Explained: ವಾಸನೆಗಳಿಂದ ಮನುಷ್ಯನ ಮನಸ್ಸು ಬದಲಾಗುತ್ತಾ? ಈ ಬಗ್ಗೆ ಅಧ್ಯಯನ ಹೇಳುವುದೇನು?

ಇದೆಂಥ ವಾಸನೆ! ಉಸಿರಾಟಕ್ಕೂ ಕೂಡ ಕಷ್ಟವಾಗುತ್ತಿದೆ ಎಂದು ಕೆಟ್ಟ ವಾಸನೆ ಬಂದಾಗ ಮುಖ ಕಿವುಚಿ ಹೇಳುತ್ತೇವೆ. ಅದೇ ಸುಗಂಧವನ್ನು ಆಘ್ರಾಣಿಸಿದಾಗ ಮುಖ ಸಂತಸದಿಂದ ಇಷ್ಟಗಲ ಅರಳುತ್ತದೆ. ಹೌದು ಅಲ್ವಾ? ನಾಲಿಗೆಯಿಂದ ರುಚಿ ತಿಳಿಯುತ್ತದೆ ಒಪ್ಪಿಕೊಳ್ಳೋಣ. ಮೂಗು ಆಘ್ರಾಣಿಸುವ ವಾಸನೆಯಿಂದ ಮನುಷ್ಯನ ಭಾವನೆಗಳು ಬದಲಾಗುತ್ತವೆ ಎಂಬುವುದು ಗೊತ್ತಾ? ಈ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಇದೆಂಥ ವಾಸನೆ (Smell), ಉಸಿರಾಟಕ್ಕೂ ಕೂಡ ಕಷ್ಟವಾಗುತ್ತಿದೆ ಎಂದು ಕೆಟ್ಟ ವಾಸನೆ ಬಂದಾಗ ಮುಖ ಕಿವುಚಿ ಹೇಳುತ್ತೇವೆ. ಅದೇ ಸುಗಂಧ ವಾಸನೆಯನ್ನು ಆಘ್ರಾಣಿಸಿದಾಗ ಮುಖ ಸಂತಸದಿಂದ ಇಷ್ಟಗಲ ಅರಳುತ್ತದೆ. ಹೌದು ಅಲ್ವಾ..! ನಾಲಿಗೆಯಿಂದ ರುಚಿ (Taste) ತಿಳಿಯುತ್ತದೆ ಒಪ್ಪಿಕೊಳ್ಳೋಣ. ಮೂಗು ಆಘ್ರಾಣಿಸುವ ವಾಸನೆಯಿಂದ ಮನುಷ್ಯನ ಭಾವನೆಗಳು ಬದಲಾಗುತ್ತವೆ ಎಂಬುದನ್ನು ಕೇಳುತ್ತಿರುವುದು ಇದೇ ಮೊದಲು ಅಂದುಕೊಂಡಿದ್ದರೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು, ಓದುವುದನ್ನು ಮುಂದುವರಿಸಿ. ಬ್ರೆಜಿಲ್‌ನ (Brazil) ಸಾವೊ ಪಾಲೊ ಸೈಕಾಲಜಿ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಪಿಎಚ್‌ಡಿ ಅಭ್ಯರ್ಥಿಯಾಗಿರುವ ಮ್ಯಾಥ್ಯೂಸ್ ಹೆನ್ರಿಕ್ ಫೆರೆರಾ ಅವರ ಸ್ನಾತಕೋತ್ತರ ಸಂಶೋಧನೆಯಲ್ಲಿ ʼವಾಸನೆಯು ಬೇರೆಯವರ ಭಾವನೆಗಳನ್ನು ಸೂಕ್ಷ್ಮವಾಗಿ ನೋಡುವ ಮತ್ತು ಅರ್ಥೈಸುವ ನಮ್ಮ ಸಾಮರ್ಥ್ಯವನ್ನು ಪ್ರಭಾವಿಸುತ್ತದೆ ಎಂದು ಸೂಚಿಸುತ್ತದೆʼ ಎಂಬ ವರದಿಯನ್ನು ಸಂಶೋಧನೆಯಲ್ಲಿ (Research) ನೀಡಲಾಗಿದೆ.


ಅಧ್ಯಯನದ ಕುರಿತು ಮಿರೆಲ್ಲಾ ಗುವಾಲ್ಟಿಯೆರಿಯವರು ಏನು ಹೇಳಿದ್ದಾರೆ?
ಈ ಪರಿಣಾಮವಾಗಿ ವಾಸನೆಯು ಭಾವನೆಗಳನ್ನು ತಿಳಿಯಲು ಸಹಾಯಕಾರಿ ಎಂಬ ಲೇಖನವನ್ನು PLOS ONE ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. "ನಾನು ಆಹ್ಲಾದಕರ ವಾಸನೆಗೆ ಒಳಗಾಗಿದ್ದರೆ, ಆಹ್ಲಾದಕರ ಭಾವನೆಗಳ ನನ್ನ ಗ್ರಹಿಕೆಯು ಹೆಚ್ಚಾಗುತ್ತದೆ. ಮತ್ತು ಉತ್ತಮ ಸಕಾರಾತ್ಮಕ ಭಾವನೆಗಳು ನಮ್ಮ ಮನಸ್ಸಿನಲ್ಲಿ ಹುಟ್ಟುತ್ತವೆ. ಅಹಿತಕರ ವಾಸನೆಗಳ ವಿಷಯದಲ್ಲೂ ಇದು ನಿಜ, ಅಹಿತಕರ ವಾಸನೆಯು ನಮ್ಮ ಭಯ ಮತ್ತು ಅಸಹ್ಯ ಭಾವನೆಗಳನ್ನು ಹೆಚ್ಚಿಸುತ್ತದೆ” ಎಂದು ಫೆರೀರಾ ಅವರ ಪ್ರಬಂಧ ಸಲಹೆಗಾರ, ಸಾವೊ ಪಾಲೊ ಸೈಕಾಲಜಿ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಮನೋವಿಜ್ಞಾನದ ಪ್ರೊಫೆಸರ್, ನರವಿಜ್ಞಾನದಲ್ಲಿ ಪಿಎಚ್‌ಡಿ ಹೊಂದಿರುವ ಮಿರೆಲ್ಲಾ ಗುವಾಲ್ಟಿಯೆರಿ ಹೇಳಿದರು.


ಈ ಸಂಶೋಧನಾ ವಿಷಯವನ್ನು ಬಳಸಿಕೊಂಡು, ಹಿತಕರವಾದ ಅಥವಾ ಅಹಿತಕರ ವಾಸನೆಯು ಹೇಗೆ ಒಬ್ಬ ಮನುಷ್ಯನ ಭಾವನೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯೋಗ ಗುಂಪನ್ನು ರಚಿಸಲಾಗಿದೆ ಎಂದು ಗುಲ್ಟಿಯೆರಿ ಹೇಳಿದರು.


ವಾಸನೆಯು ಮನುಷ್ಯನ ಭಾವನೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
"ಒಬ್ಬ ವ್ಯಕ್ತಿಯು ವ್ಯಕ್ತಪಡಿಸುವ ಭಾವನೆಯನ್ನು ಸರಿಯಾಗಿ ನಿರ್ಧಾರ ಮಾಡುವುದಕ್ಕೆ ಕಡಿಮೆ ಅಭಿವ್ಯಕ್ತಿಯ ತೀವ್ರತೆಯನ್ನು ನಾವು ಹೊಂದಿದ್ದೇವೆ. ಇದು ಹೀಗೆ ಆಗುತ್ತದೆ ಎಂದು 100% ನಮಗೆ ತಿಳಿದಿತ್ತು. ಇದು ಯಾಕೆ ಹೀಗೆ ಎಂದು ತಿಳಿಯಲು ನಾವು ಈ ಸಂಶೋಧನೆಯನ್ನು ಕೈಗೊಂಡಿದ್ದೇವೆ. ಆದರೆ ಕನಿಷ್ಠ ಏನೆಂದು ತಿಳಿಯಲು ನಾವು ಬಯಸಿದ್ದೇವೆ. ಈ ಭಾವನೆಗಳು ಕೇವಲ 20 % ಮತ್ತು 30% ರವರೆಗೆ ಮಾತ್ರ ಗೋಚರವಾಗುತ್ತವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ” ಎಂದು ಗುವಾಲ್ಟಿಯೆರಿ ವಿವರಿಸಿದರು.


ಇದನ್ನೂ ಓದಿ: Emilia Clarke: ಅಯ್ಯೋ, ಈ ನಟಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು 14 ಸಾವಿರ ರೂಪಾಯಿ ಪಾವತಿಸಬೇಕಂತೆ!

ಈ ಸಂಶೋಧನೆಯಲ್ಲಿ ಭಾಗವಹಿಸುವವರು ವಾಸನೆಯಿಂದ ಹೇಗೆ ಭಾವನೆಗಳು ಬದಲಾಗುತ್ತವೆ ಎಂಬುದನ್ನು ಗ್ರಹಿಸಲು ಅಗತ್ಯ ಅಭಿವ್ಯಕ್ತಿಯ ತೀವತ್ರೆಯ ಮಿತಿಯನ್ನು ಅವರು ಹೊಂದಬೇಕಾಗುತ್ತದೆ. ಇದರ ನಂತರ ವಾಸನೆಯಿಂದ ಭಾವನೆಗಳಲ್ಲಿ ಯಾವ ರೀತಿಯ ಪರಿಣಾಮ ಆಯಿತು ಎಂಬುದನ್ನು ತಿಳಿಸಲು ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡರು. ಅವರು ಎಷ್ಟು ಸಮಯವನ್ನು ಉತ್ತರಿಸುವುದಕ್ಕೆ ತೆಗೆದುಕೊಂಡರು ಎಂಬುದನ್ನು ಕೂಡ ಇಲ್ಲಿ ಲೆಕ್ಕ ಮಾಡಲಾಗಿದೆ. ಕೊನೆಯದಾಗಿ, ಆಹ್ಲಾದಕರ ಮತ್ತು ಅಹಿತಕರ ವಾಸನೆಗಳ ಉಪಸ್ಥಿತಿಯಿಂದ ವಾಸನೆಯಿಂದ ಭಾವನೆಗಳನ್ನು ಹೇಗೆ ಮಾರ್ಪಡಿಸಬಹುದು ಎಂಬುದನ್ನು ಅವರು ಗಮನಿಸಿದರು.


ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ನಮ್ಮ ದೇಹದ ಐದು ಇಂದ್ರಿಯಗಳು ಪರಸ್ಪರ ಒಂದಕ್ಕೊಂದು ಪೂರಕ ಸಂಬಂಧವನ್ನು ಹೊಂದಿವೆ. ಇದರಿಂದ ಮನುಷ್ಯರಾದ ನಾವು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗೆ ಹೊಂದಿಕೊಳ್ಳಬಹುದು. ಬೇರೆಯವರ ಜೊತೆ ಸಂವಹನ ನಡೆಸಬಹುದು ಮತ್ತು ಎಲ್ಲಿಯಾದರೂ ಬದುಕಬಹುದು. ಈ ಸಂಶೋಧನಾ ಲೇಖನವು ಇದರ ಉದಾಹರಣೆಯನ್ನು ವಿವರಿಸುತ್ತದೆ. ಆ ಉದಾಹರಣೆಯನ್ನು "ವಾಸನೆಯ ಉಪಸ್ಥಿತಿಯು, ನಮಗೆ ತಿಳಿದಿರಲಿ ಅಥವಾ ತಿಳಿಯದೇ ಇರಲಿ, ಅದು ನನ್ನ ಮೆದುಳಿನ ದೃಶ್ಯ ಸಂಗ್ರಹಣೆಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಈ ದೃಶ್ಯಗಳೇ ಮುಂದೆ ನಮ್ಮ ಭಾವನೆಗಳಾಗಿ ರೂಪಗೊಳ್ಳುತ್ತವೆ. ಈ ಭಾವನೆಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು” ಎಂಬುದನ್ನು ಗುವಾಲ್ಟಿಯೆರಿ ಹೇಳಿದರು.


ಇದನ್ನೂ ಓದಿ: Viral News: ತನ್ನನ್ನು ಕಚ್ಚಿದ ಹಾವಿಗೆ ಕಚ್ಚಿ ಸೇಡು ತೀರಿಸಿದ 2 ವರ್ಷದ ಕಂದ, ಸತ್ತ ಉರಗ!

ನಮ್ಮ ಅಧ್ಯಯನವು ಆಘ್ರಾಣಿಸುವಿಕೆ ಮತ್ತು ದೃಶ್ಯ ಪ್ರಚೋದಕಗಳ ನಡುವಿನ ಮಹತ್ವದ ಪರಸ್ಪರ ಕ್ರಿಯೆಯನ್ನು ತೋರಿಸಿದೆ, ಆದ್ದರಿಂದ ವಾಸನೆಗಳು ಮುಖದ ಅಭಿವ್ಯಕ್ತಿಗಳ ಗುರುತಿಸುವಿಕೆಯ ಮೇಲೆ ಪ್ರಭಾವ ಬೀರುತ್ತವೆ ಮತ್ತು ಮುಖದ ಅಭಿವ್ಯಕ್ತಿಗಳು ವಾಸನೆಗಳಿಗೆ ಭಾವನಾತ್ಮಕ ಪ್ರತಿಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ" ಎಂದು ನ್ಯಾಚುರಾ ಕಾಸ್ಮೆಟಿಕ್‌ನ ಅಂಗಸಂಸ್ಥೆಯಾದ ನ್ಯಾಚುರಾ ಇನ್ನೊವಕೊ ಇ ಟೆಕ್ನಾನೊಲಾಜಿಯಾ ಡೆ ಪ್ರೊಡುಟೋಸ್‌ ನಲ್ಲಿ ವೈಜ್ಞಾನಿಕ ನಿರ್ವಾಹಕರಾದ ಪಾಟ್ರಿಕಾ ರೆನೊವಟಾ ಟೋಬೊ ಹೇಳಿದರು.


Published by:Ashwini Prabhu
First published: