Explained: ಟಿಪ್ಪು ಆಳ್ವಿಕೆಯಲ್ಲಿ ಜಾರಿಗೆ ಬಂತಾ ದೀವಟಿಗೆ ಸಲಾಂ; ಸಂಧ್ಯಾರತಿ ದೀವಟಿಗೆ ಸಲಾಂ ಆಗಿದ್ದು ಹೇಗೆ ಗೊತ್ತಾ..?

ಆದ್ರೆ ಟಿಪ್ಪು ಮೈಸೂರು ಪ್ರಾಂತ್ಯದ ಅಧಿಕಾರ ವಹಿಸಿಕೊಂಡ ಬಳಿಕ ಸಂಧ್ಯಾರತಿಯನ್ನ ದೀವಟಿಗದ ಸಲಾಂ ಮಾಡಲಾಯ್ತು ಅಂತ ಹೇಳಲಾಗುತ್ತಿದೆ.

ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ಸಂಗ್ರಹ ಚಿತ್ರ

ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ಸಂಗ್ರಹ ಚಿತ್ರ

  • Share this:
ಹಿಜಾಬ್ (Hijab) ವಿವಾದ ಬಳಿಕ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧದ ನಂತರ ಇದೀಗ  ರಾಜ್ಯದಲ್ಲಿ ಸಲಾಂ ಸಂಸ್ಕೃತಿಗೆ ನಿಲ್ಲಿಸಬೇಕು ಎಂಬ ಕೂಗು ಕೇಳಿ ಬಂದಿದೆ. ಮೊದಲು ಕೊಲ್ಲೂರಿನಲ್ಲಿ ನಂತರ ಕೊಡಗು ಈಗ ಮಂಡ್ಯದಲ್ಲಿ ಇದರ ವಿರುದ್ದ  ಕೂಗು ಕೇಳಿ ಬಂದಿದೆ. ಮಂಡ್ಯದ ಮೇಲುಕೋಟೆಯ ಚೆಲುವ ನಾರಾಯಾಣಸ್ವಾಮಿ ದೇವಸ್ಥಾನದಲ್ಲಿ (Cheluva Narayanaswamy Temple in Melukote) ನಡೆಯುವ ದೀವಟಿಗೆ ಸಲಾಂ ಪೂಜೆಯನ್ನು (Salma Mangalarathi)  ನಿಲ್ಲಿಸಬೇಕು ಎಂಬ ಮಾತು ಕೇಳಿ ಬಂದಿದೆ.

ಟಿಪ್ಪು ಕಾಲದಲ್ಲಿ ಜಾರಿಗೆ ಬಂದ ದೀವಟಿಗೆ ಸಲಾಂ.

ಮೊದಲು ಕೊಲ್ಲೂರಿನಲ್ಲಿ ಆರಂಭವಾದ ಈ ಕೂಗು ಬಳಿಕ ನಿಧಾನವಾಗಿ ಕೊಡಗು ಹಾಗೂ ಮಂಡ್ಯಕ್ಕೂ ವ್ಯಾಪಿಸಿದೆ‌. ಈಗಾಗಲೇ ಕೊಲ್ಲೂರು ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಪ್ರದೋಷ ಪೂಜೆ. ಸ್ಥಳೀಯರು ಇದನ್ನು ಸಲಾಂ ಮಂಗಳಾರತಿ ಎನ್ನುತ್ತಾರೆ. ಆದರೆ, ಆ ರೀತಿ ಮಂಗಳರಾತಿ ನಡೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಈ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಮೇಲುಕೋಟೆಯಲ್ಲಿ ಟಿಪ್ಪು ಕಾಲದಲ್ಲಿ ಜಾರಿಗೆ ಬಂದ ದೀವಟಿಗೆ ಸಲಾಂ ಸಂಸ್ಕೃತಿ ಕುರಿತು ಧ್ವನಿ ಎತ್ತಲಾಗಿದೆ.  ಮೇಲುಕೋಟೆಯಲ್ಲಿ ನಡೆಯುವ  ದೀವಟಿಗೆ ಸಲಾಂ ಪೂಜೆಯ‌ನ್ನ ನಿಲ್ಲಿಸಬೇಕು ಅಥವಾ ಅದರ ಹೆಸರನ್ನ ಬದಲಾಯಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

ಸಂಧ್ಯಾರತಿಯನ್ನ ಬದಲಾಯಿಸಿ ದೀವಟಿಗೆ ಸಲಾಂ ಜಾರಿಗೆ ತರಲಾಯ್ತಾ..?

ಇತಿಹಾಸ ತಜ್ಞರ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಮೇಲುಕೋಟೆ ಚಲುವನಾರಾಯಾಣಸ್ವಾಮಿ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ಸಂಧ್ಯಾರತಿ ಮಾಡಲಾಗುತಿತ್ತು. ಆದ್ರೆ ಟಿಪ್ಪು ಮೈಸೂರು ಪ್ರಾಂತ್ಯದ ಅಧಿಕಾರ ವಹಿಸಿಕೊಂಡ ಬಳಿಕ ಸಂಧ್ಯಾರತಿಯನ್ನ ದೀವಟಿಗದ ಸಲಾಂ ಮಾಡಲಾಯ್ತು ಅಂತ ಹೇಳಲಾಗುತ್ತಿದೆ. ಇದಕ್ಕೆ ಕಾರಣ ಮೈಸೂರು ಅರಮನೆಯಲ್ಲಿ ಇದ್ದ ಆನೆಗಳು ವಿನಾಕಾರಣ ಸಾಲು ಸಾಲಾಗಿ ಸಾವನ್ನಪ್ಪುತ್ತಿದ್ದವು.

ಹೀಗಾಗಿ ಟಿಪ್ಪು ಸುಲ್ತಾನ್ ಚಲುವನಾರಾಯಾಣಸ್ವಾಮಿ ಗೆ ಒಂದಷ್ಟು ಆಭರಣಗಳು ಹಾಗೂ ದೇವಸ್ಥಾನಕ್ಕೆ ಪಾತ್ರೆಗಳನ್ನ ಉಡುಗೊರೆಯಾಗಿ ನೀಡಿದ್ದರಂತೆ. ಇದಾದ ಬಳಿಕ ಯಾವುದೇ ಕೆಡುಕು ಆಗದಂತೆ ಸಂಧ್ಯಾರತಿ ಬದಲು ದೀವಟಿಗೆ ಸಲಾಂ ಪೂಜೆ ಆರಂಭಿಸಲಾಯ್ತು ಅಂತ ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದಕ್ಕೆ ಯಾವುದೇ ಸೂಕ್ತ ದಾಖಲೆ ಇದುವರೆಗೂ ಲಭ್ಯವಾಗಿಲ್ಲ.

ಇದನ್ನು ಓದಿ: ಶಿವಕುಮಾರ ಶ್ರೀಗಳು ಆಧುನಿಕ ಬಸವಣ್ಣ; Amit Shah

ಸಲಾಂ ಸಂಸ್ಕೃತಿಗೆ ಬ್ರೇಕ್ ಹಾಕುವಂತೆ ಜಿಲ್ಲಾ ಧಾರ್ಮಿಕ ಪರಿಷತ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ.

ಇನ್ನು ನಗರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಬಾಡಿಗೆ ಪಡೆದಿರುವ ಅನ್ಯ ಧರ್ಮಿಯರನ್ನ ತೆರವುಗೊಳಿಸಿ ಎಂಬ ಬೇಡಿಕೆ ಬಳಿಕ ಇದೀಗ ದೀವಟಿಗೆ ಸಲಾಂ ಪೂಜೆ ನಿಲ್ಲಿಸುವಂತೆ ಮನವಿ ಮಾಡಿದೆ. ಇಲ್ಲ ಎಂದರೆ, ಅದರ ಸಲಾಂ ಎಂಬ ಹೆಸರನ್ನ ಬದಲಾಯಿಸಬೇಕು ಎಂದು ಆಗ್ರಹ ಮಾಡಿದೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ನೇತೃತ್ವದಲ್ಲಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಎಡಿಸಿ ಶೈಲಜಾ ಅವರಿಗೆ ಮನವಿ ಸಲ್ಲಿಸಿದರು. ಹಿಂದು ಧರ್ಮದಲ್ಲಿ ಸಲಾಂ ಎಂಬ ಯಾವುದೇ ಪದ ಬಳಕೆ ಬರೋದಿಲ್ಲ ಹೀಗಾಗಿ ಇಂತ ಆಚರಣೆಗಳನ್ನ ನಿಷೇಧ ಮಾಡಬೇಕು ಅಂತ ಒತ್ತಾಯಿಸಿದ್ದಾರೆ

ಇದನ್ನು ಓದಿ: ವಿಧಾನಸಭೆ ಚುನಾವಣೆಯಲ್ಲಿ ಡಿಕೆಶಿ-ಸಿದ್ದರಾಮಯ್ಯಗೆ 150 ಸ್ಥಾನ ಗೆಲ್ಲುವ ಟಾಸ್ಕ್​ ಕೊಟ್ಟ Rahul Gandhi

ಹೆಸರು ಬದಲಾವಣೆಗೆ ಸಲಹೆ

ದೇವಾಲಯಗಳಲ್ಲಿ ದೀವಟಿಗೆ ಸಲಾಂ ಪದ ಬದಲಾವಣೆ ಧಾರ್ಮಿಕ ದತ್ತಿ ಇಲಾಖೆ ಮಾಡಬೇಕು. ಇಲಾಖೆಯ ಆಗಮ ಪಂಡಿತರು ಈ ಸೂಕ್ಷ್ಮವನ್ನು ಬಗೆ ಹರಿಸಬೇಕು. ಇದನ್ನು ಜಿಲ್ಲಾಧಿಕಾರಿಗಳೂ ಕೂಡ ಬಗೆ ಹರಿಸಲು ಬರಲ್ಲ. ಆಯುಕ್ತರ ಮೂಲಕವೇ ಅವರು ಸಮಸ್ಯೆ ಬಗೆ ಹರಿಸಬೇಕು ಅಂತ ಇತಿಹಾಸ ತಜ್ಞ ಡಾ.ಶೆಲ್ವ ಪಿಳೈ ಅಯ್ಯಂಗಾರ್ ಹೇಳಿದ್ದಾರೆ.
Published by:Seema R
First published: