• ಹೋಂ
 • »
 • ನ್ಯೂಸ್
 • »
 • Explained
 • »
 • BS Yediyurappa: ಬಿಎಸ್​ವೈ ಬದಿಗಿಟ್ಟಿದ್ದೇ ಬಿಜೆಪಿಗೆ ಮುಳುವಾಯ್ತಾ? 2024 ಚುನಾವಣೆಯಲ್ಲಿ ಮತ್ತೆ ರಾಜಕಾರಣಕ್ಕೆ 'ರಾಜಾಹುಲಿ'?

BS Yediyurappa: ಬಿಎಸ್​ವೈ ಬದಿಗಿಟ್ಟಿದ್ದೇ ಬಿಜೆಪಿಗೆ ಮುಳುವಾಯ್ತಾ? 2024 ಚುನಾವಣೆಯಲ್ಲಿ ಮತ್ತೆ ರಾಜಕಾರಣಕ್ಕೆ 'ರಾಜಾಹುಲಿ'?

ಬಿಎಸ್​ ಯಡಿಯೂರಪ್ಪ

ಬಿಎಸ್​ ಯಡಿಯೂರಪ್ಪ

ಬಿಜೆಪಿಯು ಹಿರಿಯ ನಾಯಕರನ್ನು ಬದಿಗಿಟ್ಟು ರಾಜಕೀಯ ರಣತಂತ್ರ ಹೆಣೆದಿರುವುದೇ ಪಕ್ಷದ ಸೋಲಿಗೆ ಕಾರಣವಾಗಿರಬಹುದು ಎಂಬುವುದು ಪರಿಣಿತರ ಹೇಳಿಕೆಯಾಗಿದೆ.

 • Trending Desk
 • 3-MIN READ
 • Last Updated :
 • Bangalore [Bangalore], India
 • Share this:

ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections) ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಕ್ಷಕ್ಕೆ ಗೆಲುವು ಮತ್ತು ಸೋಲು ಹೊಸದಲ್ಲ ಮತ್ತು ಹಿನ್ನಡೆಯನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಬಿಜೆಪಿಯು ಹಿರಿಯ ನಾಯಕರನ್ನು ಬದಿಗಿಟ್ಟು ರಾಜಕೀಯ ರಣತಂತ್ರ ಹೆಣೆದಿರುವುದೇ ಪಕ್ಷದ ಸೋಲಿಗೆ ಕಾರಣವಾಗಿರಬಹುದು ಎಂಬುವುದು ಪರಿಣಿತರ ಹೇಳಿಕೆಯಾಗಿದೆ.


ಹಳೆ ನಾಯಕರ ಬದಲಿಗೆ ಹೊಸಬರ ನೇಮಕಾತಿ


ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದು ಪಕ್ಷದ ಹಿರಿಯ ಮುತ್ಸದ್ದಿಗಳ ಲೆಕ್ಕಾಚಾರ ತಲೆಕೆಳಗಾಗಿದೆ. ಪಕ್ಷದ ಅನುಭವಿಗಳನ್ನು ಹಿರಿಯರನ್ನು ಕಣಕ್ಕಿಳಿಸುವ ಬದಲಿಗೆ ಹೊಸಬರನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದೇ ಬಿಜೆಪಿಯ ಸೋಲಿಗೆ ಪ್ರಬಲ ಕಾರಣವಾಗಿರಬಹುದು ಎಂಬ ಊಹಾಪೋಹಗಳು ಬಲವಾಗುತ್ತಿವೆ. ಅದರಲ್ಲೂ ಯಡಿಯೂರಪ್ಪನಂತಹ ಮೇಹಾ ಮೇಧಾವಿ ಹಾಗೂ ಮಹಾನ್ ಮುತ್ಸದ್ದಿಯನ್ನು ಪಕ್ಷದಿಂದ ಹೊರಗಿಟ್ಟಿದ್ದೇ ಪಕ್ಷದ ಸೋಲಿಗೆ ಪರೋಕ್ಷ ಕಾರಣವಾಗಿದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?


ಸೋಲು ಗೆಲುವು ಪಕ್ಷಕ್ಕೆ ಹೊಸದಲ್ಲ


ಬಿಜೆಪಿಗೆ ಗೆಲುವು ಮತ್ತು ಸೋಲು ಹೊಸದಲ್ಲ. ಈ ಫಲಿತಾಂಶಗಳಿಂದ ಪಕ್ಷದ ಕಾರ್ಯಕರ್ತರು ಗಾಬರಿಗೊಳ್ಳುವ ಅಗತ್ಯವಿಲ್ಲ. ಪಕ್ಷದ ಹಿನ್ನಡೆಯ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಈ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇನೆ ಎಂದು ಕರ್ನಾಟಕದಲ್ಲಿ ಪಕ್ಷದ ಸೋಲಿನ ಕುರಿತು ಬಿಜೆಪಿ ನಾಯಕ ಯಡಿಯೂರಪ್ಪ ತಿಳಿಸಿದ್ದಾರೆ.


ಯಡಿಯೂರಪ್ಪನವರ ಮೇಲಿರುವ ಜವಾಬ್ದಾರಿ ಏನು?


ಈಗಾಗಲೇ 80 ವರ್ಷ ಪೂರೈಸಿರುವ ಹಿರಿಯ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಬೇಕಾಗಿದೆ ಹಾಗೂ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಬೇಕಾಗಿದೆ.


ಪ್ರಚಾರದಲ್ಲಿ ಯಡಿಯೂರಪ್ಪನವರಿದ್ದರೂ ಬಿಜೆಪಿ ಸೋಲು ಕಂಡಿದ್ಯಾಕೆ?


ಕಳೆದ ವರ್ಷ, ಯಡಿಯೂರಪ್ಪ ಅವರು ತಮ್ಮ ಕಿರಿಯ ಮಗ ಬಿ ವೈ ವಿಜಯೇಂದ್ರ (ಅವರು ಗೆದ್ದಿದ್ದಾರೆ) ಗಾಗಿ ತಮ್ಮ ಕ್ಷೇತ್ರವಾದ ಶಿಕಾರಿಪುರವನ್ನು ಬಿಟ್ಟುಕೊಡುವುದಾಗಿ ಘೋಷಿಸಿದ್ದರು. ಚುನಾವಣೆಗೆ ಮುಂಚಿತವಾಗಿ ತಪ್ಪಿನ ಅರಿವಾಗಿರುವ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಯಡಿಯೂರಪ್ಪನವರನ್ನು ಬಳಸಿಕೊಂಡಿದ್ದರೂ ಪಕ್ಷ ಮುನ್ನಡೆ ಸಾಧಿಸಲಿಲ್ಲ.


ಇದನ್ನೂ ಓದಿ: Congress ಗೆಲುವಿಗೆ ಕಾರಣ ಸಿದ್ದು-ಡಿಕೆಶಿಯೂ ಅಲ್ಲ, ರಾಹುಲ್-ಖರ್ಗೆಯೂ ಅಲ್ಲ! ರಣತಂತ್ರದ ಹಿಂದಿರೋದು ಇವರೇ!


ಚುನಾವಣಾ ಪ್ರಚಾರದಲ್ಲಿ ವಯಸ್ಸಿನ ಕಾರಣದಿಂದ ಯಡಿಯೂರಪ್ಪನವರು ಸರಿಯಾಗಿ ಸಕ್ರಿಯರಾಗಲಿಲ್ಲ ಮತ್ತು ಮಧ್ಯ ಕರ್ನಾಟಕ ಮತ್ತು ಹುಬ್ಬಳ್ಳಿ ಪ್ರದೇಶಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ಇನ್ನು ಯಡಿಯೂರಪ್ಪ ಬದಲಾಗಿ ಬೊಮ್ಮಾಯಿ ಅವರನ್ನು ಲಿಂಗಾಯತರು ನೋಡಲಿಲ್ಲ. ಅವರು ಯಡಿಯೂರಪ್ಪ ಅವರಂತೆ ಲಿಂಗಾಯತರನ್ನು ಓಲೈಸುವ ವ್ಯಕ್ತಿತ್ವ ಹೊಂದಿರಲಿಲ್ಲ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎ ನಾರಾಯಣ ಅವರು ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.


2024 ರಲ್ಲಿ ಉತ್ತಮ ಸಾಧನೆ ಮಾಡಲು ಯಡಿಯೂರಪ್ಪನೇ ಕಾರಣರಾಗಿರುತ್ತಾರೆ


ರಾಜಕೀಯ ವಿಶ್ಲೇಷಕ ಚಂಬಿ ಪುರಾಣಿಕ್ ಅವರು 2024 ರಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲು ಯಡಿಯೂರಪ್ಪ ಅವರೇ ಪ್ರಮುಖರು ಎಂದು ತಿಳಿಸಿದ್ದಾರೆ. ಯಡಿಯೂರಪ್ಪನವರು ಬಿಜೆಪಿಗೆ ದಕ್ಷರಾಗಿದ್ದು ಏಕೆಂದರೆ ಅವರ ಇಬ್ಬರು ಪುತ್ರರಾದ ಬಿವೈ ವಿಜಯೇಂದ್ರ ಮತ್ತು ಬಿವೈ ರಾಘವೇಂದ್ರ ಅವರ ಭವಿಷ್ಯವು ಪಕ್ಷದ ಹೈಕಮಾಂಡ್ ಕೈಯಲ್ಲಿದೆ ಎಂದು ಪುರಾಣಿಕ್ ತಿಳಿಸಿದ್ದಾರೆ.
ಆತ್ಮಾವಲೋಕನ ಮಾಡಿಕೊಳ್ಳಲಿದ್ದೇವೆ


ಚುನಾವಣಾ ಸೋಲು ಗೆಲುವು ಅಂಶಗಳು ಪಕ್ಷಕ್ಕೆ ಹೊಸದೇನಲ್ಲ ಅಂತೆಯೇ ಈ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ ಪಕ್ಷ ಏಕೆ ಸೋಲು ಅನುಭವಿಸಿತು ಎಂಬುದನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ನಾನು ಈ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಉತ್ತಮ ಪ್ರದರ್ಶನ ನೀಡಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

First published: