• ಹೋಂ
  • »
  • ನ್ಯೂಸ್
  • »
  • Explained
  • »
  • Explained: ದೀರ್ಘಾವಧಿಯ ವಿಮಾನ ಪ್ರಯಾಣದಲ್ಲಿ ನಿಮ್ಮ ದೇಹ ಹೇಗೆ ಸ್ಪಂದಿಸುತ್ತದೆ? ತಲೆದೋರುವ ಸಮಸ್ಯೆಗಳೇನು?

Explained: ದೀರ್ಘಾವಧಿಯ ವಿಮಾನ ಪ್ರಯಾಣದಲ್ಲಿ ನಿಮ್ಮ ದೇಹ ಹೇಗೆ ಸ್ಪಂದಿಸುತ್ತದೆ? ತಲೆದೋರುವ ಸಮಸ್ಯೆಗಳೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೀಗೆ ವಿಮಾನ ಯಾನ ಸೌಕರ್ಯಗಳು ಕಾಲ ಕಳೆದಂತೆ ಒಂದಕ್ಕಿಂತ ಒಂದು ಉತ್ತಮ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸುತ್ತಿವೆ. ಆದರೆ ದೀರ್ಘಾವಧಿ ಪ್ರಯಾಣಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದರಿಂದ ಏನಾಗುತ್ತದೆ, ದೀರ್ಘಾವಧಿಯ ಪ್ರಯಾಣ ಸಮಯದಲ್ಲಿ ದೇಹಕ್ಕೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮುಂದೆ ಓದಿ ...
  • Share this:

    2021 ರಲ್ಲಿ, ಸ್ಯಾನ್ ಫ್ರಾನ್ಸಿಸ್ಕೋ (Sanfrancisco) ಮತ್ತು ಬೆಂಗಳೂರು ನಡುವೆ ಸಂಚರಿಸಿದ ಏರ್ ಇಂಡಿಯಾ (Air India) ಸುಮಾರು 1,600 ಕಿಲೋಮೀಟರ್ ದೂರವನ್ನು ಕ್ರಮಿಸಲು ನಿರಂತರವಾಗಿ 17 ಗಂಟೆಗಳ ಕಾಲ ಹಾರಾಟ ನಡೆಸಿ ದಾಖಲೆ ನಿರ್ಮಿಸಿತು. ಇನ್ನು ಕೆಲವೇ ವರ್ಷಗಳಲ್ಲಿ ವಿಮಾನಗಳು (airplane) ತಮ್ಮ ದೀರ್ಘ ಹಾರಾಟವನ್ನು ಇನ್ನಷ್ಟು ದೀರ್ಘಗೊಳಿಸಲಿವೆ. ಏಕೆಂದರೆ ಆಸ್ಟ್ರೇಲಿಯನ್ ಏರ್‌ಲೈನ್ ಕ್ವಾಂಟಾಸ್, 2025 ರ ಅಂತ್ಯದ ವೇಳೆಗೆ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಿಂದ ಲಂಡನ್‌ಗೆ ನಾನ್‌-ಸ್ಟಾಪ್ ಪ್ರಯಾಣವನ್ನು ಒದಗಿಸುವುದಾಗಿ ಘೋಷಿಸಿದ್ದು 19 ಗಂಟೆಗಳಿಗಿಂತಲೂ ಹೆಚ್ಚು ಸಮಯವನ್ನು ಆಗಸದಲ್ಲಿ ಕಳೆಯಲಿದೆ.


    ಕಾಡುವ ಸಮಸ್ಯೆಗಳು


    ಹೀಗೆ ವಿಮಾನ ಯಾನ ಸೌಕರ್ಯಗಳು ಕಾಲ ಕಳೆದಂತೆ ಒಂದಕ್ಕಿಂತ ಒಂದು ಉತ್ತಮ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸುತ್ತಿವೆ. ಆದರೆ ದೀರ್ಘಾವಧಿ ಪ್ರಯಾಣಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದರಿಂದ ಏನಾಗುತ್ತದೆ, ದೀರ್ಘಾವಧಿಯ ಪ್ರಯಾಣ ಸಮಯದಲ್ಲಿ ದೇಹಕ್ಕೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.


    ಡಿಹೈಡ್ರೇಶನ್ ಸಮಸ್ಯೆ ತಲೆದೋರಬಹುದು


    ದೀರ್ಘಾವಧಿಯ ವಿಮಾನ ಪ್ರಯಾಣಗಳಲ್ಲಿ ನಿರ್ಜಲೀಕರಣ/ಡಿಹೈಡ್ರೇಶನ್ ಸಮಸ್ಯೆ ಸಾಮಾನ್ಯವಾದುದು. ವಿಮಾನ ಪ್ರಯಾಣದ ಸಮಯದಲ್ಲಿ ನಿಮ್ಮ ಗಂಟಲು, ಮೂಗು, ತ್ವಚೆ ಒಣಗುತ್ತದೆ ಅಂತೆಯೇ ದೀರ್ಘಾವಧಿ ಪ್ರಯಾಣಿಸಿದಷ್ಟು ನಿರ್ಜಲೀಕರಣದ ಅಪಾಯ ಕೂಡ ಹೆಚ್ಚು.


    ನೆಲಕ್ಕಿಂತಲೂ ವಾಯುಮಟ್ಟದಲ್ಲಿ ಆರ್ದ್ರತೆ ಕಡಿಮೆ ಮಟ್ಟದ್ದಾಗಿರುತ್ತದೆ. ಕ್ಯಾಬಿನ್ ಮೂಲಕ ಸಾಕಷ್ಟು ಗಾಳಿಯನ್ನು ಹೊರಭಾಗದಿಂದ ಎಳೆಯಲಾಗುತ್ತದೆ ಮತ್ತು ಹೆಚ್ಚಿನ ಎತ್ತರದಲ್ಲಿ ಗಾಳಿಯಲ್ಲಿ ಸಾಕಷ್ಟು ತೇವಾಂಶ ಇರುವುದಿಲ್ಲ.


    ಇದನ್ನೂ ಓದಿ: ಏನಿದು ಇ-20 ಇಂಧನ? ಇದರಿಂದ ವಾಹನ ಸವಾರರಿಗೆ ಏನು ಲಾಭ?


    ಪ್ರಯಾಣಕ್ಕೂ ಮೊದಲು ಸಾಕಷ್ಟು ನೀರು ಸೇವನೆ


    ಸಾಕಷ್ಟು ನೀರು ಸೇವಿಸದಿದ್ದರೆ ಅಥವಾ ವಿಪರೀತವಾಗಿ ಮದ್ಯ ಸೇವಿಸುವುದು (ಮದ್ಯವು ಮೂತ್ರವರ್ಧಕವಾಗಿದೆ, ಇದರಿಂದಾಗಿ ದ್ರವವು ಕಳೆದುಹೋಗುತ್ತದೆ) ನಿರ್ಜಲೀಕರಣದ ಸಮಸ್ಯೆ ತಲೆದೋರುತ್ತದೆ. ವಿಮಾನ ಪ್ರಯಾಣಕ್ಕಿಂತ ಮುಂಚೆ ಸಾಕಷ್ಟು ನೀರು ಸೇವಿಸಿ. ನೀವು ನಿತ್ಯವೂ ಸೇವಿಸುವುದಕ್ಕಿಂತ ಹೆಚ್ಚಾಗಿಯೇ ನೀರು ಸೇವಿಸಬೇಕಾಗುತ್ತದೆ.


    ಕಿವಿಗಳು, ಸೈನಸ್‌ಗಳು, ಕರುಳು ಮತ್ತು ನಿದ್ರೆಯ ಮೇಲೆ ಹಾನಿ


    ವಿಮಾನ ಕ್ಯಾಬಿನ್ ಒತ್ತಡವು ಬದಲಾದಾಗ ದೇಹದಲ್ಲಿನ ಅನಿಲವು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ. ವಿಮಾನವು ಏರಿದಾಗ ಮತ್ತು ಒತ್ತಡ ಕಡಿಮೆಯಾದಂತೆ ಅದು ವಿಸ್ತರಿಸುತ್ತದೆ ಮತ್ತು ವಿಮಾನ ಕೆಳಗಿಳಿಯುತ್ತಿದ್ದಂತೆ ವಿರುದ್ಧವಾಗಿ ಸಂಭವಿಸುತ್ತದೆ. ಇದು ಸಾಮಾನ್ಯ ಸಮಸ್ಯೆಗಳಿಗೆ ಕಾರಣವಾಗಬಹುದು:


    ಕಿವಿ ನೋವು


    ಕಿವಿ ಪೊರೆಯ ಎರಡೂ ಬದಿಯ ಗಾಳಿಯ ಒತ್ತಡವು ವಿಭಿನ್ನವಾಗಿರುವಾಗ ಪೊರೆಯ ಮೇಲೆ ಒತ್ತಡವಿರುತ್ತದೆ. ಹೀಗಿರುವಾಗ ಕಿವಿನೋವು ಕಾಣಿಸಿಕೊಳ್ಳುತ್ತದೆ.


    ಸಾಂಕೇತಿಕ ಚಿತ್ರ


    ತಲೆನೋವು


    ಸೈನಸ್‌ನಲ್ಲಿ ಗಾಳಿ ಹಬ್ಬುವುದರಿಂದ ತಲೆನೋವು ಕಾಡಬಹುದು


    ಕರುಳಿನ ಸಮಸ್ಯೆಗಳು


    ನೀವು ದೂರ ಪ್ರಯಾಣ ಮಾಡಿದಷ್ಟೂ ಕರುಳಿನ ಸಮಸ್ಯೆಗಳು ಹೆಚ್ಚಾಗಿರುತ್ತದೆ


    ನಿದ್ರೆಯ ಸಮಸ್ಯೆ


    ಸಾಮಾನ್ಯವಾಗಿ ಮಾಡುವುದಕ್ಕಿಂತಲೂ ದೀರ್ಘಾವಧಿಯ ವಿಮಾನ ಪ್ರಯಾಣಗಳಲ್ಲಿ ಹೆಚ್ಚಿನ ನಿದ್ರೆಯನ್ನು ನೀವು ಮಾಡುತ್ತೀರಿ. ನೆಲದ ಮೇಲಿರುವುದಕ್ಕಿಂತ ಎತ್ತರದಲ್ಲಿರುವ ಕ್ಯಾಬಿನ್ ಮಟ್ಟದ ಗಾಳಿಯಿಂದ ಆಮ್ಲಜನಕವನ್ನು ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುವುದಿಲ್ಲ.


    ಈ ಸಮಯದಲ್ಲಿ ವಿಶ್ರಾಂತಿಯನ್ನು ಪಡೆಯುವ ಮೂಲಕ ದೇಹವು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಹಾಗಾಗಿ ನಿದ್ದೆ ನಿಮ್ಮನ್ನು ಆವರಿಸುತ್ತದೆ. ಈ ರೀತಿಯ ಸಮಸ್ಯೆಗಳು ದೀರ್ಘಾವಧಿಯ ವಿಮಾನ ಪ್ರಯಾಣಗಳಲ್ಲಿ ಕಂಡುಬರಲೇಬೇಕು ಎಂದೇನಿಲ್ಲ. ವಿಮಾನ ಮೇಲಕ್ಕೆ ಹಾರುವಾಗ ಹಾಗೂ ಕೆಳಕ್ಕೆ ಇಳಿಯುವಾಗ ಸಮಸ್ಯೆಯಾಗಿ ಕಾಡಬಹುದು.


    ರಕ್ತ ಹೆಪ್ಪುಗಟ್ಟುವಿಕೆ ಕಂಡುಬರಬಹುದು


    ದೀರ್ಘಕಾಲದವರೆಗೆ ಚಲನರಹಿತವಾಗಿರುವುದರಿಂದ ರಕ್ತಹೆಪ್ಪುಗಟ್ಟುವಿಕೆ ಕಂಡುಬರುತ್ತದೆ. ಸಾಮಾನ್ಯವಾಗಿ ಪ್ರಯಾಣ ಸಮಯದಲ್ಲಿ ಪ್ರಯಾಣಿಕರನನ್ನು ಕಾಡುವ ಸಮಸ್ಯೆ ಇದಾಗಿದೆ.


    ಶ್ವಾಸಕೋಶಕ್ಕೆ ಪ್ರಯಾಣಿಸಬಹುದಾದ ಕಾಲಿನ ಭಾಗದಲ್ಲಿ (ಆಳವಾದ ಅಭಿಧಮನಿ ಥ್ರಂಬೋಸಿಸ್ ಅಥವಾ DVT) ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆಗಳು ಕಂಡುಬರುತ್ತದೆ (ಅಲ್ಲಿ ಇದನ್ನು ಪಲ್ಮನರಿ ಎಂಬಾಲಿಸಮ್ ಎಂದು ಕರೆಯಲಾಗುತ್ತದೆ).


    ನೀವು ವಿಮಾನದಲ್ಲಿ ತಿರುಗಾಡದಿದ್ದರೆ ಮತ್ತು ಈ ಕೆಳಗಿನ ಅಪಾಯಕಾರಿ ಅಂಶಗಳು ನಿಮ್ಮಲ್ಲಿ ಹೆಚ್ಚು ಇದ್ದರೆ, ರಕ್ತ ಹೆಪ್ಪುಗಟ್ಟುವಿಕೆಯ ಬೆಳವಣಿಗೆಯ ಸಾಧ್ಯತೆ ಹೆಚ್ಚು:


    ವಯಸ್ಸು


    ಬೊಜ್ಜು


    ಈ ಹಿಂದೆ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ದರೆ ಕುಟುಂಬದ ಇತಿಹಾಸ


    ಕೆಲವು ರೀತಿಯ ಹೆಪ್ಪುಗಟ್ಟುವಿಕೆ ಅಸ್ವಸ್ಥತೆಗಳು


    ಕ್ಯಾನ್ಸರ್


    ಇತ್ತೀಚಿನ ನಿಶ್ಚಲತೆ ಅಥವಾ ಶಸ್ತ್ರಚಿಕಿತ್ಸೆ


    ಗರ್ಭಧಾರಣೆ ಅಥವಾ ಇತ್ತೀಚಿನ ಹೆರಿಗೆ


    ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಅಥವಾ ಮೌಖಿಕ ಗರ್ಭನಿರೋಧಕ ಮಾತ್ರೆ.


    ಹೆಚ್ಚು ಪ್ರಯಾಣಿಸಿದಷ್ಟೂ ಸಮಸ್ಯೆ ಹೆಚ್ಚು


    2022 ರ ವಿಮರ್ಶೆಯ ಪ್ರಕಾರ, 18 ಅಧ್ಯಯನಗಳ ಮಾಹಿತಿಯಂತೆ ನೀವು ಹೆಚ್ಚು ಸಮಯ ಪ್ರಯಾಣಿಸಿದಷ್ಟೂ, ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವು ಹೆಚ್ಚಾಗುತ್ತದೆ ಎಂದಾಗಿದೆ. ನಾಲ್ಕು ಗಂಟೆಗಳ ನಂತರ ಪ್ರಾರಂಭವಾಗುವ ಪ್ರತಿ ಎರಡು ಗಂಟೆಗಳ ವಿಮಾನ ಪ್ರಯಾಣಕ್ಕೆ 26% ದಷ್ಟು ಹೆಚ್ಚಿನ ಅಪಾಯವಿದೆ ಎಂದು ಸಂಶೋಧನಾ ಲೇಖಕರು ಲೆಕ್ಕ ಹಾಕಿದ್ದಾರೆ.


    ಹಾಗಿದ್ದರೆ ದೀರ್ಘಾವಧಿಯ ವಿಮಾನ ಪ್ರಯಾಣಗಳಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯವೇ ಎಂಬುದನ್ನು ಅರಿತುಕೊಳ್ಳಲು ಪ್ರಯಾಣಿಕರ ಮೇಲೆ ಅಧ್ಯಯನ ನಡೆಸುವುದು ಅಗತ್ಯವಾಗಿದೆ. ಇದು ದೃಢೀಕರಣಗೊಳ್ಳುವವರೆಗೆ ಚಲನೆ, ನೀರು ಸೇವನೆ, ಮಿತವಾದ ಆಲ್ಕೋಹಾಲ್ ಸೇವನೆ ಈ ಸಮಸ್ಯೆಯನ್ನು ಹತ್ತಿಕ್ಕಲು ನೆರವನ್ನು ನೀಡುತ್ತದೆ.


    ಸಾಂಕೇತಿಕ ಚಿತ್ರ


    ಕಂಪ್ರೆಷನ್ ಸ್ಟಾಕಿಂಗ್ಸ್ ಧರಿಸುವುದು


    ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಲು ಕಂಪ್ರೆಷನ್ ಸ್ಟಾಕಿಂಗ್ಸ್ ಧರಿಸಲು ಶಿಫಾರಸು ಮಾಡಲಾಗಿದೆ. ಈ ಸ್ಟಾಕಿಂಗ್ಸ್ ಕಾಲುಗಳಲ್ಲಿ ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ರಕ್ತವು ಹೃದಯಕ್ಕೆ ಮರಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು ಸಾಮಾನ್ಯವಾಗಿ ಚಲಿಸುವ ಅಥವಾ ನಡೆಯುವಾಗ ಸ್ನಾಯುವಿನ ಸಂಕೋಚನದಿಂದ ಸಂಭವಿಸುತ್ತದೆ.


    2021 ರ ಕೊಕ್ರೇನ್ ವಿಮರ್ಶೆಯು ಒಂಬತ್ತು ಪ್ರಯೋಗಗಳ ಫಲಿತಾಂಶಗಳನ್ನು ತಿಳಿಸಿದ್ದು ಅಧ್ಯಯನದಲ್ಲಿ ಪಾಲ್ಗೊಂಡ 2,637 ಭಾಗವಹಿಸಿದ್ದವರಿಗೆ ಐದು ಗಂಟೆಗಳಿಗಿಂತ ಹೆಚ್ಚಿನ ವಿಮಾನ ಪ್ರಯಾಣದಲ್ಲಿ ಕಂಪ್ರೆಷನ್ ಸ್ಟಾಕಿಂಗ್ಸ್ (ಅಥವಾ ಇಲ್ಲ) ಧರಿಸಲು ಸೂಚಿಸಲಾಯಿತು. ಸ್ಟಾಕಿಂಗ್ಸ್ ಧರಿಸಿದವರಿಗೆ ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆ ಕಂಡುಬಂದಿಲ್ಲ. ಈ ಕಾಯಿಲೆಯ ರೋಗಲಕ್ಷಣಗಳು ಅವರಲ್ಲಿ ಉಂಟಾಗಲಿಲ್ಲ. ಅದರೆ ಯಾವುದೇ ಹೆಪ್ಪುಗಟ್ಟುವಿಕೆಯು ಸಾಮಾನ್ಯವಾಗಿ ಅಭಿವೃದ್ಧಿಗೊಳ್ಳಬಹುದು, ಚಲಿಸಬಹುದು ಮತ್ತು ನಂತರ ರೋಗಲಕ್ಷಣಗಳನ್ನು ಉಂಟುಮಾಡಬಹುದು.


    ತುರ್ತು ಆರೋಗ್ಯ ರಕ್ಷಣೆ


    ರಕ್ತಹೆಪ್ಪುಗಟ್ಟುವ ಸಮಸ್ಯೆ ಇದ್ದರೆ ಪ್ರಯಾಣಕ್ಕೂ ಮೊದಲು ಬಿಪಿ ಪರಿಶೀಲಿಸಿ. ಪ್ರಯಾಣದ ನಂತರ ರಕ್ತಹೆಪ್ಪುಗಟ್ಟುವಿಕೆ ಉಂಟಾದರೂ ಗಮನಕ್ಕೆ ಬರುವುದಿಲ್ಲ.


    ಏಕೆಂದರೆ ಇದು ಪರಿಣಾಮ ಬೀರಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಕಾಲಿನಲ್ಲಿ ನೋವು ಊತ ಕಂಡುಬಂದರೆ ಎದೆ ನೋವು, ಕೆಮ್ಮು ಹಾಗೂ ಉಸಿರಾಟ ತೊಂದರೆ ಉಂಟಾದಲ್ಲಿ ತುರ್ತು ಆರೋಗ್ಯ ರಕ್ಷಣೆ ಪಡೆದುಕೊಳ್ಳಬೇಕಾಗುತ್ತದೆ.


    ಜೆಟ್ ಲ್ಯಾಗ್, ವಿಕಿರಣ, ಕೋವಿಡ್


    ನಮ್ಮಲ್ಲಿ ಹಲವರಿಗೆ ಜೆಟ್ ಲ್ಯಾಗ್ ಬಗ್ಗೆ ತಿಳಿದಿಲ್ಲ. ನೀವು ಸಮಯ ವಲಯಗಳನ್ನು ದಾಟಿದಂತೆ ದೇಹವು ಯೋಚಿಸುವ ಸಮಯ ಮತ್ತು ಗಡಿಯಾರದ ಸಮಯದ ನಡುವಿನ ಸಂಪರ್ಕ ಕಡಿತಗೊಳ್ಳುತ್ತದೆ. ದೀರ್ಘಾವಧಿಯ ವಿಮಾನ ಪ್ರಯಾಣಗಳಲ್ಲಿ ಹೆಚ್ಚು ಸಮಯ ವಲಯಗಳನ್ನು ದಾಟಬೇಕಾಗುತ್ತದೆ. ನೀವು ಮೂರು ಅಥವಾ ಹೆಚ್ಚಿನ ವಲಯಗಳನ್ನು ದಾಟಿದಾಗ ಜೆಟ್ ಲ್ಯಾಗ್ ಹೆಚ್ಚು ಸಮಸ್ಯೆಯನ್ನುಂಟು ಮಾಡುತ್ತದೆ ಅದರಲ್ಲೂ ನೀವು ಪೂರ್ವ ಭಾಗಕ್ಕೆ ಪ್ರಯಾಣಿಸುತ್ತಿದ್ದರೆ ಈ ಸಮಸ್ಯೆ ಕಾಡುತ್ತದೆ.


    ನೀವು ಆಗಾಗ್ಗೆ ದೀರ್ಘ ಪ್ರಯಾಣಕ್ಕೆ ಒಳಗಾಗುತ್ತಿದ್ದರೆ ನೀವು ಗಾಳಿಯಲ್ಲಿ ಹೆಚ್ಚು ಇದ್ದಷ್ಟು ಕಾಸ್ಮಿಕ್ ವಿಕಿರಣದ ದಾಳಿಗೆ ತುತ್ತಾಗುತ್ತೀರಿ. ಬಾಹ್ಯಾಕಾಶದಿಂದ ಬರುವ ವಿಕಿರಣ ಇದಾಗಿದ್ದು, ಕ್ಯಾನ್ಸರ್ ಹಾಗೂ ಸಂತಾನೋತ್ಪತ್ತಿ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಎಷ್ಟರವರೆಗೆ ಗಾಳಿಗೆ ತೆರೆದುಕೊಳ್ಳುವುದು ಸುರಕ್ಷಿತವಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ನೀವು ಆಗಾಗ್ಗೆ ಪ್ರಯಾಣಿಸದೇ ಇರುವುದೇ ಇದನ್ನು ಪರಿಹರಿಸಲಿರುವ ವಿಧಾನವಾಗಿದೆ. ನೀವು ಗರ್ಭಿಣಿಯಾಗಿದ್ದರೆ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಪ್ರಯಾಣಕ್ಕೂ ಮುನ್ನ ಬಿಪಿ ಪರಿಶೀಲಿಸಿ.


    ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸುವುದನ್ನು ಮರೆಯದಿರಿ. ಕೈಗಳನ್ನು ನಿಯಮಿತವಾಗಿ ತೊಳೆಯುವುದು, ಮಾಸ್ಕ್ ಧರಿಸುವುದು ಹಾಗೂ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ವಿಮಾನ ಪ್ರಯಾಣ ಮಾಡದಿರಿ.


    ಸಂಶೋಧನೆ ಇನ್ನೂ ಪ್ರಗತಿಯಲ್ಲಿದೆ


    ಆಸ್ಟ್ರೇಲಿಯಾ ಮತ್ತು ಯುರೋಪ್ ನಡುವಿನ ಈ ದೀರ್ಘಾವಧಿಯ, ತಡೆರಹಿತ ವಿಮಾನಗಳಿಗೆ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಕುರಿತು ಸಂಶೋಧನೆಯು ನಡೆಯುತ್ತಿದ್ದು ಇನ್ನೂ ಆರಂಭಿಕ ಹಂತದಲ್ಲಿದೆ. ಆಸ್ಟ್ರೇಲಿಯಾದ ಸಂಶೋಧಕರು ಗಹನವಾದ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ನೀವು ದೀರ್ಘಾವಧಿಯ ಪ್ರಯಾಣ ಮಾಡದೇ ಇದ್ದರೆ ಮೇಲೆ ತಿಳಿಸಿದ ಯಾವುದೇ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ ಎಂಬುದಂತೂ ನಿಶ್ಚಿತ.




    ವಿಮಾನಯಾನ ಸಂಸ್ಥೆಗಳು ನಿಮಗೆ ನೀಡುವ ಸಲಹೆಯನ್ನು ಅನುಸರಿಸಿ. ಹಾರಾಟದ ಸಮಯದಲ್ಲಿ ಸಾಕಷ್ಟು ನೀರು ಸೇವನೆ, ಆಗಾಗ್ಗೆ ಕೈಗಳನ್ನು ತೊಳೆಯುವುದು, ಮುಖಗವಸು ಧರಿಸುವುದು ಹಾಗೂ ಸ್ವಚ್ಛತೆಯನ್ನು ಪಾಲಿಸಲು ಮರೆಯದಿರಿ.


    ಆಗಾಗ್ಗೆ ಕ್ಯಾಬಿನ್‌ನೊಳಗೆ ನಡೆದಾಡಿ. ಪ್ರಯಾಣ ನಂತರ ಅಸೌಖ್ಯತೆ ಕಾಡಿದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ರಕ್ತ ಹೆಪ್ಪುಗಟ್ಟುವಿಕೆಯು ನಿಮ್ಮ ರಕ್ತನಾಳಗಳಾದ್ಯಂತ ರೂಪುಗೊಳ್ಳಲು, ಬೆಳೆಯಲು ಮತ್ತು ಚಲಿಸಲು ಗಂಟೆಗಳು ಅಥವಾ ದಿನಗಳನ್ನು ತೆಗೆದುಕೊಳ್ಳಬಹುದು.

    Published by:Prajwal B
    First published: