• Home
 • »
 • News
 • »
 • explained
 • »
 • Cholesterol: ಎಲ್ಲರನ್ನೂ ಕಾಡುವ ಕೊಲೆಸ್ಟ್ರಾಲ್ ಎಂಬ ಕಿರಾತಕ! ಸದ್ದಿಲ್ಲದೇ ಜೀವ ಹೋಗಬಹುದು ಎಚ್ಚರ!

Cholesterol: ಎಲ್ಲರನ್ನೂ ಕಾಡುವ ಕೊಲೆಸ್ಟ್ರಾಲ್ ಎಂಬ ಕಿರಾತಕ! ಸದ್ದಿಲ್ಲದೇ ಜೀವ ಹೋಗಬಹುದು ಎಚ್ಚರ!

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ಸರಿಯಾಗಿ ನಿರ್ವಹಿಸದ ಕೊಲೆಸ್ಟ್ರಾಲ್ ಹೃದಯಘಾತಕ್ಕೆ ಬಲವಾದ ಕಾರಣವೆಂದು ಹೇಳಲಾಗುತ್ತದೆ. ದೇಹಕ್ಕೆ ಯಾವುದು ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ಇಬ್ಬರು ಪ್ರಮುಖ ಹೃದ್ರೋಗ ತಜ್ಞರು ತಿಳಿಸಿದ್ದಾರೆ. ಹಾಗಾದ್ರೆ ಅವರು ಹೇಳಿದ್ದೇನು?

 • Share this:

ಇತ್ತೀಚೆಗೆ ಹೃದಯಾಘಾತ (Heart Attack) ಅಪಾಯಗಳು ಹೆಚ್ಚಾಗುತ್ತಲೇ ಇವೆ ಮತ್ತು ಸರ್ವೆಸಾಮಾನ್ಯ ಎನ್ನುವಂತಾಗಿದೆ. ಆದರೆ ಹೃದಯಘಾತ ಆಗುತ್ತಿದ್ದರೂ ಗಮನಿಸದ ಹೃದಯ ಸಮಸ್ಯೆಗಳು ಇನ್ನೂ ಅನೇಕ ಜೀವಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿವೆ ಎಂದು ವೈದ್ಯರು (Doctors) ಈಗ ಎಚ್ಚರಿಸುತ್ತಿದ್ದಾರೆ. ಸರಿಯಾಗಿ ನಿರ್ವಹಿಸದ ಕೊಲೆಸ್ಟ್ರಾಲ್ (Cholesterol) ಹೃದಯಘಾತಕ್ಕೆ ಬಲವಾದ ಕಾರಣವೆಂದು ಹೇಳಲಾಗುತ್ತದೆ. ದೇಹಕ್ಕೆ ಯಾವುದು ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ತಿಳಿಯಲು ನಾವು ಇಬ್ಬರು ಪ್ರಮುಖ ಹೃದ್ರೋಗ ತಜ್ಞರೊಂದಿಗೆ (Cardiologist) ಮಾತನಾಡಿದ್ದೇವೆ, ಜನರು ಯಾವ ರೀತಿ ಅಪಾಯಕ್ಕೆ ಒಳಗಾಗುತ್ತಾರೆ ಮತ್ತು ಕೊಲೆಸ್ಟ್ರಾಲ್ ಅನ್ನು ಹೇಗೆ ನಿರ್ವಹಿಸಬಹುದು? ಎಂಬೆಲ್ಲ ಮಾಹಿತಿಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.


ಒಳ್ಳೆಯ ಕೊಲೆಸ್ಟ್ರಾಲ್ vs ಕೆಟ್ಟ ಕೊಲೆಸ್ಟ್ರಾಲ್
ನಮ್ಮ ದೇಹದಲ್ಲಿ ಎಲ್ಲ ಕೊಲೆಸ್ಟ್ರಾಲ್‌ ಕೇವಲ ಕೆಟ್ಟದೇ ಎಂದು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ ಆಗಿರುತ್ತದೆ. ಕೊಲೆಸ್ಟ್ರಾಲ್‌ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳಲ್ಲಿ ಇದು ಒಂದು.


ನಮ್ಮ ಜೀವಕೋಶಗಳು ಕೊಲೆಸ್ಟ್ರಾಲ್‌ನಲ್ಲಿ ಸಮೃದ್ಧವಾಗಿರುವ ಪೊರೆಯಿಂದ ಮುಚ್ಚಲ್ಪಟ್ಟಿವೆ. ಕೆಲವು ಹಾರ್ಮೋನುಗಳ ಸಂಶ್ಲೇಷಣೆಗೆ ಕೊಲೆಸ್ಟ್ರಾಲ್‌ ಅಗತ್ಯವಾಗಿರುತ್ತದೆ. ಕೊಚ್ಚಿಯ ಅಮೃತಾ ಆಸ್ಪತ್ರೆಯ ವಯಸ್ಕರ ಹೃದ್ರೋಗ ಶಾಸ್ತ್ರದ ಸಲಹೆಗಾರರಾದ ಡಾ. ಜೈದೀಪ್ ಮೆನನ್ “ಕೊಲೆಸ್ಟ್ರಾಲ್ ಅನ್ನು ಅಳತೆ ಮಾಡಲು, LDL (ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್), HDL (ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್), VLDL (ಅತ್ಯಂತ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್) ಮತ್ತು ಟ್ರೈಗ್ಲಿಸರೈಡ್‌ಗಳು ಎಂಬ ವಿಭಾಗಗಳನ್ನು ಹೊಂದಿದೆ.ಈ ಪ್ರತಿಯೊಂದು ವಿಭಾಗಗಳು ವಿವಿಧ ಹಂತದ ಅಥೆರೋಜೆನಿಸಿಟಿಯೊಂದಿಗೆ ಉಪ-ವಿಭಾಗಗಳನ್ನು (ನಾಳಗಳಲ್ಲಿ ಅಥೆರೋಮಾ ಅಥವಾ ಬ್ಲಾಕ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಾಕ್ಲಿವಿಟಿ) ಹೊಂದಿವೆ" ಎಂದು ವಿವರಿಸುತ್ತಾರೆ.


ಇದನ್ನೂ ಓದಿ: Blood Pressure: ರಕ್ತದೊತ್ತಡ ಎಂದರೇನು? ಇದರಿಂದಾಗುವ ಸಮಸ್ಯೆಗಳೇನು?


ಕೊಲೆಸ್ಟ್ರಾಲ್ ವಿಭಾಗಗಳಲ್ಲಿ, HDL ಅನ್ನು ಉತ್ತಮ ಅಥವಾ ರಕ್ಷಣಾತ್ಮಕ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗುತ್ತದೆ ಮತ್ತು LDL, VLDL ಮತ್ತು ಟ್ರೈಗ್ಲಿಸರೈಡ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಗಳು ಆಗಿವೆ. ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳು ಕುಟುಂಬದಲ್ಲಿ ಈ ಮುಂಚೆ ಈ ತರಹದ ಆರೋಗ್ಯ ಸಮಸ್ಯೆ ಯಾರಿಗಾದ್ರೂ ಇತ್ತಾ ಎಂಬುದರ ಆಧಾರದ ಮೇಲೆ ಎಷ್ಟು ಪ್ರಮಾಣದಲ್ಲಿ ನಮ್ಮ ದೇಹದಲ್ಲಿ ಈಗ ಕಾಣಿಸಿಕೊಳ್ಳುತ್ತಿದೆ ಎನ್ನುವುದು ಗೊತ್ತಾಗುತ್ತೆ. ಹೃದಯ ರಕ್ತನಾಳದ ಅಪಾಯವನ್ನು LDL ಗೆ HDL ಅನುಪಾತದಿಂದ ನಿರ್ಣಯಿಸಲಾಗುತ್ತದೆ. ಇದು 3.5 ಕ್ಕಿಂತ ಕಡಿಮೆ ಮತ್ತು ಐಡಿಯಲ್‌ ಆಗಿ 2.5 ಕ್ಕಿಂತ ಕಡಿಮೆ ಇರಬೇಕು.


ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವೇನು?
ಮಾನವ ದೇಹವು ಕಾರ್ಯನಿರ್ವಹಿಸುವ ರೀತಿ ಅದ್ಭುತವಾಗಿರುತ್ತದೆ. ಮಾನವ ದೇಹವು ಅಧಿಕವಾಗಿರುವ ಪೌಷ್ಟಿಕಾಂಶವನ್ನು ಗ್ಲೈಕೋಜೆನ್ ಅಥವಾ ಕೊಲೆಸ್ಟ್ರಾಲ್‌ನ್ನಾಗಿ ಸಂಗ್ರಹ ಮಾಡುತ್ತದೆ. ಆಹಾರವು ಜೀರ್ಣವಾಗದಿದ್ದಾಗ ಇದು ಯಕೃತ್ತಿನಿಂದ ಕೊಲೆಸ್ಟ್ರಾಲ್ ಆಗಿ ಪರಿವರ್ತನೆಗೊಳ್ಳುತ್ತದೆ . ಅಧಿಕ ಕೊಲೆಸ್ಟ್ರಾಲ್ ಅಪಧಮನಿಗಳ ಭಿತ್ತಿಗಳಲ್ಲಿ ಸಂಗ್ರಹವಾಗುತ್ತದೆ. ಇದು ಕೆಲವು ವರ್ಷಗಳ ನಂತರ ಹೃದಯದಲ್ಲಿ ಬ್ಲಾಕ್ ಗಳು ಬೆಳೆಯುತ್ತದೆ.


ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುವ ಕ್ರಮಗಳು


 • ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಮಾಡುವುದರಿಂದ ತಿನ್ನುವ ಆಹಾರ ಸೂಕ್ತವಾಗಿ ಜೀರ್ಣವಾಗಿ ಕೊಲೆಸ್ಟ್ರಾಲ್ ಹೆಚ್ಚಳವನ್ನು ತಡೆಯಲು ಸಹಾಯ ಮಾಡುತ್ತದೆ. ಏಕೆಂದರೆ 65-70% ಕೊಲೆಸ್ಟ್ರಾಲ್ ಯಕೃತ್ತಿನಲ್ಲಿ ಸಂಶ್ಲೇಷಿಸಲ್ಪಡುತ್ತದೆ.

 • ಹೆಚ್ಚಿನ ಕ್ಯಾಲೋರಿ ಆಹಾರಗಳು ಮತ್ತು ಮಾಂಸವನ್ನು ಸೇವಿಸಬಾರದು.

 • ನಾವು ಸೇವಿಸುವ ಆಹಾರದಲ್ಲಿ ಬಹಳಷ್ಟು ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಸಾಕಷ್ಟು ಸೇರಿಸಿ ಊಟವನ್ನು ಮಾಡುವುದು.

 • ಹೆಚ್ಚು ಕರಿದ ಮತ್ತು ಬೇಕರಿ ಪದಾರ್ಥಗಳನ್ನು ಸೇವಿಸಬಾರದು.


ಇದನ್ನೂ ಓದಿ: Blood Pressure: ರಕ್ತದೊತ್ತಡದ ವಿಧಗಳು ಯಾವುವು? ಈ ಸಮಸ್ಯೆಗೆ ಪರಿಹಾರವೇನು?


ಇವೆಲ್ಲವೂ ಅಧಿಕ ಕೊಲೆಸ್ಟ್ರಾಲ್ ಅನ್ನು ತಡೆಯಲು ಸಹಾಯ ಮಾಡುತ್ತವೆ. ನಿಮಗೆ ಉತ್ತಮ ಕೊಲೆಸ್ಟ್ರಾಲ್‌ ನಿಯಮಿತವಾಗಿ ಅಲ್ಪ ಪ್ರಮಾಣದಲ್ಲಿ ಗೋಡಂಬಿ, ವಾಲ್‌ನಟ್ಸ್ ಮತ್ತು ಬಾದಾಮಿಗಳಂತಹ ಬೀಜಗಳನ್ನು ಸೇವಿಸುವುದರಿಂದ ದೊರಕುತ್ತದೆ. ಇವು ಹೃದಯದಲ್ಲಿ ಉಂಟಾಗುವ ಬ್ಲಾಕ್‌ಗಳನ್ನು ತಡೆಯಲು ಸಹಾಯ ಮಾಡುತ್ತವೆ.

Published by:Ashwini Prabhu
First published: