Explained: ಜೇನುತುಪ್ಪದಲ್ಲೂ ಇದೆ ಅಪಾಯಕಾರಿ ಅಂಶಗಳು! ಏನೆಲ್ಲಾ ಡೇಂಜರ್ ಇದೆ ತಿಳಿಯಿರಿ

ಜೇನುತುಪ್ಪವನ್ನು ಸರಿಯಾದ ರೀತಿಯಲ್ಲಿ ಸೇವಿಸದಿದ್ದರೆ, ಅದು ಅನೇಕ ರೀತಿಯ ಹಾನಿಗಳನ್ನು ಉಂಟು ಮಾಡಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಜೇನುತುಪ್ಪವನ್ನು ಇರಿಸುವ ತಾಪಮಾನವು ದೊಡ್ಡ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೇನುತುಪ್ಪವನ್ನು (Honey) ದೇಹದ (Body) ಹಲವು ಕಾಯಿಲೆಗಳಿಗೆ (Many Disease) ಔಷಧವಾಗಿ ಬಳಕೆ ಮಾಡುತ್ತಾರೆ. ಜೇನುತುಪ್ಪವನ್ನು ಯಾರು ಬೇಕಾದರೂ ಸೇವನೆ ಮಾಡಬಹುದು. ಜೇನುತುಪ್ಪ ಸಾಕಷ್ಟು ಆರೋಗ್ಯ ಲಾಭಗಳನ್ನು (Health Benefits) ಹೊಂದಿದೆ. ಹಾಗಾಗಿ ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಜೇನುತುಪ್ಪವನ್ನು ಶತಮಾನಗಳಿಂದ ಸೇವನೆ ಮಾಡುತ್ತಾ ಬರಲಾಗಿದೆ. ಜೇನುತುಪ್ಪವನ್ನು ಸಕ್ಕರೆಗೆ ಪರ್ಯಾಯವಾಗಿ ಸೇವನೆ ಮಾಡುತ್ತಾರೆ. ಅಥವಾ ವಿವಿಧ ಮನೆಮದ್ದುಗಳಾಗಿ, ಆಯುರ್ವೇದ ಮತ್ತು ವೈದ್ಯಕೀಯ ವಿಜ್ಞಾನಗಳೆರಡೂ ಜೇನುತುಪ್ಪದ ನಿರ್ದಿಷ್ಟ ಗುಣಲಕ್ಷಣಗಳ ಬಗ್ಗೆ ಹೇಳುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ನಿಂಬೆಯೊಂದಿಗೆ ಜೇನುತುಪ್ಪ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಅನೇಕ ಅಧ್ಯಯನಗಳಲ್ಲಿ ಉಲ್ಲೇಖಿಸಲಾಗಿದೆ.

    ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ ಜೇನುತುಪ್ಪ

    ಇದರ ಬಳಕೆಯು ದೇಹದಿಂದ ವಿಷವನ್ನು ತೆಗೆದು ಹಾಕುವುದರ ಜೊತೆಗೆ ತೂಕ ನಷ್ಟಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೇನುತುಪ್ಪವು ಎಷ್ಟು ಅನುಕೂಲತೆ ಹೊಂದಿದೆಯೋ, ಅಷ್ಟೇ ಅನಾನುಕೂಲತೆಗಳನ್ನು ಉಂಟು ಮಾಡುತ್ತದೆ. ಇತ್ತೀಚೆಗೆ, ಸದ್ಗುರುಗಳು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಜೇನುತುಪ್ಪದ ವಿಷದ ಬಗ್ಗೆ ಪ್ರಸ್ತಾಪ ಮಾಡಿದ್ದರು.

    ಜೇನುತುಪ್ಪ ದೇಹದಲ್ಲಿ ವಿಷ ಉಂಟು ಮಾಡುತ್ತದೆ!

    ಸದ್ಗುರುಗಳು ಹೇಳುವ ಪ್ರಕಾರ, ಜೇನುತುಪ್ಪವನ್ನು ಸರಿಯಾದ ರೀತಿಯಲ್ಲಿ ಸೇವಿಸದಿದ್ದರೆ, ಅದು ಅನೇಕ ರೀತಿಯ ಹಾನಿಗಳನ್ನು ಉಂಟು ಮಾಡಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಜೇನುತುಪ್ಪವನ್ನು ಇರಿಸುವ ತಾಪಮಾನವು ದೊಡ್ಡ ಪರಿಣಾಮ ಬೀರುತ್ತದೆ. ಕೆಲವು ಸಂದರ್ಭಗಳಲ್ಲಿ ಜೇನುತುಪ್ಪವು ದೇಹದಲ್ಲಿ ವಿಷವನ್ನು ಉಂಟು ಮಾಡುತ್ತದೆ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ.

    ಇದನ್ನೂ ಓದಿ: ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಲು ಮುಖ್ಯ ಕಾರಣಗಳು ಮತ್ತು ಸಮಸ್ಯೆಗಳು ಯಾವವು?

    ಇದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯ ಇದೆ. ಜೇನುತುಪ್ಪದ ಸೇವನೆಗೆ ಸಂಬಂಧಿಸಿದಂತೆ ಯಾವ ವಿಶೇಷ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಇಲ್ಲಿ ನೋಡೋಣ.

    ತಜ್ಞರು ಏನು ಹೇಳುತ್ತಾರೆ?

    ಜೇನುತುಪ್ಪವನ್ನು ಯಾವಾಗಲೂ ಸೇವನೆಗೆ ಯೋಗ್ಯವಾಗಿರುವಂತಹ ತಾಪಮಾನದಲ್ಲಿ ಇಡಬೇಕು ಮತ್ತು ಅದು ಸೇವನೆಗೆ ಯೋಗ್ಯವಾಗಿರುತ್ತದೆ. ಈ ಬಗ್ಗೆ ಸದ್ಗುರುಗಳು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಜೇನುತುಪ್ಪವನ್ನು ಸೇವಿಸಲು ಉತ್ತಮ ಮಾರ್ಗವೆಂದರೆ ಅದನ್ನು ಕಚ್ಚಾ ತಿನ್ನುವುದು.

    ನೀವು ಅದನ್ನು ಪಾನೀಯದೊಂದಿಗೆ ಬೆರೆಸಿ ಸೇವಿಸಲು ಬಯಸಿದರೆ, ಜೇನುತುಪ್ಪವನ್ನು ಸೇರಿಸುವ ಮೊದಲು ಪಾನೀಯವು ತಂಪಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಬಿಸಿ ಪದಾರ್ಥಗಳೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ದೇಹದಲ್ಲಿ ವಿಷ ಉಂಟಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.

    ಇದಲ್ಲದೆ, ಜೇನುತುಪ್ಪವನ್ನು ಮಿತವಾಗಿ ಮಾತ್ರ ಸೇವಿಸಬೇಕು, ಅದರ ಅತಿಯಾದ ಸೇವನೆ ಅನೇಕ ತೊಂದರೆಳಿಗೆ ಕಾರಣವಾಗುತ್ತದೆ.

    ರಕ್ತದೊತ್ತಡ ಸಮಸ್ಯೆ

    ಜೇನುತುಪ್ಪದಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅತಿಯಾದ ಸೇವನೆಯು ಹೈಪೊಟೆನ್ಷನ್ ಅಪಾಯ ಹೆಚ್ಚಿಸುತ್ತದೆ. ಅಂದರೆ, ಇದನ್ನು ಅಧಿಕವಾಗಿ ಸೇವಿಸುವ ಜನರು ಕಾಲಾನಂತರದಲ್ಲಿ ಕಡಿಮೆ ರಕ್ತದೊತ್ತಡ ಸಮಸ್ಯೆ ಅಪಾಯ ಹೊಂದಬಹುದು, ಇದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿಕರ ಆಗಿದೆ. ಈ ನಿಟ್ಟಿನಲ್ಲಿ ರಕ್ತದೊತ್ತಡ ರೋಗಿಗಳಿಗೆ ವಿಶೇಷ ಗಮನ ಬೇಕು.

    ರಕ್ತದ ಸಕ್ಕರೆ ಮಟ್ಟ ಹೆಚ್ಚುತ್ತದೆ

    ರಕ್ತದೊತ್ತಡದಂತೆಯೇ, ರಕ್ತದ ಸಕ್ಕರೆ ಹೊಂದಿರುವ ಜನರಿಗೆ ಜೇನುತುಪ್ಪದ ಮಧ್ಯಮ ಸೇವನೆ ಸಹ ಸೂಚಿಸಲಾಗುತ್ತದೆ. ಜೇನುತುಪ್ಪವು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ ಹೊಂದಿದೆ. ಆದ್ದರಿಂದ ನೀವು ಜೇನುತುಪ್ಪವನ್ನು ಅಧಿಕವಾಗಿ ಸೇವಿಸಿದರೆ, ಅದು ಮಧುಮೇಹಿಗಳಿಗೆ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ಮಧುಮೇಹಿಗಳು ವೈದ್ಯರ ಸಲಹೆಯಿಲ್ಲದೆ, ಜೇನುತುಪ್ಪ ಅಥವಾ ಯಾವುದೇ ಸಿಹಿ ಪದಾರ್ಥ ಸೇವನೆ ತಪ್ಪಿಸಬೇಕು.

    ಹಲ್ಲಿನ ಸಮಸ್ಯೆ

    ಅತಿಯಾದ ಪ್ರಮಾಣದ ಜೇನುತುಪ್ಪ ಸೇವನೆ ಹಲ್ಲಿನ ಕೊಳೆಯುವಿಕೆಗೆ ಉತ್ತೇಜಿಸುತ್ತದೆ. USDA ನ್ಯಾಷನಲ್ ನ್ಯೂಟ್ರಿಯೆಂಟ್ ಡೇಟಾಬೇಸ್ ಪ್ರಕಾರ, ಜೇನುತುಪ್ಪದಲ್ಲಿನ ಸಕ್ಕರೆ ಪ್ರಮಾಣವು ಸರಿಸುಮಾರು 82% ನಷ್ಟು ನಿಮ್ಮ ಹಲ್ಲುಗಳಿಗೆ ಹಾನಿಯಾಗುತ್ತದೆ.

    ಇದನ್ನೂ ಓದಿ: ಹೊಟ್ಟೆಯ ಆಮ್ಲ ಸಮಸ್ಯೆಯ ಲಕ್ಷಣಗಳು ಮತ್ತು ನಿವಾರಣೆಗೆ ಮನೆಮದ್ದು ಯಾವವು?

    ಜೇನುತುಪ್ಪವು ಪ್ರಕೃತಿಯಲ್ಲಿ ಸ್ನಿಗ್ಧತೆ ಹೊಂದಿದೆ, ಅಂದರೆ ಅದು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳುವ ಮೂಲಕ ಹಲ್ಲಿನ ಕೊಳೆತ ಉತ್ತೇಜಿಸುತ್ತದೆ. ಜೇನುತುಪ್ಪ ಸೇವನೆಯ ನಂತರ ಹಲ್ಲುಗಳನ್ನು ಸ್ವಚ್ಛಗೊಳಿಸಿ.
    Published by:renukadariyannavar
    First published: