Explained: ಬ್ರಿಟನ್​ಗೆ ಹೊಸ ರಾಜ ಬಂದಿದ್ದೇ ತಡ ದೇಶದ ಗೀತೆ, ಧ್ವಜ, ಕರೆನ್ಸಿಗಳೆಲ್ಲಾ ಚೇಂಜ್?!

ರಾಣಿ ಎಲಿಜಬೆತ್ II ಮರಣದ ಬೆನ್ನಲ್ಲೇ 70 ವರ್ಷಗಳಿಗಿಂತಲೂ ಹೆಚ್ಚು ರಾಣಿಯ ಆಳ್ವಿಕೆಯೊಂದಿಗೆ ನಿಕಟತೆಯನ್ನು ಹೊಂದಿದ್ದ ಮತ್ತು ಸೂಚಿಸಿದ ಹಲವಾರು ವಿಷಯಗಳಲ್ಲಿ ಬದಲಾವಣೆ ಕಂಡಿದೆ. ಯುಕೆಯ ರಾಷ್ಟ್ರಜೀವನದ ಅವಿಭಾಜ್ಯ ಅಂಗವಾಗಿ ರಾಜಪ್ರಭುತ್ವವನ್ನು ಪರಿಗಣಿಸಲಾಗಿದೆ ಅಂತೆಯೇ ರಾಜನ ಚಿತ್ರ, ಲಾಂಛನಗಳು, ರಾಜನ ಹೆಸರು ಮತ್ತು ಶೀರ್ಷಿಕೆಯ ಮೊದಲಕ್ಷರನ್ನೊಳಗೊಂಡ ರಾಯಲ್ ಸೈಫರ್ ಪ್ರಭುತ್ವದ ಪ್ರಜೆಗಳ ದೈನಂದಿನ ಜೀವನದೊಂದಿಗೆ ಮಿಳಿತಗೊಂಡಿವೆ.

ಬ್ರಿಟನ್ನಿನ ಕರೆನ್ಸಿ

ಬ್ರಿಟನ್ನಿನ ಕರೆನ್ಸಿ

  • Share this:
ರಾಣಿ ಎಲಿಜಬೆತ್ II (Queen Elizabeth II) ಚಿರನಿದ್ರೆಗೆ ಜಾರುತ್ತಿದ್ದಂತೆಯೇ, 70 ವರ್ಷಗಳಿಗಿಂತಲೂ ಹೆಚ್ಚು ರಾಣಿಯ ಆಳ್ವಿಕೆಯೊಂದಿಗೆ ನಿಕಟತೆಯನ್ನು ಹೊಂದಿದ್ದ ಮತ್ತು ಸೂಚಿಸಿದ ಹಲವಾರು ವಿಷಯಗಳು ಬದಲಾವಣೆಯಾಗಿದೆ. ಯುಕೆಯ (UK) ರಾಷ್ಟ್ರಜೀವನದ ಅವಿಭಾಜ್ಯ ಅಂಗವಾಗಿ ರಾಜಪ್ರಭುತ್ವವನ್ನು ಪರಿಗಣಿಸಲಾಗಿದೆ. ಅಂತೆಯೇ ರಾಜನ ಚಿತ್ರ, ಲಾಂಛನಗಳು, ರಾಜನ ಹೆಸರು ಮತ್ತು ಶೀರ್ಷಿಕೆಯ ಮೊದಲಕ್ಷರನ್ನೊಳಗೊಂಡ ರಾಯಲ್ ಸೈಫರ್ ಪ್ರಭುತ್ವದ ಪ್ರಜೆಗಳ ದೈನಂದಿನ ಜೀವನದೊಂದಿಗೆ ಮಿಳಿತಗೊಂಡಿವೆ. ರಾಣಿ ಎಲಿಜಬೆತ್ II ಬರ್ಕ್‌ಷೈರ್‌ನ (Berkshire) ವಿಂಡ್ಸರ್ ಕ್ಯಾಸಲ್‌ನಲ್ಲಿರುವ ಕಿಂಗ್ ಜಾರ್ಜ್ VI ಸ್ಮಾರಕ ಪ್ರಾರ್ಥನಾ ಮಂದಿರದಲ್ಲಿ ತನ್ನ ಪತಿ ಪ್ರಿನ್ಸ್ ಫಿಲಿಪ್‌ನ (Prince Philip) ಸ್ಮಾರಕದ ಪಕ್ಕದಲ್ಲಿಯೇ ಚಿರನಿದ್ರೆಗೆ ಜಾರುತ್ತಿದ್ದಂತೆ, 70 ವರ್ಷಗಳಿಗಿಂತಲೂ ಹೆಚ್ಚು ಕಾಲ ಅವರ ಆಳ್ವಿಕೆಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲೀಗ ಬದಲಾವಣೆಗಳು ಕಂಡು ಬಂದಿವೆ.

ಯುಕೆಯಾದ್ಯಂತ ಧ್ವಜಗಳು ಮತ್ತು ರಾಜಪ್ರಭುತ್ವ ಮಾನದಂಡಗಳು
ರಾಯಲ್ ಸೈಫರ್, 'EIIR' ಅನ್ನು ಕೆಲವು ಸಂದರ್ಭಗಳಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ರಾಜಪ್ರಭುತ್ವದ ನಾವೆ ಹಡಗುಗಳು, ಪೊಲೀಸ್ ಠಾಣೆಗಳು ಸೇರಿದಂತೆ ಅಸಂಖ್ಯಾತ ಅಧಿಕೃತ ಕಟ್ಟಡಗಳು ಮತ್ತು ಸ್ಥಾಪನೆಗಳ ಮೇಲೆ ಹಾರುವ ಧ್ವಜಗಳ ಮೇಲೆ ಅಲಂಕರಿಸಲಾಗುತ್ತದೆ. ಬ್ರಿಟಿಷ್ ಮಿಲಿಟರಿಯು ನೀಲಿ, ಕೆಂಪು ಮತ್ತು ಚಿನ್ನದ "ಕ್ವೀನ್ಸ್ ಕಲರ್ಸ್" ಅನ್ನು ಹಾರಿಸುತ್ತದೆ ಮತ್ತು ಅನೇಕ ಧ್ವಜಗಳು 'EIIR' ಅನ್ನು ಚಿನ್ನದಲ್ಲಿ ಹೊಂದಿರುತ್ತವೆ. ಬ್ರಿಟಿಷ್ ನ್ಯಾಶನಲ್ ಫೈರ್ ಸರ್ವಿಸ್ ಎನ್‌ಸೈನ್ ರಾಣಿಯ ಹೆಸರಿನ ಮೊದಲಕ್ಷರಗಳನ್ನು ಹೊಂದಿದೆ ಮತ್ತು ರಾಣಿಯು ಮುಖ್ಯಸ್ಥರಾಗಿದ್ದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ಕೆಲವು ಕಾಮನ್‌ವೆಲ್ತ್ ದೇಶಗಳು 'ಇ ಫ್ಲ್ಯಾಗ್' ಅನ್ನು ಹೊಂದಿದ್ದು, ಅದನ್ನು ರಾಣಿಯು ಅನುಮೋದಿಸಿದ್ದರು ಮತ್ತು ಈ ದೇಶಗಳಿಗೆ ಆಕೆ ಭೇಟಿ ನೀಡಿದಾಗ ಆಕೆಯ ಉಪಸ್ಥಿತಿಯನ್ನು ಸೂಚಿಸಲು ಬಳಸಲಾಗುತ್ತಿತ್ತು.ಸುದ್ದಿಪತ್ರಿಕೆಯ ವರದಿಯ ಪ್ರಕಾರ, ರಾಯಲ್ ಸ್ಟ್ಯಾಂಡರ್ಡ್ (ರಾಜಪ್ರಭುತ್ವ ಮಾನದಂಡ), ಇಂಗ್ಲೆಂಡ್‌ಗೆ ಎರಡನೇ ಭಾಗವನ್ನು (ಕಾಲು ಭಾಗ) ಪ್ರತಿನಿಧಿಸುವ ಕ್ವಾರ್ಟರ್ಡ್ (ಕಾಲುಭಾಗದಂತೆ ವಿಭಜಿಸಿರುವ) ಧ್ವಜ ಮತ್ತು ಸ್ಕಾಟ್‌ಲ್ಯಾಂಡ್ ಮತ್ತು ಐರ್ಲೆಂಡ್‌ಗೆ ತಲಾ ಕಾಲು ಭಾಗದಂತೆ ಸಹ ಧ್ವಜವನ್ನು ಬದಲಾಯಿಸಬಹುದು. ಹೊಸ ರಾಜನು ವೇಲ್ಸ್‌ಗೆ ಪ್ರಾತಿನಿಧ್ಯವನ್ನು ಸೇರಿಸಲು ನಿರ್ಧರಿಸಬಹುದು.

ಇದನ್ನೂ ಓದಿ: Queen Elizabeth-II ಮರಣದ ನಂತರ ಸ್ಕಾಟ್ಲೆಂಡ್‌ನಲ್ಲಿ ಆಪರೇಷನ್ ಯುನಿಕಾರ್ನ್ ಜಾರಿ: ಹೀಗಂದ್ರೆ ಏನು?

ರಾಜಮನೆತನದ ಪ್ರಕಾರ, 1603 ರಲ್ಲಿ ಕಿರೀಟಗಳ ಒಕ್ಕೂಟದ ನಂತರ ಧ್ವಜವು ಹಲವಾರು ಬಾರಿ ಬದಲಾಗಿದೆ. ಇದರ ಇತ್ತೀಚಿನ ರೂಪವು ನಾಲ್ಕು ಸಮಾನ ಭಾಗಗಳ ವಿನ್ಯಾಸವಾಗಿತ್ತು, ಮೊದಲ ಮತ್ತು ನಾಲ್ಕನೇ ಭಾಗದಲ್ಲಿ ಇಂಗ್ಲೆಂಡ್ ಮೂರು ಸಿಂಹಗಳು ತಮ್ಮ ಬಲ ಪಾದಗಳನ್ನು ಮೇಲಕ್ಕೆತ್ತಿ ನಡೆಯುವಂತೆ ಪ್ರತಿನಿಧಿಸುತ್ತದೆ, ಸ್ಕಾಟ್ಲೆಂಡ್ ಎರಡನೇ ಭಾಗದಲ್ಲಿ ಹಿಂಗಾಲಿನ ಮೇಲೆ ನಿಂತಿರುವ ಸಿಂಹ ಮತ್ತು ಮೂರನೇ ಭಾಗದಲ್ಲಿ ಐರ್ಲೆಂಡ್ ವೀಣೆಯೊಂದಿಗೆ ಪ್ರತಿನಿಧಿಸುತ್ತದೆ. ರಾಣಿ 1960 ರಲ್ಲಿ ರೂಪಿಸಿದ್ದ ಹೊಸ ವೈಯಕ್ತಿಕ ಧ್ವಜವನ್ನು ಸಹ ಕಿಂಗ್ ಚಾರ್ಲ್ಸ್ III ಪಡೆಯಬಹುದು. ಎಲಿಜಬೆತ್ ಅವರದ್ದು ಗುಲಾಬಿಗಳಿಂದ ಸುತ್ತುವರಿದ ನೀಲಿ ಹಿನ್ನೆಲೆಯಲ್ಲಿ ರಾಯಲ್ ಕಿರೀಟವನ್ನು ಹೊಂದಿರುವ ಚಿನ್ನದ "E" ಆಗಿತ್ತು. ಚಾರ್ಲ್ಸ್ ಪ್ರಸ್ತುತ ವೇಲ್ಸ್‌ನಲ್ಲಿ ಬಳಕೆಗಾಗಿ ಪ್ರತ್ಯೇಕವಾಗಿ ವೈಯಕ್ತಿಕ ಧ್ವಜವನ್ನು ಹೊಂದಿದ್ದಾರೆ.

ಬ್ರಿಟಿಷ್ ರಾಷ್ಟ್ರಗೀತೆ
ಯುಕೆ ರಾಷ್ಟ್ರಗೀತೆಯು "ದೇವರೇ ನಮ್ಮ ವಿನಯಶೀಲ ರಾಣಿಯನ್ನು ರಕ್ಷಿಸು" (God save our gracious Queen) ಎಂಬುದಾಗಿದ್ದು, ಇದು ಇನ್ನು ಮುಂದೆ "ದೇವರೇ ನಮ್ಮ ವಿನಯಶೀಲ ರಾಜನನ್ನು ರಕ್ಷಿಸು" (God save our gracious King) ಎಂದು ಬದಲಾಗುತ್ತದೆ.

ಕನಿಷ್ಟ ಪಕ್ಷ 17 ನೇ ಶತಮಾನದಿಂದ ಬಳಕೆಯಲ್ಲಿದ್ದ "ಗಾಡ್ ಸೇವ್ ದಿ ಕಿಂಗ್" ಎಂಬ ಸಾಂಪ್ರದಾಯಿಕ ನುಡಿಗಟ್ಟುಗೆ ಹಿಂತಿರುಗುತ್ತದೆ. ಪ್ರಸ್ತುತ ಗೀತೆಯನ್ನು 1745 ರಿಂದ ಹಾಡಲಾಗಿದೆ ಮತ್ತು ಮೂಲತಃ "ದೇವರೇ ನಮ್ಮ ರಾಜ ಗ್ರೇಟ್ ಜಾರ್ಜ್ ಅನ್ನು ರಕ್ಷಿಸಿ, ನಮ್ಮ ಉದಾತ್ತ ರಾಜನಿಗೆ, ದೀರ್ಘಾಯುಷ್ಯವನ್ನು ನೀಡಿ" (God save great George our king, Long live our noble king, God save the king) ಎಂಬ ಪದಗಳನ್ನು ಒಳಗೊಂಡಿದೆ.

ನೇರವಾಗಿರುವ ಬದಲಾವಣೆಗಳ ಹೊರತಾಗಿಯೂ, ಸುದ್ದಿ ಪತ್ರಿಕೆ ವರದಿ ಮಾಡಿದಂತೆ, ದೊಡ್ಡ ಸಾರ್ವಜನಿಕ ಸಭೆಗಳಲ್ಲಿ ಗೀತೆಯನ್ನು ಹಾಡುವಾಗ ರಾಣಿಯಿಂದ ರಾಜನಿಗೆ ಬ್ರಿಟಿಷ್ ಸಾರ್ವಜನಿಕರು ಎಷ್ಟು ಸುಲಭವಾಗಿ ಬದಲಾಯಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ ಎಂದು ವರದಿ ಮಾಡಿದೆ.

ಯುಕೆ ಕರೆನ್ಸಿ
ಬ್ರಿಟಿಷ್ ಕರೆನ್ಸಿ ನೋಟುಗಳ ಮೇಲೆ ರಾಣಿಯ ಮುಖವಿದೆ ಮತ್ತು ಸುಮಾರು 4.5 ಬಿಲಿಯನ್ ಪೌಂಡ್ ನೋಟುಗಳು ಪ್ರಸ್ತುತ ಚಲಾವಣೆಯಲ್ಲಿದ್ದು ಒಟ್ಟು ಮೌಲ್ಯ £ 80 ಬಿಲಿಯನ್‌ಗಳಾಗಿವೆ. ಅವುಗಳನ್ನು ಬದಲಾಯಿಸಬೇಕಾಗುತ್ತದೆ, ಮತ್ತು ಪ್ರಕ್ರಿಯೆಯು ಪೂರ್ಣಗೊಳ್ಳಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ:  Queen Elizabeth II: ಪಿಎಂ ಮೋದಿ, ಪುಟಿನ್ ಸೇರಿ ವಿಶ್ವದ ಅಗ್ರ ನಾಯಕರೊಂದಿಗೆ ರಾಣಿ ಎಲಿಜಬೆತ್

ರಾಣಿ ಎಲಿಜಬೆತ್ ಅವರ ಮುಖವು 1960 ರಿಂದ ನೋಟುಗಳಲ್ಲಿ ಕಾಣಿಸಿಕೊಂಡಿದೆ ಮತ್ತು ಅವರು ಕೆಲವು ಇತರ ಕಾಮನ್‌ವೆಲ್ತ್ ಕರೆನ್ಸಿಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಕೆಲವು ನಾಣ್ಯಗಳು ಅವರ ಮುಖವನ್ನು ಒಳಗೊಂಡಿದ್ದು, ಅವುಗಳನ್ನು ಬದಲಾಯಿಸಲು ಕಾಗದದ ಕರೆನ್ಸಿಯನ್ನು ಬದಲಾಯಿಸುವುದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಆದಾಗ್ಯೂ, ಕಿಂಗ್ ಚಾರ್ಲ್ಸ್ III ರೊಂದಿಗೆ ಹೊಸದಾಗಿ ಮುದ್ರಿಸಲಾದ ಯಾವುದೇ ನಾಣ್ಯಗಳು ಮತ್ತೊಂದು ಗಮನಾರ್ಹ ವ್ಯತ್ಯಾಸವನ್ನು ಹೊಂದಿವೆ ಎಂದು ಊಹಿಸಬಹುದು - ರಾಣಿ ಎಲಿಜಬೆತ್ ಯಾವಾಗಲೂ ಬಲಕ್ಕೆ ಮುಖ ಮಾಡಿರುವಂತೆ ಚಿತ್ರಿಸಲಾಗಿದ್ದು, ಚಾರ್ಲ್ಸ್ ಎಡಕ್ಕೆ ಮುಖ ಮಾಡಿರುವಂತೆ ನಾಣ್ಯದಲ್ಲಿ ಕಾಣಿಸಿಕೊಳ್ಳಬಹುದು. ರಾಯಲ್ ಮಿಂಟ್ ಮ್ಯೂಸಿಯಂ ಪ್ರಕಾರ, ಬದಲಾಗುತ್ತಿರುವ ದಿಕ್ಕುಗಳು 300 ವರ್ಷಗಳಿಗೂ ಹೆಚ್ಚು ಕಾಲ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ, ಪ್ರತಿ ರಾಜ ಅಥವಾ ರಾಣಿ ತಮ್ಮ ಪೂರ್ವವರ್ತಿಯಾಗಿ ವಿರುದ್ಧ ದಿಕ್ಕಿನಲ್ಲಿ ಮುಖ ಮಾಡಿರುವಂತೆ ಕಾಣಿಸುತ್ತಾರೆ.

ಬ್ರಿಟನ್‌ನಲ್ಲಿ ಅಂಚೆ ಪೆಟ್ಟಿಗೆಗಳು
ರಾಜಪ್ರಭುತ್ವ ಪೋಸ್ಟ್ ಬಾಕ್ಸ್‌ಗಳು ರಾಣಿ ಎಲಿಜಬೆತ್ ಅವರ ಸೈಫರ್ 'ER', (ಹೆಸರು ಮತ್ತು ಶೀರ್ಷಿಕೆಯ ಮೊದಲಕ್ಷರ) ಅನ್ನು ಹೊಂದಿದ್ದು, ಇದು ಬ್ರಿಟಿಷ್ ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ಹಾಗೆಯೇ ಉಳಿಯುವ ಸಾಧ್ಯತೆಯಿದೆ. ಸಿಂಹಾಸನದ ಮೇಲೆ ಎಲಿಜಬೆತ್ II ರ ಪೂರ್ವಾಧಿಕಾರಿಯಾದ ಕಿಂಗ್ ಜಾರ್ಜ್ VI ರ 'GR' ಸೈಫರ್‌ನೊಂದಿಗೆ ಕೆಲವು ಪೋಸ್ಟ್ ಬಾಕ್ಸ್‌ಗಳು ಇಂದಿಗೂ ಬಳಕೆಯಲ್ಲಿವೆ ಎಂದು ಸುದ್ದಿ ಪತ್ರಿಕೆ ವರದಿಯು ಮಾಹಿತಿ ನೀಡಿದೆ. ಅಂಚೆ ಕಚೇರಿಗಳು ಬಳಸುವ ಅಂಚೆಚೀಟಿಗಳು ಬದಲಾಗುತ್ತವೆ ಮತ್ತು ಹೊಸ ರಾಜನ ಮುಖವನ್ನು ಅಳವಡಿಸಲಾಗುತ್ತದೆ.

ಇದನ್ನೂ ಓದಿ:  Queen Elizabeth II: ರಾಣಿ ಎಲಿಜಬೆತ್ ಬದುಕಿನ ಅಪರೂಪದ ಚಿತ್ರಗಳಿವು

ರಾಣಿಯ ಭಾವಚಿತ್ರದ ಹಲವಾರು ಪುನರಾವರ್ತನೆಗಳನ್ನು ಅಂದಿನಿಂದಲೂ ಬ್ರಿಟಿಷ್ ಅಂಚೆಚೀಟಿಗಳಲ್ಲಿ ಪ್ರದರ್ಶಿಸಲಾಗಿದೆ, ವಾರ್ಷಿಕೋತ್ಸವಗಳು, ಜನ್ಮದಿನಗಳು ಮತ್ತು ಜಯಂತಿಗಳ ಸಮಯದಲ್ಲಿ ವಿಶೇಷ ವಿನ್ಯಾಸಗಳನ್ನು ಬಳಸಲಾಗುತ್ತದೆ. ಇತ್ತೀಚಿನ ಅಂಚೆಚೀಟಿಗಳನ್ನು ಫೆಬ್ರವರಿಯಲ್ಲಿ ರಾಣಿಯ ಪ್ಲಾಟಿನಂ ಜುಬಿಲಿಯ ಸಮಯದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಆಕೆಯ ಆಳ್ವಿಕೆಯ ಉದ್ದಕ್ಕೂ 'ಹರ್ ಮೆಜೆಸ್ಟಿ'ಯ ಎಂಟು ವಿಭಿನ್ನ ಛಾಯಾಚಿತ್ರಗಳನ್ನು ತೋರಿಸಲಾಯಿತು.

ರಾಜ ಚಾರ್ಲ್ಸ್ III ರನ್ನು ಚಿತ್ರಿಸುವ ಹೊಸ ಅಂಚೆಚೀಟಿಗಳನ್ನು ಮುದ್ರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಬಕಿಂಗ್‌ಹ್ಯಾಮ್ ಅರಮನೆಯೊಂದಿಗೆ ಸಮಾಲೋಚಿಸಿದ ನಂತರ ನಾವು ಎಲ್ಲಾ ಸ್ಟಾಂಪ್ ಚಿತ್ರಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ" ಎಂದು ರಾಯಲ್ ಮೇಲ್ ವಕ್ತಾರರು ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಎಲಿಜಬೆತ್ ಅವರ ಸಾವಿಗೆ ಮುಂಚಿತವಾಗಿ, ಅಂಚೆ ಒಕ್ಕೂಟವು ಶುಕ್ರವಾರ ಮುಷ್ಕರ ನಡೆಸಲು ಯೋಜಿಸಿತ್ತು. ರಾಜಮನೆತನದ ಅಧಿಕೃತ ಶೋಕಾಚರಣೆಯ ಅವಧಿ ಮುಗಿದ ನಂತರ - ಸೆಪ್ಟೆಂಬರ್ 30 ರವರೆಗೆ ತಡೆಹಿಡಿಯುವುದಾಗಿ ಯೂನಿಯನ್ ಗುರುವಾರ ಹೇಳಿದೆ.

ರಾಣಿಯ ಹೆಸರಿನಲ್ಲಿ ಪ್ರತಿಜ್ಞೆ
ಎಲ್ಲಾ ಬ್ರಿಟಿಷ್ ಸಂಸದರು ರಾಜಪ್ರಭುತ್ವಕ್ಕೆ ತಮ್ಮ ನಿಷ್ಠೆಯನ್ನು ಪ್ರತಿಜ್ಞೆಯ ಮೂಲಕ ಸಾರಬೇಕು, ಅವರು ಈ ರೀತಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ: “ನಾನು ನಿಷ್ಠಾವಂತನಾಗಿರುತ್ತೇನೆ ಮತ್ತು ಕಾನೂನಿನ ಪ್ರಕಾರ ಅವರ ಉತ್ತರಾಧಿಕಾರಿಗಳು ಮತ್ತು ಉತ್ತರಾಧಿಕಾರಿಯಾದ ಹರ್ ಮೆಜೆಸ್ಟಿ (ರಾಣಿಗೆ ನೀಡುವ ಗೌರವ) ರಾಣಿ ಎಲಿಜಬೆತ್‌ಗೆ ನಿಜವಾದ ನಿಷ್ಠೆಯನ್ನು ಹೊಂದುತ್ತೇನೆ ಎಂದು ಸರ್ವಶಕ್ತ ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ಆದುದರಿಂದ ದೇವರೇ ನನಗೆ ಸಹಾಯ ಮಾಡು.” ಅದು ಈಗ ಬದಲಾಗಲಿದೆ. ಹೌಸ್ ಆಫ್ ಕಾಮನ್ಸ್ ಮತ್ತು ಲಾರ್ಡ್ಸ್ ಹೊಸ ರಾಜ ಚಾರ್ಲ್ಸ್‌ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.

ಇದನ್ನೂ ಓದಿ:  Queen Elizabeth II: ಪಾಸ್​ಪೋರ್ಟ್​ ಇರಲಿಲ್ಲ, ವೀಸಾ ಇಲ್ಲದೇ ವಿಶ್ವಾದ್ಯಂತ ಟ್ರಾವೆಲ್ ಮಾಡ್ತಿದ್ದ ರಾಣಿ ಎಜಿಜಬೆತ್!

ಅಲ್ಲದೆ, UK ಯ ನಾಗರಿಕರಾಗುವವರು "ಹರ್ ಮೆಜೆಸ್ಟಿ ರಾಣಿ ಎಲಿಜಬೆತ್ II , ಅವರ ಹಕ್ಕುದಾರರು ಮತ್ತು ವಾರಸುದಾರರಿಗೆ ನಿಜವಾದ ನಿಷ್ಠೆಯನ್ನು ಹೊಂದಲು" ಎಂಬುದಾಗಿ ಪ್ರತಿಜ್ಞೆ ಮಾಡುತ್ತಾರೆ. ಈಗ ಅದೂ ಬದಲಾಗಲಿದೆ ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಇತರ ಕೆಲವು ಸಮವಸ್ತ್ರಧಾರಿ ಪಡೆಗಳ ಸದಸ್ಯರು ರಾಣಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದಂತೆ ಅದೂ ಬದಲಾಗುವ ಸಾಧ್ಯತೆಯಿದೆ.
Published by:Ashwini Prabhu
First published: