Jagdeep Dhankhar: ದೀದಿ ಕಾಡಿದ ಗವರ್ನರ್ ಉಪರಾಷ್ಟ್ರಪತಿ ಆಗ್ತಾರಾ? ಜಗದೀಪ್ ಧನಕರ್ ಬಗ್ಗೆ ಇಲ್ಲಿದೆ ಮಾಹಿತಿ

ಜಗದೀಪ್ ಧನಕರ್ ಹೆಸರು ಕೇಳಿದ್ರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಜೊತೆಗಿನ ಸಂಘರ್ಷ ನೆನಪಿಗೆ ಬರುತ್ತದೆ. ಪಶ್ಚಿಮ ಬಂಗಾಳ ರಾಜ್ಯಪಾಲರಾಗಿರುವ ಜಗದೀಪ್ ಧನಕರ್, ದೀದಿ ಜೊತೆ ಸಂಘರ್ಷದಲ್ಲೇ ತೊಡಗಿದವರು. ಹಾಗಿದ್ರೆ ಜಗದೀಪ್ ಧನಕರ್ ಅವರ ಸಾಧನೆಗಳೇನು? ರಾಜಕೀಯದಲ್ಲಿ ಅವರ ಅನುಭವಗಳೇನು? ಅವರ ಹಿನ್ನೆಲೆಯೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ಮಮತಾ ಬ್ಯಾನರ್ಜಿ ಹಾಗೂ ಜಗದೀಪ್‌ ಧನಕರ್

ಮಮತಾ ಬ್ಯಾನರ್ಜಿ ಹಾಗೂ ಜಗದೀಪ್‌ ಧನಕರ್

  • Share this:
ಭಾರತದಲ್ಲಿ ಅತೀ ಉನ್ನತ ಹುದ್ದೆ ಅಂದರೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳದ್ದು. ರಾಷ್ಟ್ರಪತಿ (President of India) ರಾಮನಾಥ್ ಕೋವಿಂದ್ (Ramanath Kovind) ಹಾಗೂ ಉಪ ರಾಷ್ಟ್ರಪತಿ (Vice President) ವೆಂಕಯ್ಯ ನಾಯ್ಡು (Venkaiaha Naidu) ಅವರ ಅಧಿಕಾರದ ಅವಧಿ ಶೀಘ್ರವೇ ಮುಕ್ತಾಯವಾಗಲಿದೆ. ಹೀಗಾಗಿ ದೇಶದ ಉನ್ನತ 2 ಸ್ಥಾನಗಳಿಗೆ ಶೀಘ್ರವೇ ಚುನಾವಣೆ (Election) ನಡೆಯಲಿದೆ. ಇದೇ 18ರಂದು ರಾಷ್ಟ್ರಪತಿ ಚುನಾವಣೆ (Presidential Election) ನಡೆಯಲಿದೆ.  ಇನ್ನು ಆಗಸ್ಟ್ 6 ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಹೊಸ ಉಪ ರಾಷ್ಟ್ರಪತಿಗಳು ಆಗಸ್ಟ್ 10 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕೇಂದ್ರದ ಆಡಳಿತದ ಚುಕ್ಕಾಣಿ ಹಿಡಿದಿರುವ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜಗದೀಪ್ ಧನಕರ್‌ ಆಯ್ಕೆಯಾಗಿದ್ದಾರೆ. ಹಾಗಿದ್ರೆ ಜಗದೀಪ್ ಧನಕರ್ ಅವರ ಸಾಧನೆಗಳೇನು? ರಾಜಕೀಯದಲ್ಲಿ ಅವರ ಅನುಭವಗಳೇನು? ಅವರ ಹಿನ್ನೆಲೆಯೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

 ಜಗದೀಪ್ ಧನಕರ್ ಯಾರು?

 ಜಗದೀಪ್ ಧನಕರ್ ಹೆಸರು ಕೇಳಿದ್ರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಜೊತೆಗಿನ ಸಂಘರ್ಷ ನೆನಪಿಗೆ ಬರುತ್ತದೆ. ಪಶ್ಚಿಮ ಬಂಗಾಳ ರಾಜ್ಯಪಾಲರಾಗಿರುವ ಜಗದೀಪ್ ಧನಕರ್, ದೀದಿ ಜೊತೆ ಸಂಘರ್ಷದಲ್ಲೇ ತೊಡಗಿದವರು.

ರಾಜಸ್ಥಾನ ಮೂಲದ ಜಗದೀಪ್ ಧನಕರ್

ಜಗದೀಪ್ ಧನಕರ್ ಅವರು 1951 ರಲ್ಲಿ ರಾಜಸ್ಥಾನದ ಕಿತಾನ ಗ್ರಾಮದಲ್ಲಿ ಜನಿಸಿದರು. ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಳ್ಳುವ ಮೊದಲು ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದ ಶಾಲೆಯಲ್ಲಿಯೇ ಮುಗಿಸಿದರು. ನಂತರ ಚಿತ್ತೋರಗಢದ ಸೈನಿಕ ಶಾಲೆಯಲ್ಲಿ ಓದಿದರು. ಅವರು ರಾಜಸ್ಥಾನ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.

ಇದನ್ನೂ ಓದಿ: Draupadi Murma: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ

ಜಗದೀಪ್ ಧನಕರ್ ಸಂಸಾರ

ಜಗದೀಪ್ ಧನಕರ್  ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಸುದೇಶ್ ಧಂಖರ್ ಅವರನ್ನು ವಿವಾಹವಾದರು. ಆಕೆ ಸಮಾಜ ಸೇವಕಿ. ಅವರ ಮಗಳು ಕಾಮ್ನಾ ಅವರು ಸುಪ್ರೀಂ ಕೋರ್ಟ್ ವಕೀಲ ಕಾರ್ತಿಕೇಯ ವಾಜಪೇಯಿ ಅವರನ್ನು ವಿವಾಹವಾಗಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ಧನಕರ್

 ಜಗದೀಪ್ ಧನಕರ್ ವೃತ್ತಿಯಲ್ಲಿ ವಕೀಲರು. ಜೈಪುರದ ರಾಜಸ್ಥಾನ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದ ಪದವೀಧರರೂ ಅದೇ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪಡೆದರು. ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿದರು. ಬಳಿಕ ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾದ್ರು. ಇನ್ನು 1990 ರಲ್ಲಿ ನಿಯೋಜಿತ ಹಿರಿಯ ವಕೀಲರಾಗಿದ್ದಾರೆ. ಅಂದಿನಿಂದ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1989ರಲ್ಲಿ ರಾಜಕೀಯ ಪ್ರವೇಶ

ಅವರು 1989 ರಲ್ಲಿ ರಾಜಕೀಯಕ್ಕೆ ಸೇರಿದರು ಮತ್ತು 1990 ರಲ್ಲಿ ಸಂಸದ ಮತ್ತು ಕೇಂದ್ರ ಸಚಿವರಾದರು. ಬಿಜೆಪಿಗೆ ಸೇರುವ ಮೊದಲು, ಅವರು 1989-91 ರ ಅವಧಿಯಲ್ಲಿ ರಾಜಸ್ಥಾನದ ಜುಂಜುನುದಿಂದ ಸಂಸತ್ ಸದಸ್ಯರಾಗಿದ್ದರು. ಅವರು ಜನತಾದಳದ ಸದಸ್ಯರಾಗಿದ್ದರು. ಅವರು 1993-98 ರ ನಡುವೆ ರಾಜಸ್ಥಾನದ ಕಿಶನ್‌ಗಢದಿಂದ ವಿಧಾನಸಭೆಯ ಸದಸ್ಯರಾಗಿದ್ದರು. ಅವರು ಜುಲೈ 2019 ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದರು.

ಮಮತಾ ಬ್ಯಾನರ್ಜಿ ಜೊತೆ ಸಂಘರ್ಷ

ರಾಜ್ಯಾಪಾಲರಾಗಿ ಅಧಿಕಾರ ಸ್ವೀಕರಿಸಿದ್ದಂದಿನಿಂದ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಸಂಘರ್ಷದಲ್ಲೇ ತೊಡಗಿದ್ದಾರೆ. ಟಿಎಂಸಿ ಅವರನ್ನು ಬಂಗಾಳದಲ್ಲಿ ಬಿಜೆಪಿಯ ಏಜೆಂಟ್ ಎಂದು ಕರೆದರೆ,  ಅವರನ್ನು ಸಂವಿಧಾನದ ಪಾಲಕ ಎಂದು ಬಿಜೆಪಿ ನಾಯಕರು ಶ್ಲಾಘಿಸುತ್ತಾರೆ. ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ರಾಜ್ಯ ಶಾಸಕಾಂಗಕ್ಕೆ ಸಮಸ್ಯೆಗಳನ್ನು ಸೂಚಿಸುವಲ್ಲಿ ತಾನು ನಿಯಮ ಪುಸ್ತಕ ಮತ್ತು ಸಂವಿಧಾನದ ಮೂಲಕ ಹೋಗಿದ್ದೇನೆ ಎಂದು ಧಂಖರ್ ಹೇಳಿದ್ದಾರೆ.

ಧನಕರ್ ಇತರೇ ಆಸಕ್ತಿಗಳು

ಜಗದೀರಪ್ ಧನಕರ್ ಅವರು ಕ್ರಿಕೆಟ್, ಆಧ್ಯಾತ್ಮಿಕತೆ ಮತ್ತು ಧ್ಯಾನದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಪ್ರಯಾಣಿಸಲು ಇಷ್ಟಪಡುತ್ತಾರೆ. ಈಗಾಗಲೇ ಯುಎಸ್, ಕೆನಡಾ, ಯುಕೆ, ಇಟಲಿ, ಸ್ವಿಟ್ಜರ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚೀನಾ, ಹಾಂಗ್ ಕಾಂಗ್ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳಿಗೆ ಹೋಗಿದ್ದಾರೆ.

ಇದನ್ನೂ ಓದಿ: Vice Presidential Election: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಜಗದೀಪ್ ಧನಕರ್‌, ವಿಪಕ್ಷಗಳಿಂದ ಹುರಿಯಾಳು ಯಾರು?

ಜಗದೀಪ್ ಗೆಲುವಿನ ಸಾಧ್ಯತೆಗಳೇನು?

ಮುಂದಿನ ಉಪ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವ ಚುನಾವಣಾ ಕಾಲೇಜು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಒಳಗೊಂಡಿರುತ್ತದೆ. ಸಂಸತ್ತಿನ ಈಗಿನ 780 ಸಂಖ್ಯಾಬಲದ ಪೈಕಿ ಬಿಜೆಪಿ ಏಕಾಂಗಿಯಾಗಿ 394 ಸಂಸದರನ್ನು ಹೊಂದಿದೆ. ಅದು ಬಹುಮತದ 390 ಸ್ಥಾನಕ್ಕಿಂತ ಹೆಚ್ಚಾಗಿದೆ.  ಹೀಗಾಗಿ ಜಗದೀಪ್ ಧನಕರ್ ಗೆಲುವಿನ ಸಾಧ್ಯತೆ ಹೆಚ್ಚಿರುತ್ತದೆ.
Published by:Annappa Achari
First published: