Depression: ಖಿನ್ನತೆ ಬಗ್ಗೆ ನಿರ್ಲಕ್ಷ್ಯ ಬೇಡ; ಕಾರಣ, ಚಿಕಿತ್ಸೆ ಬಗ್ಗೆ ಇರಲಿ ಮಾಹಿತಿ

ಮಾನಸಿಕ ಖಿನ್ನತೆಗೆ ಹಲವಾರು ಕಾರಣಗಳು ಇರುತ್ತವೆ. ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯ ಮನಸ್ಸು ಬಹಳ ದುರ್ಬಲವಾಗಿ ಇರುತ್ತದೆ. ಮನಸ್ಸಿಗೆ ಕೆಟ್ಟ ಆಲೋಚನೆಗಳು ಮಾತ್ರ ಬರುತ್ತವೆ. ಅಂತಹ ಸಮಯದಲ್ಲಿ ಏನು ಮಾಡಬೇಕು? ಮಾನಸಿಕ ಖಿನ್ನತೆಯಿಂದ ಯಾವ ರೀತಿ ಹೊರಬರಬೇಕು? ಎಂಬುದನ್ನು ತಿಳಿಯಲು ಮುಂದೆ ಓದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಇತ್ತೀಚಿನ ದಿನಗಳಲ್ಲಿ ಮಾನಸಿಕ ಅಸ್ವಸ್ಥತೆಯು (mental illness) ಎಲ್ಲರನ್ನು ಕಾಡುತ್ತಿರುವ ಸಮಸ್ಯೆ. ಈ ಮಾನಸಿಕ ಖಿನ್ನತೆಗೆ (Mental depression) ಹಲವಾರು ಕಾರಣಗಳು ಇರುತ್ತವೆ. ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯ ಮನಸ್ಸು ಬಹಳ ದುರ್ಬಲವಾಗಿ ಇರುತ್ತದೆ. ಮನಸ್ಸಿಗೆ ಕೆಟ್ಟ ಆಲೋಚನೆಗಳು ಮಾತ್ರ ಬರುತ್ತವೆ. ಅಂತಹ ಸಮಯದಲ್ಲಿ ಏನು ಮಾಡಬೇಕು? ಮಾನಸಿಕ ಖಿನ್ನತೆಯಿಂದ ಯಾವ ರೀತಿ ಹೊರಬರಬೇಕು? ಖಿನ್ನತೆಯು (Depression) ಸಾಮಾನ್ಯ ಮನಸ್ಥಿತಿಯ ಅಸ್ವಸ್ಥತೆಯಾಗಿದ್ದು ಅದು ನೀವು ಹೇಗೆ ಭಾವಿಸುತ್ತೀರಿ, ಯೋಚಿಸುತ್ತೀರಿ ಮತ್ತು ವರ್ತಿಸುತ್ತೀರಿ (behave) ಎಂಬುದರ ಮೇಲೆ ಪರಿಣಾಮ ಬೀರುತ್ತದೆ ಇದರ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ..

ಹಾಗಿದ್ರೆ ಖಿನ್ನತೆ ಎಂದರೇನು?
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಪ್ರಕಾರ, ಅಂದಾಜು 14.8 ಮಿಲಿಯನ್ ಯುಸ್‌ ನ ವಯಸ್ಕರು 2020 ರಲ್ಲಿ ತೀವ್ರ ದುರ್ಬಲತೆಯೊಂದಿಗೆ ಖಿನ್ನತೆಯ ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ. ಇನ್ನು ಅಲ್ಲಿ ಖಿನ್ನತೆಯಿರುವ ಜನರು ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ 60% ರಷ್ಟು ಜನರು ಖಿನ್ನತೆಗೆ ಚಿಕಿತ್ಸೆಯನ್ನು ಪಡೆಯುವುದೇ ಇಲ್ಲ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ.

ಈ ಖಿನ್ನತೆಯನ್ನು ಹೇಗೆ ಹಂತ ಹಂತವಾಗಿ ದೂರ ಮಾಡುವುದು ಎಂಬುದರ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮತ್ತಷ್ಟು ಓದಿಗಾಗಿ, ಮುಂದೆ ಓದಿ.

ಖಿನ್ನತೆಗೆ ಕಾರಣಗಳು ಮತ್ತು ಅಪಾಯಕಾರಿ ಅಂಶಗಳು ಯಾವುವು?
ಖಿನ್ನತೆ ಬರಲು ನಿರ್ದಿಷ್ಟವಾದ ಒಂದೇ ಕಾರಣ ಇರುವುದಿಲ್ಲ. ಕ್ಲಿನಿಕಲ್ ಖಿನ್ನತೆಗೆ ಕಾರಣವಾಗುವ ವಿವಿಧ ಅಪಾಯಕಾರಿ ಅಂಶಗಳನ್ನು ಇಲ್ಲಿ ಗುರುತಿಸಲಾಗಿದೆ. ಹಲವಾರು ಅಪಾಯಕಾರಿ ಅಂಶಗಳು ಇದ್ದಾಗ, ಖಿನ್ನತೆಯ ಬೆಳವಣಿಗೆಯ ಸಾಧ್ಯತೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

 • ವಂಶವಾಹಿಗಳು: ಮಾನಸಿಕ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಅಂಕಿಅಂಶಗಳ ಕೈಪಿಡಿ, DSM-5 ರ ಪ್ರಕಾರ, ಖಿನ್ನತೆಯು ಕುಟುಂಬದ ವಂಶವಾಹಿಯ ಮೂಲಕ ಬರುವ ಸಾಧ್ಯತೆ ಹೆಚ್ಚಿರುತ್ತದೆ.

 • ಪರಿಸರ ಅಂಶಗಳು: ಒಬ್ಬ ವ್ಯಕ್ತಿಯ ಹಿಂದಿನ ಆಘಾತ ಅಥವಾ ನಿಂದನೆಯು ಖಿನ್ನತೆಯ ಬೆಳವಣಿಗೆಗೆ ಕಾರಣವಾಗುವ ಪ್ರಚೋದಕಗಳಾಗಿವೆ. ಜೀವನದ ಪ್ರಮುಖ ಘಟನೆಗಳು ಮತ್ತು ಒತ್ತಡಗಳು ಖಿನ್ನತೆಯ ಬೆಳವಣಿಗೆಗೆ ಪ್ರಚೋದಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು, ಹಣಕಾಸಿನ ತೊಂದರೆಗಳು ಹೀಗೆ ಮುಂತಾದ ಜೀವನದ ಕಷ್ಟದ ಸನ್ನಿವೇಶಗಳು ಕೆಲವು ಸಲ ಖಿನ್ನತೆಗೆ ದಾರಿ ಮಾಡಿಕೊಡುತ್ತವೆ.

 • ಮೆದುಳಿನಲ್ಲಿನ ನ್ಯೂರೋಟ್ರಾನ್ಸ್ಮಿಟರ್‌ನಿಂದಲೂ ಖಿನ್ನತೆ ಬರುವ ಸಾಧ್ಯತೆ ಹೆಚ್ಚು : ಹೌದು, ಖಿನ್ನತೆಯಲ್ಲಿನ ಜೀವರಾಸಾಯನಿಕ ಅಂಶದ ಬಗ್ಗೆ ಸಾಮಾನ್ಯರಿಗೆ ಬೇಗನೆ ಅರ್ಥವಾಗುವುದಿಲ್ಲ. ಖಿನ್ನತೆಗೆ ಮತ್ತೊಂದು ಸಂಭಾವ್ಯ ಕಾರಣವೆಂದರೆ ಮೆದುಳಿನಲ್ಲಿರುವ ಸಿರೊಟೋನಿನ್, ನೊರ್‌ಪೈನ್ಫ್ರಿನ್ ಮತ್ತು ಡೋಪಮೈನ್‌ನಂತಹ ನರಪ್ರೇಕ್ಷಕಗಳ ಅಡ್ಡಿಯೇ ನೇರವಾದ ಕಾರಣ ಆಗಿರುತ್ತದೆ ಎಂದು ತಜ್ಞರು ನಂಬುತ್ತಾರೆ.

 • ಆಲ್ಕೋಹಾಲ್ ಮತ್ತು ಮಾದಕ ವ್ಯಸನ: ಒಂದು ಅಧ್ಯಯನವು 12% ರಿಂದ 80% ವರೆಗೆ ಮಾದಕವಸ್ತು ಸಮಸ್ಯೆಗಳಿರುವವರು ಖಿನ್ನತೆಯನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ.

 • ವೈದ್ಯಕೀಯ ಪರಿಸ್ಥಿತಿಗಳು: ಖಿನ್ನತೆಯು ಕೆಲವು ಸಲ ಇತರ ಔಷಧಿಗಳನ್ನು ನಿರಂತರವಾಗಿ ತೆಗೆದುಕೊಳ್ಳುವುದರಿಂದಲೂ ಉಂಟಾಗಬಹುದು. ಇಂತಹ ವೈದ್ಯಕೀಯ ಪರಿಸ್ಥಿತಿಗಳಿಂದಲೂ ಕೂಡ ಖಿನ್ನತೆ ಬರುವ ಸಾಧ್ಯತೆ ಹೆಚ್ಚು.


ಇದನ್ನೂ ಓದಿ: Strange Disease: ಅಪರೂಪದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕಿನಿಂದ ಸಾವು; ಯಾವುದು ಈ ಕಾಯಿಲೆ?

ಖಿನ್ನತೆಯ ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳು ಯಾವುವು?

 • ನಿಮಗೆ ಕಿರಿಕಿರಿ ಅಥವಾ ಕೋಪ ಬಂದ ಹಾಗೆ ಅನಿಸುವುದು.

 • ನೀವು ಒಮ್ಮೆ ಆನಂದಿಸಿದ ಚಟುವಟಿಕೆಗಳಲ್ಲಿ ಮತ್ತೆ ಆ ಚಟುವಟಿಕೆಯನ್ನು ಮಾಡಿದರೆ ಸಂತೋಷಗೊಳ್ಳುವುದಿಲ್ಲ.

 • ಎಲ್ಲ ವಿಷಯಗಳಲ್ಲೂ ಆಸಕ್ತಿಯನ್ನು ಕಳೆದುಕೊಳ್ಳುವುದು.

 • ಹೆಚ್ಚು ದುಃಖ ಅಥವಾ ಸ್ಥಿರ ಮನಸ್ಸನ್ನು ಹೊಂದದೇ ಇರುವುದು.

 • ನಿದ್ರೆಯ ತೊಂದರೆಗಳಾದ ನಿದ್ರಾಹೀನತೆ ಮತ್ತು ಹೆಚ್ಚು ನಿದ್ರೆ ಬರುವ ರೀತಿ ಅನಿಸುವುದು.

 • ಆಯಾಸವಾದಂತೆ ಯಾವಾಗಲೂ ಅನಿಸುವುದು.

 • ದೇಹದಲ್ಲಿ ಶಕ್ತಿಯಿಲ್ಲದ ರೀತಿಯಲ್ಲಿ ಅನಿಸುವುದು.

 • ಹಸಿವು ಆಗದೇ ಇರುವುದು.

 • ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯ ಆಲೋಚನೆಗಳು ಬರುವುದು


ಖಿನ್ನತೆಯ ವೈದ್ಯಕೀಯ ಲಕ್ಷಣಗಳು:

 • ರಕ್ತಹೀನತೆ ಸೋಂಕು

 • ನಿದ್ರಾಹೀನತೆ

 • ನರವೈಜ್ಞಾನಿಕ ಅಸ್ವಸ್ಥತೆಗಳು ಮತ್ತು

 • ಔಷಧಿಗಳಿಂದ ಉಂಟಾಗುವ ಅಡ್ಡಪರಿಣಾಮಗಳು


ವಿಟಮಿನ್ ಕೊರತೆಗಳು ಅಥವಾ ಥೈರಾಯ್ಡ್ ಸಮಸ್ಯೆಗಳಂತಹ ಇತರ ವೈದ್ಯಕೀಯ ರೋಗಗಳು ನಮ್ಮನ್ನು ಅತಿಕ್ರಮಿಸುತ್ತವೆ ಎಂದು ಗಮನಿಸಬೇಕಾದ ಅಂಶವಾಗಿದೆ. ಆದ್ದರಿಂದ ರೋಗನಿರ್ಣಯವನ್ನು ಖಚಿತಪಡಿಸಲು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಅತ್ಯಗತ್ಯ.

ಖಿನ್ನತೆಗೆ ಹೇಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ?
ಖಿನ್ನತೆಗೆ ಯಾವುದೇ ಚಿಕಿತ್ಸೆ ಇಲ್ಲ. ಇದು ಒಂದು ಮಾನಸಿಕ ಅಸ್ವಸ್ಥತೆಯಾಗಿದ್ದು, ಇದಕ್ಕೆ ವೈದ್ಯಕೀಯದಲ್ಲಿ ಚಿಕಿತ್ಸೆ ನೀಡಬಹುದು. ಚಿಕಿತ್ಸೆಯನ್ನು ನೀಡಿದಾಗ 90% ರಷ್ಟು ಜನರು ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಾರೆ. ಚಿಕಿತ್ಸೆಯು ಒಂದು ಪ್ರಯಾಣದಂತೆ ಆಗಿದೆ. ಖಿನ್ನತೆಯನ್ನು ದೂರ ಮಾಡುವುದೇ ಇದರ ಗುರಿ ಆಗಿರುತ್ತದೆ.

ಖಿನ್ನತೆಯ ಚಿಕಿತ್ಸೆಯು ಒಂದು ಮ್ಯಾರಥಾನ್ ಓಟವಾಗಿದೆ. ನಿಮ್ಮ ಜೀವನದಂತೆ ಚಿಕಿತ್ಸೆಯು ವಿಕಸನಗೊಳ್ಳಲು ಮತ್ತು ಬದಲಾಗುವುದನ್ನು ನಾವು ನೋಡಬೇಕಾದರೆ ಸ್ವಲ್ಪ ಸಮಯ ಕಾಯಲೇಬೇಕಾಗುತ್ತದೆ. ತೀವ್ರವಾದ ಖಿನ್ನತೆಗೂ ಸಹ ಚಿಕಿತ್ಸೆ ಮಾಡಬಹುದು. ಅದರ ಜೊತೆಗೆ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಪಡೆಯುವುದು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡಲು ಸಹಾಯ ಮಾಡುತ್ತದೆ.

 • ಸೈಕೋಥೆರಪಿ:
  ಟಾಕ್ ಥೆರಪಿ ಎಂದೂ ಕರೆಯಲ್ಪಡುವ ಮಾನಸಿಕ ಚಿಕಿತ್ಸೆಯು ಸೌಮ್ಯ ಖಿನ್ನತೆಗೆ ಮುಖ್ಯ ಚಿಕಿತ್ಸಾ ಆಯ್ಕೆಗಳಲ್ಲಿ ಒಂದಾಗಿದೆ. ಅರಿವಿನ ವರ್ತನೆಯ ಚಿಕಿತ್ಸೆಯು ಖಿನ್ನತೆಗೆ ಚಿಕಿತ್ಸೆ ನೀಡಲು ಪರಿಣಾಮಕಾರಿ ಮಾರ್ಗವಾಗಿದೆ.


ಇದನ್ನೂ ಓದಿ:  Friends For Life: ನಿಮ್ಮ ಸುತ್ತಮುತ್ತ 5 ರೀತಿಯ ಜನರು ಇದ್ರೆ ಲೈಫ್​ ಜಿಂಗಾಲಾಲಾ

ಈ ಚಿಕಿತ್ಸೆಯು ನೀವು ಏನನ್ನು ಯೋಚಿಸುತ್ತೀರಿ ಮತ್ತು ಏನನ್ನು ಮಾಡುತ್ತಿರಿ ಎಂಬುದರ ಮೇಲೆ ಪರಸ್ಪರ ಅವಲಂಬನೆಯಾಗಿರುತ್ತದೆ. ಈ ಚಿಕಿತ್ಸೆಯನ್ನು ತೆಗೆದುಕೊಂಡ ನಂತರ ನೀವು ನಕಾರಾತ್ಮಕ ಚಿಂತನೆಯನ್ನು ಗುರುತಿಸಲು ಪ್ರಾರಂಭಿಸಬಹುದು ಮತ್ತು ನೀವು ಕಷ್ಟದ ಸನ್ನಿವೇಶಗಳನ್ನು ಗ್ರಹಿಸುವ ಮತ್ತು ಅರ್ಥೈಸುವ ವಿಧಾನವನ್ನು ಬದಲಾಯಿಸಬಹುದು. ಖಿನ್ನತೆಗೆ ಅರಿವಿನ ವರ್ತನೆಯ ಚಿಕಿತ್ಸೆಯು ವೈಯಕ್ತಿಕ ಆಧಾರದ ಮೇಲೆ ಸಂಭವಿಸಬಹುದು ಅಥವಾ ಕುಟುಂಬದ ಸದಸ್ಯರನ್ನು ಒಳಗೊಂಡಿರಬಹುದು.

 • ಎಲೆಕ್ಟ್ರೋಕನ್ವಲ್ಸಿವ್ ಥೆರಪಿ:
  ಎಲೆಕ್ಟ್ರೋಕನ್ವಲ್ಸಿವ್ ಥೆರಪಿ ಎನ್ನುವುದು ವಿದ್ಯುತ್ತಿನಿಂದ ಮೆದುಳಿನ ಪ್ರಚೋದನೆ ಚಿಕಿತ್ಸೆಯ ಒಂದು ರೂಪವಾಗಿದೆ. ಇದು ಸಾಮಾನ್ಯವಾಗಿ ಖಿನ್ನತೆಗೆ ಮೊದಲ ಚಿಕಿತ್ಸಾ ಆಯ್ಕೆಯಾಗಿಲ್ಲದಿದ್ದರೂ, ಚಿಕಿತ್ಸೆ ಮತ್ತು ಔಷಧಿಗಳಿಗೆ ಪ್ರತಿಕ್ರಿಯಿಸದ ತೀವ್ರವಾದ ಪ್ರಮುಖ ಖಿನ್ನತೆಗೆ ಈ ಚಿಕಿತ್ಸೆ ನೀಡುವುದು ಪರಿಣಾಮಕಾರಿಯಾಗಿದೆ. ತಕ್ಷಣಕ್ಕೆ ಖಿನ್ನತೆ ದೂರವಾಗಬೇಕು ಎಂಬ ಅಗತ್ಯವಿರುವ ಸಂದರ್ಭಗಳಲ್ಲಿ ಈ ಚಿಕಿತ್ಸಾ ವಿಧಾನವನ್ನು ಬಳಸಬಹುದು.


ಈ ವಿಧಾನದಲ್ಲಿ ರೋಗಿಯು ಅರಿವಳಿಕೆಗೆ ಒಳಗಾಗಿರುವಾಗ ನಡೆಸಲಾಗುವ ವೈದ್ಯಕೀಯ ವಿಧಾನವಾಗಿದೆ ಮತ್ತು ಇದು ಸಾಮಾನ್ಯವಾಗಿ ಹೊರರೋಗಿ ವಿಧಾನವಾಗಿದೆ. ಸೆಷನ್‌ಗಳು ಸಾಮಾನ್ಯವಾಗಿ ಪ್ರತಿ ವಾರ ಎರಡರಿಂದ ಮೂರು ಬಾರಿ, ಸರಿಸುಮಾರು ಎರಡರಿಂದ ನಾಲ್ಕು ವಾರಗಳವರೆಗೆ ನಡೆಯುತ್ತವೆ. ಈ ವಿಧಾನದಿಂದ ಕೆಲವು ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಅವುಗಳೆಂದರೆ ಜ್ಞಾಪಕ ಶಕ್ತಿಯನ್ನು ಕಳೆದುಕೊಳ್ಳುವುದು, ಗೊಂದಲ ಮತ್ತು ದಿಗ್ಭ್ರಮೆ. ಹೆಚ್ಚಿನ ಸಂದರ್ಭಗಳಲ್ಲಿ, ಇಲ್ಲಿ ಉಂಟಾಗುವ ಅಡ್ಡಪರಿಣಾಮಗಳು ಅಲ್ಪಾವಧಿಯದ್ದಾಗಿರುತ್ತವೆ. ಅದರ ಜೊತೆಗೆ ಈ ಚಿಕಿತ್ಸಾ ವಿಧಾನ ಸಂಪೂರ್ಣವಾಗಿ ಮುಗಿದ ಮೇಲೂ ಕೂಡ ಹಲವಾರು ತಿಂಗಳುಗಳವರೆಗೆ ಜ್ಞಾಪಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ನೀವು ಪ್ರತಿದಿನ ಖಿನ್ನತೆಯನ್ನು ಹೇಗೆ ನಿರ್ವಹಿಸಬಹುದು?

 • ಸ್ವ-ಆರೈಕೆಗಾಗಿ ಸಮಯವನ್ನು ಮೀಸಲಿಡಿ: ನೀವು ನಿಮಗೋಸ್ಕರ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಖಿನ್ನತೆಯನ್ನು ಸೂಕ್ತವಾಗಿ ನಿರ್ವಹಿಸಬೇಕೆಂದರೆ ಸ್ವಯಂ-ಆರೈಕೆಯೇ ಅದಕ್ಕೆ ಮದ್ದು. ಒತ್ತಡದಿಂದ ದೂರವಿರಬೆಕೆಂದರೆ ನಿಮಗೆ ಖುಷಿ ಕೊಡುವ ಕೆಲಸ ಮಾಡಿ.

 • ವಾಸ್ತವಿಕ ಗುರಿಗಳನ್ನು ಇರಿಸಿಕೊಳ್ಳಿ: ಖಿನ್ನತೆಯೊಂದಿಗೆ ಜೀವಿಸುವಾಗ, ನೀವು ವಾಸ್ತವಿಕ ಗುರಿಗಳನ್ನು ಇರಿಸಿಕೊಳ್ಳಬೇಕು. ಆಗ ನೀವು ಆ ಗುರಿಗಳನ್ನು ತಲುಪಬಹುದು. ನೀವು ನಿರ್ವಹಿಸಬಹುದಾದ ವೇಗದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಬಹುದು ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಗುರಿಗಳನ್ನು ಚಿಕ್ಕ ಚಿಕ್ಕ ಗುರಿಗಳಾಗಿ ವಿಭಜಿಸಿಕೊಳ್ಳಲು ಪ್ರಯತ್ನಿಸಿ.


ಇದನ್ನೂ ಓದಿ:  Blood Group: ಈ ಬ್ಲಡ್​ ಗ್ರೂಪ್​ನವರಿಗೆ ಲಕ್ವ ಹೊಡೆಯುವ ಸಾಧ್ಯತೆ ಹೆಚ್ಚಿದೆ, ಸಂಶೋಧನೆಯಲ್ಲಿ ಬಯಲು!

 • ನಿಯಮಿತವಾಗಿ ವ್ಯಾಯಾಮ ಮಾಡಿ: ಖಿನ್ನತೆಯಿಂದ ಕೆಲವೊಮ್ಮೆ ಯಾವ ಕೆಲಸವನ್ನು ಮಾಡಲು ಮನಸ್ಸೆ ಬರುವುದಿಲ್ಲ. ಅದರಲ್ಲೂ ದೇಹ ದಂಡಿಸುವ ಕೆಲಸ ಬೇಡವೇ ಬೇಡ ಎಂದು ಅನಿಸುತ್ತದೆ. ಅದರ ಜೊತೆಗೆ, ವ್ಯಾಯಾಮವು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ವಾಕಿಂಗ್, ಈಜು ಮತ್ತು ತೂಕದ ತರಬೇತಿಯಂತಹ ಲಯಬದ್ಧ ವ್ಯಾಯಾಮಗಳು ಖಿನ್ನತೆಯಿಂದ ಬಳಲುತ್ತಿರುವವರಿಗೆ ಉತ್ತಮ ಆಯ್ಕೆಗಳಾಗಿವೆ.

 • ಸಾಕಷ್ಟು ನಿದ್ರೆ ಮಾಡಿ: ನಿದ್ರೆಯ ಸಮಸ್ಯೆಗಳು ಸಾಮಾನ್ಯವಾಗಿ ಖಿನ್ನತೆ ಮತ್ತು ಕೆಟ್ಟ ಮನಸ್ಥಿತಿಯ ಲಕ್ಷಣಗಳನ್ನು ಉಲ್ಬಣಗೊಳಿಸುತ್ತವೆ. ನಿದ್ರಾಹೀನತೆ ಹೊಂದಿರುವ ವ್ಯಕ್ತಿ ಖಿನ್ನತೆಯನ್ನು ಹೊಂದಿರುತ್ತಾರೆ ಎಂದು ಅರ್ಥವಲ್ಲ. ಅದರ ಜೊತೆಗೆ ಉತ್ತಮ ನಿದ್ರೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಚೆನ್ನಾಗಿ ನಿದ್ದೆ ಮಾಡಿ.


ಕೊನೆಯ ಮಾತು: ಖಿನ್ನತೆ ಒಂದು ಮಾನಸಿಕ ಅಸ್ವಸ್ಥತೆ ಅಷ್ಟೆ , ಅದು ಒಂದು ರೋಗವಲ್ಲ. ದೇಹಕ್ಕೆ ಹೇಗೆ ಆಗಾಗ ರೋಗ ರುಜಿನಗಳು ಬರುತ್ತವೆಯೋ ಹಾಗೆಯೇ ಮನಸ್ಸಿಗೂ ಖಿನ್ನತೆ ಎಂಬ ಅಸ್ವಸ್ಥತೆ ಕೆಲವು ದಿನಗಳವರೆಗೆ ಆವರಿಸಿಕೊಳ್ಳುತ್ತದೆ. ಇದರಿಂದ ಹೊರಬರಲು ನೀವು ಉತ್ತಮ ಜೀವನಶೈಲಿ ಜೊತೆ ವೈದ್ಯರ ಸಲಹೆ ಪಡೆದರೆ ಸಾಕು ನಿಮ್ಮ ಖಿನ್ನತೆ ದೂರವಾಗುತ್ತದೆ.
Published by:Ashwini Prabhu
First published: