• ಹೋಂ
  • »
  • ನ್ಯೂಸ್
  • »
  • Explained
  • »
  • Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ

Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ

ರಾಜ್ಯಸಭಾ ಚುನಾವಣೆ

ರಾಜ್ಯಸಭಾ ಚುನಾವಣೆ

ಸದ್ಯ ದೇಶದ ರಾಜಕೀಯದ ಅಂಗಳದಲ್ಲಿ ರಾಜ್ಯ ಸಭಾ ಚುನಾವಣೆಯದ್ದೇ ಸುದ್ದಿ. ಇದೇ ಜೂನ್ 10ರಂದು ರಾಜ್ಯ ಸಭಾಗೆ ಚುನಾವಣೆ ನಡೆಯಲಿದೆ. ಹಾಗಿದ್ರೆ ಈ ಚುನಾವಣೆಯಲ್ಲಿ ಜನರು ಯಾಕೆ ವೋಟ್ ಮಾಡಲ್ಲ? ಇದರಲ್ಲಿ ಮತಹಾಕುವವರು ಯಾರು? ಹೇಗಿರುತ್ತೆ ಚುನಾವಣೆ ಪ್ರಕ್ರಿಯೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ಮುಂದೆ ಓದಿ ...
  • Share this:

ರಾಜ್ಯ ಸಭೆ (Rajya Sabhe) ಎನ್ನುವುದು ಭಾರತದ ಶಾಸಕಾಂಗ ವ್ಯವಸ್ಥೆಯ (legislative system) ಮೇಲ್ಮನೆ (upper house) ಅಂತಾನೆ ಕರೆಯಲ್ಪಡುತ್ತದೆ. ಈ ಸದನದಲ್ಲಿ ಒಟ್ಟು 250 ಸದಸ್ಯರಿರುತ್ತಾರೆ (Members). ಈ ಪೈಕಿ 12 ಜನರನ್ನು ರಾಷ್ಟ್ರಪತಿಗಳು (President) ನಾಮಕರಣದ (Nominating) ಮೂಲಕ ಆಯ್ಕೆ ಮಾಡುತ್ತಾರೆ. ಇವರಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರು ಇರುತ್ತಾರೆ. ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ‘ನಾಮಕರಣ ಸದಸ್ಯ’ರೆಂದು (Nominating Member) ಕರೆಯಲಾಗುತ್ತದೆ. ಇನ್ನುಳಿದ 238 ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ. ಇದೀಗ ರಾಜ್ಯಸಭೆ ಚುನಾವಣೆ ಬಂದಿದೆ. ಇದೇ ಜೂನ್ 10ರಂದು ರಾಜ್ಯ ಸಭಾಗೆ ಚುನಾವಣೆ ನಡೆಯಲಿದೆ. ಹಾಗಿದ್ರೆ ಈ ಚುನಾವಣೆಯಲ್ಲಿ ಜನರು ಯಾಕೆ ವೋಟ್ ಮಾಡಲ್ಲ? ಇದರಲ್ಲಿ ಮತಹಾಕುವವರು ಯಾರು? ಹೇಗಿರುತ್ತೆ ಚುನಾವಣೆ ಪ್ರಕ್ರಿಯೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…


6 ವರ್ಷಗಳ ಅವಧಿಯ ರಾಜ್ಯಸಭೆ


ರಾಜ್ಯ ಸಭೆಯ ಸದಸ್ಯರ ಅವಧಿ 6 ವರ್ಷ. ಇದರಲ್ಲಿ ರಾಜ್ಯಸಭೆಯ 1/3ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ಈ ವೇಳೆ ನಿವೃತ್ತ ಸ್ಥಾನಗಳಿಗೆ ಮತ್ತೆ ಚುನಾವಣೆ ನಡೆಸಲಾಗುವುದು. 30 ವರ್ಷ ಕನಿಷ್ಠ ವಯೋಮಿತಿ ಇರುವ ಅಭ್ಯರ್ಥಿಗಳು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ.


ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ


ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡುವವರು ಮುಖ್ಯವಾಗಿ ಭಾರತದ ಪ್ರಜೆಯಾಗಿರಬೇಕು. ಅವರು ಕನಿಷ್ಠ 30 ವರ್ಷ ವಯೋಮಿತಿ ಹೊಂದಿರಬೇಕು. ಈ ಹಿಂದೆ ಅವರು ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು. ಆರೋಗ್ಯದ ದೃಷ್ಟಿಯಲ್ಲಿ ಮತಿಭ್ರಮಣೆ ಉಳ್ಳವರಾಗಿರಬಾರದು. ಇದರ ಜೊತೆಗೆ ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು.


ಲೋಕಸಭೆಗಿಂತ ರಾಜ್ಯಸಭೆ ಹೇಗೆ ಭಿನ್ನವಾಗಿರುತ್ತದೆ?


ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೆ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ.


ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?


ಉಪ ರಾಷ್ಟ್ರಪತಿಗಳು ಇದರ ಸಭಾಧ್ಯಕ್ಷರು


ಭಾರತದ ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಸಭಾಧ್ಯಕ್ಷರಾಗಿರುತ್ತಾರೆ. ಸದ್ಯ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ರಾಜ್ಯಸಭೆಯ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ.


ರಾಜ್ಯಸಭಾ ಸ್ಥಾನ ಹಂಚಿಕೆ ಹೇಗೆ?


ಸಂವಿಧಾನದ ನಾಲ್ಕನೇ ಶೆಡ್ಯೂಲ್ ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಷ್ಟು ಸ್ಥಾನ ಹಂಚಿಕೆಯಾಗಬೇಕು ಎಂದು ಹೇಳುತ್ತದೆ. ಪ್ರತಿ ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಸಭಾ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ. ರಾಜ್ಯಗಳ ಮರುಸಂಘಟನೆ ಮತ್ತು ಹೊಸ ರಾಜ್ಯಗಳ ರಚನೆಯ ಪರಿಣಾಮವಾಗಿ, 1952ರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾದ ರಾಜ್ಯಸಭೆಯಲ್ಲಿ ಚುನಾಯಿತ ಸ್ಥಾನಗಳ ಸಂಖ್ಯೆಯು ಕಾಲಕಾಲಕ್ಕೆ ಬದಲಾಗಿದೆ.


ಯಾವ ರಾಜ್ಯಗಳಿಗೆ ಎಷ್ಟು ಸ್ಥಾನ?


ಸದ್ಯ ಉತ್ತರ ಪ್ರದೇಶ 31, ಮಹಾರಾಷ್ಟ್ರ 19, ತಮಿಳುನಾಡು 18, ಪಶ್ಚಿಮ ಬಂಗಾಳ 16, ಬಿಹಾರ 16, ಕರ್ನಾಟಕ 12, ಆಂಧ್ರಪ್ರದೇಶ 11, ಗುಜರಾತ್ 11, ಮಧ್ಯ ಪ್ರದೇಶ 11, ರಾಜಸ್ಥಾನ 10, ಒಡಿಶಾ 10, ಕೇರಳ 9, ಪಂಜಾಬ್ 7, ಅಸ್ಸಾಂ 7, ತೆಲಂಗಾಣ 7, ಜಾರ್ಖಂಡ್ 6, ಛತ್ತೀಸ್‌ಗಢ್ 5, ಹರಿಯಾಣ 5, ಜಮ್ಮು ಮತ್ತು ಕಾಶ್ಮೀರ 4, ಹಿಮಾಚಲ ಪ್ರದೇಶ 3, ನವದೆಹಲಿ 3, ಉತ್ತರಾಖಂಡ್ 3, ಅರುಣಾಚಲ ಪ್ರದೇಶ 1, ಗೋವಾ 1, ಮಣಿಪುರ 1, ಮೇಘಾಲಯ 1, ಮಿಜೋರಾಂ 1, ನಾಗಾಲ್ಯಾಂಡ್ 1, ಪುದುಚೇರಿ 1, ಸಿಕ್ಕಿಂ 1, ತ್ರಿಪುರ 1 ಸ್ಥಾನಗಳಿವೆ.


ರಾಜ್ಯಗಳಲ್ಲಿ ಗೆದ್ದವರದ್ದೇ ಪಾರುಪತ್ಯ


ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಸ್ಥಾನ ಹೊಂದಿರುವ ಪಕ್ಷವೇ ರಾಜ್ಯಸಭೆಯಲ್ಲಿ ಪಾರುಪತ್ಯ ಸಾಧಿಸುತ್ತದೆ. ಹೀಗಾಗಿ ರಾಜ್ಯಗಳಲ್ಲಿ ಬಹುಮತ ಸಾಧಿಸಿದ ಪಕ್ಷವೇ ಸಹಜವಾಗಿ ಹೆಚ್ಚು ಸದಸ್ಯರನ್ನು ತನ್ನ ಪಕ್ಷದಿಂದ ರಾಜ್ಯಸಭೆಗೆ ಕಳಿಸಬಹುದು.


ಮತದಾನ ಪ್ರಕ್ರಿಯೆ ನಡೆಯುವುದು ಹೇಗೆ?


ರಾಜ್ಯಸಭಾ ಚುನಾವಣೆಯಲ್ಲಿ ತಮ್ಮತಮ್ಮ ಪಕ್ಷದ ಅಧಿಕೃತ ಪ್ರತಿನಿಧಿ/ಏಜೆಂಟ್‌ಗಳಿಗೆ ತೋರಿಸಿಯೇ ಮತ ಚಲಾಯಿಸಬೇಕು. ಹಾಗಂತ, ವಿಪ್ ಉಲ್ಲಂಘಿಸಿ ಕ್ರಾಸ್ ವೋಟಿಂಗ್ ಮಾಡಬಾರದು ಎನ್ನುವ ಕಾನೂನೇನೂ ಇಲ್ಲ.


ಕರ್ನಾಟಕದಲ್ಲಿ ಲೆಕ್ಕಾಚಾರ ಹೇಗೆ?


ಕರ್ನಾಟಕದ ಜನರು ಆಯ್ಕೆ ಮಾಡಿರುವ ಶಾಸಕರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಒಬ್ಬರು ರಾಜ್ಯಸಭಾ ಸದಸ್ಯರ ಆಯ್ಕೆಗೆ 45 ಮತಗಳು ಅಗತ್ಯವಿದೆ. ವಿಧಾನಸಭೆಯ ಶಾಸಕರ ಬಲಾಬಲದ ಆಧಾರದ ಮೇಲೆ ಯಾರು, ಎಷ್ಟು ಸ್ಥಾನ ಗೆಲ್ಲುತ್ತಾರೆ? ಎಂಬುದು ತೀರ್ಮಾನವಾಗಲಿದೆ. ಉದಾಹರಣೆಗೆ ರಾಜ್ಯಸಭಾ ಸ್ಥಾನ ಗೆಲ್ಲಲು ಕರ್ನಾಟಕದ ಅಭ್ಯರ್ಥಿಗೆ (240/4+1) +1 ಅಂದರೆ 45ಮತಗಳು ಬೇಕು.


ಕರ್ನಾಟಕದಲ್ಲಿ ಹೇಗಿದೆ ಬಲಾಬಲ?


ಬಿಜೆಪಿಯಿಂದ 3, ಕಾಂಗ್ರೆಸ್ ನಿಂದ 2 ಹಾಗೂ ಜೆಡಿಎಸ್ ಪಕ್ಷದಿಂದ​ ಒಬ್ಬ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ. ಗೆಲ್ಲಲು ಪ್ರತಿ ಅಭ್ಯರ್ಥಿಗಳಿಗೆ 45 ಮತಗಳು ಅಂದರೆ 45 ಶಾಸಕರ ಬೆಂಬಲ ಬೇಕು. (4,481 ಮೌಲ್ಯಗಳು, ಒಬ್ಬ ಶಾಸಕನ ಒಂದು ಓಟು ಸಾವಿರ ಮೌಲ್ಯಗಳಿಗೆ ಸಮ) ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಲಿದೆ.


ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಲೆಕ್ಕಾಚಾರವೇನು?


ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಮತಗಳ ಹಂಚಿಕೆ ಬಳಿಕ ಇಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಅವರ ಬಳಿ 32 ಹೆಚ್ಚುವರಿ ಮತಗಳು ಉಳಿಯಲಿವೆ. ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿ ಗೆಲ್ಲಿಸಿಕೊಂಡ ನಂತರ 2ನೇ ಅಭ್ಯರ್ಥಿಗೆ 24 ಹೆಚ್ಚುವರಿ ಮತಗಳು ಉಳಿಯಲಿವೆ. ಕ್ರಾಸ್ ವೋಟಿಂಗ್ ಅಥವಾ ಶಾಸಕರ ಗೈರಾಗದಿದ್ದರೆ ಜೆಡಿಎಸ್ ಅಭ್ಯರ್ಥಿಗೆ ಕೂಡ 32 ಶಾಸಕರ ಬೆಂಬಲದ ಮತಗಳಿವೆ.


ಬಿಜೆಪಿಗೆ 2, ಕಾಂಗ್ರೆಸ್‌ಗೆ 1 ಗೆಲವು ನಿಶ್ಚಿತ


ಸದ್ಯ 2 ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಂಖ್ಯಾ ಬಲವಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಅನಾಯಾಸವಾಗಿ ಪಡೆಯಲಿದೆ. ಆದರೆ 4ನೇ ಸ್ಥಾನಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಥಾನಗಳ ಕೊರತೆ ಎದುರಾಗಲಿದೆ. ಜೆಡಿಎಸ್ ತಮ್ಮ ಬಳಿಯಲ್ಲಿರುವ ಶಾಸಕರ ಜೊತೆ 14 ಶಾಸಕರ ಕೊರತೆಯನ್ನು ಎದುರಿಸುತ್ತಿದ್ದು ನಾಲ್ಕನೇ ಸ್ಥಾನವನ್ನು ವಶಕ್ಕೆ ಪಡೆಯುವ ನಿರೀಕ್ಷೆಯಲ್ಲಿದೆ.


ಕರ್ನಾಟಕದಿಂದ ಗೆಲುವು ಯಾರಿಗೆ?


ರಾಜ್ಯಸಭಾ ಚುನಾವಣೆಯಲ್ಲಿ ಗೆಲುವನ್ನು ಪಡೆಯಲು ಒಬ್ಬ ಅಭ್ಯರ್ಥಿಗೆ 46 ಮತಗಳ ಅವಶ್ಯಕತೆ ಇದೆ. ಬಿಜೆಪಿಯು ಓರ್ವ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ 122 ಶಾಸಕರ ಮತಗಳನ್ನು ಹೊಂದಿದೆ. ಇದರಿಂದಾಗಿ ಸ್ವಂತ ಬಲದ ಮೇಲೆ ಎರಡು ಸ್ಥಾನಗಳನ್ನು ಪಡೆಯಲಿದ್ದು ಇನ್ನು 30 ಮತಗಳು ಹೆಚ್ಚುವರಿಯಾಗಿ ಇರಲಿದೆ. ಕಾಂಗ್ರೆಸ್ 70 ಶಾಸಕರ ಮತಗಳನ್ನು ಹೊಂದಿದ್ದು ಸ್ವಂತ ಬಲದ ಮೇಲೆ ಒಂದು ಸ್ಥಾನವನ್ನು ಗೆಲ್ಲಲಿದೆ. ಇದರೊಂದಿದೆ 24 ಮತಗಳು ಹೆಚ್ಚವರಿಯಾಗಿ ಸಿಗಲಿದೆ. ಇನ್ನು ಜೆಡಿಎಸ್ 32 ಶಾಸಕರನ್ನು ಹೊಂದಿದೆ. ಜೆಡಿಎಸ್‌ಗೆ ಸ್ವಂತ ಬಲದ ಮೇಲೆ ರಾಜ್ಯಸಭಾ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು,  ಕಾಂಗ್ರೆಸ್ ಅಥವಾ ಬಿಜೆಪಿಯ ಹೆಚ್ಚುವರಿ ಮತಗಳ ಮೇಲೆ ಕಣ್ಣಿಡಬೇಕಿದೆ.


ಕರ್ನಾಟಕದಿಂದ ನಾಲ್ವರು ಸದಸ್ಯರ ಆಯ್ಕೆ


ಕರ್ನಾಟಕದಿಂದ ಈ ಬಾರಿ ನಾಲ್ವರು ಸದಸ್ಯರು ರಾಜ್ಯಸಭೆಗೆ ಆಯ್ಕೆಯಾಗಬೇಕಿದೆ. ಸದ್ಯ ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಕುಪ್ಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿಖಾನ್ ನಾಮಪತ್ರ ಸಲ್ಲಿಸಿದ್ದಾರೆ.


ಮೂರನೇ ಅಭ್ಯರ್ಥಿ ಗೆಲುವು ಹೇಗೆ?


ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಮತಗಳ ಹಂಚಿಕೆ ಬಳಿಕ ಇಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಅವರ ಬಳಿ ಉಳಿಯಲಿವೆ 32 ಹೆಚ್ಚುವರಿ ಮತಗಳು. ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿ ಗೆಲ್ಲಿಸಿಕೊಂಡ ನಂತರ 2ನೇ ಅಭ್ಯರ್ಥಿಗೆ 24 ಹೆಚ್ಚುವರಿ ಮತಗಳು ಉಳಿಯಲಿವೆ. ಕ್ರಾಸ್ ವೋಟಿಂಗ್ / ಶಾಸಕರ ಗೈರಾಗದಿದ್ದರೆ ಜೆಡಿಎಸ್ ಅಭ್ಯರ್ಥಿಗೆ ಕೂಡ 32 ಶಾಸಕರ ಬೆಂಬಲದ ಮತಗಳಿವೆ.


ಒಬ್ಬ ಶಾಸಕರಿಗೆ ಪ್ರಥಮ-ದ್ವಿತೀಯ ಪ್ರಾಶಸ್ತ್ಯದ ಮತದಾನಕ್ಕೆ ಅವಕಾಶ


ಒಬ್ಬ ಶಾಸಕರಿಗೆ ಪ್ರಥಮ, ದ್ವಿತೀಯ ಪ್ರಾಶಸ್ತ್ಯದ ಮತದಾನ ಮಾಡಲು ಅವಕಾಶವಿರುತ್ತದೆ. 6 ಅಭ್ಯರ್ಥಿಗಳು ಕಣದಲ್ಲಿ ಉಳಿದರೆ ಗೆಲುವಿನ ಲೆಕ್ಕಾಚಾರ ಬದಲಾಗಲಿದೆ ಎನ್ನುವ ಮಾಹಿತಿಯಿದೆ. ಅತಿಹೆಚ್ಚು ಮೊದಲ ಪ್ರಾಶಸ್ತ್ಯದ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ನಾಲ್ಕನೇ ಅಭ್ಯರ್ಥಿಗೆ ಗೆಲ್ಲುವ ಅವಕಾಶ ಹೆಚ್ಚು. ಈ ಲೆಕ್ಕಾಚಾರದ ಪ್ರಕಾರ, ಬಿಜೆಪಿಯ ಮೂರನೇ ಅಭ್ಯರ್ಥಿ ಅಥವಾ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಗೆಲುವಿಗೆ ಹೆಚ್ಚಿನ ಅವಕಾಶ. ಯಾಕೆಂದರೆ ಇಬ್ಬರ ಬಳಿಯೂ 32 ಮತಗಳು ಇರುತ್ತವೆ. ಬಲಾಢ್ಯ ಹೈಕಮಾಂಡ್ ಮುಂದೆ ಬಿಜೆಪಿಯವರು ವಿಪ್ ಉಲ್ಲಂಘಿಸುವ ಸಾಧ್ಯತೆ ಕಮ್ಮಿ, ಆದರೆ ಇದೇ ಮಾತನ್ನು ಜೆಡಿಎಸ್ಸಿಗೆ ಹೇಳಲು ಬರುವುದಿಲ್ಲ. ಹಾಗಾಗಿ, ಸದ್ಯದ ರಾಜಕೀಯ ಲೆಕ್ಕಾಚಾರದ ಪ್ರಕಾರ, ಬಿಜೆಪಿ ಮೂರು ಸ್ಥಾನ ಗೆಲ್ಲುವ ಸಾಧ್ಯತೆ ಹೆಚ್ಚು.


ಇದನ್ನೂ ಓದಿ: Explained: ವಿಶ್ವದ ಈ ಪ್ರಸಿದ್ಧ ಸ್ಥಳಗಳು ಶೀಘ್ರವೇ ಕಣ್ಮರೆಯಾಗುತ್ತಂತೆ! ನೋಡಬೇಕು ಅಂದ್ರೆ ಬೇಗ ಹೊರಡಿ


57 ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆ


ರಾಜ್ಯಸಭೆಯ 57 ಸ್ಥಾನಗಳಿಗೆ ಜೂನ್​ 10ರಂದು ಚುನಾವಣೆ ನಡೆಯಲಿದೆ. ಆದರೆ, ಇದರಲ್ಲಿ 12 ರಾಜ್ಯದ 41 ಸ್ಥಾನಗಳಿಗೆ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಬಿಜೆಪಿಯ 14 ಅಭ್ಯರ್ಥಿಗಳು ಸಹ ಸೇರಿಕೊಂಡಿದ್ದು, ಉಳಿದ 16 ಸ್ಥಾನಗಳಿಗೆ ಮಾತ್ರ ಇದೀಗ ಮತದಾನ ನಡೆಯಲಿದೆ.

top videos
    First published: