Explained: ಮಂಕಿಪಾಕ್ಸ್ ಬರದಂತೆ ತಡೆಯೋದು ಹೇಗೆ? ಬಂದರೆ ಏನು ಮಾಡಬೇಕು?

ಮಂಕಿಪಾಕ್ಸ್ ವೈರಸ್‌ಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದ ಮುನ್ನೆಚ್ಚರಿಕೆ ಕ್ರಮಗಳು ಹೀಗಿವೆ.

ಮಂಕಿಪಾಕ್ಸ್ ರೋಗದ ಗ್ರಾಫಿಕ್ಸ್ ಚಿತ್ರ

ಮಂಕಿಪಾಕ್ಸ್ ರೋಗದ ಗ್ರಾಫಿಕ್ಸ್ ಚಿತ್ರ

 • Share this:
ಯುಎಸ್, ಯುರೋಪ್, ಆಸ್ಟ್ರೇಲಿಯಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿನ ಜನರು ಸೇರಿದಂತೆ ಆರೋಗ್ಯ ತಜ್ಞರನ್ನು ತಲ್ಲಣಗೊಳಿಸಿದೆ ಭೀಕರ ಮಂಕಿಪಾಕ್ಸ್ ರೋಗ (Monkeypox). ಭಾರತದಲ್ಲೂ 2 ಪ್ರಕರಣಗಳು ಖಚಿತಗೊಂಡಿವೆ. ಇದು ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಈ ವಾರದಲ್ಲಿ ಆಫ್ರಿಕಾದ (Africa) ಹೊರಗಿನ 22 ದೇಶಗಳಲ್ಲಿ 346 ದೃಢಪಡಿಸಿದ ಮತ್ತು ಶಂಕಿತ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಕಂಡುಬರುತ್ತಿರುವ ಹೆಚ್ಚಿನ ಹೊಸ ಪ್ರಕರಣಗಳು ಲೈಂಗಿಕತೆಯ ಮೂಲಕ ಹರಡುತ್ತಿವೆ ಎಂದು ತಿಳಿದು ಬಂದಿದೆ. ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆಯು ಯಾರೂ ಬೇಕಾದರೂ ಈ ಸೋಂಕಿಗೆ ಒಳಗಾಗಬಹುದು ಎಂದು ಎಚ್ಚರಿಸಿದೆ. ಮತ್ತು ಮಕ್ಕಳು, ಗರ್ಭಿಣಿಯರು, ಕಡಿಮೆ ರೋಗನಿರೋಧಕ ಶಕ್ತಿ (Low immunity) ಹೊಂದಿರುವವರು ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದೆ.

ನಿಮಗೆಲ್ಲಾ ಈಗಾಗ್ಲೇ ತಿಳಿದಿರುವಂತೆ ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ಅಪರೂಪದ ಕಾಯಿಲೆ. ಮಂಕಿಪಾಕ್ಸ್ ವೈರಸ್ ಸಿಡುಬುಗೆ ಕಾರಣವಾಗುವ ವೈರಸ್ ವೇರಿಯೊಲಾ ವೈರಸ್ ತಳಿಯ ಒಂದು ಭಾಗವಾಗಿದೆ. ಮಂಕಿಪಾಕ್ಸ್ ರೋಗಲಕ್ಷಣಗಳು ಸಿಡುಬು ರೋಗಲಕ್ಷಣಗಳನ್ನು ಹೋಲುತ್ತವೆಯಾದರೂ ಇದು ಹೆಚ್ಚು ಮಾರಣಾಂತಿಕವಾಗಿದೆ ಎಂದು ತಿಳಿದು ಬಂದಿದೆ. ಸಿಡುಬು ಲಸಿಕೆಗಳನ್ನೇ ಈ ರೋಗಕ್ಕೆ ನೀಡಲಾಗುತ್ತದೆ. ಇದು ಮಂಕಿಪಾಕ್ಸ್ ವಿರುದ್ಧ 85% ರಷ್ಟು ಪರಿಣಾಮಕಾರಿ ಎಂದು ಕೂಡ ಸಾಬೀತಾಗಿದೆ.

ಸಾಮೂಹಿಕ ವ್ಯಾಕ್ಸಿನೇಷನ್ ಅಗತ್ಯವಿದೆಯೇ?
ಪ್ರಕರಣಗಳ ಉಲ್ಬಣವನ್ನು ತಗ್ಗಿಸಲು ಸಾಮೂಹಿಕ ವ್ಯಾಕ್ಸಿನೇಷನ್ ಅಗತ್ಯವಿರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ. ಆದರೆ, ಏಕಾಏಕಿ ಹರಡುತ್ತಿರುವ ಮತ್ತು ಅದರ ಕಾರಣದ ಬಗ್ಗೆ ಸ್ಪಷ್ಟತೆಯ ಕೊರತೆಯಿಂದಾಗಿ, ಸಾರ್ವಜನಿಕ ಆರೋಗ್ಯ ಸಂಸ್ಥೆಯು ಅದರ ಹರಡುವಿಕೆಯನ್ನು ನಿಯಂತ್ರಿಸಲು ನೈರ್ಮಲ್ಯ ಮತ್ತು ಸುರಕ್ಷಿತ ಲೈಂಗಿಕತೆಗೆ ಜನರಿಗೆ ತಿಳಿ ಹೇಳಿದೆ.

ಮಂಕಿಪಾಕ್ಸ್ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳು
ಹೀಗಾಗಿ ಈ ಮಾರಕ ಮಂಕಿಪಾಕ್ಸ್ ವಿರುದ್ಧ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ವೈರಸ್‌ಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದ ಮುನ್ನೆಚ್ಚರಿಕೆ ಕ್ರಮಗಳು ಹೀಗಿವೆ.

 1. ವೈರಸ್ ಪತ್ತೆಯಾದ ಜನರು ಅಥವಾ ಸೋಂಕಿಗೆ ಒಳಗಾದವರ ಸಂಪರ್ಕದಿಂದ ದೂರವಿರಿ.

 2. ರೋಗಲಕ್ಷಣಗಳನ್ನು ಹೊಂದಿರುವ ಯಾರೊಂದಿಗಾದರೂ ನೀವು ನಿಕಟ ಸಂಪರ್ಕದಲ್ಲಿದ್ದರೆ ಮಾಸ್ಕ್ ಧರಿಸಿ.

 3. ಸಂಭೋಗದ ವೇಳೆ ಕಾಂಡೋಮ್ಗಳನ್ನು ಬಳಸಿ

 4. ವೈರಸ್ ಹರಡುವ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಿ. ಅಂದರೆ ಅನಾರೋಗ್ಯ ಅಥವಾ ಸತ್ತ ಪ್ರಾಣಿಗಳು ಮತ್ತು ವಿಶೇಷವಾಗಿ ಸೋಂಕು ಹೊಂದಿರುವ ಮಂಗಗಳು, ಇಲಿಗಳು ಮತ್ತು ಅಳಿಲುಗಳಂತಹ ದಂಶಕಗಳು ಮತ್ತು ಹುಲ್ಲುಗಾವಲು ನಾಯಿಗಳಿಂದ ದೂರವಿರಿ

 5. ವಿಶೇಷವಾಗಿ ಸೋಂಕಿತ ಅಥವಾ ಶಂಕಿತ ಸೋಂಕಿತ ಪ್ರಾಣಿಗಳ ಸಂಪರ್ಕ ಮಾಡಿದಲ್ಲಿ ಕೈಯನ್ನು ತಕ್ಷಣ ತೊಳೆಯುವ ಮೂಲಕ ನೈರ್ಮಲ್ಯ ಕಾಪಾಡಿಕೊಳ್ಳಿ. ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸುವುದು ಉತ್ತಮ.

 6. ದೃಢಪಡಿಸಿದ ಅಥವಾ ಶಂಕಿತ ಮಂಕಿಪಾಕ್ಸ್ ಸೋಂಕಿನ ರೋಗಿಗಳನ್ನು ನೋಡಿಕೊಳ್ಳುವ ವೇಳೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸಿ.

 7. ಚೆನ್ನಾಗಿ ಬೇಯಿಸಿದ ಮಾಂಸವನ್ನು ಮಾತ್ರ ಸೇವಿಸಿ

 8. ಮಂಕಿಪಾಕ್ಸ್ ವಸ್ತುಗಳ ಮೂಲಕವೂ ಹರಡಬಹುದು, ಆದ್ದರಿಂದ ವಸ್ತುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸುವುದು ಉತ್ತಮ ಮತ್ತು ಬಳಸಲೇ ಬೇಕಾದಾಗ ಸ್ಯಾನಿಟೈಜ್ ಮಾಡಿ ಬಳಸಿ.

 9. ಇನ್ನೂ ಹೆಚ್ಚಿನದಾಗಿ ಹೆಚ್ಚಿನ ತಾಪಮಾನದಲ್ಲಿ ನಿಯಮಿತವಾಗಿ ಬಟ್ಟೆ ಮತ್ತು ಬೆಡ್‌ಶೀಟ್‌ಗಳನ್ನು ತೊಳೆಯುವುದು ಉತ್ತಮ ಎನ್ನುತ್ತಾರೆ ಎಂದು ಬೆಲ್ಜಿಯಂನ ಕು ಲೆವೆನ್ ವಿಶ್ವವಿದ್ಯಾಲಯದ ವೈದ್ಯಕೀಯ ಪ್ರಾಧ್ಯಾಪಕ ಎಮ್ಯಾನುಯೆಲ್ ಆಂಡ್ರೆ.


ಇದನ್ನೂ ಓದಿ:  Monkeypox: ಅಮೆರಿಕದಲ್ಲಿ ಹೆಚ್ಚಿದ ಮಂಕಿಪಾಕ್ಸ್ ಪ್ರಕರಣ; ಕಾಯಿಲೆಯ ರೋಗಲಕ್ಷಣಗಳು ಹೀಗಿವೆ

ಮಂಕಿಪಾಕ್ಸ್ ರೋಗಕ್ಕೆ ತುತ್ತಾದಾಗ ಏನು ಮಾಡಬೇಕು?

 •  ನೀವು ಮಂಗನ ಕಾಯಿಲೆಗೆ ತುತ್ತಾಗಿರಬಹುದು ಎಂದು ಗೊತ್ತಾದ ತಕ್ಷಣ ನೀವು ಇತರರೊಂದಿಗೆ ದೈಹಿಕ ಸಂಪರ್ಕ ಮಾಡಬಾರದು ಮತ್ತು ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯಬೇಕು.

 • ಮಂಕಿಪಾಕ್ಸ್ ನ ಆರಂಭಿಕ ಲಕ್ಷಣಗಳು ಜ್ವರ, ತಲೆನೋವು, ಸ್ನಾಯು ನೋವು, ಊತ ಮತ್ತು ಬೆನ್ನುನೋವು. ದದ್ದುಗಳು ಮತ್ತು ಗಾಯಗಳು ಸಾಮಾನ್ಯವಾಗಿ ಒಂದರಿಂದ ಐದು ದಿನಗಳಲ್ಲಿ ಮುಖ, ಕೈಗಳು, ಕಾಲುಗಳು, ಕಣ್ಣುಗಳು, ಬಾಯಿ ಅಥವಾ ಜನನಾಂಗಗಳ ಮೇಲೆ ಕಂಡುಬರುತ್ತವೆ. ಆ ದದ್ದುಗಳು ಬೆಳೆದ ಉಬ್ಬುಗಳು ಮತ್ತು ನಂತರ ಗುಳ್ಳೆಗಳಾಗಿ ಬದಲಾಗುತ್ತವೆ, ಅದು ಒಡೆಯುವ ಮತ್ತು ತುರಿಕೆ ಮಾಡುವ ಮೊದಲು ಕೀವು ತುಂಬಿಕೊಳ್ಳುತ್ತದೆ. ಇವುಗಳ ಅನುಭವ ಆಗುತ್ತಿದ್ದಂತೆ ಕ್ರಮ ತೆಗೆದುಕೊಳ್ಳಿ

 • ವೈರಸ್ಸಿನ ಹಲವು ರೋಗಲಕ್ಷಣಗಳು ಚಿಕನ್ಪಾಕ್ಸ್, ಹರ್ಪಿಸ್ ಅಥವಾ ಸಿಫಿಲಿಸ್ನಂತಹ ಇತರ ಕಾಯಿಲೆಗಳನ್ನು ಹೋಲುತ್ತದೆ. ಹೀಗಾಗಿ ಗೊಂದಲ ಮತ್ತು ನಿರ್ಲಕ್ಷ್ಯ ಮಾಡದೇ ವೈದ್ಯಕೀಯ ದೃಢೀಕರಣವನ್ನು ತೆಗೆದುಕೊಳ್ಳವುದು ಉಚಿತ.

 • ನಿಮಗೆ ಮಂಕಿಪಾಕ್ಸ್ ಇರುವುದು ಪತ್ತೆಯಾದರೆ, ಸೊಂಕು ತಗ್ಗುವವರೆಗೂ ನೀವು ಪ್ರತ್ಯೇಕವಾಗಿರಬೇಕಾಗುತ್ತದೆ. ಅನಾರೋಗ್ಯವು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ ಮತ್ತು ಹೆಚ್ಚಿನ ಜನರು ಎರಡರಿಂದ ನಾಲ್ಕು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ.

 • ವೈದ್ಯಕೀಯ ಸಲಹೆಯು ಪ್ರಸ್ತುತ ದೇಶಗಳಾದ್ಯಂತ ಬದಲಾಗುತ್ತಿರುವಾಗ, ಇತರ ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಲು ನೀವು ವಿಶೇಷ ಆಸ್ಪತ್ರೆಯಲ್ಲಿ ಉಳಿಯಬೇಕಾಗಬಹುದು ಎಂದು ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆ ಹೇಳಿದೆ.


ಇದನ್ನೂ ಓದಿ: Monkeypox: ಕೊರೊನಾಗಿಂತ ಮಂಕಿಪಾಕ್ಸ್ ಮಕ್ಕಳಿಗೆ ಹೆಚ್ಚು ಡೇಂಜರ್, ಏಮ್ಸ್​​ನಿಂದ ಎಚ್ಚರಿಕೆ!

ಭಾರತಕ್ಕೂ ಈ ಭೀಕರ ರೋಗ ಕಾಲಿಟ್ಟಿರುವ ಬಗ್ಗೆ ಸದ್ಯ ವರದಿಯಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸುವುದು ಉತ್ತಮ.
Published by:Ashwini Prabhu
First published: