Kohinoor Diamond: ಕೊಹಿನೂರ್ ವಜ್ರಕ್ಕಿದೆ ಕರುನಾಡ ನಂಟು! ಅತ್ಯಮೂಲ್ಯ ವಸ್ತು ಸಿಕ್ಕಿದ ಜಾಗ ಹೇಗಿದೆ ನೋಡಿ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಹೊರ ಭಾಗದಲ್ಲಿ ಕೃಷ್ಣಾ ನದಿ ಹರಿದು ಹೋಗುತ್ತದೆ. ಈ ಭಾಗದಲ್ಲಿ ಈ ಶತ ಶತಮಾನಗಳ ಹಿಂದೆ ಕೊಹಿನೂರು ವಜ್ರ ಸಿಕ್ಕಿದ್ದ ಸ್ಥಳವಾಗಿದೆ ಎನ್ನಲಾಗಿದೆ.. ಕೃಷ್ಣಾ ನದಿ ತೀರದಲ್ಲಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದಿಂದ ಈಗಾಗಲೇ ನಾಮ ಫಲಕ ಹಾಕಲಾಗಿದೆ. ಈ ಬಗ್ಗೆ ರೋಚಕ ಸ್ಟೋರಿ ಇಲ್ಲಿದೆ ಓದಿ...

ಕೊಹಿನೂರ್ ವಜ್ರ ಸಿಕ್ಕಿರುವ ಜಾಗ

ಕೊಹಿನೂರ್ ವಜ್ರ ಸಿಕ್ಕಿರುವ ಜಾಗ

  • Share this:
ಯಾದಗಿರಿ: ಬ್ರಿಟನ್ ರಾಣಿ (Britain Queen) ಎಲಿಜಬೆತ್ (Elizabeth) ನಿಧನ ನಂತರ, ಈಗ ಕೊಹಿನೂರ್ ವಜ್ರದ ಕಿರೀಟದ (Kohinoor Diamond crown) ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ. ಎಲಿಜಬೆತ್ ರಾಣಿ ಧರಿಸುತ್ತಿದ್ದ ಕಿರೀಟದಲ್ಲಿದ್ದ ವಜ್ರ ಭಾರತದದ್ದು ಎನ್ನುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಬೆಲೆಯನ್ನೇ ಕಟ್ಟಲಾಗದ ಕೊಹಿನೂರು ವಜ್ರ‌ ಅದು. ಬೆಳಕಿನ ಬೆಟ್ಟವಾದ ಡೈಮಂಡ್‌ಗೆ ಈಗ ಮತ್ತೆ ಡಿಮ್ಯಾಂಡ್ ಬಂದಿದೆ.. ಎಲಿಜಬೆತ್ ರಾಣಿ ನಿಧನ ನಂತರ ಈಗ ಡೈಮಂಡ್ ಭಾರತಕ್ಕೆ ಸೇರುತ್ತಾಎನ್ನುವ ಕುರಿತು  ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಇದರ ಮೂಲ ಯಾದಗಿರಿ (Yadagiri) ಜಿಲ್ಲೆಯ ಕೃಷ್ಣಾ ನದಿಯ (Krishna River) ಒಡಲು ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಇತಿಹಾಸದಲ್ಲಿಯೇ (History) ದಾಖಲೆ ಇದೆಯಂತೆ. ಈ ಕುರಿತು ರೋಚಕ ಸ್ಟೋರಿ ಇಲ್ಲಿದೆ ಓದಿ…

ಯಾದಗಿರಿಯ ಕೃಷ್ಣಾ ನದಿ ದಡದಲ್ಲಿತ್ತು ಕೊಹಿನೂರು ವಜ್ರ!

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಹೊರ ಭಾಗದಲ್ಲಿ ಕೃಷ್ಣಾ ನದಿ ಹರಿದು ಹೋಗುತ್ತದೆ. ಈ ಭಾಗದಲ್ಲಿ ಈ ಶತ ಶತಮಾನಗಳ ಹಿಂದೆ ಕೊಹಿನೂರು ವಜ್ರ ಸಿಕ್ಕಿದ್ದ ಸ್ಥಳವಾಗಿದೆ ಎನ್ನಲಾಗಿದೆ.. ಕೃಷ್ಣಾ ನದಿ ತೀರದಲ್ಲಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದಿಂದ ಈಗಾಗಲೇ ನಾಮ ಫಲಕ ಹಾಕಲಾಗಿದೆ. ಜಗತ್ ಪ್ರಸಿದ್ಧ ಕೊಹಿನೂರು ವಜ್ರ ಸಿಕ್ಕ ಸ್ಥಳವೆಂದು ನಾಮ ಫಲಕ ಅಳವಡಿಸಲಾಗಿದೆ. ಇನ್ನು , ಸರಕಾರಿ ದಾಖಲೆಯಲ್ಲಿ ಕೂಡ ವಿಶ್ವ ಪ್ರಸಿದ್ಧಿ ಕೊಹಿನೂರು ವಜ್ರ ಸಿಕ್ಕಿರುವ ಸ್ಥಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಾಯ್ದಿರಿಸಿದೆ ಎಂದು ಪಹಣಿಯಲ್ಲಿ ನಮೂದಾಗಿದೆ.

ಕೊಹಿನೂರ್ ವಜ್ರ ಸಿಕ್ಕಿರುವ ಜಾಗ


8 ಎಕರೆ 12 ಗುಂಟೆ ಜಾಗದಲ್ಲಿ ಕಣ್ಗಾವಲು

ಸರ್ವೆ ನಂ 342 ರ  ಸ್ಥಳ 4 ಎಕರೆ 12 ಗುಂಟೆ ಅದೆ ರೀತಿ ಸರ್ವೆ ನಂಬರ್ 337 ರ 4 ಎಕರೆ  07 ಗುಂಟೆ ಸ್ಥಳ ವಿಶ್ವ ಪ್ರಸಿದ್ಧಿ ಕೊಹಿನೂರು ವಜ್ರ ಸಿಕ್ಕಿದ್ದ ಸ್ಥಳವೆಂದು ನೋಂದಣಿ ಮಾಡಲಾಗಿದೆ. ಸರಕಾರ 8 ಎಕರೆ  12 ಗುಂಟೆ ಡೈಮಂಡ್ ಸಿಕ್ಕಿದ್ದ ಸ್ಥಳವೆಂದು ಜಾಗ ಮೀಸಲಿಟ್ಟು 10 ವರ್ಷ ಕಳೆದಿದೆ‌. ಡೈಮಂಡ್ ಸಿಕ್ಕ ಸ್ಥಳದಲ್ಲಿ ಮರಳು ಗಣಿಗಾರಿಕೆ ಕೂಡ ನಿಷೇಧ ಮಾಡಲಾಗಿದೆ.

ಇತಿಹಾಸದಲ್ಲಿ ದಾಖಲೆ


ವಜ್ರ ಸಿಕ್ಕ ಸ್ಥಳ ಹಾಳುಕೊಂಪೆ

ವಜ್ರ ದೊರೆತ ಸ್ಥಳವು ಈಗ ಹಾಳುಕೊಂಪೆಯಾಗಿದೆ. ವಿಶ್ವ ಪ್ರಸಿದ್ಧಿ ಹೊಂದಿದ್ದ ಕೊಹಿನೂರು ವಜ್ರ ಸಿಕ್ಕ ಸ್ಥಳವನ್ನು ಅಭಿವೃದ್ಧಿ ಪಡಿಸುವ ಜೊತೆ, ಕೊಹಿನೂರು ವಜ್ರದ ಸ್ಮಾರಕ ಮಾಡಬೇಕೆಂಬುದು ಒತ್ತಾಯವಾಗಿತ್ತು. ಆದರೆ ವಿಶ್ವ ಖ್ಯಾತಿ ಹೊಂದಿದ್ದ ವಜ್ರ ತರುವಲ್ಲಿ ವಿಫಲವಾಗಿದಕ್ಕೆ ಇತಿಹಾಸಕಾರರಾದ ಭಾಸ್ಕರರಾವ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ದಾಖಲೆ


ಇದನ್ನೂ ಓದಿ: King Charles: ಬ್ರಿಟನ್‌ ರಾಜನಾದ 3ನೇ ಚಾರ್ಲ್ಸ್ ಜೀವನ ಮುಂದೆ ಹೇಗಿರುತ್ತೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಯಾದಗಿರಿಯಿಂದ ಬ್ರಿಟನ್ ಸೇರಿದ್ದು ಹೇಗೆ?

ಬ್ರಿಟನ್ ರಾಣಿಯ ಕೀರಿಟದಲ್ಲಿ ಸಿಂಗಾರಗೊಂಡಿರುವ ಕೊಹಿನೂರು ವಜ್ರ ಸಿಕ್ಕಿದ್ದು ಕರ್ನಾಟಕದ ಗಿರಿ ನಾಡು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದಲ್ಲಿ.. 1656 ರಲ್ಲಿ ಈಗಿನ ಕೊಳ್ಳುರು ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ನದಿ ತೀರದಲ್ಲಿ ವಜ್ರದ ಗಣಿ ಇತ್ತಂತೆ. ಕೃಷ್ಣಾನದಿ ತೀರದಲ್ಲಿ ಈ ವಜ್ರ ಸಿಕ್ಕಿತ್ತು ಎನ್ನಲಾಗಿದ್ದು, ಹೈದರಾಬಾದ್ ಗೋಲಕುಂಡಾದ ಮಂತ್ರಿ ಮೀರ್ ಜುಮಲಾ ಗೋಲಕುಂಡಾದ ಸುಲ್ತಾನರಿಗೆ ಒಪ್ಪಿಸುತ್ತಾನಂತೆ. ಸುಲ್ತಾನನು ದೆಹಲಿಯ ದೊರೆ ಶಹಾಜಾನನಿಗೆ ಕಾಣಿಕೆಯಾಗಿ ಸಲ್ಲಿಸುತ್ತಾರೆ.ಮಯೂರ ಸಿಂಹಾಸನದಲ್ಲಿದ್ದ ಕೊಹಿನೂರ್ ವಜ್ರ

ಶಹಾಜಾನ್ ತನ್ನ ಮಯೂರ ಸಿಂಹಾಸನದಲ್ಲಿ ವಜ್ರ ಅಳವಡಿಕೆ ಮಾಡುತ್ತಾರೆ. ನಂತರ ಪರ್ಸಿಯನ್ ದೊರೆ ನಾದರ್ ಷಾ   ದೆಹಲಿ ಮೇಲೆ ದಾಳಿ ಮಾಡಿ, ಮೊಘಲ ರಾಜ ಮಹ್ಮದ್ ಷಾ ಅವರನ್ನು ಸೋಲಿಸಿ, ನಗ ನಾಣ್ಯ ಲೂಟಿ ಮಾಡುತ್ತಾನಂತೆ ಆಗ ಸಿಂಹಾಸನದಲ್ಲಿ ವಜ್ರ ಕಂಡಿದ್ದ ನಾದರ್ ಷಾ ಇದನ್ನು ಕೊಹಿನೂರು ಎಂದು ಕೂಗುತ್ತಾನೆ. ಪರ್ಷಿಯನ್ ಕೊಹಿಹನೂರ್ ಕನ್ನಡ ಭಾಷೆಯಲ್ಲಿ ಇದನ್ನು ಬೆಳಕಿನ ಬೆಟ್ಟ ಎನ್ನಲಾಗಿದೆ..

ಕೃಷ್ಣಾ ನದಿಯ ಪ್ರದೇಶ


ರಾಜರಿಂದ ರಾಜರಿಗೆ ಹಸ್ತಾಂತರ

ಪಂಜಾಬ್ ರಾಜ ರಣಜೀತ್ ಸಿಂಗ್ ಅವರು ಪರ್ಶಿಯನ್ ದೊರೆಗಳ ರಕ್ಷಣೆ ಮಾಡುತ್ತಾನೆ. ಪಂಜಾಬ್ ದೊರೆ ಸಹಾಯ ಮಾಡಿದ ಹಿನ್ನಲೆ , ಪರ್ಶಿಯನ್ ದೊರೆಗಳು, ಪಂಜಾಬ್ ರಾಜ್ಯ ರಣಜೀತ್ ಸಿಂಗ್ ಗೆ ಕೊಹಿನೂರು ವಜ್ರ ನೀಡುತ್ತಾರೆ. ಕೊಹಿನೂರು ವಜ್ರವು ರಣಜೀತ್ ಸಿಂಗ್ ರಕ್ಷಣೆ ಮಾಡಿ ಖಜಾನೆಯಲ್ಲಿ ಸಂಗ್ರಹ ಮಾಡಿ ಇಟ್ಟಿದ್ದರು. ಬಳಿಕ 1799 ರಲ್ಲಿ ಬ್ರಿಟಿಷ್ ಕ್ಯಾಪ್ಟನ್ ಲಾರೆನ್ಸ್ ಪಂಜಾಬ್ ಗೆದ್ದ ನಂತರ ಖಜಾನೆಯಲ್ಲಿದ್ದ ವಜ್ರವು ಬ್ರಿಟಿಷ್ ರು ದೋಚಿ ಕೊಂಡು ಹೋಗುತ್ತಾರಂತೆ. ರಾಣಿ ವಿಕ್ಟೋರಿಯಾ ಬ್ರೂಚ್ ರವರು ಕಿರೀಟ ಧರಿಸುತ್ತಾರೆ. ಮಹಿಳೆಯರು ಮಾತ್ರ ಧರಿಸಬೇಕೆಂದು ಆದೇಶ ಮಾಡಿದ್ದ ಹಿನ್ನಲೆ, ನಂತರ ಬಂದ ರಾಣಿ ಎಲಿಜಬೆತ್ ವಜ್ರ ಕಿರೀಟ ಧರಿಸುತ್ತಾರೆ.

ಕೊಹಿನೂರ್ ವಜ್ರದ ಬಗ್ಗೆ ಚರ್ಚೆ

ರಾಣಿ ನಿಧನ ಬಳಿಕ ದೇಶದಲ್ಲಿ ಮತ್ತೆ ಕೋಹಿನೂರ್ ವಜ್ರದ ವಿಷಯ ಹೆಚ್ಚಾಗಿ ಚರ್ಚೆಯಾಗುತ್ತಿದೆ. ರಾಣಿಯ ಕಿರಿಟದಲ್ಲಿರುವ ಕೊಹಿನೂರು ವಜ್ರವು ಯಾದಗಿರಿ ಜಿಲ್ಲೆಗೆ ಸೇರಿದ್ದು ಎಂದು ಸಂಸದ ಜಿ.ಸಿ. ಚಂದ್ರಶೇಖರ ಅವರು, ಸಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದಾರೆ. ಬ್ರಿಟನ್ ರಾಣಿ ನಿಧನಕ್ಕೂ ಎರಡು ದಿನದ ಮುನ್ನ ಮಾಡಿರುವ ಈ ಪೋಸ್ಟ್ ಈಗ ಹೆಚ್ಚಾಗಿ ಮತ್ತೆ ಚರ್ಚೆಯಾಗುತ್ತಿದೆ.. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ನಮ್ಮ ಸ್ವತ್ತನ್ನು ನಮ್ಮ ದೇಶಕ್ಕೆ ತರುವ ಪ್ರಯತ್ನ ಈಗಲಾದ್ರು ಮಾಡಬೇಕು.

ಆಂಧ್ರದ ವೆಬ್‌ನಿಂದ ಗೊಂದಲ

ಮತ್ತೊಂದೆಡೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಸಿಕ್ಕಿದ್ದು ಅಂತಾ ವೆಬ್ ಸೈಟ್ ಗಳಲ್ಲಿ ಸ್ವಲ್ಪ ಗೊಂದಲ ಸೃಷ್ಟೀಸುತ್ತಿವೆ. ಟನ್ ಅಧಿಕಾರಿ ರಾಬರ್ಟ ಸಿವಿಲ್ ಅವರು (ಮರೆತು ಹೋದ ಸಾಮ್ರಾಜ್ಯ ( Forgotten Empire ) ಬರೆದ  ಪುಸ್ತಕದಲ್ಲಿ ಕೊಹಿನೂರು ವಜ್ರ ಕೃಷ್ಣಾ ನದಿ ತೀರದಲ್ಲಿಯೇ ಸಿಕ್ಕಿದೆ ಎಂದು  ಪುಸ್ತಕದಲ್ಲಿ ಉಲ್ಲೇಖ ಮಾಡುತ್ತಾರೆ. ಅದೆ ರೀತಿ ವಿಲಿಯಂ ಡಾರ್ಲ ಪ್ಲೆ ಹಾಗೂ ಅನಿತಾ ಆನಂದ ಲೇಖಕರು ಬರೆದ ಕೊಹಿನೂರು ಪುಸ್ತಕದಲ್ಲಿ ಕೂಡ ಕೊಹಿನೂರು ವಜ್ರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಕೊಹಿನೂರು ವಜ್ರವು ಕರ್ನಾಟಕದ ಕೊಳ್ಳುರಿನದ್ದು ಎಂದು ಬರೆಯಲಾಗಿದೆ. ಹಲವು ಪುಸ್ತಕದಲ್ಲಿ ಕೂಡ ಕೊಳ್ಳುರು ಗ್ರಾಮದ ಕೃಷ್ಣಾ ನದಿ ತೀರದಲ್ಲಿಯೇ ವಜ್ರ ಸಿಕ್ಕಿದೆ ಎಂದು ಬರೆಯಲಾಗಿದೆ .ಹೀಗಾಗಿ, ಯಾದಗಿರಿಯ ಕೊಳ್ಳುರುನ ಕೊಹಿನೂರು ವಜ್ರ ಇದಾಗಿದೆ ಎಂದು ದಾಖಲೆಗಳಿಂದ ಗೊತ್ತಾಗುತ್ತದೆ.

ಇದನ್ನೂ ಓದಿ: Britain Royal Family: ಬ್ರಿಟನ್ ರಾಜಮನೆತನದ ಕಥೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ರಾಯಲ್ ಕಹಾನಿ

ಅದೇನೇ ಇರಲಿ ಕರ್ನಾಟಕದ್ದೇ ಡೈಮೆಂಡ್ ಎನ್ನುವುಕ್ಕೆ ರಾಜ್ಯದಲ್ಲಿ ಸಾಕಷ್ಟ ಪುರಾವೆಗಳು ಇವೆ. ಇತಿಹಾಸ ಕಾರರು ಕೂಡ ಕೊಳ್ಳುರು ಗ್ರಾಮದಲ್ಲಿರುವ ಕೃಷ್ಣಾ ನದಿ ತೀರದಲ್ಲಿಯೇ ವಜ್ರದ ಗಣಿಗಾರಿಕೆ ಮಾಡಲಾಗಿತ್ತು. ಕೊಹಿನೂರು ವಜ್ರವು ಯಾದಗಿರಿ ಜಿಲ್ಲೆಯದ್ದು ಎಂಬುದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯ ತರುವ ವಿಷಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊಹಿನೂರು ವಜ್ರವನ್ನು ಭಾರತಕ್ಕೆ ಮರಳಿ ತರುವ ಕೆಲಸ ಮಾಡಬೇಕಿದೆ ಎನ್ನುವುದು ಜನರ ಆಗ್ರಹ.
Published by:Annappa Achari
First published: