Explained: ನಿಮ್ಮ ಖಾಸಗಿ ಫೋಟೋ, ವಿಡಿಯೋ ವೈರಲ್ ಆಗಿದ್ರೆ ಹೀಗೆ ಮಾಡಿ; ತಕ್ಷಣ ಪರಿಹಾರ ಸಿಗುತ್ತೆ

ನೀವು ಯಾವುದೇ ಸೈಟ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ ಎಂಎಂಎಸ್ ಅಥವಾ ಛಾಯಾಚಿತ್ರಗಳನ್ನು ಅಳಿಸಿ ಹಾಕಲು ಅಥವಾ ಅಲ್ಲಿಂದ ತೆಗೆದುಹಾಕಲು ಅನೇಕ ಮಾರ್ಗಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಯಾವಾಗ ಯಾರ ವೀಡಿಯೋ ಎಲ್ಲಿಂದ ರೆಕಾರ್ಡ್ ಮಾಡಿ ಆನ್ಲೈನ್​ನಲ್ಲಿ ಹರಿಬಿಟ್ಟಿರುತ್ತಾರೆ ಅಂತ ಹೇಳುವುದೇ ಕಷ್ಟವಾಗಿದೆ ನೋಡಿ. ಇದಕ್ಕೆ ಉದಾಹರಣೆ ಎಂದರೆ ಇತ್ತೀಚೆಗೆ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಖಾಸಗಿ ವೀಡಿಯೋಗಳು ಸೋರಿಕೆಯಾಗಿರುವ ಸುದ್ದಿಗಳು ಅಂತ ಹೇಳಬಹುದು. ಈ ಸುದ್ದಿ ಇಡೀ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್​ನಲ್ಲಿರುವ ವಿದ್ಯಾರ್ಥಿನಿಯರಿಗೆ ಮತ್ತು ಅವರ ಪೋಷಕರಿಗೆ ದೊಡ್ಡ ತಲೆನೋವಾಗಿತ್ತು. ನೀವು ಯಾವುದೇ ಸೈಟ್ ಅಥವಾ ಸಾಮಾಜಿಕ ಮಾಧ್ಯಮ (Social Media Viral) ಪ್ಲಾಟ್ಫಾರ್ಮ್ ನಲ್ಲಿ ಅಪ್ಲೋಡ್ ಮಾಡಿದ ಎಂಎಂಎಸ್ ಅಥವಾ ಛಾಯಾಚಿತ್ರಗಳನ್ನು ಅಳಿಸಿ ಹಾಕಲು (How to Remove Leaked Content) ಅಥವಾ ಅಲ್ಲಿಂದ ತೆಗೆದುಹಾಕಲು ಅನೇಕ ಮಾರ್ಗಗಳಿವೆ.

ಹೌದು, ಇದೇ ಸೆಪ್ಟೆಂಬರ್ 17ನೇ ತಾರೀಖಿನಂದು ಮಹಿಳಾ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಖಾಸಗಿ ಮತ್ತು ಆಕ್ಷೇಪಾರ್ಹ ವೀಡಿಯೋಗಳು ಆನ್ಲೈನ್​ನಲ್ಲಿ ಸೋರಿಕೆಯಾಗಿವೆ (Leaked Photos) ಎಂದು ವಿದ್ಯಾರ್ಥಿಗಳು ಆರೋಪಿಸಿದ ನಂತರ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಭಾರಿ ಪ್ರತಿಭಟನೆಗಳು ಭುಗಿಲೆದ್ದವು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಸ್ನಾನಗೃಹದಲ್ಲಿ ಇತರ ಮಹಿಳೆಯರನ್ನು ರಹಸ್ಯವಾಗಿ ಚಿತ್ರೀಕರಿಸಿ ಅದನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.

ಸುಮಾರು 60 ಹುಡುಗಿಯರು ಹಾಸ್ಟೆಲ್​ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮತ್ತೊಂದೆಡೆ,ವಿಶ್ವವಿದ್ಯಾಲಯವು ಹೊರಡಿಸಿದ ಹೇಳಿಕೆಯಲ್ಲಿ ಕೇವಲ ಒಂದು ವೀಡಿಯೋ ಆನ್ಲೈನ್ ನಲ್ಲಿ ಹರಿದಾಡುತ್ತಿದೆ. ಇನ್ನೂ ಬೇರೆ ಬೇರೆ ವೀಡಿಯೋಗಳ ಬಗ್ಗೆ ಕೇಳಿ ಬರುತ್ತಿರುವಂತಹ ಆರೋಪಗಳು ಇನ್ನೂ ಸಾಬೀತಾಗಿಲ್ಲ ಎಂದು ತಿಳಿಸಿದ್ದಾರೆ.

ಒಪ್ಪಿಗೆಯಿಲ್ಲದೆ ಇನ್ನೊಬ್ಬರ ಫೋಟೋ, ವೀಡಿಯೋ ಹಂಚಿಕೊಂಡರೆ ಅದು ಅಪರಾಧ
ಹೀಗೆ ಒಬ್ಬರ ಒಪ್ಪಿಗೆಯಿಲ್ಲದೆ ಹಂಚಿಕೊಳ್ಳಲಾದ ಯಾವುದೇ ಆಪ್ತ ಚಿತ್ರ ಅಥವಾ ವೀಡಿಯೋವು ಕೇವಲ ದ್ರೋಹ ಮಾತ್ರವಲ್ಲದೇ, ಅದು ಕಾನೂನಿನ ಪ್ರಕಾರ ಅಪರಾಧವೂ ಹೌದು. ಸಾಮಾಜಿಕ ಮಾಧ್ಯಮದಲ್ಲಿ ಕೋಟ್ಯಾಂತರ ಜನರು ಸುಲಭವಾಗಿ ಬೇರೆಯವರು ಹಂಚಿಕೊಂಡಿರುವ ಫೋಟೋಗಳು ಮತ್ತು ವಿಡಿಯೋಗಳು ಕೆಲವೇ ಕೆಲವು ಸೆಕೆಂಡುಗಳಲ್ಲಿ ವೈರಲ್ ಆಗಬಹುದು.

ಆದ್ದರಿಂದ, ಅಂತಹ ದುರದೃಷ್ಟಕರ ಘಟನೆ ನಿಮ್ಮ ಆಪ್ತರ ಜೊತೆ ಅಥವಾ ನಿಮ್ಮ ಜೊತೆ ಸಂಭವಿಸಿದರೆ, ನೀವು ಏನು ಮಾಡಬೇಕು? ಅಂತಹ ಪರಿಸ್ಥಿತಿಯಲ್ಲಿ, ನಮ್ಮ ತಲೆಗೆ ಬರುವ ಮೊದಲ ವಿಷಯವೆಂದರೆ ಅವುಗಳನ್ನು ಮೊದಲು ಆನ್ಲೈನ್​ನಿಂದ ಹೇಗೆ ತೆಗೆದುಹಾಕುವುದು ಎಂಬುದು.

ಪೊಲೀಸರನ್ನು ಸಂಪರ್ಕಿಸಿ
ಅಂತಹ ಸಂದರ್ಭಗಳಲ್ಲಿ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಅದು ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವುದು ಮತ್ತು ಸೈಬರ್ ಸೆಲ್​ಗೆ ಹೋಗಿ ದೂರು ದಾಖಲಿಸುವುದು.

ನಿಮ್ಮ ದೂರಿನ ನಂತರ, ಪೊಲೀಸರು ವೆಬ್‌ಸೈಟ್ ಮಾಲೀಕರು ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಂಪರ್ಕಿಸುತ್ತಾರೆ. ನಿಮ್ಮ ದೂರು ಸರಿಯಾಗಿದೆ ಎಂದು ಸಾಬೀತಾದರೆ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ವೆಬ್ಸೈಟ್ ಮಾಲೀಕರಿಗೆ ದೂರು ನೀಡಿ
ಅಂತಹ ಫೋಟೋಗಳನ್ನು ಅಥವಾ ವೀಡಿಯೋಗಳನ್ನು ಆನ್ಲೈನ್ ನಿಂದ ತೆಗೆದುಹಾಕಲು ಮತ್ತೊಂದು ಮಾರ್ಗವೆಂದರೆ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಮಾಲೀಕರನ್ನು ನೇರವಾಗಿ ಸಂಪರ್ಕಿಸುವುದು.

ಮಾಲೀಕರನ್ನು ಸಂಪರ್ಕಿಸುವಾಗ ನೀವು ತೊಂದರೆಗಳನ್ನು ಎದುರಿಸಿದರೆ, ಎಂಬ ಥರ್ಡ್ ಪಾರ್ಟಿ ವೆಬ್‌ಸೈಟ್ ಅನ್ನು ಸಂಪರ್ಕಿಸಿ, ಅದು ಎಲ್ಲಾ ರುಜುವಾತುಗಳು ಮತ್ತು ಆ ವೆಬ್‌ಸೈಟ್ ಗಳ ಸಂಪೂರ್ಣ ಮಾಲೀಕತ್ವದ ವಿವರಗಳನ್ನು ಪಟ್ಟಿ ಮಾಡುತ್ತದೆ. ವೆಬ್​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಇದರ ಮೂಲಕ ನೀವು ಸೈಟ್ ಮಾಲೀಕರನ್ನು ಸಂಪರ್ಕಿಸಬಹುದು ಮತ್ತು ಆ ವಿಡಿಯೋವನ್ನು ತೆಗೆದುಹಾಕಲು ವಿನಂತಿಸಬಹುದು. ವಿಡಿಯೋವು ಯಾವುದೇ ಆಕ್ಷೇಪಾರ್ಹ ಸೈಟ್ ಗೆ ಹೋದರೆ, ಸೈಟ್ ನ ಪುಟದ ಕೆಳಗೆ ನೀವು ರಿಪೋರ್ಟ್ ಆಯ್ಕೆಯನ್ನು ಪಡೆಯುತ್ತೀರಿ.

ಗೂಗಲ್ ಶೋಧ ಫಲಿತಾಂಶಗಳಿಂದ ತೆಗೆದು ಹಾಕಿ
ಆ ಆಕ್ಷೇಪಾರ್ಹ ಫೋಟೋ ಅಥವಾ ಎಂಎಂಎಸ್ ಗೂಗಲ್ ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಂಡರೆ, ಅದನ್ನು ಕೆಳಗೆ ಎಳೆಯಲು ನೀವು ಗೂಗಲ್ ಅನ್ನು ಸಹ ಸಂಪರ್ಕಿಸಬಹುದು. ಇದಕ್ಕಾಗಿ, ನೀವು Google (support.google.com) ನ ಸಪೋರ್ಟ್ ಪುಟಕ್ಕೆ ಹೋಗಬೇಕು ಮತ್ತು ಅಲ್ಲಿ ಪಟ್ಟಿ ಮಾಡಲಾದ ಹಂತಗಳನ್ನು ಅನುಸರಿಸಬೇಕು.
Published by:ಗುರುಗಣೇಶ ಡಬ್ಗುಳಿ
First published: