ಪಪ್ಪಾಯಿ ಹಣ್ಣು(Papaya Fruit) ಅತ್ಯಂತ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಲ್ಲಿ ಒಂದಾಗಿದ್ದು, ಇದು ಹೃದಯ(Heart), ಕಣ್ಣಿನ(eye) ಮತ್ತು ಮೂತ್ರಪಿಂಡದ (Kidney) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳುವುದನ್ನು ನಾವೆಲ್ಲಾ ಚಿಕ್ಕವರಾಗಿದ್ದಾಗಿನಿಂದಲೂ ಅನೇಕ ಬಾರಿ ಕೇಳುತ್ತಲೇ ಬೆಳೆದಿದ್ದೇವೆ.
ನಾವು ಬರೀ ಪಪ್ಪಾಯಿ ಹಣ್ಣನ್ನು ತಿಂದು ಅದರೊಳಗಿರುವ ಕಪ್ಪು ಬಣ್ಣದ ಬೀಜಗಳನ್ನು ಹೊರಗೆ ಬಿಸಾಡುತ್ತೇವೆ. ಆದರೆ ಒಂದು ವಿಷಯ ಅನೇಕ ಜನರಿಗೆ ಗೊತ್ತಿಲ್ಲ ನೋಡಿ, ಅದೇನೆಂದರೆ ಆ ಪಪ್ಪಾಯಿ ಹಣ್ಣಿನ ಒಳಗಿರುವ ಬೀಜಗಳಿಂದ ಸಹ ಇವೆಯಂತೆ ಅನೇಕ ಆರೋಗ್ಯಕರ ಪ್ರಯೋಜನಗಳು.
ಪಪ್ಪಾಯಿ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ಆದರೆ ಅದರ ಬೀಜದ ಬಗ್ಗೆ ನಿಮಗೆ ತಿಳಿದಿದೆಯೇ? ಪಪ್ಪಾಯಿ ಬೀಜಗಳು ಹಣ್ಣಿನಂತೆಯೇ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ನಾವು ನಿಮಗೆ ಇಲ್ಲಿ ಹೇಳುತ್ತೇವೆ ನೋಡಿ.
ಇದನ್ನೂ ಓದಿ: Heart Health: ಮೊಟ್ಟೆ ತಿನ್ನೋದು ಹೃದಯದ ಆರೋಗ್ಯಕ್ಕೆ ಒಳ್ಳೆಯದಾ? ವೈದ್ಯರು ಹೇಳೋದೇನು?
ಅವು ಸಾಮಾನ್ಯವಾಗಿ ಕಹಿ ವಾಸನೆಯನ್ನು ಹೊಂದಿರುತ್ತವೆ. ಆದರೆ ಅವುಗಳನ್ನು ಒಣಗಿಸಿದ ನಂತರ ನೀವು ಅವುಗಳನ್ನು ತಿನ್ನಬಹುದು ಅಥವಾ ಅವುಗಳನ್ನು ನಿಮ್ಮ ಸ್ಮೂಥಿಗಳಲ್ಲಿಯೂ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬಹುದು.
ಪಪ್ಪಾಯಿ ಹಣ್ಣಿನ ಬೀಜದ ಪ್ರಯೋಜನಗಳು
ಪಪ್ಪಾಯಿ ಬೀಜಗಳು ಫೈಬರ್, ಸ್ಯಾಚುರೇಟೆಡ್ ಮತ್ತು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್, ಜೀವಸತ್ವಗಳು, ಸತು, ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಖನಿಜಗಳ ಉತ್ತಮ ಮೂಲವಾಗಿದೆ. ಹೆಚ್ಚುವರಿಯಾಗಿ, ಪಪ್ಪಾಯಿ ಹಣ್ಣಿನ ಬೀಜಗಳು ಗಮನಾರ್ಹ ಪ್ರಮಾಣದ ಒಲಿಕ್ ಆಮ್ಲ, ಪಾಲಿಫಿನಾಲ್ ಗಳು ಮತ್ತು ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತವೆ, ಅವು ಶಕ್ತಿಯುತ ಉತ್ಕರ್ಷಣ ನಿರೋಧಕಗಳಾಗಿವೆ.
1. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ: ಪಪ್ಪಾಯಿ ಹಣ್ಣಿನ ಬೀಜಗಳು ಪಾಲಿಫಿನಾಲ್ ಗಳನ್ನು ಹೊಂದಿರುತ್ತವೆ, ಅವು ಬಲವಾದ ಉತ್ಕರ್ಷಣ ನಿರೋಧಕಗಳಾಗಿವೆ. ಅವು ನಿಮ್ಮ ದೇಹವನ್ನು ಹಲವಾರು ರೀತಿಯ ಕ್ಯಾನ್ಸರ್ ನಿಂದ ರಕ್ಷಿಸುತ್ತವೆ.
2. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ: ಪಪ್ಪಾಯಿ ಹಣ್ಣಿನ ಒಳಗಿರುವ ಬೀಜಗಳು ಕಾರ್ಪೈನ್ ಎಂಬ ವಸ್ತುವನ್ನು ಹೊಂದಿರುತ್ತವೆ, ಅದು ನಿಮ್ಮ ಕರುಳಿನಲ್ಲಿರುವ ಹುಳುಗಳು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಮಲಬದ್ಧತೆಯನ್ನು ತಪ್ಪಿಸುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸಿರುತ್ತದೆ ಎಂದು ಹೇಳಲಾಗುತ್ತದೆ.
3. ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ: ಪಪ್ಪಾಯಿ ಹಣ್ಣಿನಲ್ಲಿರುವ ಬೀಜಗಳಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚಿನ ಫೈಬರ್ ಇರುತ್ತದೆ. ಇದು ದೇಹದ ತೂಕವನ್ನು ಇಳಿಸಿಕೊಳ್ಳಲು ಉತ್ತಮ ಆಹಾರವಾಗಿದೆ.
4. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಪಪ್ಪಾಯಿ ಹಣ್ಣಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ಸಹ ರಕ್ಷಿಸುತ್ತದೆ.
ಇದನ್ನೂ ಓದಿ: Health Tips: ಈ ಆಹಾರ ತಿನ್ನೋದಕ್ಕೆ ಆರಂಭಿಸಿ; ಹೃದಯದ ಆರೋಗ್ಯದ ಬಗ್ಗೆ ಚಿಂತಿಸಬೇಡಿ!
5. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ: ಇದು ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವು ಓಲಿಕ್ ಆಮ್ಲ ಮತ್ತು ಇತರ ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಇದರಿಂದಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಆಗುತ್ತದೆ.
6. ಮೂತ್ರಪಿಂಡದ ಆರೋಗ್ಯಕರ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸುತ್ತದೆ: ಪಪ್ಪಾಯಿ ಹಣ್ಣಿನ ಬೀಜಗಳಲ್ಲಿರುವ ಫೈಬರ್ ಮತ್ತು ಜೀರ್ಣಕಾರಿ ಕಿಣ್ವಗಳು ದೇಹದ ಆರೋಗ್ಯಕರ ಕಾರ್ಯ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಪಪ್ಪಾಯಿ ಬೀಜವು ಎಸ್ಚೆರಿಚಿಯಾ ಕೋಲಿಗ್ ನಂತಹ ಬ್ಯಾಕ್ಟೀರಿಯಾವನ್ನು ಪರಿಣಾಮಕಾರಿಯಾಗಿ ಕೊಲ್ಲಲು ಸಹಾಯ ಮಾಡುತ್ತದೆ. ಪಪ್ಪಾಯಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ