Explained: 'ಕಾಮಾಟಿಪುರ'ದ ಇತಿಹಾಸ ಗೊತ್ತಾ? ಇಲ್ಲಿದೆ 'ಕೆಂಪು ದೀಪ'ದ ಕೆಳಗಿನ ಕರಾಳ ಕಥೆ!

ಬಾಲಿವುಡ್‌ನ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಬರುತ್ತಿದ್ದಂತೆ 'ಕಾಮಾಟಿಪುರ'ದ ಹೆಸರು ಮತ್ತೆ ಮುನ್ನೆಲೆಗೆ ಬಂತು. ಅಷ್ಟಕ್ಕೂ 'ಕಾಮ'ಕ್ಕೂ, ಈ 'ಕಾಮಾಟಿ'ಗೂ ಅಸಲಿ ಸಂಬಂಧವೇ ಇಲ್ಲ! ಇದು ಕಾರ್ಮಿಕರಿಂದ ಬಂದ ಹೆಸರು, ಆದರೆ ಬಳಿಕ ಇದು ವೇಶ್ಯಾವಾಟಿಕೆಯ ಅಡ್ಡೆಯಾಗಿ, 'ಕಾಮಾಟಿಪುರ' ಅಂದರೆ 'ರೆಡ್‌ಲೈಟ್ ಏರಿಯಾ' ಎನ್ನುವಂತಾಯ್ತು. ಇನ್ನೂ ಕುತೂಹಲ ಮೂಡಿಸುತ್ತದೆ 'ಕಾಮಾಟಿಪುರ'ದ 'ಕೆಂಪು ದೀಪ'ದ ಕೆಳಗಿನ ಕರಾಳ ಕಥೆ!

ಕಾಮಾಟಿಪುರದ ಸಂಗ್ರಹ ಚಿತ್ರ

ಕಾಮಾಟಿಪುರದ ಸಂಗ್ರಹ ಚಿತ್ರ

  • Share this:
ಅದು ಕಾಮಾಟಿಪುರ (Kamathipura) . ಪಕ್ಕದ ಮಹಾರಾಷ್ಟ್ರದ (Maharashtra) ಮುಂಬೈನಲ್ಲಿರುವ (Mumbai) ‘ವಿಶ್ವಕುಖ್ಯಾತ’ ಪ್ರದೇಶ. ಅತೀ ದೊಡ್ಡ ಸ್ಲಮ್‌ಗಳಲ್ಲಿ (Slum) ಅದೂ ಒಂದು. ಈ ಕಾಮಾಟಿಪುರ ಮತ್ತೆ ಮುನ್ನೆಲೆಗೆ ಬಂದಿದೆ. ಬಾಲಿವುಡ್‌ನಲ್ಲಿ (Bollywood) ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ದೇಶನ, ಆಲಿಯಾ ಭಟ್ (Alia Bhatt) ನಟನೆಯಲ್ಲಿ ಬಂದಿರುವ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ (Cinema) ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಜೊತೆ ಜೊತೆಗೇ ಕಾಮಾಟಿಪುರದ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಅದಕ್ಕೆ ಕಾರಣ ಸಿನಿಮಾದ ಮುಖ್ಯಪಾತ್ರವಾದ ಗಂಗೂಬಾಯಿ. ಆಕೆ  ಕಾಮಾಟಿಪುರವನ್ನು ಪ್ರತಿನಿಧಿಸುವವಳು. ಅಷ್ಟಕ್ಕೂ ಕಾಮಾಟಿಪುರ ಅಂದರೆ ಏನು? ಇದರ ಹಿನ್ನೆಲೆಯೇನು? ಇಲ್ಲಿ ವೇಶ್ಯಾವಾಟಿಕೆ ಶುರುವಾಗಿದ್ದು ಹೇಗೆ? ಈ ಎಲ್ಲಾ ಕುತೂಹರಕಾರಿ ಮಾಹಿತಿಗಳು ಇಲ್ಲಿವೆ…

 ‘ಲಾಲ್ ಬಜಾರ್‌’ನಿಂದ ಕಾಮಾಟಿಪುರ ಆದ ಕಥೆ

ಕಾಮಾಟಿಪುರ ಎನ್ನುವಂತದ್ದು ಮುಂಬೈನ ಅತಿ ಹಳೆಯ ಏರಿಯಾಗಳಲ್ಲಿ ಒಂದು. ಈ ಪ್ರದೇಶಕ್ಕೆ ಹಿಂದೆ 'ಲಾಲ್ ಬಜಾರ್' ಎಂಬ ಹೆಸರಿತ್ತು. ಆಂಧ್ರಪ್ರದೇಶದಿಂದ ವಲಸೆ ಬಂದು ಮುಂಬಯಿನಲ್ಲಿ ನೆಲೆಸಿದ 'ಕಾಮಾಟೀಸ್ ವರ್ಗದ ಜನ', ಮೊದಮೊದಲು ಕಟ್ಟಡ ನಿರ್ಮಾಣ ಕಾರ್ಯದಲ್ಲಿ 'ದಿನ ಗೂಲಿಕೆಲಸ 'ನಿರ್ವಹಿಸುತ್ತಿದ್ದರು. ಅವರಿಂದಾಗಿಯೇ ಕಾಮಾಟಿಪುರ ಎಂಬ ಹೆಸರು ಬಂತು ಅಂತ ಮುಂಬೈನ ಇತಿಹಾಸ ಹೇಳುತ್ತವೆ.

‘ಕಾಮ್’ (ಕೆಲಸ) ಮಾಡುವ ಕಾರ್ಮಿಕರಿಂದಾಗಿ ‘ಕಾಮಾಟಿಪುರ’ ಹುಟ್ಟಿದ್ದು!

ಅಷ್ಟಕ್ಕೂ 'ಕಾಮ'ಕ್ಕೂ, ಈ 'ಕಾಮಾಟಿ'ಗೂ ಅಸಲಿ ಸಂಬಂಧವೇ ಇಲ್ಲ! ಇದು ಕಾರ್ಮಿಕರಿಂದ ಬಂದ ಹೆಸರು, ಕಾಮ್ ಅಂದರೆ ಕೆಲಸ ಮಾಡುವ ಕಾರ್ಮಿಕರು ಇಲ್ಲಿ ಜೋಪಡಿಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತ್ತಾ ಇದ್ದರು.

ಹಿಂದೊಮ್ಮೆ ಆಂಧ್ರಪ್ರದೇಶ ಬರಗಾಲದಿಂದ ತತ್ತರಿಸಿತ್ತು. ಬರಗಾಲದಿಂದ ಬಳಲುತ್ತಿರುವ ಜನರು ಕೆಲಸ ಹುಡುಕಲು ಮುಂಬೈಗೆ ಹೋದರು. ಈ ಪ್ರದೇಶದಲ್ಲಿ ಕಾಮತಿಪುರ ಎಂಬ ಹೆಸರು ಬಹಳ ಜನಪ್ರಿಯವಾಯಿತು. ಆಗ ಇದನ್ನು ಕಷ್ಟಪಟ್ಟು ದುಡಿಯುವ ಜನರ ವಸಾಹತು ಎಂದು ಕರೆಯಲಾಗುತ್ತಿತ್ತು. ಕೆಲಸ ಮಾಡುವವ ಏರಿಯಾ ಎನ್ನುವ ಅರ್ಥದಲ್ಲಿ ಕಾಮಾಟಿಪುರ ಎನ್ನುವ ಹೆಸರು ಬಂತು. ಆಮೇಲೆ ಅದು ವೇಶ್ಯಾವಾಟಿಕೆಯ ಅಡ್ಡೆಯಾಗಿ, 'ಕಾಮಾಟಿಪುರ' ಅಂದರೆ 'ರೆಡ್‌ಲೈಟ್ ಏರಿಯಾ' ಎನ್ನುವಂತಾಯ್ತು.

ಇದನ್ನೂ ಓದಿ: Explained: ಗಂಗೂಬಾಯಿ ಕಾಠಿಯಾವಾಡಿ ಯಾರು? ಬನ್ಸಾಲಿ ಸಿನಿಮಾದ ಸುತ್ತ ವಿವಾದವೇಕೆ? ಇಲ್ಲಿದೆ ಡಿಟೇಲ್ಸ್

ಬ್ರಿಟೀಷ್‌ ಅಧಿಕಾರಿಗಳ ಕಾಮದಾಹಕ್ಕೆ ಬಲಿಯಾದ ಕಾಮಾಟಿಪುರ

ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿ ಅಷ್ಟೊಂದು ವೇಶ್ಯಾವಾಟಿಕೆ ಇರಲಿಲ್ಲ. ಆದರೆ ಬ್ರೀಟಿಷರ ಆಳ್ವಿಕೆಯಲ್ಲಿ ಮೊಟ್ಟಮೊದಲು ವೇಶ್ಯಾ ಚಟುವಟಿಕೆಗಳು ಈ ವಲಯದಲ್ಲಿ ಆರಂಭವಾದವು. ಮಹಾನಗರದ ಕಾಸ್ವೇಗಳು ನಿರ್ಮಾಣವಾದ ನಂತರ,ಮುಂಬಯಿಗೆ ಸೇರಿದ 7 ದ್ವೀಪಗಳ ಸ್ಥಳಗಳೂ ಒಟ್ಟಾಗಿ ಸೇರಿದವು. ಅಲ್ಲಿನ ಕಟ್ಟಡ ಕಾರ್ಮಿಕರೆಲ್ಲ ಇಲ್ಲೇ ಇರುವುದಕ್ಕೆ ಶುರು ಮಾಡಿದ್ದರು. ನಿಧಾನಕ್ಕೆ ಇದು ವೇಶ್ಯಾವಾಟಿಕೆ ಅಡ್ಡೆಯಾಗಿ ಬದಲಾಯ್ತು.

ಬ್ರಿಟೀಷ್ ಅಧಿಕಾರಿಗಳ ಕಾಮದಾಹ ತಣಿಸುವ ಕೇಂದ್ರ

1880 ಸುಮಾರಿಗೆ ಮೊದ ಮೊದಲು ಬ್ರಿಟಿಷ್ ಸೈನ್ಯದಲ್ಲಿ ನೌಕರಿ ಸೇವೆಯಲ್ಲಿದ್ದ ಪೊಲೀಸ್ ಪೇದೆಗಳು, ಸೈನಿಕರು ಇಲ್ಲಿ ಬಂದು ತಮ್ಮ ಕಾಮಕ್ರಿಯೆಯನ್ನು ತೃಪ್ತಿಗೊಳಿಸಿಕೊಂಡು ಹೋಗುತ್ತಿದ್ದರು. ನಿಧಾನಕ್ಕೆ ಅದೇ ರೂಢಿಯಾಗಿ, ಇಲ್ಲಿ ವೇಶ್ಯಾವಾಟಿಕೆ ಅಡ್ಡೆ ತಲೆ ಎತ್ತಿತು.

ಅತೀ ಹೆಚ್ಚು ಸೆಕ್ಸ್ ವರ್ಕರ್ಸ್ ಇರುವ ಜಾಗ!

ಬಹುಶಃ ನೀವು ನಂಬಲಿಕ್ಕಿಲ್ಲ. ಕಾಮಾಟಿಪುರ ಎಷ್ಟುದೊಡ್ಡ ವೇಶ್ಯಾವಾಟಿಕೆಯ ಅಡ್ಡೆ ಎಂದರೆ ಇದು ಏಷ್ಯಾ ಖಂಡದ ಅತಿ ಹೆಚ್ಚು ಸೆಕ್ಸ್ ವರ್ಕರ್ಸ್ ವಾಸಿಸುವ ಜಾಗವೆಂದು ಗುರುತಿಸಲ್ಪಟ್ಟಿದೆ. ಈ ಮೊದಲು ಇಲ್ಲಿನ ಅತಿ ಹೆಚ್ಚಿನ ಜನ ಸೆಕ್ಸ್‌ ವರ್ಕ್‌ನಲ್ಲೇ ತೊಡಗಿದ್ದರು.

ಏಡ್ಸ್‌ ರೋಗದ ಅಡ್ಡೆಯಾದ ಕಾಮಾಟಿಪುರ

1990ರ ಹೊತ್ತಿಗೆ ಕಾಮಾಟಿಪುರ ಇಡೀ ವಿಶ್ವದಾದ್ಯಂತ ಸುದ್ದಿ ಮಾಡಿತ್ತು. ಅದೂ ಮಾರಕ ಏಡ್ಸ್ ರೋಗದಿಂದ. 'ಏಡ್ಸ್ ರೋಗ' ಹೆಚ್ಚಾಗಿ ಹಬ್ಬಿದ ಮೇಲೆ ಪೋಲೀಸರ ಕಾರ್ಯಾಚರಣೆಗಳ ಸಹಾಯದಿಂದ ಸ್ಥಿತಿಯನ್ನು ನಿಯಂತ್ರಿಸಲು ಕೆಲಸ ಮಾಡಲಾಯಿತು. ಸ್ವಲ್ಪ ಸಮಯದ ಬಳಿಕ ಸೆಕ್ಸ್ ವರ್ಕರ್ಸ್ ಗಳು ಕಡಿಮೆಯಾದಹಾಗೆ ಕಂಡಿತು.

ಈಗ ಇಲ್ಲಿ ವೇಶ್ಯೆಯರ ಸಂಖ್ಯೆ ಎಷ್ಟಿದೆ?

1992ರಲ್ಲಿ ಇಲ್ಲಿ ಮೊದಲ ಬಾರಿ ಸರ್ವೆ ನಡೆಯಿತು. ಅಂದಿನ ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ (BMC) ಸುಮಾರು ಸರ್ವೆ ಮಾಡಿ, ಸುಮಾರು 50 ಸಾವಿರ ಸೆಕ್ಸ್ ವರ್ಕರ್ಸ್ ಇರುವುದಾಗಿ ದಾಖಲಿಸಿತ್ತು. 2009ರಲ್ಲಿ ಅದು ಇಳಿದು ಕೇವಲ 16 ಸಾವಿರಕ್ಕೆ ಕಡಿಮೆ ಆಯ್ತು. ಈಗ ಸದ್ಯ 2 ಸಾವಿರಕ್ಕಿಂತ ಕಡಿಮೆ ವೇಶ್ಯೆಯರು ಇದ್ದಾರೆ ಎನ್ನಲಾಗುತ್ತದೆ. ಇನ್ನೂ ಕೆಲವು ಜನ ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ಹೋಗಿ ನೆಲೆಸಿರುವುದಾಗಿ ತಿಳಿದುಬಂದಿದೆ.

ಅಲ್ಲಿ ಇರುವವರೆಲ್ಲಾ ವೇಶ್ಯೆಯರಾ?

ಖಂಡಿತಾ ಅಲ್ಲ, ಇಲ್ಲಿ ಬೇರೆ ಬೇರೆ ಕೆಲಸ ಮಾಡುವ ಕಾರ್ಮಿಕರು, ಉದ್ಯೋಗಿಗಳೂ ಇದ್ದಾರೆ.  ಸುಮಾರು 7ರಿಂದ 8 ಲೇನ್‌ಗಳ ವ್ಯಾಪ್ತಿಯಲ್ಲಿ ಮಾತ್ರ ಮೊದಲು ವೇಶ್ಯಾವಾಟಿಕೆ ನಡೆಯುತ್ತಾ ಇತ್ತು. ಆದರೆ ಇದೀಗ ಆ ಸಂಖ್ಯೆ ಕುಸಿದಿದೆ ಎನ್ನಲಾಗುತ್ತಿದೆ. ಕಾಮಾಟಿಪುರ ವಾರ್ಡ್ ಆಗಿದ್ದು,. ಇಲ್ಲಿಂದ ಕಾರ್ಪೋರೇಟರ್‌ ಸಹ ಇದ್ದಾರೆ. ಇಲ್ಲಿ ಶಾಲೆ, ಆಸ್ಪತ್ರೆಗಳಂತ ಸೇವೆಗಳೂ ಶುರುವಾಗಿವೆ.

ಇದನ್ನೂ ಓದಿ: Explained: ಭಾರತದ ಎಷ್ಟು ವಿದ್ಯಾರ್ಥಿಗಳು ವಿಶ್ವದ ಯಾವ್ಯಾವ ದೇಶಗಳಲ್ಲಿ ಓದುತ್ತಿದ್ದಾರೆ?

ಈ ಕಾಮಾಟಿಪುರದಲ್ಲೇ ಹುಟ್ಟಿ ಸಾಧನೆ ಮಾಡಿದವರೂ ಇದ್ದಾರೆ

ಅಂದಹಾಗೆ ಈ ಕಾಮಾಟಿಪುರದಲ್ಲಿ ಇರುವವರೆಲ್ಲರೂ ವೇಶ್ಯೆಯರಲ್ಲ. ಇಲ್ಲಿ ಬೇರೆ ಬೇರೆ ಉದ್ಯೋಗ ಮಾಡುವವರೂ ಇದ್ದಾರೆ. ವೇಶ್ಯೆಯರ ಮಕ್ಕಳು ಓದಿ, ನೌಕರಿ ಪಡೆದವರೂ ಇದ್ದಾರೆ. ಕೆಲವರು ದೇಶ, ವಿದೇಶಗಳಲ್ಲಿ ಸಾಧನೆ ಮಾಡಿದವರೂ ಇದ್ದಾರೆ. ಶಿಕ್ಷಣ, ಜಾಗೃತೆಯಿಂದಾಗಿ ಕಾಮಾಟಿಪುರ ನಿಧಾನಕ್ಕೆ ಬದಲಾಗುತ್ತಿದೆ.
Published by:Annappa Achari
First published: