 ಎ ಅಡಿ ನೀಡುತ್ತಿರುವ ಶೇ. 4ರಷ್ಟು ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ. 12 ರಷ್ಟು ಏರಿಸಬೇಕೆಂದು ಒಕ್ಕಲಿಗ ಸಂಘಟನೆಗಳು  ಒತ್ತಾಯಿಸಿವೆ. ರಾಜ್ಯದ ಜನಸಂಖ್ಯೆಯ ಶೇ. 16 ರಷ್ಟು ಒಕ್ಕಲಿಗ ಸಮುದಾಯದ ಜನರಿದ್ದಾರೆ. ಈ ಹಿಂದೆ ಜನಸಂಖ್ಯೆ ಕಡಿಮೆಯಿದ್ದ ವೇಳೆ ನೀಡುತ್ತಿದ್ದ ಶೇ.4 ರಷ್ಟು ಮೀಸಲಾತಿ ಇದೀಗ ಎಲ್ಲರಿಗೂ ತಲುಪುತ್ತಿಲ್ಲ. ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಶೇ. 12ಕ್ಕೆ ಮೀಸಲಾತಿ ಏರಿಸಬೇಕೆಂಬುದು ಸಮುದಾಯದ ಆಗ್ರಹವಾಗಿದೆ.


ಲಿಂಗಾಯತರಿಗೆ ಏನು ಬೇಕು?


ಮತ್ತೊಂದೆಡೆ ಲಿಂಗಾಯತರು ತಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕು ಅಂತ ಆಗ್ರಹವೂ ಕೇಳಿ ಬಂದಿದೆ. ಕರ್ನಾಟಕ ಸರ್ಕಾರಕ್ಕೆ ಅಂತಿಮ ಗಡುವುಗಳನ್ನು ನೀಡಿತ್ತು. ಲಿಂಗಾಯತ ಸಮುದಾಯವು ಪ್ರಸ್ತುತ 5 ಪ್ರತಿಶತ ಕೋಟಾದೊಂದಿಗೆ ವರ್ಗ 3B ಅಡಿಯಲ್ಲಿ ಬರುತ್ತದೆ ಆದರೆ 15 ಪ್ರತಿಶತ ಮೀಸಲಾತಿಯೊಂದಿಗೆ ವರ್ಗ 2A ಅಡಿಯಲ್ಲಿ ಸ್ಥಳಾಂತರಿಸಲು ಆಗ್ರಹಿಸಲಾಗುತ್ತಿದೆ.


ಸಮಾವೇಶ ನಡೆಸಲು ಲಿಂಗಾಯತರ ನಿರ್ಧಾರ


ಲಿಂಗಾಯತಗಳ ಉಪಪಂಗಡವಾದ ಪಂಚಮಸಾಲಿಗಳು ಸಮುದಾಯದ 70 ಪ್ರತಿಶತವನ್ನು ಒಳಗೊಂಡಿದೆ. ಸಮುದಾಯದ ಪ್ರಭಾವಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾವು ಡಿಸೆಂಬರ್ 23, ಶುಕ್ರವಾರದಂದು ದಾವಣಗೆರೆಯಲ್ಲಿ 50,000 ಕ್ಕೂ ಹೆಚ್ಚು ಜನರೊಂದಿಗೆ ಮೂರು ದಿನಗಳ ಸಮಾವೇಶವನ್ನು ನಡೆಸಲು ಯೋಜಿಸಿದೆ ಎನ್ನಲಾಗುತ್ತಿದೆ.


ಒಕ್ಕಲಿಗರ ಪ್ರಮುಖ ಬೇಡಿಕೆಗಳೇನು?


ಮತ್ತೊಂದೆಡೆ, ಒಕ್ಕಲಿಗರು ತಮ್ಮ OBC ಕೋಟಾವನ್ನು 4 ಪ್ರತಿಶತದಿಂದ 12 ಪ್ರತಿಶತದಷ್ಟು ಹೆಚ್ಚಿಸಲು ಜನವರಿ 23, 2023ರವೆರಗೆ ಗಡುವು ನೀಡಿದ್ದಾರೆ. ಅವರು ಪ್ರಸ್ತುತ ವರ್ಗ 3A ಅಡಿಯಲ್ಲಿ ಬರುತ್ತಾರೆ.


ಇದನ್ನೂ ಓದಿ: Explainer: ಗುಜರಾತ್​ನ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಕಮಾಲ್, ಹೇಗೆ? ಇಲ್ಲಿದೆ ವಿವರ


ಇತರೇ ಸಮುದಾಯಗಳಿಂದಲೂ ಮೀಸಲಾತಿ ಬೇಡಿಕೆ


ಇದರ ನಡುವೆ ಹಲವು ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸಿವೆ. ಚುನಾವಣೆ ಹೊಸ್ತಿಲಲ್ಲೇ ಹೋರಾಟದ ಎಚ್ಚರಿಕೆ ನೀಡಿವೆ. ಕುರುಬ ಮತ್ತು ವಾಲ್ಮೀಕಿ-ನಾಯಕರಂತಹ ಇತರ ಸಮುದಾಯಗಳು ಕೂಡ ಮೀಸಲಾತಿ ಹೆಚ್ಚಳಕ್ಕೆ ತಮ್ಮ ಬೇಡಿಕೆಗಳನ್ನು ಎತ್ತಿದ್ದಾರೆ. ಪ್ರಸ್ತುತ, ಕರ್ನಾಟಕವು ಒಬಿಸಿಗಳಿಗೆ 32%, ಎಸ್‌ಸಿಗಳಿಗೆ 15% ಮತ್ತು ಎಸ್‌ಟಿಗಳಿಗೆ 3%, ಒಟ್ಟು 50% ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ನಿಂದ ಮಿತಿಗೊಳಿಸಿದೆ.

Published by:Annappa Achari
First published: