HOME » NEWS » Explained » HOW MUCH CHANCE OF GETTING COVID 19 INFECTION FROM CONTAMINATED SURFACE SNVS

Explained - ವಸ್ತು ಮುಟ್ಟಿದರೆ ಕೊರೋನಾ ಸೋಂಕು ತಗುಲುತ್ತಾ? ಬಹಳ ಕಡಿಮೆ ಎನ್ನುತ್ತಾರೆ ತಜ್ಞರು

ಗಾಳಿಯಿಂದ ಉಸಿರಾಟ ಇತ್ಯಾದಿ ಮೂಲಕ ಕೊರೋನಾ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ. ಆದರೆ, ವಸ್ತುಗಳ ಮೇಲ್ಮೈ ಮುಟ್ಟಿದರೆ ಸೋಂಕು ತಗುಲುವ ಸಾಧ್ಯತೆ ಸಾವಿರಕ್ಕೆ ಒಂದೂ ಇಲ್ಲ ಎನ್ನುತ್ತಾರೆ ಅಮೆರಿಕದ ತಜ್ಞರು.

news18
Updated:April 17, 2021, 3:44 PM IST
Explained - ವಸ್ತು ಮುಟ್ಟಿದರೆ ಕೊರೋನಾ ಸೋಂಕು ತಗುಲುತ್ತಾ? ಬಹಳ ಕಡಿಮೆ ಎನ್ನುತ್ತಾರೆ ತಜ್ಞರು
ಸಾಂದರ್ಭಿಕ ಚಿತ್ರ
  • News18
  • Last Updated: April 17, 2021, 3:44 PM IST
  • Share this:
ಕೊರೋನಾ ಸೋಂಕು ಎರಡನೇ ಅಲೆಯಲ್ಲಿ ವಿಪರೀತ ವೇಗ ಪಡೆದುಕೊಂಡಿದೆ. ಬಹಳ ಸುಲಭವಾಗಿ ಸೋಂಕು ಹರಡುತ್ತಿದೆ. ಕೋವಿಡ್ ಸೋಂಕು ಮೊದಲು ಕಾಣಿಸಿಕೊಂಡು ಈಗಾಗಲೇ ವರ್ಷದ ಮೇಲಾಗಿದೆ. ಆದರೂ ಇದರ ಹರಡುವಿಕೆ ಸ್ವರೂಪದ ವಿಚಾರದಲ್ಲಿ ಇನ್ನೂ ಕೆಲ ಗೊಂದಲಗಳಿವೆ. ಸೋಂಕಿತರು ಉಪಸ್ಥಿತರಿದ್ದ ಸ್ಥಳದಲ್ಲಿನ ವಸ್ತುಗಳನ್ನ ಮುಟ್ಟಿದರೆ ಸೋಂಕು ತಗುಲುವುದು ನಿಶ್ಚಿತ ಎಂಬ ಮಾತುಗಳನ್ನ ಕೇಳಿರುತ್ತೇವೆ. ಹಾಗಾಗಿ, ಹೋಟೆಲ್, ಥಿಯೇಟರ್ ಇತ್ಯಾದಿ ಸ್ಥಳವನ್ನು ನಿರಂತರವಾಗಿ ಸ್ವಚ್ಛಗೊಳಿಸುವ ಪ್ರಕ್ರಿಯೆ ನಾವು ಗಮನಿಸಿರಬಹುದು. ಆದರೆ, ಮೇಲ್ಮೈ ಮುಟ್ಟಿ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ತಜ್ಞರು. 10 ಸಾವಿರಕ್ಕೆ ಒಂದು ಬಾರಿ ಮಾತ್ರ ಈ ರೀತಿ ಸೋಂಕು ಬರಬಹುದು ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ಹೇಳಿದೆ. ಅಂದರೆ, ಹೋಟೆಲ್, ಆಫೀಸ್, ಶಾಲೆ ಕಾಲೇಜು, ಬಸ್ಸು ಇತ್ಯಾದಿ ಹೆಚ್ಚಿನ ಜನರು ಬಂದು ಹೋಗುವ ಸ್ಥಳಗಳನ್ನ ಪದೇ ಪದೇ ಶುದ್ಧೀಕರಿಸುವ ಪ್ರಯಾಸಕರದ ಕಾರ್ಯಗಳು ಅನವಶ್ಯಕ ಎನಿಸಬಹುದು.

ವಸ್ತುಗಳ ಮೇಲ್ಮೈ ಮುಟ್ಟಿದರೆ ಸೋಂಕು ತಗುಲುವ ಅವಕಾಶ ಇದ್ದೇ ಇದೆ. ಆದರೆ, ಅದರ ಸಾಧ್ಯತೆ ಪ್ರಮಾಣ 10 ಸಾವಿರಕ್ಕೆ ಒಂದು ಮಾತ್ರ. “ಕೊರೋನಾ ವೈರಸ್ ಸೋಂಕು ಹರಡಲು ವಸ್ತುಗಳ ಮೇಲ್ಮೈ ಸಂಪರ್ಕ ಪ್ರಮುಖ ಕಾರಣವಲ್ಲ. ಇದು ಗಾಳಿಯ ಮೂಲಕ ಬೇಗ ಹರಡುತ್ತದೆ. ನಾವು ಉಸಿರಾಡುವಾಗ, ಕೆಮ್ಮುವಾಗ ಮತ್ತು ಶೀನುವಾಗ ಹೊರಹೊಮ್ಮುವ ವೈರಾಣುವಿರುವ ದ್ರವ ಗಾಳಿಯಲ್ಲಿ ಬೆರೆತು, ಆ ಬಳಿಕ ಬೇರೊಬ್ಬರ ಮೂಗು, ಕಣ್ಣು, ಬಾಯಿ ಮೂಲಕ ಸುಲಭವಾಗಿ ಪ್ರವೇಶ ಮಾಡಬಲ್ಲುದು” ಎಂದು ಸಿಡಿಸಿ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಮನೆಗೆ ಹೋಗುವಂತಿಲ್ಲ, ಟಾಯ್ಲೆಟ್​​​ಗೂ ಹೋಗಲು ಅವಕಾಶವಿಲ್ಲ: ಪಿಪಿಇ ಕಿಟ್ ಧರಿಸಿದ ದಾದಿಯ ಕರುಣಾಜನಕ ಫೋಟೋ ವೈರಲ್!

ಕಟ್ಟಡದೊಳಗೆ ಹೆಚ್ಚಾಗಿ ಬಳಕೆಯಾಗುವ ಗಾಜು, ಕಬ್ಬಿಣ, ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳ ಮೇಲೆ ಕೊರೋನಾ ವೈರಸ್ ಮೂರಕ್ಕಿಂತ ಹೆಚ್ಚು ದಿನಗಳ ಕಾಲ ಉಳಿಯುವ ಸಾಧ್ಯತೆ ಇಲ್ಲ. ಹಾಗೆಯೇ, ಇಂಥ ವಸ್ತುಗಳ ಮೇಲೆ ಪದೇ ಪದೇ ಡಿಸ್​ಇನ್ಫೆಕ್ಟೆಂಟ್ (ಸೋಂಕು ನಿವಾರಕ) ದ್ರಾವಣ ಸಿಂಪಡಿಸುವ ಅಗತ್ಯ ಇಲ್ಲ. ಕೋವಿಡ್ ರೋಗಿ ಇದ್ದ ಒಳಾಂಗಣದಲ್ಲಿ ಮಾತ್ರ ಸೋಂಕು ನಿವಾರಕವನ್ನು ಪ್ರಯೋಗಿಸಬೇಕು. ಇನ್ನುಳಿದ ಸ್ಥಳವನ್ನು ದಿನಕ್ಕೊಮ್ಮೆ ಸೋಪು ಡಿಟರ್ಜೆಂಟ್ ಇತ್ಯಾದಿ ಮಾಮೂಲಿಯಂತೆ ಸ್ವಚ್ಛಗೊಳಿಸಿದರೆ ಸಾಕು ವೈರಾಣುವನ್ನು ನೀಗಿಸಹುದು ಎನ್ನುತ್ತಾರೆ ಅಮೆರಿಕದ ಸಿಡಿಸಿ ಸಂಸ್ಥೆಯವರು.
Published by: Vijayasarthy SN
First published: April 17, 2021, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories