Operation Cheetah: ಕುಂದಾನಗರಿಯಲ್ಲಿ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಯ್ತಾ ಚಿರತೆ? ರೋಚಕ ಆಪರೇಷನ್ ಸ್ಟೋರಿ ಇಲ್ಲಿದೆ

ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರು ಸೆರೆ ಆಗಲಿಲ್ಲ ಚಾಲಕಿ ಚಿರತೆ. ಚಿರತೆ ಪ್ರತ್ಯಕ್ಷವಾದ ದಿನದಿಂದ ಹಿಡಿದು ಕೊನೆಯ ದಿನ ಕಾರ್ಯಾಚರಣೆವರೆಗೆ ನಡೆದ ಎಲ್ಲಾ ಮಾಹಿತಿಗಳು ಒಳಗೊಂಡ ಸ್ಟೋರಿ ಇದು. ರೋಚಕವಾಗಿದೆ ಓದಿ ಆಪರೇಷನ್ ಚೀತಾ ಸ್ಟೋರಿ...

ಚಿರತೆ ಸೆರೆ ಹಿಡಿಯಲು ಆನೆಗಳಿಂದ ಆಪರೇಷನ್

ಚಿರತೆ ಸೆರೆ ಹಿಡಿಯಲು ಆನೆಗಳಿಂದ ಆಪರೇಷನ್

  • Share this:
ಬೆಳಗಾವಿ: ಕಾಡು ಪ್ರಾಣಿಗಳು (Wild Animals) ನಾಡಿಗೆ ಬರೋದು ಸಾಮಾನ್ಯವಾಗಿದ್ದು, ರಾಜ್ಯದ ಅನೇಕ ಕಡೆಗಳಲ್ಲಿ ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತವೆ. ಆದರೆ ಬೆಳಗಾವಿ ನಗರದಲ್ಲಿ (Belagavi City) ಬಂದಿದ್ದ ಚಿರತೆಯೊಂದು (Leopard) ಹಲವು ರೀತಿಯ ಚರ್ಚೆ, ಸಮಸ್ಯೆ, ವೈಫಲ್ಯತೆಯನ್ನು ತೋರಿಸಿಕೊಟ್ಟಿತು. ಬರೋಬ್ಬರಿ ಒಂದು ತಿಂಗಳ ಕಾಲ ಚಿರತೆ ನಗರದಲ್ಲಿ ವಾಸವಿತ್ತು, ಇದು ಜನರಲ್ಲಿ ಆತಂಕದ ಜೊತೆಗೆ ಸಮಸ್ಯೆಯನ್ನು (Problems) ಉಂಟು ಮಾಡಿತ್ತು. ಚಿರತೆ ಹಿಡಿಯಲು ಅರವಳಿಕೆ ತಜ್ಞರು (Acupuncturists), ಆನೆಗಳು (Elephant), ಹಂದಿ ಹಿಡಿಯುವರು, ಬೇಟೆ ನಾಯಿ ಬಳಸಲಾಗಿತ್ತು. ಅರಣ್ಯ ಇಲಾಖೆ (Forest Department) ಹಾಗೂ ಪೊಲೀಸ್ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರು ಸೆರೆ ಆಗಲಿಲ್ಲ ಚಾಲಕಿ ಚಿರತೆ. ಚಿರತೆ ಪ್ರತ್ಯಕ್ಷವಾದ ದಿನದಿಂದ ಹಿಡಿದು ಕೊನೆಯ ದಿನ ಕಾರ್ಯಾಚರಣೆ ವರೆಗೆ ನಡೆದ ಎಲ್ಲಾ ಮಾಹಿತಿಗಳು ಒಳಗೊಂಡ ಸ್ಟೋರಿ ಇದು.

ಆಗಸ್ಟ್ 5ರಂದು ಕಾರ್ಮಿಕನ ಮೇಲೆ ಚಿರತೆ ದಾಳಿ

ಆಗಷ್ಟ್ 5ರಂದು ಮುಂಜಾನೆ 11 ಗಂಟೆಯ ಸಮಯದಲ್ಲಿ ಬೆಳಗಾವಿ ನಗರದ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕ ಸಿದ್ದರಾಯಿ ಲಕ್ಷ್ಮಣ ಮಿರಜಕರ್ (38) ಎನ್ನುವ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿತ್ತು. ಈ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು, ಸಿದ್ದರಾಯಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆತನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಕಳುಹಿಸಲಾಯಿತು. ಆದರೇ ಸಿದ್ದರಾಯಿ ತಾಯಿಗೆ ಮಗನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ಕೇಳಿ ಹೃದಯಾಘದಿಂದ ಮೃತಪಟ್ಟರು.

ಸಿಸಿ ಕ್ಯಾಮೆರಾದಲ್ಲಿ ಸೆರೆಸಿಕ್ಕ ಚಿರತೆ


ಚಿರತೆಗಾಗಿ ಹುಡುಕಾಟ ಆರಂಭ

ಚಿರತೆ ಪತ್ತೆಗೆ ಅರಣ್ಯಾಧಿಕಾರಿಗಳು ಪ್ರಯತ್ನ ಆರಂಭಿಸಿದ್ರು. ಬಳಿಕ ಚಿರತೆ ಜಾಧವ ನಗರದಿಂದ ಗಾಲ್ಫ್ ಕ್ಲಬ್ ಹೋಗಿದೆ ಎನ್ನುವ ಮಾಹಿತಿ ಅರಣ್ಯಾಧಿಕಾರಿಗಳು ಖಚಿತ ಪಡಿಸಿದರು. ಅಂದರೇ ಜಿಲ್ಲಾಢಳಿತದಿಂದ ಜಾಧವ ನಗರ, ಬಾಕ್ಸೈಟ್ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಯಿತು.

ಗಾಲ್ಫ್‌ ಕ್ಲಬ್ ಪ್ರದೇಶದಲ್ಲಿ ಹುಡುಕಾಟ

250ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಇರೋ ಗಾಲ್ಫ್ ಕ್ಲಬ್ ನಲ್ಲಿ ನಗರದ ಪ್ರಮುಖ ಬಡಾವಣೆಗಳ ನೂರಾರು ಜನ ವಾಕಿಂಗ್ ಮಾಡೊದು ಸಾಮಾನ್ಯ., ಬೆಳಗ್ಗೆ ಇಲ್ಲಿನ ವಾತಾವರಣಕ್ಕೆ ಮನಸೊತ ಸಾವಿರಾರು ಜನ ವಾಕಿಂಗ್ ಬರುತ್ತಾರೆ. ಇನ್ನೂ ಅನೇಕರಿಗೆ ಗಾಲ್ಫ್ ಕ್ಲಬ್ ನಲ್ಲಿ ವಾಕಿಂಗ್ ಮಾಡದೇ ಇದ್ರೆ ಸಮಾಧಾನವೇ ಆಗಲ್ಲ. ಮಕ್ಕಳು, ಯುವಕರು, ವಯಸ್ಕರು ಎನ್ನುವ ಭೇದ ಇಲ್ಲದೇ ಇಲ್ಲಿ ವಾಯುವಿಹಾರ ಮಾಡುತ್ತಾರೆ. ರಕ್ಷಣಾ ಇಲಾಖೆಗೆ ಸೇರಿದ ಜಾಗದಲ್ಲಿ ಜನರಿಗೆ ಕೇವಲ ವಾಕಿಂಗ್ ಮಾತ್ರ ಅವಕಾಶವಿದೆ. ಇನ್ನೂ ರಕ್ಷಣಾ ಇಲಾಖೆಯ ಅನೇಕ ಹಿರಿಯ ಅಧಿಕಾರಿಗಳು ಇಲ್ಲಿ ಗಾಲ್ಫ್ ಆಟವಾಡುತ್ತಾರೆ. ಕ್ಲಬ್ ಬಹುತೇಕ ಪ್ರದೇಶ ದಟ್ಟ ಕಾಡಿನಂತೆ ಇದೆ. ಅನೇಕ ವರ್ಷಗಳಿಂದ ಇದು ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿ ಇರೋದ್ರಿಂದ ಇಲ್ಲಿ ಕಾಡು ಉಳಿದಿದೆ ಎನ್ನುವ ಅಭಿಪ್ರಾಯ ಸಹ ಇತ್ತು.

ಗಾಲ್ಫ್ ಕ್ಲಬ್‌ಗೆ ಜನರಿಗೆ ನಿರ್ಬಂಧ

ಜನರ ವಾಯುವಿಹಾರ ನೆಚ್ಚಿನ ತಾನವಾದ ಗಾಲ್ಫ್ ಕ್ಲಬ್ ಗೆ ಚಿರತೆ ಲಗ್ಗೆ ಇಟ್ಟಿತು. ಚಿರತೆ ಅಡಗಿ ಕುಳಿತುಕೊಳ್ಳಲು, ಜತೆಗೆ ಅದರ ಹೊಟ್ಟೆ ತುಂಬಿಸಲು ಅನೇಕ ಪ್ರಾಣಿ, ಪಕ್ಷಿಗಳು ಸಹ ಇಲ್ಲಿ ಇದ್ದವು.  ಗಾಲ್ಫ್ ಕ್ಲಬ್ ಗೆ ಚಿರತೆ ಪ್ರವೇಶ ಮಾಡುತ್ತಿದ್ದಂತೆ ಜಿಲ್ಲಾಡಳಿತ ಜನರಿಗೆ ವಾರ್ನಿಂಗ್ ನೀಡಿತು. ವಾಯು ವಿಹಾರ ನಿಲ್ಲಿಸುವಂತೆ  ಪೊಲೀಸ್ ಅಧಿಕಾರಿಗಳು ಸೂಚುನೆ ನೀಡಿದ್ರು. ಕ್ಲಬ್ ಕಡೆಗೆ ಓಡಾಡಲು ಜನ ಭಯಪಡುವಂತ ಸ್ಥಿತಿ ನಿರ್ಮಾಣವಾಯಿತು.

ಇದನ್ನೂ ಓದಿ: Explained: ಭಾರತದಲ್ಲಿ ಚಿರತೆಗಳು ಕಣ್ಮರೆಯಾಗುತ್ತಿವೆಯಾ? ಅವುಗಳ ಉಳಿವಿಗೆ ಸರ್ಕಾರ ಏನು ಮಾಡುತ್ತಿದೆ?

22 ಶಾಲೆಗಳಿಗೆ ರಜೆ ಘೋಷಣೆ

ಆಗಷ್ಟ್ 8 ರಂದುಗಾಲ್ಫ್ ಮೈದಾನದಲ್ಲಿ ಚಿರತೆ ಇರೋ ಅನುಮಾನಗಳು ಹೆಚ್ಚಾದವು, ಈ ಹಿನ್ನೆಲೆಯಲ್ಲಿ ಗಾಲ್ಫ್ ಕ್ಲಬ್ ಸುತ್ತಮುತ್ತಲಿನ 1 ಕಿಮೀ ವ್ಯಾಪ್ತಿಯ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಯಿತು.  ಕ್ಲಬ್ ಸುತ್ತಮುತ್ತಲಿನ ಜಾಧವ ನಗರ, ಹುನುಮಾನ ನಗರ, ಕುವೆಂಪು ನಗರ, ವಿಶ್ವೇಶ್ವರಯ್ಯ ನಗರ, ಸದಾಶಿವ ನಗರ, ಕ್ಯಾಂಪ್ ಪ್ರದೇಶದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಯಿತು. ಗಾಲ್ಫ್ ಕ್ಲಬ್ ನಲ್ಲಿ ಚಿರತೆ ಪತ್ತೆಗೆ 7 ಬೋನ್, 16 ಟ್ರ್ಯಾಪ್ ಕ್ಯಾಮರಾಗಳನ್ನು ಅಧಿಕಾರಿಗಳು ಅಳವಡಿಸಿದ್ರು. 50ಕ್ಕೂ ಹೆಚ್ಚು ಸಿಬ್ಬಂಧಿಯಿಂದ ಗಾಲ್ಫ್ ಕ್ಲಬ್ ನಲ್ಲಿ ಕಾರ್ಯಾಚರಣೆ ನಡೆಸಲು ಆರಂಭಿಸಿದರು.

ಕ್ಯಾಮೆರಾದಲ್ಲಿ ಪತ್ತೆ, ಎದುರು ಬಂದರೆ ನಾಪತ್ತೆ

ಅರಣ್ಯಾಧಿಕಾರಿಗಳ ಅನುಮಾನ ನಿಜವಾಗಿದ್ದು ಆಗಷ್ಟ್ 9ರಂದು ಟ್ರ್ಯಾಪ್ ಕ್ಯಾಮರಾದಲ್ಲಿ ಚಿರತೆ ಪತ್ತೆಯಾಗಿತ್ತು, ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಯಿತು. ಅರಣ್ಯ ಇಲಾಖೆಯಿಂದ ನಿರಂತರ ಶೋಧ ಕಾರ್ಯ ಆರಂಭಿಸಲಾಯಿತು. ಜತೆಗೆ ಬೆಳಗಾವಿ ಸಿಬ್ಬಂಧಿಯ ಜೊತೆಗೆ ಗದಗ, ದಾಂಡೇಲಿಯಿಂದ ಸಿಬ್ಬಂಧಿಯನ್ನು ಕರೆಸಲಾಯಿತು. ಆಗಷ್ಟ್ 12ರಂದು ಗಾಲ್ಫ್ ಕ್ಲಬ್ ನಲ್ಲಿ ಚಿರತೆ ಚಲನವಲನ ಸೆರೆ ಹಿಡಿಯಲು ಡ್ರೋನ್ ಕ್ಯಾಮರಾ ಬಳಸಲಾಯಿತು. ಕ್ಲಬ್ ಮೂರು ಕಡೆಗಳಲ್ಲಿ ಡ್ರೋನ್ ಹಾರಿಸಲಾಯಿತು. ಆದರೇ ದಟ್ಟ ಅರಣ್ಯ ಹಿನ್ನೆಲೆಯಲ್ಲಿ ಯಾವುದೇ ಪ್ರಯೋಜನ ಆಗಲಿಲ್ಲ.

ಷರತ್ತಿನೊಂದಿಗೆ ಶಾಲೆ ಆರಂಭ

ಚಿರತೆ ಭಯದ ನಡುವೆ ಬೆಳಗಾವಿ ಜಿಲ್ಲಾಡಳಿತ ಗಾಲ್ಫ್ ಕ್ಲಬ್ ಸುತ್ತಮುತ್ತಲಿನ ಒಂದು ಕಿ ಮೀ ವ್ಯಾಪ್ತಿಯ ಶಾಲೆಗಳನ್ನು ಆಗಷ್ಟ್ 16ರಂದು ಆರಂಭಿಸಲು ನಿರ್ಧರಿಸಿತು. ಮಕ್ಕಳ ಶೈಕ್ಷಣಿಕ ಪ್ರಗತಿಯ ದೃಷ್ಠಿಯಿಂದ ಹಲವು ಷರತ್ತುಗಳನ್ನು ವಿಧಿಸಿ 22 ಶಾಲೆಗಳನ್ನು ಆರಂಭಿಸಲು ಡಿಡಿಪಿಐ ಬಸವರಾಜ್ ನಾಲತವಾಡ್ ಆದೇಶ ನೀಡಿದ್ರು. ಹಲವು ಮುಂಜಾಗೃತ ಕ್ರಮ ವಹಿಸಲು ಪೋಷಕರು, ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡಲಾಯಿತು.

ಆಗಸ್ಟ್ 19ರಂದು ಬೃಹತ್ ಆಪರೇಷನ್

ಚಿರತೆ ಪತ್ತೆಗೆ ಆಗಷ್ಟ್ 19ರಂದು ಅರಣ್ಯ-  ಪೊಲೀಸ್ ಇಲಾಖೆಯಿಂದ ಬೃಹತ್ ಜಂಟಿ ಕಾರ್ಯಾಚರಣೆ ನಡೆಸಲಾಯಿತು.  100 ಜನ ಅರಣ್ಯ ಇಲಾಖೆ ಸಿಬ್ಬಂಧಿ, 100 ಜನ ಪೊಲೀಸ್ ಸಿಬ್ಬಂಧಿ ಜಂಟಿ ಕೊಂಬಿಂಗ್ ಮಾಡಿದ್ರು. ಇಬ್ಬರು ಅರವಳಿಕೆ ತಜ್ಞರು ಸಮೇತ ಕೊಯಿತಾ, ಬಡಿಗೆ, ಹೆಲ್ಮೆಟ್, ರಕ್ಷಣಾ ವಸ್ತುಗಳ ಸಮೇತೆ ಕ್ಲಬ್ ಪ್ರವೇಶ ಮಾಡಿ ಸತತ 2 ಗಂಟೆಗೂ ಹೆಚ್ಚು ಕಾಲ ಜಾಲಾಡಿದ್ರು ಯಾವುದೇ ಪ್ರಯೋಜನ ಆಗಲಿಲ್ಲ. ಎರಡು ದಿನ ಅರಣ್ಯ ಅಧಿಕಾರಿಗಳ ವಾಚ್ ಮಾಡಿದ್ರು ಚಿರತೆ ಹೆಜ್ಜೆ ಗುರುತು ಸಿಗಲಿಲ್ಲ. ಹೀಗಾಗಿ ಆಗಷ್ಟ್ 22ರಂದು ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಯಿತು. ಆದರೇ ಅಂದೇ ಚಿರತೆ ಬಹಿರಂಗವಾಗಿ ಪ್ರತ್ಯಕ್ಷಗೊಂಡು ಆತಂಕ ಸೃಷ್ಠಿಸಿತು.

ಚಿರತೆ ನೋಡಿ ಭಯಗೊಂಡ ಜನ

ಆಗಷ್ಟ್ 22ರ ಬೆಳ್ಳಂ ಬೆಳಗ್ಗೆ 6.30ರ ಸಮಯದಲ್ಲಿ ಗಾಲ್ಫ್ ಕ್ಲಬ್ ನಿಂದ ಹೊರ ಬಂದ ಚಿರತೆ, ಕ್ಲಬ್ ರಸ್ತೆಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆ ಹಿಡಿದ ಬಸ್ ನಲ್ಲಿ ಇದ್ದ ಸಿಬ್ಬಂಧಿ ಸೆರೆ ಹಿಡಿದ್ರು. ಬಳಿಕ ಸೈಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳು ವೈರಲ್ ಆದವು. ಬಳಿಕವು ಚಿರತೆ ಕ್ಲಬ್ ರಸ್ತೆಯ ಪಕ್ಕದ ಪೊದೆಯಲ್ಲಿ ಅಡಗಿ ಕುಳಿತುಕೊಂಡಿತ್ತು. ಆದರೇ ಅರಣ್ಯ ಇಲಾಖೆಯ ಅಧಿಕಾರಿಗಳು ಸರಿಯಾದ ಪ್ಲ್ಯಾನ್ ಮಾಡಲಿಲ್ಲ. ರಸ್ತೆಯ ಎರಡು ಬದಿಯಲ್ಲಿ ಜನ, ಪೊಲೀಸರು, ಅರವಳಿಕೆ ತಜ್ಞರು ಇರೋ ಸಂದರ್ಭದಲ್ಲಿ ಚಿರತೆ ಪೋದೆಯಿಂದ ಗಾಲ್ಫ್ ಕ್ಲಬ್ ನ ತಂತಿಗೆ ಗುದ್ದಿಗೆ ಮೂರು ಸೆಕೆಂಡ್ ನಲ್ಲಿ ಒಳಗೆ ಪ್ರವೇಶ ಮಾಡಿತು. ಈ ದೃಶ್ಯಗಳ ನೋಡಿದ ಬೆಳಗಾವಿಯ ಜನ ಮತ್ತಷ್ಟು ಭಯ ಭೀತರಾದರು.

ಅತ್ಯಾಧುನಿಕ ಡ್ರೋಣ್ ಬಳಸಿ ಕಾರ್ಯಾಚರಣೆ

ಚಿರತೆ ಪತ್ತೆಗೆ ಅತ್ಯಾಧುನಿಕ ಇನ್ ಪ್ರಾರೆಡ್ ಡ್ರೋನ್ ಬಳಸಲು ಸಿದ್ದತೆ ಮಾಡಿಕೊಳ್ಳಲಾಯಿತು. ಆಗಷ್ಟ್ 23ರಂದು ರಕ್ಷಣಾ ಇಲಾಖೆಯ ರೆಡ್ ಝೋನ್ ಪ್ರದೇಶ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವಿಫಲವಾಯಿತು. ಶಾಸಕ ಅನಿಲ್ ಬೆನಕೆ ಗಾಲ್ಫ್ ಕ್ಲಬ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, 120 ಅರಣ್ಯ ಇಲಾಖೆ ಸಿಬ್ಬಂಧಿ, 80 ಜನ ಪೊಲೀಸರಿಂದ ಜಂಟಿ ಕಾರ್ಯಾಚರಣೆ ಗಾಲ್ಫ್ ಕ್ಲಬ್ ಪಕ್ಕದ ರಸ್ತೆಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಯಿತು.

ಆಪರೇಷನ್‌ಗೆ ಆನೆಗಳ ಬಳಕೆ

ಸಚಿವರ ಸೂಚನೆ ಹಿನ್ನೆಲೆಯಲ್ಲಿ ಆಗಷ್ಟ್ 24ರಂದು ಶಿವಮೊಗ್ಗದ ಸಕ್ರಬೈಲ್  ನಿಂದ ಎರಡು ಆನೆಗಳು ಬೆಳಗಾವಿಗೆ ಬಂದಿಳಿದವು. ಅರ್ಜುನ, ಆಹಲ್ಯ ಎನ್ನುವ ಎರಡು ಆನೆಗಳ ಜತೆಗೆ ಡಾರ್ಟ್ ಸ್ಪೆಷಲಿಷ್‌ ಡಾ ವಿನಯ್ ಸಹ ಬೆಳಗಾವಿಗೆ ಬಂದಿದ್ದರು. ಅನೇಕ ಕಾಡು ಪ್ರಾಣಿಗಳನ್ನು ಸೆರೆ ಹಿಡಿದಿರೋ ಡಾ ವಿನಯ್ ಅನುಭವ ಹೊಂದಿದ್ದರು. ಭದ್ರಾವತಿಯಲ್ಲಿ ನಗರದಲ್ಲಿ ಬಂದು ಜನರಿಗೆ ತೊಂದರೆ ಕೊಟ್ಟಿದ್ದ ಚಿರತೆಯನ್ನು ಡಾ. ವಿನಯ್ ಸೆರೆ ಹಿಡಿದ ಅನುಭವ ಹೊಂದಿದ್ದರು. ಕಾರ್ಯಾಚರಣೆ ನಡೆಸುವ ಮೊದಲು ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಯನ್ನು ನಡೆಸಿದ್ರು. ಸಭೆಯ ಬಳಿಕ 8 ಅರವಳಿಕೆ ತಜ್ಞರು, 60 ಜನ ಸಿಬ್ಬಂಧಿಯಿಂದ ಆನೆ ಬಳಸಿ ಕಾರ್ಯಾಚರಣೆ ಆರಂಭಿಸಲಾಯಿತು.

ಹಂದಿ ಹಿಡಿಯುವವರಿಂದಲೂ ಕಾರ್ಯಾಚರಣೆ

ಅರಣ್ಯ ಇಲಾಖೆಗೆ ಸಾಥ್ ನೀಡಲು ಬಂದ ಹುಕ್ಕೇರಿಯ ಹಂದಿ ಹಿಡಿಯುವರು, ಸಚಿವ ಉಮೇಶ ಕತ್ತಿ ಸೂಚನೆ ಹಿನ್ನೆಲೆಯಲ್ಲಿ ಬಲೆ ಸಮೇತ ಬಂದ 20 ಜನರು ಗಾಲ್ಫ್ ಕ್ಲಬ್ ನಲ್ಲಿ ವಿರುದ್ಧ ದಿಕ್ಕಿನಲ್ಲಿ ಪ್ರತ್ಯಕ ತಂಡದಿಂದ ಕಾರ್ಯಾಚರಣೆ ಆರಂಭಿಸಲಾಯಿತು. ಒಂದು ತಂಡದಲ್ಲಿ ಒಂದು ಆನೆ, ಆನೆಯ ಮೇಲೆ ಅರವಳಿಕೆ ತಜ್ಞ, 10 ಜನ ಹಂದಿ ಹಿಡಿಯುವ ಬಲೆ ಸಮೇತ ಸಿಬ್ಬಂಧಿ ಇದ್ದರು.

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಬ್ಬು ಕದ್ದ ಆರೋಪ

ಈ ನಡುವೆ ಆನೆಗಳಿಗೆ ಆಹಾರ ಪೂರೈಕೆ ಮಾಡಲು ರೈತನ ಜಮೀನಿನಲ್ಲಿ ಕಬ್ಬು ಕದ್ದ ಆರೋಪವನ್ನು ಅರಣ್ಯ ಇಲಾಖೆ ಸಿಬ್ಬಂಧಿ ಎದುರಿಸಿದರು. ರೈತನಿಗೆ ಮಾಹಿತಿ ನೀಡದೆ 2 ಎಕರೇ ಪ್ರದೇಶದಲ್ಲಿ ಬೆಳದ ಕಬ್ಬು ಕಟಾವ್ ಮಾಡಿದ್ರು. ಮುತಗಾ ಗ್ರಾಮದ ರಾಜು ಕಣಬರಕರ್ ಜಮೀನಿನಲ್ಲಿ ಕಬ್ಬು ಕಟಾವ್ ಮಾಡಿದರು. ರೈತನಿಂದ ಅರಣ್ಯಾಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ನೀಡುವಂತೆ ಮನವಿ ಸಲ್ಲಿಕೆ ಮಾಡಿದರು. ಇದು ಅರಣ್ಯ ಇಲಾಖೆಯ ಕಿರಿಯ ಅಧಿಕಾರಿ ಮಾಡಿದ ತಪ್ಪಿನಿಂದ ಅವಮಾನ ಅನುಭವಿಸುವಂತೆ ಆಗಿತು.

ಮೊದಲ ದಿನ 5 ಗಂಟೆಗೂ ಹೆಚ್ಚು ಕಾಲ ಹುಡುಕಾಟ

ಆನೆ ಬಳಸಿ ಮೊದಲ ದಿನದ 7 ಕಿ ಮೀ ವ್ಯಾಪ್ತಿಯಲ್ಲಿ ನಡೆದ ಕೋಂಬಿಂಗ್ ನಡೆಸಲಾಯಿತು. ಕೆಲ ಕಡೆಗಳಲ್ಲಿ ಚಿರತೆ ಓಡಾಡಿರೋ ಕುರುಹು ಪತ್ತೆ ಆಗಿದ್ದು, ಹಂದಿ ಬೇಟಿಯಾಡಿ ಅರ್ಧ ಮಾಂಸ ತಿಂದಿರೋ ಚಿರತೆ ಕುರುಹುಗಳ ಪತ್ತೆ ಆಗಿದ್ದವು. ಸತತ 5 ಗಂಟೆಗು ಹೆಚ್ಚು ಕಾಲ ನಡೆದ ಮೊದಲ ದಿನ ಕಾರ್ಯಾಚರಣೆ ವಿಫಲಗೊಂಡಿತು. ಮತ್ತೆ ಆಗಷ್ಟ್ 25ರಂದು ಗಾಲ್ಫ್ ಕ್ಲಬ್ ಟ್ರ್ಯಾಪ್ ಕ್ಯಾಮರಾ 10ರಲ್ಲಿ ಚಿರತೆ ಪತ್ತೆಯಾಗಿತ್ತು. ಆನೆ ಬಳಸಿ ಎರಡನೇ ದಿನ ಕಾರ್ಯಾಚರಣೆ ನಡೆಸಲಾಯಿತು. 23 ಟ್ರ್ಯಾಕ್ ಕ್ಯಾಮರಾ, 9 ಬೋನ್,  140 ಅರಣ್ಯ ಇಲಾಖೆ ಸಿಬ್ಬಂದಿ, 50 ಜನ ಪೊಲೀಸ್ ಸಿಬ್ಬಂಧಿ, 100 ಮೀಟರ್ ಉದ್ದದ 12 ಬಲೆ, 8 ಜನ ಅರವಳಿಕೆ ತಜ್ಞರು ಸಾಥ್ ನೀಡಿದರು.

ಮಿಂಚಿ ಮರೆಯಾದ ಚಿರತೆ

ಮದ್ಯಾಹ್ನ 2ಗಂಟೆಯ ಸುಮಾರಿನಲ್ಲಿ ಹಿಂಡಲಗಾ ಗಣಪತಿ ದೇವಸ್ಥಾನ ಬಳಿಯ ಮಿಲ್ಟ್ರಿ ಕ್ವಾಟ್ರಸ್ ಬಳಿ ಚಿರತೆ ಕಾಣಿಸಿಕೊಂಡಿತ್ತು. ಗೆಟ್ ಹತ್ತಿ ಹೊರಗೆ ಜಿಗಿಯುವ ಯತ್ನ ಮಾಡಿತ್ತು.  ಈ ಸುದ್ದಿ ತಿಳಿದ ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ರು.  ಹನುಮಾನ ನಗರದ ಪ್ರಮುಖ ರಸ್ತೆ ಬಂದ್ ಮಾಡಿದ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿದರು. ಗಾಲ್ಫ್ ಕ್ಲಬ್ ನಲ್ಲಿ ಚಿರತೆ ಪತ್ತೆ ಕಾರ್ಯಾ ಮತ್ತಷ್ಟು ಚುರುಕುಗೊಳಿಸಲಾಯಿತು. ಆದರೇ ಕ್ಷಣಮಾತ್ರದಲ್ಲಿ ಮತ್ತೆ ದಟ್ಟ ಕಾಡಿನಲ್ಲಿ ಚಿರತೆ ಮರೆಯಾಯಿತು.

ಚಿರತೆಯಿಂದಾಗಿ ಶಾಲೆಗಳಿಗೂ ರಜೆ!

ಬೆಳಗಾವಿ ನಗರದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆಯಲ್ಲಿ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರಿಂದ 10500 ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿತ್ತು. ಕೆಲ ಖಾಸಗಿ ಶಾಲೆಗಳು ಆನ್ ಲೈನ್ ತರಗತಿ ನಡೆಸಿದ್ರು. ಆದರೇ ಬಹುತೇಕ ಶಾಲೆಗಳು ಅನಿವಾರ್ಯವಾಗಿ ರಜೆ ನೀಡುವ ಸ್ಥಿತಿ ನಿರ್ಮಾಣ ಆಗಿತ್ತು. ಆನೆಗಳ ಬಳಸಿ ಕಾರ್ಯಾಚರಣೆ ನಡೆಸಿದ್ರು ಚಿರತೆಯ ಯಾವುದೇ ಕುರುಹು ಪತ್ತೆ ಆಗಿರಲಿಲ್ಲ. ಸತತ 9 ದಿನ ಚಿರತೆಯ ಯಾವುದೇ ಚಲನವಲನ ಪತ್ತೆ ಆಗಿರಲಿಲ್ಲ.

ಗಾಲ್ಫ್‌ ಕ್ಲಬ್‌ನಲ್ಲಿ ಕೂಂಬಿಂಗ್

ಸೆಪ್ಟೆಂಬರ್ 4 ಅರಣ್ಯ, ಪೊಲೀಸ್ ಇಲಾಖೆಯಿಂದ ಗಾಲ್ಫ್ ಕ್ಲಬ್ ನಲ್ಲಿ ಜಂಟಿ ಕೊಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಡಿಎಫ್ಓ ಆ್ಯಂಥೋನಿ ಮರಿಯಪ್ಪ ಮಾತನಾಡಿ, ಕಳೆದ 9 ದಿನಗಳಿಂದ ಗಾಲ್ಫ್ ಕ್ಲಬ್ ನಲ್ಲಿ ಚಿರತೆ ಗುರುತು ಪತ್ತೆಯಾಗಿಲ್ಲ. ಚಿರತೆ ಮಂಡೊಳಿ ಕಡೆಗೆ ಹೋಗಿರೋ ಬಗ್ಗೆ ಮಾಹಿತಿ ಇದೆ. ಕಬ್ಬಿನ ಗದ್ದೆಯಲ್ಲಿ ಚಿರತೆ ಕಂಡು ಬಂದಿದೆ. ರೈತರು ಸಹ ಚಿರತೆ ಪ್ರತ್ಯಕ್ಷದ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿಯ ಜನ ಭಯ ಪಡುವ ಅಗತ್ಯ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಗಾಲ್ಫ್ ಕ್ಲಬ್ ನಲ್ಲಿ ಬೋನ್, ಕ್ಯಾಮರಾ ಇರಲಿವೆ. ಜನರ ಭಯ ದೂರ ಮಾಡಲು ಇಲಾಖೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ರು.

ಹೊರಟು ಹೋಯ್ತಾ ಚಿರತೆ?

ಬಳಿಕ ಸೆಪ್ಟೆಂಬರ್ 5ರಿಂದ ಬೆಳಗಾವಿ ನಗರದ 22 ಶಾಲೆಗಳನ್ನು ಪುನರ್ ಆರಂಭ ಮಾಡಲಾಯಿತು, ಚಿರತೆ ಹಿಡಿಯಲು ಬಂದಿದ್ದ ಆನೆಗಳನ್ನು ಅಧಿಕಾರಿಗಳು ವಾಪಸ್ ಕಳುಹಿಸಿದ್ರು. ಸತತ ಒಂದು ತಿಂಗಳ ಕಾಲ ಅರಣ್ಯಾಧಿಕಾರಿಗಳಿಗೆ ಚಿರತೆ ಚಳ್ಳೆಹಣ್ಣು ತಿನಿಸಿತು. ಚಿರತೆ ಒಂದು ತಿಂಗಳು ನಗರ ಪ್ರದೇಶದಲ್ಲಿ ಇದ್ರು ಯಾರೊಬ್ಬರ ಮೇಲೆ ದಾಳಿ ಮಾಡಿ ಹಾನಿ ಮಾಡಲಿಲ್ಲ. ಯಾರಿಗೂ ಹೇಳದೆ ಬಂದಿದ್ದ ಚಿರೆತ ಯಾರಿಗೂ ತಿಳಿಸದೇ ವಾಪಸ್ ಹೋಯಿತು.

ಕಾರ್ಯಾಚರಣೆಗಾಗಿ ಖರ್ಚಾಗಿದ್ದೆಷ್ಟು?

ಇನ್ನೂ ನಗರದ ಮದ್ಯಭಾಗದಲ್ಲಿ ಗಾಲ್ಫ್ ಕ್ಲಬ್ ಅವಶ್ಯಕತೆಯ ಬಗ್ಗೆ ಪ್ರಶ್ನೆ ಮಾಡಿದ್ರು. ಗಾಲ್ಫ್ ನಿರ್ವಹಣೆ ಬಗ್ಗೆ ಅನೇಕ ಅಸಮಾಧಾನ ವ್ಯಕ್ತವಾದವು. ಆದರೇ ರಕ್ಷಣಾ ಇಲಾಖೆಗೆ ಸೇರಿದ ಜಾಗವಾಗಿದ್ದರಿಂದ ಇದು ಕೇಂದ್ರ ಸರ್ಕಾರ ನಿರ್ಣಯ ಕೈಗೊಳುವ ಅಧಿಕಾರವಿದೆ.  ಆದರೇ ಚಿರತೆಯೊಂದು ಸೆರೆ ಹಿಡಿಯಲು ಅರಣ್ಯ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿತು. ಆದರೇ ಕೊನೆಗೂ ಸೆರೆ ಸಾಧ್ಯವಾಗಲಿಲ್ಲ. ಇನ್ನೂ ಚಿರತೆ ಅತ್ಯಂತ ಚಾಲಾಕಿ ಪ್ರಾಣಿಯಾಗಿದ್ದು, ಅಧಿಕಾರಿಗಳ ಕಣ್ಣು ತಪ್ಪಿಸಿ ಹೋಗಿದೆ.

ಇದನ್ನೂ ಓದಿ: Baby Elephant: ಅಯ್ಯಯ್ಯೋ, ಅಮ್ಮಾ ಅಂದ್ಕೊಂಡು ಅಂಬಾ ಜೊತೆ ಬಂದ್ಬಿಟ್ಟೆ! ಕನ್ಫ್ಯೂಸ್‌ ಆಗಿ ಕೊಟ್ಟಿಗೆಗೆ ಬಂದ ಆನೆಮರಿ

ಸಾರ್ವಜನಿಕರು ಹೇಳುವುದೇನು?

ರಾಜ್ಯದಲ್ಲಿ ಹುಲಿಗಳ ಎಣಿಕೆ ಕಾರ್ಯ ನಡೆದಿದೆ, ಆದರೇ ಚಿರತೆ ಎಣಿಕೆ ಕಾರ್ಯ ನಡೆದಿಲ್ಲ. ಆದರೂ ಚಿರತೆ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಎಣಿಕೆ ಕಾರ್ಯ ನಡೆಸಬೇಕಿದೆ. ಜತೆಗೆ ಅರಣ್ಯ ಇಲಾಖೆ ಜನ ವಸತಿ ಕೇಂದ್ರಕ್ಕೆ ನುಗ್ಗಿದ್ದ ಸಂದರ್ಭದಲ್ಲಿ ಸೆರೆ ಹಿಡಿಯುವ ಕಾರ್ಯ ಮಾಡಬೇಕಿದೆ. ಚಿರತೆ ಸೆರೆ ಹಿಡಿಯಲು ಸಿಬ್ಬಂದಿಗೆ ವಿಶೇಷ ತರಬೇತಿ ನೀಡಬೇಕಾದ ಅವಶ್ಯಕತೆ ಸಹ ಇದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.
Published by:Annappa Achari
First published: