Explained: ಮಿಂಚು ಹೇಗೆ ಉಂಟಾಗುತ್ತದೆ: ಮಿಂಚು ಉಂಟಾದಾಗ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳೇನು..?

ಮಿಂಚು ನೋಡಲು ಆಕರ್ಷಣೀಯ ಎಂದೆನ್ನಿಸಿದರೂ ಮಿಂಚಿನ ಹೊಡೆತದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಸರಿಸುಮಾರು 2000 ಜನರು ಮೃತಪಡುತ್ತಿದ್ದಾರೆ. ಈ ಮಿಂಚಿನಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಕೆಲವು ಪಾಲಿಸಬೇಕಾದ ನಿಯಮಗಳು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಎಲ್ಲ ಮೋಡಗಳೂ ಗುಡುಗು ಸಿಡಿಲನ್ನು ಉಂಟು ಮಾಡುವುದಿಲ್ಲ. ಮಳೆಗಾಲದಲ್ಲಿ ನೀರಿನ ಅಂಶ ಮತ್ತು ವಿದ್ಯುತ್​ ಅಂಶಗಳನ್ನು ಹೊಂದಿರುವ ಮೋಡಗಳು ಮಾತ್ರ ಸಿಡಿಲು ಹಾಗೂ ಗುಡುಗನ್ನು ಉಂಟು ಮಾಡುತ್ತವೆ. ಧನಾತ್ಮ ಹಾಗೂ ಋಣಾತ್ಮಕ ವಿದ್ಯುತ್ ಅಂಶಗಳಿರುವ ಮೋಡಗಳು ಬೇರೆ ಬೇರೆಯಾಗಿರುತ್ತವೆ. ಇವೆರಡೂ ಪರಸ್ಪರ ವಿರುದ್ಧವಿರುವ ಮೋಡಗಳಾಗಿದ್ದು, ತುಂಬಾ ಹತ್ತಿರ ಬಂದಾಗ ಋಣ ವಿದ್ಯುತ್ ಅಂಶಗಳು ಒಮ್ಮೆಲೆ ಧನಾತ್ಮಕ ಅಂಶಗಳಿರುವ ಮೋಡದ ಕಡೆಗೆ ಅಪ್ಪಳಿಸುತ್ತವೆ. ಈ ರೀತಿ ಅಪಾರ ವಿದ್ಯುತ್​ ಅಂಶಗಳು ಒಂದು ಮೋಡದಿಂದ ಇನ್ನೊಂದು ಮೋಡಕ್ಕೆ ಜಿಗಿದಾಗ ಬೆಳ್ಳಿಯಂಥ ಪ್ರಖರ ಬೆಳಕಿನ ಗೆರೆಗಳು ಮಿಂಚಿ ಮಾಯವಾಗುತ್ತವೆ. ಇದೇ ಮಿಂಚು. ಕೆಲವೊಮ್ಮೆ ಈ ಮಿಂಚಿನ ಬೆಳಕು ಮೋಡಗಳಿಂದ ಭೂಮಿಗೂ ಹರಿಯುತ್ತವೆ. ಈ ಎರಡು ಮೋಡಗಳ ಮರ್ಧಯೆ ಇರುವ ಗಾಳಿ ಈ ವಿದ್ಯುತ್ ಆಘಾತದಿಂದ ಒಮ್ಮೆಗೆ ಕಾದು ಸಿಡಿಯುತ್ತದೆ. ಆಗ ದೊಡ್ಡದಾಡ ಶಬ್ದ ಉಂಟಾಗುತ್ತದೆ. ಇದನ್ನು ಗುಡುಗು ಎನ್ನುತ್ತೇವೆ.

ಚಂಡಮಾರುತದ ಸಮಯದಲ್ಲಿ ಚಂಡಮಾರುತದ ಮೋಡಗಳ ಒಳಗೆ ಮಳೆ, ಮಂಜು ಅಥವಾ ಹಿಮದ ಕಣಗಳ ಘರ್ಷಣೆಯಾಗುವುದರಿಂದ ಚಂಡಮಾರುತದ ಮೋಡಗಳು ಹಾಗೂ ಭೂಮಿಯ ಮೇಲೆ ಅಸಮತೋಲನ ಹೆಚ್ಚಾಗುತ್ತದೆ ಹಾಗೂ ಚಂಡಮಾರುತದ ಮೋಡಗಳ ಕಡಿಮೆ ವ್ಯಾಪ್ತಿಯನ್ನು ಋಣಾತ್ಮಕವಾಗಿ ಚಾರ್ಜ್ ಮಾಡುತ್ತದೆ. ಭೂಮಿಯ ಮೇಲಿರುವ ವಸ್ತುಗಳಾದ ಮರಗಳು ತನ್ನಷ್ಟಕ್ಕೆ ಧನಾತ್ಮಕವಾಗಿ ಚಾರ್ಜ್ ಆಗುತ್ತವೆ. ಈ ಸಮಯದಲ್ಲಿ ಉಂಟಾಗುವ ಅಸಮತೋಲನವನ್ನು ನಿಯಂತ್ರಿಸಲು ವಿದ್ಯುತ್ ಅನ್ನು ಪ್ರಹವಿಸುವ ಮೂಲಕ ಪ್ರಕೃತಿ ಪರಿಹಾರವನ್ನು ನೀಡುತ್ತದೆ.

ಮಿಂಚು ಅಂದಾಜು 30,000 ಡಿಗ್ರಿ ಸೆಲ್ಸಿಯಷ್‌ನಷ್ಟು ಬಿಸಿ ಇರುತ್ತದೆ. ಅಂದರೆ ಸೂರ್ಯನ ಮೇಲ್ಮೈಗಿಂತ ಆರು ಪಟ್ಟು ಹೆಚ್ಚು ಬಿಸಿ. ಈ ಶಾಖವು ಸುತ್ತಮುತ್ತಲಿನ ಗಾಳಿಯನ್ನು ವೇಗವಾಗಿ ವಿಸ್ತರಿಸಲು ಮತ್ತು ಕಂಪಿಸಲು ಕಾರಣವಾಗುತ್ತದೆ. ಹೀಗಾಗಿ ಮಿಂಚಿನ ಬೆಳಕಿನ ಫ್ಲ್ಯಾಶ್ ಅನ್ನು ನೋಡಿದ ಸ್ವಲ್ಪ ಸಮಯದಲ್ಲಿ ನಮಗೆ ಸಿಡಿಲಿನ ಶಬ್ಧ ಕೇಳಿಸುತ್ತದೆ.

ಮಿಂಚು ನೋಡಲು ಆಕರ್ಷಣೀಯ ಎಂದೆನ್ನಿಸಿದರೂ ಮಿಂಚಿನ ಹೊಡೆತದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಸರಿಸುಮಾರು 2000 ಜನರು ಮೃತಪಡುತ್ತಿದ್ದಾರೆ. ನೂರಾರು ಜನರು ಬದುಕುಳಿದರೂ ಅವರು ಕೆಲವೊಂದು ರೋಗಲಕ್ಷಣಗಳಾದ ನೆನಪಿನ ಶಕ್ತಿ ಕಳೆದುಕೊಳ್ಳುವುದು, ತಲೆತಿರುಗುವುದು, ಸುಸ್ತು, ಮರಗಟ್ಟುವಿಕೆ ಹಾಗೂ ಇತರ ಸುದೀರ್ಘ ಕಾಲದ ರೋಗಗಳಿಂದ ಬಳಲುತ್ತಿದ್ದಾರೆ. ಮಿಂಚಿನ ವಿಪರೀತ ಶಾಖವು ಮರದೊಳಗಿನ ನೀರನ್ನು ಆವಿಯಾಗಿಸುತ್ತದೆ ಮತ್ತು ಸಂಪೂರ್ಣ ಮರವನ್ನೇ ಉರಿಸಿ ಬೂದಿಮಾಡಿ ಬಿಡುತ್ತದೆ.

ಮಿಂಚಿನ ವಿಧಗಳು

ಮೇಘದಿಂದ ಭೂಮಿಗೆ ಅಪ್ಪಳಿಸುವ ಮಿಂಚು ಒಂದು ಸಾಮಾನ್ಯ ವಿದ್ಯಮಾನವಾಗಿದೆ. ಪ್ರತಿ ಸೆಕೆಂಡ್‌ಗೆ ಭೂಮಿಯ ಮೇಲೆ ಸುಮಾರು 100 ಮಿಂಚಿನ ಹೊಡೆತಗಳು ಸಂಭವಿಸುತ್ತವೆ. ಇವುಗಳ ಶಕ್ತಿ ಅಸಾಧಾರಣವಾಗಿದ್ದು ಇದು ಒಂದು ಬಿಲಿಯನ್ ವೋಲ್ಟ್‌ಗಳ ವಿದ್ಯುತ್ ಶಕ್ತಿಯನ್ನು ಪಡೆದಿರುತ್ತದೆ.

ಸಾಮಾನ್ಯ ಮೋಡದಿಂದ ಭೂಮಿಗೆ ಅಪ್ಪಳಿಸುವ ಮಿಂಚು ಋಣಾತ್ಮಕ ಚಾರ್ಜ್‌ಗಳ ಸರಣಿಯಂತೆ ಆರಂಭಗೊಳ್ಳುತ್ತದೆ. ಚಂಡಮಾರುತದ ಮೋಡದ ಕೆಳಗಿನಿಂದ ಭೂಮಿಯ ಕಡೆಗೆ ಸುಮಾರು 200,000 mph (300,000 kph) ವೇಗದಲ್ಲಿ ಸಂಪರ್ಕದಾರಿಯುದ್ದಕ್ಕೂ ಚಲಿಸುತ್ತದೆ. ಈ ಪ್ರತಿಯೊಂದು ವಿಭಾಗವು 150 ಫೀಟ್ (46 ಮೀಟರ್) ಉದ್ದವಿದೆ.

ಧನಾತ್ಮಕವಾಗಿ ಚಾರ್ಜ್ ಆದ ವಸ್ತುವಿನ 150 ಫೀಟ್‌ನೊಳಗೆ ಅತ್ಯಂತ ಕೆಳಹಂತವು ಬಂದಾಗ ಸ್ಟ್ರೀಮರ್ ಎಂದು ಕರೆಯಲಾದ ಧನಾತ್ಮಕ ವಿದ್ಯುತ್‌ಶಕ್ತಿಯ ಉದ್ದನೆಯ ರೇಖೆಯ ಮೂಲಕ ಸಂಪರ್ಕಕ್ಕೆ ಬರುತ್ತದೆ ಇದು ಕಟ್ಟಡ, ಮರ ಅಥವಾ ವ್ಯಕ್ತಿಯ ಮೂಲಕ ಅಭಿವೃದ್ಧಿಗೊಳ್ಳುತ್ತದೆ.

ಎರಡೂ ಸಂಪರ್ಕಕ್ಕೆ ಒಳಪಟ್ಟಾಗ ಭೂಮಿಯೆಡೆಗೆ ನಕಾರಾತ್ಮಕ ಚಾರ್ಜ್‌ಗಳು ಚಾನಲ್ ಉದ್ದಕ್ಕೂ ಭೂಮಿಗೆ ಹಾರಿದಾಗ, ಮಿಂಚು ಸುಮಾರು 200,000,000 ಮೈಲುಗಳು / ಗಂಟೆಗೆ (ಗಂಟೆಗೆ 300,000,000 ಕಿಮೀ) ವೇಗದಲ್ಲಿ ಮೇಲಕ್ಕೆ ಚಲಿಸುತ್ತಿರುವುದನ್ನು ಕಾಣಬಹುದು ಈ ಸಮಯದಲ್ಲಿ ವಿದ್ಯುತ್ ಅನ್ನು ಮಿಂಚಿಗೆ ವರ್ಗಾಯಿಸಲಾಗುತ್ತದೆ.

ಸಾಮಾನ್ಯ ವಿಧಗಳನ್ನೊಳಗೊಂಡಂತೆ ಕೆಲವು ರೀತಿಯ ಮಿಂಚುಗಳು ಮೋಡಗಳನ್ನೆಂದೂ ತ್ಯಜಿಸುವುದಿಲ್ಲ. ಆದರೆ ಮೋಡಗಳ ಒಳಗೆ ಇಲ್ಲವೇ ಅವುಗಳ ನಡುವೆ ವಿಭಿನ್ನವಾಗಿ ಚಾರ್ಜ್ ಆಗುವ ಪ್ರದೇಶಗಳ ನಡುವೆ ಪ್ರಯಾಣಿಸುತ್ತವೆ. ಇತರ ಅಪರೂಪದ ವಿಧಗಳು ತೀಕ್ಷ್ಣ ಕಾಡಿನ ಬೆಂಕಿ, ಜ್ವಾಲಾಮುಖಿ ಸ್ಫೋಟಗಳು ಮತ್ತು ಹಿಮಪಾತಕ್ಕೆ ಕಾರಣವಾಗಬಹುದು. ಚೆಂಡಿನಾಕಾರದ ಮಿಂಚು (ಬಾಲ್ ಲೈಟ್ನಿಂಗ್) ಸಣ್ಣ ಚಾರ್ಜ್ ಆದ ಗೋಳವು ಗುರುತ್ವಾಕರ್ಷಣೆ ಅಥವಾ ಭೌತಶಾಸ್ತ್ರದ ಅರಿವಲ್ಲದೆ ತೇಲುತ್ತದೆ, ಹೊಳೆಯುತ್ತದೆ ಮತ್ತು ಪುಟಿಯುತ್ತದೆ. ಇದು ವಿಜ್ಞಾನಿಗಳಿಗೆ ಇನ್ನೂ ಒಗಟಾಗಿದೆ.

ಮಿಂಚು ಉಂಟಾದಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು

ಜಾಗರೂಕರಾಗಿರಿ

ನೀವು ಹೊರಗೆ ಹೋಗುವ ಮುನ್ನ ಹವಾಮಾನ ವರದಿಯನ್ನು ಅರಿತುಕೊಳ್ಳಿ. ಮಿಂಚಿನ ಸಂಕೇತ ನಿಮ್ಮ ಗಮನಕ್ಕೆ ಬಂದರೆ ಹೊರಗೆ ಹೋಗದಿರಿ.

ಸುರಕ್ಷಿತ ಜಾಗ ಹುಡುಕಿ

ಮಿಂಚು ಉಂಟಾದಾಗ ನೀವು ಹೊರಗಡೆ ಇದ್ದಲ್ಲಿ ಸುರಕ್ಷಿತ ಜಾಗಗಳಾದ ಮುಚ್ಚಿದ ಕೊಠಡಿಗಳನ್ನು ಆರಿಸಿಕೊಳ್ಳಿ. ಮನೆ, ಕಚೇರಿ, ಶಾಪಿಂಗ್ ಸೆಂಟರ್‌ಗಳು ಮತ್ತು ತೆರೆದ ಕಿಟಕಿಯ ಗಟ್ಟಿ ಛಾವಣಿ ಹೊಂದಿರುವ ವಾಹನಗಳನ್ನು ಆಶ್ರಯಿಸಿಕೊಳ್ಳಿ. ಮರದ ಕೆಳಗೆ ಎಂದಿಗೂ ನಿಲ್ಲದಿರಿ.

ಪ್ರತ್ಯೇಕವಾಗಿರಿ

ಮಿಂಚಿನ ದಾಳಿ ಉಂಟಾಗುತ್ತಿದ್ದಲ್ಲಿ ಗುಂಪುಗೂಡದೆ ಪ್ರತ್ಯೇಕವಾಗಿರಿ. ಇದರಿಂದ ಮಿಂಚಿನ ಹೊಡೆತದಿಂದ ಉಂಟಾಗುವ ಗಾಯಗಳಿಂದ ತಪ್ಪಿಸಿಕೊಳ್ಳಬಹುದು.

ತೆರೆದ ವಾಹನಗಳು, ಸ್ಥಳಗಳಲ್ಲಿ ಆಶ್ರಯ ಪಡೆಯದಿರಿ

ಮಿಂಚಿನ ಸಮಯದಲ್ಲಿ ತೆರೆದ ವಾಹನಗಳಾದ ಮೋಟರ್ ಸೈಕಲ್‌ಗಳು, ಸೈಕಲ್‌ಗಳಲ್ಲಿ ಆಶ್ರಯ ಪಡೆಯದಿರಿ. ಗಾಲ್ಫ್ ಕಾರ್ಟ್‌ಗಳಲ್ಲಿ ತಂಗದಿರಿ. ಪಾರ್ಕ್‌ಗಳು, ಆಟದ ಮೈದಾನಗಳು, ಕೊಳಗಳು, ಸರೋವರಗಳು, ಈಜುಕೊಳಗಳಲ್ಲಿ ಮತ್ತು ಸಮುದ್ರ ತೀರಗಳಲ್ಲಿ ನಿಲ್ಲದಿರಿ.

ಉದ್ದದ ಕಟ್ಟಡಗಳ ಬಳಿ ನಿಲ್ಲದಿರಿ

ಗುಡುಗು ಮಿಂಚಿನ ಸಂದರ್ಭದಲ್ಲಿ ಕಾಂಕ್ರೀಟ್ ಮಹಡಿಗಳಲ್ಲಿ ನಿಲ್ಲದಿರಿ. ಕಾಂಕ್ರೀಟ್ ಗೋಡೆಗಳ ಮೇಲೆ ಒರಗದಿರಿ. ಯಾವುದೇ ಲೋಹಗಳು ಅಥವಾ ಪಟ್ಟಿಗಳ ಮೇಲೆ ಮಿಂಚು ಹಾದುಹೋಗುತ್ತದೆ. ಹೀಗಾಗಿ ಇದರ ಮೇಲೆ ಒರಗುವುದು ಅಪಾಯಕ್ಕೆ ಆಹ್ವಾನವನ್ನುಂಟು ಮಾಡಿದಂತೆ.

ಮನೆಯಲ್ಲಿದ್ದಾಗ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು

ನೀವು ಮನೆಯಲ್ಲಿದ್ದಾಗ ಕೂಡ ಮಿಂಚಿನ ಹೊಡೆತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಮನೆಯಲ್ಲಿದ್ದಾಗ ಯಾವುದೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನೋಡೋಣ.

ನೀರಿನ ಸಂಪರ್ಕ ಮಾಡಬೇಡಿ

ಮಿಂಚು ಬರುತ್ತಿದೆ ಎಂದಾಗ ಸ್ನಾನ ಮಾಡುವುದು, ಪಾತ್ರೆ ತೊಳೆಯುವುದು.. ಹೀಗೆ ನೀರಿನ ಸಂಪರ್ಕದಲ್ಲಿ ಬರುವ ಕೆಲಸಗಳನ್ನು ಮಾಡದಿರಿ.

ಎಲೆಕ್ಟ್ರಾನಿಕ್ ಪರಿಕರಗಳ ಬಳಕೆ ಬೇಡ

ನಿಮ್ಮ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಗೇಮ್ ಸಿಸ್ಟಮ್‌ಗಳು, ವಾಶರ್‌ಗಳು, ಡ್ರೈಯರ್‌ಗಳು, ಸ್ಟವ್‌ಗಳು ಅಥವಾ ಎಲೆಕ್ಟ್ರಾನಿಕ್ ಪರಿಕರಗಳ ಬಳಕೆಯನ್ನು ಮಾಡದಿರಿ. ಮಿಂಚಿನ ಪ್ರವಾಹವು ಎಲೆಕ್ಟ್ರಾನಿಕ್ ಸಿಸ್ಟಮ್‌ಗಳ ಮೂಲಕ ಹರಿಯುವುದರಿಂದ ಸುರಕ್ಷತೆಯನ್ನು ಪಾಲಿಸಿ.

ಕೋಡೆಡ್ ಫೋನ್‌ಗಳನ್ನು ಬಳಸದಿರಿ

ಮಿಂಚು ಉಂಟಾಗುತ್ತಿರುವಾಗ ಕೋಡ್ ಫೋನ್‌ಗಳನ್ನು ಬಳಸದಿರಿ. ಕಾರ್ಡ್‌ಲೆಸ್ ಅಥವಾ ಸೆಲ್ಯುಲಾರ್ ಫೋನ್‌ಗಳನ್ನು ಬಳಸುವುದು ಉತ್ತಮವಾಗಿದೆ.Published by:Anitha E
First published: