Home Loan: ಗೃಹ ಸಾಲದ ಸಹಾಯದಿಂದ ಮನೆ ಖರೀದಿಸುವ ಆಲೋಚನೆ ಇದೆಯೇ..? ಹಾಗಾದ್ರೆ, ನಿಮ್ಮ ಮನೆಯ ಒಟ್ಟಾರೆ ವೆಚ್ಚ ಹೀಗಿರುತ್ತದೆ ನೋಡಿ..!

How to get Home Loan: 1 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಲು ಯೋಜಿಸಿದರೆ, ಆತನ ಸಾಲದ ಮೊತ್ತವು 75 ಲಕ್ಷ ರೂಪಾಯಿಗಳಾಗಬಹುದು ಮತ್ತು 7% p.a.ಬಡ್ಡಿಯಲ್ಲಿ 30 ವರ್ಷಗಳವರೆಗೆ, ಇಎಂಐ 49,897 ರೂ. ಆಗಿರಬಹುದು. ಇದರಿಂದ ಒಟ್ಟು ಬಡ್ಡಿ Rs 1.04 ಕೋಟಿಗಳು ಮತ್ತು ಮರುಪಾವತಿಯ ಮೊತ್ತ 1.8 ಕೋಟಿ ರೂ. ಆಗುತ್ತದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Home Loan: ಅನೇಕರು ಮನೆಯ ಮಾಲೀಕತ್ವ ಹೊಂದುವುದನ್ನು ಜೀವಮಾನದ ದೊಡ್ಡ ಆರ್ಥಿಕ ಗುರಿಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಒಂದು ಮನೆ ನಮಗೆ ಆಶ್ರಯ ನೀಡುವುದಲ್ಲದೆ ನಮ್ಮ ಐಡೆಂಟಿಟಿಯನ್ನು ಹೆಚ್ಚಿಸುತ್ತದೆ. ಮತ್ತು ನಾವು ನಮ್ಮ ಮುಂದಿನ ಪೀಳಿಗೆಯ ಭದ್ರತೆಗಾಗಿ ಏನನ್ನಾದರೂ ನೀಡುವ ನಮ್ಮ ಆಲೋಚನೆಗೆ ಇದು ಸಹಕಾರಿಯಾಗುತ್ತದೆ. ಇನ್ನು, ಕಳೆದ ಒಂದೆರಡು ವರ್ಷಗಳಲ್ಲಿ ಸಾಂಕ್ರಾಮಿಕ ರೋಗವು ನಮ್ಮ ಜೀವನದ ಹೆಚ್ಚಿನ ಅಂಶಗಳನ್ನು ಪರಿಣಾಮ ಬೀರಿದರೂ, 90.7ರ ಪ್ರಭಾವಶಾಲಿ ಸ್ಕೋರ್ ಹೊಂದಿರುವ ಹೆಚ್ಚಿನ ಮಾಲೀಕರಿಗೆ ಮನೆಯ ಮಾಲೀಕತ್ವವು ಅಗ್ರ ಸಂಪತ್ತಿನ ಗುರಿಯಾಗಿದೆ ಎಂದು ಬ್ಯಾಂಕ್‌ಬಜಾರ್‌ನ (Bank Bazar) ಆಕಾಂಕ್ಷೆ ಸೂಚ್ಯಂಕ 2021ರ ವರದಿ ಹೇಳುತ್ತದೆ.

  ಸಮೀಕ್ಷೆಯ ವರದಿಯು ಮನೆಯ ಮಾಲೀಕತ್ವದ ಗುರಿಯ 'ಸನ್ನದ್ಧತೆಯ ಅಂತರ' ಅಂದರೆ, ಯಾವುದೇ ಗುರಿಗೆ ಪ್ರಾಮುಖ್ಯತೆ ಮತ್ತು ಪ್ರತಿವಾದಿಗಳು ನೀಡುವ ಸನ್ನದ್ಧತೆಯ ನಡುವಿನ ವ್ಯತ್ಯಾಸ ಸರಾಸರಿಗಿಂತ ಹೆಚ್ಚಿನದು ಅಂದರೆ 6.3 ಇದೆ. ಈ ಹಿನ್ನೆಲೆ ಮನೆ ಖರೀದಿಸುವುದನ್ನು ಸಾಧ್ಯವಾಗಿಸಲು ಅನೇಕರು ಇನ್ನೂ ಸ್ವಲ್ಪ ದೂರ ಹಾದುಹೋಗಬೇಕಿದೆ ಎಂದು ಭಾವಿಸುತ್ತಾರೆ ಎಂದು ವರದಿ ಸೂಚಿಸುತ್ತದೆ.

  ಮನೆ ಖರೀದಿ ಅಗ್ಗವಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಕೆಲವೊಮ್ಮೆ, ಒಂದು ಮನೆಯ ಮಾಲೀಕತ್ವದ ವೆಚ್ಚವು ನಿಮ್ಮ ಪ್ರಸ್ತುತ ವಾರ್ಷಿಕ ಆದಾಯಕ್ಕಿಂತ 10-15 ಪಟ್ಟು ಹೆಚ್ಚಿರಬಹುದು. ವಿಶೇಷವಾಗಿ ರಿಯಲ್ ಎಸ್ಟೇಟ್ ಬೆಲೆಗಳು ಹೆಚ್ಚಿರುವ ದೊಡ್ಡ ನಗರದಲ್ಲಿ ನೀವು ಆಸ್ತಿ ಖರೀದಿಸಲು ಯೋಜಿಸಿದರೆ ಅದಕ್ಕಿಂತ ಹೆಚ್ಚಾಗಿರಬಹುದು. ಹೆಚ್ಚಿನ ಜನರು, ತಮ್ಮ ಮನೆ ಖರೀದಿಗೆ ಹಣಕಾಸು ಒದಗಿಸಲು ಗೃಹ ಸಾಲದ (Home Loan Offers) ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಹಾಗೂ, ಅವರು 30 ವರ್ಷಗಳವರೆಗೆ ಬಡ್ಡಿಯೊಂದಿಗೆ ಮರುಪಾವತಿಸುತ್ತಾರೆ. ಜೊತೆಗೆ, ನಿಮ್ಮ ಸ್ವಂತ ಸಂಪನ್ಮೂಲಗಳಿಂದಲೂ ಹಲವಾರು ಇತರ ಗಮನಾರ್ಹ ವೆಚ್ಚಗಳನ್ನು ಪಾವತಿಸಬೇಕಾಗಬಹುದು.

  ಈ ಹಿನ್ನೆಲೆ, ಮನೆ ಖರೀದಿಯಷ್ಟೇ ಮುಖ್ಯವಾದದ್ದನ್ನು ಯೋಜಿಸುವಾಗ ಈ ವೆಚ್ಚಗಳ ಬಗ್ಗೆ ತಿಳಿದಿರುವುದು ಬಹಳ ಅರ್ಥಪೂರ್ಣವಾಗಿದೆ. ಗೃಹ ಸಾಲದ ಸಹಾಯದಿಂದ ಮನೆ ಖರೀದಿಸುವ ನಿಜವಾದ ವೆಚ್ಚದ ಸ್ಥೂಲ ಅಂದಾಜು ಮಾಡಲು ನಾವು ನಿಮಗೆ ಈ ಲೇಖನದ ಮೂಲಕ ಸಹಾಯ ಮಾಡಲು ಪ್ರಯತ್ನಿಸಿದ್ದೇವೆ.

  1) ಡೌನ್‌ ಪೇಮೆಂಟ್‌:
  ಗೃಹ ಸಾಲಗಳು ಸಾಮಾನ್ಯವಾಗಿ ಆಸ್ತಿಯ ಮೌಲ್ಯದ 90%ವರೆಗೆ ಹಣಕಾಸು ನೆರವು ನೀಡುತ್ತವೆ; ಅಂದರೆ ಉಳಿದ 10% ನಿಮ್ಮ ಜೇಬಿನಿಂದಲೇ ನೀಡಬೇಕು. ಆದರೆ, ಒಂದು ವೇಳೆ ನಿಮ್ಮ ಗೃಹ ಸಾಲ 75 ಲಕ್ಷಕ್ಕಿಂತ ಹೆಚ್ಚಿದ್ದರೆ, ನಿಮ್ಮ ಬ್ಯಾಂಕ್ ಸಾಲದ ಮೊತ್ತದ ಶೇ. 75ರವರೆಗೆ ಮಾತ್ರ ಅನುಮೋದಿಸಬಹುದು ಮತ್ತು ಉಳಿದ 25% ಅನ್ನು ಡೌನ್ ಪೇಮೆಂಟ್ ಆಗಿ ಪಾವತಿಸಬೇಕಾಗುತ್ತದೆ. ಇನ್ನೊಂದೆಡೆ, ನಿಮ್ಮ ಆಸ್ತಿಯ ಮೌಲ್ಯ 30 ಲಕ್ಷವಾಗಿದ್ದರೆ, ನಿಮ್ಮ ಡೌನ್ ಪೇಮೆಂಟ್ ಅವಶ್ಯಕತೆಯು ಆ ಮೊತ್ತದ 10% ಅಂದರೆ 3 ಲಕ್ಷ ರೂ. ಆಗಿರಬಹುದು. ಇನ್ನು, ನಿಮ್ಮ ಆಸ್ತಿಯ ಮೌಲ್ಯ 1 ಕೋಟಿ ರೂಪಾಯಿ ಆಗಿದ್ದರೆ, ನೀವು 25% ಅಂದರೆ 25 ಲಕ್ಷ ಡೌನ್‌ ಪೇಮೆಂಟ್‌ ಪಾವತಿಸಬೇಕಾಗಬಹುದು.

  2) ಗೃಹ ಸಾಲದ ಬಡ್ಡಿ:
  ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿನ ಬ್ಯಾಂಕುಗಳು ತಮ್ಮ ಗೃಹ ಸಾಲದ ಬಡ್ಡಿದರಗಳನ್ನು (Home Loan Interest Rates) ಬಹು-ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿಸಿದ್ದರೂ, ಇದು ಸಾಮಾನ್ಯವಾಗಿ ಮನೆ ಮಾಲೀಕತ್ವಕ್ಕೆ ಸಂಬಂಧಿಸಿದ ದೊಡ್ಡ ವೆಚ್ಚವಾಗಿದೆ. ಗೃಹ ಸಾಲದ ಬಡ್ಡಿದರವನ್ನು ಸಾಲ ಪಡೆಯುವವರ ವಯಸ್ಸು, ಲಿಂಗ, ಆದಾಯ, ಕ್ರೆಡಿಟ್ ಸ್ಕೋರ್, ಆಸ್ತಿ ಮೌಲ್ಯ, ಎಲ್‌ಟಿವಿ ಅನುಪಾತ ಮುಂತಾದ ಅನೇಕ ಅಂಶಗಳನ್ನು ಅವಲಂಬಿಸಿ ಬ್ಯಾಂಕ್‌ ನಿರ್ಧರಿಸುತ್ತದೆ. ನೀವು 30 ವರ್ಷ ವಯಸ್ಸಿನ, 800ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ (CIBIL Score) ಹೊಂದಿರುವ ವ್ಯಕ್ತಿ, 30 ಲಕ್ಷ ಮೌಲ್ಯದ ಮನೆಯನ್ನು ಖರೀದಿಸಲು ಯೋಜಿಸಿದ್ದೀರಿ ಎಂದರೆ ನಿಮ್ಮ ಎಲ್‌ಟಿವಿ 90%, ಆದ್ದರಿಂದ ನಿಮ್ಮ ಗೃಹ ಸಾಲದ ಮೊತ್ತ 27 ಲಕ್ಷ ರೂ. ನೀಡುತ್ತಾರೆ. ನಿಮ್ಮ ಬ್ಯಾಂಕ್‌ 6.75% ಬಡ್ಡಿ ದರದಲ್ಲಿ ಸಾಲ ಅನುಮೋದಿಸಿದರೆ. 30 ವರ್ಷಗಳ ಅವಧಿಗೆ, ನಿಮ್ಮ EMI 30 ವರ್ಷಗಳವರೆಗೆ 17,512 ರೂ. ಆಗಿರುತ್ತದೆ. ಇದರಿಂದ ಬಡ್ಡಿ ಮೊತ್ತವೇ 36.04 ಲಕ್ಷ ರೂ. ಆಗುತ್ತದೆ ಮತ್ತು ಮರುಪಾವತಿಯ ಮೊತ್ತ 63.04 ಲಕ್ಷ ರೂ. ಆಗುತ್ತದೆ.

  ಅದೇ ವ್ಯಕ್ತಿಯು 1 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಲು ಯೋಜಿಸಿದರೆ, ಆತನ ಸಾಲದ ಮೊತ್ತವು 75 ಲಕ್ಷ ರೂಪಾಯಿಗಳಾಗಬಹುದು ಮತ್ತು 7% p.a.ಬಡ್ಡಿಯಲ್ಲಿ 30 ವರ್ಷಗಳವರೆಗೆ, ಇಎಂಐ 49,897 ರೂ. ಆಗಿರಬಹುದು. ಇದರಿಂದ ಒಟ್ಟು ಬಡ್ಡಿ Rs 1.04 ಕೋಟಿಗಳು ಮತ್ತು ಮರುಪಾವತಿಯ ಮೊತ್ತ 1.8 ಕೋಟಿ ರೂ. ಆಗುತ್ತದೆ.

  ಅಂತೆಯೇ, ಲಭ್ಯವಿರುವ ಅತ್ಯುತ್ತಮ ದರಗಳನ್ನು ಪಡೆಯಲು ಹೆಚ್ಚಿನ ಕ್ರೆಡಿಟ್ ಸ್ಕೋರ್ (Credit Score) ಮತ್ತು ಇತರ ನಿರ್ಣಾಯಕ ಹಣಕಾಸಿನ ಗುರಿಗಳಿಗೆ ತೊಂದರೆಯಾಗದಂತೆ ಸಾಲವನ್ನು ಪೂರ್ಣ ಸಮಯದಲ್ಲಿ ಮರುಪಾವತಿಸಲು ಸಾಕಷ್ಟು ಮರುಪಾವತಿ ಸಾಮರ್ಥ್ಯ ಹೊಂದಿರುವುದು ಮುಖ್ಯವಾಗಿದೆ. ಇನ್ನು, ಸಾಲ ಪಡೆಯುವವರು ಲೋನನ್ನು ಕಾಲಕಾಲಕ್ಕೆ ಭಾಗಶಃ ಪೂರ್ವಪಾವತಿಗಾಗಿ ಬಳಸಿದರೆ ಪಾವತಿಸಬಹುದಾದ ಒಟ್ಟು ಬಡ್ಡಿ ಕಡಿಮೆಯಾಗುತ್ತದಲ್ಲದೆ, ಬೇಗನೆ ಋಣಮುಕ್ತರಾಗಲೂ ಇದು ಸಹಾಯಕವಾಗಿದೆ.

  3) ಗೃಹ ಸಾಲಗಳಿಗೆ ಸಂಬಂಧಿಸಿದ ಇತರ ಶುಲ್ಕಗಳು:
  ಗೃಹ ಸಾಲದ ಅಡಿಯಲ್ಲಿ ಸಾಲದಾತರಿಗೆ ಸಾಲ ಸಂಸ್ಕರಣಾ ಶುಲ್ಕ, ಡಾಕ್ಯುಮೆಂಟೇಷನ್‌ ಶುಲ್ಕ, ಕಾನೂನು ಅಭಿಪ್ರಾಯ ಶುಲ್ಕ, ಆಸ್ತಿ ಮೌಲ್ಯಮಾಪನ ಶುಲ್ಕಗಳಂತಹ ಕೆಲವು ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಕೆಲವು ಬ್ಯಾಂಕ್‌ಗಳು ಡಾಕ್ಯುಮೆಂಟೇಷನ್‌, ಕಾನೂನು ಅಭಿಪ್ರಾಯ ಮತ್ತು ಮೌಲ್ಯಮಾಪನ ಶುಲ್ಕವನ್ನು ಸಂಸ್ಕರಣಾ ಶುಲ್ಕದ ಅಡಿಯಲ್ಲಿ ಒಟ್ಟುಗೂಡಿಸಬಹುದು. ಆದರೆ ಇನ್ನು ಕೆಲವರು ಅವುಗಳನ್ನು ಪ್ರತ್ಯೇಕವಾಗಿ ವಿಧಿಸಬಹುದು.

  4) ಟೈಟಲ್ ಡೀಡ್ ಶುಲ್ಕಗಳ ಠೇವಣಿ ಪತ್ರ (MODT):
  ಗೃಹ ಸಾಲದ ಅವಧಿಯಲ್ಲಿ ಬ್ಯಾಂಕ್‌ಗಳು ಎಲ್ಲಾ ಬಾಕಿಗಳನ್ನು ಸಂಪೂರ್ಣವಾಗಿ ಮುಕ್ತ ಮಾಡುವವರೆಗೆ ಆಸ್ತಿಯ ಶೀರ್ಷಿಕೆ ಪತ್ರವನ್ನು ಹೊಂದಿರುತ್ತದೆ. MODT ಶುಲ್ಕಗಳು ಎಂದು ಕರೆಯಲ್ಪಡುವ ಶೀರ್ಷಿಕೆ ಪತ್ರವನ್ನು ಹೊಂದಲು ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತಾರೆ. ಇದು ಸಾಮಾನ್ಯವಾಗಿ ಗೃಹ ಸಾಲದ ಮೊತ್ತದ 0.1%ರಿಂದ 0.3%ವರೆಗೆ ಇರುತ್ತದೆ ಹಾಗೂ ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಸಂಸ್ಕರಣಾ ಶುಲ್ಕಗಳು, ಕಾನೂನು ಅಭಿಪ್ರಾಯ ಶುಲ್ಕಗಳು ಮತ್ತು MODT ಶುಲ್ಕಗಳು ಸಾಮಾನ್ಯವಾಗಿ ಸಾಲದ 1%ಕ್ಕಿಂತ ಕಡಿಮೆ ಇರುತ್ತದೆ ಮತ್ತು ಅವುಗಳನ್ನು ಮನ್ನಾ ಮಾಡಲಾಗುತ್ತದೆ, ಅಥವಾ ಮಿತಿಗೊಳಿಸಲಾಗುತ್ತದೆ ಅಥವಾ ರಿಯಾಯಿತಿ ನೀಡಲಾಗುತ್ತದೆ.

  5) ಸ್ಟ್ಯಾಂಪ್‌ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು:
  ರಾಜ್ಯ ಸರ್ಕಾರಗಳು ಪ್ರತಿ ಆಸ್ತಿ ವಹಿವಾಟಿನ ಮೇಲೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ವಿಧಿಸುತ್ತವೆ. ಈ ಶುಲ್ಕಗಳು ಇತರ ಅಂಶಗಳ ನಡುವೆ ಆಸ್ತಿಯ ಸ್ಥಳ, ಬೆಲೆ ಮತ್ತು ಗಾತ್ರ ಅವಲಂಬಿಸಿ ಬದಲಾಗುತ್ತವೆ. ಸ್ಟ್ಯಾಂಪ್‌ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು ಒಟ್ಟಾಗಿ ಆಸ್ತಿಯ ಮೌಲ್ಯದ ಸುಮಾರು 3%ರಿಂದ 6%ವರೆಗೆ ಇರುತ್ತದೆ. ಬ್ರೋಕರ್ ಮೂಲಕ ಆಸ್ತಿ ಖರೀದಿಸಿದರೆ, ಖರೀದಿದಾರನು ಬ್ರೋಕರೇಜ್ ಮತ್ತು ಕಾನೂನು ಶುಲ್ಕ ಪಾವತಿಸಬೇಕು, ಇದು ಆಸ್ತಿಯ ಒಟ್ಟು ಮೌಲ್ಯದ 1% ರಿಂದ 2% ಆಗಿರಬಹುದು. ಆದ್ದರಿಂದ, ನೋಂದಣಿ ಮತ್ತು ಮುದ್ರಾಂಕ ಶುಲ್ಕ 6% ಮತ್ತು ಬ್ರೋಕರೇಜ್ 1% (ಒಟ್ಟು 7%) ಎಂದು ಊಹಿಸಿದರೆ, ಇವುಗಳು 30 ಲಕ್ಷ ಆಸ್ತಿಗೆ 2.1 ಲಕ್ಷ ರೂ. ಮತ್ತು 1 ಕೋಟಿ ಆಸ್ತಿಗೆ 7 ಲಕ್ಷ ರೂ. ಆಗುತ್ತದೆ.

  6) ಇತರ ವೆಚ್ಚಗಳು:
  ಇವುಗಳ ಹೊರತಾಗಿ, ಮನೆ ಖರೀದಿದಾರರು ವಿದ್ಯುತ್ ಮತ್ತು ನೀರಿನ ಶುಲ್ಕ, ಮಹಡಿ ಏರಿಕೆ, ಪುರಸಭೆಯ ತೆರಿಗೆ, ಸಮಾಜದ ವಾರ್ಷಿಕ ನಿರ್ವಹಣೆ, ಮತ್ತು ಕ್ಲಬ್ ಹೌಸ್ ಶುಲ್ಕ (ಯಾವುದಾದರೂ ಇದ್ದರೆ) ಸೇರಿದಂತೆ ಹಲವಾರು ಇತರ ಶುಲ್ಕಗಳನ್ನು ಡೆವಲಪರ್‌ಗೆ ಪಾವತಿಸಬೇಕಾಗಬಹುದು. ಈಜುಕೊಳ, ಜಿಮ್, ಕ್ಲಬ್‌ಹೌಸ್ ಸದಸ್ಯತ್ವ, ಪಾರ್ಕಿಂಗ್ ಮುಂತಾದ ಸೌಲಭ್ಯಗಳಿಗಾಗಿ ಡೆವಲಪರ್ ಪ್ರತ್ಯೇಕವಾಗಿ ಶುಲ್ಕ ವಿಧಿಸಬಹುದು. ಹಾಗೆಯೇ, ನಿರ್ಮಾಣ ಹಂತದಲ್ಲಿರುವ ಆಸ್ತಿ ಅಥವಾ ಪ್ರಾಪರ್ಟಿ ಜಿಎಸ್‌ಟಿ ಪಾವತಿಯನ್ನು ಒಳಗೊಂಡಿರುತ್ತವೆ.

  ಜತೆಗೆ, ಇಎಂಐ ಅಲ್ಲದೆ, ಪ್ರತಿ ತಿಂಗಳು ಮಾಸಿಕ ನಿರ್ವಹಣಾ ಶುಲ್ಕಗಳನ್ನು ಪಾವತಿಸಬೇಕು. ಅದು, ನಿಮ್ಮ ಪ್ರಾಪರ್ಟಿಯ ಸೂಪರ್ ಬಿಲ್ಟ್-ಅಪ್ ಪ್ರದೇಶ ಮತ್ತು ಅಪಾರ್ಟ್ಮೆಂಟ್ ಸೊಸೈಟಿಯ ಸೌಕರ್ಯಗಳು ಮತ್ತು ಸ್ಥಳ ಆಧರಿಸಿ ನಿರ್ಧರಿಸಲಾಗುತ್ತದೆ. ನಂತರ, ಮನೆಗೆ ಫರ್ನಿಶಿಂಗ್ ಮಾಡುವ ವೆಚ್ಚ, ಅದು ನಿಮ್ಮ ಆದ್ಯತೆಗಳು ಮತ್ತು ಬಜೆಟ್‌ಗೆ ಅನುಗುಣವಾಗಿ ಲಕ್ಷಗಟ್ಟಲೆ ಹಣ ಸುರಿಯಬೇಕಾಗುತ್ತದೆ. ಹಾಗೂ, ಹೊಸ ಮನೆಗೆ ಶಿಫ್ಟ್ ಮಾಡುವಾಗ ನೀವು ಮೂವರ್ಸ್ ಮತ್ತು ಪ್ಯಾಕರ್‌ಗೆ ಗಣನೀಯ ಮೊತ್ತ ಪಾವತಿಸಬೇಕಾಗಬಹುದು.

  ಇದನ್ನೂ ಓದಿ: ಯಾವ ಬೆರಳಿಗೆ ಯಾವ ಉಂಗುರ ಧರಿಸಬೇಕು ಗೊತ್ತಾ?

  ಹಾಗಾದರೆ, ಒಟ್ಟಾರೆ ಶುಲ್ಕ ಎಷ್ಟಾಗುತ್ತದೆ..?:
  ನೀವು ರೆಡಿ ಟು ಮೂವ್ ಇನ್‌ ಪ್ರಾಪರ್ಟಿಗೆ ಹೋಗುವುದಾದರೆ, ಜಿಎಸ್‌ಟಿ ಇರುವುದಿಲ್ಲ. ಈ ಹಿನ್ನೆಲೆ 30 ಲಕ್ಷ ರೂ. ಬೆಲೆಯ ಮನೆಗೆ 30 ವರ್ಷಗಳ ಇಎಂಐ ಒಳಗೊಂಡ ಗೃಹ ಸಾಲ ಸೇರಿಸಿ ಸುಮಾರು 80 ಲಕ್ಷ ರೂ. ವೆಚ್ಚವಾಗಬಹುದು. ಅದೇ ರೀತಿ, 1 ಕೋಟಿ ರೂ. ಮೌಲ್ಯದ ಮನೆಗೆ 2.38 ಕೋಟಿ ರೂ. ಒಟ್ಟಾರೆ ವೆಚ್ಚವಾಗಬಹುದು. ನೆನಪಿಡಿ, ಇದು ಕೇವಲ ಸೂಚಕ ಸಂಖ್ಯೆಯಾಗಿದ್ದು, ಆಸ್ತಿಯ ಪ್ರಕಾರ, ಗಾತ್ರ ಮತ್ತು ಸ್ಥಳ ಅವಲಂಬಿಸಿ ನಿಜವಾದ ವೆಚ್ಚದಲ್ಲಿ ವ್ಯತ್ಯಾಸಗೊಳ್ಳಬಹುದು. ಇನ್ನು, ಮೊದಲ ಬಾರಿಗೆ ಕಡಿಮೆ ಬೆಲೆಯ ಮನೆಯನ್ನು ತೆಗೆದುಕೊಂಡಿದ್ದರೆ, ಅದರ ಮಾಲೀಕರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awas Yojana) ಬಡ್ಡಿ ಸಹಾಯಧನ ಪಡೆಯಬಹುದು, ಅದು ವೆಚ್ಚವನ್ನು ಕಡಿಮೆ ಮಾಡುತ್ತದೆ.

  ಇದನ್ನೂ ಓದಿ: ಕ್ಷಣ ಮಾತ್ರದಲ್ಲಿ ಒತ್ತಡ ನಿವಾರಣೆ ಮಾಡಲು ಈ ಕ್ರಮಗಳನ್ನು ಅನುಸರಿಸಿ

  ಒಟ್ಟಾರೆ, ಮಹತ್ವಾಕಾಂಕ್ಷೆಯ ಮನೆಯ ಮಾಲೀಕರು ಮನೆ ಖರೀದಿಗೆ ತೊಡಗುವ ಮುನ್ನ ಚೆನ್ನಾಗಿ ಯೋಜಿಸಬೇಕು ಮತ್ತು ಅವರು ಸಾಕಷ್ಟು ಮರುಪಾವತಿ ಸಾಮರ್ಥ್ಯ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಹಾಗೂ, ಹೆಚ್ಚುವರಿ ಬಡ್ಡಿ ಹೊರೆ ತಪ್ಪಿಸಲು ಸಾಲದ ಅವಧಿಯುದ್ದಕ್ಕೂ ಅವರು ತಮ್ಮ ಕ್ರೆಡಿಟ್ ಸ್ಕೋರ್‌ 750ಕ್ಕಿಂತ ಹೆಚ್ಚು ಇರುವಂತೆ ಖಚಿತಪಡಿಸಿಕೊಳ್ಳಬೇಕು. ಅಂತಿಮವಾಗಿ, ತಮ್ಮ ಇತರ ಪ್ರಮುಖ ಗುರಿಗಳು ಮತ್ತು ಹೊಣೆಗಾರಿಕೆಗಳ ಕೈಗೆಟುಕುವಿಕೆಯ ಜತೆ ಇಎಂಐ ಅನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ಏಕೆಂದರೆ ಯಾವುದೇ ಸಡಿಲತೆಯು ಅವರ ಹಣಕಾಸಿನ ಸ್ಥಿತಿಯನ್ನು ಹಾಳುಮಾಡಬಹುದು.
  Published by:Sharath Sharma Kalagaru
  First published: