Explained: ಗ್ರೀನ್ ಹೈಡ್ರೋಜನ್ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಅಳವಡಿಕೆ ಹೇಗೆ.? .

Green Hydrogen: ಈ ಗ್ರೀನ್ ಹೈಡ್ರೋಜನ್ ಅನ್ನು ಸೌರ ಅಥವಾ ಗಾಳಿಯಂತಹ ನವೀಕರಿಸಬಹುದಾದ ಶಕ್ತಿ ಬಳಸಿ ಉತ್ಪಾದಿಸಲಾಗುತ್ತದೆ. ನೀರಿನ ಪ್ರಮುಖ ಅಂಶಗಳಾದ ಹೈಡ್ರೋಜನ್ ಹಾಗೂ ಆಮ್ಲಜನಕವನ್ನು ವಿಭಜಿಸಿ ವಾತಾವರಣಕ್ಕೆ ಆಮ್ಲಜನಕವನ್ನು ಉಪ ಉತ್ಪನ್ನವಾಗಿ ಬಿಡುಗಡೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನ(climate change and global warming) ಏರಿಕೆ ನಿರಂತರವಾಗಿ ಆರ್ಥಿಕತೆ ಹಾಗೂ ಶಕ್ತಿಯ ಮೇಲೆ ಪ್ರತೀಕೂಲ ಪರಿಣಾಮಗಳನ್ನು ಬೀರುತ್ತಿದ್ದು ಆರ್ಥಿಕ ಬೆಳವಣಿಗೆ ಹಾಗೂ ಪರಿಸರ ಸಂರಕ್ಷಣೆ ಇವೆರಡನ್ನೂ ಸರಿದೂಗಿಸಿಕೊಂಡು ಹೋಗುವುದು ಪ್ರಸ್ತುತ ದಿನಗಳಲ್ಲಿ ಸವಾಲು ಎಂದೆನಿಸಿದೆ. ಹಾಗಾದರೆ ಆರ್ಥಿಕ ಬೆಳವಣಿಗೆ ಹಾಗೂ ಪರಿಸರ ಸಂರಕ್ಷಣೆಯನ್ನು ಸಮಾನವಾಗಿ ಮುನ್ನಡೆಸಿಕೊಂಡು ಹೋಗುವ ರೀತಿಯಲ್ಲಿ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಲ್ಲಿ ಹಸಿರು ಜಲಕನಕ (Green Hydrogen ) ಪ್ರಮುಖವಾಗಿದೆ. ಈ ಗ್ರೀನ್ ಹೈಡ್ರೋಜನ್ ಅನ್ನು ಸೌರ ಅಥವಾ ಗಾಳಿಯಂತಹ ನವೀಕರಿಸಬಹುದಾದ ಶಕ್ತಿ ಬಳಸಿ ಉತ್ಪಾದಿಸಲಾಗುತ್ತದೆ. ನೀರಿನ ಪ್ರಮುಖ ಅಂಶಗಳಾದ ಹೈಡ್ರೋಜನ್ ಹಾಗೂ ಆಮ್ಲಜನಕವನ್ನು ವಿಭಜಿಸಿ ವಾತಾವರಣಕ್ಕೆ ಆಮ್ಲಜನಕವನ್ನು ಉಪ ಉತ್ಪನ್ನವಾಗಿ ಬಿಡುಗಡೆ ಮಾಡುತ್ತದೆ.


ಗ್ರೀನ್ ಹೈಡ್ರೋಜನ್ ಎಂದರೇನು?


ಗ್ರೀನ್ ಹೈಡ್ರೋಜ್ ನವೀಕರಿಸಬಹುದಾದ ಶಕ್ತಿ ಅಥವಾ ಪ್ರಕ್ರಿಯೆಗಳನ್ನು ಬಳಸಿ ಉತ್ಪಾದಿಸಿದಾಗ ಹೈಡ್ರೋಜನ್ ಅನ್ನು ನವೀಕರಿಸಬಹುದಾದ ಶಕ್ತಿಯಂತೆ ಅಗತ್ಯ ಸಮಯದಲ್ಲಿ ಬಳಸಲು ಸಂಗ್ರಹಿಸಲು ಒಂದು ವಿಧಾನವಾಗಿದೆ. ಹೈಡ್ರೋಜನ್ ಶಕ್ತಿಯನ್ನು ಗ್ಯಾಸ್ ರೂಪದಲ್ಲಿ ಇಲ್ಲವೇ ನೈಸರ್ಗಿಕ ಅನಿಲ ಪೈಪ್‌ಗಳ ಮೂಲಕವೂ ತಲುಪಿಸಬಹುದಾಗಿದೆ.


ಭಾರತದಲ್ಲಿ ಶಕ್ತಿಯ ವಿನಿಯೋಗ ಹೇಗಿದೆ?


ಕೈಗಾರಿಕಾ ವಲಯದಲ್ಲಿ ಶಕ್ತಿಯ ವಿನಿಯೋಗವು ಬಹುಪಾಲು ಗಾತ್ರ ಹೊಂದಿದ್ದು 56% ಶಕ್ತಿಯನ್ನು ಕೈಗಾರಿಕಾ ವಲಯವೊಂದೇ ವಿನಿಯೋಗಿಸುತ್ತಿದೆ. ನಂತರದ ಸ್ಥಾನಗಳಲ್ಲಿ ವಸತಿ, ಕೃಷಿ, ವಾಣಿಜ್ಯ ಮತ್ತು ಸಾರ್ವಜನಿಕ ವಲಯಗಳು 31% ಮತ್ತು ಸಾರಿಗೆ ವಲಯವು 10% ವಾಗಿದೆ. ಕೈಗಾರಿಕಾ ವಲಯದಲ್ಲಿ ಕಬ್ಬಿಣ ಹಾಗೂ ಉಕ್ಕು 17% ಶಕ್ತಿ ಬಳಕೆ ಮಾಡಿದರೆ ರಾಸಾಯನಿಕಗಳು 4%, ನಿರ್ಮಾಣದಲ್ಲಿ 2% ಶಕ್ತಿಯನ್ನು ವಿನಿಯೋಗಿಸುತ್ತಿವೆ.


ಇದನ್ನೂ ಓದಿ: ರೈಲುಗಳ ವಿಳಂಬಕ್ಕೆ ರೈಲ್ವೆ ಇಲಾಖೆ ಪರಿಹಾರ ನೀಡಲೇಬೇಕೆಂದು ಸುಪ್ರೀಂ ಆದೇಶ. ರೈಲು ವಿಳಂಬಕ್ಕೆ ಕಾರಣಗಳೇನು ಗೊತ್ತಾ? ಇಲ್ಲಿದೆ ಪೂರ್ತಿ ಡೀಟೈಲ್ಸ್​

ಹಸಿರು ಹೈಡ್ರೋಜನ್‌ನಿಂದ ಹಸಿರು ಕ್ರಾಂತಿ ಹೇಗೆ ನಡೆಯಲಿದೆ?


ಕೈಗಾರಿಕಾ ವಲಯವು ಶಕ್ತಿಯ ವಿನಿಯೋಗವನ್ನು ಬಹಳಷ್ಟು ಮಾಡುವುದರಿಂದ ಹಸಿರು ಹೈಡ್ರೋಜನ್ ಬಳಕೆಯು ಕಾರ್ಬನ್ ಹೊರಸೂಸುವ ಸಂಪನ್ಮೂಲಗಳಿಗೆ ಬದಲಿಯಾಗಿ ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸಲಿದೆ. ಕೃಷಿಗೆ ಬಳಸುವ ರಸಗೊಬ್ಬರ ತಯಾರಿಕೆಯಲ್ಲಿ ಹಸಿರು ಹೈಡ್ರೋಜನ್ ಪಾಲು ಮಹತ್ತರವಾಗಿದ್ದು ಹಸಿರು ಹೈಡ್ರೋಜನ್‌ನಿಂದ ಉತ್ಪತ್ತಿಯಾಗುವ ಅಮೋನಿಯವು ನೈಸರ್ಗಿಕ ಅನಿಲ ಆಧಾರಿತ ಅಮೋನಿಯಾ ಮಾರ್ಪಡಿಸುವುದಲ್ಲದೆ ಹೈಡ್ರೋಜನ್ ಸಂಗ್ರಹದಂತೆ ಕಾರ್ಯನಿರ್ವಹಿಸುತ್ತದೆ. ಪ್ಲಾಸ್ಟಿಕ್, ಬಣ್ಣಗಳು, ಆಟೋ ಬಿಡಿಭಾಗಗಳು ಹಾಗೂ ನಿರ್ಮಾಣ ಸಾಮಾಗ್ರಿಗಳನ್ನು ಗ್ರೀನ್ ಹೈಡ್ರೋಜನ್‌ನಿಂದ ತಯಾರಿಸಬಹುದಾಗಿದೆ.


ಗ್ರೀನ್ ಹೈಡ್ರೋಜನ್ ಅಳವಡಿಕೆಯ ವಿಧಾನಗಳು:


ಹಸಿರು ಹೈಡ್ರೋಜನ್ ತಯಾರಿಕಾ ವೆಚ್ಚ ತಗ್ಗಿಸುವುದು ಹಾಗೂ ಅನುಷ್ಟಾನ ವೆಚ್ಚಗಳನ್ನು ಕಡಿತಗೊಳಿಸಬೇಕಾಗಿದೆ. ಭಾರತದಲ್ಲಿ ತಂತ್ರಜ್ಞಾನ, ನೀರಿನ ವಿದ್ಯುತ್ ವಿಭಜನೆಯ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಹೆಚ್ಚಿಸುವ ಅಂಶದತ್ತ ಗಮನ ಹರಿಸಬಹುದಾಗಿದೆ. ಸ್ಥಳೀಯ ಮಟ್ಟದಲ್ಲಿ ಹೈಡ್ರೋಜನ್ ಸಂಗ್ರಹಣೆಯತ್ತ ಗಮನ ಹರಿಸುವುದು ಸಬ್ಸಿಡಿಗಳು ಹಾಗೂ ತೆರಿಗೆ ಪ್ರೋತ್ಸಾಹಕಗಳನ್ನು ಒದಗಿಸುವುದು ಹೀಗೆ ಗ್ರೀನ್ ಹೈಡ್ರೋಜನ್ ಅನ್ನು ಕೈಗೆಟಕುವ ವೆಚ್ಚದಲ್ಲಿ ಉತ್ಪಾದಿಸಬಹುದಾಗಿದೆ.


ಜಾಗತಿಕ ಮಟ್ಟದಲ್ಲಿ, ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿನ ಹೂಡಿಕೆಯು 2023 ರ ವೇಳೆಗೆ ವರ್ಷಕ್ಕೆ 1 ಬಿಲಿಯನ್ ಡಾಲರ್‌ಗಳನ್ನು ತಲುಪಲಿದೆ. IHS ಮಾರ್ಕಿಟ್ ವಿಶ್ಲೇಷಣೆ ನಡೆಸಿರುವಂತೆ, ಕಳೆದ ಐದು-ಆರು ವರ್ಷಗಳಲ್ಲಿ, ಹಸಿರು ಹೈಡ್ರೋಜನ್ ಉತ್ಪಾದನಾ ವೆಚ್ಚವು 40%ನಷ್ಟು ಕುಸಿದಿದೆ ಮತ್ತು 2025ರ ವೇಳೆಗೆ ಮತ್ತಷ್ಟು 40%ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.


ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಜೆಡಿಎಸ್ ದ್ವಂದ್ವ ನಿಲುವು; ಎಚ್​ಡಿಕೆ ಹೇಳಿಕೆ ಹಿಂದಿನ ಉದ್ದೇಶವೇನು?

MVS ಎಂಜಿನಿಯರಿಂಗ್ ಮತ್ತು NEL ಹೈಡ್ರೋಜನ್ ಕುರಿತು:


MVS ಎಂಜಿನಿಯರಿಂಗ್ ಹೈಡ್ರೋಜನ್, ಆಮ್ಲಜನಕ ಮತ್ತು ಸಾರಜನಕದಂತಹ ಅನಿಲಗಳ ಉತ್ಪಾದನೆಗಾಗಿ ಭಾರತದ ಪ್ರಮುಖ ಕೈಗಾರಿಕಾ ಅನಿಲ ವ್ಯವಸ್ಥೆಗಳ ತಯಾರಕರಾಗಿದೆ. 1977ರಲ್ಲಿ ಸ್ಥಾಪಿತವಾದ MVS, ತಂತ್ರಜ್ಞಾನ ವಲಯದಲ್ಲಿನ ಜಾಗತಿಕ ಪಾಲುದಾರಿಕೆಯಲ್ಲಿ ನಂಬಿಕೆ ಇಟ್ಟಿದ್ದು, ಗ್ರಾಹಕರಿಗೆ ಕಡಿಮೆ ವೆಚ್ಚದ ಉತ್ಪನ್ನಗಳನ್ನು ನೀಡುವ ಸಲುವಾಗಿ ಭಾರತೀಯ ಎಂಜಿನಿಯರಿಂಗ್‌ನೊಂದಿಗೆ ಸೇರಿ ಅತ್ಯುತ್ತಮ ತಂತ್ರಜ್ಞಾನ ಒದಗಿಸುತ್ತದೆ. ಇದೀಗ ನಾರ್ವೆಯ NEL ಹೈಡ್ರೋಜನ್‌ನ ಒಂದು ಭಾಗವಾಗಿರುವ ಪ್ರೋಟಾನ್ ಆನ್‌ಸೈಟ್ (USA) ಸಹಭಾಗಿತ್ವದಲ್ಲಿ, MVS ಇಂಜಿನಿಯರಿಂಗ್ ಇಂಡಿಯಾ ದೇಶಾದ್ಯಂತ ವಿವಿಧ ಕೈಗಾರಿಕಾ ಉದ್ದೇಶಗಳಿಗಾಗಿ 70 ಹೈಡ್ರೋಜನ್ ಎಲೆಕ್ಟ್ರೋಲೈಜರ್‌ಗಳನ್ನು ಪೂರೈಸಿದೆ.


First published: