Explained: ಯಾವುದೇ ಡಯೆಟ್ ಮಾಡದೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?

Weight Loss Tips to lose weight without any diet: ನೀವು ನಿಮ್ಮ ದೇಹದ ತೂಕವನ್ನು ಬೇಗನೆ ಕಡಿಮೆ ಮಾಡಿಕೊಂಡರೆ ಮತ್ತೆ ಪುನಃ ಅದು ಹಾಗೆ ಮರಳಿ ಬರುತ್ತದೆ. ಆದರೆ ನೀವು ನಿಧಾನವಾಗಿ ತೂಕ ಇಳಿಸಿಕೊಂಡರೆ ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ. ನಿಮಗಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ

Weight Loss Tips

Weight Loss Tips

  • Share this:
    Weight Loss Tips in Kannada: ನೀವು ಬೇಗನೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿದ್ದರೆ, ಅದು ತಪ್ಪು. ನೀವು ನಿಮ್ಮ ದೇಹದ ತೂಕವನ್ನು ಬೇಗನೆ ಕಡಿಮೆ ಮಾಡಿಕೊಂಡರೆ ಮತ್ತೆ ಪುನಃ ಅದು ಹಾಗೆ ಮರಳಿ ಬರುತ್ತದೆ. ಆದರೆ ನೀವು ನಿಧಾನವಾಗಿ ತೂಕ ಇಳಿಸಿಕೊಂಡರೆ ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ. ನಿಮಗಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು ಚಾಚು ತಪ್ಪದೆ ಪಾಲಿಸುವುದರಿಂದ ನೀವು ಯಾವುದೇ ರೀತಿಯ ಡಯೆಟ್ (Lose weight without food diet) ಮಾಡದೆಯೇ ನಿಮ್ಮ ದೇಹದ ತೂಕವನ್ನು ನಿಧಾನವಾಗಿ ಕಡಿಮೆ ಮಾಡಿಕೊಳ್ಳಬಹುದು.

    ಅನೇಕ ತಜ್ಞರು ಸಹ ಇದನ್ನೇ ಹೇಳುತ್ತಾರೆ. ಏನೆಂದರೇ ನೀವು ಆಹಾರ ವನ್ನು ತ್ಯಜಿಸದೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಬದಲಾಗಿ, ಇಲ್ಲಿ ನಿಮ್ಮ ಜೀವನಶೈಲಿಯಲ್ಲಿ ಕೆಲವು ಸರಳವಾದ ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

    ಪ್ರತಿದಿನ ಉಪಾಹಾರ ತಪ್ಪದೆ ಸೇವಿಸಿ (Eat your meal without fail):

    ಬಹುತೇಕರು ತಮ್ಮ ದೇಹದ ತೂಕವನ್ನು ಬಹು ಬೇಗನೆ ಕಳೆದುಕೊಳ್ಳಲು ಪ್ರತಿದಿನದ ಉಪಾಹಾರವನ್ನು ತ್ಯಜಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಹೀಗೆ ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ಸಾಮಾನ್ಯವಾಗಿ ದಿನವಿಡೀ ಹೆಚ್ಚು ತಿನ್ನುತ್ತಾರೆ ಮತ್ತು ಹೆಚ್ಚಿನ ಕ್ಯಾಲೊರಿಯನ್ನು ಸೇವಿಸುತ್ತೇವೆ ಎಂದು ಲೇಖಕರಾದ ಎಲಿಜಬೆತ್ ವಾರ್ಡ್ ಹೇಳುತ್ತಾರೆ. ನಿಮ್ಮ ದಿನದ ಪೌಷ್ಟಿಕ ಆರಂಭಕ್ಕಾಗಿ ಹಣ್ಣು ಮತ್ತು ಕಡಿಮೆ ಕೊಬ್ಬಿನ ಡೈರಿಯೊಂದಿಗೆ ಧಾನ್ಯಗಳನ್ನು ಬೆರೆಸಿಕೊಂಡು ಸೇವಿಸಿರಿ.

    ರಾತ್ರಿ ಊಟವಾದ ನಂತರ ಅಡುಗೆಮನೆಗೆ ಹೋಗಬೇಡಿ (Don't go to kitchen after dinner):

    ನೀವು ರಾತ್ರಿ ಹೊತ್ತು ಊಟವಾದ ಮೇಲೆ ನಿಮ್ಮ ಅಡುಗೆಮನೆಯನ್ನು ಪ್ರವೇಶಿಸಬೇಡಿ. ಇಲ್ಲವೆಂದರೆ ನೀವು ಟಿವಿ ನೋಡುತ್ತಾ ಏನಾದರೂ ತಿನ್ನಬೇಕು ಎಂಬ ಹಂಬಲ ನಿಮಗೆ ಆಗುತ್ತದೆ ಮತ್ತು ನೀವು ನಿಮ್ಮ ಅಡುಗೆಮನೆಗೆ ಹೋಗುತ್ತೀರಿ. ನಿಮಗೆ ರಾತ್ರಿ ಊಟ ಮಾಡಿದ ನಂತರ ಏನಾದರೂ ತಿನ್ನಬೇಕು ಎನ್ನಿಸಿದರೆ ನೀವು ಒಂದು ಕಪ್ ಚಹಾ ಕುಡಿಯಿರಿ, ಒಂದು ಸಣ್ಣ ಬೌಲ್ ಲೈಟ್ ಐಸ್ ಕ್ರೀಮ್ (Ice Cream) ಅಥವಾ ಮೊಸರನ್ನು (Curd) ಸೇವಿಸಿರಿ. ಅದರ ನಂತರ ನಿಮಗೆ ಬೇರೆ ಏನನ್ನು ತಿನ್ನಬೇಕೆಂಬ ಹಂಬಲ ಇರುವುದಿಲ್ಲ.

    ನೀವು ಕುಡಿಯುವ ದ್ರವದ ಕ್ಯಾಲೊರಿಗಳನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ:

    ಕೆಲವೊಮ್ಮೆ ನಾವು ಕುಡಿಯುವ ಸಿಹಿಯಾದ ಪಾನೀಯಗಳಿಂದ ಸಹ ಹೆಚ್ಚಿನ ಕ್ಯಾಲೊರಿಗಳನ್ನು ನಾವು ಸೇವಿಸುತ್ತೇವೆ. ನಿಮಗೆ ತುಂಬಾ ಹಸಿವಾದಾಗ ನೀರು (Water), ಸಿಟ್ರಸ್ (Citrus), ಕಡಿಮೆ ಕೊಬ್ಬಿನ ಹಾಲು (Low fat milk), ಸ್ವಲ್ಪ ಹಣ್ಣಿನ ರಸವನ್ನು (Fresh Fruit Juice) ಕುಡಿಯಿರಿ. ಊಟದ ಸಮಯದ ನಡುವೆ ಹಸಿವಾದರೆ ನಿಮ್ಮ ಹಸಿವನ್ನು ಹಿಡಿದಿಟ್ಟುಕೊಳ್ಳಲು ಒಂದು ಲೋಟ ಪೌಷ್ಟಿಕ ಮತ್ತು ಕಡಿಮೆ ಕ್ಯಾಲೊರಿ ತರಕಾರಿ ರಸವನ್ನು ಸಹ ಪ್ರಯತ್ನಿಸಬಹುದು.

    ಆಯ್ಕೆ ಮಾಡಿಕೊಂಡು ತಿನ್ನಿ:

    ಕಡಿಮೆ ಕ್ಯಾಲೊರಿ, ಹೆಚ್ಚಿನ ಪ್ರಮಾಣದ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಕೊಬ್ಬು ಮತ್ತು ಕ್ಯಾಲೊರಿಗಳು ಹೆಚ್ಚಿರುವ ಇತರ ಆಹಾರಗಳನ್ನು ಹೊರಹಾಕುತ್ತದೆ. ಮಾಂಸವನ್ನು ನಿಮ್ಮ ತಟ್ಟೆಯಲ್ಲಿಟ್ಟುಕೊಂಡು ನೀವು ತರಕಾರಿಗಳನ್ನು ತಿನ್ನುತ್ತೇವೆ ಎಂದರೆ ಜಾಸ್ತಿ ಕ್ಯಾಲೋರಿ ಆಗುತ್ತದೆ. ಅದಕ್ಕೆ ನೀವು ತರಕಾರಿ ಸಲಾಡ್ ಅಥವಾ ಸೂಪ್ ಬೌಲ್ ನೊಂದಿಗೆ ಮಧ್ಯಾಹ್ನ ಅಥವಾ ರಾತ್ರಿ ಊಟವನ್ನು ಪ್ರಾರಂಭಿಸಲು ಪ್ರಯತ್ನಿಸಿರಿ.

    ಸರಿಯಾದ ಧಾನ್ಯವನ್ನು ಆಯ್ಕೆ ಮಾಡಿಕೊಳ್ಳಿ:

    ಬಿಳಿ ಬಣ್ಣದ ಬ್ರೆಡ್, ಕೇಕ್ ಗಳು, ಕುಕೀಗಳಂತಹ ಸಂಸ್ಕರಿಸಿದ ಧಾನ್ಯಗಳಿಂದ ತಯಾರಿಸಿದ್ದನ್ನು ದೂರವಿಟ್ಟು ನಿಮಗೆ ಹೆಚ್ಚು ಅಗತ್ಯವಿರುವ ಫೈಬರ್ ಅನ್ನು ಸೇವಿಸಿರಿ. ಸಂಪೂರ್ಣ ಗೋಧಿ ಬ್ರೆಡ್ ಗಳು ಮತ್ತು ಪಾಸ್ತಾಗಳು, ಕಂದು ಅಕ್ಕಿ, ಬ್ರಾನ್ ಫ್ಲೇಕ್ಸ್, ಪಾಪ್ ಕಾರ್ನ್ ಗಳನ್ನು ಆಯ್ಕೆ ಮಾಡಿಕೊಳ್ಳಿ.

    ನಿಮ್ಮ ಅಡುಗೆಮನೆಯಲ್ಲಿ ಆರೋಗ್ಯಕರ ಆಹಾರ ಪದಾರ್ಥಗಳನ್ನು ಇರಿಸಿಕೊಳ್ಳಿ:

    ಕ್ಯಾಲೊರಿಗಳನ್ನು ಕಡಿತಗೊಳಿಸಲು ಸಹಾಯ ಮಾಡುವ ಮತ್ತೊಂದು ಸರಳ ತಂತ್ರವೆಂದರೆ ನಿಮ್ಮ ಅಡುಗೆಮನೆಯಲ್ಲಿ ಸಾಕಷ್ಟು ಆರೋಗ್ಯಕರ ಆಹಾರ ಪದಾರ್ಥಗಳ ಆಯ್ಕೆಗಳೊಂದಿಗೆ ಸಂಗ್ರಹಿಸಿಡುವುದು. ಅಂದರೆ ನೀವು ತಿನ್ನಬಹುದಾದ ಎಲ್ಲಾ ರೆಸ್ಟೋರೆಂಟ್ ಗಳಿಂದ ದೂರ ಉಳಿಯುವ ಮೂಲಕ ಪ್ರಲೋಭನೆಯನ್ನು ತಪ್ಪಿಸುವುದು ಮತ್ತು ಪಾರ್ಟಿಗಳ ವಿಷಯಕ್ಕೆ ಬಂದಾಗ, "ಮೊದಲು ಆರೋಗ್ಯಕರ ತಿಂಡಿಯನ್ನು ತಿನ್ನಿ ಮತ್ತು ನಿಮ್ಮ ತಟ್ಟೆಯಲ್ಲಿ ಎಲ್ಲವನ್ನೂ ಹಾಕಿಸಿಕೊಳ್ಳಬೇಡಿ" ಎಂದು ತಜ್ಞರು ಹೇಳುತ್ತಾರೆ.

    ನೀವು ಸೇವಿಸುವ ಆಹಾರದ ಒಂದು ಭಾಗವನ್ನು ಕಡಿಮೆ ಮಾಡಿ:

    ನೀವು ಸೇವಿಸುವ ಆಹಾರದಲ್ಲಿ 10 ರಿಂದ 20 ಪ್ರತಿಶತದಷ್ಟು ಕಡಿಮೆ ಮಾಡಿದಲ್ಲಿ ನೀವು ತೂಕವನ್ನು ಕಳೆದುಕೊಳ್ಳುತ್ತೀರಿ. ನೀವು ರೆಸ್ಟೋರೆಂಟ್ ಗಳಲ್ಲಿ ಮತ್ತು ಮದುವೆ ಮನೆಗಳಲ್ಲಿ ಹೋದರೆ ನಿಮ್ಮ ತಟ್ಟೆಗೆ ಬಡಿಸುವ ಆಹಾರ ನಿಮಗೆ ಅಗತ್ಯಕ್ಕಿಂತ ಹೆಚ್ಚಿರುತ್ತದೆ. ಅದಕ್ಕಾಗಿ ನೀವು ಎಲ್ಲೆ ಹೋದರೂ ನಿಮ್ಮ ಜೊತೆಯಲ್ಲಿ ಸಣ್ಣ ಬಟ್ಟಲುಗಳು, ಪ್ಲೇಟ್ ಗಳು ಮತ್ತು ಕಪ್ ಗಳನ್ನು ಬಳಸುವ ಮೂಲಕ ನಿಮ್ಮ ಆಹಾರದ ಸ್ವಲ್ಪ ಭಾಗವನ್ನು ಕಡಿಮೆ ಮಾಡಿಕೊಳ್ಳಬಹುದು.

    ಪ್ರತಿದಿನ ನಿಮ್ಮ ನಡಿಗೆಯನ್ನು ಜಾಸ್ತಿ ಮಾಡಿ:

    ನೀವು ಪೆಡೋಮೀಟರ್ ಅನ್ನು ತೆಗೆದುಕೊಳ್ಳಿರಿ ಮತ್ತು ನೀವು ದಿನಕ್ಕೆ 10,000 ಹೆಜ್ಜೆಗಳನ್ನು ತಲುಪುವವರೆಗೆ ಕ್ರಮೇಣವಾಗಿ ಹೆಚ್ಚು ಮಾಡುತ್ತಾ ಹೋಗಿ. ದಿನವಿಡೀ, ನೀವು ಹೆಚ್ಚು ಸಕ್ರಿಯವಾಗಿರಲು ಏನು ಸಾಧ್ಯವೋ ಅದನ್ನು ಮಾಡಿ. ನೀವು ಫೋನ್ ನಲ್ಲಿ ಮಾತನಾಡುವಾಗ ವೇಗವಾಗಿ ನಡೆದಾಡಿರಿ, ಹೆಚ್ಚುವರಿ ನಡಿಗೆಗೆ ನಾಯಿಯನ್ನು ಹೊರಗೆ ಕರೆದೊಯ್ಯಿರಿ ಮತ್ತು ದೂರದರ್ಶನ ಜಾಹೀರಾತುಗಳ ಸಮಯದಲ್ಲಿ ಸ್ಥಳದಲ್ಲಿಯೇ ನಡೆದಾಡಿರಿ.

    ಇದನ್ನೂ ಓದಿ: Weight Loss Tips: ನಿಮ್ಮ ದೇಹದ ತೂಕಕ್ಕೂ ಉಪ್ಪಿಗೂ ಏನು ಸಂಬಂಧ? ಇಲ್ಲಿದೆ ನೋಡಿ

    ಪ್ರತಿ ಊಟ ಮತ್ತು ತಿಂಡಿಯಲ್ಲಿ ಹೆಚ್ಚು ಪ್ರೋಟೀನ್ ಸೇವಿಸಿ:

    ಪ್ರತಿ ಊಟ ಮತ್ತು ತಿಂಡಿಗೆ ಕಡಿಮೆ ಕೊಬ್ಬಿನ ಪ್ರೋಟೀನ್ ನ ಮೂಲವನ್ನು ಸೇರಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ನೀವು ಅತಿಯಾಗಿ ತಿನ್ನುವ ಸಾಧ್ಯತೆ ಕಡಿಮೆ ಇರುತ್ತದೆ. ಕಡಿಮೆ ಕೊಬ್ಬಿನ ಮೊಸರು, ಬೀಜಗಳು, ಕಡಲೆಕಾಯಿ ಬೆಣ್ಣೆ, ಮೊಟ್ಟೆಗಳು, ಬೀನ್ಸ್ ಅಥವಾ ಮಾಂಸವನ್ನು ಸೇವಿಸಿರಿ. ತಜ್ಞರು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಆಗಾಗ್ಗೆ ಊಟ ಮತ್ತು ತಿಂಡಿಗಳನ್ನು ಮಾಡುತ್ತಲೇ ಇರಿ ಎಂದು ಹೇಳುತ್ತಾರೆ.

    ಇದನ್ನೂ ಓದಿ: Wight Loss Tips: ದೇಹದ ತೂಕ ಕಡಿಮೆಯಾಗಬೇಕಾ..? ಹಾಗಾದ್ರೆ ಮಧ್ಯಂತರ ಉಪವಾಸ ಮಾಡಿ..!

    ಕಡಿಮೆ ಕೊಬ್ಬಿನಾಂಶವಿರುವ ಆಹಾರ ಸೇವಿಸಿ:

    ನಿಮಗೆ ಸಾಧ್ಯವಾದಾಗಲೆಲ್ಲಾ, ಸಲಾಡ್, ಡೈರಿ ಉತ್ಪನ್ನಗಳು ಕಡಿಮೆ ಕೊಬ್ಬಿನಾಂಶವನ್ನು ಹೊಂದಿರುವುದನ್ನು ಸೇವಿಸಿರಿ. ನೀವು ಕಡಿಮೆ ಕೊಬ್ಬು ಮತ್ತು ಹಗುರವಾದ ಉತ್ಪನ್ನಗಳನ್ನು ಬಳಸಿದರೆ ನೀವು ಕ್ಯಾಲೊರಿಗಳನ್ನು ನಿರಾಯಾಸವಾಗಿ ಕಡಿಮೆ ಮಾಡಿಕೊಳ್ಳಬಹುದು.
    Published by:Sharath Sharma Kalagaru
    First published: