Explained: ಹೆಂಡತಿ ಅತಿಥಿಗಳ ಜೊತೆ ಮಲಗಬೇಕು! Himba ಸಂಸ್ಕೃತಿಯಲ್ಲಿ ಈ ಆಚರಣೆ ಇರೋದೇಕೆ?

Himba Culture: ನಮೀಬಿಯಾದಲ್ಲಿ ಅತ್ಯಂತ ಬಿಸಿಯಾದ ವಾತಾವರಣವಿದೆ. ಶುಷ್ಕ ವಾತಾವರಣದಿಂದಾಗಿ ಪುರುಷರು ಮತ್ತು ಮಹಿಳೆಯರು ಅರೆಬೆತ್ತಲೆಯಾಗಿ ಸಂಚರಿಸುತ್ತಾರೆ.

ಹಿಂಬಾ ಸಂಸ್ಕೃತಿಯ ಮಹಿಳೆ

ಹಿಂಬಾ ಸಂಸ್ಕೃತಿಯ ಮಹಿಳೆ

  • Share this:
ಅತಿಥಿಗಳು ಮನೆಗೆ ಬಂದಾಗ ಅವರನ್ನು ಸ್ವಾಗತಿಸುವುದು, ಸತ್ಕರಿಸುವುದು ನಮ್ಮ ಸಂಸ್ಕೃತಿಯ ಬಹುಮುಖ್ಯ ಭಾಗ.  ಅತಿಥಿಗಳಿಗೆ ಭರ್ಜರಿ ಭೋಜನ, ಮಲಗಲು ಮನೆಯಲ್ಲಿ ಉತ್ತಮ ಕೊಠಡಿ ಸೇರಿದಂತೆ ಎಲ್ಲವನ್ನೂ ಖುಷಿಖುಷಿಯಿಂದ ಸಿದ್ಧಪಡಿಸುತ್ತೇವೆ. ಆದರೆ ಆಫ್ರಿಕಾದ ದಕ್ಷಿಣದಲ್ಲಿರುವ (South Africa) ನಮೀಬಿಯಾದ ಬುಡಕಟ್ಟು (Namibia Tribes) ಸಮುದಾಯವೊಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅತಿಥಿಗಳಿಗೆ (Guest) ತಮ್ಮ ಹೆಂಡತಿಯನ್ನು ಬಿಟ್ಟುಕೊಡುತ್ತಾರೆ!  ಅತಿಥಿಗಳು ಮಲಗುವ ಕೋಣೆಗೆ ಹೆಂಡತಿಯನ್ನು ಕಳಿಸಿ ಬೇರೊಂದು ಕೋಣೆಯಲ್ಲಿ ಪತಿರಾಯ ಮಲಗುತ್ತಾನೆ. ಈಗಲೂ ಈ ಆಚರಣೆಯನ್ನು ಪಾಲಿಸುತ್ತಿವೆ ಹಿಂಬಾ ಸಂಸ್ಕೃತಿಯನ್ನು (Himba Culture) ಅನುಸರಿಸುವ ಓವಹಿಂಬಾ ಮತ್ತು ಓವಜಿಂಬಾ ಬುಡಕಟ್ಟು ಸಮುದಾಯಗಳು. (Ovahimba And Ovazimba Tribes.) 

ಈ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರ ಅಭಿಪ್ರಾಯಗಳಿಗೆ ಕಿಮ್ಮತ್ತೇ ಇಲ್ಲವಂತೆ. ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಬಿಡಿ, ಚಿಕ್ಕ ಪುಟ್ಟ ವಿಷಯಗಳಲ್ಲೂ ಮಹಿಳೆಯರ ಮಾತನ್ನು ಕಿವಿಗೆ ಹಾಕಿಕೊಳ್ಳುವ ರೂಢಿಯೇ ಇವರಿಗಿಲ್ಲ. ಮಹಿಳೆಯರು ಮನೆಯ ಕೆಲಸ ಕಾರ್ಯಗಳಿಗಷ್ಟೇ ಸೀಮಿತವಾಗಿ ಈಗಲೂ ಜೀವಿಸುತ್ತಿದ್ದಾರೆ. ಅವರು ಹಸುಗಳಿಗೆ ಹಾಲುಣಿಸುವುದು, ಮಕ್ಕಳನ್ನು ನೋಡಿಕೊಳ್ಳುವುದು ಮೊದಲಾದ ಕೆಲಸಗಳಿಗೆ ಸೀಮಿತವಾಗಿದ್ದಾರೆ. ಪುರುಷರು ಹಗಲಿನಲ್ಲಿ ಬೇಟೆಗೆ ತೆರಳುತ್ತಾರೆ.

ಏನಿದು ಆಚರಣೆ?
ಈ ಬುಡಕಟ್ಟು ಜನಾಂಗದವರ ಮನೆಗೆ ಯಾರೇ ಅತಿಥಿಗಳು ಬಂದರೂ ಅವರನ್ನು ಅತ್ಯಂತ ಆದರವಾಗಿ ನಡೆಸಿಕೊಳ್ಳಲಾಗುತ್ತದೆ. ಎಷ್ಟು ಆದರ ಎಂದರೆ ನಾಗರಿಕ ಸಮಾಜ ಖಂಡಿತ ಇಂತಹ ಆಚರಣೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಅತಿಥಿಗಳನ್ನು ಸತ್ಕರಿಸಲೆಂದು ಅತಿಥಿಯ ಕೋಣೆಗೆ ಮನೆಯ ಯಜಮಾನ ತನ್ನ ಹೆಂಡತಿಯನ್ನು ಕಳಿಸುತ್ತಾನೆ.

ತಾನು ಬೇರೆ ಕೋಣೆಯಲ್ಲಿ ಮಲಗುತ್ತಾನೆ. ಒಂದುವೇಳೆ ಮನೆಯಲ್ಲಿ ಒಂದೇ ಕೋಣೆಯಿದ್ದರೆ ಅತಿಥಿ ಮತ್ತು ತನ್ನ ಹೆಂಡತಿಗೆ ಕೋಣೆಯನ್ನು ಬಿಟ್ಟುಕೊಟ್ಟು ತಾನು ಮನೆಯ ಹೊರಗೆ ರಾತ್ರಿ ಕಳೆಯುತ್ತಾನಂತೆ.

ಈ ಸಂಪ್ರದಾಯಕ್ಕೆ ಕಾರಣವೇನು?
ಹಿಂಬಾ ಸಂಪ್ರದಾಯದಲ್ಲಿ ಹೀಗೆ ಪತ್ನಿಯನ್ನು ಅತಿಥಿಗೆ ಹಸ್ತಾಂತರಿಸುವ ಸಂಪ್ರದಾಯಕ್ಕೂ ಕೆಲವು ಕಾರಣ ನೀಡಲಾಗಿದೆ. ಅತಿಥಿಗಳ ಕೋಣೆಗೆ ಹೆಂಡತಿಯನ್ನು ಕಳಿಸುವುದರಿಂದ ಅಸೂಯೆ ಕಡಿಮೆಯಾಗುತ್ತದೆ. ಅಲ್ಲದೇ ಸಂಬಂಧಗಳು ಬೆಳೆಯುತ್ತವೆ ಎಂದು ಈ ಆಚರಣೆ ರೂಢಿಯಲ್ಲಿದೆಯಂತೆ.

ಈ ಬುಡಕಟ್ಟು ಜನಾಂಗಗಳಲ್ಲಿ ಈಗಲೂ ಬಹು ಪತ್ನಿತ್ವ ಪದ್ಧತಿ ಆಚರಣೆಯಲ್ಲಿದೆ. ಹಿಂಬಾ ಹುಡುಗಿಯರು ಪ್ರೌಢಾವಸ್ಥೆಗೆ ಬಂದ ನಂತರ ಅವರ ತಂದೆ ಆಯ್ಕೆ ಮಾಡಿದ ಪುರುಷನನ್ನು ಬಾಲಕಿಯರು ಮದುವೆಯಾಗುತ್ತಾರೆ.

ಇದನ್ನೂ ಓದಿ: Explained: ಯಾವ್ಯಾವ ಧರ್ಮದಲ್ಲಿ ಮಹಿಳೆಯರಿಗೆ ಏನೇನು ಹಕ್ಕುಗಳಿವೆ?

ಈ ಜನಾಂಗ ನಮೀಬಿಯಾದ ಕುನೆನ್ ಪ್ರದೇಶದಲ್ಲಿ ವಾಸಿಸುತ್ತದೆ. ಪುರುಷರಿಗೆ ಕೃಷಿ ಮತ್ತು ಪಶುಪಾಲನೆಯಲ್ಲಿ ತರಬೇತಿ ನೀಡಲಾಗುತ್ತದೆ. ಇವರ ಪಾಲಿಗೆ ದನಕರುಗಳೇ ಕರೆನ್ಸಿ! ಕುಟುಂಬವೊಂದರ ಶ್ರೀಮಂತಿಕೆ ಆಯಾ ಕುಟುಂಬ ಹೊಂದಿರುವ ಜಾನುವಾರುಗಳ ಸಂಖ್ಯೆಯಿಂದ ನಿರ್ಧಾರವಾಗುತ್ತದೆ.

ನೀರಿನ ಸ್ನಾನವೇ ಇಲ್ಲ!
ನಮೀಬಿಯಾದಲ್ಲಿ ಅತ್ಯಂತ ಬಿಸಿಯಾದ ವಾತಾವರಣವಿದೆ. ಶುಷ್ಕ ವಾತಾವರಣದಿಂದಾಗಿ ಪುರುಷರು ಮತ್ತು ಮಹಿಳೆಯರು ಅರೆಬೆತ್ತಲೆಯಾಗಿ ಸಂಚರಿಸುತ್ತಾರೆ. ಒಣ ಹವೆಯಿಂದಾಗಿ ಇಲ್ಲಿ ನೀರು ಸಿಗುವುದೇ ಕಷ್ಟ.

ಚರ್ಮಕ್ಕೆ ಬಣ್ಣ ಬರಲು ಪೇಸ್ಟ್!
ಅಂದಹಾಗೆ ಇನ್ನೂ ಒಂದು ವಿಚಿತ್ರ ಸಂಪ್ರದಾಯ ಈ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿದೆ. ಈ ಸಮುದಾಯಗಳಲ್ಲಿ ಸ್ನಾನವನ್ನು ನಿಷೇಧಿಸಲಾಗಿದೆ! ಸ್ನಾನ ಮಾಡುವ ಬದಲು ಮಹಿಳೆಯರು ಹೊಗೆ ಸ್ನಾನ ಮಾಡುತ್ತಾರೆ. ತಮ್ಮ ಚರ್ಮದ ಮೇಲೆ ಆರೊಮ್ಯಾಟಿಕ್ ರಾಳವನ್ನು ಬಳಿದುಕೊಳ್ಳುತ್ತಾರೆ. ಈ ಪೇಸ್ಟ್ ಚರ್ಮಕ್ಕೆ ಕೆಂಪು-ಕಂದು ಬಣ್ಣವನ್ನು ನೀಡುತ್ತದೆ. ಸಮುದಾಯದ ಜನರು ಕೆಂಪು ಬಣ್ಣವು ಭೂಮಿ ಮತ್ತು ರಕ್ತವನ್ನು ಸೂಚಿಸುತ್ತದೆ ಎಂದು ನಂಬುತ್ತಾರೆ.

ಹೊಗೆ ಸ್ನಾನದಿಂದ ಪ್ರಯೋಜನವುಂಟು!
ಹೀಗೆ ಹೊಗೆ ಸ್ನಾನದ ನಂತರ ಬಳಿದುಕೊಳ್ಳುವ ಪೇಸ್ಟ್ ಒಂದು ಅವರನ್ನು ಬಿರುಬಿಸಿಲಿನ ಮರುಭೂಮಿಯಲ್ಲಿ ಸೂರ್ಯನ ಕಟುವಾದ ಶಾಖ ಮತ್ತು ಕೀಟಗಳ ಕಡಿತದಿಂದ ಚರ್ಮವನ್ನು ರಕ್ಷಿಸುತ್ತದೆ.

ಇದನ್ನೂ ಓದಿ; Explained: ಊಟಕ್ಕೂ ಗತಿಯಿಲ್ಲದೇ ಹಸಿವಿನಿಂದ ಮಲಗುವ ದಿನಗಳು ಬರಲಿವೆಯೇ?

1990 ರಲ್ಲಿ ನಮೀಬಿಯಾವು ಸ್ವತಂತ್ರ ದೇಶವಾಯಿತು. ಅದರ ನಂತರ ಈ ಜನಾಂಗವು ಸಮಾಜದ ಮುಖ್ಯವಾಹಿನಿಗೆ ತೆರದುಕೊಳ್ಳಲು ಆರಂಭಿಸಿತು. ಆದರೆ ಇನ್ನೂ ಹಲವು ಆಚರಣೆಗಳು ನಾಗರಿಕ ಸಮಾಜದಿಂದ ಈ ಬುಡಕಟ್ಟು ಜನಾಂವನ್ನು ದೂರವೇ ಇರಿಸಿವೆ.
Published by:guruganesh bhat
First published: