Explained: ಆರ್ಥಿಕ ಹಿಂಜರಿತ ಉಂಟಾದರೆ ನಮಗೆ ಹೇಗೆ ತಿಳಿಯುತ್ತದೆ? ಇಲ್ಲಿದೆ ಉತ್ತರ

ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಹಲವು ದೇಶಗಳ ಆರ್ಥಿಕ ಸ್ಥಿತಿಗತಿ ಅಧೋಪತನವಾಗಿದ್ದು ಎಲ್ಲೆಡೆ ಮತ್ತೆ ರಿಸೆಷನ್ ಆಗುವ ಆತಂಕವೇ ಮನೆಮಾಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗ ಆರ್ಥಿಕ ವಲಯಕ್ಕೆ ಸಂಬಂಧಿಸಿದಂತೆ ಏನಾದರೂ ಸುದ್ದಿಗಳನ್ನು ಗಮನಿಸಿದರೆ ಎಲ್ಲೆಡೆ ಆರ್ಥಿಕ ತಜ್ಞರು, ವಿಶ್ಲೇಷಕರು ರಿಸೆಷನ್ (Recession) ಬಗ್ಗೆಯೇ ಹೆಚ್ಚು ಮತನಾಡುತ್ತಿರುವುದನ್ನು ಗಮನಿಸಬಹುದು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಹಲವು ದೇಶಗಳ ಆರ್ಥಿಕ ಸ್ಥಿತಿಗತಿ (Economic Status) ಅಧೋಪತನವಾಗಿದ್ದು ಎಲ್ಲೆಡೆ ಮತ್ತೆ ರಿಸೆಷನ್ ಆಗುವ ಆತಂಕವೇ ಮನೆಮಾಡಿದೆ. ಒಟ್ಟಿನಲ್ಲಿ ಈಗ ಸರ್ಕಾರಗಳು (Government) ಏಪ್ರಿಲ್-ಜೂನ್ ವರೆಗಿನ ಅವಧಿಯ ತ್ರೈಮಾಸಿಕದ ಒಟ್ಟು ಜಿಡಿಪಿ ದರ (GDP Rate) ಎಷ್ಟು ಎಂದು ಲೆಕ್ಕ ಹಾಕಲು ಕುಳಿತರೆ ಸಾಕು ಅದು ಮತ್ತಷ್ಟು ಕುಸಿತವನ್ನೇ ತೋರಿಸಬಹುದೆಂದು ಹಲವು ಪರಿಣಿತರು ಅಭಿಪ್ರಾಯ (Opinion) ಪಟ್ಟಿದ್ದಾರೆ. ಇದರಿಂದ ನಮಗೆ ಆರ್ಥಿಕ ಹಿಂಜರಿತ ಉಂಟಾಗಿದೆಯೇ ಎಂಬ ಗುಮಾನಿ ಮೂಡಬಹುದು.

ಆರ್ಥಿಕ ಹಿಂಜರಿತ ಉಂಟಾಗಲು ಕಾರಣವೇನು?
ಆದಾಗ್ಯೂ ಅಮೆರಿಕದ ಆರ್ಥಿಕ ತಜ್ಞರು ಹೀಗೆ ಸತತ ಎರಡು ತ್ರೈಮಾಸಿಕಗಳಲ್ಲೂ ತಗ್ಗಿದ ಜಿಡಿಪಿ ದರ ನೇರವಾಗಿ ರಿಸೆಷನ್ ಉಂಟಾಗಿದೆ ಎಂದು ನಿರ್ಣಯಿಸಲು ಸರಿಯಾದ ಮಾನದಂಡವಲ್ಲ ಎನ್ನುತ್ತಾರೆ. ಏಕೆಂದರೆ ಆರ್ಥಿಕ ಕುಗ್ಗುವಿಕೆ ಉಂಟಾದ ಆ ಆರು ತಿಂಗಳ ಸಂದರ್ಭದಲ್ಲಿ ಹಲವು ಉದ್ಯೋಗದಾತರು 2.7 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದ್ದರು. ಇದು ಒಂದು ರೀತಿಯಲ್ಲಿ ಪ್ಯಾಂಡೇಮಿಕ್ ಸಮಯದ ಮುಂಚೆಗಿನ ಸ್ಥಿತಿಗಿಂತಲೂ ಹೆಚ್ಚಿನ ಪ್ರಮಾಣ ಎಂದೇ ಹೇಳಬಹುದು. ಅಲ್ಲದೆ, ಹಲವು ಉದ್ಯೋಗದಾತರು ಉತ್ತಮ ಸಂಪನ್ಮೂಲಗಳನ್ನು ಆಕರ್ಷಿಸುವ ಅಥವಾ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಕರ್ಷಕ ವೇತನಗಳನ್ನು ಆಫರ್ ಮಾಡುತ್ತಿರುವುದನ್ನೂ ಸಹ ಕಾಣಬಹುದು.

ಇದೆಲ್ಲ ಉದ್ಯೋಗ ಮಾರುಕಟ್ಟೆ ಬಲವಾಗಿರುವುದನ್ನೇ ಸೂಚಿಸುತ್ತದೆ. ಹಾಗಾಗಿ ಈ ಬಲವಾದ ಉದ್ಯೋಗ ಮಾರುಕಟ್ಟೆ ಇರುವುದರಿಂದಲೇ ಅಮೆರಿಕದ ಫೆಡರಲ್ ರಿಸರ್ವ್ ಜಿಡಿಪಿ ವರದಿ ಪ್ರಕಟವಾಗುವ ಒಂದು ದಿನದ ಮುಂಚೆಯೇ ಅಲ್ಪಾವಧಿ ಬಡ್ಡಿ ದರವನ್ನು ಮತ್ತಷ್ಟು ಏರಿಸುವ ಬಗ್ಗೆ ಘೋಷಣೆ ಮಾಡುವುದನ್ನು ನಿರೀಕ್ಷಿಸಲಾಗಿದೆ. ಫೆಡೆರಲ್ ನಲ್ಲಿರುವ ಹಲವು ಅಧಿಕಾರಿ ವರ್ಗಗಗಳ ಅಭಿಪ್ರಾಯದ ಪ್ರಕಾರ ಆರೋಗ್ಯಕರವಾಗಿರುವ ಉದ್ಯೋಗ ವೃದ್ಧಿ ದರವು ಹೆಚ್ಚಿನ ಆರ್ಥಿಕ ಹೊಡೆತವನ್ನು ನಿಭಾಯಿಸಲು ಶಕ್ತವಾಗಿರುತ್ತದೆ ಎನ್ನುವುದಾಗಿದೆ. ಆದರೆ ಹಲವು ಆರ್ಥಿಕ ತಜ್ಞರು ಅಧಿಕಾರಿಗಳ ಈ ಅಭಿಪ್ರಾಯಕ್ಕೆ ಸಹಮತ ನೀಡಲು ಒಪ್ಪಿಲ್ಲ ಎನ್ನಬಹುದಾಗಿದೆ.

ಜನರ ಆದಾಯದ ಮೇಲೆ ಪೆಟ್ಟು ಬಿದ್ದ ಬೆಲೆ ಏರಿಕೆ
ಈಗಾಗಲೇ ಅಮೆರಿಕದಲ್ಲಿ ಹಣದುಬ್ಬರದ ದರ ಏರಿದೆ. ಜೂನ್ ನಲ್ಲಿ ಈ ದರ 9.1% ಗೆ ತಲುಪಿದ್ದು ಇದು ಕಳೆದ 41 ವರ್ಷಗಳಲ್ಲಿ ಕಂಡಿರಬಹುದಾದ ಹೆಚ್ಚಿನ ದುಸ್ಥಿತಿಯನ್ನು ತಲುಪಿದೆ. ಹಾಗಾಗಿ, ಇದನ್ನು ನಿಯಂತ್ರಿಸುವ ದೃಷ್ಟಿಯಿಂದಾಗಿಯೂ ಸಹ ಅಲ್ಲಿನ ಫೆಡೆರಲ್ ರಿಸರ್ವ್ ಸಾಕಷ್ಟು ಹೋರಾಡುತ್ತಿದೆ. ಅಮೆರಿಕದಲ್ಲಿ ಹಟಾತ್ತನೆ ಏರಿರುವ ದಿನ ನಿತ್ಯದ ಅವಶ್ಯಕ ಸಾಮಗ್ರಿಗಳ ಬೆಲೆ ಏರಿಕೆಯು ಅಲ್ಲಿನ ಜನರ ಆದಾಯದ ಮೇಲೆ ಪೆಟ್ಟು ನೀಡಿದ್ದು ಸದ್ಯ ಅಮೆರಿಕದ ಆರ್ಥಿಕತೆ ಕುಸಿಯುತ್ತಿದೆ ಎನ್ನಲಾಗಿದೆ.

ಅಸಲಿಗೆ ಆರ್ಥಿಕ ಹಿಂಜರಿತ ಅಥವಾ ರಿಸೆಷನ್ ಅಂದರೆ ಅದಕ್ಕೆ ಹಲವು ವ್ಯಾಖ್ಯಾನಗಳಿದ್ದು ಅವುಗಳ ಪೈಕಿ ಸಾಮಾನ್ಯವಾಗಿ ಬಹು ಮಟ್ಟಿಗೆ ನ್ಯಾಷನಲ್ ಬ್ಯೂರೋ ಆಫ್ ಎಕಾನಾಮಿಕ್ ರೀಸರ್ಚ್ ಎಂಬ ಲಾಭರಹಿತ ಆಯೋಗವು ನೀಡಿರುವ ವ್ಯಾಖ್ಯಾನವನ್ನು ಪರಿಗಣಿಸಲಾಗುತ್ತದೆ ಹಾಗೂ ಆ ಆಯೋಗವು ರಿಸೆಷನ್ ಅನ್ನು "ಆರ್ಥಿಕ ವಲಯದಾದ್ಯಂತ ಹಲವು ತಿಂಗಳುಗಳ ಕಾಲ ಮಹತ್ತರವಾಗಿ ಕುಸಿದ ಆರ್ಥಿಕ ಚಟುವಟಿಕೆಗಳು" ಎಂದು ವ್ಯಾಖ್ಯಾನಿಸಿದೆ. ಅಷ್ಟಕ್ಕೂ ಆಯೋಗವು ಯಾವುದೇ ಆರ್ಥಿಕತೆ ಕುಸಿತ ಹಾಗೂ ರಿಸೆಷನ್ ಆರಂಭ ಇದೇ ಎಂದು ಹೇಳುವ ಮುಂಚೆ ಹಲವಾರು ಮಹತ್ತರ ಆರ್ಥಿಕ ಸಂಬಂಧಿ ಅಂಶಗಳನ್ನು ಪರಿಗಣಿಸಿ, ವಿಶ್ಲೇಷಿಸಿ ನಂತರ ಆ ಬಗ್ಗೆ ಹೇಳುತ್ತದೆ.

ಇದನ್ನೂ ಓದಿ: Business Idea: ಊರಿನಲ್ಲಿದ್ದು ಈ ವ್ಯವಹಾರ ಆರಂಭಿಸಿದ್ರೆ ನಿಮ್ಮದಾಗುತ್ತೆ ಬಂಪರ್ ಆದಾಯ

ಹಾಗಾದರೆ, ಇದು ರಿಸೆಷನ್ ಅಲ್ಲವಾಗಿದ್ದಲ್ಲಿ ಸದ್ಯ ಈಗ ಆಗುತ್ತಿರುವ ಬದಲಾವಣೆಗಳು ಏನು? ಇವು ಯಾವುದನ್ನು ಸೂಚಿಸುತ್ತಿವೆ? ಎಂಬ ಪ್ರಶ್ನೆಗಳು ಈ ಸಂದರ್ಭದಲ್ಲಿ ಮೂಡುವುದು ಸಹಜ.

ಅಮೆರಿಕದಲ್ಲಿ ಆರ್ಥಿಕತೆ ಕುಗ್ಗುತ್ತಿದೆಯೇ..ಅಥವಾ ಇಲ್ಲವೆ..?
ನೈಜವಾಗಿ ಹೇಳಬೇಕೆಂದರೆ ವರ್ಷಾರಂಭದ ಮೊದಲ ಮೂರು ತಿಂಗಳುಗಳಲ್ಲಿ ಆರ್ಥಿಕತೆ ಕುಸಿದಿರುವುದು ಸತ್ಯ. ಏಕೆಂದರೆ ಈ ಸಂದರ್ಭದಲ್ಲಿ ಜಿಡಿಪಿ ದರ ವಾರ್ಷಿಕವಾಗಿ 1.6% ದಾಖಲಾಗಿತ್ತು. ತದನಂತರ ಸರ್ಕಾರವು ಮುಂದಿನ ತ್ರೈಮಾಸಿಕ ಅಂದರೆ ಏಪ್ರಿಲ್-ಜೂನ್ ವರೆಗಿನ ಅವಧಿಯಲ್ಲಿ ಆರ್ಥಿಕತೆಯು ವಾರ್ಷಿಕವಾಗಿ 1% ಕ್ಕಿಂತ ಕಡಿಮೆ ದರದಲ್ಲಿ ಬೆಳೆದಿದೆ ಅಂದಾಜಿಸಿದೆ. ತಾಂತ್ರಿಕವಾಗಿ ಇದನ್ನು ಗಮನಿಸಿದರೆ ಇದನ್ನು ಆರ್ಥಿಕ ಹಿಂಜರಿತ ಅಥವಾ ರಿಸೆಷನ್ ಎಂದು ಕರೆಯಲು ಪೂರಕ ಆಧಾರಗಳಿಲ್ಲ ಎನ್ನಲಾಗುತ್ತದೆ.

ಒಂದು ವೇಳೆ ಈ ಆರ್ಥಿಕ ದರವು ಎರಡನೇ ತ್ರೈಮಾಸಿಕದಲ್ಲೂ ಸಹ ನಕಾರಾತ್ಮಕವಾಗಿ ವೃದ್ಧಿಯಾಗಿದ್ದೇ ಆದಲ್ಲಿ ಆಗ ಅದನ್ನು ಫೆಡೆರಲ್ ಅಧಿಕಾರಿಗಳು ಹಾಗೂ ಬಿಡೆನ್ ನೇತೃತ್ವದ ಆಡಳಿತವು ಇದನ್ನು ಕಡಿಮೆಯಾಗಿ ತಿಳಿದಿರುವ "ಗ್ರಾಸ್ ಡಾಮೆಸ್ಟಿಕ್ ಇನ್ಕಮ್" ಎಂಬ ಪದವನ್ನು ಬಳಸಬಹುದು ಎನ್ನಲಾಗಿದೆ.

ಜಿಡಿಪಿ ಅಥವಾ ಗ್ರಾಸ್ ಡಾಮೆಸ್ಟೀಕ್ ಪ್ರಾಡಕ್ಟ್ ಎಂದರೇನು?
ಜಿಡಿಪಿ ಅಥವಾ ಗ್ರಾಸ್ ಡಾಮೆಸ್ಟೀಕ್ ಪ್ರಾಡಕ್ಟ್ ಎಂಬುದು ಗ್ರಾಹಕರು, ವ್ಯಾಪಾರಗಳು ಹಾಗೂ ಸರ್ಕರಗಳು ಭೋಗಿಸುವುದನ್ನು ಸೇರಿಸಿ ರಾಷ್ಟ್ರದ ಸಾಮಾನು ಸರಂಜಾಮು ಹಾಗೂ ಸೇವೆಗಳಿಂದ ಉತ್ಪಾದಿಸಲಾದ ಹೊರ ಉತ್ಪನ್ನವಾಗಿರುತ್ತದೆ. ಆದರೆ ಇದೇ ಸಂದರ್ಭದಲ್ಲಿ ಜಿಡಿಐ ಅಂದರೆ ಗ್ರಾಸ್ ಡಾಮೆಸ್ಟಿಕ್ ಇನ್ಕಮ್, ಜಿಡಿಪಿಗೆ ತದ್ವಿರುದ್ಧ ಎನ್ನಬಹುದಾಗಿದೆ. ಅಂದರೆ ಇದರಲ್ಲಿ ಅದೇ ಪರಿಮಾಣವನ್ನು ಆದಾಯದ ಮೂಲಕವಷ್ಟೇ ನಿರ್ಣಯಿಸಲಾಗುತ್ತದೆ.

ಇದನ್ನೂ ಓದಿ:  Stock Market: ಲಕ್ಷಕ್ಕೆ ಎರಡೂವರೆ ಕೋಟಿ ರಿಟರ್ನ್ಸ್! ಅಂದು ಈ ಷೇರು ಖರೀದಿಸಿದ್ದವರು ಈಗ ಮಿಲಿಯನೇರ್

ದೀರ್ಘಾವಧಿಯ ಓಟದಲ್ಲಿ ಈ ಎರಡೂ ಅಂಶಗಳನ್ನು ಗಮನಿಸಲಾಗುತ್ತದಾದರೂ ಅಲ್ಪಾವಧಿಯ ಓಟದಲ್ಲಿ ಎರಡೂ ಅಂಶಗಳು ಒಂದಕ್ಕೊಂದು ಸಮನಾಗಿರುವುದಿಲ್ಲ. ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಎಂಬುದು 1.6% ದರದಲ್ಲಿ ಕುಗ್ಗಿದ್ದರೆ ಜಿಡಿಐ ಎಂಬುದು 1.8% ದರದಲ್ಲಿ ಬೆಳೆದಿರುವುದನ್ನು ಗಮನಿಸಬಹುದು. ಇನ್ನು NBER ಸಂಸ್ಥೆಯು ಈ ಎರಡೂ ಮಾನದಂಡಗಳ (ಜಿಡಿಪಿ ಮತ್ತು ಜಿಡಿಐ) ಸರಾಸರಿಯನ್ನು ಪರಿಗಣಿಸಿ ರಿಸೆಷನ್ ಬಗ್ಗೆ ವ್ಯಾಖ್ಯಾನ ನೀಡುತ್ತದೆ. ಹೀಗೆ ಲೆಕ್ಕ ಹಾಕಿದರೆ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆಯು 0.2% ಪ್ರಮಾಣದಲ್ಲಿ ಬೆಳೆದಿರುವುದನ್ನು ಇದು ತೋರಿಸುತ್ತದೆ. ಹಾಗಾಗಿ ಇದು ಆರ್ಥಿಕತೆಯು ಅತಿ ಕೊಂಚ ಪ್ರಮಾಣದಲ್ಲಿ ಬೆಳೆದಿದೆ ಎಂಬುದನ್ನೇ ಸೂಚಿಸುತ್ತದೆ.

NBER ಪರಿಗಣಿಸುವ ಇತರೆ ಅಂಶಗಳು ಯಾವುವು?
ರಿಸೆಷನ್ ಅನ್ನು ವ್ಯಾಖ್ಯಾನಿಸಲು ಅಥವಾ ನಿರ್ಧರಿಸಲು NBER ಹಲವು ಇತರೆ ಮಹತ್ತರ ಅಂಶಗಳನ್ನು ಪರಿಗಣಿಸುತ್ತದೆ. ಅವು ಆದಾಯ, ಉದ್ಯೋಗ, ಹಣದುಬ್ಬರಕ್ಕೆ ಪೂರಕವಾಗಿ ವ್ಯಯಿಸುವ ಶಕ್ತಿ, ರಿಟೇಲ್ ಮಾರಾಟಗಳು, ಕಾರ್ಖಾನೆಗಳ ಔಟ್ಪುಟ್ ಇತ್ಯಾದಿ. ಈ ಸಂದರ್ಭದಲ್ಲಿ ಅದು ಉದ್ಯೋಗಗಳ ಮೇಲೆ ಹೆಚ್ಚಿನ ಭಾರ ಹಾಕುತ್ತದೆ, ಏಕೆಂದರೆ ಇದು ಹಣದುಬ್ಬರಕ್ಕೆ ಪೂರಕವಾಗಿ ವ್ಯಯಿಸುವ ಶಕ್ತಿಯನ್ನು ಒಳಗೊಂಡಿರುತ್ತದೆ. ಇದು ಉದ್ಯೋಗಿಗಳ ಒಟ್ಟು ಆದಾಯವನ್ನು ಲೆಕ್ಕ ಹಾಕುತ್ತದೆ.

ಈ ಸಂದರ್ಭದಲ್ಲಿ ಯಾವುದೇ ಒಬ್ಬ ನಿರುದ್ಯೋಗಿ ಉದ್ಯೋಗ ಪಡೆದರೆ ಅಥವಾ ಉದ್ಯೋಗಿಯೊಬ್ಬನಿಗೆ ವೇತನ ಹೆಚ್ಚಳ ದೊರೆತರೆ ಅದು ಒಟ್ಟಾರೆ ಆದಾಯದಲ್ಲಿ ವೃದ್ಧಿಯನ್ನೇ ತೋರಿಸುತ್ತದೆ. ಈ ದರವು ಏಪ್ರಿಲ್ ಮತ್ತು ಮೇ ಸಂದರ್ಭದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿರುವುದು ಕಂಡುಬಂದಿದೆ.

ಹಲವರಿಗೆ ರಿಸೆಷನ್ ಬರುತ್ತಿದೆ ಎಂದೆನಿಸುತ್ತಿದೆಯೆ?
ಹೌದು, ಈ ಎಲ್ಲ ಅಂಶಗಳು ಒಂದೆಡೆಯಾದರೆ ಪ್ರಸ್ತುತ ಜನರು ಆರ್ಥಿಕವಾಗಿ ಹೆಚ್ಚಿನ ಭಾರ ಎದುರಿಸುತ್ತಿರುವುದರಿಂದ ಜನರೆಲ್ಲರ ಸಾಮಾನ್ಯ ಅಭಿಪ್ರಾಯ ರಿಸೆಷನ್ ಬರುತ್ತಿದೆ ಎಂಬುದೇ ಆಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಕಳೆದ ಸೋಮವಾರದಂದು, ವಾಲ್‌ಮಾರ್ಟ್ ವರದಿ ಮಾಡಿರುವಂತೆ ಹೆಚ್ಚಾದ ಅನಿಲ ಮತ್ತು ಆಹಾರದ ವೆಚ್ಚಗಳ ಪರಿಣಾಮದಿಂದಾಗಿ ಅದರ ಗ್ರಾಹಕರು ಹೊಸ ಬಟ್ಟೆಗಳ ಖರೀದಿಸುವಿಕೆಯನ್ನು ಕಡಿಮೆ ಮಾಡುವಂತಾಗಿದೆ, ಇದು ಆರ್ಥಿಕತೆಯ ಪ್ರಮುಖ ಚಾಲಕ ಎನ್ನಲಾಗುವ ಗ್ರಾಹಕರ ವ್ಯಯ ಮಾಡುವ ಸಾಮರ್ಥ್ಯ ದುರ್ಬಲಗೊಳ್ಳುತ್ತಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ.

ರಾಷ್ಟ್ರದ ಅತಿದೊಡ್ಡ ಚಿಲ್ಲರೆ ವ್ಯಾಪಾರಿ ವಾಲ್‌ಮಾರ್ಟ್ ತನ್ನ ಲಾಭದ ದೃಷ್ಟಿಕೋನವನ್ನು ಕಡಿಮೆ ಮಾಡಿದೆ ಮತ್ತು ಪೀಠೋಪಕರಣಗಳು ಹಾಗೂ ಎಲೆಕ್ಟ್ರಾನಿಕ್ಸ್‌ನಂತಹ ಹೆಚ್ಚಿನ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ:  Savings Account: ಉಳಿತಾಯ ಖಾತೆದಾರರಿಗೆ ಶುಭ ಸುದ್ದಿ! 10 ಸಾವಿರದವರೆಗೂ ಲಾಭ

ಅಲ್ಲದೆ, ಫೆಡ್‌ನ ದರ ಏರಿಕೆಯು ಸರಾಸರಿ ಅಡಮಾನ ದರಗಳನ್ನು ಒಂದು ವರ್ಷದ ಹಿಂದೆ ಹೋಲಿಸಿ ನೋಡಿದರೆ 5.5% ಕ್ಕೆ ದ್ವಿಗುಣವಾಗಿದೆ, ಇದು ಮನೆ ಮಾರಾಟ ಮತ್ತು ನಿರ್ಮಾಣದಲ್ಲಿ ತೀವ್ರ ಕುಸಿತವನ್ನು ಉಂಟುಮಾಡಿದೆ. ಹೆಚ್ಚಾಗಿರುವ ಈ ದರಗಳು ಈಗ ಹೊಸ ಕಟ್ಟಡಗಳು, ಯಂತ್ರೋಪಕರಣಗಳು ಮತ್ತು ಇತರ ಸಲಕರಣೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿಯುಳ್ಳ ಹೂಡಿಕೆದಾರರ ಮೇಲೆಯೂ ಪ್ರಭಾವ ಬೀರುತ್ತಿದೆ. ಇನ್ನೊಂದೆಡೆ ಕಂಪನಿಗಳು ಖರ್ಚು ಮತ್ತು ಹೂಡಿಕೆಯನ್ನು ಕಡಿಮೆ ಮಾಡಿದರೆ, ಸ್ವಾಭಾವಿಕವಾಗಿ ನೇಮಕಾತಿಯನ್ನು ನಿಧಾನಗೊಳಿಸಲು ಪ್ರಾರಂಭಿಸುತ್ತಾರೆ.

ಮುಕ್ತವಾಗಿ ಖರ್ಚು ಮಾಡುವ ಬಗ್ಗೆ ಕಂಪನಿಗಳಲ್ಲಿ ಹೆಚ್ಚುತ್ತಿರುವ ದರಗಳ ಎಚ್ಚರಿಕೆಯು ಅಂತಿಮವಾಗಿ ಉದ್ಯೋಗಿಗಳ ವಜಾಗೊಳಿಸುವಿಕೆಗೆ ಕಾರಣವಾಗಬಹುದು. ಆರ್ಥಿಕತೆಯು ಉದ್ಯೋಗಗಳನ್ನು ಕಳೆದುಕೊಂಡರೆ ಮತ್ತು ಸಾರ್ವಜನಿಕರು ಹೆಚ್ಚು ಭಯಭೀತರಾಗುತ್ತಿದ್ದರೆ, ಗ್ರಾಹಕರು ಖರ್ಚುಗಳನ್ನು ಕಡಿಮೆ ಮಾಡುತ್ತಾರೆ. ಫೆಡ್‌ನ ಕ್ಷಿಪ್ರ ದರ ಹೆಚ್ಚಳವು ಮುಂದಿನ ಎರಡು ವರ್ಷಗಳಲ್ಲಿ ಹಿಂಜರಿತದ ಸಾಧ್ಯತೆಯನ್ನು ಸುಮಾರು 50% ಕ್ಕೆ ಹೆಚ್ಚಿಸಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ ಮತ್ತು ಬ್ಯಾಂಕ್ ಆಫ್ ಅಮೇರಿಕಾ ಅರ್ಥಶಾಸ್ತ್ರಜ್ಞರು ಈಗ ಈ ವರ್ಷದ ನಂತರ "ಸೌಮ್ಯ" ಹಿಂಜರಿತ ಆಗಬಹುದೆಂಬ ಮುನ್ಸೂಚನೆ ನೀಡಿದ್ದಾರೆ.

ಸನ್ನಿಹಿತವಾಗುತ್ತಿರುವ ಆರ್ಥಿಕ ಹಿಂಜರಿತದ ಕೆಲವು ಚಿಹ್ನೆಗಳು ಯಾವುವು?
ಆರ್ಥಿಕ ಹಿಂಜರಿತವು ನಡೆಯುತ್ತಿದೆ ಎಂಬುದಕ್ಕೆ ಸ್ಪಷ್ಟವಾದ ಸಂಕೇತವೆಂದರೆ, ಉದ್ಯೋಗ ನಷ್ಟಗಳಲ್ಲಿ ಸ್ಥಿರವಾದ ಏರಿಕೆ ಮತ್ತು ನಿರುದ್ಯೋಗದ ಉಲ್ಬಣಗೊಳ್ಳುವಿಕೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಈ ಹಿಂದೆ, ಹಿಂದಿನ ಮೂರು ತಿಂಗಳುಗಳಲ್ಲಿ ಸರಾಸರಿಯಾಗಿ ಶೇಕಡಾವಾರು ಪ್ರಮಾಣದಲ್ಲಿ ನಿರುದ್ಯೋಗ ದರದಲ್ಲಾಗಿರುವ ಹೆಚ್ಚಳವು ಶೀಘ್ರದಲ್ಲೇ ಆರ್ಥಿಕ ಹಿಂಜರಿತ ಬಂದೊದಗಲಿದೆ ಎಂದು ಅರ್ಥೈಸುತ್ತಿದೆ.

ಅಮೆರಿಕಕ್ಕೆ ಸಂಬಂಧಿಸಿದಂತೆ ಅಲ್ಲಿ ನಿರುದ್ಯೋಗದ ಪ್ರಯೋಜನಗಳು ಸಿಗುತ್ತವೆ ಎಂಬುದು ಗೊತ್ತಿರುವ ವಿಚಾರ. ಹಾಗಾಗಿ, ಅಲ್ಲಿನ ಅರ್ಥಶಾಸ್ತ್ರಜ್ಞರು ಪ್ರತಿ ವಾರ ನಿರುದ್ಯೋಗದ ಲಾಭಗಳನ್ನು ಅರಿಸುವ ಜನರ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುತ್ತಿರುತ್ತಾರೆ, ಇದು ವಜಾಗೊಳಿಸುವಿಕೆಯು ಹದಗೆಡುತ್ತಿದೆಯೇ ಎಂಬುದನ್ನು ಸೂಚಿಸಲು ಸಹಾಯ ಮಾಡುತ್ತದೆ. ಕಳೆದ ವಾರ, ನಿರುದ್ಯೋಗ ಸಹಾಯಕ್ಕಾಗಿ ಅರ್ಜಿಗಳು 251,000 ಕ್ಕೆ ಏರಿವೆ, ಇದು ಎಂಟು ತಿಂಗಳಲ್ಲಿ ಅತ್ಯಧಿಕ ಮಟ್ಟವಾಗಿದೆ. ಇದು ಸಂಭಾವ್ಯವಾಗಿ ರಿಸೆಷನ್ ಗೆ ಸಂಬಂಧಿಸಿದ ಸಂಕೇತವಾಗಿದೆ ಎಂಬ ಅಭಿಪ್ರಾಯ ಸದ್ಯ ವ್ಯಕ್ತವಾಗುತ್ತಿದೆ.

ಆರ್ಥಿಕತೆ ಕುಸಿಯುತ್ತಿದ್ದರೂ ಫೆಡೆರಲ್ ರಿಸರ್ವ್ ಈಗಲೂ ದರಗಳನ್ನು ಏರಿಸುವರೆ...?
ಸದ್ಯ ಆರ್ಥಿಕತೆಯ ನಿಧಾನ ವೃದ್ಧಿ ಹಾಗೂ ಬಲವಾದ ನೇಮಕಾತಿ ಫೆಡೆರಲ್ ಇಲಾಖೆಗೆ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿಸಿದೆ. ಆದರೆ, ಜೆರೋಮ್ ಪೊವೆಲ್ ಅವರು ಈ ಸಂದರ್ಭದಲ್ಲೂ ಧನಾತ್ಮಕ ರೀತಿಯಲ್ಲಿ ಬದಲಾವಣೆಯಾಗುವ ಗುರಿಯನ್ನು ಹೊಂದಿದ್ದಾರೆ. ಅಂದರೆ ಆರ್ಥಿಕತೆಯು ಎಷ್ಟು ನಿಧಾನ ಬೆಳವಣಿಗೆಯ ಮಟ್ಟಕ್ಕೆ ಕುಸಿಯುತ್ತದೆ ಎಂದರೆ ನೇಮಕಾತಿಯು ನಿಧಾನವಾಗುತ್ತದೆ. ತದನಂತರ ಹಣದುಬ್ಬರ ನಿಧಾನವಾಗಿ ಚೇತರಿಸಿಕೊಳ್ಳುತ್ತ 2% ಗುರಿಯನ್ನು ತಲುಪುವುದಾಗಿದೆ.

ಆದರೆ ಪೊವೆಲ್ ಅವರ ಪ್ರಕಾರ ಈ ರೀತಿಯ ಫಲಿತಾಂಶವು ನಿಜಕ್ಕೂ ಸಾಧಿಸುವುದು ಬಲು ಕಷ್ಟಕರವಾಗಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಹಾಗೂ ಚೈನಾದ ಲಾಕ್ಡೌನ್ ಗಳಿಂದಾಗಿ ಸಪ್ಲೈ ಚೈನ್ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಿ ಇಂಧನ, ಆಹಾರ, ತೈಲ ಇತ್ಯಾದಿ ವಸ್ತುಗಳ ಬೆಲೆಗಳು ಅಮೆರಿಕದಲ್ಲಿ ಅತಿ ಹೆಚ್ಚಾಗುವಂತೆ ಮಾಡಿದೆ.

ಇದನ್ನೂ ಓದಿ:  Overdraft: ನಿಮ್ಮ ಬ್ಯಾಂಕ್​ ಖಾತೆಯಲ್ಲಿ ಹಣವಿಲ್ವಾ? ಹೀಗೆ ಮಾಡಿದ್ರೆ, ಜೀರೋ ಬ್ಯಾಲೆನ್ಸ್​ ಇದ್ರೂ ದುಡ್ಡು ಸಿಗುತ್ತೆ!

ಆದಾಗ್ಯೂ ಹಣದುಬ್ಬರವನ್ನು ನಿಯಂತ್ರಣ ಮಾಡುವುದು ಬಲು ಮುಖ್ಯವಾಗಿದ್ದು ಆ ಪ್ರಕಾರ ಪೊವೆಲ್ ಹೇಳುತ್ತಾರೆ, ಅವಶ್ಯಕವಿದ್ದಲ್ಲಿ ದುರ್ಬಲ ಆರ್ಥಿಕ ಸ್ಥಿತಿಯ ಹೊರತಾಗಿಯೂ ನಾವು ದರಗಳನ್ನು ಹೆಚ್ಚಿಸಲು ಸಿದ್ಧರಾಗಿದ್ದೇವೆ ಎಂದು. ಅವರು ಈ ಹಿಂದೆ ಇದು (ದರ ಏರಿಕೆ) ಅಪಾಯ ಎಂದು ಪರಿಗಣಿಸಲ್ಪಟ್ಟಿದ್ದರೂ ಅತಿ ದೊಡ್ಡದಾದಂತಹ ಅಪಾಯವಲ್ಲ, ಅಷ್ಟಕ್ಕೂ ದೇಶದ ಸುಸ್ಥಿರತೆಯು ಎಲ್ಲಕ್ಕಿಂತ ಪ್ರಧಾನವಾಗಿದ್ದು ಹಣದುಬ್ಬರ ನಿಯಂತ್ರಿಸುವುದೇ ಪ್ರಮುಖ ಎಂದು ಹೇಳಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Published by:Ashwini Prabhu
First published: