• Home
 • »
 • News
 • »
 • explained
 • »
 • Happy Children’s Day: ಈ ದಿನದಂದು ಸಂಭ್ರಮಿಸುವಷ್ಟು ನಮ್ಮ ಮಕ್ಕಳು ಸುರಕ್ಷಿತರಾಗಿದ್ದಾರಾ? ಕಹಿಸತ್ಯದ ಅನಾವರಣ!

Happy Children’s Day: ಈ ದಿನದಂದು ಸಂಭ್ರಮಿಸುವಷ್ಟು ನಮ್ಮ ಮಕ್ಕಳು ಸುರಕ್ಷಿತರಾಗಿದ್ದಾರಾ? ಕಹಿಸತ್ಯದ ಅನಾವರಣ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವು ಪ್ರತಿ ವರ್ಷ ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಬಲು ಸಡಗರ ಹಾಗೂ ಸಂಭ್ರಮದಿಂದ ಆಚರಿಸುತ್ತೇವೆ. ಯಾರ ಸಂತೋಷಕ್ಕಾಗಿ ನಾವು ಈ ದಿನವನ್ನೇ ಮುಡಿಪಾಗಿರಿಸಿದ್ದೇವೆಯೋ ಅವರ ಮೇಲಾಗುತ್ತಿರುವ ಈ ಗೌಪ್ಯ ರೀತಿಯ ಶೋಷಣೆ ಬಗ್ಗೆ ನಮ್ಮಲ್ಲಿ ಇನ್ನೂ ಜಾಗರೂಕತೆ ಬಂದಿಲ್ಲದೆ ಇರುವುದು ಮೂರ್ಖತನದ ಪರಮಾವಧಿಯೇ ಸರಿ.

ಮುಂದೆ ಓದಿ ...
 • Trending Desk
 • Last Updated :
 • Bangalore [Bangalore], India
 • Share this:

  ಇವಳು ರಾಧಾ (ಸುರಕ್ಷತೆಗಾಗಿ ಹೆಸರು ಬದಲಿಸಲಾಗಿದೆ), ಎಂಟು ವರ್ಷದ ಮುಗ್ಧ ಬಾಲಕಿ. ಆದರೆ ಅವಳಿಗೆ ಅವಳ ಅಂಕಲ್ ಬಂದಾಗಲೆಲ್ಲ ಸಮಾಧಾನವೆಂಬುದೇ ಇರುತ್ತಿರಲಿಲ್ಲ, ಕಾರಣ ಅವಳ ಅಂಕಲ್ ಆಕೆಯನ್ನು ಸ್ಪರ್ಶಿಸುತ್ತಿದ್ದ ರೀತಿ, ಆ ಅಹಿತಕರ ಸ್ಪರ್ಶದಿಂದ ಅವಳು ಭಯಭೀತಳಾಗುತ್ತಿದ್ದಳು, ಅಸುರಕ್ಷತೆಯ ಭಾವನೆ ಕಾಡುತ್ತಿತ್ತು. ಆಕೆಗೆ ಒಳ್ಳೆಯ/ಉತ್ತಮ ಸ್ಪರ್ಶ ಯಾವುದು, ಕೆಟ್ಟ ಸ್ಪರ್ಶ ಯಾವುದು ಎಂಬ ಅರಿವಿತ್ತು. ಹಾಗಾಗಿ ಅವಳು ಈ ಬಗ್ಗೆ ತನ್ನ ತಾಯಿಗೆ ದೂರಿದಾಗ, ಅದೆಷ್ಟೋ ಬಾರಿ ತಾಯಿ ಅವಳನ್ನು ಸುರಕ್ಷಿತಗೊಳಿಸಿದ್ದಳು.


  ಅಂಕಲ್ ಮನೆಗೆ ಬಂದು ಅವಳನ್ನು ಕರೆದಾಗಲೆಲ್ಲ ರಾಧಾಳ ತಾಯಿ ಅವಳು ಅಭ್ಯಾಸ ಮಾಡುತ್ತಿರುವುದಾಗಿ, ಒಮ್ಮೊಮ್ಮೆ ಅಡುಗೆಮನೆಯಲ್ಲಿ ತನಗೆ ಸಹಾಯ ಮಾಡು ಬಾ ಎಂದು ಕರೆದು ಆಕೆಯನ್ನು ಸುರಕ್ಷಿತವಾಗಿರಿಸಿದ್ದ ಸಾಕಷ್ಟು ಪ್ರಸಂಗಗಳು ನಡೆದಿದ್ದವು. ಆದರೆ, ಅಂತಿಮವಾಗಿ ತಾಯಿಯೂ ಸಹ ರಾಧಾಳನ್ನು ಕುರಿತು ಯಾರಿಗೂ ಏನೂ ಹೇಳಬೇಡ ಎಂದು ಎಚ್ಚರಿಸಿದ್ದಳು. ಇದು ರಾಧಾಳೊಬ್ಬಳ ಕಥೆಯಲ್ಲ, ಇಂತಹ ಸಾಕಷ್ಟು ಪ್ರಕರಣಗಳು ಇಂದಿಗೂ ತೆರೆಯ ಹಿಂದೆ ನಡೆಯುತ್ತಲೇ ಇವೆ. ಅದೆಷ್ಟೋ  ಅಂಕಲ್ ಹಾಗೂ ಆಂಟಿಗಳು ಮುಗ್ಧ ಮಕ್ಕಳ ಲೈಂಗಿಕ ಶೋಷಣೆಯಲ್ಲಿ ನಿರತರಾಗಿದ್ದಾರೆ ಎಂಬುದು ಸುಳ್ಳಲ್ಲ.


  ಮಕ್ಕಳ ಮೇಲೆ ಗೌಪ್ಯ ಶೋಷಣೆ


  ನಾವು ಪ್ರತಿ ವರ್ಷ ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಬಲು ಸಡಗರ ಹಾಗೂ ಸಂಭ್ರಮದಿಂದ ಆಚರಿಸುತ್ತೇವೆ. ಆ ದಿನದಂದು ಮಕ್ಕಳಿಗೆ ಬಲು ಇಷ್ಟವಾದ ತಿಂಡಿ-ತಿನಿಸುಗಳನ್ನು ಅವರಿಗೆ ಕೊಟ್ಟು ಅವರ ಸಂಭ್ರಮಿಸುವುದನ್ನು ನೋಡಿ ನಾವು ಆನಂದಪಡುತ್ತೇವೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಕ್ರೀಡಾ ಚಟುವಟಿಕೆಗಳನ್ನು ಮಕ್ಕಳಿಗಾಗಿ ಏರ್ಪಡಿಸುತ್ತೇವೆ. ಆದರೆ, ನಮ್ಮ ಬೆನ್ನ ಹಿಂದೆಯೇ ನಿಂತು ಮಕ್ಕಳನ್ನು ಶೋಷಿಸುವ ಆ "ಮೃಗ"ಗಳಾದ ಅಂಕಲ್-ಆಂಟಿಗಳ ಬಗ್ಗೆ ನಮಗೆ ಗೊತ್ತಾಗುವುದೇ ಇಲ್ಲ. ಯಾರ ಸಂತೋಷಕ್ಕಾಗಿ ನಾವು ಈ ದಿನವನ್ನೇ ಮುಡಿಪಾಗಿರಿಸಿದ್ದೇವೆಯೋ ಅವರ ಮೇಲಾಗುತ್ತಿರುವ ಈ ಗೌಪ್ಯ ರೀತಿಯ ಶೋಷಣೆ ಬಗ್ಗೆ ನಮ್ಮಲ್ಲಿ ಇನ್ನೂ ಜಾಗರೂಕತೆ ಬಂದಿಲ್ಲದೆ ಇರುವುದು ಮೂರ್ಖತನದ ಪರಮಾವಧಿಯೇ ಸರಿ.


  how to to teach children to select good friends
  ಮಕ್ಕಳು


  ಮಕ್ಕಳ ಸುರಕ್ಷತೆ


  ಮಕ್ಕಳ ಶೋಷಣೆ ಎಂಬುದು ಇಂದಿನ ಸಮಸ್ಯೆಯಲ್ಲ. ಇದು ಮುಂಚೆಯಿಂದಲೂ ನಡೆಯುತ್ತ ಬಂದಿದೆ ಎಂದು ನಮಗೆ ಇತಿಹಾಸದಿಂದ ತಿಳಿದುಬರುತ್ತದೆ. ಹಾಗಾಗಿಯೇ ಶತಮಾನದಿಂದಲೂ ಜಗತ್ತಿನ ನಾಯಕರು ಮಕ್ಕಳಿಗೆ ಉತ್ತಮ ಆರೋಗ್ಯ ಹೊಂದುವಂತಹ ಆರೈಕೆ, ಸುರಕ್ಷಿತ ವಾತಾವರಣ ಕಲ್ಪಿಸುವುದು, ಹಾಗೂ ಶಿಕ್ಷಣ ಒದಗಿಸುವಂತಹ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುತ್ತಲೇ ಬಂದಿದ್ದಾರೆ.


  ಮಕ್ಕಳ ದಿನಾಚರಣೆಯ ಫೌಂಡೇಷನ್


  ನವೆಂಬರ್ 20, 1954 ರಂದು ಮಕ್ಕಳ ದಿನಾಚರಣೆಯ ಫೌಂಡೇಷನ್ ಅನ್ನು ಸ್ಥಾಪಿಸಲಾಯಿತು ಹಾಗೂ 1959ರಲ್ಲಿ ಇದೇ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಗುವಿನ ಜನನದ ನಂತರ ಕಾನೂನಾತ್ಮಕವಾಗಿ ಅದರ ಸುರಕ್ಷತೆ ಹಾಗೂ ಮಕ್ಕಳ ಸುರಕ್ಷತಾ ಹಕ್ಕಿನ ಕುರಿತು ತನ್ನ ಬಿಲ್ ಅನ್ನೂ ಸಹ ಘೋಷಿಸಿತು. ಈ ಬಿಲ್ ಅಡಿಯಲ್ಲಿ ಮಕ್ಕಳ ವಯಸ್ಸಿನ ಬಗ್ಗೆ ಸ್ಪಷ್ಟವಾಗಿ ಯವುದೇ ಉಲ್ಲೇಖ ಅಥವಾ ವ್ಯಾಖ್ಯಾನ ಇಲ್ಲದೆ ಇದ್ದರೂ ಇದು ವಿಶ್ವಾದ್ಯಂತ ಯಾವುದೇ ರೀತಿಯ ಭೇದ-ಭಾವಗಳಿರದಂತೆ ಪ್ರತಿಯೊಬ್ಬ ಮಗುವಿಗೂ ಉತ್ತಮ ಆರೈಕೆ, ಪೋಷಕಾಂಶಯುಕ್ತ ಆಹಾರ, ಶಿಕ್ಷಣ ಹಾಗೂ ಅವರ ಸುರಕ್ಷತೆಯನ್ನು ವಿವರಿಸಲಾಗಿದೆ.


  ಇದನ್ನೂ ಓದಿ: ವೀಗನ್ ಡಯೆಟ್​ ಮಾಡೋದ್ರಿಂದ ತೂಕ ಇಳಿಕೆ ಮಾತ್ರ ಅಲ್ಲ ಈ ಆರೋಗ್ಯ ಪ್ರಯೋಜನಗಳು ಸಿಗುತ್ತೆ


  ಭಾರತದಲ್ಲಿ ಮಕ್ಕಳ ದಿನಾಚರಣೆ


  ಇದೇ ಸಂದರ್ಭದಲ್ಲಿ ಭಾರತವೂ ಸಹ ಮಕ್ಕಳ ದಿನಾಚರಣೆಯನ್ನು ನವೆಂಬರ್ 20 ರಂದೇ ಮಾಡುತ್ತಿತ್ತು. ಆದರೆ, ಮಕ್ಕಳಿಗೆ "ಪ್ರೀತಿಯ ಚಾಚಾ" ಎಂದೇ ಖ್ಯಾತರಾಗಿದ್ದ ಭಾರತದ ಪ್ರಥಮ ಪ್ರಧಾನಿ ಅವರು 1964 ರಲ್ಲಿ ಮರಣಿಸಿದಾಗ ಅವರ ಗೌರವಾರ್ಥವಾಗಿ ಅವರ ಜನ್ಮದಿನದಂದು ಮಕ್ಕಳ ದಿನಾಚರಣೆಯ ದಿನಾಂಕವನ್ನು ನವೆಂಬರ್ 20ರ ಬದಲಾಗಿ ಭಾರತದಲ್ಲಿ ನವೆಂಬರ್ 14ಕ್ಕೆ ವರ್ಗಾಯಿಸಲಾಯಿತು. ಅಂದಿನಿಂದ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ನಹರೂ ಅವರ ಜನ್ಮದಿನವಾದ ನವೆಂಬರ್ 14ರಂದು ಆಚರಿಸುತ್ತ ಬರಲಾಗಿದೆ.


  CPI GB umesh case victim changed her statement mrq
  ಸಾಂದರ್ಭಿಕ ಚಿತ್ರ


  ನೆಹರೂ ಕನಸು ಏನಾಗಿತ್ತು?


  ನೆಹರೂ ಅವರು ಒಂದು ಅಮೋಘ ದೃಷ್ಟಿಕೋನವನ್ನು ಹೊಂದಿದ್ದರು. ಅದುವೇ ಆರೋಗ್ಯವಂತ ಮಕ್ಕಳಿರುವ ಭಾರತವೆಂಬ ಭಾಗ್ಯವಂತ ರಾಷ್ಟ್ರ. ಆದರೆ, ಆ ಕನಸು ಇಂದಿ ನಿಜಕ್ಕೂ ಸಾರ್ಥಕತೆಯ ಪಥದಲ್ಲಿ ಸಾಗುತ್ತಿದೆಯೆ? ಒಂದೊಮ್ಮೆ ಯೋಚಿಸಬೇಕಾದ ವಿಷಯವಾಗಿದೆ ಇಂದು. ಏಕೆಂದರೆ, ನ್ಯಾಷನಲ್ ಕ್ರೈಮ್ ರಿಕಾರ್ಡ್ಸ್ ಬ್ಯೂರೋದ ಇತ್ತೀಚಿನ ಅಂದರೆ 2021ರ ದತ್ತಾಂಶವನ್ನು ತೆಗೆದುಕೊಂಡರೆ ದೇಶದಲ್ಲಿ ಒಟ್ಟು 1,49,404 ಪ್ರಕರಣಗಳು ಮಕ್ಕಳ ವಿರುದ್ಧದ ಶೋಷಣೆಯ ಪ್ರಕರಣಗಳಾಗಿ ದಾಖಲಾಗಿದ್ದು ಅದರಲ್ಲಿ ಸುಮಾರು 36.05 ಪ್ರತಿಶತದಷ್ಟು ಅಂದರೆ 53,874 ಪ್ರಕರಣಗಳು ಪ್ರೋಟೆಕ್ಷನ್ ಆಫ್ ಚಿಲ್ಡ್ರನ್ ಫ್ರಾಮ್ ಸೆಕ್ಶ್ಯೂಯಲ್ ಆಫೆನ್ಸಸ್ ಆಕ್ಟ್ (POCSO) ಅಡಿಯಲ್ಲಿ ದಾಖಲಾಗಿರುವುದನ್ನು ಗಮನಿಸಿದಾಗ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಶೋಷಣೆಯ ಪ್ರಮಾಣ ಎಷ್ಟಿದೆ ಎಂಬುದು ಮನದಟ್ಟಾಗುತ್ತದೆ.


  ಜಾತಿ, ಲಿಂಗ ತಾರತಮ್ಯ


  ಅದೆಷ್ಟೋ ಅಸಂಖ್ಯಾತ ಮಕ್ಕಳಿಗೆ ಜನನದ ನಂತರ ಸರಿಯಾದ ಆಹಾರ, ಆರೈಕೆ ಹಾಗೂ ಶಿಕ್ಷಣ ಸಿಗದೆ ಚಿಕ್ಕವರಿದ್ದಾಗಲೇ ಕಾರ್ಮಿಕರಾಗಿ ದುಡಿದು ತಮ್ಮ ಬಡ ಪೋಷಕರನ್ನು ಸಾಕಬೇಕಾದ ಪರಿಸ್ಥಿತಿ ಇದ್ದರೆ ಇನ್ನೊಂದೆಡೆ ಜಾತಿ, ಲಿಂಗ ತಾರತಮ್ಯದಡಿಯಲ್ಲಿ ಹಲವು ಮಕ್ಕಳ ಹೋರಾಟ ಅವು ಇನ್ನೂ ಭೂಮಿಗೆ ಕಾಲಿ ಇಟ್ಟಿಲ್ಲದಾಗ ಅಂದರೆ ತಾಯಿಯ ಹೊಟ್ಟೆಯಲ್ಲಿರುವಾಗಲಿಂದಲೇ ಪ್ರಾರಂಭವಾಗುತ್ತದೆ ಎಂದರೆ ತಪ್ಪಾಗಲಾರದು.


  ಮಕ್ಕಳ ವಿರುದ್ಧ ಶೋಷಣೆ


  ಗೋಧ್ರಾ ಹತ್ಯಾಕಾಂಡದ ನಂತರ ಬಿಲಿಕಿಸ್ ಬಾನೋ ಪ್ರಕರಣ ಎಂದಿಗೂ ಮರೆಯಲಾಗದು. ಗರ್ಭವತಿಯಾಗಿದ್ದ ಬಿಲಿಕ್ಸ್ ಬಾನೋ ಮೇಲೆ ಸಾಮೂಹಿತ ಅತ್ಯಾಚಾರ ನಡೆದಿತ್ತು ಹಾಗೂ ಆ ಘಟನೆ ಅವಳ ಮೂರು ವರ್ಷದ ಮಗಳ ಹತ್ಯೆಯಲ್ಲಿ ಕೊನೆಗೊಂಡಿತು.


  ಭ್ರೂಣ ಹತ್ಯೆ ಎಂಬುದು ಇಂದಿಗೂ ನೋಡಬಹುದಾಗಿದ್ದು ಹಲವು ಸಂಶೋಧನಾ ಸಂಸ್ಥೆಗಳು ಈ ಬಗ್ಗೆ ತಮ್ಮ ವರದಿಯನ್ನು ಪ್ರಕಟಿಸಿವೆ. ಈ ಭ್ರೂಣ ಹತ್ಯೆ ಎಂಬುದು ಮುಖ್ಯವಾಗಿ ಜಾತಿ, ಲಿಂಗ ಹಾಗೂ ಸ್ಥಳದ ಮೇಲೆ ಅವಲಂಬಿತವಾಗಿದೆ ಎನ್ನಲಾಗಿದೆ.


  ಹೆಣ್ಣು ಭ್ರೂಣ ಹತ್ಯೆ ಎಂಬುದು ಭಾರತದಲ್ಲಿ ಯಾವುದೇ ಇತರೆ ಧರ್ಮಗಳಿಗಿಂತ ಹಿಂದೂ ಧರ್ಮದಲ್ಲಿ ಹೆಚ್ಚು


  ಕಳೆದ ಮೂರು ಸುತ್ತಿನ NFHS ಡೇಟಾ ನೋಡುವುದಾದರೆ, 2009-19 ರನಡುವಿನ ಅವಧಿಯಲ್ಲಿ 9 ಮಿಲಿಯನ್ ಗಳಷ್ಟು ಬಾಲಕಿಯರು ಶಿಶುಹತ್ಯೆಗೆ ಸಂಬಂಧಿಸಿದಂತೆ ಕಾಣೆಯಾದ ಬಗ್ಗೆ ತಿಳಿಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 1994 ರಲ್ಲೇ ಭಾರತದಲ್ಲಿ ಪ್ರಸವಪೂರ್ವ ಲಿಂಗ ಗುರುತಿಸುವಿಕೆಯ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವರದಿಯ ಇನ್ನೊಂದು ಅಚ್ಚರಿ ಪಡುವ ಸಂಗತಿ ಎಂದರೆ ಹೆಣ್ಣು ಭ್ರೂಣ ಹತ್ಯೆ ಎಂಬುದು ಭಾರತದಲ್ಲಿ ಯಾವುದೇ ಇತರೆ ಧರ್ಮಗಳಿಗಿಂತ ಹಿಂದೂ ಧರ್ಮದಲ್ಲಿ ಹೆಚ್ಚಾಗಿದೆ ಎಂದು ತೋರಿಸಿದೆ.


  69% ರಷ್ಟು ಮಕ್ಕಳಿಗೆ ಮಾನಸಿಕ ಶೋಷಣೆ


  ಇನ್ನು, ಹೊಟ್ಟೆಯಲ್ಲಿ ಹೋರಾಡಿ ಮಗು ಒಂದು ಜನನಗೊಂಡ ಮೇಲೆ ಅದರ ಕಷ್ಟ ತೀರದು, ಹಲವು ಪ್ರಕರಣಗಳಲ್ಲಿ ಬಾಲ್ಯಾವಸ್ಥೆಯಲ್ಲೇ ಹಲವು ಮಕ್ಕಳು ಶೋಷಣೆಗೆ ಒಳಪಡುತ್ತಾರೆ ಎನ್ನುತ್ತದೆ ಮಹಿಳಾ ಮತ್ತು ಕುಟುಂಬ ಸಚಿವಾಲಯ ನಡೆಸಿದ ಸಮೀಕ್ಷೆ. 2007 ರಲ್ಲಿ ಈ ಕುರಿತು ಸಮೀಕ್ಷೆಯೊಂದನ್ನು ನಡೆಸಲಾಯಿತು. ಅದರಲ್ಲಿ ಹೊರಬಂದ ವಿಷಯವೆಂದರೆ 69% ರಷ್ಟು ಮಕ್ಕಳು ಮಾನಸಿಕ ಶೋಷಣೆಗೆ ಒಳಗಾದರೆ 53% ರಷ್ಟು ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎನ್ನುತ್ತದೆ ವರದಿ.


  ಇದನ್ನೂ ಓದಿ: ಮನೆಯಲ್ಲಿ ಈ ವಸ್ತುಗಳಿದ್ದರೆ ಪಾಸಿಟಿವ್ ಎನರ್ಜಿ ಎಂಟ್ರಿಯಾಗುತ್ತೆ


  ಈ ಸಮೀಕ್ಷೆಯಲ್ಲಿ ವಿವಿಧ ಜಾತಿ, ಸ್ಥಳ, ಭಾಷೆ ಹಾಗೂ ಸಂಪ್ರದಾಯಗಳಿಂದ ಬಂದ 12,447 ಮಕ್ಕಳನ್ನು ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹೊರಬಂದ ಮತ್ತೊಂದು ಅಂಶವೆಂದರೆ ಲೈಂಗಿಕ ಶೋಷಣೆಯ ಪ್ರಕರಣಗಳಲ್ಲಿ ಅತಿ ಹೆಚ್ಚಾಗಿ ಅವು ಆ ಬಾಲಕ/ಬಾಲಕಿಯರ ಪರಿಚಯಸ್ಥರಿಂದಲೋ ಅಥವಾ ಸಮಾಜದಲ್ಲಿ ಪ್ರಭಾವಿ ಸ್ಥಾನದಲ್ಲಿರುವ ವ್ಯಕ್ತಿಗಳಿಂದಲೋ ಹೆಚ್ಚಾಗಿ ಮಾಡಲ್ಪಟ್ಟಿದೆ ಎಂಬುದು.


  ಮನೆಯೇ ಸ್ವರ್ಗ ಎಂದು ನಂಬುವ ಪರಿಸ್ಥಿತಿ ಹಲವು ಮಕ್ಕಳಿಗಿಲ್ಲ, ಅಲ್ಲದೆ ಮನೆ ಹೊರತುಪಡಿಸಿ ಮಕ್ಕಳು ಹೆಚ್ಚು ಸಮಯ ಕಳೆಯುವ ವಿದ್ಯಾ ಸಂಸ್ಥೆಗಳೂ ಸಹ ಮಕ್ಕಳಿಗೆ ಅಷ್ಟೊಂದು ಸುರಕ್ಷಿತವಾಗಿಲ್ಲ. ಕೆಲವು ಸಂಶೋಧನೆಗಳು ಮನೆಗಳಲ್ಲೇ ಮಕ್ಕಳ ಮೇಲೆ ಲೈಂಗಿಕ ಶೋಷಣೆಯ ಪ್ರಮಾಣ 18-20 ಪ್ರತಿಶತ ಎಂದಿದ್ದರೆ ಆ ಪ್ರಮಾಣ ವಿದ್ಯಾ ಸಂಸ್ಥೆಗಳಲ್ಲಿ ಏನಿಲ್ಲವೆಂದರೂ 50 ಪ್ರತಿಶತದಷ್ಟಿದೆ ಎಂದು ದಾಖಲಿಸಿದೆ.


  ಅಧ್ಯಯನಕಾರರ ವರದಿ


  ಡಿ ಕಾರ್ಸ್ಟನ್, ಜೆ ಫಾಸ್ಟರ್ ಹಾಗೂ ಎನ್. ತ್ರಿಪಾಠಿ ಅವರು ಜಂಟಿಯಾಗಿ ಪ್ರಕಟಿಸಿದ್ದ ತಮ್ಮ Child Sexual Abuse in India; Current Issues and Reasearch ಎಂಬ ಪೇಪರಿನಲ್ಲಿ ಮಕ್ಕಳ ವಿರುದ್ಧ ತಲೆದೋರುವ ಲೈಂಗಿಕ ಶೋಷಣೆಗಳಿಗೆ ಹಲವು ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಬಡತನ ಎಂಬುದು ಒಂದು ಕಾರಣವಾದರೆ, ಬಹುಸದಸ್ಯರ ಅವಿಭಕ್ತ ಕುಟುಂಬ, ಬೀದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿರುವುದು ಹಾಗೂ ಕುಟುಂಬಗಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳಿಲ್ಲದಿರುವುದನ್ನು ಕಾರಣಗಳಾಗಿ ದಾಖಲಿಸಿದ್ದಾರೆ.


  ಬಡತನ ಎಂಬುದು ಈ ನಿಟ್ಟಿನಲ್ಲಿ ಒಂದು ಮುಖ್ಯ ಕಾರಣವಾದರೂ ತಾತ್ಸರ/ನಿರ್ಲಕ್ಷ್ಯ ಎಂಬುದೂ ಸಹ ಈ ಲೈಂಗಿಕ ಶೋಷಣೆಗೆ ತನ್ನದೆ ಆದ ಕೊಡುಗೆ ನೀಡುತ್ತದೆ ಎಂಬುದನ್ನು ಇಲ್ಲಿ ವಿಶ್ವಸಂಸ್ಥೆ ಒತ್ತಿ ಹೇಳಿದ್ದು ಮಕ್ಕಳ ದೌರ್ಜನ್ಯದಡಿಯಲ್ಲಿ ಇದನ್ನೂ ಸಹ ಉಲ್ಲೇಖಿಸಿದೆ.


  ನಿಲ್ಲದ ದೌರ್ಜನ್ಯ


  ಒಟ್ಟಿನಲ್ಲಿ ಹೇಳಬೇಕೆಂದರೆ, ಮಕ್ಕಳ ಮೇಲಿನ ದೌರ್ಜನ್ಯ ಎಂಬುದು ನಿಲ್ಲದೆ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ಬಗ್ಗೆ ಪ್ರಯತ್ನಗಳೇನೂ ಆಗಿಯೇ ಇಲ್ಲ ಎನ್ನಲು ಆಗದು. ಏಕೆಂದರೆ ಸತತ ಪ್ರಯತ್ನಗಳ ನಂತರ 2012 ರಲ್ಲಿ POCSO ಆಕ್ಟ್ ಅನ್ನು ಪಾಸ್ ಮಾಡಲಾಯಿತು. ಈ ಮೂಲಕ ಮಕ್ಕಳ ಮೇಲೆ ಲೈಂಗಿಕ ಶೋಷಣೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಆದರೂ ಇದನ್ನು ಸಮ್ಪೂರ್ಣವಾಗಿ ನಿರ್ಮಾಮಗೊಳಿಸಬೇಕೆಂದರೆ ಆ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕಾಗಿರುವುದು ಬಲು ಅವಶ್ಯಕವಾಗಿದೆ.


  ವಿದ್ಯಾ ಸಂಸ್ಥೆಗಳ ನಾಯಕರು, ಪೋಷಕರು ಈ ಬಗ್ಗೆ ಸಂಪೂರ್ಣವಾಗಿ ಎಚ್ಚೆತ್ತುಕೊಂಡು ಮುನ್ನಡೆಯಬೇಕಾಗಿದೆ


  ವಿದ್ಯಾ ಸಂಸ್ಥೆಗಳ ನಾಯಕರು, ಪೋಷಕರು ಈ ಬಗ್ಗೆ ಸಂಪೂರ್ಣವಾಗಿ ಎಚ್ಚೆತ್ತುಕೊಂಡು ಮುನ್ನಡೆಯಬೇಕಾಗಿದೆ. ಇಂದಿನ ಮಕ್ಕಳು ನಾಳಿನ ಭವ್ಯ ಭಾರತದ ಪ್ರಜೆಗಳು, ನಮ್ಮ ನಾಡನ್ನು ಮುಂದುವರೆಸುವಂತಹ ಶಕ್ತಿಗಳು. ಅಂತಹ ಶಕ್ತಿಗಳು ಇನ್ನು ಅರಳುವುದಕ್ಕೆ ಮುಂಚೆಯೇ ಬಾಡದಂತೆ ಜೋಪಾನವಾಗಿ ಅವರನ್ನು ನೋಡಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ನೈತಿಕ ಕರ್ತವ್ಯ. ಈ ಮಕ್ಕಳ ದಿನಾಚರಣೆ ಎಂಬುದು ಕೇವಲ ಒಂದು ದಿನದ ಆಚರಣೆಗೆ ಮಾತ್ರವೇ ನೆಪವಾಗಿ ಉಳಿಯದೆ ಪ್ರತಿನಿತ್ಯ ಮಕ್ಕಳು ಆನಂದದಿಂದ ಬದುಕುವುದನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ. ಹಾಗಾದಾಗ ಮಾತ್ರವೇ ಮಕ್ಕಳ ದಿನಾಚರಣೆ ಎಂಬ ಆಚರಣೆಯೂ ಸಾರ್ಥಕವಲ್ಲವೆ?

  Published by:Precilla Olivia Dias
  First published: