• ಹೋಂ
 • »
 • ನ್ಯೂಸ್
 • »
 • Explained
 • »
 • Hanuman Chalisa: ಬಜರಂಗಿ ಭಕ್ತರ ಕಾಪಾಡುತ್ತಾ ಹನುಮಾನ್ ಚಾಲೀಸಾ? ಈ ಮಂತ್ರದ ಮಹತ್ವ ಗೊತ್ತಾ?

Hanuman Chalisa: ಬಜರಂಗಿ ಭಕ್ತರ ಕಾಪಾಡುತ್ತಾ ಹನುಮಾನ್ ಚಾಲೀಸಾ? ಈ ಮಂತ್ರದ ಮಹತ್ವ ಗೊತ್ತಾ?

ಹನುಮಾನ್ (ಇಂಟರ್‌ನೆಟ್ ಚಿತ್ರ)

ಹನುಮಾನ್ (ಇಂಟರ್‌ನೆಟ್ ಚಿತ್ರ)

Hanuman Chalisa: ಹನುಮಾನ್ ಚಾಲೀಸಾ ಬಗ್ಗೆ ನಿಮಗೆ ಗೊತ್ತು. ಆದರೆ ಅದರ ಹಿನ್ನೆಲೆ ಗೊತ್ತಾ? ಅದರ ಮಹತ್ವ ಗೊತ್ತಾ? ಈ ಮಂತ್ರ ಎಷ್ಟು ಪವರ್ ಫುಲ್ ಎನ್ನುವುದು ನಿಮಗೆ ಗೊತ್ತಾ? ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ ಓದಿ…

 • Share this:

ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly elections) ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಬಜರಂಗಿ (Bajrangi) ಸದ್ದು ಜೋರಾಗಿದೆ. ಅರೇ ಬಜರಂಗಿ ಆಂಜನೇಯನಿಗೂ (God Anjaneya) ರಾಜ್ಯ ರಾಜಕಾರಣಕ್ಕೂ ಏನಪ್ಪಾ ಸಂಬಂಧ ಅಂತೀರಾ? ಖಂಡಿತವಾಗಿಯೂ ಸಂಬಂಧ ಇದೆ. ಕೆಲ ದಿನಗಳ ಹಿಂದಷ್ಟೇ ಹೊರಬಂದಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress manifesto) ಬಜರಂಗದಳದ (Bajranga Dal) ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಬಿಜೆಪಿ (BJP), ಬಜರಂಗದಳ ಸೇರಿದಂತೆ ರಾಜ್ಯಾದ್ಯಂತ ಹಿಂದೂ ಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಹಿಂದೂಪರ ಸಂಘಟನೆಗಳು, ಬಿಜೆಪಿ ನಾಯಕರು ರಾಜ್ಯಾದ್ಯಂತ ಹನುಮಾನ್ ಚಾಲೀಸಾ (Hanuman Chalisa) ಪಠಣ ಅಭಿಯಾನ ನಡೆಸಿದ್ದಾರೆ. ಅಂದಹಾಗೆ ಹನುಮಾನ್ ಚಾಲೀಸಾ ಬಗ್ಗೆ ನಿಮಗೆ ಗೊತ್ತು. ಆದರೆ ಅದರ ಹಿನ್ನೆಲೆ ಗೊತ್ತಾ? ಅದರ ಮಹತ್ವ ಗೊತ್ತಾ? ಈ ಮಂತ್ರ ಎಷ್ಟು ಪವರ್ ಫುಲ್ ಎನ್ನುವುದು ನಿಮಗೆ ಗೊತ್ತಾ? ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ ಓದಿ…


ಏನಿದು ಹನುಮಾನ್ ಚಾಲೀಸಾ?


ಹನುಮಾನ್‌ ಚಾಲೀಸವೆಂದರೆ 40 ಪದ್ಯಗಳ ಭಕ್ತಿ ಪ್ರಧಾನ ಹಾಡು. ಅಂಜನೀಪುತ್ರ ಆಂಜನೇಯನ ಆಶೀರ್ವಾದವನ್ನು ಪಡೆದುಕೊಳ್ಳಲು ಪ್ರತಿನಿತ್ಯ ಭಕ್ತರು ಇದನ್ನು ಪಠಿಸುತ್ತಾರೆ. ಸಂತ ತುಳಸೀದಾಸರಿಂದ ಅವಧಿ ಭಾಷೆಯಲ್ಲಿ ಇದು ರಚಿತವಾಗಿದೆ.


ಹನುಮಾನ್ ಚಾಲೀಸಾ ರಚನೆಯಾಗಿದ್ದು ಹೇಗೆ?


ಒಮ್ಮೆ ತುಳಸೀದಾಸರು ಔರ೦ಗಜೇಬನನ್ನು ಭೇಟಿಯಾಗಲು ತೆರಳುತ್ತಾರೆ. ಆದರೆ ಹಿಂದೂ ವಿರೋಧಿಯಾಗಿದ್ದ ಔರಂಗಬೇಜ ತುಳಸೀದಾಸರನ್ನು ಕೀಳಾಗಿ ಕಾಣುತ್ತಾನೆ. ನೀವು ನಂಬುವ ಭಗವ೦ತನನ್ನು ತನಗೆ ತೋರಿಸುವ೦ತೆ ತುಳಸೀದಾಸರಿಗೆ ಪ೦ಥಾಹ್ವಾನವನ್ನು ನೀಡುತ್ತಾನೆ. ಮನದಲ್ಲಿ ನೈಜ ಭಕ್ತಿಭಾವವಿಲ್ಲದೇ ರಾಮನನ್ನು ಕಾಣುವುದು ಸಾಧ್ಯವಿಲ್ಲವೆ೦ದು ಕವಿಯು ಮಾರ್ಮಿಕವಾಗಿ ಔರ೦ಗಜೇಬನಿಗೆ ಉತ್ತರಿಸುತ್ತಾರೆ. ಆದರೆ ಅಹಂಕಾರದಲ್ಲಿ ತೇಲುತ್ತಿದ್ದ ಔರಂಗಜೇಬ ತುಳಸೀದಾಸರನ್ನು ಬಂಧಿಸುತ್ತಾರೆ. ಈ ವೇಳೆ ಸೆರೆಮನೆಯಲ್ಲಿ ಇದ್ದಾಗಲೇ ತುಳಸೀದಾಸರು ಹನುಮಾನ್ ಚಾಲೀಸಾದ ಅತ್ಯದ್ಭುತವಾಗಿರುವ ನಲವತ್ತು ಪದ್ಯ ಚರಣಗಳನ್ನು ರಚಿಸಿದರಂತೆ.


ಇದನ್ನೂ ಓದಿ: Explained: ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳ ಬಗ್ಗೆ ಇಲ್ಲಿದೆ ಮಾಹಿತಿ


ಹನುಮಾನ್ ಚಾಲೀಸಾದಲ್ಲಿ ಏನಿದೆ?


ಹನುಮಾನ್ ಎಂಬ ಪದವು ಭಗವಾನ್ ಹನುಮಂತನ ಹೆಸರನ್ನು ಸೂಚಿಸುತ್ತದೆ ಮತ್ತು ಚಾಲೀಸಾ ಎಂಬ ಪದವು ಈ ಭಕ್ತಿ ಸ್ತೋತ್ರದಲ್ಲಿ ಒಳಗೊಂಡಿರುವ 40 ಶ್ಲೋಕಗಳನ್ನು ಸೂಚಿಸುತ್ತದೆ. ಇ:್ನು ಆರಂಭ ಮತ್ತು ಕೊನೆಯಲ್ಲಿ ದ್ವಿಪದಿಗಳನ್ನು ರಚಿಸಲಾಗಿದೆ. ಭಗವಾನ್ ಹನುಮಂತನನ್ನು ಸ್ತುತಿಸುವ ಈ ಭಕ್ತಿ ಸ್ತೋತ್ರವು 16ನೇ ಶತಮಾನದಲ್ಲಿ ರಚಿಸಲ್ಪಟ್ಟಿತು. ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ಅಂತ ಚಾಲೀಸಾ ಪ್ರಾರಂಭವಾಗುತ್ತದೆ.


ಹನುಮಾನ ಚಾಲೀಸಾ ಮಹತ್ವವೇನು?


ಹನುಮಾನ್ ಚಾಲೀಸಾದ ನಿಯಮಿತ ಪಠಣವು ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧೀಕರಿಸುತ್ತದೆ ಮತ್ತು ಆಳವಾಗಿ ಉನ್ನತಿಗೆ ತರುತ್ತದೆ ಅಂತ ನಂಬಲಾಗಿದೆ. ಇದು ದಿನನಿತ್ಯದ ಜೀವನದುದ್ದಕ್ಕೂ ಎಲ್ಲಾ ದುಷ್ಟತನದಿಂದ ಒಬ್ಬನನ್ನು ಉಳಿಸುತ್ತದೆ ಮತ್ತು ದೈನಂದಿನ ಜೀವನದಲ್ಲಿ ಪಾರಮಾರ್ಥಿಕ ಜ್ಞಾನ ಮತ್ತು ನಂಬಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಹನುಮಾನ್ ಚಾಲೀಸಾ ಯಾವಾಗ ಪಠಿಸಬೇಕು?


ಮಹತ್ವದ ಕಾರ್ಯಗಳನ್ನು ಸಾಧಿಸಬೇಕಾದ ಜನರು ಮಂಗಳವಾರ, ಗುರುವಾರ, ಶನಿವಾರದ ಶುಭ ರಾತ್ರಿ ಅಥವಾ ಮೂಲಾ ನಕ್ಷತ್ರದ ದಿನ ಅಥವಾ ಮೂಲಾ ನಕ್ಷತ್ರದಂದು 1008 ಬಾರಿ ಈ ಶ್ಲೋಕಗಳನ್ನು ಪಠಿಸಬೇಕು ಎಂದು ನಂಬಲಾಗಿದೆ. ಉತ್ತಮ ಜೀವನಕ್ಕಾಗಿ ಎಲ್ಲಾ ಅಡೆತಡೆಗಳನ್ನು ಇದು ನಿವಾರಿಸುತ್ತದೆ.


ಹನುಮಾನ್ ಚಾಲೀಸಾಕ್ಕೆ ಜ್ಯೋತಿಷ್ಯಶಾಸ್ತ್ರದ ಮಹತ್ವವೂ ಇದೆ. ಶನಿ ಪ್ರಭಾವವನ್ನು ನಿಯಂತ್ರಿಸುವಲ್ಲಿ ಇದು ಯಶಸ್ವಿಯಾಗಿದೆ. ಗ್ರಹದ ನಕಾರಾತ್ಮಕ ಪ್ರಭಾವದಲ್ಲಿರುವವರು ಶನಿವಾರದಂದು 8 ಬಾರಿ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದರೊಂದಿಗೆ ಪ್ರಯೋಜನ ಪಡೆದುಕೊಳ್ಳಬಹುದು. ಮಂಗಳದೋಷವನ್ನು ಹೊಂದಿರುವವರು ಈ ಚಾಲೀಸಾವನ್ನು ಪುನರಾವರ್ತಿಸಬೇಕು. ಮಂಗಳ ಗ್ರಹದಂತಹ ಗುಣ, ಮಾನಸಿಕ ಸ್ಥೈರ್ಯ, ಚೈತನ್ಯದ ಸಕಾರಾತ್ಮಕ ಗುಣಲಕ್ಷಣಗಳು ಚಾಲೀಸಾವನ್ನು ಪಠಿಸುವ ಮೂಲಕ ಹೆಚ್ಚಾಗುತ್ತದೆ.


ದುಷ್ಟ ಶಕ್ತಿಗಳ ನಾಶ


ಹನುಮಂತನನ್ನು ದುಷ್ಟ ಶಕ್ತಿಗಳನ್ನು ನಾಶ ಮಾಡುವ ಮತ್ತು ದುಷ್ಟ ಶಕ್ತಿಗಳ ಶಕ್ತಿಗಳನ್ನು ನಾಶಮಾಡುವ ದೇವರು ಎಂದು ಪರಿಗಣಿಸಲಾಗುತ್ತದೆ. ನೀವು ದುಃಸ್ವಪ್ನಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಹನುಮಾನ್‌ ಚಾಲೀಸಾವನ್ನಿಟ್ಟು ಮಲಗಬೇಕು.


ಇದನ್ನೂ ಓದಿ: Temple: ದೇವಸ್ಥಾನಕ್ಕೆ ಹೇಗೆ ಹೋಗಬೇಕು? ಮಾಂಸಾಹಾರ ತಿಂದು ದೇವರ ದರ್ಶನ ಮಾಡಬಹುದೇ?


ಹನುಮಾನ್ ಚಾಲೀಸಾದ ಪ್ರಯೋಜನಗಳೇನು?


 • ಹನುಮಾನ್ ಚಾಲೀಸಾದ ಪಠಣಗಳು ಕೆಟ್ಟ ಅನುಭವಗಳ ಆಘಾತದಿಂದ ಹೊರಬರಲು ಸಾಧ್ಯವಾಗುತ್ತದೆ.

 • ಒತ್ತಡದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸಾವನ್ನು ಓದಬೇಕು.

 • ವಿದ್ಯಾರ್ಥಿಗಳು ಹನುಮಾನ್ ಚಾಲೀಸಾವನ್ನು ಓದುವುದು ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ.

 • ಪ್ರತಿದಿನ ಬೆಳಿಗ್ಗೆ ಹನುಮಾನ್ ಚಾಲೀಸಾವನ್ನು ಓದುವುದು ನಿಮಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

 • ಹನುಮಾನ್ ಚಾಲೀಸಾ ನಿಮ್ಮ ಮನಸ್ಸು ಹೆಚ್ಚು ಶಾಂತವಾಗಿರಲು ಸಹಾಯ ಮಾಡುತ್ತದೆ.

 • ಹನುಮಾನ್ ಚಾಲೀಸಾ ನಿಮಗೆ ಇಡೀ ದಿನ ಸಂತೋಷವಾಗಿರಲು ಸಹಾಯ ಮಾಡುತ್ತದೆ.

 • ಯಾವುದೇ ಪ್ರವಾಸದ ಮೊದಲು ಹನುಮಾನ್ ಚಾಲೀಸಾವನ್ನು ಓದುವುದು ಯಾವುದೇ ಅಪಘಾತಗಳು ಅಥವಾ ಅವಘಡಗಳನ್ನು ತಡೆಯುತ್ತದೆ ಮತ್ತು ಸುರಕ್ಷಿತ ಪ್ರಯಾಣವನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ.

 • ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಧನಾತ್ಮಕತೆಯನ್ನು ಉತ್ತೇಜಿಸುತ್ತದೆ ಮತ್ತು ಕೆಟ್ಟ ಸಹವಾಸವನ್ನು ದೂರವಿಡಲು ಸಹಾಯ ಮಾಡುತ್ತದೆ.


(ಮಾಹಿತಿ: ವಿವಿಧ ಮೂಲಗಳಿಂದ)

First published: