Novavax: ಈ ಹೊಸ ಕೋವಿಡ್-19 ಲಸಿಕೆ ನೋವಾವ್ಯಾಕ್ಸ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ

ಹೊಸದೊಂದು ಕೋವಿಡ್ ಲಸಿಕೆ ಇನ್ನು ಮುಂದೆ ಅಮೆರಿಕದಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಮಾಧ್ಯಮಗಳ ವರದಿಯ ಪ್ರಕಾರ, ಶೇ. 10 ರಷ್ಟು 18 ಅಥವಾ ಅದರ ಮೇಲ್ಪಟ್ಟ ವಯಸ್ಸಿನವರು ಕೋವಿಡ್ ಲಸಿಕೆಯ ಯಾವ ಡೋಸ್ ಅನ್ನು ಪಡೆದಿಲ್ಲವಾಗಿದ್ದು ಅವರೀಗ ಈ ಹೊಸ ಕೋವಿಡ್ ಲಸಿಕೆಯಾದ ನೋವಾವ್ಯಾಕ್ಸ್ ಲಾಭವನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಾಗಲೇ ಕೋವಿಡ್-19 ಅನ್ನು ನಿಯಂತ್ರಿಸಲು ಕೆಲವು ಲಸಿಕೆಗಳನ್ನು (Vaccine) ಅಭಿವೃದ್ಧಿಪಡಿಸಲಾಗಿರುವುದು ಎಲ್ಲರಿಗೂ ಗೊತ್ತೆ ಇದೆ. ಆದರೆ, ಈ ಸಂದರ್ಭದಲ್ಲಿ ಬಹಳಷ್ಟು ಯುವಸಮುದಾಯದವರಿಗೆ ಅಂದರೆ ವಯಸ್ಸು 18 ಅಥವಾ ಅದರ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯೇ (Covid Vaccine) ಸಿಕ್ಕಿಲ್ಲದಿರುವುದು ಸಹ ಸತ್ಯವಾದ ವಿಚಾರವೇ ಆಗಿದೆ. ಈಗ ಅಂತಹವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಹೊಸದೊಂದು ಕೋವಿಡ್ ಲಸಿಕೆ ಇನ್ನು ಮುಂದೆ ಅಮೆರಿಕದಲ್ಲಿ (America) ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಮಾಧ್ಯಮಗಳ ವರದಿಯ ಪ್ರಕಾರ, ಶೇ. 10 ರಷ್ಟು 18 ಅಥವಾ ಅದರ ಮೇಲ್ಪಟ್ಟ ವಯಸ್ಸಿನವರು ಕೋವಿಡ್ ಲಸಿಕೆಯ ಯಾವ ಡೋಸ್ (Dose) ಅನ್ನು ಪಡೆದಿಲ್ಲವಾಗಿದ್ದು ಅವರೀಗ ಈ ಹೊಸ ಕೋವಿಡ್ ಲಸಿಕೆಯಾದ ನೋವಾವ್ಯಾಕ್ಸ್ (Novavax) ಲಾಭವನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

ಎಲ್ಲೆಲ್ಲಿ ನೋವಾವ್ಯಾಕ್ಸ್ ಲಭ್ಯವಿರುತ್ತದೆ?
ಅಮೆರಿಕದ ಡಿಸೀಜ್ ಕಂಟ್ರೋಲ್ ಮತ್ತು ಪ್ರಿವೆನ್ಷನ್ (ಸಿಡಿಸಿ) ಪ್ರಾಧಿಕಾರವು ಕಳೆದ ಮಂಗಳವಾರದಂದು ನೋವಾವ್ಯಾಕ್ಸ್ ಲಸಿಕೆಯನ್ನು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬಹುದಾದ ಪ್ರಾಥಮಿಕ ಲಸಿಕಾ ಸರಣಿ ಎಂದು ಶಿಫಾರಸ್ಸು ಮಾಡಿದೆ.  ವಾಸ್ತವದಲ್ಲಿ ಸಿಡಿಸಿ ಕೇಂದ್ರಕ್ಕೆ ಮಾರ್ಗದರ್ಶನ ಮಾಡುವ ವೈಜ್ಞಾನಿಕ ಸಲಹೆಗಾರರ ತಂಡವು ನೋವಾವ್ಯಾಕ್ಸ್ ಬಳಕೆಯ ಬಗ್ಗೆ ಅನುಮೋದನೆ ನೀಡಿ ಪ್ರಚಾರ ಮಾಡಿತ್ತು. ಇದಕ್ಕೂ ಮುಂಚೆ ವೈಜ್ಞಾನಿಕ ಸಲಹೆಗಾರರಿಂದ ಯಾವ ಕ್ರಮವು ವ್ಯಕ್ತವಾಗದೆ ಇದ್ದುದೇ ನೋವಾವ್ಯಾಕ್ಸ್ ಲಸಿಕೆ ಹೊರಬರದಂತೆ ಅಡಚಣೆಯಾಗಿತ್ತು. ಆದರೆ ಈಗ ಆ ಅಡಚಣೆಯು ನಿವಾರಣೆಯಾದಂತಾಗಿದ್ದು ಮುಂಬರುವ ವಾರಗಳಲ್ಲಿ ಅಮೆರಿಕದ ಫಾರ್ಮಸಿಗಳಲ್ಲಿ ನೋವಾವ್ಯಾಕ್ಸ್ ಲಭ್ಯವಾಗಲಿದೆ.

ಪ್ರಾಥಮಿಕ ಬಳಕೆಗೆ ಅನುಮತಿ
ಸದ್ಯ ನೋವಾವ್ಯಾಕ್ಸ್ ಅನ್ನು ಪ್ರಾಥಮಿಕ ಬಳಕೆಗೆ ಮಾತ್ರ ಅನುಮತಿಸಲಾಗಿದ್ದು ಇದನ್ನು ಬೂಸ್ಟರ್ ಡೋಸ್ ಎಂದು ಪರಿಗಣಿಸಲಾಗಿಲ್ಲ, ಹಾಗಾಗಿ ಈಗಾಗಲೇ ಪ್ರಾಥಮಿಕ ಡೋಸ್ ಪಡೆದಿರುವ ಜನರು ಇದನ್ನು ಬೂಸ್ಟರ್ ಡೋಸ್ ಎಂದು ಪರಿಗಣಿಸಿ ತೆಗೆದುಕೊಳ್ಳುವಂತಿಲ್ಲ ಎನ್ನಲಾಗಿದೆ.  ಈ ಕಾರಣದಿಂದಾಗಿ ಈ ಲಸಿಕೆಯ ಆರಂಭಿಕ ಬಳಕೆ ಸೀಮಿತವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ ಪ್ರೋಟೀನ್ ಆಧಾರಿತ ಹೆಚ್ಚು ಸಾಂಪ್ರದಾಯಿಕ ಶೈಲಿಯ ಲಸಿಕೆ ಬೇಕೆನ್ನುವವರಿಗೆ ಇದು ಪ್ರಶಸ್ತವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: Monkeypox V/s Marburg Virus: ಮಾನವರಿಗೆ ಯಾವುದು ಮಾರಣಾಂತಿಕ? ಮಂಕಿಪಾಕ್ಸ್ ಅಥವಾ ಮಾರ್ಬರ್ಗ್?

ಕೋವಿಡ್ ಬಿಕ್ಕಟ್ಟು ಉಂಟಾಗಿ ಈಗ ಎರಡು ವರ್ಷಗಳು ಗತಿಸಿದರೂ ಸಂಪೂರ್ಣ ಕೋವಿಡ್ ಲಸಿಕೆಯ ಡೋಸ್ ಪಡದವರ ಸಂಖ್ಯೆಯಲ್ಲಿ ಅಷ್ಟೊಂದು ಮಹತ್ತರ ಬದಲಾವಣೆ ಕಂಡುಬಂದಿಲ್ಲ. ಲಸಿಕೆ ಪಡೆಯಲು ಹಿಂಜರಿಕೆ ತೋರಿದ ಜನರು ಈಗಲೇ ತಮ್ಮ ಲಸಿಕೆ ವಿರೋಧ ಮನಸ್ಥಿತಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆಂದು ಕೈಸರ್ ಫ್ಯಾಮಿಲಿ ಎಂಬ ಸಂಸ್ಥೆಯು ನಡೆಸಿರುವ ಮತ ಅಭಿಯಾನದಿಂದ ತಿಳಿದುಬಂದಿದೆ. ಈ ಸಂಸ್ಥೆಯು ನಡೆಸಿರುವ ಪೋಲ್ ಪ್ರಕಾರ, ಅಮೆರಿಕದ ವಯಸ್ಕರಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ "ಖಂಡಿತವಾಗಿಯೂ ಲಸಿಕೆ ಬೇಡ" ಎಂಬುವವರ ಪ್ರಮಾಣ ಡಿಸೆಂಬರ್ 2020 ರಲ್ಲಿ 15% ಇದ್ದದ್ದು ಏಪ್ರಿಲ್ 2022ಕ್ಕೆ 17% ಕ್ಕೆ ವೃದ್ಧಿಯಾಗಿರುವುದು ಕಂಡುಬಂದಿದೆ.

ಈ ಬಗ್ಗೆ ಕೊಲರಾಡೋ ವಿವಿಯ ಪ್ರೊಫೆಸರ್ ರಾಸ್ ಕೆಡ್ಲ್ ಅಭಿಪ್ರಾಯವೇನು?
ಈಗಾಗಲೇ ಅಮೆರಿಕದಲ್ಲಿ ಮೂರು ಅಧಿಕೃತ ಕೋವಿಡ್ ಲಸಿಕೆಗಳು ಲಭ್ಯವಿದ್ದು ಅವುಗಳು ತಮ್ಮದೆ ಆದ ಕೆಲವು ಅಂದರೆ ಬ್ಲಡ್ ಕ್ಲಾಟ್ ಆಗುವಂತಹ ಪರಿಣಾಮಗಳನ್ನು ಹೊಂದಿರುವುದು ಕಂಡುಬಂದಿದೆ. ಸದ್ಯ, ಈಗ ಮತ್ತೊಂದು ಲಸಿಕೆ ನೋವಾವ್ಯಾಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು ಈಗಾಗಲೇ ಲಭ್ಯವಿರುವ ಲಸಿಕೆಗಳಿಗೆ ಮತ್ತೊಂದು ಪರ್ಯಾಯ ಲಸಿಕೆಯಾಗಿ ನೋವಾವ್ಯಾಕ್ಸ್ ಅನ್ನು ಇನ್ನಷ್ಟು ಸ್ವೀಕರಿಸಬಹುದು ಅಥವಾ ಅವರಿಗೆ ಈ ನಿಟ್ಟಿನಲ್ಲಿ ಮತ್ತೊಂದು ಆಯ್ಕೆ ಲಭ್ಯವಾಗಲಿದೆ ಎಂಬುದು ಕೊಲರಾಡೋ ವಿವಿಯ ಪ್ರೊಫೆಸರ್ ರಾಸ್ ಕೆಡ್ಲ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಯಾವಾಗ ನೋವವ್ಯಾಕ್ಸ್ ಶಾಟ್ ಪಡೆಯಬಹುದು?
 ನೋವಾವ್ಯಾಕ್ಸ್ ಈ ಮುಂಚೆ ಬಂದ ಲಸಿಕೆಗಳ ಹಾಗೆ ಕಾರ್ಯನಿರ್ವಹಣೆಯ ಪ್ರಣಾಳಿಯನ್ನು ಹೊಂದಿಲ್ಲ. ಅಮೆರಿಕದ ಸಿಡಿಸಿ ಪ್ರಾಧಿಕಾರ ಯೋಜಿಸಿರುವಂತೆ ನೋವಾವ್ಯಾಕ್ಸ್ ಲಸಿಕೆಯು ಅಮೆರಿಕದಾದ್ಯಂತ ಜುಲೈ ಕೊನೆಯವಾರ ಅಥವಾ ಆಗಸ್ಟ್ ಮೊದಲ ವಾರದಿಂದ ಎಲ್ಲ ಫಾರ್ಮಸಿಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ:  Explained: ಮಂಕಿಪಾಕ್ಸ್ ಬರದಂತೆ ತಡೆಯೋದು ಹೇಗೆ? ಬಂದರೆ ಏನು ಮಾಡಬೇಕು?

ಇನ್ನೂ ದೇಶದ ಗ್ರಾಮೀಣ ಭಾಗಗಳನ್ನು ತಲುಪಲು ಸ್ವಲ್ಪ ಸಮಯ ಹಿಡಿಯಬಹುದಾಗಿದ್ದು ಆದಾಗ್ಯೂ ಜನರು ಈ ಮುಂಚೆ ಕೋವಿಡ್ ವ್ಯಾಕ್ಸಿನ್ ಫೈಂಡರ್ ಆಯ್ಕೆಯ ಮೂಲಕ ನೋವಾವ್ಯಕ್ಸ್ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ ಎಂದು ವೋಲ್ಟರ್ಸ್ ಕ್ಲುವೇರ್ ನಲ್ಲಿ ಸಲಹೆಗಾರ ಹಾಗೂ ಫಾರ್ಮಾಸಿಸ್ಟ್ ಆಗಿರುವ ನಿಕೋಲ್ಸ್ ಹೇಳುತ್ತಾರೆ.

ಯಾರಿಗಾಗಿ ನೋವಾವ್ಯಾಕ್ಸ್ ಲಸಿಕೆ
ನೋವಾವ್ಯಾಕ್ಸ್ ಕೋವಿಡ್ ಲಸಿಕೆಯನ್ನು ಮುಖ್ಯವಾಗಿ ಕೋವಿಡ್-19ರ ಯಾವುದೇ ಲಸಿಕೆಯನ್ನು ಇಂದಿಗೂ ಪಡೆಯದ ವಯಸ್ಕರಿಗಾಗಿ ಹೊರತರಲಾಗುತ್ತಿದೆ. ಎರಡು ಡೋಸ್ ಹೊಂದಿರುವ ಈ ಲಸಿಕೆಯನ್ನು 18 ಹಾಗೂ ಮೇಲ್ಪಟ್ಟ ವಯೋಮಾನದವರಿಗೆ ಶಿಫಾರಸ್ಸು ಮಾಡಲಾಗಿದೆ. ಒಟ್ಟು ಮೂರು ವಾರಗಳ ಅಂತರದಲ್ಲಿ ನೋವಾವ್ಯಾಕ್ಸಿನಿನ ಎರಡೂ ಡೋಸ್ ಗಳನ್ನು ಪೂರ್ಣಗೊಳಿಸಬಹುದಾಗಿದೆ. ಅಲ್ಲದೆ, ಈಗಾಗಲೇ ಲಸಿಕೆ ಪಡೆದಿರುವ ಜನರು ಈ ಲಸಿಕೆಯನ್ನು ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ಎಂದು ಪರಿಗಣಿಸಿ ತೆಗೆದುಕೊಳ್ಳುವಂತಿಲ್ಲ ಎಂದು ಪ್ರಾಧಿಕಾರವು ತಿಳಿಸಿದೆ, ಏಕೆಂದರೆ ಇದನ್ನು ಪ್ರಾಥಮಿಕ ಬಳಕೆಗಾಗಿ ಮಾತ್ರವೇ ವಿನ್ಯಾಸ ಮಾಡಲಾಗಿರುವುದೇ ಇದಕ್ಕೆ ಕಾರಣ.

ನೋವಾವ್ಯಾಕ್ಸ್ ಏನು? ಇದು ಹೇಗೆ ಭಿನ್ನವಾಗಿದೆ?
ನೋವಾವ್ಯಾಕ್ಸ್ ಈಗಾಗಲೇ ಅಮೆರಿಕದಲ್ಲಿ ಲಭ್ಯವಿರುವ ಪಿಫೈಜರ್, ಮೊಡೆರ್ನಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್ ಕೋವಿಡ್ ಲಸಿಕೆಗಳಿಗಿಂತ ಭಿನ್ನವಾಗಿದೆ. ಈ ಲಸಿಕೆಯಲ್ಲಿ ಹೆಚ್ಚು ಸಾಂಪ್ರದಾಯಿಕವಾದ ಪ್ರೋಟೀನ್ ತಂತ್ರಜ್ಞಾನವನ್ನು ಪ್ರಮುಖವಾಗಿ ಬಳಸಲಾಗಿದೆ.

ನೋವಾವ್ಯಾಕ್ಸಿನಲ್ಲಿ ವೈರಾಣುವಿನ ಶುದ್ಧಿಕರಿಸಲಾದ ಪ್ರೋಟೀನ್ ಕವಚವನ್ನು ಬಳಸಲಾಗಿದ್ದು ಅದನ್ನು ಅಡ್ಜುವಂಟ್ ಅನ್ನೋ ಅಂಶದಲ್ಲಿ ಮಿಶ್ರಣ ಮಾಡಲಾಗಿದೆ. ಈ ಸಂಯೋಜನೆಯು ಶರೀರದ ಪ್ರತಿರೋಧಕ ಶಕ್ತಿಯನ್ನು ಎಬ್ಬಿಸಿ ಅಥವಾ ಸಕ್ರಿಯ ಮಾಡಿ ಈ ವೈರಾಣುವನ್ನು ಕಟಿಬದ್ಧ ವೈರಿಯಂತೆ ಪರಿಗಣಿಸಿ ಅದರ ವಿರುದ್ದ ಹೋರಾಡಲು ಪ್ರಚೋದಿಸುತ್ತದೆ ಎನ್ನಾಲಾಗಿದೆ.

ನೋವಾವ್ಯಾಕ್ಸ್ ಎಷ್ಟು ಪರಿಣಾಮಕಾರಿ?
ನೋವಾವ್ಯಾಕ್ಸಿನ ಪರೀಕ್ಷೆಗಳನ್ನು ನಡೆಸಲಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಪ್ರಕಟವಾದ ವರದಿಗಳ ಪ್ರಕಾರ, ಈ ಲಸಿಕೆಯ ಪರಿಣಾಮಕಾರಿತ್ವವು ಕೋವಿಡ್ ಲಕ್ಷಣಗಳುಳ್ಳ ಸೋಂಕಿತರ ಮೇಲೆ 90% ರಷ್ಟಾಗಿದ್ದು ಗಂಭೀರವಾದ ಪರಿಣಾಮದ ಮೂಲಕ ಸಾವು ಉಂಟಾಗುವ ಸಂದರ್ಭದಲ್ಲಿ 100% ರಷ್ಟು ಪರಿಣಾಮಕಾರಿತ್ವ ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ:  Black Fever: ಜೀವಕ್ಕೆ ಮಾರಕವೇ ಬ್ಲಾಕ್ ಫೀವರ್? ಇದರ ಗುಣಲಕ್ಷಣಗಳೇನು, ಇದಕ್ಕೆ ಚಿಕಿತ್ಸೆ ಏನು?

ನೋವಾವ್ಯಾಕ್ಸ್ ಅಡ್ಡಪರಿಣಾಮಗಳು
ಇತರೆ ಲಸಿಕೆಗಳು ಹೊಂದಿದೆ ಎಂದು ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿರುವ ರೀತಿಯಲ್ಲಿ ಇದು ಸಹ ಕೆಲ ಅಡ್ಡಾ ಪರಿಣಾಮಗಳನ್ನು ಹೊಂದಿದ್ದು ಅದು ಮಂದ ಹಾಗೂ ಸಾಮಾನ್ಯ ರೀತಿಯದ್ದಾಗಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಈ ಪರಿಣಾಮಗಳು ಶಾಟ್ ಪಡೆದ ಏಳು ದಿನಗಳ ಒಳಗೆ ಕಂಡುಬರಲಿವೆ ಎನ್ನಲಾಗಿದ್ದು ಇದರಿಂದ ದಣಿವು, ಜ್ವರ, ಶೀತ ಹಾಗೂ ತಲೆನೋವು ಬರಲಿದೆ ಎಂದು ತಿಳಿಸಲಾಗಿದೆ. ಆದಾಗ್ಯೂ ಈ ಲಕ್ಷಣಗಳು ಒಂದೆರಡು ದಿನಗಳಲ್ಲೇ ಶಮನವಾಗಲಿವೆ ಎಂತಲೂ ಹೇಳಲಾಗಿದೆ.
Published by:Ashwini Prabhu
First published: