• ಹೋಂ
  • »
  • ನ್ಯೂಸ್
  • »
  • Explained
  • »
  • Explainer: ಅಫ್ಘಾನಿಸ್ತಾನದಲ್ಲಿರುವ ಹೊಸ ಭಯೋತ್ಪಾದಕ ಸಂಘಟನೆ ಹಿಜ್ಬ್-ಇ-ವಿಲಾಯತ್ ಭಾರತಕ್ಕೆ ಅಪಾಯಕಾರಿ ಏಕೆ..? ಇಲ್ಲಿದೆ ವಿವರ

Explainer: ಅಫ್ಘಾನಿಸ್ತಾನದಲ್ಲಿರುವ ಹೊಸ ಭಯೋತ್ಪಾದಕ ಸಂಘಟನೆ ಹಿಜ್ಬ್-ಇ-ವಿಲಾಯತ್ ಭಾರತಕ್ಕೆ ಅಪಾಯಕಾರಿ ಏಕೆ..? ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Explained what is Hizb-e-Wilayat organisation: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಪೈಲಟ್‌ಗಳೊಂದಿಗೆ ಫೈಟರ್ ಜೆಟ್‌ಗಳನ್ನು ನಿಲ್ಲಿಸಲಾಗಿದೆ ಎಂದು ತಾಲಿಬಾನಿಗಳಿಗೆ ಐಎಸ್‌ಐ ಮನವರಿಕೆ ಮಾಡಿಕೊಟ್ಟಿದೆ.

  • Share this:

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ ತಾಲಿಬಾನ್‌ ನಿಯಂತ್ರಣದಲ್ಲಿದ್ದು, ಇದು ಭಾರತ ಸರ್ಕಾರಕ್ಕೆ ಹಾಗೂ ಭಾರತೀಯರಿಗೆ ಆತಂಕಕಾರಿ ವಿಷಯವೇ ಸರಿ. ತಾಲಿಬಾನ್‌ (Taliban) ನಿಯಂತ್ರಣದಲ್ಲಿರುವುದರಿಂದ ಈಗಾಗಲೇ ಭಾರತೀಯ ಸ್ವತ್ತುಗಳು ಸಹ ಬೆದರಿಕೆಯಲ್ಲಿವೆ. ಈ ನಡುವೆ, ಆಫ್ಘಾನಿಸ್ತಾನದಲ್ಲಿ (Afghanistan) ಭಾರತೀಯ ಆಸ್ತಿಗಳ ಮೇಲೆ ಪ್ರತ್ಯೇಕವಾಗಿ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ - ISI) ಹೊಸ ಭಯೋತ್ಪಾದಕ ಸಂಘಟನೆಯನ್ನು ಆರಂಭಿಸಿದೆ. ಈ ನೂತನ ಉಗ್ರ ಸಂಘಟನೆಯೇ ಹಿಜ್ಬ್-ಇ-ವಿಲಾಯತ್ (Hizb-e-Wilayat). ತಾಲಿಬಾನ್ ನಿಯಂತ್ರಣಕ್ಕೆ ಬರುವ ಪ್ರದೇಶಗಳಲ್ಲಿ ಭಾರತೀಯ ಸ್ವತ್ತುಗಳನ್ನು ಮೊದಲ ಗುರಿಯಾಗಿಸಬೇಕು ಎಂದು ಸೂಚನೆಗಳು ಸ್ಪಷ್ಟವಾಗಿವೆ ಎಂದು ಮೂಲಗಳು ತಿಳಿಸಿವೆ. ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯ ನಡುವೆ, ಈ ಹಿಜ್ಬ್-ಇ-ವಿಲಾಯತ್ ಭಯೋತ್ಪಾದಕ ಗುಂಪು ಮತ್ತು ಭಾರತಕ್ಕೆ ಅದರ ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ..


ಹಿಜ್ಬ್-ಇ-ವಿಲಾಯತ್‌ನ ಸದಸ್ಯರು ಯಾರು?


ಡಾ. ಅನ್ವರ್ ಫಿರ್ದೌಸಿ ಹೊಸ ಭಯೋತ್ಪಾದಕ ಗುಂಪಾದ ಹಿಜ್ಬ್-ಇ-ವಿಲಾಯತ್‌ನ ನೇತೃತ್ವ ವಹಿಸಿದ್ದು, ಮತ್ತು ಈ ತಂಡವು 10,000ಕ್ಕೂ ಹೆಚ್ಚು ಪಾಕಿಸ್ತಾನಿ ಹೋರಾಟಗಾರರನ್ನು ಒಳಗೊಂಡಿದೆ. ಅವರೆಲ್ಲರೂ ಅಫ್ಘಾನಿಸ್ತಾನದ ಗಡಿಯನ್ನು ಪ್ರವೇಶ ಮಾಡಿದ್ದಾರೆ ಎಂದು ಈ ಬೆಳವಣಿಗೆಯ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ಈ ಹೊಸ ಗುಂಪನ್ನು ಕಳುಹಿಸುವುದರ ಹೊರತಾಗಿ, ಪಾಕಿಸ್ತಾನದ ಐಎಸ್‌ಐ, ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೊಯ್ಬಾ (Lashkar-e-Taiba) ಮತ್ತು ಜೈಶ್-ಇ-ಮೊಹಮ್ಮದ್ (Jaish-e-Mohammed) ಮೂಲಕವೂ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಸ್ವತ್ತುಗಳನ್ನು ಗುರಿಯಾಗಿಸುವುದನ್ನು ಮುಂದುವರಿಸಿದೆ.


ತಾಲಿಬಾನ್ ಮತ್ತು ಐಎಸ್‌ಐ ನಡುವೆ ಸಂಪರ್ಕ ಹೇಗಿದೆ..?


ಐಎಸ್‌ಐ ತಾಲಿಬಾನಿಗಳ ನೆರವಿಗೆ ಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಮತ್ತು ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಸಹಾಯವಿಲ್ಲದೆ ತಾಲಿಬಾನ್ ಗೆಲುವು ಸಾಧ್ಯವಿಲ್ಲ ಎಂದು ಭಾರತದ ಗುಪ್ತಚರ ಸಂಸ್ಥೆ ಮತ್ತು ಅನೇಕರು ಹೇಳಿಕೊಂಡಿದ್ದಾರೆ.


ತಾಲಿಬಾನ್ 1994ರಲ್ಲಿ ಹುಟ್ಟಿದಾಗಿನಿಂದ ಪಾಕಿಸ್ತಾನ ಅದರ ಜತೆ ಸುದೀರ್ಘ ಸಂಬಂಧ ಹೊಂದಿದೆ. 1996ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀಕ ಪಡಿಸಿಕೊಂಡು ಸರ್ಕಾರ ನಡೆಸಿದಾಗಲೂ ಪಾಕಿಸ್ತಾಣದ ಬೆಂಬಲವಿತ್ತು. ಅಲ್ಲದೆ, ಅಮೆರಿಕದ 9/11 ದಾಳಿಯ ನಂತರ ಉಗ್ರ ನಾಯಕರಿಗೆ ಸುರಕ್ಷಿತವಾದ ಸ್ವರ್ಗವನ್ನು ಒದಗಿಸಿತು.


ಪಾಕಿಸ್ತಾನದ ಐಎಸ್‌ಐ ಮತ್ತು ಅಫ್ಘಾನ್ ದಂಗೆಕೋರರ ನಡುವಿನ ಸಂಬಂಧದ ಕುರಿತು ಆಕಾಶದಲ್ಲಿ ಸೂರ್ಯ ಎಂಬ ಪತ್ರಿಕೆಯಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ. ಈ ಪತ್ರಿಕೆಯಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ತಜ್ಞ, ಮ್ಯಾಟ್ ವಾಲ್ಡ್‌ಮನ್, ''ತಾಲಿಬಾನ್ ಕಮಾಂಡರ್‌ಗಳ ಪ್ರಕಾರ, ಐಎಸ್‌ಐ ಚಳುವಳಿಯನ್ನು ಸಮರ್ಥವಾಗಿ ಮತ್ತು ಬಲವಾಗಿ ಪ್ರಭಾವಿಸುತ್ತದೆ ಹಾಗೂ ಸಂಘಟಿಸುತ್ತದೆ. ಇದು ತಾಲಿಬಾನ್ ಮತ್ತು ಹಕ್ಕಾನಿ ಗುಂಪುಗಳಿಗೆ ಜಾಗ, ತರಬೇತಿ, ಧನಸಹಾಯ, ಯುದ್ಧಸಾಮಗ್ರಿಗಳು ಮತ್ತು ಸರಬರಾಜುಗಳ ವಿಷಯದಲ್ಲಿ ದೊಡ್ಡ ಬೆಂಬಲ ನೀಡುತ್ತದೆ. ಅವರ ಮಾತಿನಲ್ಲಿ, ಇದು ‘ಆಕಾಶದಲ್ಲಿರುವ ಸೂರ್ಯನಂತೆ ಸ್ಪಷ್ಟವಾಗಿದೆ’. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಐಎಸ್‌ಐ ತಾಲಿಬಾನ್‌ನ ಕಾರ್ಯತಂತ್ರದ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಕ್ಷೇತ್ರ ಕಾರ್ಯಾಚರಣೆಗಳ ಮೇಲೆ ಗಮನಾರ್ಹ ಪ್ರಭಾವ ಬೀರುವಂತೆ ಕಾಣುತ್ತದೆ; ಮತ್ತು ಹಕ್ಕಾನಿ ದಂಗೆಕೋರರ ಮೇಲೆ ಇನ್ನೂ ಹೆಚ್ಚಿನ ಪ್ರಭಾವ ಹೊಂದಿದೆ'' ಎಂದೂ ಬರೆದಿದ್ದಾರೆ.


ಕಳೆದ ಮೂರು ದಶಕಗಳಲ್ಲಿ, ಐಎಸ್ ತಾಲಿಬಾನ್ ಅನ್ನು ಒಂದು ಮಹತ್ವದ ಉದ್ದೇಶವೆಂದು ಪರಿಗಣಿಸಿದ್ದು, ಕಾಬೂಲ್‌ನಲ್ಲಿ ತಾಲಿಬಾನ್ ಆಡಳಿತವು ಪಾಕಿಸ್ತಾನದ ಸೇನೆಗೆ ಭಾರತದ ಜೊತೆಗಿನ ವೈರತ್ವದ ಆಳಕ್ಕೆ ಅಪೇಕ್ಷಿಸಿದ ಭೂಪ್ರದೇಶದ ಮೇಲೆ ಉಚಿತ ಪಾಸ್ ನೀಡಿದಂತಾಗುತ್ತದೆ. ಮತ್ತು ಮಧ್ಯ ಏಷ್ಯಾದ (Middle Asia) ಅಫ್ಘಾನಿಸ್ತಾನ ಮಾರ್ಗಗಳಲ್ಲಿ ಪಾಕ್‌ಗೆ ಮುಕ್ತವಾಗಿರುತ್ತದೆ ಎಂದೂ ಹೇಳಲಾಗಿದೆ.


ಅಫ್ಘಾನಿಸ್ತಾನದಲ್ಲಿ ಭಾರತೀಯ ಹೂಡಿಕೆಗಳು ಏಕೆ ಅಪಾಯದಲ್ಲಿವೆ..?


ಕಳೆದ ಎರಡು ದಶಕಗಳಲ್ಲಿ, 2001ರಲ್ಲಿ ಯುಎಸ್ ನೇತೃತ್ವದ ಪಡೆಗಳು ತಾಲಿಬಾನ್ ಅನ್ನು ಸ್ಥಳಾಂತರಿಸಿದ ನಂತರ ಭಾರತವು ಅಫ್ಘಾನಿಸ್ತಾನದ ಪುನರ್‌ನಿರ್ಮಾಣ ಪ್ರಯತ್ನಗಳಲ್ಲಿ 3 ಬಿಲಿಯನ್ ಡಾಲರ್‌ನಷ್ಟು ಹೂಡಿಕೆ ಮಾಡಿದೆ. ಭಾರತವು ರಸ್ತೆಗಳು, ಅಣೆಕಟ್ಟುಗಳು, ವಿದ್ಯುತ್ ಪ್ರಸರಣ ಜಾಲ ಹಾಗೂ ಸಬ್‌ಸ್ಟೇಷನ್‌ಗಳು, ಶಾಲೆಗಳು ಮತ್ತು ಪ್ರಮುಖವಾಗಿ 90 ಮಿಲಿಯನ್ ಡಾಲರ್‌ ವೆಚ್ಚದಲ್ಲಿ ಅಫ್ಘಾನಿಸ್ತಾನ ಸಂಸತ್ತನ್ನು ನಿರ್ಮಿಸಿದೆ.


ಅಫ್ಘಾನ್‌ ಸಂಸತ್ತಿನ (Afghanistan Parliament Built by India) ಹೊರತಾಗಿ, ಭಾರತವು ಹೆರಾತ್‌ನ ಚೆಷ್ಟೆ ಶರೀಫ್ ಜಿಲ್ಲೆಯಲ್ಲಿ ಸಲ್ಮಾ ಅಣೆಕಟ್ಟನ್ನು ನಿರ್ಮಿಸಿತು. ಇದು ಕಾಬೂಲ್‌ನಲ್ಲಿರುವ ಅಫ್ಘಾನ್‌ ವಿದೇಶಾಂಗ ಕಚೇರಿ ಆವರಣದಲ್ಲಿರುವ ಐತಿಹಾಸಿಕ 100 ವರ್ಷಗಳಷ್ಟು ಹಳೆಯದಾದ ಸ್ಟೋರ್ ಪ್ಯಾಲೇಸ್ ಅನ್ನು ಪುನಃಸ್ಥಾಪಿಸಲು ಸಹಾಯ ಮಾಡಿತು ಮತ್ತು ಜರಂಜ್-ದೇಲಾರಾಮ್ ಹೆದ್ದಾರಿಯನ್ನು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿತು.


ಭಾರತವು ಕೈಗೊಂಡ ಈ ಅಭಿವೃದ್ಧಿ ಚಟುವಟಿಕೆಗಳನ್ನು ಪಾಕಿಸ್ತಾನ ಯಾವಾಗಲೂ ಕಣ್ಣಿನಲ್ಲಿ ಬೆರಳಿಟ್ಟಂತೆ ನೋಡುತ್ತಿತ್ತು. ಹಾಗೂ, ಈ ಮೂಲಕ ಭಾರತ (ಪಾಕಿಸ್ತಾನವನ್ನು) ಸುತ್ತಿಕೊಳ್ಳುತ್ತಿದೆ ಎಂಬುದು ಅವರ ಆರೋಪ

ಭಾರತದ ಬಗ್ಗೆ ತಾಲಿಬಾನ್ ದೃಷ್ಟಿಕೋನ:


ಕಾಬೂಲ್‌ನಲ್ಲಿ (Kabul) ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ (Democratically Elected Government) ಬೆಂಬಲಿಸುವ ಭಾರತವನ್ನು ಅಮೆರಿಕದ ಮಿತ್ರ ರಾಷ್ಟ್ರ ಮತ್ತು ತನ್ನ ಎದುರಾಳಿ ಎಂದು ತಾಲಿಬಾನ್ ಸ್ಪಷ್ಟವಾಗಿ ಗ್ರಹಿಸಿದೆ. ಎರಡೂ ಕಡೆಗಳಲ್ಲಿ ಪರಸ್ಪರ ಅಪನಂಬಿಕೆ ಇದ್ದು, ಇದನ್ನು ಹೆಚ್ಚಿಸಲು ತಾಲಿಬಾನ್‌ಗೆ ಐಎಸ್‌ಐ ಪದೇ ಪದೇ ನೆರವು ನೀಡಿದೆ. ಉದಾಹರಣೆಗೆ, ಭಾರತವು ಇತ್ತೀಚೆಗೆ ಕಂದಹಾರ್‌ನಲ್ಲಿ ತಾಲಿಬಾನ್ ಗುಂಪಿನ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಐಎಸ್ಐ ತಾಲಿಬಾನ್‌ಗೆ ಮನವರಿಕೆ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ. ಅಲ್ಲದೆ, ಭಾರತವು ಹೆಲಿಕಾಪ್ಟರ್‌ಗಳು ಮತ್ತು ಮಿಲಿಟರಿ ವಿಮಾನಗಳನ್ನು ಅಫ್ಘಾನ್ ರಕ್ಷಣಾ ಇಲಾಖೆಗೆ ಹಸ್ತಾಂತರಿಸಿದೆ ಎಂದೂ ಐಎಸ್‌ಐ ತಾಲಿಬಾನ್‌ಗೆ ಹೇಳಿದೆ.


ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಪೈಲಟ್‌ಗಳೊಂದಿಗೆ ಫೈಟರ್ ಜೆಟ್‌ಗಳನ್ನು ನಿಲ್ಲಿಸಲಾಗಿದೆ ಎಂದು ತಾಲಿಬಾನಿಗಳಿಗೆ ಐಎಸ್‌ಐ ಮನವರಿಕೆ ಮಾಡಿಕೊಟ್ಟಿದೆ.


"ಐಎಸ್‌ಐನ ಈ ಕ್ರಮಗಳು ತಾಲಿಬಾನ್‌ನೊಂದಿಗೆ ತನ್ನ ಹತೋಟಿಯನ್ನು ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿದ್ದು, ಅಫ್ಘಾನಿಸ್ತಾನವನ್ನು ಭೌಗೋಳಿಕವಾಗಿ ಹಾಗೂ ರಾಜಕೀಯವಾಗಿ ಸಂಬಂಧ ಉಳಿಯುವಂತೆ ಮಾಡಲು ಮತ್ತು ಈ ದೇಶದಲ್ಲಿ ಭಾರತದ ಪಾತ್ರವನ್ನು ಕಡಿಮೆ ಮಾಡುವ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ಹೊಂದಿದೆ'' ಎಂದು ಭದ್ರತಾ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

top videos
    First published: