• Home
  • »
  • News
  • »
  • explained
  • »
  • Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!

Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!

ಅಪರಾಧಿಗಳು

ಅಪರಾಧಿಗಳು

Shraddha Walker Murder Case: ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ಹತ್ಯೆ ಈ ಹಿಂದೆ ನಡೆದ ಡೆಹ್ರಾಡೂನ್‌ನ ಅನುಪಮಾ ಗುಲಾಟಿ ಹತ್ಯೆ ಪ್ರಕರಣವನ್ನು ನೆನಪಿಸಿದೆ ಎನ್ನಬಹುದು. ಅಕ್ಟೋಬರ್ 17, 2010 ರಂದು, ಡೆಹ್ರಾಡೂನ್‌ನ ಕಣಿವೆ ಶ್ರದ್ಧಾ ಕೊಲೆಗಿಂತ ಹೆಚ್ಚು ಭಯಾನಕವಾಗಿರುವ ಘಟನೆಗೆ  ಸಾಕ್ಷಿಯಾಗಿತ್ತು.

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

    ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ (Shraddha Walker Murder Case) ಮನುಕುಲವನ್ನೇ ಬೆಚ್ಚಿ ಬೀಳಿಸಿದೆ. ಇದು ಅಂತಿಂತಹ ಕೊಲೆಯಲ್ಲ, ಕಿರಾತಕ ಆರೋಪಿ ಪ್ರೇಯಸಿ ಅಂತಾನೂ ನೋಡದೇ ಕ್ರೂರವಾಗಿ ವರ್ತಿಸಿದ್ದಾನೆ. ಅಫ್ತಾಬ್ ಅಮೀನ್ ಪೂನಾವಾಲಾ (Aftab Amin Poonawalla) ಎನ್ನುವ ಯುವಕ ಶ್ರದ್ಧಾಳನ್ನು ಕೊಲೆ ಮಾಡಿ 35 ತುಂಡುಗಳನ್ನಾಗಿ ಕತ್ತರಿಸಿ ಪ್ರಿಡ್ಜ್‌ನಲ್ಲಿ ತುಂಬಿಸಿದ ಭಯಾನಕ ಘಟನೆ ಇದಾಗಿದೆ. ಈ ರೀತಿಯ ರಕ್ತಸಿಕ್ತ ಚರಿತ್ರೆಗಳು ಈ ಹಿಂದೆಯೂ ನೆಡೆದಿವೆ. ಕ್ರೂರವಾಗಿ ಕೊಲೆ ಮಾಡಿ ವಿಕೃತಿ ಮರೆದಿರುವ ಪ್ರಕರಣಗಳು ಸಾಕಷ್ಟಿವೆ. ಅದರಲ್ಲಿ ಮುಖ್ಯವಾಗಿ ಡೆಹ್ರಾಡೂನ್‌ನ ಅನುಪಮಾ ಗುಲಾಟಿ ಹತ್ಯೆ.


    ಮನುಕುಲವನ್ನೇ ನಡುಗಿಸಿದ ಕೊಲೆಗಳು


    ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ಹತ್ಯೆ ಈ ಹಿಂದೆ ನಡೆದ ಡೆಹ್ರಾಡೂನ್‌ನ ಅನುಪಮಾ ಗುಲಾಟಿ ಹತ್ಯೆ ಪ್ರಕರಣವನ್ನು ನೆನಪಿಸಿದೆ ಎನ್ನಬಹುದು. ಅಕ್ಟೋಬರ್ 17, 2010 ರಂದು, ಡೆಹ್ರಾಡೂನ್‌ನ ಕಣಿವೆ ಶ್ರದ್ಧಾ ಕೊಲೆಗಿಂತ ಹೆಚ್ಚು ಭಯಾನಕವಾಗಿರುವ ಘಟನೆಗೆ  ಸಾಕ್ಷಿಯಾಗಿತ್ತು.


    ಎರಡು ಕೊಲೆಗಳ ನಡುವಿನ ವಿಲಕ್ಷಣ ಹೋಲಿಕೆಗಳು ಮತ್ತು ಅಪರಾಧ ನಡೆಸಿದ ವ್ಯಕ್ತಿಗಳು ಕೊಲೆಯನ್ನು ಮುಚ್ಚಿಹಾಕಲು ಮಾಡಿದ ಮಾಸ್ಟರ್‌ ಪ್ಲ್ಯಾನ್‌ ಬಗೆಗಿನ ವಿವರ ಇಲ್ಲಿದೆ ನೋಡಿ.


    Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


    ಶ್ರದ್ಧಾಳನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿರಿಸಿದ ಕ್ರೂರಿ


    ಅಂದು, ಮೇ 18 ತನ್ನ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ಪ್ರೇಯಸಿ 29 ವರ್ಷದ ಶ್ರದ್ಧಾಳ ಜೊತೆ ಜಗಳ ಆಡಿದ್ದ ಅಫ್ತಾಬ್, ದಿಲ್ಲಿಯ ಮೆಹ್ರೌಲಿ ನಿವಾಸದಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಂದು ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದ.


    ಬಳಿಕ ಸುಮಾರು ಐದು ತಿಂಗಳ ಕಾಲ ಫ್ರಿಡ್ಜ್‌ನಲ್ಲಿ ದೇಹದ ತುಂಡುಗಳನ್ನು ಸಂಗ್ರಹಿಸಿ ನಂತರ ಪ್ರಕರಣವನ್ನು ಮುಚ್ಚಿ ಹಾಕಲು ಪ್ರೇಯಸಿಯ ದೇಹದ ತುಂಡುಗಳನ್ನು ದಿಲ್ಲಿಯ ವಿವಿಧೆಡೆ ಎಸೆದಿದ್ದ.




    ಕೊಲೆ ಮಾಡಲು ಬಳಸಿದ್ದ ಗರಗಸ ವಶಕ್ಕೆ


    ಶ್ರದ್ಧಾಳ ತಂದೆ ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಅಫ್ತಾಬ್‌ನ ತನಿಖೆ ನಡೆಸಿ ಹತ್ಯೆ ಪ್ರಕರಣವನ್ನು ಭೇದಿಸಿದ್ದಾರೆ. ದೆಹಲಿ ಪೊಲೀಸರು ಈ ಕೊಲೆಯ ತನಿಖೆಯನ್ನು ಕೈಗೆತ್ತಿಕೊಂಡು ಶ್ರದ್ಧಾಳ ದೇಹದ ಭಾಗಗಳನ್ನು ಮತ್ತು ಕೊಲೆಗೆ ಬಳಕೆ ಮಾಡಿದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಅಫ್ತಾಬ್‌ ಕೊಲೆ ಮಾಡಲು ಮತ್ತು ದೇಹವನ್ನು ಕತ್ತರಿಸಲು ಒಂದು ಅಡಿ ಉದ್ದದ ಸಣ್ಣ ಗರಗಸವನ್ನು ಬಳಸಿದ್ದ.


    12 ವರ್ಷಗಳ ಹಿಂದಿನ ಅನುಪಮಾ ಕೊಲೆ ನೆನಪಿಸಿದ ಶ್ರದ್ಧಾ ಹತ್ಯೆ


    ಪೊಲೀಸರು ಸೇರಿ ಪ್ರತಿಯೊಬ್ಬರಿಗೂ ಶಾಕ್‌ ನೀಡಿದ ಈ ಘೋರ ಕೊಲೆ ಡೆಹ್ರಾಡೂನ್‌ನಲ್ಲಿ ನಡೆದ ಅಂತಹುದೇ ದುಃಸ್ವಪ್ನದ ನೆನಪುಗಳನ್ನು ಮರಳಿ ತಂದಿದೆ ಎನ್ನಬಹುದು.


    2010ರಲ್ಲಿ ನಡೆದಿದ್ದ ಅನುಪಮಾ ಗುಲಾಟಿ ಹತ್ಯೆ ಪ್ರಕರಣ ಇದೇ ಕೊಲೆಯನ್ನು ಹೋಲುತ್ತದೆ. ಇನ್ನೂ ಕೂಡ ಡೆಹ್ರಾಡೂನ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಾಫ್ಟ್‌ವೇರ್ ಇಂಜಿನಿಯರ್ ರಾಜೇಶ್ ಗುಲಾಟಿ ತನ್ನ ಪತ್ನಿ ಅನುಪಮಾ ಗುಲಾಟಿಯನ್ನು ಕೊಂದು ಆಕೆಯ ದೇಹವನ್ನು 72 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿ ಉತ್ತರಾಖಂಡದ ರಾಜಧಾನಿಯಾದ್ಯಂತ ಹಲವಾರು ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದ.


    ಅನುಪಮಾ ಗುಲಾಟಿ ಹತ್ಯೆ.. 72 ತುಂಡುಗಳಾಗಿ ಕತ್ತರಿಸಿದ ಪತಿ


    2010 ಅಕ್ಟೋಬರ್ 17 ರಂದು ಡೆಹ್ರಾಡೂನ್‌ನಲ್ಲಿ ಅನುಪಮಾ ಗುಲಾಟಿ ಹತ್ಯೆ ನಡೆದಿತ್ತು. ಆದರೆ ಈ ಹತ್ಯೆ 2010ರ ಡಿಸೆಂಬರ್ 12 ರಂದು ಬಯಲಿಗೆ ಬಂದಿತ್ತು. ಅನುಪಮಾ ಗುಲಾಟಿ ಪತಿ ರಾಜೇಶ್ ಗುಲಾಟಿ ತನ್ನ ಮಡದಿಯ ಶವವನ್ನು 72 ತುಂಡುಗಳಾಗಿ ಕತ್ತರಿಸಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಫ್ರಿಡ್ಜ್‌ನಲ್ಲಿ ಇಟ್ಟು ದೇಹದ ತುಂಡುಗಳನ್ನು ಬಿಸಾಡಿದ್ದ.


    ದೆಹಲಿ ಮೂಲದ ಅನುಪಮಾ ಡೆಹ್ರಾಡೂನ್‌ನ ಸಾಫ್ಟ್‌ವೇರ್ ಇಂಜಿನಿಯರ್ ರಾಜೇಶ್ ಗುಲಾಟಿಯನ್ನು 1999 ರಲ್ಲಿ ವಿವಾಹವಾದರು. ಮದುವೆಯಾದ ನಂತರ ದಂಪತಿ ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ಆರು ವರ್ಷಗಳ ಕಾಲ ನೆಲೆಸಿದ್ದರು ಮತ್ತು 2006 ರಲ್ಲಿ ಭಾರತಕ್ಕೆ ಮರಳಿದ್ದರು.


    ಸಾವಿನಲ್ಲಿ ಅಂತ್ಯ ಕಂಡ ಜಗಳ


    ಯುಎಸ್‌ನಿಂದ ಹಿಂದಿರುಗಿದ ನಂತರ, ದಂಪತಿ ಡೆಹ್ರಾಡೂನ್‌ನ ಪ್ರಕಾಶ್ ನಗರದಲ್ಲಿ ನೆಲೆಸಲು ನಿರ್ಧರಿಸಿದರು. ಇಬ್ಬರ ದಾಂಪತ್ಯ ಆದಾಗ್ಲೇ ಹಳಸಿ ಹೋಗಿ ಪ್ರತಿನಿತ್ಯ ಜಗಳವಾಡುತ್ತಿದ್ದರು. ಕೋಲ್ಕತ್ತಾದ ಮಹಿಳೆಯೊಂದಿಗೆ ರಾಜೇಶ್ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ಅನುಪಮಾ ಆರೋಪಿಸುತ್ತಿದ್ದರು ಮತ್ತು ಈ ಕಾರಣಕ್ಕಾಗಿಯೇ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು.


    ಹೀಗೆ 17 ಅಕ್ಟೋಬರ್ 2010 ರಂದು, ದಂಪತಿಯ ಈ ಜಗಳ ಅತಿರೇಕಕ್ಕೆ ತಲುಪಿ ಹತ್ಯೆ ನಡೆಯಿತು. ಜಗಳದಲ್ಲಿ ರಾಜೇಶ್ ತನ್ನ ಹೆಂಡತಿಗೆ ಕಪಾಳಮೋಕ್ಷ ಮಾಡಿದ್ದ. ಈ ಏಟಿಗೆ ಅನುಪಮಾ ಪ್ರಜ್ಞಾಹೀನಳಾಗಿ ಬಿದ್ದುಬಿಟ್ಟಳು.


    ಗರಗಸ ಮತ್ತು ‌ಫ್ರೀಜರ್ ಅನ್ನು ಖರೀದಿಸಿದ ರಾಜೇಶ್


    ಅನುಪಮಾ ಎಚ್ಚೆತ್ತುಕೊಂಡು ಪೊಲೀಸರಿಗೆ ವಿಷಯ ತಿಳಿಸುತ್ತಾಳೆ ಎಂದು ಹೆದರಿದ ರಾಜೇಶ್ ನಂತರ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಇಷ್ಟಕ್ಕೆ ಮುಗಿಯದ ರಾಜೇಶ್‌ ಕ್ರೌರ್ಯ ಮಡದಿಯನ್ನೇ ತುಂಡರಿಸುವ ಮಟ್ಟಕ್ಕೆ ಹೋಗಿತ್ತು. ಈ ಕೊಲೆಯಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿದ ರಾಜೇಶ್‌ ವಿದ್ಯುತ್ ಗರಗಸ ಮತ್ತು ದೊಡ್ಡ ಫ್ರೀಜರ್ ಅನ್ನು ಖರೀದಿಸಿದ.


    ಅನುಪಮಾಳನ್ನು 70 ಪೀಸ್‌ ಮಾಡಿದ ಪತಿ


    ರಾಜೇಶ್‌


    ನಂತರ ರಾಜೇಶ್‌ ಪತ್ನಿ ಅನುಪಮಾಳನ್ನು 70 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ  ಅವುಗಳನ್ನು ಪ್ರತ್ಯೇಕ ಪಾಲಿಥಿನ್ ಚೀಲಗಳಲ್ಲಿ ತುಂಬಿಸಿ ಡೀಪ್ ಫ್ರೀಜರ್‌ನಲ್ಲಿ ಸಂಗ್ರಹಿಸಿಟ್ಟಿದ್ದ. ನಂತರ ರಾಜೇಶ್ ಪಾಲಿಥಿನ್ ಚೀಲಗಳನ್ನು ಒಂದೊಂದಾಗಿ ಮಸ್ಸೂರಿ ತಿರುವು ಬಳಿಯ ರಾಜಪುರ ರಸ್ತೆಯಲ್ಲಿ ಬಿಸಾಡಿದ್ದಾನೆ. ಮಕ್ಕಳಿಗೆ ತಾಯಿ ದೆಹಲಿಯಲ್ಲಿದ್ದಾರೆ ಬರುತ್ತಾರೆಂದು ಯಾಮಾರಿಸಿದ್ದ. ಹಾಗೆಯೇ ಸುಳ್ಳು ಇಮೇಲ್‌ಗಳನ್ನು ಕಳುಹಿಸುವ ಮೂಲಕ ಪತ್ನಿ ಜೀವಂತವಾಗಿದ್ದಾಳೆ ಎಂದು ಮೋಸ ಮಾಡಿದ್ದ.


    ಆದಾಗ್ಯೂ, ಡಿಸೆಂಬರ್‌ನಲ್ಲಿ ಅನುಪಮಾ ಅವರ ಸಹೋದರ ಸುಜನ್ ಪ್ರಧಾನ್ ಸಹೋದರಿಯನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದಂಪತಿ ನಿವಾಸಕ್ಕೆ ಭೇಟಿ ನೀಡಿದ ನಂತರ ಭೀಕರ ಹತ್ಯೆ ಬೆಳಕಿಗೆ ಬಂದಿದೆ.


    ನಂತರ ತಡಮಾಡದ ಪ್ರಧಾನ್‌ ಪೊಲೀಸರಿಗೆ ಅನುಪಮಾ ನಾಪತ್ತೆಯಾಗಿದ್ದಾರೆ ಎಂದು ದೂರು ಸಲ್ಲಿಸಿದರು. ಬಳಿಕ ಕಂಟೋನ್ಮೆಂಟ್ ಪೊಲೀಸರು ರಾಜೇಶ್ ಅವರ ಮನೆಯ ಮೇಲೆ ದಾಳಿ ನಡೆಸಿದಾಗ ಲಾಕ್ ಆಗಿದ್ದ ಡೀಪ್ ಫ್ರೀಜರ್ ಪತ್ತೆಯಾಗಿದೆ. ಅದರಲ್ಲಿದ್ದ ಕೆಲ ಕುರುಹುಗಳು ಕೊಲೆಯ ಬಗ್ಗೆ ಸಾಕ್ಷಿ ಹೇಳಿದ್ದವು.


    2017 ರಲ್ಲಿ ರಾಜೇಶ್‌ಗೆ ಜೀವಾವಧಿ ಶಿಕ್ಷೆ


    ಬಳಿಕ ರಾಜೇಶ್‌ನನ್ನು ಬಂಧಿಸಿದ ಪೊಲೀಸರು, ವಿಚಾರಣೆ ಆರಂಭಿಸಿದರು. ಸೆಪ್ಟೆಂಬರ್ 2017 ರಲ್ಲಿ ಅನುಪಮಾ ಗುಲಾಟಿಯ ಕ್ರೂರ ಮತ್ತು ಹೇಯ ಹತ್ಯೆಗಾಗಿ ರಾಜೇಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಈ ಬಗ್ಗೆ ರಾಜೇಶ್‌ ಸ್ವಲ್ಪವೂ ಪಶ್ಚಾತ್ತಾಪ ಪಡದೇ "ನಾನು ಏನು ಮಾಡಿದ್ದೇನೆ, ಅದನ್ನು ಮಕ್ಕಳಿಗಾಗಿ ಮಾಡಿದ್ದೇನೆ" ಎಂದು ಹೇಳಿದ್ದರಂತೆ.


    ಈ ವರ್ಷದ ಜುಲೈನಲ್ಲಿ, ಜೈಲಿನಲ್ಲಿ ಅವರ ಆರೋಗ್ಯ ಹದಗೆಟ್ಟ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲು ರಾಜೇಶ್ ಅವರಿಗೆ 45 ದಿನಗಳ ಅಲ್ಪಾವಧಿಯ ಜಾಮೀನು ನೀಡಲಾಯಿತು. ಸೆಪ್ಟೆಂಬರ್‌ನಲ್ಲಿ ಜಾಮೀನು ಅವಧಿಯನ್ನು ಇನ್ನೂ 21 ದಿನಗಳವರೆಗೆ ವಿಸ್ತರಿಸಲಾಯಿತು.


    ಶ್ರದ್ಧಾ ವಾಲ್ಕರ್ ಮತ್ತು ಅನುಪಮಾ ಹತ್ಯೆಯ ಸಾಮ್ಯತೆಗಳು


    ತನಿಖಾಧಿಕಾರಿಗಳ ಪ್ರಕಾರ, 2010 ರ ಅನುಪಮಾ ಗುಲಾಟಿ ಪ್ರಕರಣ ಮತ್ತು ಇಂದಿನ ಶ್ರದ್ಧಾ ವಾಲ್ಕರ್ ಹತ್ಯೆಯು ಅನೇಕ ಸಾಮ್ಯತೆಗಳನ್ನು ಹೊಂದಿದೆ ಎಂದಿದ್ದಾರೆ. ಹಿರಿಯ ಪೊಲೀಸ್ ಅಧೀಕ್ಷಕ ಜಿ ಎಸ್ ಮಾರ್ಟೋಲಿಯಾ, ಅವರ ಅಧಿಕಾರಾವಧಿಯಲ್ಲಿ ಡೆಹ್ರಾಡೂನ್ ಹತ್ಯೆಯನ್ನು ಬಹಿರಂಗಪಡಿಸಲಾಯಿತು, ಅನುಪಮಾ ಪ್ರಕರಣವು ತಾನು ಹಿಂದೆಂದೂ ನೋಡಿರದ ಪ್ರಕರಣವಾಗಿತ್ತು. ಆದರೆ ಈಗ ಅದೇ ಕೊಲೆಯನ್ನು ಮರುಸೃಷ್ಟಿ ಮಾಡಿದಂತೆ ಶ್ರದ್ಧಾ ವಾಲ್ಕರ್ ಹತ್ಯೆ ನಡೆದಿದೆ. ಎರಡೂ ಕೊಲೆಗಳ ನಡುವೆ ಹೋಲಿಕೆ ಇದೆ ಎಂದು ಹೇಳಿದರು.


    ಇಬ್ಬರೂ ಗರಗಸ ಮತ್ತು ಫ್ರಿಡ್ಜ್‌ ಖರೀದಿಸಿದ್ದರು


    ರಾಜೇಶ್ ಎಲೆಕ್ಟ್ರಿಕ್ ಗರಗಸ ಬಳಸಿ ಅನುಪಮಾ ದೇಹವನ್ನು ಕತ್ತರಿಸಿದಂತೆಯೇ ಪ್ರಸ್ತುತ ಪ್ರಕರಣದಲ್ಲಿ ಅಫ್ತಾಬ್ ಕೂಡ ಮಾಡಿದ್ದಾನೆ. ಇಬ್ಬರೂ ಕೂಡ ಛಿದ್ರಗೊಂಡ ದೇಹಗಳನ್ನು ಸಂಗ್ರಹಿಸಲು ಫ್ರಿಜ್ಡ್‌ ಮತ್ತು ಡೀಪ್ ಫ್ರೀಜರ್‌ಗಳನ್ನು ಖರೀದಿಸಿ ಅದರಲ್ಲಿ ತುಂಬಿಟ್ಟಿದ್ದಾರೆ. ನಂತರ ರಾಜೇಶ್‌ ಮಾಡಿದಂತೆ ಅಫ್ತಾಬ್ ದೇಹದ ತುಂಡುಗಳನ್ನು ಬೇರೆ ಬೇರೆ ಕಡೆಗೆ ಬಿಸಾಕಿದ್ದಾನೆ. ಹಾಗೆಯೇ ಇಬ್ಬರೂ ಕುಟುಂಬದವರನ್ನು ದಾರಿ ತಪ್ಪಿಸಿ ಅವರು ಇರುವುದಾಗಿ ನಂಬಿಸಿದ್ದಾರೆ.


    ಜೀವಂತವಾಗಿದ್ದಾರೆ ಎಂದು ನಾಟಕವಾಡಿದ್ದ ಅಪರಾಧಿಗಳು


    ರಾಜೇಶ್‌ ಇಮೇಲ್‌ ಕಳುಹಿಸುವ ಮೂಲಕ ಅನುಪಮಾ ಕೊಲೆಯ ಸುದ್ದಿಯನ್ನು ಮುಚ್ಚಿಡಲು ಬಯಸಿದರೆ, ಇತ್ತ ಅಫ್ತಾಬ್ ಶ್ರದ್ಧಾ ವಾಲ್ಕರ್ ಅವರ ಸೋಶಿಯಲ್‌ ಮೀಡಿಯಾವನ್ನು ಆಕ್ಟೀವ್‌ ಆಗಿಡುವ ಮೂಲಕ ಕೊಲೆಯನ್ನು ಮುಚ್ಚಿ ಹಾಕಲು ಪ್ಲ್ಯಾನ್‌ ಮಾಡಿದ್ದ.


    ಮೇ 17 ರಂದು ಶ್ರದ್ಧಾ ಅವರನ್ನು ಕೊಲೆ ಮಾಡಿದ ನಂತರ, ಜೂನ್ 9 ರವರೆಗೆ ಸಾಮಾಜಿಕ ಮಾಧ್ಯಮದಲ್ಲಿ ಶ್ರದ್ದಾ ಸಕ್ರಿಯವಾಗಿರುವಂತೆ ನೋಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಅಫ್ತಾಬ್ ಶ್ರದ್ಧಾ ವಾಲ್ಕರ್ ಪರವಾಗಿ ಪೋಸ್ಟ್ ಮಾಡುತ್ತಿದ್ದ ಮತ್ತು ಅವಳ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.




    ಸೆಪ್ಟೆಂಬರ್‌ನಲ್ಲಿ ಶ್ರದ್ಧಾ ಅವರ ಫೋನ್‌ ತುಂಬಾ ದಿನಗಳಿಂದ ಸ್ವಿಚ್‌ಆಫ್‌ ಆಗಿದೆ ಎಂದು ಗಾಬರಿಯಾದ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಪೊಲೀಸರಿಗೆ ನಾಪತ್ತೆ ದೂರು ನೀಡಿದರು.


    ರಾಜೇಶ್‌ ಕೆಲ ಹಾಲಿವುಡ್‌ ಚಿತ್ರಗಳಿಂದ ಕೊಲೆಯ ಐಡಿಯಾ ನಕಲಿಸಿದ್ದಾಗಿ ಒಪ್ಪಿಕೊಂಡಿದ್ದರೆ ಇತ್ತ ಅಫ್ತಾಬ್ ಅಮೆರಿಕನ್ ಕ್ರೈಮ್ ಶೋ ಡೆಕ್ಸ್ಟರ್‌ನಿಂದ ಕೊಲೆಯ ಪ್ರೇರಣೆ ಪಡೆದೆ ಎಂದಿದ್ದಾನೆ ಎಂದು ವರದಿಯಾಗಿದೆ.


    ಅಫ್ತಾಬ್‌ಗೆ ಮರಣದಂಡನೆಗೆ ಒಳಪಡಿಸಲು ಒತ್ತಾಯ


    ಒಟ್ಟಾರೆ ಈ ಎರಡೂ ವಿಕೃತ ಮನಸ್ಸುಗಳಿಂದಾಗಿ ಬಾಳಿ ಬದುಕಬೇಕಿದ್ದ ಜೀವಗಳು ಭೀಕರವಾಗಿ ಅಂತ್ಯಕಂಡಿದ್ದಾರೆ. ಅನುಪಮಾ ಸಾವಿನಲ್ಲಿ ಪತಿ ರಾಜೇಶ್‌ಗೆ ನೀಡಿದ ಜೀವಾವಧಿ ಶಿಕ್ಷೆಯಂತೆ ಶ್ರದ್ಧಾ ವಾಲ್ಕರ್ ಕೊಲೆಯಲ್ಲಿ ಅಫ್ತಾಬ್‌ಗೆ ಜೀವಾವಧಿ ಶಿಕ್ಷೆಗಾಗಿ ಕುಟುಂಬ ಒತ್ತಾಯಿಸಿದೆ. "ನಾವು ಅಫ್ತಾಬ್‌ಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತೇವೆ" ಎಂದು ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ಹೇಳಿದ್ದಾರೆ.

    Published by:Precilla Olivia Dias
    First published: