• ಹೋಂ
  • »
  • ನ್ಯೂಸ್
  • »
  • Explained
  • »
  • Seat Belt: ಕಾರು ಪ್ರಯಾಣಿಕರೇ ಎಚ್ಚೆತ್ತುಕೊಳ್ಳಿ! ಸೈರಸ್ ಮಿಸ್ತ್ರಿ ಸಾವಿಗೆ ಸೀಟ್ ಬೆಲ್ಟ್ ಕಾರಣ

Seat Belt: ಕಾರು ಪ್ರಯಾಣಿಕರೇ ಎಚ್ಚೆತ್ತುಕೊಳ್ಳಿ! ಸೈರಸ್ ಮಿಸ್ತ್ರಿ ಸಾವಿಗೆ ಸೀಟ್ ಬೆಲ್ಟ್ ಕಾರಣ

ಅಪಘಾತಕ್ಕೊಳಗಾದ ಕಾರು

ಅಪಘಾತಕ್ಕೊಳಗಾದ ಕಾರು

ಸೈರಸ್ ಮಿಸ್ತ್ರಿ ಅವರ ನಿಧನಕ್ಕೆ ಪ್ರತಿಕ್ರಿಯಿಸಿರುವ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಕಾರಿನ ಹಿಂದಿನ ಸೀಟಿನಲ್ಲಿದ್ದಾಗಲೂ ನಾನು ಯಾವಾಗಲೂ ನನ್ನ ಸೀಟ್ ಬೆಲ್ಟ್ ಧರಿಸುತ್ತೇನೆ ಅಂತ ಪ್ರತಿಜ್ಞೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

  • Share this:

ಸಾಮಾನ್ಯವಾಗಿ ನಾವು ಕಾರಿನಲ್ಲಿ ಪ್ರಯಾಣಿಸುವಾಗ (Travel) ಪಕ್ಕದಲ್ಲಿಯೇ ಸೀಟ್ ಬೆಲ್ಟ್ ಇದ್ದರೂ ಅದನ್ನು ಹಾಕಿಕೊಳ್ಳುವುದಿಲ್ಲ. ಆದರೆ ಈ ಅಪಘಾತಗಳನ್ನು (Accident) ನೋಡಿದ ಮೇಲೆ ನಮಗೆ ಮೊದಲು ಅನ್ನಿಸುವುದೇ ‘ಅರೇ ಕಾರಿನಲ್ಲಿರುವ ಪ್ರತಿಯೊಬ್ಬರು ಸೀಟ್ ಬೆಲ್ಟ್ (Seat belt) ಧರಿಸಿದ್ದರೆ, ಸ್ವಲ್ಪ ಮಟ್ಟಿಗೆ ಗಾಯಗಳಾಗಿ ಜೀವ ಉಳಿಬಹುದಿತ್ತು ಅಂತ’.  ಹೌದು.. ಮುಂಬೈ ಸಮೀಪದ ಪಾಲ್ಘರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸೈರಸ್ ಮಿಸ್ತ್ರಿ (Cyrus Mistry) ಸಾವನ್ನಪ್ಪಿದ್ದ ಒಂದು ದಿನದ ನಂತರ, ತನಿಖಾಧಿಕಾರಿಗಳು (Investigators)  ಮತ್ತು ತಜ್ಞರು ಅಪಘಾತಕ್ಕೆ ಕಾರಣವೇನು ಮತ್ತು ಆ ಸಮಯದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನರ ಮೇಲೆ ಅದು ಹೇಗೆ ಪರಿಣಾಮ ಬೀರಿತು ಎಂಬುದನ್ನು ಕಂಡುಹಿಡಿಯಲಾಗಿದೆ.


ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಲೆ ಸಾವು
54 ವರ್ಷದ ಸೈರಸ್ ಮಿಸ್ತ್ರಿ ಅವರು ಡೇರಿಯಸ್ ಪಂಡೋಲೆ ಮತ್ತು ಅವರ ಪತ್ನಿ ಅನಾಹಿತಾ ಪಂಡೋಲೆ ಮತ್ತು ಸಹೋದರ ಜಹಾಂಗೀರ್ ಪಂಡೋಲೆ ಅವರೊಂದಿಗೆ ಮರ್ಸಿಡಿಸ್ ಜಿಎಲ್‌ಸಿ ಸ್ಪೋರ್ಟ್ಸ್ ಯುಟಿಲಿಟಿ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಅತಿ ವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಹಿಂದಿನ ಸೀಟಿನಲ್ಲಿದ್ದ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಲೆ ಇಬ್ಬರು ಸಾವನ್ನಪ್ಪಿದ್ದಾರೆ.


ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದು ಎಷ್ಟು ಮುಖ್ಯ
ಈ ಅಪಘಾತ ನೋಡಿದವರಿಗೆ ಒಂದು ಪ್ರಶ್ನೆ ತುಂಬಾನೇ ಕಾಡೋದು ಸಹಜ. ಅದೇನೆಂದರೆ ಇವರೆಲ್ಲಾ ಸೀಟ್ ಬೆಲ್ಟ್ ಅನ್ನು ಧರಿಸಿರಲಿಲ್ಲವೇ ಎಂಬುದು. ಬನ್ನಿ ಹಾಗಾದರೆ ಈ ಸೀಟ್ ಬೆಲ್ಟ್ ಗಳು ಕಾರಿನಲ್ಲಿ ಪ್ರಯಾಣಿಸುವವರನ್ನು ಇಂತಹ ಅಪಘಾತಗಳ ಸಂದರ್ಭದಲ್ಲಿ ಹೇಗೆ ಕಾಪಾಡುತ್ತವೆ ನೋಡಿ. ಇಲ್ಲೊಂದು ವಿಡಿಯೋ ಇದೆ ನೋಡಿ, ಅದರಲ್ಲಿ ಕಾರಿನ ಒಳಭಾಗವನ್ನು ತೋರಿಸುತ್ತದೆ. ಕಾರಿನ ಒಳಭಾಗದಲ್ಲಿರುವ ಅದರ ಏರ್‌ಬ್ಯಾಗ್ ಗಳು ಮತ್ತು ಸೀಟ್ ಬೆಲ್ಟ್ ಗಳ ಪರಿಣಾಮಗಳನ್ನು ಸ್ಪಷ್ಟವಾಗಿ ತೋರಿಸಲಾಗಿದೆ ನೋಡಿ.




ಈ ವಿಡಿಯೋದಲ್ಲಿ ನೀವು ನಾಲ್ಕು ಏರ್ ಬ್ಯಾಗ್​ಗಳನ್ನು ನೋಡಬಹುದು. ಮುಂಭಾಗದ ಪ್ರಯಾಣಿಕರನ್ನು ಉಳಿಸಲು ಸಹಾಯ ಮಾಡುವ ಎರಡು ಏರ್ ಬ್ಯಾಗ್​ಗಳು ಮತ್ತು ಕಾರಿನ ಒಂದು ಬದಿಯಲ್ಲಿ ಮಾತ್ರ ನಿಯೋಜಿಸಲಾದ ನೀಲಿ ಬಣ್ಣದ ಸೈಡ್-ಕರ್ಟನ್ ಏರ್ ಬ್ಯಾಗ್ ಗಳು ಆಗಿರುತ್ತವೆ. ಸಂವೇದಕಗಳು ಕೇವಲ ಒಂದು ಬದಿಯಲ್ಲಿ ಮಾತ್ರ ಒತ್ತಡವನ್ನು ಪತ್ತೆ ಹಚ್ಚಿವೆ ಎಂದು ಅದು ಸೂಚಿಸುತ್ತದೆ.


ಸೈರಸ್ ಮಿಸ್ತ್ರಿ ಯವರು ಸೀಟ್ ಬೆಲ್ಟ್ ಧರಿಸಿರಲಿಲ್ಲವೇ ?
ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಲೆ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ವಾಹನಗಳಲ್ಲಿನ ಏರ್‌ಬ್ಯಾಗ್​ಗಳನ್ನು ಪೂರಕ ನಿಯಂತ್ರಣ ವ್ಯವಸ್ಥೆ (ಎಸ್ಆರ್‌ಎಸ್) ಎಂದು ಪರಿಗಣಿಸಲಾಗುತ್ತದೆ. ಅವು ಸೀಟ್ ಬೆಲ್ಟ್ ಗಳೊಂದಿಗೆ ಮಾತ್ರ ಕೆಲಸ ಮಾಡುತ್ತವೆ.


ಇದನ್ನೂ ಓದಿ:  Cyrus Mistry Death: ಸೈರಸ್ ಮಿಸ್ತ್ರಿಯೊಂದೇ ಅಲ್ಲ, ಇನ್ನೂ ಅನೇಕ ಖ್ಯಾತನಾಮರದ್ದೂ ದುರಂತ ಅಂತ್ಯ!


ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಪೊಲೀಸರು ರಸ್ತೆಯ ಮೇಲೆ ವಾಹನವನ್ನು ತಡೆದು ನಿಲ್ಲಿಸಿ ದಂಡ ಹಾಕುತ್ತಿದ್ದಾರೆ ಎಂದರೆ ಮಾತ್ರ ಸೀಟ್ ಬೆಲ್ಟ್ ಅನ್ನು ಧರಿಸುತ್ತಾರೆ. ಕೆಲವೇ ಕೆಲವು ಜನರು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೀಟ್ ಬೆಲ್ಟ್ ಅನ್ನು ಧರಿಸುತ್ತಾರೆ. ಹಿಂದಿನ ಸೀಟಿನಲ್ಲಿ ಕೂತವರು ಸೀಟ್ ಬೆಲ್ಟ್ ಗಳನ್ನು ಧರಿಸುವುದು ತುಂಬಾನೇ ವಿರಳ


ಸೈರಸ್ ಮಿಸ್ತ್ರಿ ಅವರ ನಿಧನಕ್ಕೆ ಆನಂದ್ ಮಹಿಂದ್ರಾ ಏನಂದ್ರು
ಸೈರಸ್ ಮಿಸ್ತ್ರಿ ಅವರ ನಿಧನಕ್ಕೆ ಪ್ರತಿಕ್ರಿಯಿಸಿರುವ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು "ಕಾರಿನ ಹಿಂದಿನ ಸೀಟಿನಲ್ಲಿದ್ದಾಗಲೂ ನಾನು ಯಾವಾಗಲೂ ನನ್ನ ಸೀಟ್ ಬೆಲ್ಟ್ ಧರಿಸುತ್ತೇನೆ ಅಂತ ಪ್ರತಿಜ್ಞೆ ಮಾಡುತ್ತೇನೆ. ನೀವು ಸಹ ಪ್ರತಿಜ್ಞೆ ತೆಗೆದುಕೊಳ್ಳುವಂತೆ ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ. ನಾವೆಲ್ಲರೂ ನಮ್ಮ ಕುಟುಂಬಗಳಿಗೆ ಋಣಿಯಾಗಿದ್ದೇವೆ" ಎಂದು ಮಹೀಂದ್ರಾ ಗ್ರೂಪ್​ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.


ಅಪಘಾತವಾದಾಗ ಸೀಟ್ ಬೇಲ್ಟ್ ಧರಿಸದೇ ಇದ್ದಾಗ ಏನಾಗುತ್ತೆ?
ವಿಡಿಯೋದಲ್ಲಿ ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿರುವ ಕಾರು ಅಪಘಾತಕ್ಕಿಡಾದರೆ ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕನ ಮೇಲೆ ಬೀರುವ ಪರಿಣಾಮವನ್ನು ತೋರಿಸುತ್ತದೆ. ಸೀಟ್ ಬೆಲ್ಟ್ ಧರಿಸದ ಹಿಂದಿನ ಸೀಟಿನಲ್ಲಿರುವ ಪ್ರಯಾಣಿಕನು ಮುಂದಕ್ಕೆ ಬರುತ್ತಾರೆ ಮತ್ತು ಮುಂಭಾಗದಲ್ಲಿರುವ ಪ್ರಯಾಣಿಕನ ಮೇಲೆ ಬೀಳುತ್ತಾರೆ.


ಇದನ್ನೂ ಓದಿ: Cyrus Mistry: ಸೈರಸ್ ಮಿಸ್ತ್ರಿ ಭೀಕರ ಅಪಘಾತಕ್ಕೆ ಬಲಿ, ಟಾಟಾ ಗ್ರೂಪ್​ನಿಂದ ಉಚ್ಛಾಟನೆಗೊಂಡಿದ್ದ ಉದ್ಯಮಿ ಬಗ್ಗೆ ಒಂದಷ್ಟು ಮಾಹಿತಿ!

top videos


    ಹಿಂದಿನ ಸೀಟಿನಲ್ಲಿ ಬೆಲ್ಟ್ ಹಾಕಿಕೊಂಡು ಕುಳಿತ ಪ್ರಯಾಣಿಕನು ಸುರಕ್ಷಿತವಾಗಿರುತ್ತಾನೆ. ಸೈರಸ್ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಎಸ್‌ಯುವಿ ವಿಶ್ವದ ಪ್ರಮುಖ ಕ್ರ್ಯಾಶ್ ಟೆಸ್ಟಿಂಗ್ ಸೌಲಭ್ಯವಾದ ಗ್ಲೋಬಲ್ ಎನ್‌ಸಿಎಪಿ ಸೇರಿದಂತೆ ವ್ಯಾಪಕವಾಗಿ ಪರೀಕ್ಷಿಸಲಾದ ವಾಹನವಾಗಿದೆ. ಈ ವಿಡಿಯೋವು ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿರುವ ಪ್ರಯಾಣಿಕರು ಸೀಟ್ ಬೆಲ್ಟ್ ಗಳನ್ನು ಧರಿಸಿದ್ದರೆ ಅಂತಹ ಅಪಘಾತದಿಂದ ಪ್ರಯಾಣಿಕರು ಬದುಕುಳಿಯಬಹುದು ಎಂದು ಇದು ಸಾಬೀತುಪಡಿಸುತ್ತದೆ.

    First published: