• Home
 • »
 • News
 • »
 • explained
 • »
 • Explained: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ವಿಷಯವಾಗುವುದೇ Hijab ವಿವಾದ?

Explained: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ವಿಷಯವಾಗುವುದೇ Hijab ವಿವಾದ?

ಉಡುಪಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಕಾರಣಕ್ಕೆ ಪರೀಕ್ಷೆ ಬರೆದಿಲ್ಲ. ಉಳಿದಂತೆ ರಾಜ್ಯದಲ್ಲಿ ಹಿಜಾಬ್ ಕಾರಣಕ್ಕೆ ಗೈರಾಗಿರುವ ವಿಷಯ ಗಮನಕ್ಕೆ ಬಂದಿಲ್ಲ. ನಾನಾ ಕಾರಣಗಳಿಗೆ ಪರೀಕ್ಷೆಗೆ ಗೈರಾಗಿರಬಹುದು ಎಂದು ಪಿಯು ಬೋರ್ಡ್ ನಿರ್ದೇಶಕ ಆರ್ ರಾಮಚಂದ್ರನ್ ಹೇಳಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

ಉಡುಪಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಕಾರಣಕ್ಕೆ ಪರೀಕ್ಷೆ ಬರೆದಿಲ್ಲ. ಉಳಿದಂತೆ ರಾಜ್ಯದಲ್ಲಿ ಹಿಜಾಬ್ ಕಾರಣಕ್ಕೆ ಗೈರಾಗಿರುವ ವಿಷಯ ಗಮನಕ್ಕೆ ಬಂದಿಲ್ಲ. ನಾನಾ ಕಾರಣಗಳಿಗೆ ಪರೀಕ್ಷೆಗೆ ಗೈರಾಗಿರಬಹುದು ಎಂದು ಪಿಯು ಬೋರ್ಡ್ ನಿರ್ದೇಶಕ ಆರ್ ರಾಮಚಂದ್ರನ್ ಹೇಳಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

ಹಿಜಾಬ್ ಅಥವಾ ಇತರೇ ಧಾರ್ಮಿಕ ಸಂಬಂಧಿ ಪ್ರತಿಭಟನೆಗಳು ಹಿಂಸಾಚಾರದ ಜೊತೆಗೆ ರಾಜಕೀಯ ಸಂಘರ್ಷಗಳ ಕೇಂದ್ರಗಳಾಗಿ ಮಾರ್ಪಟ್ಟಿರುವುದಿಂದ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಭಾಗದ ಜನರು, ಹಿಜಾಬ್‌ ವಿರುದ್ಧದ ಹೋರಾಟ ರಾಜಕೀಯ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ ಎಂದು ಭಾವಿಸಿದ್ದಾರೆ.

ಮುಂದೆ ಓದಿ ...
 • Share this:

  ದೇಶದಲ್ಲೆಡೆ ದೊಡ್ಡಮಟ್ಟದ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್‌ ವಿವಾದ (Hijab Controversy) ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ (High Court) ತೀರ್ಪು (Judgment) ನೀಡಿರುವ ನಡುವೆಯೂ ಬೂದಿ ಮುಚ್ಚಿದ ಕೆಂಡದಂತಿರುವ ಈ ವಿಷಯ ಮುಂಬರುವ 2023ರ ಕರ್ನಾಟಕ (Karnataka) ವಿಧಾನಸಭಾ ಚುನಾವಣೆಯ (Assembly Election) ಮೇಲೆ ಪ್ರಭಾವ ಬೀರಲಿದೆಯೇ..? ಎಂಬ ಪ್ರಶ್ನೆ ಮೂಡಿದೆ. ರಾಜ್ಯದಲ್ಲಿ ಹಿಜಾಬ್‌ ವಿವಾದ ತಾರಕಕ್ಕೇರುತ್ತಿದ್ದಂತೆ ಹಲವು ಕಾಲೇಜುಗಳಲ್ಲಿ ಪ್ರತಿಭಟನೆ, ಹಿಂಸಾಚಾರದ ಜೊತೆಗೆ ರಾಜಕೀಯ ಸಂಘರ್ಷಗಳ ಕೇಂದ್ರಗಳಾಗಿ ಮಾರ್ಪಟ್ಟಿರುವುದಿಂದ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಭಾಗದ ಜನರು, ಹಿಜಾಬ್‌ ವಿರುದ್ಧದ ಹೋರಾಟ ರಾಜಕೀಯ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ ಎಂದು ಭಾವಿಸಿದ್ದಾರೆ.


   ಹಿಜಾಬ್ ಕುರಿತು ಹೈಕೋರ್ಟ್ ಹೇಳಿದ್ದೇನು?


  ಹಿಬಾಜ್ ಕುರಿತ ಸುದೀರ್ಘ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ, ನಿನ್ನೆಯಷ್ಟೇ ಮಹತ್ವದ ತೀರ್ಪು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ ಅವರ ಪೂರ್ಣ ಪೀಠ ತೀರ್ಪು ನೀಡಿತ್ತು. ಹಿಜಾಬ್ ಧರಿಸೋದು ಇಸ್ಲಾಂನ ಅತ್ಯಗತ್ಯ ಭಾಗವೂ ಅಲ್ಲ. ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ (Karnataka High court) ಎತ್ತಿ ಹಿಡಿದಿತ್ತು.


  ಹಿಜಾಬ್ ಕುರಿತ ಸಲ್ಲಿಸಿದ್ದ ಅರ್ಜಿಗಳ ವಜಾ


  ಸಮವಸ್ತ್ರ ಕಡ್ಡಾಯವಾಗಿರುವ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಇಲ್ಲ. ಹಿಜಾಬ್ ಪರವಾಗಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿತ್ತು. ಸರ್ಕಾರ ನೀಡಿದ ಆದೇಶ ಕಾನೂನುಬದ್ಧವಾಗಿದೆ ಎಂದು ಹೇಳಿತ್ತು.  ನ್ಯಾಯಾಲಯ ಒಟ್ಟು 129 ಪುಟಗಳ ತೀರ್ಪು ಪ್ರಕಟಿಸಿತ್ತು.


  ಇದನ್ನೂ ಓದಿ: Explained: 'The Kashmir Files' ಸಿನಿಮಾದಲ್ಲಿ ತೋರಿಸಿದ್ದು ಟ್ರೇಲರ್ ಅಷ್ಟೇ! ಕಾಶ್ಮೀರಿ ಪಂಡಿತರ ಬದುಕಿನ ಕರಾಳ ಕಥೆ ಇಲ್ಲಿದೆ ಓದಿ


  ಚುನಾವಣೆಯ ಮುಖ್ಯ ವಿಷಯವಾಗುವುದೇ ಹಿಜಾಬ್


  ಪ್ರಮುಖ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಕಾಂಗ್ರೆಸ್‌ ಪಕ್ಷಗಳು, ಹಿಜಾಬ್‌ ವಿವಾದ ಮುಂಬರುವ ಚುನಾವಣೆಯ ಮೇಲೆ ಸಣ್ಣಮಟ್ಟದ ಪ್ರಭಾವ ಬೀರುವುದಿಲ್ಲ ಎಂದು ಹೇಳುತ್ತಿವೆ. ಆದರೆ ಈ ವಿಷಯದ ಕುರಿತು ಮಾತನಾಡಿರುವ ಕರಾವಳಿ ಕರ್ನಾಟಕ ಪ್ರದೇಶದ ಹಲವು ರಾಜಕೀಯ ನಾಯಕರು, ಹಿಜಾಬ್‌ ಹಾಗೂ ಕೇಸರಿ ಶಾಲು ಧರಿಸುವ ವಿಷಯದ ಕುರಿತು ನಡೆಯುತ್ತಿರುವ ವಿವಾದ ಬಿಜೆಪಿ ಮತ್ತು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜಕೀಯ ವಿಭಾಗವಾದ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ನಡುವಿನ ಕದನದ ಭಾಗವಾಗಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.


  ಸಿಎಫ್‌ಐ-ಬಿಜೆಪಿ ಸಂಘರ್ಷ


  ವಾಸ್ತವವಾಗಿ ಕಳೆದ ಕೆಲವು ವರ್ಷಗಳಿಂದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ) ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತೀವ್ರವಾಗಿದೆ. ಜನರ ಭಾವನಾತ್ಮಕ ವಿಷಯಗಳ ವಿಚಾರದಲ್ಲಿ ಎಸ್‌ಡಿಪಿಐ ಸಹ ಸಕ್ರಿಯವಾಗಿ ತೊಡಗಿದ್ದು, ಇತ್ತೀಚಿನ ದಿನಗಳಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಎಸ್‌ಡಿಪಿಐ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಉಡುಪಿ ಕಾಲೇಜಿನ ವಿದ್ಯಾರ್ಥಿ ಮುಖಂಡರೊಬ್ಬರು ತಿಳಿಸಿದ್ದಾರೆ.


  ಹಿಜಾಬ್‌ ವಿವಾದ ಸಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ಒಗ್ಗೂಡಿಸುವ ಜೊತೆಗೆ ವಿವಾದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ 6 ಮಂದಿಗೆ ಸಲಹೆ ಸಹ ನೀಡುತ್ತಿದೆ. ಮತ್ತೊಂದೆಡೆ ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ಮತ್ತು ಬಿಜೆಪಿ ಯುವ ಮೋರ್ಚಾವನ್ನ ಸಹ ಒಗ್ಗೂಡಿಸಿದೆ.


  ಕರಾವಳಿಯಲ್ಲಿ ಪ್ರಮುಖ ವಿಚಾರ ಆಗುವ ಸಾಧ್ಯತೆ


  ಪಕ್ಷದ ಸಿದ್ಧಾಂತಗಳ ಮೇಲೆ ಚುನಾವಣೆಗಳು ನಡೆದಿದ್ದು, ಇದು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಹೀಗಾಗಿ ಹಿಜಾಬ್‌ ವಿವಾದ ಮುಂದಿನ ಚುನಾವಣೆಯ ಭಾಗವಾಗುವುದು ಖಚಿತವಾಗಿ ಎಂದು ವಿದ್ಯಾರ್ಥಿ ಮುಖಂಡರೊಬ್ಬರು ತಿಳಿಸಿದ್ದಾರೆ.


  ಈ ಭಾಗದಲ್ಲಿ ರಾಜಕೀಯ ಪಕ್ಷಗಳ ಪ್ರಭಾವದ ಪ್ರಕಾರ 2018ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯ ಎಲ್ಲಾ ಐದು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಅಂತೆಯೇ ದಕ್ಷಿಣ ಕನ್ನಡದ 8 ಕ್ಷೇತ್ರಗಳಲ್ಲಿ ಬಿಜೆಪಿ 7 ಸ್ಥಾನ ಗೆದ್ದರೆ, ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು. ಆದರೆ ಹಿಂದಿನ ಅವಧಿಯಲ್ಲಿ ಉಡುಪಿಯಲ್ಲಿ ಕಾಂಗ್ರೆಸ್‌ ಮೂರು ಹಾಗೂ ದಕ್ಷಿಣ ಕನ್ನಡದಲ್ಲಿ 7 ಸ್ಥಾನವನ್ನು ಗೆದ್ದಿತ್ತು.


  ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳಿಗೆ ಮಾತ್ರ ಚುನಾವಣಾ ವಿಚಾರ


  ಇದೇ ವಿಷಯದ ಕುರಿತು ಮಾತನಾಡಿರುವ ಬಿಜೆಪಿ ಬಿಸಿಎಂ ಮೋರ್ಚಾದ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಯಶಪಾಲ್‌ ಸುವರ್ಣ, ''ಹಿಜಾಬ್‌ ವಿವಾದ ಮುಂದಿನ ಚುನಾವಣೆಯ ವಿಷಯವಾಗುವುದಿಲ್ಲ. ಕೇವಲ ಕಾಂಗ್ರೆಸ್‌, ಎಸ್‌ಡಿಪಿಐ ಹಾಗೂ ಸಿಎಫ್‌ಐ ಸಂಘಟನೆಗಳು ಇದನ್ನು ರಾಜಕೀಯ ವಿಷಯವಾಗಿಸಿವೆ.


  ಆದರೆ ಚುನಾವಣೆ ಸಂದರ್ಭದಲ್ಲಿ ಈ ವಿಷಯ ಯಾವ ರೀತಿ ಇರಲಿದೆ ಎಂದು ಹೇಳಲಾಗುವುದಿಲ್ಲ. ಕಾಲೇಜುಗಳಲ್ಲಿ ಎದ್ದಿರುವ ವಿವಾದದ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳದೆ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಸಹಕರಿಸಬೇಕು'' ಎಂದು ಹೇಳಿದರು.


  ನಿಧಿ ಸಂಗ್ರಹಕ್ಕಾಗಿ ಧರ್ಮಗಳ ಬಳಕೆ


  ದಕ್ಷಿಣ ಕನ್ನಡದಲ್ಲಿ ಪಿಎಫ್‌ಐ ಅಥವಾ ಎಸ್‌ಡಿಪಿಐ ಯಾವುದೇ ನೆಲೆ ಹೊಂದಿಲ್ಲ. ಹೀಗಾಗಿ ಈ ಎರಡು ಸಂಘಟನೆಗಳು ನಿಧಿ ಸಂಗ್ರಹಿಸಲು ಧರ್ಮವನ್ನು ಬಳಸಲು ಪ್ರಯತ್ನಿಸುತ್ತಿವೆ. ಅಲ್ಲದೆ ಹಿಜಾಬ್‌ ವಿವಾದದ ಭಾಗವಾಗಿರುವ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡದೆ ಅವರನ್ನು ಗುಲಾಮರನ್ನಾಗಿ ಇರಿಸಿಕೊಳ್ಳಲು ಬಯಸಲಾಗುತ್ತದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆದು ವಿದ್ಯಾವಂತರಾದರೆ, ಅವರು ಪುರುಷರನ್ನು ಪ್ರಶ್ನಿಸುತ್ತಾರೆ ಎಂದು ಯಶಪಾಲ್‌ ಸುವರ್ಣ ಹೇಳಿದ್ದಾರೆ.


  ಹಿಜಾಬ್ ವಿವಾದದಲ್ಲಿ ಹುಡುಗಿಯರು ಬಲಿ!


  ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಮಾತನಾಡಿ, ಹಿಜಾಬ್‌ ವಿಷಯಕ್ಕೆ ಯಾವುದೇ ಮಹತ್ವ ನೀಡಲು ನಮ್ಮ ಪಕ್ಷ ಬಯಸುವುದಿಲ್ಲ. ಈ ವಿಷಯದಲ್ಲಿ ನೂರಾರು ಜನರಿಗೆ ಸಮಸ್ಯೆ ಇರುವುದರಿಂದ ಸಾವಿರಾರು ಜನರು ಸಮಯ ಮತ್ತು ಶಿಕ್ಷಣವನ್ನು ಕಳೆದುಕೊಳ್ಳುತ್ತಿದ್ದಾರೆ.


  ಹಿಜಾಬ್‌ ಧರಿಸುವ ಹುಡುಗಿಯರ ಪೋಷಕರಿಗೆ ಅವರ ಮಕ್ಕಳ ಶಿಕ್ಷಣದ ಬಗ್ಗೆ ಗಮನವಹಿಸುವ ಜವಾಬ್ದಾರಿಯು ಇದೆ. ನ್ಯಾಯಾಲಯದಲ್ಲಿ ಹಿಜಾಬ್‌ ಅನ್ನು ನಿಷೇಧಿಸಿಲ್ಲ. ಆದರೆ ಪ್ರತಿಪಕ್ಷವು ಬೀಸುವ ಬಲೆಗೆ ಹಿಜಾಬ್‌ ವಿಷಯದಲ್ಲಿ ಪ್ರತಿಭಟನೆ ನಡೆಸುವ ಹುಡುಗಿಯರು ಬಲಿಯಾಗುತ್ತಿದ್ದಾರೆ ಎಂದರು.


  ಮುಂದಿವ ಚುನಾವಣೆ ಮೇಲೆ ಪ್ರಭಾವ ಬೀರಲಿದೆ


  ಸಿಎಫ್‌ಐ ಕಾರ್ಯದರ್ಶಿ ಸ್ವದಾಕತ್‌ ಶಾ ಮಾತನಾಡಿ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಮಾಡದ ಬಿಜೆಪಿ ತಮ್ಮ ವೋಟ್‌ ಬ್ಯಾಂಕ್‌ ಧ್ರುವೀಕರಣಕ್ಕೆ ಬಯಸಿದೆ. ರಾಜ್ಯದ ಜನರು ಇದನ್ನು ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಈ ವಿಷಯ ಪ್ರಭಾವ ಬೀರಲಿದೆ ಎಂದಿದ್ದಾರೆ.


  ರಾಜಕೀಯ ವಿಶ್ಲೇಷಕರು ಏನಂತಾರೆ..?


  ಈ ಎಲ್ಲಾ ವಿಷಯದ ಕುರಿತು ಪ್ರತಿಕ್ರಿಯಿಸಿರುವ ರಾಜಕೀಯ ವಿಶ್ಲೇಷಕ, ಪ್ರೊ. ಚಂಬಿ ಪುರಾಣಿಕ್‌, ಕೋಮು ಸಮಸ್ಯೆಯನ್ನು ಪ್ರಜಾಸತ್ತಾತ್ಮಕವಾಗಿ ಹೇಗೆ ಪರಿಹರಿಸಲಿದೆ ಎಂಬುದನ್ನು ತೋರಿಸಲು ಬಿಜೆಪಿ ಈ ವಿಷಯವನ್ನು ಚುನಾವಣೆಯ ಅಸ್ತ್ರವಾಗಿ ಬಳಸಿಕೊಳ್ಳಬಹುದು. ಆದರೆ ರಾಜ್ಯದ ಜನರು ಮೂರ್ಖರಲ್ಲ, ಎಲ್ಲಾ ಸಮಸ್ಯೆಗಳು ಮತ್ತು ರಾಜಕೀಯ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.


  ಇದನ್ನೂ ಓದಿ: Explained: ಯುದ್ಧದಾಹಿ ರಷ್ಯಾಕ್ಕಿಲ್ಲ 'ನೆಚ್ಚಿನ ರಾಷ್ಟ್ರ'ದ ಸ್ಥಾನಮಾನ! ಇದರಿಂದ ಲಾಭವೋ? ನಷ್ಟವೋ?


  ರಾಜಕೀಯ ತಜ್ಞ ಪ್ರೊ. ಮುಜಾಫರ್‌ ಅಸ್ಸಾದಿ ಮಾತನಾಡಿ, ಕರ್ನಾಟಕದ ಹಿಜಾಬ್‌ ವಿವಾದ ಮುಂದಿನ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಹಿಜಾಬ್‌ ವಿವಾದ, ಕಾಶ್ಮೀರ್‌ ಫೈಲ್ಸ್‌ ಹಾಗೂ ಯುಪಿ ಚುನಾವಣೆ ರಾಜಕೀಯ ವಿಷಯಗಳಾಗಿ ಮುಂದಿನ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ ಎನ್ನುತ್ತಾರೆ.

  Published by:Annappa Achari
  First published: