ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ (state government) ಶಕ್ತಿ ಹೆಸರಿನ ಯೋಜನೆಯನ್ನು (Shakti Scheme) ಘೋಷಿಸಿದೆ. ಇದೇ ಜೂನ್ 12ರಿಂದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ (Free Bus Traveling) ಮಾಡಬಹುದಾಗಿದೆ. ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆದರೆ ಇದಕ್ಕೆ ಸ್ಮಾರ್ಟ್ ಕಾರ್ಡ್ (Smart Card) ಪಡೆಯೋದು ಅಗತ್ಯವಾಗಿದೆ. ಹಾಗಿದ್ರೆ ಏನಿದು ಸ್ಮಾರ್ಟ್ ಕಾರ್ಡ್, ಇದಕ್ಕೆ ಅರ್ಜಿ ಸಲ್ಲಿಸೋದು ಹೇಗೆ? ಇದನ್ನು ಪಡೆಯೋದು ಹೇಗೆ? ಸ್ಮಾರ್ಟ್ ಕಾರ್ಡ್ ಇಲ್ಲದೇ ಮಹಿಳೆಯರಿಗೆ ಉಚಿತ ಪ್ರಯಾಣ ಸಾಧ್ಯವಿಲ್ಲವೇ? ಈ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ…
ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್
ಉಚಿತ ಬಸ್ ಪ್ರಯಾಣಕ್ಕಾಗಿ ಮಹಿಳೆಯರು ‘ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ಹೊಂದಿರಬೇಕು ಎಂದು ಸರ್ಕಾರ ಸೂಚಿಸಿದೆ. ಈ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಇಲ್ಲದಿದ್ದರೆ ತಮ್ಮ ಪ್ರಯಾಣಕ್ಕೆ ಹಣ ಪಾವತಿಸಬೇಕಾಗುತ್ತದೆ.
ಈಗಾಗಲೇ ಹೇಳಿದಂತೆ ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ‘ಶಕ್ತಿ ಸ್ಮಾರ್ಟ್ ಕಾರ್ಡ್’ ಗಳನ್ನು ಪಡೆಯಬೇಕು. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ‘ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ಪಡೆಯಬಹುದು. ಮುಂದಿನ ಮೂರು ತಿಂಗಳು ಕಾಲ ಇದಕ್ಕೆ ಅವಕಾಶವಿದೆ ಅಂತ ಸರ್ಕಾರ ಹೇಳಿದೆ.
ಇದನ್ನೂ ಓದಿ: Gruhalakshmi Scheme: 2 ಸಾವಿರ ಪಡೆಯಲು ಅರ್ಜಿ ಹಾಕ್ಬೇಕಾ? ಕ್ಯೂ ನಿಲ್ಬೇಕಾ? 'ಗೃಹಲಕ್ಷ್ಮಿ'ಯರು ಹಣ ಪಡೆಯೋದು ಹೇಗೆ?
ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1 : ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2 : ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನೀವು ಇನ್ನೂ ಖಾತೆಯನ್ನು ಹೊಂದಿಲ್ಲದಿದ್ದರೆ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ನೀವು ಮುಖಪುಟದಿಂದ ನೋಂದಾಯಿಸಿಕೊಳ್ಳಬಹುದು.
ಹಂತ 3 : ಮೇಲಿನ ಟ್ಯಾಬ್‌ನಲ್ಲಿ "ಇಲಾಖೆಗಳು ಮತ್ತು ಸೇವೆಗಳು" ಮೇಲೆ ಕ್ಲಿಕ್ ಮಾಡಿ.
ಹಂತ 4 : "ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ" ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.
ಹಂತ 5 : ಒದಗಿಸಿದ ಮಾಹಿತಿಯನ್ನು ಓದಿ ಮತ್ತು "ಈಗ ಅನ್ವಯಿಸು" ಕ್ಲಿಕ್ ಮಾಡಿ.
ಹಂತ 6 : ನೀವು ದೃಢೀಕರಿಸಬೇಕಾದ ಘೋಷಣೆಯ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಂತರ "ಅರ್ಜಿ ಸಲ್ಲಿಸಲು ಮುಂದುವರಿಯಿರಿ" ಆಯ್ಕೆಮಾಡಿ.
ಹಂತ 7 : ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡುವ ಮೊದಲು ಒದಗಿಸಿದ ಹೆಚ್ಚುವರಿ ಮಾಹಿತಿಯನ್ನು ನೋಡಿ.
ಹಂತ 8 : ಮೌಲ್ಯೀಕರಣಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
ಹಂತ 9 : ಒಮ್ಮೆ OTP ಮೌಲ್ಯೀಕರಿಸಿದ ನಂತರ, ದೃಢೀಕರಣ ಪೆಟ್ಟಿಗೆಯನ್ನು ಪರಿಶೀಲಿಸುವ ಮೊದಲು ನಿಮ್ಮ ವಿವರಗಳನ್ನು ಪರಿಶೀಲಿಸಿ. "ಸಲ್ಲಿಸು" ಕ್ಲಿಕ್ ಮಾಡಿ.
ಹಂತ 10 : ಯಾವುದಾದರೂ ತಿದ್ದುಪಡಿಗಳಿದ್ದಲ್ಲಿ ಭರ್ತಿ ಮಾಡಿದ ಫಾರ್ಮ್ ಅನ್ನು ಒಮ್ಮೆ ನಿಮಗೆ ತೋರಿಸಲಾಗುತ್ತದೆ. ಬದಲಾವಣೆಗಳನ್ನು ಮಾಡಲು ನೀವು ಸಂಪಾದನೆ ಬಟನ್ ಅನ್ನು ಕ್ಲಿಕ್ ಮಾಡಬಹುದು. ಇಲ್ಲದಿದ್ದರೆ, ನೀವು "ಅನುಬಂಧವನ್ನು ಲಗತ್ತಿಸಿ" ಕ್ಲಿಕ್ ಮಾಡಬಹುದು.
ಹಂತ 11 : ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮತ್ತು "ಅನುಬಂಧಗಳನ್ನು ಉಳಿಸಿ" ಆಯ್ಕೆಮಾಡಿ.
ಹಂತ 12 : "ಇ-ಸೈನ್ ಮತ್ತು ಸಲ್ಲಿಸಿ" ಮೇಲೆ ಕ್ಲಿಕ್ ಮಾಡಿ.
ಹಂತ 13 : ನಿಯಮಗಳು ಮತ್ತು ಷರತ್ತುಗಳಿಗೆ ಸಮ್ಮತಿಸಿ. "OTP" ಬಟನ್ ಮೇಲೆ ಕ್ಲಿಕ್ ಮಾಡಿ. OTP ಸ್ವೀಕರಿಸಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ .
ಹಂತ 14: ಮೇಲಿನ ಹಂತವನ್ನು ಪೂರ್ಣಗೊಳಿಸಿದ ನಂತರ, ಸ್ವೀಕೃತಿ ಸ್ಲಿಪ್ ಅನ್ನು ರಚಿಸಲಾಗುತ್ತದೆ.
(ಗಮನಿಸಿ: ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಪ್ರಕಿಯೆ ಬದಲಾಗಲೂ ಬಹುದು)
3 ತಿಂಗಳೊಳಗೆ ಸ್ಮಾರ್ಟ್ ಕಾರ್ಡ್ ಲಭ್ಯ
ಅಂದಹಾಗೆ ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಇನ್ನೂ ಪ್ರಾರಂಭವಾಗಿಲ್ಲ. ಮುಂದಿನ ಮೂರು ತಿಂಗಳೊಳಗೆ ಉಚಿತ ಪ್ರಯಾಣ ಸೌಲಭ್ಯ ಪಡೆಯುವ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ ಅಂತ ಸರ್ಕಾರ ಹೇಳಿದೆ. ಅದಾದ ಬಳಿಕ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಲಿದೆ.
ಇದನ್ನೂ ಓದಿ: Free Electricity: ನಿಮ್ಮ ಮನೆಗೂ ಸಿಗುತ್ತಾ 200 ಯುನಿಟ್ ಉಚಿತ ವಿದ್ಯುತ್? ಫ್ರೀ ಕರೆಂಟ್ ಪಡೆಯುವುದು ಹೇಗೆ?
ಅಲ್ಲಿಯವರೆಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವುದು ಹೇಗೆ?
ಈ ಪ್ರಶ್ನೆ ನಿಮ್ಮೆಲ್ಲರನ್ನೂ ಕಾಡುತ್ತಿರಬಹುದು. 3 ತಿಂಗಳ ಒಳಗೆ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಅಲ್ಲಿಯವರೆಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ವಿತರಿಸಲಾಗಿರುವ ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ಜೂನ್ 12ರಿಂದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ