• Home
 • »
 • News
 • »
 • explained
 • »
 • Explainer: ನಿಕಟ ಸಂಗಾತಿಯ ಹಿಂಸಾತ್ಮಕ ಸ್ವಭಾವ, ಕಷ್ಟವಾಗೋ ಈ ಸಂಬಂಧದಿಂದ ಹೊರಬರುವುದು ಹೇಗೆ?

Explainer: ನಿಕಟ ಸಂಗಾತಿಯ ಹಿಂಸಾತ್ಮಕ ಸ್ವಭಾವ, ಕಷ್ಟವಾಗೋ ಈ ಸಂಬಂಧದಿಂದ ಹೊರಬರುವುದು ಹೇಗೆ?

ಕೊಲೆಗೀಡಾದ ಶ್ರದ್ಧಾ ವಾಕರ್ ಹಾಗೂ ಆರೋಪಿ ಅಫ್ತಾಬ್

ಕೊಲೆಗೀಡಾದ ಶ್ರದ್ಧಾ ವಾಕರ್ ಹಾಗೂ ಆರೋಪಿ ಅಫ್ತಾಬ್

ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ ಒಮ್ಮೆಗೆ ಲಿವ್ ಇನ್ ರಿಲೇಶನ್‌ಶಿಪ್‌ನ ಕರಾಳ ಸತ್ಯವನ್ನೇ ಸಮಾಜದ ಮುಂದೆ ಬಿಚ್ಚಿಟ್ಟಿದೆ. ಒಂದೇ ಸೂರಿನಡಿ ವಿವಾಹ ಬಂಧನಕ್ಕೊಳಪಡದೇ ಒಂದಾಗಿ ಜೀವಿಸುವ ನೀತಿ ಹೊಂದಿರುವ ಲಿವ್ ಇನ್ ರಿಲೇಶನ್‌ಶಿಪ್‌ಗೂ ವಿವಾಹ ಬಂಧನದಲ್ಲಿ ಪತಿ ಪತ್ನಿಯರಂತೆ ಜೊತೆಯಾಗಿರುವ ಸಂಬಂಧಕ್ಕೂ ಹೋಲಿಕೆ ನಡೆಸಿದೆ.

ಮುಂದೆ ಓದಿ ...
 • Trending Desk
 • Last Updated :
 • New Delhi, India
 • Share this:

  ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಇಂಟಿಮೇಟ್ ಪಾರ್ಟ್‌ನರ್ ವಯಲೆನ್ಸ್ (Intimate Partner Violence) ಎಂಬ ಪದ ಹೆಚ್ಚು ಬಳಕೆಯಲ್ಲಿರುವುದನ್ನು ನೀವು ಗಮನಿಸಬಹುದು. ನಿಕಟ ಸಂಗಾತಿ ಹಿಂಸೆ ಅಥವಾ ಇಂಟಿಮೇಟ್ ಪಾರ್ಟ್‌ನರ್ ವಯಲೆನ್ಸ್ ಪ್ರಕರಣದಲ್ಲಿ ತನ್ನ ಪ್ರಾಣ ತೆತ್ತ ಶ್ರದ್ಧಾ (Shraddha Walker) ತಾನು ಬಹುವಾಗಿ ನಂಬಿದ್ದ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದ ಹಾಗೂ ಭವಿಷ್ಯದಲ್ಲಿ ವಿವಾಹವಾಗಿ ಸುಂದರ ಬದುಕಿನ ಹೊಂಗನಸು ಕಂಡಿದ್ದ ತನ್ನ ಸಂಗಾತಿ ಅಫ್ತಾಬ್ ಅಮೀನ್ ಪೂನವಾಲಾನಿಂದಲೇ Aftab Poonawala) ಬರ್ಬರವಾಗಿ ಹತ್ಯೆಗೊಂಡಿದ್ದರು. ಆತ ಆಕೆಯನ್ನು ಸಾಯಿಸಿದ್ದು ಮಾತ್ರವಲ್ಲದೆ 35 ತುಂಡುಗಳನ್ನಾಗಿ ಕತ್ತರಿಸಿ ಫ್ರೀಜರ್‌ನಲ್ಲಿಟ್ಟು ವಿಕೃತ ಮೆರೆದಿದ್ದ. ಹೀಗೆ ಪ್ರತೀ ದಿನ ಬೆಳಗಿನ ಜಾವ 2 ಗಂಟೆಗೆ ಒಂದೊಂದೇ ತುಂಡುಗಳನ್ನು ಹೊರಕ್ಕೆ ಎಸೆದು ಬರುತ್ತಿದ್ದ.


  ಸಂಗಾತಿಯಿಂದಲೇ ಹತ್ಯೆಯಾದ ಶ್ರದ್ಧಾ ವಾಲ್ಕರ್


  ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ ಒಮ್ಮೆಗೆ ಲಿವ್ ಇನ್ ರಿಲೇಶನ್‌ಶಿಪ್‌ನ ಕರಾಳ ಸತ್ಯವನ್ನೇ ಸಮಾಜದ ಮುಂದೆ ಬಿಚ್ಚಿಟ್ಟಿದೆ. ಒಂದೇ ಸೂರಿನಡಿ ವಿವಾಹ ಬಂಧನಕ್ಕೊಳಪಡದೇ ಒಂದಾಗಿ ಜೀವಿಸುವ ನೀತಿ ಹೊಂದಿರುವ ಲಿವ್ ಇನ್ ರಿಲೇಶನ್‌ಶಿಪ್‌ಗೂ ವಿವಾಹ ಬಂಧನದಲ್ಲಿ ಪತಿ ಪತ್ನಿಯರಂತೆ ಜೊತೆಯಾಗಿರುವ ಸಂಬಂಧಕ್ಕೂ ಹೋಲಿಕೆ ನಡೆಸಿದೆ. ಇಂದಿನ ಯುವಜನಾಂಗ ಹೆಚ್ಚಾಗಿ ಅನುಸರಿಸುವ ಲಿವ್ ಇನ್ ರಿಲೇಶನ್‌ಶಿಪ್ ನಂಬಿಕೆ, ವಿಶ್ವಾಸ, ಪ್ರೇಮ ಇಂತಹ ನಂಬಿಕೆಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.


  Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


  ಪೊಲೀಸರಿಂದ ಇನ್ನಷ್ಟು ವಿಚಾರಣೆ


  ಶ್ರದ್ಧಾರ ಮನೆಯವರು, ಶ್ರದ್ಧಾಳ ಕೊಲೆಗಾರನಿಗೆ ತಕ್ಕ ಶಿಕ್ಷಯಾಗಬೇಕು ಹಾಗೂ ಶ್ರದ್ಧಾಳ ಆತ್ಮಕ್ಕೆ ಶಾಂತಿ ದೊರೆಯಬೇಕೆಂಬ ಹೋರಾಟದಲ್ಲಿದ್ದಾರೆ. ಇತ್ತ ನ್ಯಾಯಾಂಗ ಬಂಧನದಲ್ಲಿರುವ ಅಫ್ತಾಬ್ ಆ ಕ್ಷಣದಲ್ಲಿ ಕ್ರೋಧಕ್ಕೊಳಗಾಗಿ ಶ್ರದ್ಧಾಳನ್ನು ಕೊಂದೆ ಎಂಬ ಹೇಳಿಕೆ ನೀಡಿದ್ದಾನೆ. ದೆಹಲಿ ನ್ಯಾಯಾಲಯ ಇನ್ನಷ್ಟು ವಿಚಾರಣೆಗಾಗಿ ಅಫ್ತಾಬ್ ನನ್ನು ಪೊಲೀಸರ ಬಂಧನದಲ್ಲಿರಿಸಲು ಅಂಗೀಕರಿಸಿದೆ.


  ನಿಕಟ ಸಂಗಾತಿ ಹಿಂಸೆ ಎಂದರೇನು?


  ಐಪಿವಿ (Intimate Partner Violence) ಎಂದು ಕರೆಯಲಾದ ನಿಕಟ ಸಂಗಾತಿ ಹಿಂಸೆ ಎಂಬುದು ಪ್ರಸ್ತುತ ಅಥವಾ ಮಾಜಿ ಸಂಗಾತಿಯಿಂದ ಮಹಿಳೆಗೆ ನಡೆಯುವ ಕೌಟುಂಬಿಕ ಹಿಂಸೆಯಾಗಿದೆ, ಇಲ್ಲಿ ಜೋಡಿಗಳು ವಿವಾಹವಾಗಿರಲಿ ಆಗದೇ ಇರಲಿ ನಿಕಟವಾಗಿರುವ ಸಂಗಾತಿಯಿಂದ ಹಿಂಸೆ ನಡೆಯುವುದಾಗಿದೆ.


  ಮಹಿಳೆಯ ವಿರುದ್ಧ ನಡೆಯುವ ಹಿಂಸೆಯನ್ನು ಅರಿತುಕೊಳ್ಳುವುದು ಹಾಗೂ ಗುರುತಿಸುವುದು ಎಂದು ಕರೆಯಲಾದ ಅಧ್ಯಯನದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಐಪಿವಿ ಯನ್ನು ಮಹಿಳೆಯರ ವಿರುದ್ಧ ನಡೆಯುವ ಅತ್ಯಂತ ಸಾಮಾನ್ಯ ಹಿಂಸೆಗಳಲ್ಲೊಂದಾಗಿದೆ ಎಂದು ಉಲ್ಲೇಖಿಸಿದೆ. ಇಲ್ಲಿ ಪುರುಷರ ಮೇಲೂ ಹಿಂಸೆ ನಡೆಯುತ್ತದೆ ಎಂಬುದನ್ನು ಗಮನಿಸಬೇಕು. ಅದಾಗ್ಯೂ ಐಪಿವಿಗೆ ಹೆಚ್ಚು ಒಳಗಾಗುವುದು ಮಹಿಳೆಯರೇ ಆಗಿದ್ದಾರೆ.
  ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತದೆ?


  ವಾಸ್ತವವಾಗಿ, WHO ಅಧ್ಯಯನದ ಪ್ರಕಾರ, ಜಾಗತಿಕವಾಗಿ ಮೂರು ಮಹಿಳೆಯರಲ್ಲಿ ಒಬ್ಬರು ನಿಕಟ ಸಂಗಾತಿಯ ಹಿಂಸೆಯನ್ನು ಅನುಭವಿಸುತ್ತಾರೆ ಎಂದು ಹೇಳಲಾಗಿದೆ.


  ಐಪಿವಿ (IPV) ಯ ರೂಪಗಳು ಮತ್ತು ಅದಕ್ಕೆ ಒಳಗಾಗುವ ಸಂಬಂಧಗಳ ವಿಧಗಳು


  ಲೈಂಗಿಕ, ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ - ನಿಕಟ ಪಾಲುದಾರ ಯಾ ಸಂಗಾತಿ ಹಿಂಸೆಯಲ್ಲಿ ವ್ಯಾಪಕವಾಗಿ ನಾಲ್ಕು ವಿಧಗಳಿವೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಎಲ್ಲಾ ನಾಲ್ಕು ವಿಧಗಳು, ದೈಹಿಕ ಹಿಂಸೆ ಹಿಂಸೆಯ ಅತ್ಯಂತ ಸಾಮಾನ್ಯ ರೂಪವಾಗಿದೆ. ಸಾಮಾಜಿಕ-ಆರ್ಥಿಕ ಸ್ಥಿತಿ, ಮತ್ತು ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ಹಂತಗಳಲ್ಲಿಯೂ ಮತ್ತು ಸಮಾಜದ ಎಲ್ಲಾ ಗುಂಪುಗಳಲ್ಲಿ ನಿಕಟ ಪಾಲುದಾರ ಹಿಂಸಾಚಾರ ಸಂಭವಿಸಬಹುದು.


  ನಿಂದನೀಯ ಹಾಗೂ ಹಿಂಸಾತ್ಮಕ ಸಂಬಂಧಗಳನ್ನು ಸಂಗಾತಿಗಳು ಏಕೆ ತ್ಯಜಿಸುವುದಿಲ್ಲ?


  ಶ್ರದ್ಧಾ ವಿಷಯದಲ್ಲಿ ಆಕೆಯ ಸಂಗಾತಿ ಪೂನಾವಾಲಾ ಆಕೆಗೆ ಆಗಾಗ್ಗೆ ಹಿಂಸೆಯನ್ನು ನೀಡುತ್ತಿದ್ದ ಎಂಬುದು ಆಕೆಗೆ ತಿಳಿದಿದ್ದರೂ ಆಕೆ ಆ ಸಂಬಂಧವನ್ನು ಏಕೆ ತೊರೆಯಲಿಲ್ಲ ಎಂಬುದು ಇಲ್ಲಿರುವ ಸಾಮಾನ್ಯ ಪ್ರಶ್ನೆಯಾಗಿದೆ.


  ಮನಶ್ಶಾಸ್ತ್ರಜ್ಞೆ ಲೆನೋರ್ ಇ ವಾಕರ್ ತಿಳಿಸುವಂತೆ ನಿಕಟವಾದ ಪಾಲುದಾರ ಹಿಂಸೆಯಲ್ಲಿ ಹೆಚ್ಚು ಹಾನಿಗೊಳಗಾಗುವ ಮಹಿಳೆಯರ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ ಹಾಗೂ ಈ ಕುರಿತು ದಿ ಬ್ಯಾಟರ್ಡ್ ವುಮನ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ರೀತಿ ದೌರ್ಜನ್ಯಕ್ಕೊಳಗಾದ ಮಹಿಳೆಯ ಬಗ್ಗೆ ಆಕೆ ಮನೋಜ್ಞವಾಗಿ ವಿವರಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಳಲುವ ಹೆಂಗಳೆಯರು ತಾವಿರುವ ಸಂಬಂಧ ವಿಷಕಾರಿ ಎಂದು ಅರಿವಿದ್ದರೂ ಅದರಿಂದ ಹೊರಬರದೆ ಆ ಸಂಬಂಧದಲ್ಲಿಯೇ ಉಳಿಯುವ ನಿರ್ಧಾರ ತಾಳುತ್ತಾರೆ.


  ಇದನ್ನೂ ಓದಿ: Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!


  ಇದಕ್ಕೆ ಕಾರಣ ಹಿಂಸಾತ್ಮಕ ಸಂಬಂಧದಲ್ಲಿರುವ ಮಹಿಳೆಯರು ತಾವು ಅಸಹಾಯಕರು, ನಿಷ್ಪ್ರಯೋಜಕರು ಹಾಗೂ ಶಕ್ತಿಹೀನರು ಅಂತೆಯೇ ಯಥಾಸ್ಥಿತಿಯನ್ನು ಒಪ್ಪಿಕೊಳ್ಳಲು ಆರಂಭಿಸಿದಾಗ ಮಹಿಳೆಯರು ಅಂತಹ ಸಂಬಂಧದಿಂದ ಹೊರಬರಲಾಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಕೌನ್ಸಿಲ್ ಆಫ್ ಯುರೋಪ್ ಬ್ಲಾಗ್‌ ವರದಿ ತಿಳಿಸಿದೆ.


  ಸಂಬಂಧ ತೊರೆಯದಿರಲು ಕಾರಣಗಳೇನು?


  ಇಂತಹ ಸಂಬಂಧಗಳನ್ನು ತೊರೆಯದಿರಲು ಕೆಲವೊಂದು ಕಾರಣಗಳ ಒತ್ತಡವೂ ಇರಬಹುದು ಎಂಬುದಾಗಿ ವರದಿಗಳು ತಿಳಿಸುತ್ತವೆ. ಸಂಗಾತಿಯ ಮೇಲಿರುವ ಆರ್ಥಿಕ ಅವಲಂಬನೆ, ಸಾಮಾಜಿಕ ನಿರ್ಬಂಧಗಳು, ಸಂತಾನದ ಜವಬ್ದಾರಿ ಹಾಗೂ ಸಂಗಾತಿಯನ್ನು ಆಶ್ರಯಕ್ಕೆ ಅವಲಂಬಿಸಿರುವುದೂ ಕೂಡ ಇಂತಹ ವಿಷಕಾರಿ ಸಂಬಂಧಗಳಿಂದ ಹೊರಬರಲಾಗದೇ ಅಲ್ಲಿಯೇ ಉಳಿಯುವಂತೆ ಮಾಡುತ್ತದೆ ಎಂಬುದು ತಿಳಿದುಬಂದಿದೆ.


  ಕೌಟುಂಬಿಕ ಹಿಂಸೆಯನ್ನು ಗುರುತಿಸುವುದು


  ಮೊದಲಿಗೆ ಕೌಟುಂಬಿಕ ಹಿಂಸೆಯನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಕೆಲವು ಸಂಬಂಧಗಳು ಮೊದಲಿನಿಂದಲೂ ಸ್ಪಷ್ಟವಾಗಿ ನಿಂದನೀಯವಾಗಿದ್ದರೂ, ನಿಂದನೆಯು ಸಾಮಾನ್ಯವಾಗಿ ಸೂಕ್ಷ್ಮವಾಗಿ ಪ್ರಾರಂಭವಾಗುತ್ತದೆ ಮತ್ತು ಕಾಲಾನಂತರದಲ್ಲಿ ಕೆಟ್ಟದಾಗುತ್ತದೆ


  ಇದನ್ನು ತಿಳಿದುಕೊಳ್ಳುವುದು ಹೇಗೆ?


  * ಅಸಭ್ಯ ಹೆಸರುಗಳಿಂದ ನಿಂದಿಸುವುದು, ಕಚೇರಿ ಅಥವಾ ಹೊರಗೆ ಹೋಗದಂತೆ ತಡೆಯುವುದು, ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ಸಂಪರ್ಕಿಸದಂತೆ ಅಡ್ಡಗಾಲು ಹಾಕುವುದು


  * ಹಣ ಖರ್ಚುಮಾಡದಂತೆ ನಿಯಂತ್ರಿಸುವುದು ನಿಮ್ಮ ಚಲನವಲನಗಳನ್ನು ಗಮನಿಸುವುದು, ಸಂದೇಹಿಸುವುದು


  * ಅಸೂಯೆ ಅಥವಾ ಸ್ವಾಮ್ಯಸೂಚಕವಾಗಿ ವರ್ತಿಸುವುದು ಅಥವಾ ನೀವು ವಿಶ್ವಾಸದ್ರೋಹಿ ಎಂದು ನಿರಂತರವಾಗಿ ಆರೋಪಿಸುವುದು


  * ಮದ್ಯಪಾನ ಮಾಡುವಾಗ ಅಥವಾ ಡ್ರಗ್ಸ್ ಬಳಸಿದಾಗ ಸಂಗಾತಿಯ ಮೇಲೆ ಕೋಪ ಮಾಡಿಕೊಳ್ಳುವುದು


  * ಹಿಂಸಾತ್ಮಕವಾಗಿ ಇಲ್ಲವೇ ಆಯುಧಗಳನ್ನು ಬಳಸಿ ಹೆದರಿಸುವುದು


  * ಹೊಡೆಯುವುದು, ಒದೆಯುವುದು, ನೂಕುವುದು, ಬಡಿಯುವುದು, ಉಸಿರುಗಟ್ಟಿಸುವುದು ಅಥವಾ ನಿಮಗೆ, ನಿಮ್ಮ ಮಕ್ಕಳಿಗೆ ಅಥವಾ ನಿಮ್ಮ ಸಾಕುಪ್ರಾಣಿಗಳಿಗೆ ನೋವುಂಟು ಮಾಡುವುದು


  * ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆಗಳಲ್ಲಿ ತೊಡಗಲು ಹೇಳುವುದು


  * ಹಿಂಸಾತ್ಮಕ ನಡವಳಿಕೆಗಳಿಗೆ ನೀವು ಅರ್ಹರು ಎಂದು ಜರೆಯುವುದು


  ಮಹಿಳೆಯರ ಮೇಲೆಯೇ ನಡೆಯುತ್ತಿದೆ ಹೆಚ್ಚಿನ ದೌರ್ಜನ್ಯ


  ಸಂಬಂಧದಲ್ಲಿರುವ 15-49 ವರ್ಷ ವಯಸ್ಸಿನ ಕಾಲು ಭಾಗದಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ (15 ವರ್ಷದಿಂದ) ತಮ್ಮ ನಿಕಟ ಸಂಗಾತಿಯಿಂದ ದೈಹಿಕ ಮತ್ತು/ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.


  ಜಾಗತಿಕವಾಗಿ ಮಹಿಳೆಯರ ಮೇಲೆ ನಡೆಯುವ ಎಲ್ಲಾ ಕೊಲೆಗಳಲ್ಲಿ 38% ರಷ್ಟು ನಿಕಟ ಪಾಲುದಾರರಿಂದ ಮಾಡಲಾಗಿದೆ. ನಿಕಟ ಪಾಲುದಾರ ಹಿಂಸಾಚಾರದ ಜೊತೆಗೆ, ಜಾಗತಿಕವಾಗಿ 6% ಮಹಿಳೆಯರು ಪಾಲುದಾರರಲ್ಲದೆ ಬೇರೆಯವರಿಂದ ಕೂಡ ಲೈಂಗಿಕವಾಗಿ ಆಕ್ರಮಣಕ್ಕೊಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.


  ಆದಾಗ್ಯೂ ಪಾಲುದಾರರಲ್ಲದ ಇತರರ ಲೈಂಗಿಕ ಹಿಂಸೆಯ ಡೇಟಾ ಹೆಚ್ಚು ಸೀಮಿತವಾಗಿದೆ. ನಿಕಟ ಪಾಲುದಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಹೆಚ್ಚಾಗಿ ಪುರುಷರಿಂದ ಮಹಿಳೆಯರ ವಿರುದ್ಧ ನಡೆಸಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಲಾಕ್‌ಡೌನ್‌ಗಳು ಮತ್ತು ಅದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು ಮಹಿಳೆಯರನ್ನು ನಿಂದನೀಯ ಪಾಲುದಾರರು ಮತ್ತು ಅಪಾಯಕಾರಿ ಅಂಶಗಳಿಗೆ ಒಳಗಾಗುವುದನ್ನು ಹೆಚ್ಚಾಗಿಸಿವೆ.


  ನಿಕಟ ಪಾಲುದಾರ ಹಿಂಸೆ ಮತ್ತು ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಂಶಗಳು


  * ನಿಕಟ ಪಾಲುದಾರ ಮತ್ತು ಲೈಂಗಿಕ ಹಿಂಸೆಯು ವೈಯಕ್ತಿಕ, ಕುಟುಂಬ, ಸಮುದಾಯ ಮತ್ತು ವಿಶಾಲ ಸಮಾಜದ ಹಂತಗಳಲ್ಲಿ ಸಂಭವಿಸುವ ಅಂಶಗಳ ಪರಿಣಾಮವಾಗಿದೆ.


  * ಕಡಿಮೆ ಮಟ್ಟದ ಶಿಕ್ಷಣ (ಲೈಂಗಿಕ ಹಿಂಸೆಯ ಅಪರಾಧ ಮತ್ತು ಲೈಂಗಿಕ ಹಿಂಸೆಯ ಅನುಭವ);


  * ಕೌಟುಂಬಿಕ ಹಿಂಸಾಚಾರಕ್ಕೆ ತುತ್ತಾಗುವುದು


  * ಮದ್ಯದ ಹಾನಿಕಾರಕ ಬಳಕೆ


  * ಹಿಂಸಾಚಾರವನ್ನು (ಅಪರಾಧ) ಕ್ಷಮಿಸುವ ಸಂಗಾತಿ


  * ಪುರುಷರಿಗೆ ಉನ್ನತ ಸ್ಥಾನಮಾನವನ್ನು ಮತ್ತು ಮಹಿಳೆಯರಿಗೆ ಕಡಿಮೆ ಸ್ಥಾನಮಾನವನ್ನು ಸವಲತ್ತು ನೀಡುವುದು ಅಥವಾ ಆರೋಪಿಸುವುದು


  ಇದನ್ನೂ ಓದಿ: Assembly Election: ಚುನಾವಣೆ ಟಿಕೆಟ್​ ಘೋಷಣೆಗೂ ಮುನ್ನವೇ ಕುಕ್ಕರ್ ಸೀಟಿ ಸದ್ದು; ಛಬ್ಬಿ ಬೆಂಬಲಿಗರಿಂದ ಭರಪೂರ ಗಿಫ್ಟ್!


  ಹಿಂಸಾಚಾರದಿಂದ ರಕ್ಷಣೆ ಪಡೆಯುವುದು ಹೇಗೆ?


  * ಸಲಹೆಗಾಗಿ ಮಹಿಳಾ ಆಶ್ರಯ ಅಥವಾ ಕೌಟುಂಬಿಕ ದೌರ್ಜನ್ಯ ಸಹಾಯವಾಣಿಗೆ ಕರೆಮಾಡುವುದು.


  * ನಿಕಟ ಸ್ನೇಹಿತರ ಸಹಾಯವನ್ನು ಕೋರುವುದು, ಕುಟುಂಬಸ್ಥರ ಆಶ್ರಯ ಪಡೆಯುವುದು


  * ಸಂಗಾತಿಗಳಿಂದ ಆದಷ್ಟು ದೂರವಿರಿ ಹಾಗೂ ನಿಮ್ಮನ್ನು ಪದೇ ಪದೇ ಹಿಂಸಿಸುತ್ತಿದ್ದರೆ ಅಂತಹ ವಾತಾವರಣದಿಂದ ಹೊರಬನ್ನಿ. ನಿಮಗೆ ಸಹಾಯ ಮಾಡುವ ಜನರು ಸಾಕಷ್ಟಿದ್ದಾರೆ ಎಂಬ ಅಂಶವನ್ನು ಅರ್ಥಮಾಡಿಕೊಳ್ಳಿ. ಒಂಟಿ ಎಂಬ ಭಾವನೆ ಬೇಡ.

  Published by:Precilla Olivia Dias
  First published: