Explained: ಕೋವಿಡ್-19 ಲಕ್ಷಣವಿದ್ರೂ ಟೆಸ್ಟ್​​​ನಲ್ಲಿ 'ನೆಗೆಟಿವ್' ಬಂದಿದ್ಯಾ? ಹಾಗಂತ ಮೈ ಮರೆಯಬೇಡಿ!

ಹೊಸ ರೂಪಾಂತರಗಳೊಂದಿಗೆ, ಕೋವಿಡ್-19 (COVID-19) ಸಾಂಕ್ರಾಮಿಕ ರೋಗವು ಸಹ ಸೌಮ್ಯ ಲಕ್ಷಣ ಪಡೆದುಕೊಂಡಿದೆ. ಈಗಂತೂ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದಾರೆ. ಜೊತೆಗೆ ರೋಗಲಕ್ಷಣಗಳನ್ನು (Symptoms) ಅನುಭವಿಸುತ್ತಲೇ ಇದ್ದಾರೆ. ಅದರಲ್ಲೂ ಕೆಲವೊಮ್ಮೆ ಚೇತರಿಸಿಕೊಂಡ ನಂತರವೂ ಸಹ ಕೆಲವು ವಾರಗಳು ಮತ್ತು ತಿಂಗಳುಗಳವರೆಗೆ ಈ ರೋಗಲಕ್ಷಣಗಳು ಹಾಗೆಯೇ ಇರುತ್ತವೆ!

ಕೋವಿಡ್-19

ಕೋವಿಡ್-19

 • Share this:
ಹೊಸ ರೂಪಾಂತರಗಳೊಂದಿಗೆ, ಕೋವಿಡ್-19 (COVID-19) ಸಾಂಕ್ರಾಮಿಕ ರೋಗವು ಸಹ ಸೌಮ್ಯ ತಿರುವು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದಾರೆ ಮತ್ತು ದೇಹವನ್ನು ದುರ್ಬಲಗೊಳಿಸುವ ರೋಗಲಕ್ಷಣಗಳನ್ನು (Symptoms) ಅನುಭವಿಸುತ್ತಲೇ ಇದ್ದಾರೆ. ಅದರಲ್ಲೂ ಕೆಲವೊಮ್ಮೆ ಚೇತರಿಸಿಕೊಂಡ ನಂತರವೂ ಸಹ ಕೆಲವು ವಾರಗಳು ಮತ್ತು ತಿಂಗಳುಗಳವರೆಗೆ ಈ ರೋಗಲಕ್ಷಣಗಳು ಹಾಗೆಯೇ ಇರುತ್ತಿವೆ. ಆದರೆ ಈ ಹಿಂದೆ ಮತ್ತು ಇಂದಿನ ದಿನಗಳಲ್ಲಿ ಸಾಕಷ್ಟು ಗೊಂದಲವನ್ನು (confusions) ಉಂಟು ಮಾಡಿರುವುದು ಕೋವಿಡ್-19 ಸಂಬಂಧಿತ ರೋಗಲಕ್ಷಣಗಳೊಂದಿಗೆ ಸಹ ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ (Negative) ಬರುವುದು. 

ಪ್ರಕರಣಗಳು ಹೆಚ್ಚುತ್ತಿದ್ದರೆ, ಅದು ಸಂಪೂರ್ಣವಾಗಿ ವಿಭಿನ್ನ ಪರಿಸ್ಥಿತಿಯಾಗಿರುತ್ತದೆ. ಆದರೆ ಈಗ ಪ್ರಕರಣಗಳು ಅಷ್ಟಾಗಿಲ್ಲ, ನಮ್ಮಲ್ಲಿ ಕಾಣಿಸಿಕೊಂಡಿರುವ ರೋಗಲಕ್ಷಣಗಳು ನಿಜವಾಗಿಯೂ ಕೋವಿಡ್ ಅನ್ನು ಸೂಚಿಸುತ್ತವೆಯೇ ಅಥವಾ ಈ ಟೆಸ್ಟ್ ಗಳು ಕೇವಲ ಸುಳ್ಳು ಫಲಿತಾಂಶವನ್ನು ನೀಡುತ್ತಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 • ನಿಮ್ಮಲಿರುವ ರೋಗಲಕ್ಷಣಗಳು ಯಾವುವು?
  ಎಸ್ಎಆರ್-ಕೋವ್-2 ವೈರಸ್ ಉಸಿರಾಟದ ಕಾಯಿಲೆಯಾಗಿರುವುದರಿಂದ, ಇದು ಜ್ವರ, ಕೆಮ್ಮು, ಗಂಟಲು ಕೆರೆತ, ಆಯಾಸ, ಮೂಗು ಸೋರುವಿಕೆ, ವಾಸನೆ ಮತ್ತು ರುಚಿಯ ಪ್ರಜ್ಞೆ ಕಳೆದುಕೊಳ್ಳುವುದು ಮತ್ತು ದೇಹದ ನೋವು ಮತ್ತು ಉಸಿರಾಟದ ತೊಂದರೆ, ಎದೆ ನೋವು ಮತ್ತು ದೇಹದಲ್ಲಿ ಕಡಿಮೆ ರಕ್ತದ ಆಮ್ಲಜನಕದ ಮಟ್ಟ ಸೇರಿದಂತೆ ತೀವ್ರ ರೋಗಲಕ್ಷಣಗಳಿಗೆ ಕಾರಣವಾಗಬಹುದು.


ಈ ರೋಗಲಕ್ಷಣಗಳ ಸಂಯೋಜನೆಯನ್ನು ಹೊಂದಿರುವುದು ನಿಮಗೆ ಕೋವಿಡ್-19 ಇದೆ ಎಂದು ಸೂಚಿಸುತ್ತದೆ. ಆದಾಗ್ಯೂ, ಇದು ಅಷ್ಟು ಸುಲಭವಲ್ಲ. ನೆಗಡಿ ಮತ್ತು ಜ್ವರ ಸೇರಿದಂತೆ ಇತರ ಅನೇಕ ಉಸಿರಾಟದ ಸೋಂಕುಗಳು ಇದೇ ರೀತಿಯ ರೋಗಲಕ್ಷಣಗಳೊಂದಿಗೆ ಸಂಬಂಧ ಹೊಂದಿವೆ, ಇದು ಅತ್ಯಂತ ಗೊಂದಲಮಯವಾಗಬಹುದು. ಇದಕ್ಕಾಗಿಯೇ ತಜ್ಞರು ನಿಮ್ಮನ್ನು ತಕ್ಷಣವೇ ಪರೀಕ್ಷೆಗೆ ಒಳಪಡಿಸಲು ಶಿಫಾರಸು ಮಾಡುತ್ತಾರೆ.

ಆದರೆ ನೀವು ಈ ಎಲ್ಲಾ ರೋಗಲಕ್ಷಣಗಳನ್ನು ಹೊಂದಿದ್ದರೂ ಸಹ ನಿಮ್ಮ ಕೋವಿಡ್ ಟೆಸ್ಟ್ ಮಾತ್ರ ಬೇರೆ ಫಲಿತಾಂಶಗಳನ್ನು ನೀಡುತ್ತಿದ್ದರೆ ಏನು ಮಾಡುವುದು.

 • ನೀವು ಸುಳ್ಳು ನೆಗೆಟಿವ್ ಫಲಿತಾಂಶಗಳ ಬಗ್ಗೆ ಕೇಳಿದ್ದೀರಾ?
  ನೆಗೆಟಿವ್ ಪರೀಕ್ಷೆಯ ಫಲಿತಾಂಶವನ್ನು ಪಡೆಯುವುದು ಬಹಳಷ್ಟು ವಿಷಯಗಳನ್ನು ಅರ್ಥೈಸಬಹುದು. ಅದರ ಹಿಂದಿನ ಒಂದು ಕಾರಣವು ಸುಳ್ಳು ನೆಗೆಟಿವ್ ಫಲಿತಾಂಶ ಸಹ ಆಗಿರಬಹುದು. ಕೋವಿಡ್-19 ಪರೀಕ್ಷೆಯ ನಿಖರತೆಯು ನೀವು ಪಡೆಯುವ ಪರೀಕ್ಷೆಯ ವಿಧ ಮತ್ತು ಮಾದರಿಯನ್ನು ಎಷ್ಟು ಪರಿಣಾಮಕಾರಿಯಾಗಿ ಸಂಗ್ರಹಿಸಲಾಗಿದೆ ಎಂಬುದು ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.


ಇದನ್ನೂ ಓದಿ:  Tomato Flu: ಟೊಮ್ಯಾಟೋ ಜ್ವರದ ರೋಗಲಕ್ಷಣಗಳೇನು? ಚಿಕ್ಕಮಕ್ಕಳಲ್ಲಿ ಈ ರೋಗ ಕಂಡುಬರಲು ಕಾರಣವೇನು?

ವ್ಯಾಪಕವಾಗಿ ತಿಳಿದಿರುವ ಎರಡು ಪರೀಕ್ಷಾ ವಿಧಾನಗಳಲ್ಲಿ ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ (ಆರ್‌ಎಟಿ) ಅಥವಾ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಪರೀಕ್ಷೆ ಸೇರಿವೆ, ಇದನ್ನು ದೇಹದಲ್ಲಿ ವೈರಸ್ ಅನ್ನು ಪತ್ತೆ ಹಚ್ಚಲು ಉತ್ತಮವಾದ ಮಾನದಂಡ ಎಂದು ಹೇಳಲಾಗುತ್ತದೆ. ಕ್ಷಿಪ್ರ ಪರೀಕ್ಷೆಯು ತ್ವರಿತ ಫಲಿತಾಂಶಗಳನ್ನು ನೀಡುತ್ತದೆಯಾದರೂ, ಅದು ಸುಳ್ಳು ನೆಗೆಟಿವ್ ಫಲಿತಾಂಶ ನೀಡುವ ಹೆಚ್ಚಿನ ಅವಕಾಶವನ್ನು ಹೊಂದಿದೆ. ಆದಾಗ್ಯೂ, ಆರ್‌ಟಿಪಿಸಿಆರ್ ಪರೀಕ್ಷೆಯು ಫಲಿತಾಂಶಗಳನ್ನು ನೀಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಆದರೆ ಹೆಚ್ಚು ನಿಖರವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಆದರೆ ಆರ್‌ಟಿಪಿಸಿಆರ್ ಪರೀಕ್ಷೆಯೊಂದಿಗೆ ಸುಳ್ಳು ನೆಗೆಟಿವ್ ಫಲಿತಾಂಶ ಸಹ ಕೆಲವು ಬಾರಿ ಸಾಧ್ಯ ಎಂಬುದನ್ನು ಗಮನಿಸಿ, ಇದು ಸಾಮಾನ್ಯವಾಗಿ ಪರೀಕ್ಷಾ ಮಾದರಿಗಳನ್ನು ಮೂಗು ಅಥವಾ ಗಂಟಲಿನಿಂದ ಸರಿಯಾಗಿ ಸಂಗ್ರಹಿಸದಿದ್ದಾಗ ಸಂಭವಿಸುತ್ತದೆ. ಇದಲ್ಲದೆ, ವೈರಸ್ ಇನ್ನೂ ಅದರ ಬೆಳವಣಿಗೆಯ ಹಂತದಲ್ಲಿದ್ದರೆ, ಪರೀಕ್ಷೆಯು ಸುಳ್ಳು ನೆಗೆಟಿವ್ ಫಲಿತಾಂಶವನ್ನು ತೋರಿಸಬಹುದು.

 • ಇದಕ್ಕೆ ಹೊಸ ಕೋವಿಡ್ ತಳಿಗಳನ್ನು ದೂಷಿಸಲಾಗಿದೆಯೇ?
  ಕೋವಿಡ್-19 ವೈರಸ್ ನಲ್ಲಿ ಇದೀಗ ತುಂಬಾ ತಳಿಗಳು ಹುಟ್ಟಿಕೊಂಡಿವೆ ಎಂದು ಹೇಳಬಹುದು. ಡೆಲ್ಟಾ ಅಂತಹ ಕೆಲವು ತಳಿಗಳು ತುಂಬಾನೇ ತೀವ್ರವಾಗಿವೆ ಮತ್ತು ಒಮಿಕ್ರಾನ್ ಅಂತಹ ರೂಪಾಂತರಗಳು ತುಂಬಾನೇ ಸೌಮ್ಯವಾಗಿವೆ. ಆದಾಗ್ಯೂ, ಹೊಸ ರೂಪಾಂತರಗಳು ಮತ್ತು ಅದರ ಉಪ-ರೂಪಾಂತರಗಳು ಪರೀಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಹಿಂದಿನ ವರದಿಗಳು ಸೂಚಿಸಿವೆ.


ಸಕಾರಾತ್ಮಕ ಸುದ್ದಿಯೆಂದರೆ, ಇದನ್ನು ಸೂಚಿಸಲು ಯಾವುದೇ ಬಲವಾದ ಪುರಾವೆಗಳಿಲ್ಲ. "ಎಫ್‌ಡಿಎ ಅಧಿಕೃತ ಪರೀಕ್ಷೆಗಳಿಂದ ಕಂಡು ಹಿಡಿಯಲಾಗದ ಹೊಸ ರೂಪಾಂತರವು ಹರಡುತ್ತಿದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ" ಎಂದು ಫೋರ್ಬ್ಸ್ ವರದಿ ಮಾಡಿದೆ.

 • ಇದು ಬಹುಶಃ ಬೇರೆ ಏನೋ ಆಗಿರಬಹುದು
  ನೀವು ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಪಡೆದಿದ್ದರೆ, ಮಾದರಿಗಳನ್ನು ನಿಖರವಾಗಿ ಸಂಗ್ರಹಿಸಿದ್ದರೆ ಮತ್ತು ಇನ್ನೂ ಸಹ ಫಲಿತಾಂಶ ನೆಗೆಟಿವ್ ಬಂದರೆ, ನಿಮಗೆ ಕೋವಿಡ್-19 ಹೊರತು ಪಡಿಸಿ ಬೇರೆ ಏನಾದರೂ ಇರಬಹುದು ಎಂದು ಸಹ ಅರ್ಥೈಸಬಹುದು.


ಇದನ್ನೂ ಓದಿ:  Langya HenipaVirus: ಏನಿದು ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್? ಮನುಕುಲಕ್ಕೆ ವಿನಾಶಕಾರಿಯೇ 'ಲಾಂಗ್ಯಾ'?

ಕೋವಿಡ್-19 ರೋಗಲಕ್ಷಣಗಳು ಸಾಮಾನ್ಯ, ಶೀತ, ಜ್ವರ ಅಥವಾ ಋತುಮಾನದ ಅಲರ್ಜಿ ಸೇರಿದಂತೆ ಇತರ ಉಸಿರಾಟದ ಕಾಯಿಲೆಗಳ ಲಕ್ಷಣಗಳಿಗೆ ಹೋಲಿಕೆಯನ್ನು ಹಂಚಿಕೊಳ್ಳಬಹುದು. ಗಂಟಲು ಕೆರೆತ, ಮೂಗು ಸೋರುವಿಕೆ, ಆಯಾಸ, ಜ್ವರ, ಕೆಮ್ಮು, ಮೈಕೈ ನೋವು ಮತ್ತು ನೋವುಗಳು ಹೆಚ್ಚಿನ ಉಸಿರಾಟದ ಸೋಂಕುಗಳಿಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳಾಗಿವೆ.

ಕರೋನವೈರಸ್ ಸೋಂಕಿನ ಅಪಾಯವು ಹೆಚ್ಚಾಗಿರುತ್ತದೆ, ಇದು ಕೋವಿಡ್ ಆಗಿದ್ದಲ್ಲಿ ಈ ರೋಗಲಕ್ಷಣಗಳು 1 ರಿಂದ 14 ದಿನಗಳು, ಫ್ಲೂ ಆಗಿದ್ದಲ್ಲಿ 1 ರಿಂದ 4 ದಿನಗಳು ಮತ್ತು ನೆಗಡಿ ಆಗಿದ್ದಲ್ಲಿ 1 ರಿಂದ 3 ದಿನಗಳವರೆಗೆ ಇರುತ್ತದೆ. ಇದಲ್ಲದೆ, ವಾಸನೆ ಮತ್ತು ರುಚಿಯ ಪ್ರಜ್ಞೆಯನ್ನು ಸಹ ಕಳೆದುಕೊಳ್ಳುವಂತಹ ಕೋವಿಡ್-19 ಗೆ ಪ್ರಮುಖವಾಗಿರುವ ಇತರ ಅಸಾಮಾನ್ಯ ರೋಗಲಕ್ಷಣಗಳನ್ನು ಗಮನಿಸಿ.

 • ಅತ್ಯಂತ ನಿಖರವಾದ ಕೋವಿಡ್ ಪರೀಕ್ಷಾ ವಿಧಾನ ಯಾವುದು?
  ಈಗಾಗಲೇ ಮೇಲೆ ಹೇಳಿರುವಂತೆ ಆರ್‌ಟಿಪಿಸಿಆರ್ ಪರೀಕ್ಷೆಯು ಕೋವಿಡ್-19 ಗೆ ಅತ್ಯಂತ ನಿಖರವಾದ ಮತ್ತು ವಿಶ್ವಾಸಾರ್ಹ ಪರೀಕ್ಷಾ ವಿಧಾನವಾಗಿದೆ. ಕ್ಷಿಪ್ರ ಪರೀಕ್ಷೆಗಳು ವೈರಸ್ ಅನ್ನು ಪತ್ತೆ ಹಚ್ಚಲು ಸಹ ನಿಮಗೆ ಸಹಾಯ ಮಾಡಬಹುದು, ಆದಾಗ್ಯೂ, ಅದು ಅಷ್ಟು ನಿಖರವಾಗಿಲ್ಲದಿರಬಹುದು. • ಕೋವಿಡ್ ಲಸಿಕೆ ಪಡೆಯಬೇಕೇ?
  ಹೌದು.. ನೀವು ಲಸಿಕೆಯನ್ನು ಪಡೆಯುವುದು ಒಳ್ಳೆಯದು. ಲಸಿಕೆಯು ಎಸ್ಎಆರ್-ಕೋವ್-2 ವೈರಸ್ ವಿರುದ್ಧ ಅತ್ಯುತ್ತಮ ರಕ್ಷಣಾತ್ಮಕ ರಕ್ಷಾ ಕವಚಗಳಲ್ಲಿ ಒಂದಾಗಿದೆ. ಹಳೆಯ ಸೋಂಕು ಇನ್ನೂ ಪ್ರಚಲಿತದಲ್ಲಿದ್ದರೂ ಮತ್ತು ಹೊಸ ರೂಪಾಂತರಗಳೊಂದಿಗೆ, ಮರು ಸೋಂಕಿನ ಪ್ರಕರಣಗಳು ಹೆಚ್ಚಿವೆ. ಹಾಗಾಗಿ ಕೋವಿಡ್ ಲಸಿಕೆಯನ್ನು ಪಡೆಯುವುದು ಅಥವಾ ತೆಗೆದುಕೊಳ್ಳಲು ಉತ್ತೇಜಿಸುವುದು ಇನ್ನೂ ರೋಗವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.


ಇದನ್ನೂ ಓದಿ:  Breast Cancer: ಸ್ತನ ಕ್ಯಾನ್ಸರ್ ಬರಲು ಇದೇ ಕಾರಣವಂತೆ, ಅದರ ಲಕ್ಷಣಗಳು ಇಲ್ಲಿದೆ

 • ನೀವು ಸೋಂಕನ್ನು ಹರಡದಂತೆ ಹೇಗೆ ತಡೆಗಟ್ಟಬಹುದು?
  ಸಾಮಾಜಿಕ ಅಂತರ ಮತ್ತು ಸರಿಯಾದ ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ಸಾಮಾನ್ಯವಾಗಿ ಉಸಿರಾಟದ ಸೋಂಕುಗಳನ್ನು ಫೇಸ್ ಮಾಸ್ಕ್ ಗಳ ಸಹಾಯದಿಂದ ತಡೆಗಟ್ಟಬಹುದು. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಹೆಚ್ಚಿನ ಅಪಾಯದ ವರ್ಗಕ್ಕೆ ಸೇರುವ ವ್ಯಕ್ತಿಗಳಿಂದ ನೀವು ಆದಷ್ಟು ದೂರವಿರಿ. ನೀವು ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ನಿಮ್ಮ ಮುಖವನ್ನು ಮುಚ್ಚಿಕೊಳ್ಳಿ.

Published by:Ashwini Prabhu
First published: