ಅಮೆರಿಕದ ಹಲವು ಪ್ರದೇಶಗಳಲ್ಲಿ ಬಿಸಿ ಗಾಳಿ ಬೀಸುತ್ತಿದ್ದು, ಅತಿಯಾದ ಶಾಖದ ಎಚ್ಚರಿಕೆ ನೀಡಲಾಗಿದೆ. ಯುಎಸ್ನ ರಾಷ್ಟ್ರೀಯ ಹವಾಮಾನ ಸೇವೆ ವಾಷಿಂಗ್ಟನ್ ರಾಜ್ಯ ಮತ್ತು ಒರೆಗಾನ್ಗೆ ಮತ್ತೊಂದು ಬಾರಿ ತೀವ್ರವಾದ ಶಾಖದ ಎಚ್ಚರಿಕೆಯನ್ನು ನೀಡಿದೆ. ಮುಂದಿನ ಭಾನುವಾರದವರೆಗೆ ಈ ಬಿಸಿ ಗಾಳಿಯಿಂದ ಆ ಪ್ರದೇಶಗಳ ಜನತೆ ನಾನಾ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ಇನ್ನು, ಈಶಾನ್ಯ ಪ್ರದೇಶಗಳಾದ ಫಿಲಡೆಲ್ಫಿಯಾದಿಂದ ಬೋಸ್ಟನ್ವರೆಗೆ ಸಹ ಬಿಸಿ ಗಾಳಿಯ ಬಗ್ಗೆ ಎಚ್ಚರಿಕೆಗಳನ್ನು ನೀಡಲಾಗಿದೆ. ಈ ಬಿಸಿ ಗಾಳಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ:
ಬಿಸಿ ಗಾಳಿಗೆ ಕಾರಣವೇನು?
ದೇಶದ ಹೆಚ್ಚಿನ ಭಾಗಗಳಲ್ಲಿ, ತಾಪಮಾನವು ಎರಡು ಅಥವಾ ಅದಕ್ಕಿಂತ ಹೆಚ್ಚು ದಿನಗಳವರೆಗೆ ಬಿಸಿ ಗಾಳಿ ಎಂದು ಅಧಿಕೃತವಾಗಿ ಹೇಳಲು ಅಲ್ಲಿನ ತಾಪಮಾನ ಸರಾಸರಿಗಿಂತ ಹೆಚ್ಚಿರಬೇಕು. ಆದರೆ ಈ ವ್ಯಾಖ್ಯಾನವು ಪ್ರದೇಶದಿಂದ ಬದಲಾಗಬಹುದು; ಈಶಾನ್ಯದಲ್ಲಿ ಸತತ ಮೂರು ದಿನ 90 ಡಿಗ್ರಿ ಫ್ಯಾರನ್ಹೀಟ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಇದ್ದರೆ ಇದನ್ನು ಬಿಸಿ ಗಾಳಿ ಎಂದು ಕರೆಯಬಹುದು ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ ಹೇಳುತ್ತದೆ.
ವಾತಾವರಣದಲ್ಲಿನ ಹೆಚ್ಚಿನ ಒತ್ತಡವು ಬೆಚ್ಚಗಿನ ಗಾಳಿಯನ್ನು ಭೂಮಿಯ ಕಡೆಗೆ ತಳ್ಳಿದಾಗ ಬಿಸಿ ಗಾಳಿಯ ಶಾಖ ಆರಂಭವಾಗುತ್ತದೆ. ಅದು ಸಂಕುಚಿತಗೊಂಡಂತೆ ಆ ಗಾಳಿಯು ಮತ್ತಷ್ಟು ಬೆಚ್ಚಗಾಗುತ್ತದೆ, ನಂತರ ನಮಗೆ ಹೆಚ್ಚು ಶಾಖದ ಅನುಭವ ಉಂಟಾಗುತ್ತದೆ.
ಭೂಮಿಯ ಮೇಲೆ ಅಧಿಕ-ಒತ್ತಡದ ವ್ಯವಸ್ಥೆಯು ಲಂಬವಾಗಿ ವಿಸ್ತರಿಸಿದಾಗ ಇತರ ಹವಾಮಾನ ವ್ಯವಸ್ಥೆಗಳನ್ನು ಬದಲಾಯಿಸುತ್ತದೆ. ಇದು ಗಾಳಿ ಮತ್ತು ಮೋಡದ ಹೊದಿಕೆಯನ್ನು ಸಹ ಕಡಿಮೆ ಮಾಡುತ್ತದೆ, ಇದರಿಂದಾಗಿ ಗಾಳಿಯು ಹೆಚ್ಚು ಗಟ್ಟಿಯಾಗುತ್ತದೆ. ಇದಕ್ಕಾಗಿಯೇ ಬಿಸಿ ಗಾಳಿಯು ಹಲವಾರು ದಿನಗಳವರೆಗೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯದವರೆಗೆ ಒಂದು ಪ್ರದೇಶದಲ್ಲೇ ನೆಲೆಸುತ್ತದೆ.
ಶಾಖ ಗುಮ್ಮಟ ಎಂದರೇನು..?
ಭೂಮಿಯು ಬೆಚ್ಚಗಾಗುತ್ತಿದ್ದಂತೆ, ಅದು ತೇವಾಂಶವನ್ನು ಕಳೆದುಕೊಳ್ಳುತ್ತದೆ, ಇದರಿಂದಾಗಿ ಮತ್ತಷ್ಟು ಬಿಸಿ ಮಾಡಲು ಸುಲಭವಾಗುತ್ತದೆ. ಮತ್ತು ಬರಪೀಡಿತ ಪಶ್ಚಿಮದ ಪ್ರದೇಶದಲ್ಲಿ, ಮೊದಲೇ ಸಾಕಷ್ಟು ಬಿಸಿ ಇದ್ದು, ಇಲ್ಲಿ ಅಧಿಕ ಒತ್ತಡದ ವ್ಯವಸ್ಥೆಯಿಂದ ಬಿಸಿ ಗಾಳಿ ಇನ್ನೂ ಹೆಚ್ಚಾಗಬಹುದು.
ಈ ರೀತಿ ಭೂಮಿಯಲ್ಲಿ ಸಿಕ್ಕಿಬಿದ್ದ ಶಾಖವು ಬೆಚ್ಚಗಾಗುತ್ತಲೇ ಇರುವುದರಿಂದ, ಮಡಕೆಯ ಮೇಲೆ ಮುಚ್ಚಳದಂತೆ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ. - ಇದರಿಂದ ಶಾಖ ಗುಮ್ಮಟ ಎಂಬ ಹೆಸರನ್ನು ಗಳಿಸಿದೆ. ಪೆಸಿಫಿಕ್ ವಾಯುವ್ಯದಲ್ಲಿ, ಶಾಖ ಮತ್ತು ಬರ ಎರಡರ ಸಾಂಗತ್ಯದಿಂದ ಈ ಬಿಸಿ ಗಾಳಿಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಮತ್ತು ದಿನದಿಂದ ದಿನಕ್ಕೆ ಹೆಚ್ಚು ತಾಪಮಾನ ದಾಖಲಾಗುತ್ತಾ ಹೋಗುತ್ತದೆ.
ಉತ್ತರ ಅಮೆರಿಕದ ಯಾವ ಸ್ಥಳಗಳಲ್ಲಿ ಪ್ರಸ್ತುತ ಬಿಸಿ ಗಾಳಿಯ ಅನುಭವವಾಗುತ್ತಿದೆ..?
ಪೋರ್ಟ್ಲ್ಯಾಂಡ್ನ ನೈರುತ್ಯ ದಿಕ್ಕಿನಲ್ಲಿ 45 ಮೈಲಿ ದೂರದಲ್ಲಿರುವ ಒರೆಗಾನ್ನ ಸಲಂನಲ್ಲಿ ಸೋಮವಾರ ಮಧ್ಯಾಹ್ನ ಗರಿಷ್ಠ ತಾಪಮಾನ 117 ಡಿಗ್ರಿ ಫ್ಯಾರನ್ಹೀಟ್ಗೆ ತಲುಪಿತ್ತು, ಇದು ಆ ನಗರದ ದಾಖಲೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ. ಪೋರ್ಟ್ಲ್ಯಾಂಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಭಾನುವಾರ 112 ಡಿಗ್ರಿ ಫ್ಯಾರನ್ಹೀಟ್ ಮತ್ತು ಸೋಮವಾರ 115 ಡಿಗ್ರಿ ಫ್ಯಾರನ್ಹೀಟ್ ತಾಪಮಾನವಿತ್ತು. ಸೋಮವಾರ ಈ ವಿಮಾನ ನಿಲ್ದಾಣದಲ್ಲಿ ದಾಖಲಾದ ಈ ತಾಪಮಾನ ಅತಿ ಹೆಚ್ಚು ಎಂದೂ ಹೇಳಲಾಗಿದೆ.
ಕೆನಡಾದಲ್ಲಿ ಸಹ ಬಿಸಿ ಗಾಳಿಯ ಅನುಭವ ಹೆಚ್ಚಾಗಿದ್ದು, ಅಲ್ಲಿನ ಬ್ರಿಟಿಷ್ ಕೊಲಂಬಿಯಾದ ಒಂದು ಸಣ್ಣ ಪಟ್ಟಣದಲ್ಲಿನ ಭಾನುವಾರದ ತಾಪಮಾನವು ಸುಮಾರು 116 ಡಿಗ್ರಿ ಫ್ಯಾರನ್ಹೀಟ್ ತಲುಪಿ ಅಲ್ಲಿನ 84 ವರ್ಷದ ರಾಷ್ಟ್ರೀಯ ದಾಖಲೆಯನ್ನು ಮುರಿಯಿತು.
ವಾಯುವ್ಯದಿಂದ ಪ್ರತ್ಯೇಕ ಹವಾಮಾನ ವ್ಯವಸ್ಥೆಯಡಿಯಲ್ಲಿ ಈಶಾನ್ಯವು ಮೂರು ದಿನಗಳ ಬಿಸಿ ಗಾಳಿಯ ಮಧ್ಯದಲ್ಲಿದ್ದು, ಗುರುವಾರ ಕೊನೆಗೊಳ್ಳುವ ನಿರೀಕ್ಷೆಯಿದೆ. ಬೋಸ್ಟನ್ ಸೋಮವಾರ 97 ಡಿಗ್ರಿ ಫ್ಯಾರನ್ಹೀಟ್ ತಲುಪಿದ್ದು, ಆ ದಿನಾಂಕದಲ್ಲಿ ಹಿಂದಿನ ವರ್ಷಗಳನ್ನು ಹೋಲಿಸಿದರೆ ಇದೂ ದಾಖಲೆಯೇ ಎಂದು ಯುಎಸ್ನ ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ.
ಸಂಭವನೀಯ ವಿದ್ಯುತ್ ಕಡಿತದಿಂದ ನನ್ನನ್ನುನಾನು ಹೇಗೆ ರಕ್ಷಿಸಿಕೊಳ್ಳಬಹುದು..?
ಸಿಯಾಟಲ್ನಲ್ಲಿ, ಈ ತಿಂಗಳವರೆಗೆ ಕಳೆದ ಶತಮಾನದ ಅಧಿಕೃತ ಹವಾಮಾನ ಕೇಂದ್ರಗಳು 100 ಡಿಗ್ರಿ ಫ್ಯಾರನ್ಹೀಟ್ಗಳನ್ನು ಮೀರಿದ ಮೂರು ದಿನಗಳನ್ನು ದಾಖಲಿಸಿದ್ದವು. ಇಲ್ಲಿನ ನಿವಾಸಿಗಳು ಈಗ ಇತ್ತೀಚೆಗೆ ಹವಾನಿಯಂತ್ರಣ ಘಟಕಗಳನ್ನು ಖರೀದಿಸಿದ್ದಾರೆ. ಪೆಸಿಫಿಕ್ ವಾಯುವ್ಯದಲ್ಲಿ ಯಾವುದೇ ಪ್ರಮುಖ ಪವರ್ ಕಟ್ ಇಲ್ಲದಿದ್ದರೂ, ಕಟ್ಟಡಗಳನ್ನು ತಂಪಾಗಿಸಲು ಮತ್ತು ನಿರ್ಜಲೀಕರಣಗೊಳಿಸಲು ಹೆಚ್ಚಿನ ವಿದ್ಯುತ್ ಶಕ್ತಿಯ ಬೇಡಿಕೆಗಳೊಂದಿಗೆ ವಿದ್ಯುತ್ ಗ್ರಿಡ್ ಓವರ್ಲೋಡ್ ಆಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ