Explained: ICC ಪುರುಷರ T20 ವಿಶ್ವಕಪ್ 2021: ವಿಜೇತರು ಎಷ್ಟು ಬಹುಮಾನ ಹಣವನ್ನು ಪಡೆಯುತ್ತಾರೆ? ಇಲ್ಲಿದೆ ವಿವರ

T20 World Cup 2021 Winning Money: ಹದಿನಾರು ಟ್ವೆಂಟಿ -20 ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳು ಭಾಗವಹಿಸುತ್ತಿದ್ದು ವಿಜಯಶಾಲಿಯಾದ ತಂಡವು ಬಹುಮಾನದ ಹಣ 1 ಮಿಲಿಯನ್ ಡಾಲರ್ (ರೂ. 7,48,63,400) ಹಣವನ್ನು ತನ್ನದಾಗಿಸಿಕೊಳ್ಳಲಿದೆ

T20 World Cup

T20 World Cup

 • Share this:
  ಕೆಲವು ದಿನಗಳ ಹಿಂದೆಯಷ್ಟೇ ಐಪಿಎಲ್ ಟಿ 20 (IPL 2021) ಮುಗಿದಿದೆ. ಐಪಿಎಲ್ ತಂಡಗಳ ಆಟಗಾರರ ಆಟದ ವೈಖರಿಯನ್ನು ಇನ್ನು ಮೆಲುಕು ಹಾಕುತ್ತಿರುವಾಗಲೇ ಐಸಿಸಿ ಟಿ 20 (ICC T20 World Cup 2021) ಕೂಡ ಆರಂಭವಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಒಂದರ ಮೇಲೊಂದು ಹಬ್ಬದ ಊಟವನ್ನೇ ಬಡಿಸುತ್ತಿದೆ. ಕಳೆದ ವರ್ಷ ಮುಂದೂಡಲ್ಪಟ್ಟ ಐಸಿಸಿ ಟಿ 20 ವಿಶ್ವಕಪ್ ಈ ವರ್ಷ ಮರಳಿದೆ. ಹದಿನಾರು ಟ್ವೆಂಟಿ -20 ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳು ಭಾಗವಹಿಸುತ್ತಿದ್ದು ವಿಜಯಶಾಲಿಯಾದ ತಂಡವು ಬಹುಮಾನದ ಹಣ 1 ಮಿಲಿಯನ್ ಡಾಲರ್ (ರೂ. 7,48,63,400) ಹಣವನ್ನು ತನ್ನದಾಗಿಸಿಕೊಳ್ಳಲಿದೆ.

  ಐಸಿಸಿ ಟಿ 20 ವಿಶ್ವಕಪ್ ಅಕ್ಟೋಬರ್ 17 ರಂದು ಆರಂಭಗೊಂಡಿದ್ದು ನವೆಂಬರ್ 14ರಂದು ಫೈನಲ್ ಪಂದ್ಯಾಟ ನಡೆಯಲಿದೆ. ಅಕ್ಟೋಬರ್ 23 ರ ಶನಿವಾರದಿಂದ 12 ತಂಡಗಳ ನಡುವೆ ಸ್ಪರ್ಧೆ ಏರ್ಪಡಲಿದೆ. ನಂತರ ಸೆಮಿಫೈನಲ್ಸ್ ನವೆಂಬರ್ 10 ಮತ್ತು 11 ರಂದು ನಡೆಯುತ್ತದೆ ಮತ್ತು ಅಂತಿಮ ಪಂದ್ಯವು ನವೆಂಬರ್ 14 ಭಾನುವಾರ ನಡೆಯಲಿದೆ.

  ವಿಶ್ವಕಪ್‍ನಲ್ಲಿ ಭಾಗವಹಿಸುವ ಪ್ರತಿ ತಂಡವು ನಗದು ಮೊತ್ತವನ್ನು ಪಡೆಯುತ್ತದೆ. ರೌಂಡ್ 1 ರಲ್ಲಿ ಹೊರಹಾಕಲ್ಪಟ್ಟ ತಂಡಗಳು ಸಹ ಬಹುಮಾನದ ಹಣವನ್ನು ತೆಗೆದುಕೊಳ್ಳುತ್ತವೆ.

  ವಿಜೇತರು ಎಷ್ಟು ಹಣವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಗೊತ್ತೇ?:

  ಸ್ಪರ್ಧೆಯ ಒಟ್ಟು ಹಣವನ್ನು ವಿಭಜಿಸುವುದರ ಕುರಿತು, ಜೊತೆಗೆ ಪ್ರತಿ ತಂಡವು ಎಷ್ಟು ಹಣವನ್ನು ಗಳಿಸುತ್ತದೆ ಎಂಬುದನ್ನು ಸ್ಪೋರ್ಟಿಂಗ್ ನ್ಯೂಸ್ ಇಂದಿಲ್ಲಿ ವಿವರಿಸುತ್ತದೆ.

  2021ರ ಐಸಿಸಿ ಟಿ 20 ವಿಶ್ವಕಪ್ ಒಟ್ಟು ಹಣ:

  ಈ ವರ್ಷ ಟಿ 20 ವಿಶ್ವಕಪ್‍ನ ಒಟ್ಟು ಹಣ ಯುಎಸ್ 5.6 ಮಿಲಿಯನ್ (ರೂ.41,91,46,000). ಭಾಗವಹಿಸಿದ ಎಲ್ಲಾ 16 ಸ್ಪರ್ಧಾತ್ಮಕ ತಂಡಗಳಿಗೆ ಹಣವನ್ನು ನೀಡಲು ಈ ಮೊತ್ತವನ್ನು ವಿಭಜಿಸಲಾಗಿದೆ.

  ವಿಜೇತರಿಗೆ ಎಷ್ಟು ಹಣ ಸಿಗುತ್ತದೆ?:

  ಈ ವರ್ಷದ ಟಿ 20 ವಿಶ್ವಕಪ್ ವಿಜೇತರು 1.6 ಮಿಲಿಯನ್(ರೂ.11,97,94,240) ಪಡೆಯುತ್ತಾರೆ. ವಿಜೇತ ತಂಡವು ಕನಿಷ್ಠ 1 ಮಿಲಿಯನ್ ಹಣ ಪಡೆದ ಏಕೈಕ ತಂಡವಾಗಿ ಹೊರಹೊಮ್ಮಲಿದೆ.

  ಟಿ 20 ವಿಶ್ವಕಪ್‍ನಲ್ಲಿ ಪ್ರತಿ ತಂಡವು ಮನೆಗೆ ಕಡಿಮೆ ಎಂದರೂ ಅಮೆರಿಕನ್ ಡಾಲರ್ 40,000 (29,94,700). ಇದನ್ನು ರೌಂಡ್ 1 ರ ಎಲ್ಲಾ ತಂಡಗಳು ಗೆದ್ದರೂ ಸೋತರೂ ಲೆಕ್ಕಿಸದೆ ನೀಡಲಾಗುತ್ತದೆ. ರೌಂಡ್ 1 ಸಮಯದಲ್ಲಿ ಒಂದು ತಂಡ ಗೆದ್ದರೆ, ಅದು ಪ್ರತಿ ಗೆಲುವಿಗೆ ಅಮೆರಿಕನ್ ಡಾಲರ್ 40,000 ಪಡೆಯುತ್ತದೆ. ಅದೇ ರೀತಿ, ಒಂದು ತಂಡವು 2 ನೇ ಸುತ್ತಿನಲ್ಲಿ ಗೆದ್ದರೆ, ಪ್ರತಿ ಗೆಲುವಿಗೆ ಅದು ಅಮೆರಿಕನ್ ಡಾಲರ್ 40,000 ಪಡೆಯುತ್ತದೆ..

  ಪ್ರಶಸ್ತಿಯ ನಗದು ಮೊತ್ತ ಇಂತಿದೆ: ಅಮೆರಿಕನ್ ಡಾಲರ್ ಹಾಗೂ ಭಾರತೀಯ ರೂ.ಗಳಲ್ಲಿ
  ವಿಜೇತರು 1.6 ಮಿಲಿಯನ್ (ರೂ.11,97,94,240), ರನ್ನರ್ ಅಪ್ 800,000 (ರೂ. 5,98,99,600), ಸೆಮಿಫೈನಲ್ ಸೋತವರು 400,000 (ರೂ. 2,99,49,800), ರೌಂಡ್ 2 ವಿಜೇತರು 40,000 (ರೂ.29,94,700) ಹೀಗೆ ಪಡೆದುಕೊಳ್ಳುತ್ತಾರೆ. ರೌಂಡ್ 2 ನಿರ್ಗಮಿತರು 70,000 (ರೂ. 52,41,068), ರೌಂಡ್ 1 ವಿಜೇತರು 40,000 (ರೂ.29,94,700). ರೌಂಡ್ 1 ನಿರ್ಗಮಿತರು 40,000 (ರೂ.29,94,700) ನಗದು ಮೊತ್ತ ಪಡೆಯುತ್ತಾರೆ.

  ಇದನ್ನೂ ಓದಿ: T20 World Cup India Squad- ಭಾರತ ತಂಡ, ಆಟಗಾರರ ಫಾರ್ಮ್, ವೇಳಾಪಟ್ಟಿ ಇತ್ಯಾದಿ ವಿವರ

  ಭಾರತ ತಂಡ (India Sqaud): ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ.), ಇಶಾನ್ ಕಿಶನ್ (ವಿ.ಕೀ.), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.

  ಸ್ಟ್ಯಾಂಡ್​ಬೈ ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್.

  ಭಾರತದ ಪಂದ್ಯಗಳು (T20 World Cup India Matches):

  1. ಅ. 24: ಪಾಕಿಸ್ತಾನದ ವಿರುದ್ಧ ದುಬೈನಲ್ಲಿ.

  2. ಅ. 31: ನ್ಯೂಜಿಲೆಂಡ್ ವಿರುದ್ಧ ದುಬೈನಲ್ಲಿ

  3. ನ. 3: ಅಫ್ಘಾನಿಸ್ತಾನ್ ವಿರುದ್ಧ ಅಬುಧಾಬಿಯಲ್ಲಿ

  4. ನ. 5: ಎದುರಾಳಿ ಘೋಷಣೆ ಆಗಬೇಕು (ದುಬೈನಲ್ಲಿ ಪಂದ್ಯ)

  5. ನ. 8: ಎದುರಾಳಿ ಘೋಷಣೆ ಆಗಬೇಕು (ದುಬೈನಲ್ಲಿ ಪಂದ್ಯ)


  ಈ ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಪ್ರಾರಂಭವಾಗುತ್ತವೆ.

  ಇದನ್ನೂ ಓದಿ: ಭಾರತ-ಪಾಕ್ ನಡುವಿನ ವಿಶ್ವಕಪ್ ಟಿ20 ಪಂದ್ಯ ರದ್ದಾಗುತ್ತಾ?; ದಿಢೀರ್ ಬೆಳವಣಿಗೆಗಳಲ್ಲಿ ಆದದ್ದೇನು?

  ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್:

  ಈ ಟಿ20 ವಿಶ್ವಕಪ್ ಕಳೆದ ವರ್ಷ ಭಾರತದಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣಕ್ಕೆ ಮುಂದೂಡಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಟೂರ್ನಿಯನ್ನ ಶಿಫ್ಟ್ ಮಾಡಲು ಯೋಜಿಸಲಾಯಿತಾದರೂ ಈ ಕಾಲಘಟ್ಟದಲ್ಲಿ ಕಾಂಗರೂಗಳ ನೆಲದಲ್ಲಿ ಮಳೆಯ ಸೀಸನ್ ಇರುವುದರಿಂದ ಅಂತಿಮವಾಗಿ ಯುಎಇಯಲ್ಲಿ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಯಿತು. ವಿಶ್ವಕಪ್​ಗೆ ಮುನ್ನ ಯುಎಇಯಲ್ಲಿಯೇ ಐಪಿಎಲ್ ಪಂದ್ಯಗಳನ್ನ ನಡೆಸಿದ್ದು ಭಾರತಕ್ಕೆ ಬಹಳ ಅನುಕೂಲವಾಯಿತು.
  Published by:Sharath Sharma Kalagaru
  First published: